Call Us / WhatsApp  :  +91 8197554373      Email Id  :  mediaicon@ymail.com

Health Vision

ಆರೋಗ್ಯ - ಆಹಾರ - ಆಯುರ್ವೇದ

Health Vision

We Care for Your Health

ವೈದ್ಯಲೋಕ ನಿಯತಕಾಲಿಕೆಗಳು

ಚಂದಾದಾರರಾಗಿ

Health Vision

SUBSCRIBE

Magazine

Click Here

ಜೂ.25ಕ್ಕೆ ತೊನ್ನು ಚಿಕಿತ್ಸಾ ಶಿಬಿರ

ಬೆಂಗಳೂರು: ವಿಶ್ವ ವಿಟಿಲಿಗೊ (ತೊನ್ನು ರೋಗ) ದಿನಾಚರಣೆ ಪ್ರಯುಕ್ತ ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್‍ಸ್ಟಿಟ್ಯೂಟ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆ ಜೂ. 25ರಂದು ಚರ್ಮ ವ್ಯಾಧಿಗಳಾದ ಬಿಳಿಮಚ್ಚೆ, ತೊನ್ನು ಹಾಗೂ ಲ್ಯೂಕೊಡೆರ್ಮ ರೋಗಗಳಿಗೆ ಒಂದು ದಿನದ ವಿಶೇಷ ತಪಾಸಣಾ, ಸಲಹಾ ಹಾಗೂ ಚಿಕಿತ್ಸಾ ಶಿಬಿರ ಆಯೋಜಿಸಿದೆ. ಆಸಕ್ತರು ನೋಂದಣಿ ಹಾಗೂ ವಿವರಕ್ಕೆ ದೂ. 080-22718025 ಸಂಪರ್ಕಿಸಬಹುದು

Read More

ಯೋಗ ಜೀವನ ಅವಿಭಾಜ್ಯ ಅಂಗವಾಗಲಿ – ದೇಲಂಪಾಡಿ

 ಮಂಗಳೂರು  : ಅಂತರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21 ಇದರ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕರಿಗೆ ಪೂರ್ವಭಾವಿ ಯೋಗ ತರಬೇತಿ ಶಿಬಿರ 3 ದಿನಗಳ ಕಾಲ ನಗರದ ಹಂಪನಕಟ್ಟೆಯ ಶರವು ಮಹಾಗಣಪತಿ ದೇವಸ್ಥನದ ಧ್ಯಾನ ಮಂದಿರದಲ್ಲಿ ದಿನಾಂಕ : 8, 9, 10ರಂದು ನಡೆಯಿತು. ಖ್ಯಾತ ಯೋಗಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಇದರ ಮಾರ್ಗದರ್ಶನದಲ್ಲಿ ಈ ತರಬೇತಿ ಶಿಬಿರ ನಡೆಯಿತು. ಯೋಗ ಮನುಷ್ಯನ ಆರೋಗ್ಯಕ್ಕೆ ಅತೀ ಅವಶ್ಯಕ. ದೈಹಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಯೋಗವನ್ನು ಪ್ರತಿಯೊಬ್ಬರು ದೈನಂದಿನ […]

Read More

ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟ: ಕೆ.ಆರ್. ಮಾರುಕಟ್ಟೆಯ ಅಂಗಡಿಗಳ ಮೇಲೆ ದಾಳಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಅಧಿಕಾರಿಗಳು ದಿನಾಂಕ: 05-06-2018 ರಂದು ಹಾಗೂ 06-06-2018 ರಂದು ನಗರದ ಕೃಷ್ಣರಾಜ ಮಾರುಕಟ್ಟೆಯ ಅಂಗಡಿಗಳ ಮೇಲೆ ದಾಳಿ ಮಾಡಿ, ಪ್ಲಾಸ್ಟಿಕ್ ಚೀಲ, ಚಮಚ, ಲೋಟ, ತಟ್ಟೆ ಮತ್ತು ಥರ್ಮಕೋಲ್ ಬಟ್ಟಲುಗಳನ್ನು ಒಳಗೊಂಡಂತೆ ಒಟ್ಟು 500 ಕೆ.ಜಿ. ಯಷ್ಟು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ನಿಯಮಾವಕಾಶದಂತೆ ಒಟ್ಟಾರೆ ರೂ. 21,000/-ಗಳ (ರೂಪಾಯಿ ಇಪ್ಪತ್ತೊಂದು ಸಾವಿರಗಳು […]

Read More

ಲಾಲ್‍ಬಾಗ್‍ನಲ್ಲಿ 8ರಿಂದ ಸಿರಿಧಾನ್ಯ ಮೇಳ

ಸಿರಿಧಾನ್ಯದಿಂದ ತಯಾರಿಸಿದ ತಿಂಡಿ ಸವಿಯಲು ಅವಕಾಶ ಜೂನ್ 8ರಿಂದ ಪ್ರತಿದಿನ ಬೆಳಗ್ಗೆ 11 ರಿಂದ ನಾನಾ ತರಬೇತಿ ಗ್ರಾಮೀಣ ಕುಟುಂಬ ಸಂಸ್ಥೆಯು ಜೂನ್ 8ರಿಂದ ಮೂರು ದಿನಗಳ ಕಾಲ ಲಾಲ್‍ಬಾಗ್‍ನಲ್ಲಿ ಸಿರಿಧಾನ್ಯ ಮೇಳ ಆಯೋಜಿಸಿದೆ. ಲಾಲ್‍ಬಾಗ್‍ನ ಡಾ. ಎಂ.ಹೆಚ್. ಮರಿಗೌಡ ಹಾಲ್‍ನಲ್ಲಿ ನಡೆಯುತ್ತಿರುವ 6ನೇ ಮೇಳ ಇದಾಗಿದೆ. ಒಟ್ಟಾರೆ ಮೇಳದಲ್ಲಿ ಸುಮಾರು 100 ಮಳಿಗೆಗಳನ್ನು ತೆರೆಯಲಿದ್ದು, ಸಗಟು ಖರೀದಿದಾರರಿಗೆ ನೇರವಾಗಿ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಗ್ರಾಮೀಣ ಕುಟುಂಬ ಸಂಸ್ಥಾಪಕ ಅಧ್ಯಕ್ಷರಾದ ಎಂ.ಹೆಚ್. ಶ್ರೀಧರಮೂರ್ತಿ ತಿಳಿಸಿದರು. […]

Read More

ಮಹಿಳೆಯರಿಗಾಗಿ ಜಾಗತಿಕ ಸೌಂದರ್ಯ ಬ್ರಾಂಡ್ – ಏವಾನ್‍ನಿಂದ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಅಭಿಯಾನ-2018ಕ್ಕೆ ಚಾಲನೆ

# ಪೇ ಅಟೆನ್ಷನ್(ಗಮನಹರಿಸಿ) ಅಭಿಯಾನ ಭಾರತದ 10 ನಗರಗಳಿಗೆ ತೆರಳಲಿದ್ದು ಸಮಯಕ್ಕೆ ಸರಿಯಾಗಿ ಮಹಿಳೆಯರಿಗೆ ನೆರವಾಗಲು ಮುಂದಾಗಿದೆ. ಬೆಂಗಳೂರು, ಮೇ 2018: – ಮಹಿಳೆಯರ ಸೌಂದರ್ಯ ಬ್ರಾಂಡ್ ಆದ ಏವಾನ್ ಇಂಡಿಯಾ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಹೆಚ್ಚಿಸಲು ಭಾರತದ ಎಲ್ಲೆಡೆ ನಡೆಸಲಿರುವ ತನ್ನ ಅಭಿಯಾನದ 2ನೇ ಹಂತವನ್ನು ಆರಂಭಿಸಿದೆ. ಏವಾನ್ ಸ್ತನ ಕ್ಯಾನ್ಸರ್ ಜಾಗೃತಿಯ ಮೂಲ ಉದ್ದೇಶಕ್ಕೆ ಕಳೆದ 25 ವರ್ಷಗಳಿಗೂ ಹೆಚ್ಚಿನ ಕಾಲದಿಂದ ಬೆಂಬಲ ನೀಡುತ್ತಿದೆ. ಇದಕ್ಕೆ ವಿಶ್ವವ್ಯಾಪಿಯಾಗಿ ಆರು ದಶಲಕ್ಷ ಸ್ವತಂತ್ರ ಏವಾನ್ […]

Read More

ಪಿಒಪಿ ಗಣೇಶ ವಿಗ್ರಹ ತಯಾರಿಸದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ

ರಾಜ್ಯದಲ್ಲಿ ಜಲಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪಿಒಪಿ(ಪ್ಲಾಸ್ಟರ್ ಆಫ್ ಪ್ಯಾರೀಸ್)ಯಿಂದ ಮಾಡುವ ವಿಗ್ರಹಗಳನ್ನು ಯಾವುದೇ ಜಲಮೂಲಗಳಿಗೆ ವಿಸರ್ಜನೆ ಮಾಡದಂತೆ ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿರುತ್ತದೆ. ರಾಜ್ಯದ ಮಾನ್ಯ ಉಚ್ಛ ನ್ಯಾಯಾಲಯವು ಸಹ ಮಂಡಳಿಯ ಅಧಿಸೂಚನೆಯನ್ನು ಕ್ರಮಬದ್ಧಗೊಳಿಸಿರುತ್ತದೆ. 2016-17, 2017-18ರ ಸಾಲಿನಲ್ಲಿ ಸ್ಥಳೀಯ ಸಂಸ್ಥೆಗಳು, ಬಿಬಿಎಂಪಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ನೆರವಿನಿಂದ ಸಾರ್ವಜನಿಕರಿಗೆ, ಪಿಓಪಿ ವಿಗ್ರಹ ತಯಾರಕರಿಗೆ, ವಿತರಕರಿಗೆ ಹಾಗೂ ಸಂಬಂಧಿಸಿದವರಿಗೆ ಸಾಕಷ್ಟು ಮುಂಚಿತವಾಗಿ ಜಾಗೃತಿ ಮೂಡಿಸಿದ್ದು, 2017-18ರ ಸಾಲಿನಲ್ಲಿ ಪಿ.ಒ.ಪಿ. ಗಣೇಶ […]

Read More

ಸಾಮೂಹಿಕ ಗೋಪೂಜೆ ಮತ್ತು ಪಂಚಗವ್ಯ ಸೇವನೆ

ಬೆಂಗಳೂರು: ಬೆಂಗಳೂರಿನ ಪ್ರಮುಖ ಆಯುರ್ವೇದ ಕೇಂದ್ರವಾಗಿ ಗಮನ ಸೆಳೆಯುತ್ತಿರುವ ತಕ್ಷಣ ಆಯುರ್ವೇದ ಆಸ್ಪತ್ರೆಯಲ್ಲಿ ಸಾಮೂಹಿಕ ಗೋ ಪೂಜೆ ಮತ್ತು ಪಂಚಗವ್ಯ ಸೇವನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೇ 7, ಸೋಮವಾರದಂದು ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಆಯುರ್ವೇದ ಚಿಕಿತ್ಸೆಯಲ್ಲಿ ನಾವು ನಿತ್ಯ ಗೋ ಉತ್ಪನ್ನಗಳನ್ನು (ಹಾಲು, ತುಪ್ಪ, ಬೆಣ್ಣೆ ಇತ್ಯಾದಿ) ಉಪಯೋಗಿಸುತ್ತೇವೆ. ಆದ್ದರಿಂದ ಗೋ ಮಾತೆಗೆ ಕೃತಜ್ಞತೆ ಸಲ್ಲಿಸಲು ಹಾಗೂ ಗೋ ಮಾತೆಯ ಆಶೀರ್ವಾದ ಪಡೆಯಲು ಸಾಮೂಹಿಕ ಗೋ ಪೂಜೆ ಏರ್ಪಡಿಸಲಾಯಿತು. ಜೊತೆಗೆ ಪಂಚಗವ್ಯ ಸೇವನೆ […]

Read More

ವೈದ್ಯರಿಂದ ಮತದಾನ ಜಾಗೃತಿ

ಬೆಂಗಳೂರು : ಮೇ 12, ಶನಿವಾರದಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ವೈದ್ಯರೊಬ್ಬರು ಪ್ರತಿಯೊಬ್ಬರೂ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುತ್ತಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. ವೈದ್ಯಲೋಕ ಪತ್ರಿಕೆಯ ಲೇಖಕರೂ ಆಗಿರುವ ಬೆಂಗಳೂರಿನ ಡಾ. ಶಾಂತಗಿರಿ ಮಲ್ಲಪ್ಪ ಅವರು ಚುನಾವಣೆ ಘೋಷಣೆಯಾದಾಗಿನಂದಲೂ ಈ ಮತದಾನದ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ತಮ್ಮ `ಶಾಂತಗಿರಿ ಹೆಲ್ತ್ ಕೇರ್’ ಆಸ್ಪತ್ರೆಗೆ ಬರುವ ರೋಗಿಗಳಿಗೆ ನೀಡುವ ಔಷಧ ಚೀಟಿಯಲ್ಲಿ “ದಿನಾಂಕ 12.05.2015ರಂದು ಮತದಾನ ಮಾಡುವ ಮೂಲಕ […]

Read More

ಶ್ರೀಕೃಷ್ಣ ಮಾಯ್ಲೆಂಗಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ

ಬೆಂಗಳೂರು: ಹಿರಿಯ ಪತ್ರಕರ್ತ, ಕನ್ನಡ ಆರೋಗ್ಯ ಮಾಸಪತ್ರಿಕೆ ‘ವೈದ್ಯಲೋಕ’ ಹಾಗೂ ಇಂಗ್ಲೀಷ್ ಆರೋಗ್ಯ ಮಾಸಪತ್ರಿಕೆ ‘ಹೆಲ್ತ್ ವಿಷನ್’ನ ವ್ಯವಸ್ಥಾಪಕ ಸಂಪಾದಕ ಶ್ರೀಕೃಷ್ಣ ಮಾಯ್ಲೆಂಗಿ ಅವರಿಗೆ ಆರೋಗ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಗೌರವ ಡಾಕ್ಟರೇಟ್ ಪ್ರಶಸ್ತಿ ಲಭಿಸಿದೆ. ಎರಡು ದಶಕಗಳ ಇಲೆಕ್ಟ್ರಾನಿಕ್ ಹಾಗೂ ಮುದ್ರಣ ಮಾಧ್ಯಮದ ಅನುಭವವಿರುವ ಶ್ರೀಕೃಷ್ಣ ಮಾಯ್ಲೆಂಗಿ ಅವರು ತಮ್ಮ ಪತ್ರಿಕೆಯ ಮೂಲಕ ಆರೋಗ್ಯ ಸಂಬಂಧಿತ ಉಪಯುಕ್ತ ಲೇಖನ ಮತ್ತು ಸುದ್ದಿಗಳನ್ನು ಪ್ರಕಟಿಸುತ್ತಿದ್ದು, ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸಲು ಶಾಲಾ ಕಾಲೇಜುಗಳಲ್ಲಿ ಆರೋಗ್ಯ ನಂದನ ಎಂಬ ಕಾರ್ಯಕ್ರಮಗಳನ್ನು […]

Read More

Back To Top