ಮೆಡಿಕಲ್ ವಿಜ್ಞಾನಿಗಳ ಪ್ರಕಾರ ಗರ್ಭಧಾರಣೆ ಎನ್ನುವುದು ಪ್ರಕೃತಿದತ್ತವಾದ ನೈಸರ್ಗಿಕವಾದ ಒಂದು ಸಹಜ ಪ್ರಕ್ರಿಯೆ ಆಗಿದೆ. ಹಾಗಾದರೆ ಗರ್ಭಪಾತ ಎಂದರೇನು? ಗರ್ಭಪಾತ ಎಂದರೆ ತಾಯಿಯ ಗರ್ಭಕೋಶದಿಂದ ಭ್ರೂಣವು 9 ತಿಂಗಳ ಅವಧಿಗೆ ಮುನ್ನ ಹೊರಬರುವ ಸ್ಥಿತಿಯನ್ನು ಗರ್ಭಪಾತ ಎನ್ನುತ್ತೇವೆ. ಗರ್ಭಪಾತದಲ್ಲಿ 2 ವಿಧಗಳಿವೆ. ಬೇರೆ ಬೇರೆ ಕಾರಣಗಳಿಂದಾಗಿ ತನ್ನಿಂದ ತಾನೇ ನ್ಯಾಚುರಲ್ ಆಗಿ ಗರ್ಭಪಾತ ಆಗುವುದು. ಉದಾಹರಣೆಗೆ ತಾಯಿ ಯಾವುದಾದರೂ ಖಾಯಿಲೆಗೆ ಗುರಿಯಾದಾಗ, ತಾಯಿ ಹೆದರಿ ಶಾಕ್ ಆದಾಗ, ಗರ್ಭಕೋಶಕ್ಕೆ ಸೋಂಕು ತಗುಲಿದಾಗ, ಗರ್ಭಕೋಶಕ್ಕೆ ಜೋರಾಗಿ ಏಟು ಬಿದ್ದಾಗ […]
Read More
ಮುಚ್ಚಿಕೊಂಡ ನಾಳಗಳಿಂದಾಗಿ ಗರ್ಭ ಧರಿಸಲು ಸಾಧ್ಯವಾಗದ ಮಹಿಳೆಯರಲ್ಲಿ ನಾಳಗಳನ್ನು ಹೊರಹಾಕುವ ಪರಿಣಿತ ಚಿಕಿತ್ಸೆಯೊಂದಿಗೆ ತಾಯ್ತನದ ಆನಂದದ ಅನುಭವ ಹೊಂದುವ ಉತ್ತಮ ಅವಕಾಶವಿದೆ ಬಂಜೆತನಕ್ಕೆ ಅನೇಕ ಕಾರಣಗಳಲ್ಲಿ ಟ್ಯೂಬಲ್ ಫ್ಯಾಕ್ಟರ್ ಅಥವಾ ನಾಳದ ಸಂಗತಿ ಸಹ ಒಂದು. ಆರೋಗ್ಯಕರ ಸಂತಾನೋತ್ಪತ್ತಿ ಅಂಗಗಳನ್ನು ಮಹಿಳೆಯರು ಹೊಂದಿದ್ದರೂ, ಮುಚ್ಚಲ್ಪಟ್ಟ ಅಥವಾ ಹಾನಿಗೀಡಾದ ನಾಳಗಳಿಂದ (ಟ್ಯೂಬ್ಗಳು) ಎಲ್ಲ ಮಹಿಳಾ ಬಂಜೆತನ ಅಂಶದ ಶೇ.25ರಿಂದ ಶೇ.35ರಷ್ಟು ಕಾರಣವಾಗುತ್ತದೆ. ಫಾಲೋಪಿಯನ್ ಟ್ಯೂಬ್ಗಳೆಂದರೇನು? ಫಾಲೋಪಿಯನ್ ಟ್ಯೂಬ್ಗಳೆಂದರೆ ಗರ್ಭಕೋಶದ ಪಕ್ಕಗಳೊಂದಿಗೆ ಸಂಪರ್ಕ ಹೊಂದಿರುವ ಟೊಳ್ಳಿನ ವಿನ್ಯಾಸಗಳಂಥ ನಾಳಗಳು. ಇವು […]
Read More
ಮಧುಮೇಹ ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಷಗಳಿಂದ ಉಂಟಾಗುವ ಒಂದು ಕಾಯಿಲೆ. ಇದು ಗುಣವಾಗುವಂತಹ ಕಾಯಿಲೆಯಲ್ಲ. ಆದರೆ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರ ಮೂಲಕ ಜೀವನವನ್ನು ಸುಗಮವಾಗಿ ಸಾಗಿಸಬಹುದು. ಮಧುಮೇಹ ಮುಂಚೆ 40-45 ವಯಸ್ಸಿನ ಬಳಿಕವೇ ಬರುತ್ತಿತ್ತು. ಆದರೆ ಈಗ ಅದು ಚಿಕ್ಕ ವಯಸ್ಸಿನಲ್ಲಿಯೇ ಬಂದು ಜೀವನವನ್ನು ನರಳುವಂತೆ ಮಾಡುತ್ತಿದೆ. ಮಧುಮೇಹ ಪೀಡಿತ ಮಹಿಳೆಯರಲ್ಲಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂದಾಗ ಅನೇಕ ತೊಂದರೆ-ತಾಪತ್ರಯಗಳು ಉಂಟಾಗಬಹುದು. ಹೀಗಾಗಿ ವೈದ್ಯರು ಶಸ್ತ್ರಚಿಕಿತ್ಸೆಗೂ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಅಂಥವರಿಗೆ ವೈದ್ಯರು ಅನೇಕ ತಪಾಸಣೆಗಳನ್ನು […]
Read More
ಡಯಾಬಿಟಿಸ್ ಚಿಕಿತ್ಸೆಗಾಗಿ 1922ರಲ್ಲಿ ಇನ್ಸುಲಿನ್ನನ್ನು ಪರಿಚಯಿಸಿದ ನಂತರ ಹೆರಿಗೆ ಸಾವುಗಳ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದರೂ, ಹಲವು ದಶಕಗಳ ಕಾಲ ಗರ್ಭಧಾರಣೆಯ ನಷ್ಟ ದರವು ಅಧಿಕ ಪ್ರಮಾಣದಲ್ಲೇ ಮುಂದುವರೆದಿತ್ತು. ಆರೋಗ್ಯಕರ ಗರ್ಭಧಾರಣೆ ಯೋಜನೆಯ ಗುರಿಯು ಗರ್ಭಧಾರಣೆ ಮುನ್ನ, ಗರ್ಭಧರಿಸಿದ ವೇಳೆ ಮತ್ತು ನಂತರದ ಗರಿಷ್ಠ ಗ್ಲೈಸಿಮಿಕ್ (ರಕ್ತದಲ್ಲಿನ ಸಕ್ಕರೆ) ಹತೋಟಿಯನ್ನು ಅವಲಂಬಿಸಿದೆ. ಆರೋಗ್ಯಕರ ಗ್ಲೈಸಿಮಿಕ್ ನಿಯಂತ್ರಣವು ಭ್ರೂಣ ಮತ್ತು ಹೆರಿಗೆ ತೊಡಕುಗಳೆರಡನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತುಂಬಾ ಮಹತ್ವದ್ದಾಗಿದೆ. ಗರ್ಭಧಾರಣೆ ವೇಳೆ ಕಂಡುಬರುವ ಮಧುಮೇಹ ರೋಗದ ನಿರ್ವಹಣೆಯು […]
Read More
ಮುಟ್ಟು ಕೊನೆಗೊಳ್ಳುವುದಕ್ಕೆ ಪೂರ್ವದಲ್ಲಿ ಅಥವಾ ಪ್ರಿ-ಮೆನೊಪಾಸ್ ಅಂದರೆ ಕೊನೆ ಅವಧಿ ತನಕ ನಡೆಯುವ ಋತುಚಕ್ರ ಕ್ರಿಯೆ ಎಂದರ್ಥ. ಪುನರ್ ಉತ್ಪತ್ತಿಯ ಹಾರ್ಮೋನುಗಳ ಮಟ್ಟಗಳು ಈಗಾಗಲೇ ಕಡಿಮೆಯಾಗಿದ್ದು ಮತ್ತು ಹೆಚ್ಚು ದೋಷಪೂರಿತವಾಗಿದ್ದರೆ, ಹಾರ್ಮೋನು ಹಿಂಪಡೆಯುವ ಪರಿಣಾಮಗಳು ಅಸ್ತಿತ್ವದಲ್ಲಿರುತ್ತದೆ. ಪ್ರಿ-ಮೆನೊಪಾಸ್ ಜೀವನದ ಒಂದು ನೈಸರ್ಗಿಕ ಹಂತ. ಇದು ರೋಗವಲ್ಲ ಅಥವಾ ದೋಷವೂ ಅಲ್ಲ. ಅದಕಾರಣ ಇದಕ್ಕೆ ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿಲ್ಲ. ಆದಾಗ್ಯೂ, ಪೂರ್ವ ಮುಟ್ಟುಕೊನೆಗೊಳ್ಳುವಿಕೆಯಲ್ಲಿ ದೈಹಿಕ, ಮಾನಸಿಕ ಮತ್ತು ಭಾವೋದ್ವೇಗದ ಪರಿಣಾಮಗಳು ತೀವ್ರವಾಗಿದ್ದರೆ ಹಾಗೂ ಮಹಿಳೆಯ ದಿನನಿತ್ಯದ […]
Read More
(Ectopic Pregnancy) ಗರ್ಭಕೋಶವು ಭ್ರೂಣ ಬೆಳವಣಿಗೆಗೆಂದೇ ಇರುವಂತಹದ್ದು ಅಥವಾ ಸೃಷ್ಠಿಯಾಗಿರುವುದು. ಗರ್ಭಕೋಶದಲ್ಲಿ ಬೆಳೆದ ಮಕ್ಕಳು ಆರೋಗ್ಯ ಪೂರ್ಣರಾಗಿದ್ದು ಪ್ರಸವ ಸಮಯದಲ್ಲಿ ಯಾವುದೇ ತೊಂದರೆಯಿಲ್ಲದೇ ಜನಿಸುತ್ತಾರೆ. ಇದರಿಂದ ಆರೋಗ್ಯಕ್ಕೂ ಅನುಕೂಲವಾಗುತ್ತದೆ. ಇದನ್ನು ಗರ್ಭಕೋಶದ ಒಳಗಿನ ಭ್ರೂಣ ಎಂದು ಕರೆಯುತ್ತಾರೆ. ಕೆಲವೊಂದು ಸಾರಿ ಗರ್ಭಕೋಶದಲ್ಲಿ ಭ್ರೂಣ ಬೆಳವಣಿಗೆಯಾಗದೇ ಇತರೆಡೆಯಲ್ಲಿ ಭ್ರೂಣವು ಬೆಳೆಯುವ ಸಾಧ್ಯತೆ ಇರುತ್ತದೆ. ಇದನ್ನು “ಆಯತಪ್ಪಿದ ಬಸಿರು” (Ectopic Pregnancy) ಎಂದು ಕರೆಯುತ್ತಾರೆ. ಈ ರೀತಿ ಬೆಳವಣಿಗೆ ಶೇ. 2ರಷ್ಟು ಕಂಡುಬರುತ್ತದೆ. ಈ ರೀತಿಯ ಭ್ರೂಣ ಬೆಳವಣಿಗೆ ಗರ್ಭಕೋಶದ ಹೊರಗೆ, […]
Read More
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಎಂದರೇನು? ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಎಂದರೆ ಮಹಿಳೆಯರ ಋತುಚಕ್ರ, ಫಲವತ್ತತೆ, ಹಾರ್ಮೋನುಗಳು ಮತ್ತು ಅವರ ಚಹರೆ ಮೇಲೆ ಪರಿಣಾಮ ಬೀರುವ ಸ್ಥಿತಿಯನ್ನು ಪಿಸಿಒಎಸ್ ಎನ್ನುವರು. ಇದು ಕೆಲವೊಮ್ಮೆ ಮಹಿಳೆಯರ ಆರೋಗ್ಯದ ಮೇಲೆ ದೀರ್ಘಾವಧಿ ಪರಿಣಾಮ ಸಹ ಬೀರುತ್ತದೆ. ಪ್ರತಿ 100 ಮಹಿಳೆಯರಲ್ಲಿ ಇಬ್ಬರಿಂದ 26 ವನಿತೆಯರು ಪಿಸಿಒಎಸ್ನಿಂದ ನರಳುತ್ತಾರೆ ಎಂದು ಅಂದಾಜು ಮಾಡಲಾಗಿದೆ. ಪಾಲಿಸಿಸ್ಟಿಕ್ ಓವರೀಸ್ ಎಂದರೇನು? ಪಾಲಿಸಿಸ್ಟಿಕ್ ಓವರೀಸ್ (ಬಹುದ್ರವ ಚೀಲಗಳು) ಅಂಡಾಶಯಗಳು ಸಾಮಾನ್ಯ ಅಂಡಾಶಯಗಳಿಗಿಂತ ಸ್ವಲ್ಪ ದೊಡ್ಡದಾಗಿರುತ್ತದೆ […]
Read More
ಮೆನೊಪಾಸ್ ಅಥವಾ ಮುಟ್ಟು ಕೊನೆಗೊಳ್ಳುವಿಕೆಯು ಮಹಿಳೆಯರ ಜೀವನದ ನೈಸರ್ಗಿಕ ಕ್ರಿಯೆ. ಇದು ಕಾಯಿಲೆಯಲ್ಲ. ಹೆಂಗಸರಿಗೆ ವಯಸ್ಸಾದಂತೆಲ್ಲ ಪುನರ್ ಉತ್ಪತ್ತಿ ಚಕ್ರ ಮತ್ತು ವಿಧಾನ ನಿರೀಕ್ಷೆಯಂತೆ ನಿಧಾನವಾಗುತ್ತಾ ಅಂತಿಮವಾಗಿ ಮುಟ್ಟು ಕೊನೆಗೊಳ್ಳುತ್ತದೆ. ಇದು ಸಾಮಾನ್ಯ ಸಂಗತಿ. ಅನಾರೋಗ್ಯದ ಲಕ್ಷಣವಲ್ಲ. ಹಾರ್ಮೋನುಗಳ ಅಸಮತೋಲನ ಅಥವಾ ದೋಷಪೂರಿತ ಆಹಾರ ಸೇವನೆ ಅಭ್ಯಾಸಗಳು, ಒತ್ತಡ, ಸ್ಥೂಲಕಾಯ ಮತ್ತು ಇತರ ಅಂಶಗಳಿಂದ ದೇಹಕ್ಕೆ ಹಾನಿಯಾಗುವಿಕೆಯ ಸೂಚನೆಗಳು ಮೆನೊಪಾಸ್ನ ಲಕ್ಷಣಗಳಾಗಿವೆ. ಮೆನೊಪಾಸ್ನನ್ನು ರಜೋ ನಿವೃತ್ತಿ ಎಂದು ಕರೆಯುತ್ತಾರೆ. ಮುಟ್ಟು ತೀರುವಿಕೆ ಅಥವಾ ಮಹಿಳೆಯರ ಮುಟ್ಟು ಯಾ […]
Read More
ಕಲೆರಹಿತ, ಮೃದು, ನುಣುಪಾದ ಚರ್ಮ ಯಾರಿಗೆ ಬೇಡ ನೀವೇ ಹೇಳಿ? ಬಳುಕುವ ತೆಳ್ಳನೆಯ ಸೊಂಟ, ಆಕರ್ಷಕವಾಗಿ ಹೊಕ್ಕಳು ಕಾಣುವ ಹಾಗೆ ಸೀರೆ ಉಟ್ಟ ಚೆಲುವೆಯ ನೋಟ ಸವಿಯದವರ್ಯಾರು. ಇಂತಹ ಸುಂದರ ಕೆಳಹೊಟ್ಟೆಯ ಮೇಲೆ ಬಿರುಕು ಗೆರೆಗಳು ಬಂದಾಗ ಎಂತಹ ಮುಜುಗರವಾಗುತ್ತೆ ಅಲ್ಲವೆ? ಸ್ತ್ರೀಯರಿಗೆ ಸೌಂದರ್ಯದ ಬಗ್ಗೆ ಎಲ್ಲಿಲ್ಲದ ಕಾಳಜಿ. ಅದರಲ್ಲೂ ಯೌವ್ವನಕ್ಕೆ ಕಾಲಿಡುವ ಸಂದರ್ಭದಲ್ಲಿ ಚರ್ಮದ ಮೇಲೆ ಸಣ್ಣ ಕಲೆಯಾದರೂ ತುಂಬಾ ಯೋಚನೆಗೊಳಗಾಗುತ್ತಾಳೆ. ಕಲೆಗಳು ಯಾವುದೇ ಆಗಿರಬಹುದು. ಉದಾ: ಮೊಡವೆಯ ಕಲೆಗಳೂ, ಬಿಸಿಲಿನಿಂದ ಆಗುವ ಕಪ್ಪು ಕಲೆಗಳು, […]
Read More