Health Vision

ಮಕರ ಸಂಕ್ರಾಂತಿ – ಮಕರ ಸಂಕ್ರಮಣ

ಭಾರತೀಯರು, ನಮ್ಮ ಪೂರ್ವಜರು, ನಮ್ಮ ಸಂಸ್ಕಾರ, ಆಧ್ಯಾತ್ಮಕ ಮತ್ತು ವೈಜ್ಞಾನಿಕ ವಿಚಾರಗಳನ್ನು ಒಟ್ಟುಗೂಡಿಸಿ, ನಮ್ಮ ದಿನನಿತ್ಯದ ಜೀವನದಲ್ಲಿ ಹಬ್ಬಗಳನ್ನು ವಿಶೇಷ ಆಚರಣೆಗಳನ್ನು, ಆಹಾರಗಳನ್ನು ಮನೆಯ ಜನರು, ಊರ ಜನರು, ಗೆಳೆಯರೆಲ್ಲ ಕೂಡಿ ಆಚರಿಸುವ ಒಂದು ಪದ್ಧತಿಯನ್ನು ನಡೆಸಿಕೊಂಡು ಬಂದಿದ್ದಾರೆ. ನಮ್ಮ ವೇದಗಳಲ್ಲಿ ಬರುವ ವೈಜ್ಞಾನಿಕ ವಿಚಾರಗಳನ್ನು ಜನ ಸಾಮಾನ್ಯರಿಗೆ ತಿಳಿಯುವಂತೆ, ಕಥೆಗಳ ರೂಪದಲ್ಲಿ ಪುರಾಣಗಳನ್ನು ಬರೆದು, ಜನರು ಈ ಪುರಾಣದಲ್ಲಿರುವಂತೆ ಆಚರಿಸಲು ತಿಳಿಸಿರುವರು. ಮಕರ ಸಂಕ್ರಾಂತಿಯು ವರುಷದ ಮೊದಲನೆಯ ಹಬ್ಬ. ಇದನ್ನು ಸುಗ್ಗಿ ಹಬ್ಬ, ಮಾಘ ಮೇಳ, […]

Read More

ಲಕ್ಷ್ಮಿತಾರು- ಅಮೃತ ಸಂಜೀವಿನಿ

ಇಂಗ್ಲೀಷ್ : ಸೀಮಾರೂಬ, ಪಾರಡೈಸ್ ಟ್ರೀ ಬೊಟಾನಿಕಲ್ : ಸೀಮಾರೂಬ ಗ್ಲೌಕಾ ಹಿಂದಿ : ಲಕ್ಷ್ಮಿತಾರು ಲಕ್ಷ್ಮಿತಾರು ಎಂಬ ಎಲೆಗಳು ನಮಗೆ ನಿಸರ್ಗವು ನೀಡಿರುವ ಒಂದು ಅದ್ಭುತವಾದ ವರದಾನವಾಗಿದೆ. ಇದರಲ್ಲಿ ಇರುವಂತಹ ಔಷಧೀಯ ಗುಣಗಳು ಮಾನವನಿಗೆ ಅಮೃತ ಸಂಜೀವಿನಿಯಾಗಿ ಕಾರ್ಯ ನಿರ್ವಹಿಸುತ್ತದೆ. ತಾಯಿಯ ಗರ್ಭವು ಮಗುವಿಗೆ ವಜ್ರ ಕಚವದಂತೆ ಹೇಗೆ ಕೆಲಸ ಮಾಡುತ್ತದೆಯೋ, ಮಗುವು ಗರ್ಭದಿಂದ ಆಚೆ ಬಂದು ಮಣ್ಣು ಸೇರುವ ತನಕ ಲಕ್ಷ್ಮೀತಾರು ಎಲೆಗಳು ತಾಯಿಯಂತೆ ಹಾಗೂ ತಾಯಿ ಗರ್ಭದಂತೆ ರಕ್ಷೆಯನ್ನು ಮಾನವನಿಗೆ ನೀಡುತ್ತದೆ. ಆದ್ದರಿಂದ […]

Read More

ಹೊಸ ವರ್ಷಕ್ಕೆ ಆರೋಗ್ಯಕಾರಿ ಸಲಹೆಗಳು

ಹೊಸ ವರ್ಷ ಆಗಮನವಾಗುತ್ತಿದ್ದಂತೆ ತಾಜಾತನ, ಉತ್ಸಾಹ ಮತ್ತು ಕುತೂಹಲಗಳು ಮನೆ ಮಾಡುತ್ತವೆ. ಹೊಸ ಆರಂಭ, ನೂತನ ನಿರ್ಣಯಗಳು, ನವ ಸಂಕಲ್ಪಗಳು, ಹಾಗೂ ದಿನಚರಿಗಳು ಪ್ರತಿಯೊಬ್ಬರ ಮನಸ್ಸಿನಲ್ಲಿರುತ್ತದೆ. ಆದರೆ ಇದು ಆರೋಗ್ಯಕರ ನಿಯಮಗಳು ಮತ್ತು ಕಟ್ಟುಪಾಡುಗಳೊಂದಿಗೆ ಪರಿಣಾಮ ಬೀರಬೇಕು. ಇಲ್ಲಿ ನೂತನ ವರ್ಷಕ್ಕಾಗಿ ಆಯುರ್ವೇದ ಪಠ್ಯಗಳಲ್ಲಿ ಉಲ್ಲೇಖಿಸಲಾಗಿರುವ ಆರೋಗ್ಯಕರ ಸಲಹೆಗಳನ್ನು ನೀಡಲಾಗಿದೆ. ಮುಂಜಾನೆಯೇ ಎದ್ದೇಳಬೇಕು: ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು. ಬ್ರಾಹ್ಮಿ ಮುಹೂರ್ತವೆಂದರೆ ಸೂರ್ಯೋದಯದ ಒಂದು ಗಂಟೆ ಮುನ್ನವಿರುವ ಪ್ರಶಾಂತ ಸಮಯ. ಮುಂಜಾನೆಯೇ ಏಳುವುದರೆಂದರೆ ಆರೋಗ್ಯ, ಜ್ಞಾನ ಮತ್ತು ಸಂತೋಷ […]

Read More

ವಿಶ್ವ ದಂತಬಳ್ಳಿ ಬಳಕೆ ದಿನ- ನವೆಂಬರ್ 23

ಬಾಯಿಯ ಶುಚಿತ್ವ ಮತ್ತು ದಂತದ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ದಂತ ಕುಂಚ (ಟೂತ್ ಬ್ರಷ್) ಮತ್ತು ದಂತ ಬಳ್ಳಿಯ (ಡೆಂಟಲ್ ಪ್ಲಾಸ್) ಸರಿಯಾದ ಬಳಕೆ ಅತೀ ಅಗತ್ಯ. ಬಾಯಿಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಂತ ಬಳ್ಳಿಯ ಬಳಕೆಯನ್ನು ಹೆಚ್ಚು ಪ್ರೇರೇಪಿಸುವ ಉದ್ದೇಶದಿಂದ ಪ್ರತಿ ವರ್ಷ ನವೆಂಬರ್ ತಿಂಗಳ ನಾಲ್ಕನೇ ಶುಕ್ರವಾರವನ್ನು ವಿಶ್ವಂದ್ಯಂತ ‘ದಂತಬಳ್ಳಿ ಬಳಕೆ ದಿನ’ ಎಂದು ಆಚರಿಸಲಾಗುತ್ತದೆ. ನಮ್ಮ ಬಾಯಿ ನಮ್ಮ ಜೀರ್ಣಾಂಗ ವ್ಯವಸ್ಥೆಯ ಹೆಬ್ಬಾಗಿಲು. ನಾವು ತಿನ್ನುವ ಆಹಾರ ಬಾಯಿಯ ಮುಖಾಂತರವೇ […]

Read More

ಅಂಡಾಶಯದ ನೀರ್ಗುಳ್ಳೆಗಳು (ಪಿ ಸಿ ಓ ಡಿ)

ಸುಮ ಇಪ್ಪತ್ತರ ಸುಂದರ ಹುಡುಗಿ, ಸದಾ ಹಸನ್ಮುಖಿಯಾಗಿ ಸ್ಪೂರ್ತಿಯ ಸೆಲೆಯಂತಿದ್ದಳು, ಇಂಜಿನಿಯರಿಂಗ್ ಓದುತ್ತಿರುವ ಅವಳಿಗೆ, ಸುಮಾರು ಆರು ತಿಂಗಳಿಂದ  ಅವಳ ಸುಂದರ ಮುಖದಲ್ಲಿ ಮೊಡವೆಗಳು ಶುರುವಾದವು, ಮೊದಲು ಚಿಕ್ಕ ಗಾತ್ರದಲ್ಲಿ ಬರುತ್ತಿದ್ದ  ಮೊಡವೆಗಳು, ನಂತರ ದೊಡ್ಡ ಗಾತ್ರದವು ಉಂಟಾಗಿ ಮುಖ ಅಂದಗೆಡತೊಡಗಿತು, ಇದರ ಜೊತೆಯೇ ಮಾಸಿಕ ಋತುಚಕ್ರದಲ್ಲಿ ವ್ಯತ್ಯಯವುಂಟಾಯಿತು, ದೇಹದ ತೂಕ ಹೆಚ್ಚಾಯಿತು, ಮುಖದ  ಗಲ್ಲ, ಗದ್ದ ಇತರೆಡೆ ಪುರುಷರ ತರಹ ಕೂದಲು ಬೆಳೆಯಲು ಶುರುವಾಯಿತು, ಅವಳು ವಾರಕ್ಕೊಮ್ಮೆ ಥ್ರೆಡ್ಡಿಂಗ್ ಮಾಡಿಸಬೇಕಾದ ಪರಿಸ್ಥಿತಿ ಉಂಟಾಯ್ತು. ಆಗಲೇ ಸುಮ ತನ್ನ ತಾಯಿಯೊಂದಿಗೆ ನನ್ನಲ್ಲಿಗೆ ಬಂದಳು, ಅವಳ ತೊಂದರೆಯ ಲಕ್ಷಣಗಳನ್ನು ಕ್ರೋಢೀಕರಿಸಿ ಯೋಚಿಸಿದಾಗ […]

Read More

ದೀಪಾವಳಿ ಮತ್ತು ವೈಜ್ಞಾನಿಕತೆ

 ರೂಢಿಯಲ್ಲಿ ಬಂದ ಆಚಾರ ಸಂಪ್ರದಾಯದ ಹಿಂದೆ ಒಂದಲ್ಲ ಒಂದು ವೈಜ್ಞಾನಿಕ ಕಾರಣ ಇದ್ದೇ ಇರುತ್ತದೆ. ಅದನ್ನು ಅರಿತು ಬಾಳುವುದರಲ್ಲಿ ನಮ್ಮ ಜಾಣತನ ಅಡಗಿದೆ. ಹಬ್ಬಗಳಲ್ಲಿ ಅನೇಕ ವಿಧಗಳಿವೆ. ನಾಡಹಬ್ಬ, ರಾಷ್ಟ್ರೀಯ ಹಬ್ಬ, ಧಾರ್ಮಿಕ ಹಬ್ಬ ಇತ್ಯಾದಿ. ಆದೆರ ಬೆಳಕಿನ ಹಬ್ಬವೆಂದು ಪ್ರಸಿದ್ಧವಾಗಿರುವ ದೀಪಾವಳಿ ಎಲ್ಲಾ ಧರ್ಮದವರು ಆಚರಿಸುವ ಒಂದು ಹಬ್ಬವಾಗಿದೆ. ಜೈನರು, ಸಿಖ್ಖರು, ಹಿಂದು, ಪಾರಸಿ ಎಲ್ಲ ಧರ್ಮದವರು ಆಚರಿಸುವ ಹಬ್ಬ ದೀಪಾವಳಿ. ದೀಪವು ಜ್ಞಾನದ ಸಂಕೇತ. ಮನಸ್ಸಿನ ಅಂಧಕಾರವನ್ನು, ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನದ ಕಡೆಗೆ ಮನಸ್ಸನ್ನು […]

Read More

ಆರೋಗ್ಯಯುತ ದೀಪಾವಳಿ ಆಚರಿಸಿ

ವಿಕೃತಿಯ ಮಾಡದಿರು, ಪ್ರಕೃತಿಯ ಕೊಡುಗೆಯಂತೆ ಇರು. ಇದ ಮರೆತರೆ ದೇಹ ಪ್ರಕೃತಿಯು ವಿಕೃತಿಯಾಗುವುದು. ಇದ ತಿಳಿಯದಿದ್ದರೆ ಭವಿಷ್ಯದಲ್ಲಿ ಪ್ರಕೃತಿಯೇ ಮಾರಕವಾಗುವುದು. ಪಟಾಕಿಯ ಸುಟ್ಟರೆ ಕಣ್ಣಿಗೆ ಅಂದ, ನೋಡಲು ಚಂದ. ಅದು ನಮ್ಮನ್ನು ಸುಟ್ಟರೆ ತಾಳಲಾರೆನೋ ಕಂದ, ಇದು ಯಾವ ಬಂಧ?? ಪಟಾಕಿಯು ಕೇವಲ ವಾತಾವರಣವನ್ನು ಮಾತ್ರ ಕಲುಷಿತ ಮಾಡದು; ಜೊತೆಯಲ್ಲಿ ಮಣ್ಣನ್ನೂ ಮಲಿನಗೊಳಿಸುತ್ತದೆ. ದೀಪಾವಳಿಯಲ್ಲಿ ಶೇ. 30ರಷ್ಟು ಹೆಚ್ಚಿಗೆ ಮಾಲಿನ್ಯ ಪಟಾಕಿಯನ್ನು ಸುಡುವುದರಿಂದ ಆಗುತ್ತದೆ. ಈ ಮಾಲಿನ್ಯದಿಂದ ನಮ್ಮ ಆರೋಗ್ಯವು ಹದಗೆಡುತ್ತ ಹೋಗುತ್ತದೆ. ನಮ್ಮ ಕೈಯಾರೇ ನಮ್ಮ […]

Read More

ದೀಪಾವಳಿ ಹಾಗೂ ಆರೋಗ್ಯ ರಕ್ಷಣೆ

ಕರ್ನಾಟಕದಲ್ಲಿ ಈ ವರ್ಷ ನವೆಂಬರ್ 5, 6 ಹಾಗೂ 7ರಂದು ದೀಪಾವಳಿ. ಮೊದಲ ದಿನ ನರಕಚತುರ್ದಶಿ, ನೀರು ತುಂಬುವ ಹಬ್ಬ. ಎರಡನೇ ದಿನ ಅಮಾವಾಸ್ಯೆಯ ಲಕ್ಷ್ಮಿ ಪೂಜೆ. ಮೂರನೇ ದಿನ ಬಲಿಪಾಡ್ಯಮಿ. ಈ ಹಬ್ಬದ ಸಂಕೇತವಾಗಿ ಮನಸ್ಸು-ದೇಹ ಹಾಗೂ ಆತ್ಮಗಳ ಶುದ್ಧೀಕರಣಕ್ಕಾಗಿ ನದಿಯಲ್ಲಿ ಸ್ನಾನ ಮಾಡುತ್ತಾರೆ. ಹಿರಿಯರು ಕಿರಿಯರನ್ನು ಆಶೀರ್ವದಿಸುತ್ತ, ಅವರ ತಲೆಗಳಿಗೆ ಎಣ್ಣೆ ಹಚ್ಚಿ, ಮರುಳು ಮಾಡುವ ವನಸ್ಪತಿಗಳ ನೀರಿನಿಂದ ಅವರಿಗೆ ಎಣ್ಣೆ ಸ್ನಾನ ಮಾಡಿಸುತ್ತಾರೆ. ಈಗಿನ ಶಾಂಪೂ-ಸಾಬೂನು ಪ್ರಪಂಚದಲ್ಲಿ, ಕಡಲೇ ಹಿಟ್ಟು-ಸೀಗೆಕಾಯಿ ಪುಡಿ-ಚುಚ್ಚಲಪುಡಿಗಳ ಅಭ್ಯಂಜನ […]

Read More

ಆಯುರ್ವೇದದ ದೃಷ್ಟಿಯಿಂದ ದೀಪಾವಳಿ

ಧಾರ್ಮಿಕ, ಸಾಮಾಜಿಕ ಆಚರಣೆಗೂ ಮೀರಿ ಆರೋಗ್ಯದ ದೃಷ್ಟಿಯಿಂದ ದೀಪಾವಳಿ ಹಬ್ಬ ಮಹತ್ವದ್ದಾಗಿದೆ.ದೀಪಾವಳಿಯ ಎಲ್ಲಾ ಆಚರಣೆ, ಸಂಪ್ರದಾಯಗಳು ವಾತ ದೋಷವನ್ನು ಶಮನ ಮಾಡಿ, ದೇಹದಲ್ಲಿನ ವೈಪರೀತ್ಯಗಳನ್ನು ಸಮತೋಲನ ಮಾಡುವ ನಿಟ್ಟಿನಲ್ಲಿ ಅಳವಡಿಸಲಾಗಿದೆ. ದೀಪಾವಳಿ ಭಾರತದಲ್ಲಿ ಆಚರಿಸುವ ಬಹಳ ಪ್ರಮುಖ ಹಬ್ಬ. ದೀಪಾವಳಿ ಎಂದರೆ “ದೀಪಗಳ ಸಾಲು” ಎಂದರ್ಥ. ಆದ್ದರಿಂದಲೇ ದೀಪಾವಳಿಯನ್ನು ಬೆಳಕಿನ ಹಬ್ಬ ಎನ್ನಲಾಗುವುದು. ಅಲ್ಲದೆ ದೀಪಾವಳಿ ಎಂದರೆ ಆಂತರಿಕ ಬೆಳಕನ್ನು ಅಂದರೆ ಜ್ನಾನದ ಬೆಳಕನ್ನು ಜಾಗೃತಗೊಳಿಸುವುದು.ದೀಪಾವಳಿಯನ್ನು ರಾಮ ರಾವಣನನ್ನು ಸಂಹರಿಸಿ ಅಯೋಧ್ಯೆಯನ್ನು ತಲುಪಿದ ಸಂತಸದ ಆಚರಣೆ ಎಂದು, […]

Read More

Back To Top