ಕಣ್ಣಿನ ಸಮಸ್ಯೆ ಹಾಗೂ ಏಕಾಗ್ರತೆಗೆ ಯೋಗ – ತ್ರಾಟಕ (ಕ್ರಿಯೆ)

ಕಣ್ಣಿನ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಮಕ್ಕಳಲ್ಲಿ ಏಕಾಗ್ರತೆ ಕಡಿಮೆಯಾಗುತ್ತಿದೆ. ಕಣ್ಣಿನ ಸಮಸ್ಯೆ ಹಾಗೂ ಏಕಾಗ್ರತೆಗೆ ಪರಿಹಾರವೆಂದರೆ ಕಣ್ಣಿನ ಯೋಗ (ತ್ರಾಟಕ)ದ ಅಭ್ಯಾಸ. 

ಕಣ್ಣಿನ ಸಮಸ್ಯೆ ಹಾಗೂ ಏಕಾಗ್ರತೆಗೆ ಯೋಗ - ತ್ರಾಟಕ (ಕ್ರಿಯೆ)ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆ ಹಾಗೂ ದೃಷ್ಟಿ ಸಮಸ್ಯೆ ಹೆಚ್ಚಾಗಿದೆ. ಚಿಕ್ಕ ವಯಸ್ಸಿನಲ್ಲೇ ಮೊಬೈಲ್ ಹಾಗೂ ಕಂಪ್ಯೂಟರ್ ಬಳಕೆಯಿಂದ ಚಿಕ್ಕ ಮಕ್ಕಳು ಹಾಗೂ ದೊಡ್ಡವರು ಕನ್ನಡಕ ಧರಿಸುವಂತಾಗಿದೆ. ಹಾಗೂ ಮಕ್ಕಳಲ್ಲಿ ಏಕಾಗ್ರತೆ ಕಡಿಮೆಯಾಗುತ್ತಿದೆ. ಒಂದು ಪುಟ ಓದುವುದರಲ್ಲಿ ಏಕಾಗ್ರತೆ ಕೊರತೆ ಕಾಣಿಸುತ್ತಿದೆ. ಈ ಸಮಸ್ಯೆಗೆ ಪರಿಹಾರವೆಂದರೆ ಕಣ್ಣಿನ ಯೋಗ (ತ್ರಾಟಕ)ದ ಅಭ್ಯಾಸ.

Also Read: ಮೋಹಕ ಜಾಲದ ಸುಳಿಯಲ್ಲಿ

ತ್ರಾಟಕ ಎಂದರೆ ಯೋಗದ ಒಂದು ಕ್ರಿಯೆ. ಇರುವ ಆರು ಕ್ರಿಯೆಗಳಲ್ಲಿ ತ್ರಾಟಕವು ಕಣ್ಣಿನ ಸಮಸ್ಯೆ (visioಟn) ಹಾಗೂ ಏಕಾಗ್ರತೆ(concentration)  ಸಮಸ್ಯೆ ಪರಿಹಾರವಾಗುವಂತಹ ಕ್ರಿಯೆ. ಈ ತ್ರಾಟಕದ ಅಭ್ಯಾಸ ನಿರಂತರವಾಗಿ ಮಾಡುವುದರಿಂದ ದೃಷ್ಟಿಯ ಸಮಸ್ಯೆಗೆ ಹಾಗೂ ಕನ್ನಡಕಕ್ಕೆ ಟಾಟಾ ಹೇಳಬಹುದು. ಏಕಾಗ್ರತೆಯನ್ನು ಪಡೆಯಬಹುದು.

ಕಣ್ಣಿನ ಯೋಗ ಮಾಡುವ ವಿಧಾನ :

ಮೊದಲು ಗಲಾಟೆಯಿಲ್ಲದಿರುವ (ಶಬ್ದ) ನಿಶ್ಯಬ್ಧವಾದ ಸ್ಥಳದಲ್ಲಿ ಸುಖಾಸನದಲ್ಲಿ ಕುಳಿತುಕೊಳ್ಳಬೇಕು. ನಂತರ ಮೂರು ಬಾರಿ ಧೀರ್ಘವಾದ ಉಸಿರನ್ನು ತೆಗೆದುಕೊಂಡು ನಿಧಾನವಾಗಿ ಉಸಿರನ್ನು ಬಿಡಬೇಕು. ಕಣ್ಣುಮುಚ್ಚಿ ಮೂರು ಬಾರಿ ಓಂಕಾರವನ್ನು ಉಚ್ಛರಿಸಬೇಕು. ನಂತರ ಪತಾಂಜಲಿ ಮಹರ್ಷಿಗೆ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಕಣ್ಣಿನ ಯೋಗವನ್ನು ಪ್ರಾರಂಭಿಸಬೇಕು.

” ಯೋಗೇನ ಚಿತ್ತಸ್ಯ ಪದೇನ ವಾಚಂ| ಮಲಂ ಶರೀರಸ್ಯ ಚ ವೈದ್ಯಕೇನ||
ಯೋಪಾ ಕರೋತ್ತಂ ಪ್ರವರಂ ಮುನಿನಾ| ಪತಂಜಲಿಂ ಪ್ರಾಂಜಲಿ ರಾನ ತೋಸ್ಮಿ||”

ಶ್ಲೋಕವನ್ನು ಹೇಳಿ ಎರಡು ಹಸ್ತಗಳನ್ನು ಘರ್ಷಿಸಿ (ಉಜ್ಜಿ) ಹಸ್ತವನ್ನು ಕಣ್ಣ ಮೇಲೆ ಇಟ್ಟು ನಿಧಾನವಾಗಿ ಕಣ್ತೆರೆಯಬೇಕು.

ನಂತರ ಚಿನ್ಮುದ್ರೆ / ಜ್ಞಾನ ಮುದ್ರೆ (ಅಂದರೆ ತೋರು ಬೆರಳು ಮತ್ತು ಹೆಬ್ಬೆರಳನ್ನು ಸೇರಿಸಿ)ಯಲ್ಲಿ ಕುಳಿತುಕೊಳ್ಳಬೇಕು. ಬೆನ್ನು ನೇರವಾಗಿರಬೇಕು. ನಂತರ ಕಣ್ಣಿನ ಗುಡ್ಡೆಯನ್ನು ನಿಧಾನವಾಗಿ ಮೇಲಕ್ಕೆ ಹಾಗೂ ಕೆಳಕ್ಕೆ ಆಡಿಸಬೇಕು. 5ಬಾರಿ ಈ ರೀತಿ ಅಭ್ಯಾಸ ಮಾಡಬೇಕು. ಕಣ್ಣಿನ ಗುಡ್ಡೆಯನ್ನು ಮಾತ್ರ ಆಡಿಸಬೇಕು. ಕುತ್ತಿಗೆಯನ್ನು ಆಡಿಸುವಂತಿಲ್ಲ. ಹೀಗೆಯೆ ಎಡಕ್ಕೆ ಬಲಕ್ಕೆ, ಹಾಗೂ ವೃತ್ತಾಕಾರದಲ್ಲಿ ತಿರುಗಿಸಬೇಕು. ನಂತರ ಎರಡೂ ಹಸ್ತಗಳನ್ನು ಘರ್ಷಿಸಿ(ಉಜ್ಜಿ) ಕಣ್ಣ ಮೇಲೆ ಇಡಬೇಕು. ಇದರಿಂದ ಕಣ್ಣಿನ ಸ್ನಾಯುಗಳು ರಿಲ್ಯಾಕ್ಸ್ ಆಗುತ್ತದೆ.

ಕಣ್ಣಿನ ಸಮಸ್ಯೆ ಹಾಗೂ ಏಕಾಗ್ರತೆಗೆ ಯೋಗ - ತ್ರಾಟಕ (ಕ್ರಿಯೆ)ನಂತರ ಬಲಗೈಯನ್ನು ಮೇಲಕ್ಕೆತ್ತಿ ಹೆಬ್ಬೆರಳನ್ನು ನೇರವಾಗಿರಿಸಿ. ಉಳಿದ ನಾಲ್ಕು ಬೆರಳುಗಳು ಮಡಿಸಿರಬೇಕು. ನಿಮ್ಮ ದೃಷ್ಟಿ ಬಲಗೈಯ ಹೆಬ್ಬೆರಳ ಉಗುರನ್ನು ನೋಡುತ್ತಿರಬೇಕು. ಕತ್ತನ್ನು ಆಡಿಸಬಾರದು, ಕಣ್ಣಿನ ಗುಡ್ಡೆಯನ್ನು ಮಾತ್ರ ಆಡಿಸಬೇಕು. ಮೊದಲು ಬಲಗೈಯನ್ನು ಮುಂದೆ ಹಾಗೂ ಹಿಂದೆ ಆಡಿಸಬೇಕು (5ಬಾರಿ) ನಿಮ್ಮ ದೃಷ್ಟಿ ಬಲಗೈಯ ಉಗುರಿನ ಮೇಲಿರಬೇಕು. ನಂತರ ಕೈಯನ್ನು ವೃತ್ತಾಕಾರದಲ್ಲಿ ನಿಧಾನವಾಗಿ ತಿರುಗಿಸುತ್ತಾ (5 ಬಾರಿ) (clockwise & anti clockwise) ದೃಷ್ಟಿಯನ್ನು ಹೆಬ್ಬೆರಳ ಉಗುರಿನ ಮೇಲೆ ಕೇಂದ್ರೀಕರಿಸಬೇಕು. ನಂತರ ಎಡಕ್ಕೆ ಹಾಗೂ ಬಲಕ್ಕೆ ಕೈಯನ್ನು ಆಡಿಸಬೇಕು.

ದೃಷ್ಟಿ ಹೆಬ್ಬೆರಳ ಉಗುರಿನ ಮೇಲಿರಬೇಕು. ನಂತರ ಕಣ್ಣನ್ನು ಮುಚ್ಚಿ ಎರಡೂ ಹಸ್ತಗಳನ್ನು ಘರ್ಷಿಸಿ (ಉಜ್ಜಿ) ಹಸ್ತಗಳನ್ನು ಕಣ್ಣಿನ ಮೇಲೆ ಇಟ್ಟು ನಿಧಾನವಾಗಿ ಕಣ್ಣನ್ನು ತೆರೆಯಬೇಕು. ಹೀಗೆ ಕಣ್ಣಿನ ಯೋಗವನ್ನು ದಿನವೂ ಅಭ್ಯಾಸ ಮಾಡುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ದೂರದೃಷ್ಟಿ, ಸಮೀಪ ದೃಷ್ಟಿ ಸಮಸ್ಯೆಯಿಂದ ಪಾರಾಗಬಹುದು. ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದು.

Watch our video on yoga: ರೋಗ ಬರದಂತೆ ತಡೆಯುವ ಕೆಲವು ಯೋಗಗಳು..!

 

yoga-srimati-Ramesh.

ಬಿ.ವಿ. ಶ್ರೀಮತಿ ರಮೇಶ್
ಶ್ರೀ ಯೋಗ ಮತ್ತು ಸಾಂಸ್ಕøತಿಕ ಅಕಾಡೆಮಿ(ರಿ)
ಸಂಸ್ಥಾಪಕಿ, ಕಾರ್ಯದರ್ಶಿ ಮತ್ತು ಯೋಗ ಶಿಕ್ಷಕಿ
ಮೊಬೈಲ್: 98803 86687

ಇಮೇಲ್: sri.ycaofficial@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!