ಚಳಿಗಾಲದ ಸಮಸ್ಯೆಗಳ ನಿಯಂತ್ರಣಕ್ಕೆ ಯೋಗ ಮುದ್ರೆಗಳು (ನೆಗಡಿಗೆ ಯೋಗ)

ಚಳಿಗಾಲದ ಸಮಸ್ಯೆಗಳ ನಿಯಂತ್ರಣಕ್ಕೆ ಯೋಗ ಮುದ್ರೆಗಳು ಸಹಕಾರಿ. ಯೋಗ, ಮುದ್ರೆ ಹಾಗೂ ಪ್ರಾಣಾಯಾಮಗಳನ್ನು ಮಾಡುವುದರ ಜೊತೆಗೆ ದೇಹವನ್ನು ಬೆಚ್ಚಗಿರಿಸಿಕೊಳ್ಳುವುದರಿಂದ ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿರಿಸಿಕೊಳ್ಳಬಹುದು.

surya-mudra. ಚಳಿಗಾಲದ ಸಮಸ್ಯೆಗಳ ನಿಯಂತ್ರಣಕ್ಕೆ ಯೋಗ ಮುದ್ರೆಗಳು (ನೆಗಡಿಗೆ ಯೋಗ)
ಸೂರ್ಯ ಮುದ್ರೆ

ಚಳಿಗಾಲದಲ್ಲಿ ಶೀತದಿಂದ ಕೂಡಿದ ವಾತಾವರಣದಿಂದ ದೇಹದಲ್ಲಿ ಅನೇಕ ಸಮಸ್ಯೆಗಳು ಕಾರಣವಾಗುತ್ತದೆ. ಯೋಗ, ಮುದ್ರೆ ಹಾಗೂ ಪ್ರಾಣಾಯಾಮಗಳನ್ನು ಮಾಡುವುದರ ಜೊತೆಗೆ ದೇಹವನ್ನು ಬೆಚ್ಚಗಿರಿಸಿಕೊಳ್ಳುವುದರಿಂದ ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿರಿಸಿಕೊಳ್ಳಬಹುದು. ಚಳಿಗಾಲದಲ್ಲಿ ಕಾಡುವ ಸಮಸ್ಯೆಗಳು ಒಂದೆರಡಲ್ಲ. ನಾವು ಶೀತಲವಾಗಿರುವಾಗ ನಮ್ಮ ರಕ್ತ ಪರಿಚಲನೆಯು ಕಡಿಮೆಯಾಗುತ್ತದೆ. ದೇಹದ ಉಷ್ಣತೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಒಣಚರ್ಮ ಉಂಟಾಗುತ್ತದೆ.

ಕೆಲವರಿಗಂತೂ ನೋವಿನಿಂದ ಕೂಡಿದ ಪಾದದ ಬಿರುಕುಗಳು, ಸೋಂಕಿನ ತೊಂದರೆ, ನೋವಿನ ಕಾಲುಗಳು, ಅಸ್ತಮಾ, ಶೀತ, ಜ್ವರ, ಕೆಮ್ಮು, ನೋಯುತ್ತಿರುವ ಗಂಟಲು ಇತ್ಯಾದಿ ಸಮಸ್ಯೆಗಳು ಕಾಡುತ್ತವೆ. ಚಳಿಗಾಲದಲ್ಲಿ ಶೀತದಿಂದ ಕೂಡಿದ ವಾತಾವರಣದಿಂದಾಗಿ ಮುಂಜಾನೆ ದೇಹ ಜಡವಾಗುತ್ತದೆ. ಹಾಗೆಯೇ ದೇಹದಲ್ಲಿನ ರಕ್ತ ಪರಿಚಲನೆಯು ನಿಧಾನವಾಗುತ್ತದೆ. ಇದರಿಂದ ಗಂಟುನೋವು, ಚರ್ಮದ ತುರಿಕೆ, ಇತ್ಯಾದಿ ಕಾಯಿಲೆಗಳು ಕಾಣಿಸಿಕೊಳ್ಳುವುದು ಜಾಸ್ತಿ.

ಚಳಿಗಾಲದ ಸಮಸ್ಯೆಗಳ ನಿಯಂತ್ರಣಕ್ಕೆ ಯೋಗ ಮುದ್ರೆಗಳು ಸಹಕಾರಿ.

ಚಳಿಗಾಲದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳ ನಿಯಂತ್ರಣಕ್ಕೆ ಯೋಗ ಮುದ್ರೆಗಳು ಸಹಕಾರಿ. ಚರ್ಮದ ಮೃದುತ್ವ ಕಾಪಾಡಲು ಎಣ್ಣೆ ಸ್ನಾನ, ಉತ್ತಮ ಬಿಸಿಯಾದ ಆಹಾರ ಸೇವನೆ ಇತ್ಯಾದಿಗಳನ್ನು ಹೆಚ್ಚಿನವರು ಮಾಡುತ್ತಾರೆ. ಆದರೆ ಚಳಿಗಾಲದಲ್ಲಿ ದೇಹಕ್ಕೆ ಸಹಜವಾಗಿ ರಕ್ತ ಸಂಚಾರವಾಗುವಂತಹ ಯೋಗ, ವ್ಯಾಯಾಮದ ಅಗತ್ಯ ಇರುತ್ತದೆ. ದೇಹವನ್ನು ಶಿಸ್ತುಬದ್ಧವಾಗಿ, ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಬೇಕಾದ ರೀತಿಯಲ್ಲಿ ಬಾಗಿಸುವುದು, ತಿರುಗಿಸುವುದು, ಚಲಿಸುವುದು ಇತ್ಯಾದಿಗಳು ಇವೆ.

prana-mudra ಚಳಿಗಾಲದ ಸಮಸ್ಯೆಗಳ ನಿಯಂತ್ರಣಕ್ಕೆ ಯೋಗ ಮುದ್ರೆಗಳು (ನೆಗಡಿಗೆ ಯೋಗ)
ಪ್ರಾಣಮುದ್ರೆ

ಯೋಗಾಸನವನ್ನು ಮಾಡುವುದರಿಂದ ಆಲಸ್ಯ ನಿವಾರಣೆ ಆಗಿ ದೈಹಿಕ ಅಂಗಾಂಗಳು ಕಾರ್ಯನಿರತವಾಗುತ್ತದೆ. ಚಳಿಗಾಲದಲ್ಲಿ ರಕ್ಷಣೆ ಪಡೆಯಲು ಬೆಳಿಗ್ಗೆ ಎದ್ದ ಕೂಡಲೇ ನಿತ್ಯವಿಧಿಗಳನ್ನು ಮುಗಿಸಿ ಒಂದು ಲೋಟ ಬಿಸಿನೀರನ್ನು ಸೇವಿಸಿ, ಸರಳ ವ್ಯಾಯಾಮಗಳನ್ನು, ಸೂರ್ಯ ನಮಸ್ಕಾರಗಳನ್ನು ಮಾಡಬೇಕು. ಸಾಧ್ಯವಾಗುವವರು ಕಪಾ¯ಭಾತಿ ಕ್ರಿಯೆ ಮಾಡಬೇಕು.

ಚಳಿಗಾಲದಲ್ಲಿ ಅಭ್ಯಾಸ ಮಾಡಬಹುದಾದ ಆಯ್ದ ಆಸನಗಳು ಪ್ರಮುಖವಾಗಿ ತಾಡಾಸನ, ಅರ್ಧಚಕ್ರಾಸನ, ಪಾದಹಸ್ತಾಸನ, ವೀರಭದ್ರಾಸನ, ವೃಕ್ಷಾಸನ, ಪದ್ಮಾಸನ, ವಜ್ರಾಸನ, ಶಶಾಂಕಾಸನ, ಮಂಡೂಕಾಸನ, ಸೂರ್ಯನಮಸ್ಕಾರ, ಶವಾಸನ ಇತ್ಯಾದಿ ಅಭ್ಯಾಸ ಮಾಡಿದಾಗ ದೇಹವು ಬಲುಬೇಗನೆ ಶಾಖಗೊಳ್ಳುವುದು.

ಯೋಗದೊಂದಿಗೆ ಮುದ್ರೆಗಳನ್ನು ಅಳವಡಿಸಿಕೊಳ್ಳಬಹುದು. ಪ್ರಾಣಮುದ್ರೆಯನ್ನು 10 ನಿಮಿಷಗಳ ಕಾಲ ಮಾಡಬೇಕು. ಲಿಂಗಮುದ್ರೆಯನ್ನು 5 ರಿಂದ 10ನಿಮಿಷಗಳ ಕಾಲ ಮಾಡುವುದರಿಂದ ಶರೀರದಲ್ಲಿ ಹೆಚ್ಚಿನ ಉಷ್ಣಾಂಶ ಬಿಡುಗಡೆಯಾಗುತ್ತದೆ. ಆಗಾಗ್ಗೆ ಕಾಡುವ ಶೀತ, ಸೈನಸೈಟಿಸ್ ತೊಂದರೆಗಳು ಮತ್ತು ಉಸಿರಾಟದ ತೊಂದರೆಯನ್ನು ಈ ಮುದ್ರೆಯ ಸಹಾಯದಿಂದ ಬೇಗನೆ ನಿಯಂತ್ರಿಸಬಹುದು.

ಲಿಂಗಮುದ್ರೆ ಮಾಡುವ ವಿಧಾನ :

Lingamudra ಚಳಿಗಾಲದ ಸಮಸ್ಯೆಗಳ ನಿಯಂತ್ರಣಕ್ಕೆ ಯೋಗ ಮುದ್ರೆಗಳು (ನೆಗಡಿಗೆ ಯೋಗ)
ಲಿಂಗಮುದ್ರೆ

ಮೊದಲು ಬೆನ್ನನ್ನು ನೇರವಾಗಿಸಿ ಸುಖಾಸನ, ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು. ಎರಡೂ ಕೈಬೆರಳುಗಳನ್ನು ಪರಸ್ಪರ ಹೆಣೆದು ಒಂದು ಹೆಬ್ಬೆರೆಳು ನೇರವಾಗಿಸಿ. ಇನ್ನೊಂದು ಹೆಬ್ಬೆರೆಳು ಸುತ್ತ ಬರುವಂತೆ ಮಾಡಿ. ದಿನದ ಯಾವುದೇ ಹೊತ್ತಿನಲ್ಲಿ ಈ ಮುದ್ರೆಯ ಅಭ್ಯಾಸ ಮಾಡಬಹುದು. ಸುಮಾರು 5 ರಿಂದ 10 ನಿಮಿಷ ಅಭ್ಯಾಸ ಮಾಡಿದರೆ ಸಾಕು. ಕೊನೆಯಲ್ಲಿ 10 ನಿಮಿಷ ಪ್ರಾಣಮುದ್ರೆ ಮಾಡಬೇಕು.

ತುಂಬಾ ಚಳಿಯಾದಾಗ ಲಿಂಗ ಮುದ್ರೆಯನ್ನು ಅಭ್ಯಾಸ ಮಾಡಿದರೆ ಬೆವರು ಬರುವಷ್ಟು ಶಾಖ ಶರೀರದಲ್ಲಿ ಉತ್ಪತ್ತಿಯಾಗುತ್ತದೆ. ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ. ಈ ಮುದ್ರೆಯ ಅಭ್ಯಾಸದ ನಂತರ ಸೂರ್ಯಮುದ್ರೆಯನ್ನು ಹಾಕಿದರೆ ಹೆಚ್ಚಿನ ಪ್ರಯೋಜನ ದೊರಕುತ್ತದೆ.

ಯೋಗ ವ್ಯಾಯಾಮದ ಜೊತೆಗೆ ವಾಕಿಂಗ್ ಹೋಗುವುದು ಹಾಗೂ ಅಷ್ಟಾಂಗ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಕೊಂಡಾಗ ಆರೋಗ್ಯ ರಕ್ಷಣೆಯೊಂದಿಗೆ ಉತ್ತಮ ಜೀವನ ಶೈಲಿಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ.

yoga-srimati-Ramesh.

ಬಿ.ವಿ. ಶ್ರೀಮತಿ ರಮೇಶ್
ಶ್ರೀ ಯೋಗ ಮತ್ತು ಸಾಂಸ್ಕøತಿಕ ಅಕಾಡೆಮಿ(ರಿ)
ಸಂಸ್ಥಾಪಕಿ, ಕಾರ್ಯದರ್ಶಿ ಮತ್ತು ಯೋಗ ಶಿಕ್ಷಕಿ
mobile – 98803 86687
email : sri.ycaofficial@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!