Health Vision

ಡಾ. ನಿರಂತರ ಗಣೇಶ್: ಆರೋಗ್ಯ ರಕ್ಷಣೆ ಸಮಾಜಸೇವೆಯ ಸಾಕಾರಮೂರ್ತಿ

ಡಾ. ನಿರಂತರ ಗಣೇಶ್ ಖ್ಯಾತ ವೈದ್ಯರಾಗಿ ಮತ್ತು ಉತ್ತಮ ಸಮಾಜಸೇವಕರಾಗಿ ಚಿರಪರಿಚಿತರು. ವೈದ್ಯೋ ನಾರಾಯಣೋ ಹರಿ: ಎಂಬಂತೆ ಪವಿತ್ರ ವೈದ್ಯಕೀಯ ವೃತ್ತಿಯ ಜೊತೆ ಜೊತೆಗೆ ಸಮಾಜಸೇವೆಯಲ್ಲೂ ಸಕ್ರಿಯರಾಗಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿರುವವರು ಸಮಾಜಸೇವೆಯಲ್ಲಿ ತೊಡಗುವುದು ವಿರಳ. ಆದರೆ, ಡಾ. ನಿರಂತರ ಗಣೇಶ್ ಈ ಎರಡೂ ಕ್ಷೇತ್ರಗಳಲ್ಲಿ ಸಮತೋಲನ ನಡಿಗೆ ಮೂಲಕ ನ್ಯಾಯ ಒದಗಿಸಿ ಹೆಸರುವಾಸಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಹಾಗೂ ಮುತ್ಸದ್ಧಿ ಎಸ್.ಎಂ.ಕೃಷ್ಣ ಅವರ ಸಹೋದರಿಯ ಮೊಮ್ಮಗರಾದ ಡಾ. ಗಣೇಶ್ ಅವರಿಗೆ ಸಮಾಜಸೇವೆ ರಕ್ತಗತ ಬಳುವಳಿ. […]

Read More

ನವರಾತ್ರಿಯಲ್ಲಿ ಮಾಡುವ ಉಪವಾಸದ ಮಹತ್ವ

ನವರಾತ್ರಿ ಬಹಳ ಸಂಭ್ರಮ ಸಡಗರದಿಂದ ಒಂಬತ್ತು ರಾತ್ರಿಗಳು ಆಚರಿಸಲ್ಪಡುವ ನಾಡ ಹಬ್ಬ. ಭಾರತದ ಹಲವು ಭಾಗಗಳಲ್ಲಿ ಹಲವಾರು ರೀತಿಯಲ್ಲಿ ಧಾರ್ಮಿಕ ಮತ್ತು ಸಾಂಸಕೃತಿಕ ಕಾರ್ಯಕ್ರಮಗಳನ್ನು ಇದರ ಅಂಗವಾಗಿ ಆಚರಿಸಲಾಗುವುದು. ನವರಾತ್ರಿಯಲ್ಲಿ ಶಕ್ತಿ ದೇವತೆಯನ್ನು ಆರಾಧಿಸಲಾಗುವುದು. ವಿಶೇಷವಾಗಿ ಈ ಒಂಬತ್ತು ದಿನಗಳಲ್ಲಿ ಉಪವಾಸದೊಂದಿಗೆ ದೇವಿಯ ಆರಾಧನೆಯನ್ನು ಭಕ್ತಿ ಪೂರ್ವಕವಾಗಿ ಮಾಡಲಾಗುವುದು. ಉಪವಾಸವನ್ನು ಹಬ್ಬದ ಪ್ರಯುಕ್ತ ಧಾರ್ಮಿಕವಾಗಿ ಮಾಡಿದರೂ ಸಹ, ಇದರಿಂದ ಹಲವಾರು ಆರೋಗ್ಯದ ಲಾಭಗಳಿವೆ. ಶರೀರ, ಮನಸ್ಸು ಮತ್ತು ಆತ್ಮದ ಮೇಲೆ ಇದರ ವಿಶೇಷ ಪ್ರಭಾವವಿದೆ. ಉಪವಾಸ ಎಂದರೇನು? […]

Read More

ಬೇವು – ಉಪಯುಕ್ತ ಔಷಧಿ

ಆಯುರ್ವೇದದಲ್ಲಿ ಬೇವು ಉಪಯುಕ್ತ ಔಷಧಿಯಾಗಿದೆ. ಯುಗಾದಿ ಹಬ್ಬದಲ್ಲಿ ಬೇವಿನ ಮರಕ್ಕೆ ಮಹತ್ವ ಇದೆ. ಈ ದಿನ ಬೇವಿನ ಎಲೆಗಳನ್ನು ನೀರಿನಲ್ಲಿ ಹಾಕಿ ಜಳಕ ಮಾಡುವುದು, ಬೇವು ಬೆಲ್ಲ ಸೇವನೆ ರೂಢಿಯಲ್ಲಿದೆ. ಹೀಗೆ ಮಾಡುವದರಿಂದ ದೇಹ ಶುದ್ಧಿಯಾಗುತ್ತದೆ ಮತ್ತು ಆ ಖುತವಿನಲ್ಲಿ ಬರಬಹುದಾದ ಚರ್ಮ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಬೇವಿಗೆ ಆಯುರ್ವೇದದಲ್ಲಿ ನಿಂಬ ಎಂದು ಕರೆಯುತ್ತಾರೆ. ಇದನ್ನು ಅರಿಷ್ಟ, ಹಿಂಗುನಿರ್ಯಾಸ, ಪಿಚುಮರ್ದ, ಸುಭರ್ದ ಎಂಬ ಹಲವು ಹೆಸರುಗಳಿಂದ ಕರೆಯುತ್ತಾರೆ. ಇದು ದೊಡ್ಡ ಮರವಾಗಿದ್ದು ಸರಾಸರಿ 18ಅಡಿ ಎತ್ತರದ, […]

Read More

ಆರೋಗ್ಯ-ಆಹಾರ-ಆಯಸ್ಸು

ಪ್ರಕೃತಿ ಚಿಕಿತ್ಸೆ ಮಾನವನು ವಿಕಾಸವಾದಂತೆ ಆತನ ಬುದ್ಧಿಮತ್ತೆಯೂ ಸಹ ಬೆಳವಣಿಗೆ ಹೊಂದಿತು. ಇತಿಹಾಸ, ಸಂಶೋಧನೆಗಳು, ಆವಿಷ್ಕಾರಗಳು ಮಾನವನ ಬುದ್ಧಿ-ತಂತ್ರಗಾರಿಕೆಯೊಂದಿಗೆ ಬೆರೆತು ನಾವು ಅತ್ಯುನ್ನತ ಸ್ಥಾನಕ್ಕೇರಲು ನೆರವಾದವು. ತಪ್ಪು ವಿಚಾರಗಳನ್ನು ಸ್ಪಷ್ಟಪಡಿಸಿ, ಸರಿ ವ್ಯವಸ್ಥೆಗಳನ್ನು ದೃಢಪಡಿಸುವ ಸಾಮಥ್ರ್ಯ ಇದರದ್ದು. ಅತ್ಯಾಧುನಿಕ ವೈದ್ಯಕೀಯ ಪದ್ಧತಿ, ಪ್ರಮಾಣಗಳು ಜೀವನಕ್ಕೆ ಆಧಾರವಾದರೂ ಸಹ ಸಹಾಯಕವಾದಂತಹ ಜೀವನಪದ್ಧತಿ, ವ್ಯವಸ್ಥೆಗಳಿಂದ ಮಾನವನ ಆಯಸ್ಸು ಪೂರ್ಣವಾಗದಿರುವುದು ವಿಷಾದನೀಯ ಸಂಗತಿ. ನಮ್ಮ ಪೂರ್ವಿಕರು ನೂರು ವರ್ಷ ಸುಖವಾಗಿ, ಆರೋಗ್ಯ ಪೂರ್ಣವಾಗಿ ಜೀವಿಸುತ್ತಿದ್ದರು. ಆದರೆ ನಾವು ಅಲ್ಪಾಯುಷ್ಯದೊಂದಿಗೆ ತೃಪ್ತಿ ಪಡಬೇಕಾದ […]

Read More

ನೋನಿ ಬಗ್ಗೆ ಇನ್ನಷ್ಟು

 ನೋನಿಯಲ್ಲಿ ಕೇವಲ ದೇವಕಣ ಝೆರೋನಿನ್ ಮಾತ್ರ ಇಲ್ಲ. ಖನಿಜಾಂಶಗಳು, ಅಮೈನೋ ಆಮ್ಲಗಳು, ಆಂಟಿ ಆಕ್ಸಿಡೆಂಟ್‍ಗಳು, ಆಲ್ಕಲೈಡ್, ಫ್ಲೇವನಾಯ್ಡ್, ಫ್ಯಾಟಿ ಆಸಿಡ್ಸ್, ಕಾರ್ಬೋಹೈಡ್ರೇಟ್, ಸ್ಕೋಪೋಲಿಟಿನ್, ಬೀಟಾಸಿಸ್ಟಲ್ ಇತ್ಯಾದಿ ಪೋಷಕಾಂಶಗಳು ಧಾರಾಳವಾಗಿವೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ, ವಿಷಕಾರಕ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ, ಜೀವ ರಾಸಾಯನಿಕಗಳಿವೆ ಎಂದು ನೋನಿ ಸೇವನೆ ಸಂಬಂಧ ಡಾ|| ನೀಲ್ ಸಾಲೋಮನ್ ಕೈಗೊಂಡ ಸಂಶೋಧನೆಯಲ್ಲಿ ಸಾಬೀತಾಗಿದೆ. ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ, ನೋವು-ಬಾವುಗಳನ್ನು ಕಡಿಮೆ ಮಾಡಬಲ್ಲಲ ಹತ್ತು ಹಲವಾರು ಸಸ್ಯರಸಾಯನ ಘಟಕಗಳನ ಭಂಡಾರವನವನ್ನೇ ನೋನಿ ಹೊಂದಿದೆ. ನಮ್ಮ […]

Read More

ಮೆನೊಪಾಸ್-ಒಂದು ರೋಗವಲ್ಲ, ಸ್ವಾಭಾವಿಕ ಕ್ರಿಯೆ

ಮೆನೊಪಾಸ್ ಅಥವಾ ಮುಟ್ಟು ಕೊನೆಗೊಳ್ಳುವಿಕೆಯು ಮಹಿಳೆಯರ ಜೀವನದ ನೈಸರ್ಗಿಕ ಕ್ರಿಯೆ. ಇದು ಕಾಯಿಲೆಯಲ್ಲ. ಹೆಂಗಸರಿಗೆ ವಯಸ್ಸಾದಂತೆಲ್ಲ ಪುನರ್ ಉತ್ಪತ್ತಿ ಚಕ್ರ ಮತ್ತು ವಿಧಾನ ನಿರೀಕ್ಷೆಯಂತೆ ನಿಧಾನವಾಗುತ್ತಾ ಅಂತಿಮವಾಗಿ ಮುಟ್ಟು ಕೊನೆಗೊಳ್ಳುತ್ತದೆ. ಇದು ಸಾಮಾನ್ಯ ಸಂಗತಿ. ಅನಾರೋಗ್ಯದ ಲಕ್ಷಣವಲ್ಲ. ಹಾರ್ಮೋನುಗಳ ಅಸಮತೋಲನ ಅಥವಾ ದೋಷಪೂರಿತ ಆಹಾರ ಸೇವನೆ ಅಭ್ಯಾಸಗಳು, ಒತ್ತಡ, ಸ್ಥೂಲಕಾಯ ಮತ್ತು ಇತರ ಅಂಶಗಳಿಂದ ದೇಹಕ್ಕೆ ಹಾನಿಯಾಗುವಿಕೆಯ ಸೂಚನೆಗಳು ಮೆನೊಪಾಸ್‍ನ ಲಕ್ಷಣಗಳಾಗಿವೆ. ಮೆನೊಪಾಸ್‍ನನ್ನು ರಜೋ ನಿವೃತ್ತಿ ಎಂದು ಕರೆಯುತ್ತಾರೆ. ಮುಟ್ಟು ತೀರುವಿಕೆ ಅಥವಾ ಮಹಿಳೆಯರ ಮುಟ್ಟು ಯಾ […]

Read More

ಹೃದಯಾಘಾತವಾದಾಗ ಕೈಗೊಳ್ಳಬೇಕಾದ ಐದು ಕ್ರಮಗಳು

 ನಿಮ್ಮ ಕುಟುಂಬದ ಸದಸ್ಯರೋ, ಹತ್ತಿರದ ಸಂಬಂಧಿಗಳೋ ಅಥವಾ ಆಪ್ತರೇಷ್ಟರೋ ಹೃದಯಾಘಾತಕ್ಕ ಒಳಗಾಗಿದ್ದಾರೆಯೇ? ಹಾಗಾದರೆ ಆತಂಕ ಬೇಡ. ಶುದ್ಧ ರಕ್ತನಾಳಲ್ಲಿ ಹೆಪ್ಪುಗಟ್ಟುವಿಕೆಯಿಂದ ಹೃದಯಕ್ಕೆ ಸಮರ್ಪಕವಾಗಿ ರಕ್ತ ಪೂರೈಕೆಯ ಸಂಚಾರವಿಲ್ಲದ ಕಾರಣದಿಂದ ಹೃದಯಘಾತ ಅಥವಾ ಹಾರ್ಟ್ ಅಟ್ಯಾಕ್ ಸಂಭವಿಸುತ್ತದೆ. ತ್ವರಿತವಾಗಿ ರಕ್ತಚಲನೆಯನ್ನು ಸರಿಪಡಿಸದಿದ್ದರೆ, ಆಮ್ಲಜನಕ ಮತ್ತು ಪೋಷಕಾಂಶದ ಕೊರತೆಯಿಂದಾಗಿ ಹೃದಯಚ ಮಾಂಸಖಂಡಗಳಿಗೆ ಹಾನಿಯಾಗಿ ಮರಣ ಸಂಭವಿಸಬಹುದು. ಹೃದಯಾಘಾತ ಉಂಟಾದಾಗ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಬೇಕು. ಹೃದಯಾಘಾತ ಸಂಭವಿಸಿದಾಗ ಉಂಟಾಗುವ ಸ್ಥಿತಿಯ ಮೊದಲ ತಾಸನ್ನು ಗೋಲ್ಡನ್ ಹವರ್ ಎಂದು ಕರೆಯಲಾಗುತ್ತದೆ. ಇದು […]

Read More

ಅಕ್ಟೋಬರ್ ತಿಂಗಳ ಆರೋಗ್ಯ ಚಿಂತನೆ !?

 ಬಾನುಲಿ ಹಾಗೂ ರಂಗಭೂಮಿಗಳ ಒಬ್ಬ ನಟ, ನಿರ್ದೇಶಕ, ನಾಟಕಕಾರನಾಗಿ, ಜೀವನ, ಸಾಹಿತ್ಯ ಹಾಗೂ ಕಲೆಗಳಲ್ಲಿ, ನಾನು ನವರಸಗಳನ್ನು ಆರಾಧಿಸುತ್ತೇನೆ. ನನ್ನ ಸತತ ಅನುಭವಗಳು, ಪ್ರಭಾವಗಳು, ಎಲ್ಲೆಡೆ ತೆರೆದುಕೊಂಡಾಗ ಸಿಕ್ಕ ದರ್ಶನದಿಂದ, ಸುಖ, ಸಂತೋಷ ಹಾಗೂ ಶಾಂತಿಗಳ ಅಮೃತ ಸಿಗಬೇಕಾದರೆ, ಮುಖದ ಮೇಲೆ ಮುಗುಳ್ನಗೆ, ಜೀವನದಲ್ಲಿ ಹಾಸ್ಯ ಹಾಗೂ ಆರೋಗ್ಯ ಇರಲೇಬೇಕೆಂಬ ನಿರ್ಧಾರ ತಳೆದಿದ್ದೇನೆ. ಈ ಹಿನ್ನೆಲೆಯಲ್ಲಿ ಎಲ್ಲಕ್ಕೂ ಮೂಲವಾದ ಆರೋಗ್ಯವನ್ನು ಹತ್ತನೇ ರಸವನ್ನಾಗಿ ಅಳವಡಿಸಿ, ಆರಾಧಿಸಿ, ಅನುಷ್ಠಾನಗೊಳಿಸಬೇಕು ಎನ್ನುತ್ತೇನೆ. ಈ ಹಿನ್ನೆಲೆಯಲ್ಲಿ ವಿವಿಧ ದಿಕ್ಕುಗಳಲ್ಲಿ ಹುಡುಕಿದಾಗ, ಅಕ್ಟೋಬರ್ […]

Read More

Back To Top