Health Vision

ಏಪ್ರಿಲ್ ಬಿಸಿಲಿನಲ್ಲಿ ನಾವು ಯೋಚಿಸಲೇಬೇಕಾದ ಆರೋಗ್ಯ ರಕ್ಷಣಾ ದಿನಗಳು

ಅಂಧತ್ವ ತಡೆ ಸಪ್ತಾಹ ಏಪ್ರಿಲ್ ಬಿಸಿಲು ಏರುತ್ತಿದೆ. ಬೆವರುತ್ತಾ ಕುಳಿತು ಯೋಚಿಸುತ್ತ ಹುಡುಕಿದಾಗ, ಏಪ್ರಿಲ್ ತಿಂಗಳಿನಲ್ಲಿ ವಿಶ್ವದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಆಚರಿಸಲಾಗುವ ಅನೇಕ ದಿನಾಚರಣೆಗಳ ಬಗ್ಗೆ ತಿಳಿದು ಬಂತು. ಈ ದಿನಾಚರಣೆಗಳಲ್ಲಿ ಜನರ ಆರೋಗ್ಯ, ಪ್ರಕೃತಿ- ಪರಿಸರ, ಪ್ರಾಣಿಗಳು ಹೀಗೆ ವಿಂಗಡಣೆ ಮಾಡಬಹುದು. ಏಪ್ರಿಲ್ 1 ರಿಂದ ಅಂಧತ್ವ ತಡೆಯುವ ವಿಶ್ವ ಸಪ್ತಾಹವಿದೆ. ಕಣ್ಣುಗಳ ಮೂಲಕವೇ ಅತಿ ಬೇಗ ವಿವರವಾದ ಪ್ರಪಂಚ ಜ್ಞಾನ ನಮಗೆ ದೊರಕುತ್ತದೆ. ವಸ್ತುಗಳನ್ನು ಹಾಗೂ ಜೀವಿಗಳನ್ನು ನೋಡಲು, ಅನುಭವಿಸಲು, ನೆನಪಿಸಿಕೊಳ್ಳಲು, ದೃಷ್ಟಿ ಬಹಳ […]

Read More

ಬ್ರೈನ್ ಟ್ಯೂಮರ್ ಇದ್ದ ಬಾಲಕಿಗೆ ನಾರಾಯಣ ಹೆಲ್ತ್ ಸಿಟಿಯಲ್ಲಿ ಹೊಸ ಬದುಕು

ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯು ಬೆಂಗಳೂರು ಮೂಲದ ಸುಮಾರು 21 ವರ್ಷ ವಯಸ್ಸಿನ ರೆಫ್ರೆಕ್ಟರಿ ಎಪಿಲೆಪ್ಸಿ (ಅಪಸ್ಮಾರ) ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಗೆ ಹೊಸ ಬದುಕು ನಿಡಿದೆ. ಬೆಂಗಳೂರಿನ ನಿವಾಸಿಯಾಗಿರುವ ಬಾಲಕಿಯು ನಿಯಮಿತವಾಗಿ ಅತೀವ ತಲೆನೋವಿನಿಂದ ಬಳಲುತ್ತಿದ್ದರು. ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಪಡೆಯುವ ಆಸ್ಪತ್ರೆ ಕುರಿತ ಅವರ ವಿಚಾರಣೆಯು ಅಂತಿಮವಾಗಿ ನಾರಾಯಣ ಹೆಲ್ತ್ ಸಿಟಿಗೆ ಕರೆತಂದಿತ್ತು.ಅಗತ್ಯ ಆರೋಗ್ಯ ತಪಾಸಣೆಯನ್ನು ಕೈಗೊಂಡ ಬಳಿಕ ಬಾಲಕಿಯ ಮೆದುಳಿನಲ್ಲಿ ಗಡ್ಡೆ ಇರುವುದು ಕಂಡುಬಂದಿದ್ದು, ಇದು ಪುನರಾವರ್ತಿತ ನೋವಿಗೆ ಕಾರಣವಾಗಿತ್ತು. ಆಕೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು […]

Read More

ಅಪೆಂಡಿಸೈಟಿಸ್: ಅಸಡ್ಡೆ ಬೇಡ…!?

ದೇಹಕ್ಕೆ ಸ್ವಲ್ಪವೂ ಉಪಯೋಗವಿಲ್ಲದ ಅಂಗ ಅಪೆಂಡಿಕ್ಸ್‌ನಲ್ಲಿ ಸೋಂಕುಂಟಾದಾಗ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವಿರಲಿ. ಯಾವುದೇ ರೀತಿಯ ಮನೆಯ ಔಷಧಿಗಳನ್ನಾಗಲಿ, ಇತರೆ ಪದ್ಧತಿಗಳನ್ನಾಗಲಿ ಅನುಸರಿಸುವ ಬದಲು ನೇರವಾಗಿ ಶಸ್ತ್ರಚಿಕಿತ್ಸಾ ತಜ್ಞರನ್ನು ಕಾಣುವುದರಿಂದ ಪ್ರಾಣಾಪಾಯವನ್ನು ತಪ್ಪಿಸಬಹುದು. ಅಪೆಂಡಿಸೈಟಿಸ್ ಎಂಬುದು ಕರುಳಿನ ನಶಿಸುತ್ತಿರುವ ಒಂದು ಭಾಗ. ಮನುಷ್ಯನಿಗೆ ಇದರಿಂದ ಯಾವ ಉಪಯೋಗ ಇಲ್ಲದಿದ್ದರೂ ಕೂಡ ಇದಕ್ಕೆ ತಗುಲುವ ಸೋಂಕಿನಿಂದ ಉಂಟಾಗುವ ತೊಂದರೆ ಎಷ್ಟೆಂದರೆ ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿ ಅಪೆಂಡಿಕ್ಸ್ ಹೊರತೆಗೆಯದಿದ್ದರೆ ಉಂಟಾಗುವ ದುಷ್ಪರಿಣಾಮಗಳು ಜೀವಕ್ಕೆ ಕುತ್ತು ತರುವುದು ಖಂಡಿತ. ಅಪೆಂಡಿಕ್ಸ್‌ಗೆ ತಗುಲುವ […]

Read More

ಹೈಪರ್ ಪ್ಯಾರಾಥೈರಾಯ್ಡಿಸಮ್

ಪ್ಯಾರಾಥೈರಾಯ್ಡ್ ಗ್ರಂಥಿಗಳು ನಮ್ಮ ರಕ್ತ ಮತ್ತು ಮೂಳೆಗಳಲ್ಲಿ ಕ್ಯಾಲ್ಷಿಯಂನ ಪ್ರಮಾಣವನ್ನು ನಿಯಂತ್ರಿಸುತ್ತವೆ. 250 ಜನರಲ್ಲಿ ಒಬ್ಬರಿಗೆ (50 ವರ್ಷಗಳಿಗೆ ಮೇಲ್ಪಟ್ಟ ಮಹಿಳೆಯರಲ್ಲಿ 100ರಲ್ಲಿ ಒಬ್ಬರಿಗೆ) ಪ್ಯಾರಾಥೈರಾಯ್ಡ್ ಗ್ರಂಥಿಯ ಗಡ್ಡೆ ಕಾಣಿಸಿಕೊಂಡು ಹೈಪರ್‍ಪ್ಯಾರಾಥೈರಾಯ್ಡಿಸಮ್ ಎಂದು ಕರೆಯಲ್ಪಡುವ ಪ್ಯಾರಾಥೈರಾಯ್ಡ್ ರೋಗಕ್ಕೆ ಕಾರಣವಾಗುತ್ತದೆ. ಹೈಪರ್ ಪ್ಯಾರಾಥೈರಾಯ್ಡಿಸಮ್ ಒಂದು ವಿನಾಶಕಾರಿ ರೋಗವಾಗಿದ್ದು, ಅದು ಅಧಿಕ ಬ್ಲಡ್ ಕ್ಯಾಲ್ಷಿಯಂಗೆ ಕಾರಣವಾಗಿ ಆರೋಗ್ಯ ಸಮಸ್ಯೆಗಳು ಮತ್ತು ವಯಸ್ಸಿಗೆ ಮುನ್ನವೇ ಸಾವಿಗೂ ಎಡೆ ಮಾಡಿಕೊಡುತ್ತದೆ. ಬಹುತೇಕ ರೋಗಿಗಳಲ್ಲಿ ಇದು ಸುಲಭವಾಗಿ ವಾಸಿ ಮಾಡಬಹುದಾದ ರೋಗವಾಗಿದ್ದು, ಪ್ಯಾರಾಥೈರಾಯ್ಡ್ ಗ್ರಂಥಿ […]

Read More

ನಡುಕ ಹುಟ್ಟಿಸುತ್ತಿರುವ ನಿಫಾ ವೈರಾಣು ಜ್ವರ

ನಿಫಾ ವೈರಸ್, ಆರ್.ಯನ್.ಎ (RNA) ಗುಂಪಿಗೆ ಸೇರಿದ ಪಾರಾಮಿಕ್ಸೊ ವೈರಾಣು ಪ್ರಭೇಧಕ್ಕೆ ಸೇರಿದ ವೈರಾಣು ಆಗಿರುತ್ತದೆ. 1999ರಲ್ಲಿ ಮಲೇಷಿಯಾದ ಒಂದು ಸಣ್ಣ ಹಳ್ಳಿಯಾದ ಸಂಗೈ ನಿಫಾ ಎಂಬ ಜಾಗದಲ್ಲಿ ಮೊದಲು ಕಾಣಿಸಿಕೊಂಡ ಕಾರಣದಿಂದ “ನಿಫಾ ವೈರಸ್” ಎಂದು ಕರೆಯಲ್ಪಡುತ್ತದೆ. ಈ ಹಳ್ಳಿಯ ಹಂದಿ ಸಾಕುವ ರೈತರಲ್ಲಿ ಮೊದಲು ಈ ಜ್ವರ ಕಾಣಿಸಿಕೊಂಡು ಮೆದುಳಿನ ಊರಿಯೂತ ಮತ್ತು ಉಸಿರಾಟದ ತೊಂದರೆ ಉಂಟುಮಾಡಿ, ನೂರಾರು ಮಂದಿ ಅಸುನೀಗಿದ್ದರು. 300 ಮಂದಿಗೆ ರೋಗ ತಗುಲಿ 100 ಮಂದಿ ಅಸುನೀಗಿದ್ದರು. ರೋಗ ಪೀಡಿತ […]

Read More

ವಿಶ್ವ ಮಲೇರಿಯಾ ದಿನ-ಎಫ್ರಿಲ್ 25

ಪ್ರತಿ ವರ್ಷ ಎಪ್ರೀಲ್ 25ರಂದು ವಿಶ್ವದಾದ್ಯಂತ “ವಿಶ್ವ ಮಲೇರಿಯಾ” ದಿನ ಎಂದು ಆಚರಿಸಲಾಗುತ್ತಿದೆ. ಮಲೇರಿಯಾ ರೋಗದಿಂದಾಗುವ ಜಾಗತಿಕ ತೊಂದರೆಗಳು ಮತ್ತು ಪರಿಣಾಮಗಳ ಬಗ್ಗೆ ಹೆಚ್ಚಿಸಿ ಅರಿವು ಮೂಡಿಸಿ ರೋಗದ ಬಗ್ಗೆ ಜಾಗ್ರತಿ ಮೂಡಿಸುವ ಸದುದ್ದೇಶದಿಂದ ಈ ಆಚರಣೆಯನ್ನು ಜಾರಿಗೆತರಲಾಯಿತು. ವಿಶ್ವದಾದ್ಯಂತ ಸರಿಸುಮಾರು 3.3 ಬಿಲಿಯನ್ ಮಂದಿ ಈ ರೋಗಕ್ಕೆ ವರ್ಷವೊಂದರಲ್ಲಿ ತುತ್ತಾಗುತ್ತಿದ್ದು, 2012ರಲ್ಲಿ 6.5 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. 2013ರಲ್ಲಿ 5.8 ಲಕ್ಷ ಮಂದಿ ಜೀವತೆತ್ತಿದ್ದಾರೆ ಎಂದು ಅಂಕಿ ಅಂಶಗಳಿದ ತಿಳಿದುಬಂದಿದೆ. ವಿಶ್ವಸಂಸ್ಥೆಯ 60ನೇ ವಾರ್ಷಿಕ ಸಮ್ಮೇಳನ […]

Read More

ಪೈಲ್ಸ್ – ನೋವು….. ಭಯಂಕರ!

ಮನುಷ್ಯನ ಗುದದ್ವಾರದಲ್ಲಿ ಒಳಗೆ ಅನೇಕ ರಕ್ತನಾಳಗಳು ರಕ್ತವನ್ನು ಸರಬರಾಜು ಮಾಡುತ್ತಿರುತ್ತವೆ. ಈ ಭಾಗವು ಬಹಳ ಮೃದುವಾಗಿರುತ್ತದೆ. ಹೆಚ್ಚು ಒತ್ತಡದಿಂದ ತಿಣುಕಿದಾಗ ಗುದನಾಳಗಳು ಹೊರಕ್ಕೆ ಚಿಮ್ಮಿಕೊಂಡು ಬರುತ್ತದೆ. ಇದನ್ನೇ ಪೈಲ್ಸ್… ಮೂಲವ್ಯಾಧಿ ಎನ್ನುತಾರೆ! ಗುದದ್ವಾರದಲ್ಲಿನ ವ್ಯಾಧಿಗಳಲ್ಲಿ ಅತಿ ಸಂಕಷ್ಟಕರ ವ್ಯಾಧಿ ಎಂದರೆ ಪೈಲ್ಸ್. ಇದನ್ನು `ಭಯಂಕರ ವ್ಯಾಧಿ ಎಂತಲೇ ಹೇಳಬಹುದು. ಮಲ ವಿಸರ್ಜನೆಯ ಸಮಯದಲ್ಲಿ ಪುಷ್ಟದಲ್ಲಿ ನೋವು, ಉರಿ, ರೋದನೆ, ರಕ್ತ ಸೋರುವುದು, ಗುದದ್ವಾರದ ನಾಳಗಳು ಹೊರಗೆ ಬರುವುದು, ವಿಸರ್ಜನೆಗೆ ತಿಣುಕಾಡುವುದು… ಇಂಥ ಪ್ರಕ್ರಿಯೆ ಪೈಲ್ಸ್‍ನಿಂದ ಆಗುವಂತಹವು. ಪೈಲ್ಸ್ […]

Read More

ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ

ಭಾರತದಲ್ಲಿ ಹೃದಯಾಘಾತದ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಯುವಜನರಲ್ಲಿ ಹೆಚ್ಚುತ್ತಿರುವುದು ತೀವ್ರ ಆತಂಕಕಾರಿ ವಿಷಯ. ಇಂದಿನ ಮಕ್ಕಳಿಗೆ ಶಾಲಾ ದಿನಗಳಿಂದಲೇ ಹೃದಯಘಾತದ ದುಷ್ಪರಿಣಾಮಗಳಿಗೆ ಕಾರಣವಾಗುವ ವಿವಿಧ ಗಂಡಾಂತರಕಾರಿ ಅಂಶಗಳ ಬಗ್ಗೆ ತಿಳಿಸಿ ಅವರನ್ನು ಜಾಗೃತಗೊಳಿಸುವ ಅಗತ್ಯವಿದೆ. ಭಾರತದಲ್ಲಿ ಹೃದಯಾಘಾತ ಪ್ರಕರಣಗಳು ಗಮನಾರ್ಹವಾಗಿ ಅಧಿಕವಾಗುತ್ತಿದೆ. ಇದಕ್ಕೆ ವಿರೋಧಾಭಾಸವಾಗಿ ಅಭಿವೃದ್ದಿ ಹೊಂದಿದ ರಾಷ್ಟ್ರಗಳಲ್ಲಿಹೃದಯಘಾತ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗುತ್ತಿದೆ. ಆ ದೇಶಗಳಲ್ಲಿನ ಜನ ಸಾಮಾನ್ಯರಲ್ಲಿ ಹೆಚ್ಚಿದ ಜಾಗೃತಿ ಹಾಗೂ ಆರಂಭದವರ್ಷಗಳಲ್ಲೇ ಕೈಗೊಂಡ ಮುನ್ನೆಚ್ಚರಿಕೆಗಳ ಫಲವಾಗಿ ಹಾರ್ಟ್ ಆಟ್ಯಾಕ್ ಹತೋಟಿಗೆ ಬಂದಿದೆ. […]

Read More

Back To Top