ನಮ್ಮ ದೇಹದಲ್ಲಿನ ಚಕ್ರಗಳು ಮತ್ತು ಆರೋಗ್ಯ

ನಮ್ಮ ದೇಹದಲ್ಲಿನ ಚಕ್ರಗಳು  ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಹಾಗೂ ಧನಾತ್ಮಕ ಆಲೋಚನೆಗಳ್ನು ಉಳಿಸಿಕೊಳ್ಳಲು,  ಮತ್ತು ಆ ವ್ಯಕ್ತಿಯ ಭಾವನೆಗಳು, ಗುಣಮಟ್ಟ, ಆಲೋಚನೆಗಳು ಮತ್ತು ಆತನ ಜೀವನಸತ್ವವನ್ನು ಪ್ರತಿಬಿಂಭಿಸುತ್ತವೆ.

Chakras-of-Our-Body ನಮ್ಮ ದೇಹದಲ್ಲಿನ ಚಕ್ರಗಳು ಮತ್ತು ಆರೋಗ್ಯಮನುಷ್ಯನ ದೇಹದಲ್ಲಿ ಪ್ರಮುಖವಾಗಿ ಏಳು ಚಕ್ರಗಳಿರುವುದನ್ನು ಭಾರತೀಯ ಯೋಗಶಾಸ್ತ್ರ ಗುರುತಿಸಿದೆ. ಕೆಲವು ಕಡೆ ಒಂಬತ್ತು ಮತ್ತು ಕೆಲವು ಕಡೆ ಐದನ್ನು ಮಾತ್ರ ಹೇಳುತ್ತಾರೆ. ಮುಖ್ಯ ಚಕ್ರಗಳ ಹೊರತಾಗಿ ಇನ್ನೂ ಅನೇಕ ಚಕ್ರಗಳು ದೇಹದ ಬೇರೆ ಬೇರೆ ಭಾಗಗಳಲ್ಲಿರುವುದನ್ನೂ ಗುರುತಿಸಲಾಗಿದೆ. ಈ ಚಕ್ರದಲ್ಲಿ ಶಕ್ತಿ ಸಂಚಯ ಮತ್ತು ಶಕ್ತಿಯ ಹರಿಯುವಿಕೆಗೆ ಸಂಬಂಧಿಸಿದಂತೆ ಪ್ರಭಾವಲಯಗಳು (ಓರಾ) ರೂಪುಗೊಳ್ಳುತ್ತವೆ. ಈ ಪ್ರಭಾವಳಿಗಳು ವ್ಯಕ್ತಿಯ ಜಾಗೃತಸ್ಥಿತಿಯ ಮಟ್ಟವನ್ನು ಅಥವಾ ಗುಣಮಟ್ಟವನ್ನು ಮತ್ತು ಆ ವ್ಯಕ್ತಿಯ ಭಾವನೆಗಳು, ಆಲೋಚನೆಗಳು ಮತ್ತು ಆತನ ಜೀವನಸತ್ವವನ್ನು ಪ್ರತಿಬಿಂಭಿಸುತ್ತವೆ.

ಮನುಷ್ಯರು ಧನಾತ್ಮಕ ಶಕ್ತಿಯಿಂದ ಸುತ್ತುವರಿದಿರುವಾಗ ಹಾಗೂ ಅನುಕೂಲಕರ ದಿಕ್ಕುಗಳನ್ನು ಅನುಸರಿಸಿದಾಗ, 7 ಚಕ್ರಗಳು ಸತತವಾಗಿ ಸಂತೋಷಕರವಾದ ಜೀವನವನ್ನು ನೀಡಲು ಶಕ್ತಿಯನ್ನು ಪಡೆಯುತ್ತವೆ. ಸಮತೋಲನದಲ್ಲಿರಲು, ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಹಾಗೂ ಧನಾತ್ಮಕ ಆಲೋಚನೆಗಳ್ನು ಉಳಿಸಿಕೊಳ್ಳಲು ನಿಮ್ಮ ಏಳು ಚಕ್ರಗಳನ್ನು ತೆರೆಯುವುದು ಹಾಗೂ ಹಿತವಾದ ರೀತಿಯಲ್ಲಿ ಶಕ್ತಿಯು ಒಳಹರಿಯುವುದಕ್ಕೆ ಅವಕಾಶ ನೀಡುವುದು ಶಕ್ತಿದಾಯಕ ಸಾಧನವಾಗಿರುತ್ತದೆ.

ಚಕ್ರಗಳೆಂದರೆ ಶಕ್ತಿವಲಯಗಳು ಮತ್ತು ಇವನ್ನು ನಮ್ಮ ಶಕ್ತಿ ಕ್ಷೇತ್ರಗಳನ್ನು, ಭೌತಿಕ ಕಾಯಗಳನ್ನು ಹಾಗೂ ವ್ಯಾಪಕವಾದ ವಿಶ್ವಶಕ್ತಿಯ ಕ್ಷೇತ್ರವನ್ನು ಸಂಪರ್ಕಿಸುವ ಅನೇಕ ಕಾರ್ಯಗಳನ್ನು ನಿರ್ವಹಿಸುವ ಬೇರೆ ಬೇರೆ ಬಣ್ಣಗಳ ವಿದ್ಯುದೀಯ ಶಕ್ತಿಯ ಚಕ್ರಗಳು ಎಂದು ಕರೆಯುತ್ತಾರೆ. ಈ ಏಳು ಚಕ್ರಗಳು ಎಂಡೋಕ್ರೈನ್ ವ್ಯವಸ್ಥೆಗೆ ನೇರ ಸಂಪರ್ಕವನ್ನು ಹೊಂದಿವೆ ಮತ್ತು ಅದನ್ನು ನಿಯಂತ್ರಿಸುವ ಮೂಲಕ ವಯಸ್ಸಾಗುವಿಕೆಯನ್ನು ತಡೆಯುತ್ತವೆ. 7 ಚಕ್ರಗಳು ಪ್ರಭಾಮಂಡಲ ಹಾಗೂ ದೇಹದ ಒಳಗಿನ ಸಮಯದ ವ್ಯವಸ್ಥೆಯನ್ನು ಬೇರೆ ಬೇರೆ ಮಟ್ಟದ ಪ್ರಭಾಮಂಡಲ ಹಾಗೂ ವಿಶ್ವಶಕ್ತಿಯನ್ನು ಜೋಡಿಸುತ್ತವೆ. ಅವು ಭೌತಿಕ ದೇಹಕ್ಕೆ ಶಕ್ತಿಯ ಹರಿವನ್ನು ಪ್ರಭಾವಿಸುತ್ತವೆ. ಅವುಗಳು ವಾತಾವರಣದಿಂದ ಪ್ರಾಥಮಿಕ ಶಕ್ತಿಯನ್ನು ಹೀರಿಕೊಳ್ಳುತ್ತವೆ ಮತ್ತು ಇದನ್ನು ಶಕ್ತಿಯ ಅಗತ್ಯವಿರುವಲ್ಲಿಗೆ ಹರಿಸುತ್ತವೆ.

ನಮ್ಮ ದೇಹದಲ್ಲಿ ತಲೆಯಿಂದ ಶುರುವಾಗಿ ಮರ್ಮಸ್ಥಾನದವರೆಗಿನ ಏಳು ಚಕ್ರಗಳು ಹೀಗಿವೆ,

1. ಸಹಸ್ರಾರ ಚಕ್ರ- ಸಹಸ್ರಾರ ಚಕ್ರವನ್ನು ``ತಲೆಯ ಮೇಲಿನ ಚಕ್ರ’‘ ಎಂದು ಕೂಡ ಕರೆಯುತ್ತಾರೆ, ಇದು ತಲೆ ಹಾಗೂ ಮೆದುಳಿನ ಮೇಲಿರುತ್ತದೆ. ಶರೀರದ 7 ಚಕ್ರಗಳಲ್ಲಿ ಮೊದಲನೇಯದು. ಸಹಸ್ರಾರ ಚಕ್ರ ಕ್ರಿಯಾಶೀಲವಾಗದೇ ಇದ್ದಲ್ಲಿ, ಇದು ಖಿನ್ನತೆ, ಪಾರ್ಕಿನ್‍ಸನ್ಸ್ ಸಿಂಡ್ರೋಮ್, ಸ್ಕಿಝೋಫ್ರೆನಿಯಾ, ಅಪಸ್ಮಾರ, ಸೆನೈಲ್ ಡಿಮೆನ್ಶಿಯಾ, ಅಲ್ಝೈಮರ್ ಖಾಯಿಲೆ, ಇತರ ಮನೋರೋಗಗಳು, ಗೊಂದಲ ಮತ್ತು ತಲೆಸುತ್ತುವಿಕೆಯನ್ನು ಉಂಟುಮಾಡಬಹುದು. ಸಹಸ್ರಾರ ಚಕವು ನಮ್ಮ ಭೌತಿಕ ಕಾಯಕ್ಕೆ ದೈವಿಕತೆಯೊಂದಿಗೆ ಸಂಪರ್ಕ ಏರ್ಪಡಿಸುತ್ತದೆ. ಇದರ ಬಣ್ಣ ಬಿಳಿ ಅಥವಾ ನೀಲಿ ನೇರಳೆ. ಈ ಚಕ್ರಕ್ಕೆ ಸಂಬಂಧಪಟ್ಟ ಗ್ರಂಥಿಯೆಂದರೆ ಪಿನಿಯಲ್ ಗ್ರಂಥಿ ಮತ್ತು ಇದಕ್ಕೆ ಸಂಬಂಧಪಟ್ಟ ದೈಹಿಕ ಭಾಗಗಳೆಂದರೆ ಮೇಲ್ಭಾಗದ ಮೆದುಳು, ಬಲಗಣ್ಣು. ನಮ್ಮ ದೇಹದ ಚಕ್ರಗಳು ಪರಸ್ಪರ ಸಾಮರಸ್ಯದಿಂದ ಕೆಲಸ ಮಾಡಿದಾಗ ನಮ್ಮಲ್ಲಿ ಹೆಚ್ಚಿನ ಸ್ಪೂರ್ತಿ, ಚೈತನ್ಯ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಇದನ್ನು ರೇಕಿ ನೀಡುವ ಮೂಲಕ ಸಾಧಿಸಬಹುದು. ಇದರಿಂದ ನೀವು ಹೆಚ್ಚು ಜಾಗೃತವಾಗುತ್ತೀರಿ.

2. ಆಜ್ಞಾ ಚಕ್ರ ಆಜ್ಞಾ ಚಕ್ರವನ್ನು ``ಲಲಾಟ ಚಕ್ರ” ಎಂದು ಕರೆಯಲಾಗುತ್ತದೆ, ಇದು ಹಣೆಯ ಮಧ್ಯಭಾಗದಲ್ಲಿ ಇರುತ್ತದೆ. ಇದು 7 ಚಕ್ರಗಳಲ್ಲಿ ಎರಡನೇಯದು. ನಮ್ಮ ಆಜ್ಞಾ ಚಕ್ರವನ್ನು ಕ್ರಿಯಾಶೀಲಗೊಳಿಸದೇ ಇದ್ದಲ್ಲಿ, ಇದು ಒತ್ತಡ, ತಲೆನೋವು, ಮೈಗ್ರೇನ್, ದೃಷ್ಟಿ ಸಮಸ್ಯೆಗಳು, ಸಮೀಪದೃಷ್ಟಿ ದೋಷ, ದೂರದೃಷ್ಟಿದೋಷ, ಗ್ಲಾಕೋಮಾ, ಮೋತಿಬಿಂದು, ಸೈನಸ್ ಸಮಸ್ಯೆಗಳು, ಕಿವಿಯ ಸಮಸ್ಯೆಗಳು ಇತ್ಯಾದಿಗಳು ಬರುತ್ತವೆ. ಹಣೆಯ ಮಧ್ಯಭಾಗದಲ್ಲಿರುವ ಮೂರನೇ ಕಣ್ಣು ಎಂದು ಕರೆಯಲಾಗುವ ಈ ಚಕ್ರವು ಅಂತಃಸ್ಪುರಣೆಯ ಕೇಂದ್ರವಾಗಿದೆ. ಇದು ಮನಃಶ್ಯಕ್ತಿ, ಬುದ್ಧಿವಂತಿಕೆ ಮತ್ತು ಚೈತನ್ಯದ ಕೇಂದ್ರವಾಗಿದೆ ಕೂಡಾ. ಇದರ ಬಣ್ಣ ನೇರಳೆ. ಈ ಚಕ್ರಕ್ಕೆ ಸಂಬಂಧಪಟ್ಟ ಗ್ರಂಥಿಯೆಂದರೆ ಪಿಟ್ಯುಟರಿ ಗ್ರಂಥಿ ಮತ್ತು ಇದಕ್ಕೆ ಸಂಬಂಧಪಟ್ಟ ದೈಹಿಕ ಭಾಗಗಳೆಂದರೆ ಬೆನ್ನು ಮೂಳೆ, ಕೆಳ ಮೆದುಳು, ಎಡಗಣ್ಣು, ಮೂಗು ಮತ್ತು ಕಿವಿಗಳು.

3. ವಿಶುದ್ಧಿ ಚಕ್ರ – ವಿಶುದ್ಧ ಚಕ್ರವನ್ನು ``ಕಂಠದ ಚಕ್ರ” ಎಂದೂ ಕರೆಯಲಾಗುತ್ತದೆ. ಇದು ಗಂಟಲು ಹಾಗೂ ಶ್ವಾಸಕೋಶದ ಪ್ರದೇಶದಲ್ಲಿ ಇರುತ್ತದೆ. ಇದು 7 ಚಕ್ರಗಳಲ್ಲಿ ಮೂರನೇಯದು. ನಮ್ಮ ವಿಶುದ್ಧ ಚಕ್ರವು ಕ್ರಿಯಾಶೀಲವಾಗದೇ ಇದ್ದಲ್ಲಿ ಇದು ಥೈರಾಯ್ಡ್ ಸಮಸ್ಯೆಗಳನ್ನು ಉಂಟುಮಾಡಬಹುದು. ಅಂದರೆ ಥೈರಾಯ್ಡ್ ಸಹಜಕ್ಕಿಂತ ಕಡಿಮೆ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬಹುದು, ಅಥವಾ ಅನೋರೆಕ್ಸಿಯಾ ನರ್ವೋಸಾ (ಇದು ಒಂದಕ್ಕಿಂತ ಹೆಚ್ಚು ಚಕ್ರಗಳಿಗೆ ಸಂಬಂಧಿಸಿದ ಸಮಸ್ಯೆ), ಅಸ್ತಮಾ, ಬ್ರಾಂಕೈಟಿಸ್ ಆಲಿಸುವಿಕೆಯ ಸಮಸ್ಯೆ, ಟಿನೈಟಿಸ್ ಮುಂತಾದವುಗಳನ್ನು ಉಂಟುಮಾಡಬಹುದು. ಇದು ಲಲಾಟ ಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಲ್ಬಣವಾಗುವಂತೆ ಮಾಡಿ ಜೀರ್ಣಾಂಗ ವ್ಯೂಹದ ಮೇಲ್ಭಾಗ, ಬಾಯಿಯ ಆಲ್ಸರ್‍ಗಳು, ಗಂಟಲು ನೋವು, ಟಾನ್ಸಲೈಟಿಸ್ ಮುಂತಾದವುಗಳನ್ನು ಉಂಟುಮಾಡಬಹುದು. ಈ ಚಕ್ರವು ಕುತ್ತಿಗೆಯಲ್ಲಿದ್ದು ಇದು ಸಂವಹನ, ಸಂಭಾಷಣೆ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವಿಕೆಗೆ ಸಂಬಂಧಿಸಿದೆ. ಇದರ ಬಣ್ಣ ನೀಲಿ. ಈ ಚಕ್ರಕ್ಕೆ ಸಂಬಂಧಪಟ್ಟ ಗ್ರಂಥಿಯೆಂದರೆ ಥೈರಾಯಿಡ್ ಗ್ರಂಥಿ ಮತ್ತು ಇದಕ್ಕೆ ಸಂಬಂಧಪಟ್ಟ ದೈಹಿಕ ಭಾಗಗಳೆಂದರೆ ಕೊರಳು, ಶ್ವಾಸಕೋಶ, ಜೀರ್ಣಾಂಗ ವ್ಯವಸ್ಥೆ.

4. ಅನಾಹತ ಚಕ್ರ – ಅನಾಹತ ಚಕ್ರವನ್ನು “ಹೃದಯ ಚಕ್ರ’‘ ಎಂದೂ ಕೂಡ ಕರೆಯುವರು, ಇದು ಹೃದಯದ ಭಾಗದಲ್ಲಿರುತ್ತದೆ. ಇದು 7 ಚಕ್ರಗಳಲ್ಲಿ ನಾಲ್ಕನೇಯದು. ನಮ್ಮ ಅನಾಹತ ಚಕ್ರವನ್ನು ಕ್ರಿಯಾಶೀಲಗೊಳಿಸಿದಲ್ಲಿ, ಇದು ಹೃದಯ ರೋಗ, ರೋಗನಿರೋಧಕ ವ್ಯವಸ್ಥೆಯ ರೋಗಗಳನ್ನು, ಕೆಳಗಿನವುಗಳನ್ನು ಒಳಗೊಂಡಂತೆ ಉಂಟುಮಾಡಬಹುದು: ಮೈಯಾಲ್ಜಿಯಾ, ಎನ್ಸೆಫಲೈಟಿಸ್ (ಕೆಲವೊಮ್ಮೆ ಇದನ್ನು ದೀರ್ಘಕಾಲ ಸುಸ್ತಿನ ರೋಗ ಎನ್ನುವರು) ಹಾಗೂ ಉಳಿದ ಅನೇಕ ರೋಗನಿರೋಧಕ ವ್ಯವಸ್ಥೆಯ ರೋಗಗಳು, ಅಲರ್ಜಿಗಳು, ಸ್ತನ ಕ್ಯಾನ್ಸರ್. ಈ ಅನಾಹತ ಚಕ್ರವು ಪ್ರೇಮಕ್ಕೆ, ಭಕ್ತಿಗೆ ಮತ್ತು ಕರುಣೆಗೆ ಸಂಬಂಧಿಸಿದೆ. ಇದರ ಬಣ್ಣ ಹಸಿರು. ಈ ಚಕ್ರಕ್ಕೆ ಸಂಬಂಧಪಟ್ಟ ಗ್ರಂಥಿಯೆಂದರೆ ಥೈಮಸ್ ಗ್ರಂಥಿ. ಮತ್ತು ಇದಕ್ಕೆ ಸಂಬಂಧಪಟ್ಟ ದೈಹಿಕ ಭಾಗಗಳೆಂದರೆ ಹೃದಯ, ಶ್ವಾಸಕೋಶ, ಲಿವರ್, ಮತ್ತು ರಕ್ತ ಪರಿಚಲನೆ.

Sapta-Chakra.j5. ಮಣಿಪೂರ ಚಕ್ರ – ಮಣಿಪೂರ ಚಕ್ರವನ್ನು “ಸೌರ ಜಾಲದ ಚಕ್ರ” ಎಂದೂ ಕೂಡ ಕರೆಯುವರು, ಇದು ಜಠರ, ಗುಲ್ಮ ಮತ್ತು ಹೊಟ್ಟೆಯ ಭಾಗದಲ್ಲಿರುತ್ತದೆ. ಇದು 7 ಚಕ್ರಗಳಲ್ಲಿ ಐದನೇಯದು. ಮಣಿಪೂರ ಚಕ್ರ ಕ್ರಿಯಾಶೀಲವಾಗದೇ ಇದ್ದರೆ, ಇದು ಮಧುಮೇಹ, ಮೇದೋಜೀರಕಾಂಗದ ಉರಿಯೂತ, ಜಠರದ ರೋಗ, ಪಿತ್ತಕೋಶದ ಆಲ್ಸರ್, ಕಾಲಿಕ್ಸ್ ಖಾಯಿಲೆ, ಮೂತ್ರಕೋಶ ಕಲ್ಲುಗಳಿಗೆ ಕಾರಣವಾಗಬಹುದು. ಇದು ಹೊಕ್ಕಳಿನ ಮೇಲ್ಗಡೆ ಇದ್ದು, ಇದು ಭಾವನೆಗಳಿಗೆ ಸಂಬಂಧಿಸಿದೆ. ಇದರ ಬಣ್ಣ ಹಳದಿ. ಈ ಚಕ್ರಕ್ಕೆ ಸಂಬಂಧಪಟ್ಟ ಗ್ರಂಥಿಯೆಂದರೆ ಮೇದೋಜ್ಜೀರಕ ಗ್ರಂಥಿ ಮತ್ತು ಇದಕ್ಕೆ ಸಂಬಂಧಪಟ್ಟ ದೈಹಿಕ ಭಾಗಗಳೆಂದರೆ ಹೊಟ್ಟೆ, ಲಿವರ್, ಮತ್ತು ಪಿತ್ತಕೋಶ.

6. ಸ್ವಾಧಿಸ್ಟಾನ ಚಕ್ರ – ಸ್ವಾಧಿಷ್ಠಾನ ಚಕ್ರವನ್ನು “ತ್ರಿಕಾಸ್ಥಿ ಚಕ್ರ” ಎಂದೂ ಕರೆಯುವರು, ಇದು ಗರ್ಭಾಶಯ, ದೊಡ್ಡ ಕರುಳು, ಪ್ರೋಸ್ಟೇಟ್, ಅಂಡಾಶಯಗಳು ಮತ್ತು ವೃಷಣಗಳ ಪ್ರದೇಶದಲ್ಲಿರುತ್ತದೆ. ಇದು 7 ಚಕ್ರಗಳಲ್ಲಿ ಆರನೇಯದು. ಸ್ವಾಧಿಷ್ಠಾನ ಚಕ್ರ ಕ್ರಿಯಾಶೀಲವಾಗದೇ ಇದ್ದರೆ, ಇದು ಋತುಸ್ರಾವದ ವ್ಯತ್ಯಾಸ, ಋತುಚಕ್ರದ ಸಮಸ್ಯೆಗಳು, ಗರ್ಭಾಶಯದ ಫೈಬ್ರಾಯ್ಡ್‍ಗಳು, ಓವೇರಿಯನ್ ಸಿಸ್ಟ್‍ಗಳು, ಇರಿಟೆಬಲ್ ಬಾವೆಲ್ ಸಿಂಡ್ರೋಮ್, ಎಂಡೋಮೆಟ್ರಿಯಾಸಿಸ್, ವೃಷಣದ ರೋಗಗಳು, ಪ್ರೋಸ್ಟೇಟ್ ರೋಗಗಳು ಇತ್ಯಾದಿಗಳನ್ನು ಉಂಟುಮಾಡಬಹುದು. ಇದು ಹೊಕ್ಕಳಿನ ಕೆಳಗಿರುತ್ತದೆ. ಇದು ಕಾಮಶಕ್ತಿಯ ಕೇಂದ್ರ ಎಂದು ಕರೆಯುತ್ತಾರೆ. ಇದು ಇಂದ್ರಿಯಾತೀತ ಗ್ರಹಣಶಕ್ತಿಯ ಕೇಂದ್ರವೂ ಆಗಿದೆ. ಇದರ ಬಣ್ಣ ಕಿತ್ತಳೆ. ಈ ಚಕ್ರಕ್ಕೆ ಸಂಬಂಧಪಟ್ಟ ಗ್ರಂಥಿಯೆಂದರೆ ವೃಷಣ ಮತ್ತು ಅಂಡಾಶಯ ಗ್ರಂಥಿಗಳು ಮತ್ತು ಇದಕ್ಕೆ ಸಂಬಂಧಪಟ್ಟ ದೈಹಿಕ ಭಾಗಗಳೆಂದರೆ ಜನನಾಂಗಗಳು ಮತ್ತು ಕಾಲುಗಳು.

7. ಮೂಲಾಧಾರ ಚಕ್ರ – ಮೂಲಾಧಾರ ಚಕ್ರವನ್ನು “ಮೂಲ ಚಕ್ರ” ಎಂದು ಕರೆಯಲಾಗುತ್ತದೆ, ಇದು ಬೆನ್ನುಹುರಿಯ ಬುಡದಲ್ಲಿ ಇರುತ್ತದೆ. ಇದು ಏಳು ಚಕ್ರಗಳಲ್ಲಿ ಕೊನೆಯದು, ನಮ್ಮ ಮೂಲಾಧಾರ ಚಕ್ರವು ಕ್ರಿಯಾಶೀಲವಾಗಿಲ್ಲದೇ ಇದ್ದರೆ, ಮಲಬದ್ಧತೆ, ಬೇಧಿ, ಮೂಲವ್ಯಾಧಿ, ಕೊಲೈಟಿಸ್, ಕ್ರೋಹ್ನ್‍ನ ಖಾಯಿಲೆ, ಕೈ ಹಾಗೂ ಕಾಲ್ಬೆರಳುಗಳು ತಣ್ಣಗಿರುವುದು, ಪದೇ ಪದೇ ಮೂತ್ರ ವಿಸರ್ಜನೆ, ಅಧಿಕ ರಕ್ತದ ಒತ್ತಡ, ಮೂತ್ರಪಿಂಡದ ಕಲ್ಲುಗಳು, ನಪುಂಸಕತ್ವ ಮತ್ತು ಸೊಂಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. ಮೂಲಾಧಾರ ಚಕ್ರವು ಜನನಾಂಗ ಮತ್ತು ಗುದದ್ವಾರದ ನಡುವೆ ಇರುವ ಸ್ಥಳದಲ್ಲಿ ಇರುತ್ತದೆ.

ಈ ಸ್ಥಳದಿಂದ ದೇಹದಲ್ಲಿ ಪ್ರಾಣಶಕ್ತಿ ಹರಿಯುವ ಎರಡು ಮಾರ್ಗಗಳು ಹರಿಯುತ್ತವೆ ಮತ್ತು ಇಲ್ಲಿ ಅಸಂಖ್ಯ ನರಗಳ ತುದಿಗಳಿರುವುದರಿಂದಾಗಿ ಇದು ದೇಹದ ಒಂದು ಅತ್ಯಂತ ಮಹತ್ವದ ಭಾಗವಾಗಿದೆ. ಇದು ದೈಹಿಕ ಜೀವನಸತ್ವವಿರುವ ಹಾಗೂ ಜೀವನೇಚ್ಛೆಯಿರುವ ಭಾಗವಾಗಿದೆ ಮತ್ತು ಇದು ಮಾನವನ ಸೃಜನಾತ್ಮಕ ಶಕ್ತಿಗೂ ಮೂಲವಾಗಿದೆ ಎನ್ನುತ್ತಾರೆ. ಇದರ ಬಣ್ಣ ಕೆಂಪು. ಈ ಚಕ್ರಕ್ಕೆ ಸಂಬಂಧಪಟ್ಟ ಗ್ರಂಥಿಯೆಂದರೆ ಅಡ್ರಿನಲ್ ಗ್ರಂಥಿ. ಮತ್ತು ಇದಕ್ಕೆ ಸಂಬಂಧಪಟ್ಟ ದೈಹಿಕ ಭಾಗಗಳೆಂದರೆ ಕಿಡ್ನಿ, ಮೂತ್ರ ಕೋಶ ಮತ್ತು ಬೆನ್ನು ಮೂಳೆ. ಈ ಚಕ್ರಕ್ಕೆ ಸಂಬಂಧಪಟ್ಟ ಅಂಗಗಳು ಎಂದು ಏಕೆ ಹೇಳುತ್ತಾರೆಂದರೆ ಪ್ರಾಣ ಶಕ್ತಿ ಈ ಚಕ್ರದ ಮೂಲಕ ಈ ದೇಹದ ಭಾಗಗಳಿಗೆ ಹರಿಯುತ್ತದೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!