Health Vision

ಕರೋನ ವೈರಸ್ (COVID-19):ಮುಂಜಾಗ್ರತ ಕ್ರಮಗಳು ಹಾಗೂ ನಮ್ಮ ಜವಾಬ್ಧಾರಿಗಳು

  ಕರೋನ ವೈರಸ್ (COVID-19):ಮುಂಜಾಗ್ರತ ಕ್ರಮಗಳು ಹಾಗೂ ನಮ್ಮ ಜವಾಬ್ಧಾರಿಗಳು ಇಡೀ ವಿಶ್ವವೇ ಇಂದು ‘ಕರೋನ ವೈರಸ್’ ಎಂಬ ಮಹಾಮಾರಿಯ ಆರ್ಭಟದಿಂದ ತತ್ತರಿಸಿದ್ದು, ಅನಾರೋಗ್ಯದ ಸ್ಥಿತಿಯು ಉಲ್ಬಣಿಸಿ ಎಲ್ಲರ ಮುಖದಲ್ಲಿ ಭಯವು ತಾಂಡವಾಡುವಂತೆ ಮಾಡಿದೆ. ಸಮಾಜಿಕ ಅಭದ್ರತೆಯಷ್ಟೇ ಅಲ್ಲದೇ ಸಾಕಷ್ಟು ಆರ್ಥಿಕ ಹಿಂಜರಿತಕ್ಕೊಳಗಾಗಿದೆ. ಮಾನವನ ದುರಾಸೆಗಳ ಪ್ರತಿಫಲವೇ ಈ ಕರೋನ ವೈರಸ್ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಕರೋನ ವೈರಸ್ ಜಾಗತಿಕ ಮಟ್ಟದಲ್ಲಿ ವಿಶೇಷವಾಗಿ ಆರೋಗ್ಯ ಕ್ಷೇತದಲ್ಲಿ ಪ್ರಳಯವನ್ನೆ ಸೃಷ್ಟಿಸಿದೆ. ಅಲ್ಲದೇ ತುರ್ತುಸ್ಥಿತಿಯಿಂದಾಗಿ ಪ್ರಪಂಚದಾದ್ಯಂತ ಆತಂಕವು ಎಲ್ಲರಲ್ಲಿ ಮನೆ […]

Read More

ಯೋಗ ಎಂದರೇನು…? ಯೋಗ ಮಾಡಿ, ಆರೋಗ್ಯವಂತರಾಗಿ

ಯೋಗ ಶಾಸ್ತ್ರದ ಮೂಲ ಸಾಕ್ಷಾತ್ ಬ್ರಹ್ಮನಿಂದಲೇ ಬಂದಿರುವುದು ಎಂದು ಯೋಗ ಶಾಸ್ತ್ರವು ಹೇಳುತ್ತದೆ. ನಮಗೆ ದೊರಕಿರುವ ಯೋಗ ಶಾಸ್ತ್ರದ ಗ್ರಂಥಗಳಲ್ಲಿ ಪತಂಜಲಿ ಮಹಾಋಷಿಗಳು 195/196 ಸೂತ್ರಗಳನ್ನು ರಚಿಸಿರುತ್ತಾರೆ ಹಾಗೂ ಈ ಯೋಗ ಸೂತ್ರದಲ್ಲಿ ನಾಲ್ಕು ಪಾದಗಳು ಅಥವಾ ಅಧ್ಯಾಯಗಳೂ ಇದೆ. ಹೀಗೆ ಅವರು ಸನಾತನವಾಗಿದ್ದ ಶಾಸ್ತ್ರವನ್ನು ಕ್ರೋಢೀಕರಿಸಿ, ವರ್ಗೀಕರಿಸಿ ಅದಕ್ಕೊಂದು ನಿರ್ದಿಷ್ಟ ರೂಪ ನೀಡಿದ್ದಾರೆ. ಅವಿದ್ಯೆ, ಅಸ್ಮಿತ(ಅಹಂಭಾವನೆ), ರಾಗ(ಆಸಕ್ತಿ), ಪ್ರೀತಿ, ದ್ವೇಷ, ಅಭಿನಿವೇಶ (ಪ್ರಾಪಂಚಿಕ ಜೀವನದಲ್ಲಿ ನಿರಾಸಕ್ತಿ) ಈ ಐದು ಬಗೆಯ ತೊಡಕುಗಳಿಂದ ಯೋಗ ಸಾಧನೆ ಸಾಧ್ಯವಾಗದು. […]

Read More

ಕಣ್ಣಿನ ಆರೋಗ್ಯ

ಕಣ್ಣಿನ ಆರೋಗ್ಯಕ್ಕಾಗಿ ತ್ರಾಟಕ

ಕಣ್ಣಿನ ಆರೋಗ್ಯಕ್ಕಾಗಿ ತ್ರಾಟಕ. ದೇಹವನ್ನು ಶುದ್ಧೀಕರಿಸುವ ಆರು ಪ್ರಾಥಮಿಕ ಕ್ರಿಯೆಗಳ (ಷಟ್‍ಕ್ರಿಯೆಗಳ) ಪ್ರಮುಖ ಅಭ್ಯಾಸಗಳಲ್ಲಿ ಈ ತ್ರಾಟಕವೂ ಒಂದು. ಇದು ಅನಾದಿಕಾಲದ ಆಧ್ಯಾತ್ಮಿಕ, ವೈಜ್ಞಾನಿಕ ಆಚರಣೆಯಾಗಿದ್ದು, ಈ ಆಚರಣೆಯು ಕಾಲದಿಂದ ಕಾಲಕ್ಕೆ ವಿಕಸನಗೊಳ್ಳುತ್ತಾ ಸಾಗಿದೆ. ಹಠಯೋಗದಲ್ಲಿ ಶುದ್ಧೀಕರಿಸು ಎಂದರೆ ಅಜ್ಞಾನವನ್ನು ಹೋಗಲಾಡಿಸು ಅಥವಾ ಅವಿದ್ಯದಿಂದ ವಾಸ್ತವದ ಗ್ರಹಿಕೆಯನ್ನು ಪಡೆಯುವುದು ಎನ್ನಲಾಗಿದೆ. ತ್ರಾಟಕವನ್ನು ಧ್ಯಾನಕ್ಕಾಗಿ ಬಳಸುವ ಒಂದು ತಂತ್ರವೆಂತಲೂ ಕರೆಯುವುದುಂಟು. ಒಂದೇಕಡೆ ನೋಟವನ್ನು ಕೇಂದ್ರೀಕರಿಸುವುದರಿಂದ ಚಂಚಲವಾದ ಮನಸ್ಸನ್ನು ಒಂದು ಕಡೆಗೆ ನಿಲ್ಲಿಸಲು ಅಥವಾ ಏಕಾಗ್ರಿಸಲು ಸಹಾಯವಾಗುತ್ತದೆ. ತ್ರಾಟಕದ ಅಭ್ಯಾಸದಿಂದ […]

Read More

ದೇವರ ಕಾರ್ಯರೂಪ

ಡಾ. ದೇವದಾಸ ನಾಯಕ್ ಎಂಬುವ ವೈದ್ಯರು ಪುತ್ತೂರಿನ ಶಾಫಿ ಬಿಲ್ಡಿಂಗ್ ಎದುರಿನ ಕಟ್ಟಡದಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು. ಅವರು ವೈದ್ಯರು ಎಂಬುದು ಬಹಳಷ್ಟು ಜನರಿಗೆ ಗೊತ್ತು. ಆದರೆ ಅವರು ಧ್ಯಾನದಲ್ಲಿ ಬಹಳಷ್ಟು ದೂರ ಸಾಗಿದ ಸಂತರೆಂಬುದು ಕೆಲವೇ ಕೆಲವು ಜನರಿಗೆ ಮಾತ್ರ ಗೊತ್ತಿತ್ತು. ಅವರು ದೇಹತ್ಯಾಗ ಮಾಡಿ ಕೆಲವು ವರ್ಷಗಳೇ ಸಂದು ಹೋಗಿವೆ. ಆದರೆ ಅವರು ಹೇಳಿದ ಅವರ ಧ್ಯಾನದ ಕೆಲವೊಂದು ಅನುಭವದ ನೆನಪುಗಳು ನನ್ನ ಚಿತ್ತಭಿತ್ತಿಯಲ್ಲಿ ಆಗಾಗ ಹಾದುಹೋಗುತ್ತದೆ. ಒಂದು ಘಟನೆಯನ್ನು ಈಗ ಬರೆಯುತ್ತಿದ್ದೇನೆ. ಅವರು […]

Read More

ಮಾನವ ಎಂದರೆ ಪಂಚಕೋಶಗಳ ಶರೀರ?

ಆಯುರ್ವೇದ ಮತ್ತು ಯೋಗ ವಿಜ್ಞಾನಗಳ ಪ್ರಕಾರ ಮಾನವನನ್ನು ಐದು ಕೋಶಗಳಿಂದ ಮಾಡಲಾಗಿದೆ ಎಂದು ಹೇಳಲಾಗಿದೆ. ಅವುಗಳಿಗೆ ಪಂಚಕೋಶಗಳೆಂದು ಕರೆಯುತ್ತಾರೆ. ಅವು ಈ ಕೆಳಗಿನಂತಿವೆ: ಅನ್ನಮಯ ಕೋಶ (ದೇಹ) ಪ್ರಾಣಮಯ ಕೋಶ (ಉಸಿರು) ಮನೋಮಯ ಕೋಶ (ಮನಸ್ಸು) ವಿಜ್ಞಾನಮಯ ಕೋಶ (ಜ್ಞಾನ) ಆನಂದಮಯ ಕೋಶ (ಸಂತೋಷ) ವ್ಯಕ್ತಿ ಎಂದಾಕ್ಷಣ ನಮ್ಮ ಕಣ್ಮುಂದೆ ನಿಲ್ಲುವುದು ಆತನ ಶಾರೀರಿಕ ಅಸ್ತಿತ್ವ. ಪ್ರತಿಯೊಬ್ಬರು ತಮ್ಮನ್ನು ತಾನು ಹೀಗೆ ಗುರುತಿಸಿಕೊಳ್ಳುವುದೇ ಹೆಚ್ಚು. ಮಾನವ ಎಂದರೆ ಅವಯವಗಳನ್ನುಳ್ಳ ಶರೀರ ಎಂಬುದೇ ನಮ್ಮೇಲ್ಲರ ಕಲ್ಪನೆಯಾಗಿದೆ. ವ್ಯಕ್ತಿಯ ಅತ್ಯಂತ […]

Read More

ಯೋಗದಿಂದ ಆರೋಗ್ಯ:ಆರೋಗ್ಯ ಸಾಧಿಸಲು ಯೋಗ ಹೇಗೆ ಸಹಾಯ ಮಾಡುತ್ತದೆ?

ಯೋಗ ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ,ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಈ ಪದವನ್ನು ಧ್ಯಾನದ ಆಚರಣೆಗಳೊಂದಿಗೆ ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಹಿಂದೂ ತತ್ವಶಾಸ್ತ್ರದ ಆರು ಸಂಪ್ರದಾಯಬದ್ಧ (ಆಸ್ಥಿಕ) ಶಾಖೆ/ಪಂಥಗಳಲ್ಲಿ ಒಂದಕ್ಕೆ ಈ ಪದವನ್ನು ಬಳಸುತ್ತಾರಲ್ಲದೆ ಆ ಪಂಥವು ತನ್ನ ಆಚರಣೆಗಳಿಂದ ತಲುಪಲು ಬಯಸುವ ಗುರಿಗೂ ಇದೇ ಪದವನ್ನು ಬಳಸುತ್ತಾರೆ. ಜೈನ ಧರ್ಮದಲ್ಲಿ ಮಾನಸಿಕ, ಮೌಖಿಕ ಮತ್ತು ದೈಹಿಕ ಎಲ್ಲಾ ಚಟುವಟಿಕೆಗಳಿಗೆ ಇಡಿಯಾಗಿ ಈ ಪದವನ್ನು […]

Read More

ಗರ್ಭಿಣಿಯರು ಯೋಗ ಮಾಡಬಹುದೇ?

ಗರ್ಭಧಾರಣೆಯು ಮಹಿಳೆಯ ಬದುಕಿನಲ್ಲಿ ಅತ್ಯಂತ ಅದ್ಭುತ ಅನುಭವಗಳಲ್ಲಿ ಒಂದು.ವಿಶ್ರಾಂತಿ, ಧ್ಯಾನ ಮತ್ತು ಸರಳ ಉಸಿರಾಟದ ವ್ಯಾಯಾಮಗಳು ಗರ್ಭಿಣಿಯರಲ್ಲಿ ನಿರಂತರ ಶಕ್ತಿ ಸಂಚಯವನ್ನು ಪೂರೈಸುತ್ತದೆ. ಇದು ಬೆಳೆಯುತ್ತಿರುವ ಮಗುವಿನೊಂದಿಗೆ ಉತ್ತಮ ಬಾಂಧವ್ಯ ವರ್ಧನೆಗೂ ಸಹಕಾರಿ. ಸುಲಭ ಹೆರಿಗೆಗಾಗಿ ಯೋಗ ಅತ್ಯಂತ ಪರಿಣಾಮಕಾರಿ ವಿಧಾನ ಎಂಬುದನ್ನು ವೈದ್ಯರು ಮತ್ತು ಪ್ರಸೂತಿ ತಜ್ಞರು ಗುರುತಿಸಿದ್ದಾರೆ. ದೇಹ, ಮನಸ್ಸು ಮತ್ತು ಚೈತನ್ಯವನ್ನು ಸಂಪರ್ಕಿಸುವ ಮೂಲಕ ಯೋಗವು ಗರ್ಭಿಣಿಯರಿಗೆ ಸುಲಭ ಹೆರಿಗೆಯಾಗಲು ಸಹಾಯ ಮಾಡುತ್ತದೆ. ಇದರಿಂದ ಗರ್ಭಧಾರಣೆ ವೇಳೆ ಮಹಿಳೆಯರಿಗೆ ಆರಾಮ, ವಿಶ್ರಾಂತಿ ಮತ್ತು […]

Read More

ಯೋಗ ಒಂದು ಅವಲೋಕನ

ಜೂನ್ 21 – ವಿಶ್ವ ಯೋಗ ದಿನ ಯೋಗ ಎಂದರೇನು ? ಯೋಗ ಶಬ್ದವು ಸಂಸ್ಕøತದಲ್ಲಿ ‘ಯುಜ್’ ಎಂಬ ಧಾತುವಿನಿಂದ ಬಂದಿದ್ದು, ಯೋಗ ಎಂದರೆ ಕೂಡಿಸು, ಸೇರಿಸು, ಜೋಡಿಸು, ಸಂಬಂಧ, ಸಂಯೋಗ, ಬಂಧನ, ಮುಂತಾದವುಗಳಿಂದ ಕೂಡಿರುವುದೇ ಯೋಗ. ಯೋಗ ? ಯೋ = ಯೋಗ್ಯವಾದದ್ದನ್ನು ಗ = ಗಮನದಲ್ಲಿಟ್ಟು ಮಾಡುವುದೇ ಯೋಗ “ಯುಜ್ಯತೇ ಅನೇನ ಇತಿ ಯೋಗಃ” “ಅನೇಕ ಪ್ರಕಾರವಾಗಿ ಜೋಡಿಸುವಂಥದ್ದೇ ಯೋಗ” ಯುಜ್ ಪದದ ವಿವಿಧ ಅರ್ಥಗಳು ಇಂತಿವೆ: “ಯುಜ್ ಸಮಾಧೌ” ಯುಜ್ ಎಂದರೆ ಸಮಾಧಿ. […]

Read More

Back To Top