Health Vision

ಶಾಸ್ತ್ರೋಕ್ತ ವಿಧಿಯಲ್ಲಿ ಸ್ತನ್ಯಪಾನ ಮಾಡಿಸುವುದು ಹೇಗೆ?

ಆಯುರ್ವೇದದಿಂದ ಸ್ತನ್ಯಪಾನದಿಂದಾಗುವ ಪ್ರಯೋಜನಗಳು ಮತ್ತು ಮಗುವಿಗೆ ನೀಡಬಹುದಾದ ಪೂರಕ ಆಹಾರಗಳು ತಾಯಿ ಹಾಲು ಕುಡಿಯುವುದು ಸಹಜಧರ್ಮ , ತಾಯಿ ಹಾಲು ಕುಡಿಸುವುದು ಪರಧರ್ಮ ತಾನೂ, ತಾಯಿ ಹಾಲು ಕುಡಿದು, ಮಗುವಿಗೂ ತನ್ನ ಹಾಲು ಕುಡಿಸುವುದು ಪರಮಧರ್ಮ ತಾಯಿ ಹಾಲಿನ ಜೊತೆ ಮಗುವಿಗೆ ಪೂರಕ ಆಹಾರ ಮತ್ತು ಪ್ರೀತಿ ಧಾರೆ ಎರೆಯುವುದು ಮನುಷ್ಯ ಧರ್ಮ. ಪೂರಕ ಆಹಾರ, ಪ್ರೀತಿಯ ಧಾರೆ ಪ್ರಸನ್ನಾರವಿಂದದ ಮಂದಸ್ಮಿತ ಮಗುವಿನ ಬೆಳವಣಿಗೆಗೆ ಕಾರಣವಾಗುತ್ತದೆ. ಬನ್ನಿ ಮಹಿಳೆಯರೇ ನಗುಮುಖದಿಂದ, ಹೃತ್ಪೂರ್ವಕವಾಗಿ ತಾಯಿ ಧರ್ಮವ ಪಾಲಿಸಲು ಹಾಗೂ […]

Read More

ಅಟೋಪಿಕ್ ಡರ್ಮೆಟೈಟಿಸ್ : ಮಕ್ಕಳಲ್ಲಿ ಕಂಡುಬರುವ ಇಸಬು

ಅಟೋಪಿಕ್ ಡರ್ಮಟೈಟಿಸ್ ಮಕ್ಕಳಲ್ಲಿ ಕಂಡುಬರುವ ಇಸಬು. ಇದು ದೀರ್ಘಕಾಲೀನ ಮತ್ತು ಮರುಕಳಿಸುವ ಉರಿಯೂತದ ಚರ್ಮದ ಕಾಯಿಲೆಯಾಗಿದೆ. ಸಾಮಾನ್ಯವಾಗಿ ನಮ್ಮ ಸುತ್ತ ಮುತ್ತ ಇರುವ ರಾಸಾಯನಿಕ ವಸ್ತುಗಳು ಮತ್ತು ರೋಗಾಣುಗಳ ಜೊತೆ ನಮ್ಮ ಚರ್ಮವು ಸಂಬಂಧ ಬೆಳೆಸಿಕೊಂಡಿರುತ್ತದೆ. ಕೆಲವು ಮಕ್ಕಳಲ್ಲಿ ಅನುವಂಶಿಕವಾಗಿ, ನಮ್ಮ ಪರಿಸರದಲ್ಲಿರುವ ರಾಸಾಯನಿಕ ವಸ್ತುಗಳಿಗೆ ಮತ್ತು ರೋಗಾಣುಗಳಿಗೆ ಒಗ್ಗಿಕೊಳ್ಳದೇ ಚರ್ಮ, ಮೂಗು, ಮತ್ತು ಪುಪ್ಪಸಗಳು ತೀವ್ರವಾಗಿ ಪ್ರತಿಕ್ರಿಯಿಸಿ ಚರ್ಮದಲ್ಲಿ ಉರಿಯೂತ, ಮೂಗಿನಲ್ಲಿ ಸೋರುವಿಕೆ ಮತ್ತು ಪುಪ್ಪಸಗಳಲ್ಲಿ ಉಬ್ಬಸ ಕಂಡುಬರಬಹುದು. ಅನುವಂಶಿಕ ದೋಷದಿಂದ ಬರುವ ಚರ್ಮದ ಉರಿಯೂತಕ್ಕೆ […]

Read More

ಸ್ತನ್ಯಪಾನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ

ಆಗಸ್ಟ್‌ ೧-೭:  ಜಾಗತಿಕ ಸ್ತನ್ಯಪಾನ ಸಪ್ತಾಹ ಮಗುವೊಂದು ಹುಟ್ಟಿದರೆ ಅದರ ಮೊದಲ ಆಹಾರ ತಾಯಿಯ ಹಾಲು. ತಾಯಿಯ `ಹಾಲನ್ನು ಅಮೃತ ಸಮಾನ` ಎಂದು ಪರಿಗಣಿಸಲಾಗಿದೆ. ಸ್ತನ್ಯಪಾನವನ್ನು ಪ್ರೋತ್ಸಾಹಿಸುವ ಸಲುವಾಗಿ ತಾಯಿ ಮತ್ತು ಮಕ್ಕಳ ಆರೋಗ್ಯಕ್ಕಾಗಿ ಭಾರತವು ಸೇರಿದಂತೆ ಹಲವಾರು ದೇಶಗಳಲ್ಲಿ ಆಗಸ್ಟ್‌ ೧-೭ನೇ ತಾರೀಖಿನಂದು ಜಾಗತಿಕ ಸ್ತನ್ಯಪಾನ ಸಪ್ತಾಹ ವನ್ನು ಆಚರಿಸಲಾಗುತ್ತಿದೆ. ಸ್ತನ್ಯಪಾನದ ರಕ್ಷಣೆ, ಸ್ತನ್ಯಪಾನ ಪ್ರೋತ್ಸಾಹ ಮತ್ತು ಬೆಂಬಲಿಸಲು ೧೯೯೦ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್‌ ಹೊರಡಿಸಿದ ಘೋಷಣೆಯ ಸ್ಮರಣಾರ್ಥ ಈ ಸಪ್ತಾಹವನ್ನು ಆಚರಿಸಲಾಗುತ್ತಿದೆ. […]

Read More

ಟಿವಿ, ಮೊಬೈಲ್‍ನಿಂದ ಮಕ್ಕಳ ಸ್ಮರಣಶಕ್ತಿಗೆ ತೊಂದರೆ

ಬೆಂಗಳೂರಿನಲ್ಲಿ ಜೂನ್ 25, 2018 ರಂದು ನಡೆದ ಆರೋಗ್ಯ ನಂದನ ಮಾಲಿಕೆ ಕಾರ್ಯಕ್ರಮ ಡಾ. ಪತ್ತಾರ್ಸ್ ಗೋಲ್ಡ್ ಫಾರ್ಮಾದ ಸಹಯೋಗದೊಂದಿಗೆ, ಬೆಂಗಳೂರಿನ ಮೀಡಿಯಾ ಐಕಾನ್, ಬೆಂಗಳೂರಿನ ಕುಮಾರ ಪಾರ್ಕ್ ಪಶ್ಚಿಮದಲ್ಲಿರುವ, ಭಾರತ್ ವಿದ್ಯಾನಿಕೇತನ ಶಾಲೆಯಲ್ಲಿ ಜೂನ್ 25ರಂದು ಆರೋಗ್ಯ ನಂದನ – ಮಾಲಿಕೆಯ ಕಾರ್ಯಕ್ರಮ ಸಂಘಟಿಸಿತ್ತು. ಅಂದಿನ ಕಾರ್ಯಕ್ರಮ ಉದ್ಘಾಟಿಸಿದವರು ಮೈಸೂರಿನ ನಾಟಕ ಕಲಾವಿದೆ ಹಾಗೂ ಪ್ರವಾಸಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಉಮಾ ರಮೇಶ್. ಅಧ್ಯಕ್ಷತೆ ವಹಿಸಿದ್ದವರು ಬೆಂಗಳೂರಿನ ನಿವೃತ್ತ ಜವಳಿ ಅಭಯಂತರ, ಕಾಮಧೇನು ಎಜುಕೇಷನಲ್ ಸೇವಾ […]

Read More

ಅದಾಗತಾನೆ ಜನಿಸಿದ ನಿಮ್ಮ ಮಗು ನಿಮ್ಮನ್ನೇಕೆ ಸಂತೋಷಪಡಿಸುತ್ತಿಲ್ಲ ಎಂಬ ಅಚ್ಚರಿಯೇ?

ಒಂದು ಮಗುವಿನ ಜನನ ದಂಪತಿ ಪಾಲಿಗೆ ಬದುಕಿನಲ್ಲೇ ಒಂದು ಅವಿಸ್ಮರಣೀಯ ಕ್ಷಣ. ಆದರೆ ಕೆಲವೇ ಕೆಲವು ದಂಪತಿ ಈ ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿವೆ. ಪಾಲಕರಲ್ಲಿ ಅದರಲ್ಲಿಯೂ ತಾಯಿಗೆ ಈ ಖಿನ್ನತೆ ಎದುರಾಗುತ್ತಿದೆ. ಈ ಸಂದರ್ಭದಲ್ಲಿ ಎದುರಾಗುವ ವೇದನೆಯನ್ನು ಪ್ರಸವಾನಂತರದ ಖಿನ್ನತೆ ಎಂದು ಬಣ್ಣಿಸಲಾಗುತ್ತದೆ. ಮಗುವಿನ ಜನನದ ನಂತರ ಒಂದಿಷ್ಟು ಬದಲಾವಣೆಗಳು ಆಗುತ್ತದೆ. ಇದರಿಂದಾಗಿ ತಾಯಿಯ ಶರೀರದ ಹಾರ್ಮೋನುಗಳಲ್ಲಿ ಒಂದಿಷ್ಟು ವ್ಯತ್ಯಾಸ ಉಂಟಾಗುತ್ತದೆ. ಈ ಅಸಮತೋಲನದ ಪರಿಣಾಮವೇ ಪ್ರಸವಾನಂತರದ ಖಿನ್ನತೆಗೆ ಪ್ರಮುಖ […]

Read More

ಹಲ್ಲು ಮೊಳೆಯುವ ಸಮಯ

ಮೊನ್ನೆದಿನ ತಾಯಿಯೊಬ್ಬಳು ತನ್ನ ಮಗುವನ್ನು ದಂತ ಚಿಕಿತ್ಸಾಲಯಕ್ಕೆ ಕರೆತಂದು ಕಳೆದರೆಡು ದಿನಗಳಿಂದ ಮಗು ಪದೇ ಪದೇ ಅಳುತ್ತ್ತಿದೆ. ಕೈಗೆ ಸಿಕ್ಕಿದ ಎಲ್ಲಾ ವಸ್ತುಗಳನ್ನು ಬಾಯಿಗೆ ತುರುಕುತ್ತದೆ ಮತ್ತು ನಿನ್ನೆಯಿಂದ ಬೇಧಿ ಬೇರೆ ಶುರುವಾಗಿದೆ. ಕೆಳಗಿನ ದವಡೆಯ ಮೇಲ್ಬಾಗದ ವಸಡು ಕೆಂಪಾಗಿದೆ ಎಂದು ಒಂದೇ ಉಸಿರಿನಲ್ಲಿ ಹೇಳಿದ್ದರು. ಆ ಮಗುವಿನ ವಯಸ್ಸು 6 ರಿಂದ 8 ತಿಂಗಳು ಇರಬಹುದು. ಇದು ಹೆಚ್ಚಿನ ಎಲ್ಲಾ ತಾಯಂದಿರು ಮಕ್ಕಳಲ್ಲಿ ಕಂಡುಬರುವ ಸಹಜವಾದ ಪ್ರತಿಕ್ರಿಯೆ ಸಾಮಾನ್ಯವಾಗಿ ಮಕ್ಕಳಲ್ಲಿ ಹಾಲು ಹಲ್ಲು 6 ರಿಂದ […]

Read More

ಮರೆಯಾಗುತ್ತಿರುವ ಮಂಗಬಾವು ರೋಗ

ಮಕ್ಕಳನ್ನು ಕಾಡುವ ಕಾಯಿಲೆ ಮಂಗಬಾವು ಎನ್ನುವುದು ವೈರಾಣುವಿನಿಂದ ಹರಡುವ ಸೋಂಕು ರೋಗವಾಗಿದ್ದು ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮನುಷ್ಯರಲ್ಲಿ ಮಾತ್ರ ಕಂಡು ಬರುವ ಈ ರೋಗ ಮಮ್ಸ್ ಎಂಬ ವೈರಾಣುವಿನಿಂದ ಹರಡುತ್ತದೆ. ಮಮ್ಸ್, ಕೆಪ್ಪಟೆರಾಯ, ಗದ್ದಬಾವು, ಗದ್ದಕಟ್ಟು  ಎಂದು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ಈ ಮಂಗಬಾವು ರೋಗದ ಲಕ್ಷಣಗಳು ಸಾಮಾನ್ಯವಾಗಿ ವೈರಾಣು ಸೋಂಕು ತಗುಲಿದ 16ರಿಂದ 18 ದಿನಗಳ ಬಳಿಕ ಕಂಡು ಬರುತ್ತದೆ ಮತ್ತು ರೋಗದ ಲಕ್ಷಣಗಳು ಕಾಣಿಸಿಕೊಂಡ 7 ರಿಂದ 10 ದಿನಗಳಲ್ಲಿ […]

Read More

ಆಟಿಸಮ್ ಮೈಂಡ್‍ಗೆ ಸ್ಟೆಮ್ ಸೆಲ್ ಥೆರಪಿ

ಇಂದು ಭಾರತದಲ್ಲಿ ಅಂದಾಜು 18 ದಶ ಲಕ್ಷ ಮಂದಿ ಆಟಿಸಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಮೂರನೇ ಅತ್ಯಂತ ಸಾಮಾನ್ಯ ರೀತಿಯ ಸಮಸ್ಯೆ. ಸಾಮಾನ್ಯವಾಗಿ ವಂಶವಾಹಿಯಾಗಿ, ಪ್ರಾದೇಶಿಕವಾಗಿ ಹಾಗೂ ಜೀವನ ಶೈಲಿಯ ಅನುಗುಣವಾಗಿ ಈ ಸಮಸ್ಯೆ ಎದುರಿಸುವಂತಾಗುತ್ತದೆ. ನಗುವಿಗೆ ಕಾರಣವಿಲ್ಲ, ಅಳುವಿಗೆ ನೆಪವಿಲ್ಲ. ಯಾವುದೂ ಬೇಡ. ಇನ್ಯಾವುದೋ ಬೇಕು. ಎಲ್ಲ ಮಕ್ಕಳಂತೆ ಅವರಿರುವುದಿಲ್ಲ. ಹಾಗಂತ ಅವರಲ್ಲಿ ಸಾಮಥ್ರ್ಯವೇ ಇರುವುದಿಲ್ಲ ಅಂತಲ್ಲ, ಆದರೆ ವಿಶೇಷ ಆರೈಕೆ ಬಯಸುವ ಮಕ್ಕಳು ಆಟಿಸಂ ಸಮಸ್ಯೆಗೆ ಒಳಗಾದವರಾಗಿ ಒಂದು ಸೀಮಿತ ಗುಂಪಿನಲ್ಲಿ ಗುರುತಿಸಿಕೊಳ್ಳುತ್ತಾರೆ. […]

Read More

ಮಕ್ಕಳಲ್ಲಿ ಒತ್ತಡ – ಆಯುರ್ವೇದ ಪರಿಹಾರ

ನಿಮ್ಮ ಎಲ್ಲಾ ಕೆಲಸಗಳನ್ನು ಮರೆತು, ಅವುಗಳ ಅಂತಿಮ ದಿನಾಂಕ ಮರೆತು -ನೀವು ನಿಮ್ಮ ಮಕ್ಕಳ ಜೊತೆ ಅವರಿಗೆ ಇಷ್ಟವಾದ ಆಟ ಆಡುತ್ತಾ ನಕ್ಕು ನಲಿದಾಡಿ ಎಷ್ಟು ದಿನ ಆಯಿತು ನೆನಪಿಸಿಕೊಳ್ಳಬೇಕಲ್ಲವೆ? ನಿಮ್ಮ ಮಕ್ಕಳಿಗೆ ಶಾಲೆಯಲ್ಲಿ ಪಾಠ ಪ್ರವಚನದ ಒತ್ತಡ ಹೆಚ್ಚಾಗಿದೆಯೇ?  ಸಂಜೆ ಆಟದ ತರಬೇತಿ, ಮನೆ ಪಾಠ, ಗೃಹಾಭ್ಯಾಸಗಳ ನಡುವೆ  ಅವರಿಗೆ ಇಷ್ಟವಾದ ಚಟುವಟಿಕೆಯಲ್ಲಿ ತೊಡಗಲು  ಅಥವಾ ಮನರಂಜನೆ ಪಡೆಯಲು  ಅವರಿಗೆ ಸಮಯವಿದೆಯೆ? ನೀವು ಅಂದುಕೊಂಡಿರುವುದಕ್ಕಿಂತ ಹೆಚ್ಚಿನ ಒತ್ತಡಕ್ಕೆ  ನಿಮ್ಮ ಮಕ್ಕಳು  ಒಳಗಾಗಿದ್ದಾರೆಯೆ?  ಹೌದು ಅನ್ನಿಸುತ್ತಲ್ಲವೆ? ಈ […]

Read More

Back To Top