ಮಹಿಳೆಯರ ಕೆಲವು ಸಮಸ್ಯೆಗಳಿಗೆ ಯೋನಿಮುದ್ರೆ – ಯೋಗದಿಂದ ಆರೋಗ್ಯ

ಮಹಿಳೆಯರ ಕೆಲವು ಸಮಸ್ಯೆಗಳಿಗೆ ಯೋನಿಮುದ್ರೆ ಪರಿಹಾರ.ಈ ಮುದ್ರೆಯನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಮಕ್ಕಳಾಗದಂತ ಸಮಸ್ಯೆಗಳು, ಪಿರಿಯಡ್ಸ್ (ಮುಟ್ಟು) ಸಮಸ್ಯೆಗಳು, ಪಿಸಿಓಡಿ, ಪಿಸಿಓಎಸ್ ಅಂತಹ ಬಹಳಷ್ಟುಸಮಸ್ಯೆಗಳಿಂದ ಹೊರಬರಬಹುದು.

Yonimudreಈ ಬ್ರಹ್ಮಾಂಡವು ಪಂಚತತ್ವಗಳಿಂದ ಕೂಡಿದೆ. ಅವುಗಳಾವುವುವೆಂದರೆ ಅಗ್ನಿ, ವಾಯು, ಆಕಾಶ, ಪೃಥ್ವಿ ಮತ್ತು ಜಲ. ಅದೇ ರೀತಿ ನಮ್ಮ ಶರೀರವು ಸಹ ಪಂಚತತ್ವಗಳಿಂದಾಗಿದೆ. ಯಾವಾಗ ಈ ಪಂಚತತ್ವಗಳು ಸಮತೋಲನದಲ್ಲಿರುತ್ತವೆಯೋ, ಆಗ ನಾವು ಆರೋಗ್ಯದಿಂದಿರುತ್ತೇವೆ. ಯಾವಾಗ ಸಮತೋಲನ ಕಳೆದುಕೊಳ್ಳುತ್ತವೆಯೋ ಆಗ ನಮಗೆ ಅನಾರೋಗ್ಯದಿಂದ ರೋಗಗಳು ತಲೆದೋರುತ್ತವೆ.

ಪಂಚತತ್ವಗಳನ್ನು ಸಮತೋಲನದಲ್ಲಿ ಕಾಪಾಡುವುದೇ ಮುದ್ರಾಯೋಗದ ಉದ್ದೇಶವಾಗಿದೆ. ನಮ್ಮ ಶರೀರದಿಂದ ಇಲೆಕ್ಟ್ರೋ ಮ್ಯಾಗ್ನೆಟಿಕ್ ಪವರ್ ಅಥವಾ ವಿದ್ಯುತ್ ಕಾಂತೀಯ ಅಲೆಗಳು, ಸತತವಾಗಿ ಹೊರಹೊಮ್ಮುತ್ತಿರುತ್ತೆ. ಈ ಚೈತನ್ಯ ಶಕ್ತಿಯು ಕೈ ಬೆರಳುಗಳ ತುದಿ, ಮೂಗು, ತುಟಿ, ಕಿವಿ ಮತ್ತು ಕಾಲುಬೆರಳುಗಳ ತುದಿಯಿಂದ ಸದಾ ಹೊರಹೊಮ್ಮುತ್ತಿರುತ್ತವೆ. ಮುದ್ರಾಯೋಗವನ್ನು ಕೈಬೆರಳುಗಳಿಂದ ಮಾಡುವ ಮೂಲಕ, ಈ ಚೈತನ್ಯ ಶಕ್ತಿಯನ್ನು ಬಂಧಿಸಿ ಶರೀರಕ್ಕೆ ಮರುಕಳಿಸುವಂತೆ ಮಾಡಿ, ಪಂಚತತ್ವಗಳನ್ನು ಸಮತೋಲನವಾಗಿ ಇಟ್ಟುಕೊಳ್ಳಬಹುದಾಗಿರುತ್ತದೆ.

ಅಗ್ನಿ ತತ್ವ – ನಾಭಿಯಿಂದ ಎದೆಯವರೆಗೆ – ಹೆಬ್ಬೆರಳು.
ವಾಯು ತತ್ವ – ಮೂಗಿನಿಂದ ಎದೆಯವರೆಗೆ – ತೋರು ಬೆರಳು.
ಆಕಾಶ ತತ್ವ – ಶಿರಸ್ಸು – ಮಧ್ಯದ ಬೆರಳು.
ಪ್ರಥ್ವಿ ತತ್ವ – ಅಂಗಾಲಿನಿಂದ ಮಂಡಿಗಳವರೆಗೆ – ಉಂಗುರದ ಬೆರಳು.
ಜಲ ತತ್ವ – ಮಂಡಿಗಳಿಂದ ನಾಭಿಯವರೆಗೆ – ಕಿರು ಬೆರಳು.

ಮಹಿಳೆಯರ ಸಮಸ್ಯೆಗಳಿಗೆ ಯೋನಿಮುದ್ರೆ

ಈಗಿನ ಕಾಲದಲ್ಲಿ ತುಂಬಾ ಒತ್ತಡ, ಸ್ಟ್ರೆಸ್. ಹೆಣ್ಣುಮಕ್ಕಳು ಈಗಿನ ಕಾಲದಲ್ಲಿ ಕೆಲಸಕ್ಕೆ ಹೋಗುತ್ತಾರೆ. ಕೆಲಸದಲ್ಲಿ ಅಲ್ಲದೆ ಮನೆಯಲ್ಲೂ ಸಹ ಅವರ ಜವಾಬ್ದಾರಿ ಬಹಳ. ಎಲ್ಲಾ ಕೆಲಸಗಳನ್ನು ಒಟ್ಟಿಗೆ ಮಾಡುವುದರಿಂದ ಹೆಣ್ಣುಮಕ್ಕಳ ಶಕ್ತಿ ಹಾಗೂ ಸಾಮಥ್ರ್ಯ ಕುಂದುತ್ತದೆ. ಇದರಿಂದ ಆರೋಗ್ಯ ಸಂಬಂಧಿತ ಕಾಯಿಲೆಗಳು ತುಂಬಾ ಬರುತ್ತಿರುತ್ತದೆ. ತುಂಬಾ ಹೆಣ್ಣುಮಕ್ಕಳಲ್ಲಿ ಮಕ್ಕಳಾಗದಂತ ಸಮಸ್ಯೆಗಳು, ಪಿರಿಯಡ್ಸ್ (ಮುಟ್ಟು) ಸಮಸ್ಯೆಗಳು, ಪಿಸಿಓಡಿ, ಪಿಸಿಓಎಸ್ ಅಂತಹ ಬಹಳಷ್ಟು ಸಮಸ್ಯೆಗಳು ತಲೆದೋರುತ್ತವೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದರೆ ಈ ಯೋನಿಮುದ್ರೆ.

ಯೋನಿ ಮುದ್ರೆಯನ್ನು ಆಹಾರ ಸೇವನೆಯ 2ಗಂಟೆಯ ನಂತರ ಮಾಡಬಹುದು. 15 ನಿಮಿಷಗಳ ಅವಧಿಯಲ್ಲಿ ದಿನಕ್ಕೆ 3 ಬಾರಿ ಮಾಡಬಹುದು ಅಥವಾ ಒಂದೇ ಸಾರಿ 45 ನಿಮಿಷಗಳ ಕಾಲ ಕೂಡ ಮಾಡಬಹುದು. ಸಾಮಾನ್ಯ ಜನರು ಆರೋಗ್ಯದ ದೃಷ್ಟಿಯಿಂದ ಮಾಡುವವರು ಯಾವುದೇ ಮುದ್ರೆಯನ್ನು 45 ನಿಮಿಷದ ಮೇಲೆ ಮಾಡದೇ ಇರುವುದೇ ಉತ್ತಮ (ಈ ಪದವು ಯೋಗಿಗಳಿಗೆ ಅನ್ವಯಿಸುವುದಿಲ್ಲ).ಈ ಯೋನಿಮುದ್ರೆ ಮಾಡುವುದರಿಂದ ನಿಮ್ಮ ಚರ್ಮದ ಕಾಂತಿ, ಹೊಳಪು ಹೆಚ್ಚು ಮಾಡಿಕೊಳ್ಳಬಹುದು.

ಯೋನಿಮುದ್ರೆ ಮಾಡುವ ವಿಧಾನ

ಮಹಿಳೆಯರ ಕೆಲವು ಸಮಸ್ಯೆಗಳಿಗೆ ಯೋನಿಮುದ್ರೆ - ಯೋಗದಿಂದ ಆರೋಗ್ಯಮೊದಲು ವಜ್ರಾಸನ ಅಥವಾ ಪದ್ಮಾಸನ ಅಥವಾ ಸುಖಾಸನದಲ್ಲಿ ಕುಳಿತುಕೊಳ್ಳಬೇಕು. ಬೆನ್ನು ನೇರವಾಗಿರಿಸಿಕೊಳ್ಳಬೇಕು. ಎರಡು ಹಸ್ತದ ಬೆರಳುಗಳನ್ನು ಒಂದಕ್ಕೊಂದು ಹೆಣೆಯಬೇಕು. ನಂತರ ಎರಡೂ ಹಸ್ತದ ತೋರುಬೆರಳುಗಳನ್ನು ಹಾಗೂ ಹೆಬ್ಬೆರಳುಗಳನ್ನು ಸೇರಿಸಿ ಹೊಟ್ಟೆಯ ಮುಂದೆ ಕೈಯನ್ನು ಇರಿಸಿ ಕುಳಿತುಕೊಳ್ಳಬೇಕು. ಹೀಗೆ ಯೋನಿಮುದ್ರೆಯಲ್ಲಿ ಕುಳಿತುಕೊಂಡಾಗ ನಿಮ್ಮ ಇಷ್ಟ ದೇವರನ್ನು ಮನಸ್ಸಿನಲ್ಲಿ ನೆನೆಯಬೇಕು ಅಥವಾ ಯಾವುದಾದರೂ ಲಘು ಸಂಗೀತವನ್ನು (Light music) ಕೇಳಿಸಿಕೊಳ್ಳುತ್ತಿರಬೇಕು.

ಈ ಮುದ್ರೆಯನ್ನು ಮಾನಸಿಕ ಅಸ್ವಸ್ಥರು ಮತ್ತು ತೀವ್ರವಾದ ಮಾನಸಿಕ ಒತ್ತಡದಲ್ಲಿ ಇರುವವರು ಮಾಡಬಾರದು. ಈ ಮುದ್ರೆಯನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಮೇಲೆ ಹೇಳಿದ ಎಲ್ಲಾ ಸಮಸ್ಯೆಗಳಿಂದ ಹೊರಬರಬಹುದು.ಇದರಿಂದ ನಿಮ್ಮ ಮನಸ್ಸು ಉಲ್ಲಾಸಗೊಳ್ಳುತ್ತದೆ ಹಾಗೂ ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ನೈಸರ್ಗಿಕವಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುದ್ರೆಯು ಸಹಾಯ ಮಾಡುತ್ತದೆ.

Watch the video: ರೋಗ ಬರದಂತೆ ತಡೆಯುವ ಕೆಲವು ಯೋಗಗಳು..!

yoga-srimati-Ramesh.

ಬಿ.ವಿ. ಶ್ರೀಮತಿ ರಮೇಶ್
ಶ್ರೀ ಯೋಗ ಮತ್ತು ಸಾಂಸ್ಕøತಿಕ ಅಕಾಡೆಮಿ(ರಿ)
ಸಂಸ್ಥಾಪಕಿ, ಕಾರ್ಯದರ್ಶಿ ಮತ್ತು ಯೋಗ ಶಿಕ್ಷಕಿ
Mob: 98803 86687
Email : sri.ycaofficial@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!