ಯೋಗದಿಂದ ಆರೋಗ್ಯ – ಥೈರಾಯ್ಡ್ ಸಮಸ್ಯೆಯಿಂದ ಹೊರಬರಲು ಪ್ರಾಣಾಯಾಮಗಳು.

ಯೋಗದಿಂದ ಆರೋಗ್ಯ. ಹೈಪೋಥೈರಾಯ್ಡ್ ಬಹು ಜನರನ್ನು ಕಾಡುವಂತಹ ಸಮಸ್ಯೆ. ಥೈರಾಯ್ಡ್ ಸಮಸ್ಯೆಯಿಂದ ಹೊರಬರಲು ಪ್ರಾಣಾಯಾಮಗಳು, ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಈ ಸಮಸ್ಯೆಯಿಂದ ಮುಕ್ತಗೊಳ್ಳಬಹುದು. 

ಯೋಗದಿಂದ ಆರೋಗ್ಯ - ಥೈರಾಯ್ಡ್ ಸಮಸ್ಯೆಯಿಂದ ಹೊರಬರಲು ಪ್ರಾಣಾಯಾಮಗಳು.

ಈ ಥೈರಾಯ್ಡ್ ಸಮಸ್ಯೆ ನಮ್ಮ ದೇಹದ ಮೆಟಬಾಲಿಸಮ್ (ಚಯಾಪಚಯ ಕ್ರಿಯೆ) ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಥೈರಾಯ್ಡ್‍ನಲ್ಲಿ ಎರಡು ವಿಧ. ಹೈಪರ್‍ಥೈರಾಯ್ಡ್ ಹಾಗೂ ಹೈಪೋಥೈರಾಯ್ಡ್. ಈ ಹೈಪೋಥೈರಾಯ್ಡ್ ಬಹು ಜನರನ್ನು ಕಾಡುವಂತಹ ಸಮಸ್ಯೆ. ಥೈರಾಯ್ಡ್ ಗ್ಲಾಂಡ್ ಎನ್ನುವುದು ನಮ್ಮ ಗಂಟಲಿನಲ್ಲಿರುವಂತಹ ಚಿಟ್ಟೆಯಾಕಾರದ ಒಂದು ಗ್ರಂಥಿ. ಈ ಗ್ರಂಥಿಯು ಥೈರಾಕ್ಸಿನ್ ಎನ್ನುವ ಒಂದು ಹಾರ್ಮೋನ್‍ನ್ನು ರಿಲೀಸ್ ಮಾಡುತ್ತಾ ಹೋಗುತ್ತದೆ.

ಈ ಥೈರಾಕ್ಸಿನ್ ಹಾರ್ಮೋನು ನಮ್ಮ ಚಯಾಪಚಯ ಕ್ರಿಯೆಯನ್ನು ನೋಡಿಕೊಳ್ಳುತ್ತಿರುತ್ತದೆ. ಹೈಪೋಥೈರಾಯ್ಡ್ ಸಮಸ್ಯೆ ಇದ್ದವರಿಗೆ ಪಚನಕ್ರಿಯೆ ಚೆನ್ನಾಗಿ ನಡೆಯುವುದಿಲ್ಲ. ಆಗ ಇದ್ದಕ್ಕಿದ್ದ ಹಾಗೆ ದಪ್ಪ ಆಗುವಂತಹುದು, ಮೈಭಾರ ಆಗುವಂತಹುದು ಹಾಗೂ ಯಾವುದೇ ಕೆಲಸ ಮಾಡಲು ಮನಸ್ಸು ಇರದಂತೆ ಆಗುವುದು, ಕ್ರಿಯಾಶೀಲತೆ ಹೊರಟುಹೋಗುತ್ತದೆ. ಈ ಸಮಸ್ಯೆ ತುಂಬಾ ಹೆಚ್ಚಾದರೆ, ಡಿಪ್ರೆಷನ್‍ಗೆ ಕೂಡ ಹೋಗಬಹುದು.

Also Read: THE RHYTHM OF YOGA- CONNECTING THE BODY, MIND AND SOUL

ಪ್ರಾಣಾಯಾಮ  ಅಳವಡಿಸಿಕೊಂಡರೆ, ಸಮಸ್ಯೆಯಿಂದ ಮುಕ್ತಗೊಳ್ಳಬಹುದು:

ಹೈಪರ್‍ಥೈರಾಯ್ಡ್ ಸಮಸ್ಯೆ ಇದ್ದವರಿಗೆ ತುಂಬಾ ಹಸಿವಾಗುತ್ತದೆ. ಎಷ್ಟು ತಿಂದರೂ ಸಾಕಾಗುತ್ತಿಲ್ಲವೆಂದು ಅನಿಸುತ್ತದೆ. ಮತ್ತೆ ಗೊತ್ತಿಲ್ಲದಂತೆ ತೂಕ ಕಳೆದುಕೊಳ್ಳುತ್ತಿರುತ್ತಾರೆ. ಮತ್ತು ಟೆನ್ಷನ್, ಆತಂಕ ಹೆಚ್ಚಾಗುತ್ತಿರುತ್ತದೆ. ಮುಖ್ಯವಾಗಿ ಈ ಥೈರಾಯ್ಡ್ ಎನ್ನುವ ಸಮಸ್ಯೆ ಇಡೀ ದೇಹದ ವ್ಯವಸ್ಥೆಯನ್ನೇ ಅವ್ಯವಸ್ಥಿತಗೊಳಿಸುತ್ತದೆ. ಈ ಥೈರಾಯ್ಡ್ ಸಮಸ್ಯೆಯಿಂದ ಹೊರಬರಲು  ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಈ ಸಮಸ್ಯೆಯಿಂದ ಮುಕ್ತಗೊಳ್ಳಬಹುದು.

ಈ ಥೈರಾಯ್ಡ್ ಸಮಸ್ಯೆಯನ್ನು ನಿಯಂತ್ರಿಸಲು ಹಾಗೂ ಥೈರಾಯ್ಡ್ ಗ್ರಂಥಿಯನ್ನು ಆರೋಗ್ಯಳಿಸಲು ಕೆಲವು ಪ್ರಾಣಾಯಾಮಗಳು ಸಹಕಾರಿ. ಅದರಲ್ಲಿ ಬಹಳ ಮುಖ್ಯವಾಗಿ ಕಪಾಲಭಾತಿ ಪ್ರಾಣಾಯಾಮ. ಈ ಪ್ರಾಣಾಯಾಮ ಮಾಡಲು ಮೊದಲು ಸುಖಾಸನ, ಪದ್ಮಾಸನ ಅಥವಾ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು. ವಜ್ರಾಸನ ಬಹಳ ಪರಿಣಾಮಕಾರಿ ಹಾಗೂ ಸಹಕಾರಿ. ಪ್ರಾಣಾಯಾಮ ಮಾಡುವ ಮೊದಲು ವಜ್ರಾಸನದಲ್ಲಿ ಕುಳಿತು ಸಹಜವಾಗಿ 2 ಬಾರಿ ಉಸಿರಾಟವನ್ನು ಮಾಡಬೇಕು. ಕಪಾಲಭಾತಿ ಮಾಡುವಾಗ ನಾವು ಎರಡು ಕಡೆ ನಮ್ಮ ಗಮನವನ್ನು ಕೇಂದ್ರಿಕರಿಸಬೇಕು. ಒಂದು ಹೊಟ್ಟೆಯ ಭಾಗ ಹಾಗೂ ಎರಡು ನಮ್ಮ ಮೂಗಿನ ತುದಿ.

ಯೋಗದಿಂದ ಆರೋಗ್ಯ - ಥೈರಾಯ್ಡ್ ಸಮಸ್ಯೆಯಿಂದ ಹೊರಬರಲು ಪ್ರಾಣಾಯಾಮಗಳು.ಮೂಗಿನ ತುದಿಯಲ್ಲಿ ಜೋರಾಗಿ ಉಸಿರನ್ನು ಹೊರಹಾಕುತ್ತಾ ಇರಬೇಕು. ಅಂದರೆ ಒಂದು ಸೆಕೆಂಡಿಗೆ ಒಂದು ಬಾರಿಯಂತೆ ಮೂಗಿನಿಂದ ಉಸಿರನ್ನು ಜೋರಾಗಿ ಹೊರಹಾಕುತ್ತಾ ಹೋಗಬೇಕು. ಕಪಾಲಭಾತಿ ಪ್ರಾಣಾಯಾಮ ನಮ್ಮ ದೇಹಕ್ಕೆ ಬಹಳ ಪರಿಣಾಮಕಾರಿ. ಈ ಪ್ರಾಣಾಯಾಮದಿಂದ ನಮ್ಮ ಉಸಿರಾಟದ ವ್ಯವಸ್ಥೆ ಸ್ವಚ್ಛವಾಗಿ ಆಗುತ್ತದೆ. ನಮ್ಮ ಮೂಗು ಶುಚಿಯಾಗಿ ಸ್ವಚ್ಛವಾಗಿರುತ್ತದೆ. ಗಂಟಲಿನಲ್ಲಿರುವಂತಹ ಥೈರಾಯ್ಡ್ ಗ್ರಂಥಿಗೆ ಈ ಕಪಾಲಭಾತಿ ಪ್ರಚೋದನೆ ಕೊಡುವ ಮೂಲಕ ಥೈರಾಯ್ಡ್ ಸಮಸ್ಯೆ ದೂರವಾಗುತ್ತದೆ. ಕಪಾಲಭಾತಿಯನ್ನು ದಿನಕ್ಕೆ 3 ರಿಂದ 5 ಸುತ್ತು, 1 ರಿಂದ 1.50ನಿಮಿಷ ಅಭ್ಯಾಸ ಮಾಡುತ್ತಾ ಹೋಗಬಹುದು.

ಈ ಥೈರಾಯ್ಡ್ ಸಮಸ್ಯೆಗೆ ಕಪಾಲಭಾತಿಯಂತೆ ಉಜ್ಜಾಯಿ ಪ್ರಾಣಾಯಾಮ ಸಹಕಾರಿ. ಉಜ್ಜಾಯಿ ಪ್ರಾಣಾಯಾಮ ಮಾಡುವುದರಿಂದ ನಮ್ಮ ಗಂಟಲಿನಲ್ಲಿರುವಂತಹ ಥೈರಾಯ್ಡ್ ಗ್ರಂಥಿಗಳಿಗೆ ಹಾಗೂ ಧ್ವನಿಪೆಟ್ಟಿಗೆಗೆ ಪ್ರಚೋದನೆ ಸಿಗುತ್ತದೆ. ಇದರಿಂದ ಥೈರಾಯ್ಡ್ ಗ್ರಂಥಿಗಳು ಆರೋಗ್ಯವಾಗಿರುತ್ತದೆ. ಮೊದಲು ಸುಖಾಸನ ಅಥವಾ ವಜ್ರಾಸನದಲ್ಲಿ ಕುಳಿತುಕೊಂಡು ಗಾಳಿಯನ್ನು ಒಳಗೆ ತೆಗೆದುಕೊಂಡು ನಂತರ ಹೊರಹಾಕಿ, ಗಂಟಲಿನಲ್ಲಿ ಶಬ್ದ ಮಾಡುತ್ತಾ ಗಾಳಿಯನ್ನು ನಿಧಾನವಾಗಿ ಒಳಗೆ ತೆಗೆದುಕೊಂಡು, ಅಂತರಿಕವಾಗಿ ಕೆಲವು ಕ್ಷಣ ಉಸಿರನ್ನು ಹಿಡಿದಿಟ್ಟು, ಬಲಮೂಗನ್ನು ಮುಚ್ಚಿ ಎಡಮೂಗಿನಿಂದ ಉಸಿರನ್ನು ಹೊರಹಾಕಬೇಕು. ಇದೇ ತರ 30ಸೆಕೆಂಡಿನಿಂದ 1 ನಿಮಿಷದವರೆಗೆ 5 ರಿಂದ 6ಸುತ್ತು ಮಾಡಬೇಕು.

ಪ್ರಾಣಾಯಾಮಗಳನ್ನು ಮಾಡುವಾಗ ಹಸಿರು ಗಿಡಗಳ ಮಧ್ಯದಲ್ಲಿ ಕುಳಿತು ಅಭ್ಯಾಸ ಮಾಡಿದರೆ, ಸಾಕಷ್ಟು ಆಮ್ಲಜನಕ ದೊರೆಯುವುದರಿಂದ ಸಂಪೂರ್ಣ ಆರೋಗ್ಯ ನಮ್ಮದಾಗುತ್ತದೆ. ಕಪಾಲಭಾತಿ ಹಾಗೂ ಉಜ್ಜಾಯಿ ಪ್ರಾಣಾಯಾಮವನ್ನು ದಿನವೂ ಅಭ್ಯಾಸ ಮಾಡಿ ಥೈರಾಯ್ಡ್ ಸಮಸ್ಯೆಯಿಂದ ಹೊರಬನ್ನಿ.

Also Read: ರೋಗಗಳ ನಿಯಂತ್ರಣ  ಯೋಗಾಸನಗಳಿಂದ ಹೇಗೆ ಸಾಧ್ಯ ?

yoga-srimati-Ramesh. ಬಿ.ವಿ. ಶ್ರೀಮತಿ ರಮೇಶ್ ಶ್ರೀ ಯೋಗ ಮತ್ತು ಸಾಂಸ್ಕøತಿಕ ಅಕಾಡೆಮಿ(ರಿ) ಸಂಸ್ಥಾಪಕಿ, ಕಾರ್ಯದರ್ಶಿ ಮತ್ತು ಯೋಗ ಶಿಕ್ಷಕಿ Mob: 98803 86687

ಬಿ.ವಿ. ಶ್ರೀಮತಿ ರಮೇಶ್
ಶ್ರೀ ಯೋಗ ಮತ್ತು ಸಾಂಸ್ಕøತಿಕ ಅಕಾಡೆಮಿ(ರಿ)
ಸಂಸ್ಥಾಪಕಿ, ಕಾರ್ಯದರ್ಶಿ ಮತ್ತು ಯೋಗ ಶಿಕ್ಷಕಿ
Mob: 98803 86687

Email : sri.ycaofficial@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!