Health Vision

ನಮ್ಮ ಬಗ್ಗೆ

ಉದಾತ್ತ ಧ್ಯೇಯದ ದೃಷ್ಟಿಕೋನ

ಆರೋಗ್ಯ ಕ್ಷೇತ್ರದ ಮಾಹಿತಿ ಮೂಲಕ ಆರೋಗ್ಯಕರ ಸಮಾಜ ಸೃಷ್ಟಿ ನಮ್ಮ ದೃಷ್ಟಿಕೋನವಾಗಿದೆ.
ನಮ್ಮೊಂದಿಗೆ ನಿಮ್ಮ ಕೈಗಳನ್ನು ಜೋಡಿಸಿ, ನಿಮ್ಮ ಸಹಭಾಗಿತ್ವವು ಮುಂದಿನ ಪೀಳಿಗೆಗಾಗಿ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಸಹಾಯವಾಗುತ್ತದೆ.

www.vydyaloka.in ಒಂದು ಆರೋಗ್ಯದ ವಿಷಯದ ಬಗೆಗೆ ಇರುವ ವೆಬ್ ಪೋರ್ಟಲ್ ಆಗಿದೆ ಇದರ ಮಾಲಿಕರು “ಮಿಡಿಯಾ ಐಕಾನ್”.

ಮೀಡಿಯಾ ಐಕಾನ್-2003 ರಿಂದಲೂ ಅಸ್ತಿತ್ವದಲ್ಲಿರುವುದು ಹಾಗೂ ಆರೋಗ್ಯದ ಮಾಹಿತಿ ಮತ್ತು ಪ್ರಕಟಣೆ ಕ್ಷೇತ್ರದಲ್ಲಿ ಯಶಸ್ವಿಯಾಗಿರುವುದು ಹೆಮ್ಮೆಯ ಸಂಗತಿ. ನಾವು ವೈದ್ಯಲೋಕ ಎಂಬ ಕನ್ನಡ ಆರೋಗ್ಯ ಮಾಸ ಪತ್ರಿಕೆ ಹಾಗೂ ಹೆಲ್ತ್ ವಿಷನ್ (ಈ ಹಿಂದೆ ಆಯುರ್ ಫಾರ್ಮಾ ಹೆಲ್ತ್ ಮ್ಯಾಗ್ ಹೆಸರಿನಲ್ಲಿ ಪ್ರಕಟವಾಗುತ್ತಿತ್ತು) ಎಂಬ ಆಂಗ್ಲ ಅರೋಗ್ಯ ಮಾಸ ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದೇವೆ. ಈಗ ನಾವು www.vydyaloka.in ಮತ್ತು www.healthvision.in ಎಂಬ ಆರೋಗ್ಯ ಸುದ್ದಿ ಜಾಲಗಳನ್ನೂ(ಹೆಲ್ತ್ ವೆಬ್ ಪೋರ್ಟಲ್) ಸಹ ನೀಡುತ್ತಿದ್ದೇವೆ. ಇದು ಆರೋಗ್ಯ ಮಾರ್ಗದರ್ಶನ ಜಾಲತಾಣವಾಗಿದ್ದು, ನಿಮಗೆ ಅಗತ್ಯವಾದ ಎಲ್ಲ ಆರೋಗ್ಯ ಮಾಹಿತಿಗಳನ್ನು ನೀಡುತ್ತವೆ. ಹಾಗೆಯೇ ನಾವು ವಿವಿಧ ಆರೋಗ್ಯ ವಿಷಯಗಳ
ಪುಸ್ತಕಗಳು, ಆರೋಗ್ಯ ಶಿಕ್ಷಣ ಸಾಮಗ್ರಿಗಳನ್ನು ಸಹ ಪ್ರಕಟಿಸಿರುತ್ತೇವೆ.
ರೋಗ ಪರೀಕ್ಷೆ, ರೋಗ ನಿರ್ಧಾರ, ಚಿಕಿತ್ಸೆಗಳು, ಸಂಶೋಧನೆ, ಸಂಶೋಧನೆ ಪ್ರಯೋಗಗಳು, ಸಾಮಾನ್ಯ ಆರೋಗ್ಯ, ಶುಶ್ರೂಷೆ, ಆರೋಗ್ಯಕರ ಜೀವನ, ಸೌಂದರ್ಯ, ಪೌಷ್ಠಿಕತೆ, ಸ್ವಾಸ್ಥ್ಯ-ಸೌಖ್ಯತೆ, ಫಿಟ್ನೆಸ್, ಔಷಧೋಪಚಾರಗಳು, ಪೋಷಕಾಂಶಗಳು ಇತ್ಯಾದಿ ಕುರಿತ ವೈಜ್ಞಾನಿಕ ಆಧಾರಿತ ಆರೋಗ್ಯ ಮಾಹಿತಿಗಳನ್ನು ಪ್ರಕಟಿಸುತ್ತೇವೆ. ಇದು ಆರೋಗ್ಯ ಆರೈಕೆಯನ್ನು ಖಾತರಿಗೊಳಿಸುವ ಜ್ಞಾನ ಮತ್ತು ಅನುಸರಣೆಯ ಭಂಡಾರವಾಗಿದೆ. ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ಪ್ರಯೋಜನಗಳನ್ನು ನೇರವಾಗಿ ಪಡೆಯಲು, ವಿವಿಧ ಆರೋಗ್ಯ ಸಂಸ್ಥೆಗಳೊಂದಿಗೆ ಸಮಗ್ರ ತಾಂತ್ರಿಕ ಮಾಹಿತಿ ಒದಗಿಸಲು ಮೀಡಿಯಾ ಐಕಾನ್ ನೆರವಾಗುತ್ತದೆ.
ನಾವು ಆರೋಗ್ಯನಂದನ ಹೆಸರಿನಲ್ಲಿ ಆರೋಗ್ಯ ಜಾಗೃತಿ ಶಿಬಿರಗಳು, ಅಭಿಯಾನಗಳು ಹಾಗೂ ಟಾಕ್ ಶೋಗಳನ್ನು (ಸಂವಾದ ಮತ್ತು ಚರ್ಚೆಗಳು) ಆಯೋಜಿಸುತ್ತಿದ್ದೇವೆ.
ಆರೋಗ್ಯ ಕ್ಷೇತ್ರ, ಉದ್ಯಮ, ಸಂಶೋಧನಾ ಚಟುವಟಿಕೆಗಳು, ಹೊಸ ಉತ್ಪನ್ನಗಳ ಸುದ್ದಿಗಳು ಮತ್ತು ಲೇಖನಗಳು, ಕಂಪನಿ ವಿವರಗಳು ಹಾಗೂ ಆರೋಗ್ಯ ಜಗತ್ತಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಸಂಬಂಧಪಟ್ಟ ವ್ಯಕ್ತಿಗಳ ಮಾಹಿತಿಗಳು ಇದರಲ್ಲಿ ಒಳಗೊಂಡಿರುತ್ತದೆ. ತಮ್ಮ ಹೊಸ ಸಂಶೋಧನೆಗಳು, ವೈದ್ಯಕೀಯ ಅವಿಷ್ಕಾರಗಳು, ಹೊಸ ಪರಿಕಲ್ಪನೆಗಳು ಮತ್ತು ಚಟುವಟಿಕೆಗಳನ್ನು ವಿನಿಮಯ ಮಾಡಿಕೊಳ್ಳಲು ನಾವು ಎಲ್ಲ ವೈದ್ಯರು, ಆರೋಗ್ಯ ಆರೈಕೆ ವೃತ್ತಿಪರರು, ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವವರು ಹಾಗೂ ಸಂಶೋಧನಾ ಸಮುದಾಯಗಳಿಗೆ ಸೂಕ್ತ ವೇದಿಕೆ ಒದಗಿಸುತ್ತೇವೆ. ಈ ಜಾಲತಾಣಗಳ ಮೂಲಕ ಈ ಉದ್ಯಮದ ಬೆಳವಣಿಗೆಗೆ ಓದುಗರು ಗಮನಾರ್ಹ ಕೊಡುಗೆ ನೀಡುವುದರಲ್ಲಿ ಸಂಶಯವಿಲ್ಲ.
ನಾವು ಔಷಧ ತಯಾರಿಕೆ ಸಂಸ್ಥೆಗಳು, ಔಷಧ ಸಂಶೋಧನೆ ಕಂಪನಿಗಳು, ವಿಮಾ ಸಂಸ್ಥೆಗಳು, ದೀರ್ಘಾವಧಿ ಆರೈಕೆ ಘಟಕಗಳು, ಸಾರ್ವಜನಿಕ ಆರೋಗ್ಯ ಸೌಲಭ್ಯಗಳು, ವೈದ್ಯರು, ಸಂಪರ್ಕ ಕಲ್ಪಿಸುವ ಸಂಸ್ಥೆಗಳು, ಆರೋಗ್ಯ ಕುರಿತ ಸಂಘ-ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು (ಎನ್‍ಜಿಒ) ಇತ್ಯಾದಿಯೊಂದಿಗೆ ಸಂಪರ್ಕ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತೇವೆ.

ಆರೋಗ್ಯಕರ ಸಮಾಜಕ್ಕಾಗಿ ವೈದ್ಯಲೋಕ ಮತ್ತು ಹೆಲ್ತ್ ವಿಷನ್

ವೈದ್ಯಲೋಕ – 2003ರಿಂದಲೂ ಪ್ರಕಟಗೊಳ್ಳುತ್ತಿರುವ ಮೀಡಿಯಾ ಐಕಾನ್ ಸಂಸ್ಥೆಯ ಹೆಮ್ಮೆಯ ಕನ್ನಡ ಆರೋಗ್ಯ ಮಾಸ ಪತ್ರಿಕೆಯಾಗಿದೆ. ಆರೋಗ್ಯ, ಆಹಾರ ಮತ್ತು ರೋಗ ನಿವಾರಣೆಗಾಗಿ ಸಮಗ್ರ ಮಾಹಿತಿ ನೀಡುತ್ತಾ ಪರಿಪೂರ್ಣ ಪತ್ರಿಕೆಯಾಗಿರುವ ಜೊತೆಗೆ ವಿವಿಧ ಯೋಜನೆಗಳು, ಆಲೋಚನೆಗಳು, ಪರಿಕಲ್ಪನೆಗಳು, ಅಭಿಯಾನ-ಆಂದೋಲನಗಳು ಮತ್ತು ಚಟುವಟಕೆಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುತ್ತಾ ಬಂದಿದೆ. ಈ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ನಿರಂತರ ಸುಸ್ಶಿರಗತಿಯ ಪರಿವರ್ತನೆಗೆ ಅಮೂಲ್ಯ ಕೊಡುಗೆ ನೀಡಿದೆ. ಕನ್ನಡ ಭಾಷೆಯಲ್ಲಿ ಪ್ರಕಟವಾಗುತ್ತಿರುವ ಈ ಮಾಸ ಪತ್ರಿಕೆಯು ಕನ್ನಡಿಗರಿಗೆ ಆರೋಗ್ಯ ಕ್ರಿಯಾವರ್ಧಕವಾಗಿ ಕಾರ್ಯನಿರ್ವಹಿಸುತ್ತಿದೆ.

ಹೆಲ್ತ್ ವಿಷನ್ _ ಮೀಡಿಯಾ ಐಕಾನ್ 2010ರಲ್ಲಿ ಆಯುರ್ ಫಾರ್ಮಾ ಹೆಲ್ತ್ ಮ್ಯಾಗ್ ಎಂಬ ಆಂಗ್ಲ ಆರೋಗ್ಯ ಮಾಸ ಪತ್ರಿಕೆಯನ್ನು ಆರಂಭಿಸಿತು. ಆರೋಗ್ಯ, ಆಹಾರ ಮತ್ತು ರೋಗ ನಿವಾರಣೆಗಾಗಿ ಸಮಗ್ರ ಮಾಹಿತಿ ನೀಡುತ್ತಾ ಪರಿಪೂರ್ಣ ಪತ್ರಿಕೆಯಾಗಿರುವ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ನೀಡುತ್ತಿರುವ ಆಸ್ಪತ್ರೆಗಳು, ನುರಿತ ವೈದ್ಯರು ಮತ್ತು ಕಂಪನಿಗಳ ಬಗ್ಗೆಯೂ ಮಾಹಿತಿ ಒದಗಿಸಿ ಜನಪ್ರಿಯವಾಗಿತ್ತು. ಜುಲೈ 2014ರಲ್ಲಿ ಇದು ಹೆಲ್ತ್ ವಿಷನ್ ಎಂಬ ಹೆಸರಿನಿಂದ ಮನೆಮಾತಾಗಿದೆ.

ಈ ಎರಡೂ ನಿಯತಕಾಲಿಕಗಳು ಸಾಮಾನ್ಯ ಆರೋಗ್ಯ, ರೋಗ ನಿರ್ವಹಣೆ, ಸೌಂದರ್ಯ, ಪೌಷ್ಟಿಕತೆ, ಮಕ್ಕಳ ಆರೋಗ್ಯ, ವನಿತೆಯರ ಸ್ವಾಸ್ಥ್ಯ, ಯೋಗ, ಆಹಾರ, ಗರ್ಭಧಾರಣೆ, ಫಿಟ್ನೆಸ್, ಆರೋಗ್ಯ ಸುದ್ದಿಗಳು, ನೇತ್ರ ಆರೈಕೆ, ಹೃದಯ ರಕ್ಷಣೆ, ಸ್ವಾಸ್ಥ್ಯ ಮತ್ತು ಸೌಖ್ಯತೆ, ಮನೆ ಮದ್ದು, ವ್ಯಕ್ತಿತ್ವ ವಿಕಸನ, ಪ್ರಾಣಿ ಚಿಕಿತ್ಸೆ ಇತ್ಯಾದಿ ವಿಷಯಗಳ ಬಗ್ಗೆ ವ್ಯಾಪಕ ಮಾಹಿತಿಗಳನ್ನು ಒದಗಿಸುತ್ತಿದೆ. ಆದಕಾರಣ ಈ ಎರಡೂ ಮಾಸ ಪತ್ರಿಕೆಗಳು ಆರೋಗ್ಯ ರಕ್ಷಣೆಯ ಒಡನಾಡಿಗಳಾಗಿವೆ.
ಉದ್ಯಾನನಗರಿ ಬೆಂಗಳೂರಿನ ಪ್ರತಿಷ್ಠಿತ ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್ (ವಿಮ್ಸ್) ನಿರ್ದೇಶಕರೂ ಆದ ಮುಖ್ಯ ಸಂಪಾದಕರಾದ ಡಿ.ಎ.ಕಲ್ಪಜಾ ಅವರ ಸಮರ್ಥ ಮಾರ್ಗದರ್ಶನ ಮತ್ತು ಬೆಂಬಲ-ಸಹಕಾರದೊಂದಿಗೆ ನಮ್ಮ ಹೆಮ್ಮೆಯ ಪ್ರಕಟಣೆಗಳಾದ ವೈದ್ಯಲೋಕ ಮತ್ತು ಹೆಲ್ತ್ ವಿಷನ್ ನಿಯತಕಾಲಿಕಗಳು ನಮ್ಮ ಓದುಗರನ್ನು ವ್ಯಾಪಕವಾಗಿ ತಲುಪುವಲ್ಲಿ ಯಶಸ್ವಿಯಾಗಿದೆ. ಮೀಡಿಯಾ ಐಕಾನ್ ಸಂಸ್ಥೆಯು ಇದಕ್ಕಾಗಿ ಡಿ.ಎ. ಕಲ್ಪಜಾ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.

ಆಸ್ಪತ್ರೆಗಳು, ಆರೋಗ್ಯ ಸಂಘ-ಸಂಸ್ಥೆಗಳು, ವೈದ್ಯರು ಮತ್ತು ಲೇಖಕರ ಗಮನಾರ್ಹ ಸಹಕಾರ, ಬೆಂಬಲ ಮತ್ತು ಸಹಾಯದೊಂದಿಗೆ ಈ ಎರಡೂ ನಿಯತಕಾಲಿಕಗಳು ಕರ್ನಾಟಕದ ಬಹು ಪ್ರಶಂಸನೀಯ ಮತ್ತು ಸಂಗ್ರಹಯೋಗ್ಯ ಮಾಸ ಪತ್ರಿಕೆಗಳಾಗಿವೆ.
ಈ ಎರಡೂ ಮಾಸ ಪತ್ರಿಕೆಗಳು ಆಯ್ಡ ಪುಸಕ್ತ ಮಳಿಗೆಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲು ಲಭ್ಯವಿರುತ್ತದೆ. ನಿಯತಕಾಲಿಕಗಳು ಚಂದಾ ರೂಪದಲ್ಲಿ ಮತ್ತು ಆನ್‍ಲೈನ್‍ನಲ್ಲಿ ಓದುಗರಿಗೆ ದೊರೆಯುತ್ತದೆ.

ಈ ಎರಡೂ ಪತ್ರಿಕೆಗಳನ್ನು ಜಾಗತೀಕರಣಗೊಳಿಸಲಾಗಿದೆ. ಆನ್‍ಲೈನ್ ಮೂಲಕ ಇ-ಮ್ಯಾಗಝೈನ್‍ನನ್ನು ಪಡೆಯಬಹುದು ಮತ್ತು ಚಂದಾದಾರರಾಗಬಹುದು www.magzter.com ಈ ಆರೋಗ್ಯ ವಿಭಾಗದಲ್ಲಿ ಆನ್‍ಲೈನ್ ಇ-ಮ್ಯಾಗಝೈನ್ ಚಂದಾದಾರಿಕೆ ಲಭ್ಯವಿದೆ.

Back To Top