ಸಾಮಾಜಿಕ ಜಾಲತಾಣಗಳ ಮೋಹಕ ಜಾಲದ ಸುಳಿಯಲ್ಲಿ

ಸಾಮಾಜಿಕ ಜಾಲತಾಣಗಳ ಮೋಹಕ ಜಾಲದ ಸುಳಿಯಲ್ಲಿ ಹದಿಹರೆಯದವರು ಮಿತ್ರರಿಂದ ದೂರವಾಗಿ ತಮ್ಮನ್ನು ತಾವೇ ಏಕಾಂಗಿತನಕ್ಕೆ ನೂಕಿಕೊಳ್ತಿದ್ದಾರೆ. ಜೀವನ ಹಾಗೂ ಸಾಮಾಜಿಕ ಜಾಲತಾಣಗಳ ಮಧ್ಯೆ ಸಮತೋಲನ ಬೇಕಾಗಿದೆ. ಅತಿಯಾದ ಬಳಕೆ ಏಕಾಂಗಿತನ, ಖಿನ್ನತೆ, ಆತಂಕಗಳಿಗೆ ದೂಡುತ್ತೆ.

ಸಾಮಾಜಿಕ ಜಾಲತಾಣಗಳ ಮೋಹಕ ಜಾಲದ ಸುಳಿಯಲ್ಲಿಇದೋ ಸಾಮಾಜಿಕ ಜಾಲತಾಣಗಳ ಮೆರವಣಿಗೆ ನಡೆದಿದೆ. ಎಲ್ಲ ಒಟ್ಟಾಗಿ ಸುತ್ತುತ್ತಾ ಕುಣಿಯುತ್ತಾ: ಹ್ಹ ಹ್ಹ ಹ್ಹ, ಹ್ಹು ಹ್ಹು ಹ್ಹು, ಹ್ಹಿ ಹ್ಹಿ ಹ್ಹಿ, ಹ್ಹೆ ಹ್ಹೆ ಹ್ಹೆ, ಎನ್ನುತ್ತಿದೆ.
ತಂತ್ರಜ್ಞಾನ ಹೇಳುತ್ತಿದೆ
-ವಿಜ್ಞಾನದ ಜೊತೆಗೆ ನಾನು ಎಲ್ಲಾ ಕಡೆ ನಿಮ್ಮನ್ನು ಆವರಿಸಿಕೊಂಡಿದ್ದೀನಿ. ನಾನಿಲ್ದೇ ನೀವಿಲ್ಲ.
ಮೊಬೈಲ್ ಹೇಳುತ್ತದೆ: ನಾನು ಮೊಬೈಲ್ ರಾಣಿ. ನನ್ನನ್ನ ಪ್ರೀತಿಸಿ ಸದಾ ತಮ್ ಕೆನ್ನೆ ಕಿವಿ ಹತ್ರ. ಇಟ್ಕೊಂಡು ಪ್ರೀತಿಸ್ದೇ ಇರೋವ್ರು ಇಲ್ಯಾರಾದ್ರೂ ಇದ್ರೆ ಕೈ ಎತ್ತಿ. ಹ್ಹ ಹ್ಹ ಹ್ಹ,
ಫೇಸ್‍ಬುಕ್ ಕೂಗುತ್ತಿದೆ: ನಾನು ಫೇಸ್‍ಬುಕ್. ನಿಮ್ಮ ಮುಖಪುಟ ನಾನಿಲ್ದೆ ನೀವಿಲ್ಲ. ಹ್ಹು ಹ್ಹು ಹ್ಹು,
ಇಂಟರ್‍ನೆಟ್ ಓರಲುತ್ತಿದೆ : ನಾನು ಇಂಟರ್‍ನೆಟ್. ನಿಮ್ಮ ಅಂತರ್ಜಾಲ ನಾನೇ ನಿಮ್ಮ ಜೀವಾಳ. ಹ್ಹಿ ಹ್ಹಿ ಹ್ಹಿ,
ಟ್ವಿಟ್ಟರ್ ಕರೆಯುತ್ತಿದೆ: ನಾನು ನಿಮ್ಮ ಪ್ರೀತಿಯ ಟ್ವಿಟ್ಟರ್ ಟಿಪ್ಪಣಿ. ದಿನಾ ನನ್ ನೋಡ್ತೀರಲ್ವಾ. ಹ್ಹೆ ಹ್ಹೆ ಹ್ಹೆ,
ಇನ್ಸ್‍ಟಾಗ್ರಾಮ್ ಆಹ್ವಾನಿಸುತ್ತಿದೆ: ನಾನು ನಿಮ್ಮ ಪ್ರೀತಿಯ ಟ್ವಿಟ್ಟರ್ ಟಿಪ್ಪಣಿ. ದಿನಾ ನನ್ ನೋಡ್ತೀರಲ್ವಾ. ಹ್ಹೆ ಹ್ಹೆ ಹ್ಹೆ,
ಮೆಸೇಜ್ ಕಾಣಿಸುತ್ತಿದೆ: ನಾನು ನಿಮ್ಮ ಪ್ರೀತಿಯ ಟ್ವಿಟ್ಟರ್ ಟಿಪ್ಪಣಿ. ದಿನಾ ನನ್ ನೋಡ್ತೀರಲ್ವಾ. ಹ್ಹೆ ಹ್ಹೆ ಹ್ಹೆ,
ಲಿಂಕ್ಡ್‍ಇನ್ ಅರಚುತ್ತಿದೆ: ಹಲೋ ನಾನು ಲಿಂಕ್ಡ್‍ಇನ್. ಹ್ಯಾಗಿದ್ದೀರಿ?.
ಯೂಟ್ಯೂಬ್ ಹಾಡುತ್ತಿದೆ: ನಾನು ಯೂಟ್ಯೂಬ್. ಪ್ರತೀದಿನ ಎದ್ದಾಗಿನಿಂದ ರಾತ್ರಿ ನಿದ್ದೆ ಮಾಡೋವರೆಗೂ ನಾನ್. ನಿಮಗೆ ಬೇಕೇ ಬೇಕಲ್ವಾ.!
ಸ್ಕೈಪ್ ಬೇಡುತ್ತಿದೆ: ನಾನು ಸ್ಕೈಪ್. ಬನ್ನಿ ಬನ್ನಿ ನನ್ನ ಹೆಚ್ಚು ಬಳಸಿ.
ಫೋರ್ ಸ್ಕ್ವೇರ್‍ಆಹ್ವಾನಿಸುತ್ತಿದೆ: ನಾನು ಫೋರ್‍ಸ್ಕ್ವೇರ್. ಮತ್ತೆ ಯಾವಾಗ ಬರ್ತೀರಿ ನನ್ ಬಳಿ.
ವೆಬ್‍ಸೈಟ್ ರೆಡಿಯಾಗಿ ಕಾಯುತ್ತಿದೆ: ನಾನು ವೆಬ್‍ಸೈಟ್. ನನ್ನಲ್ಲಿ ಅನೇಕ ವೆಬ್‍ಗಳನ್ನು ದಿನಾ ಓಪನ್ ಮಾಡಿ. ಇವುಗಳನ್ನೆಲ್ಲಾ ನೋಡಿ.
ಜೀವನ ಕೇಳುತ್ತೆ: ಅಯ್ಯೋ ಈ ಮಕ್ಕಳು, ಹದಿಹರೆಯದವರು, ಸಾಮಾಜಿಕ ಜಾಲತಾಣಗಳ ಸುಳಿಯಲ್ಲಿ ಸಿಕ್ಕಿ ಬಿಡಿಸಿಕೊಳ್ಳದ ಹಾಗೆ ಒದ್ದಾಡ್ತಿದ್ದಾರಲ್ಲ. ಇವರನ್ನು ಇಲ್ಲಿಂದ ವಾಸ್ತವ ಜೀವನದ ಕಡೆಗೆ ತರೋರು ಯಾರು? ಯಾರು? ಯಾರು?

ಚಿತ್ತಚಾಂಚಲ್ಯ ಉಂಟಾಗುತ್ತದೆ:

“ಏಕಾಂಗಿಯಾಗಿದ್ದಾಗ ಬೇಕಾದಷ್ಟು ಉತ್ತಮ ವಿಚಾರಗಳು ಬರುತ್ತವೆ- ಸ್ವಲ್ಪ ಯೋಚಿಸುವುದರಿಂದ. 15 ನಿಮಿಷ ಫೋನ್ ದೂರವಿಡಿ. ಜೀವನದ ಮುಖ್ಯ ಘಳಿಗೆಗಳಲ್ಲಿ ನೇರ ಭಾಗವಹಿಸಿ, ನೇರ ಪ್ರತಿಕ್ರಿಯಿಸಿ, ಆನಂದಿಸಿ. ಆಗ ಮೊಬೈಲ್ ದೂರವಿಡಿ. ನಮ್ಮೆದುರು ಇರುವ ಜೀವನದ ಇತಿಹಾಸ ನಿರ್ಮಿಸುವ ಬದಲು, ನಾವು ಅದರ ದಾಖಲೀಕರಣ ನಿರ್ಮಾಣದತ್ತ, ಗಮನ ನೀಡುತ್ತಿದ್ದೇವೆ. ನಮಗೆ ಇರುವ ಗಮನದ ಕೇಂದ್ರೀಕರಣ ಇಲ್ಲ. ಇರುವ ಸತತ ಗಮನವನ್ನು, ಸಾಮಾಜಿಕ ಜಾಲತಾಣಕ್ಕೆ ಕೊಟ್ಟರೆ, ಬಹಳಷ್ಟು ಕಡೆ ಗಮನ ಸೆಳೆಯಲ್ಪಟ್ಟು, ಚಿತ್ತಚಾಂಚಲ್ಯ ಉಂಟಾಗುತ್ತದೆ. ಅನೇಕ ಜವಾಬ್ದಾರಿಗಳನ್ನು, ಒಮ್ಮೆಲೇ ಹೊಂದಿದರೆ, ನಮ್ಮ ಮೆದುಳು ಚೆನ್ನಾಗಿ ಕೆಲಸ ಮಾಡುವುದಿಲ್ಲ. ಇದೆಲ್ಲ ವಿಷವಿದ್ದಂತೆ ಎಂದು, ತಜ್ಞರು ಹೇಳುತ್ತಾರೆ.

ನಿಮಗೆ ಬೇಕಾದಾಗ, ಬೇಕಾದಷ್ಟು ವಿಷಯ ಆರಿಸಿಕೊಳ್ಳಿ. ಒಂದು ಕನಿಷ್ಠ ಸಮಯ ನಿಗದಿ ಮಾಡಿ. ಕೆಲಕಾಲ-ಕೆಲಗಂಟೆ-ಕೆಲದಿನ ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದು ನೋಡಿ. ನಮ್ಮ ಸುತ್ತಮುತ್ತ ಪ್ರಕೃತಿ ಗಮನಿಸಿ. ನಸುಕಿನ ಸೂರ್ಯೋದಯ, ಸಂಜೆಯ ಸೂರ್ಯಸ್ತ, ಗಿಡಮರಗಳ ಮೇಲಿನ ಹಕ್ಕಿಗಳ ಚಿಲಿಪಿಲಿ, ಗಾಳಿಯ ಸದ್ದು, ಏನೆಲ್ಲಾ ನಮ್ಮ ಸುತ್ತ ಇವೆ. ಒಮ್ಮೆ ಕಣ್ಣು-ಮೂಗು ಅರಳಿಸಿ ಸುತ್ತಮುತ್ತ ನೋಡಿ.

ಅತಿಯಾದ ಬಳಕೆ ಏಕಾಂಗಿತನ ಖಿನ್ನತೆ, ಆತಂಕಗಳಿಗೆ ದೂಡುತ್ತೆ:

ಹದಿಹರೆಯದವರ ಸ್ಮಾರ್ಟ್‍ಫೋನ್ ಸಂಪರ್ಕ ಶೇಕಡಾ 95 ಮುಟ್ಟಿದ್ದರೆ, ಇವರಲ್ಲಿ ಶೇಕಡಾ 50 ಜನ ಆನ್‍ಲೈನ್‍ಗೆ ಜೋತುಬಿದ್ದಿದ್ದಾರೆ. ತಜ್ಞರು ಹೇಳುವಂತೆ, ಅಂತರ್ಜಾಲದ ಅತಿಯಾದ ಬಳಕೆಯಿಂದ, ಶೇಕಡಾ 10 ಹದಿಹರೆಯದವರು, ಸಮಸ್ಯೆ ಅನುಭವಿಸುತ್ತಿದ್ದು, ಇವರ ಭಾವನಾತ್ಮಕ ಬೆಳವಣಿಗೆ ಮೇಲೆ, ಇದು ಕೆಟ್ಟ ಪ್ರಭಾವ ಬೀರುತ್ತದೆ. 2012ರಲ್ಲಿ ನೇರ ಭೇಟಿ ಖುಷಿ ಅನುಭವಿಸುತ್ತಿದ್ದ ಮಕ್ಕಳು-ಹದಿಹರೆಯದವರಲ್ಲಿ, 2018ರಲ್ಲಿ ಶೇಕಡಾ 32 ಜನ, ಅಂತರ್ಜಾಲಕ್ಕೆ ಮಾರು ಹೋಗಿದ್ದಾರೆ. ಶೇಕಡಾ 81 ಜನ ಹದಿಹರೆಯದವರು, ಮಿತ್ರರಿಂದ ದೂರವಾಗಿ ತಮ್ಮನ್ನು ತಾವೇ ಏಕಾಂಗಿತನಕ್ಕೆ ನೂಕಿಕೊಳ್ತಿದ್ದಾರೆ. ಹೆಚ್ಚು ಬಳಕೆ ಖಿನ್ನತೆ, ಆತಂಕಗಳಿಗೆ ದೂಡುತ್ತೆ.

ಮಾದಕ ಪದಾರ್ಥ ಹಿಡಿತಕ್ಕೆ ಸಿಕ್ಕ, ಮಾದಕ ದ್ರವ್ಯ ವ್ಯಸನಿಗಳಂತೆಯೇ ಒಂದು ಹಂತದಲ್ಲಿ ಇವರೂ, ಅಪಾರ ನೋವು-ಕಷ್ಟ ಅನುಭವಿಸಬೇಕಾಗುತ್ತದೆ. ಡೋಪಾಮೈನ್‍ನ ಏರಿಳಿತ ತಕ್ಷಣಕ್ಕೆ ಖುಷಿ ತಂದರೂ, ಮುಂದೆ ಬರುತ್ತೆ ಮಾರಿ ಹಬ್ಬ. ಯಾವ ಮಗು ಪ್ರಪಂಚದೊಂದಿಗೆ ಪ್ರತಿಕ್ರಿಯಿಸೋದಿಲ್ಲವೋ, ಪಠ್ಯಂತರ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲವೋ, ಅವರು ಸಾಮಾಜಿಕವಾಗಿ ಏಕಾಂಗಿ ಆಗ್ತಾರೆ.ನಿಮ್ಮ ಮಕ್ಕಳ ವಿಶೇಷವಾಗಿ, ಹದಿಹರೆಯದವರ ನಿದ್ರಾಶೈಲಿ ನೋಡಿ. ಕಡಿಮೆ ನಿದ್ರೆ ಅಂದರೆ 3 ಗಂಟೆಗಿಂತಲೂ ಕಡಿಮೆ. ಹೀಗಾಗಲು ಅಂತರ್ಜಾಲದ ಹೆಚ್ಚು ಬಳಕೆ ಕಾರಣೀಭೂತನಾಗಿರಬಹುದು.

ಏನೂ ಯೋಚಿಸದೇ ಪ್ರತೀದಿನ ಅನೇಕ ಬಾರಿ Face Book, Instagram ಕ್ಲಿಕ್ ಮಾಡ್ತಿದೀರಾ?. ನೀವು ಅರಿತಿದ್ದಕ್ಕಿಂತ ಹೆಚ್ಚು, ಸಾಮಾಜಿಕ ಜಾಲತಾಣಕ್ಕೆ ವ್ಯಸನಿಯಾಗಿದ್ದಾರಾ? ಹೆಚ್ಚು ಸ್ನೇಹಿತರನ್ನು ಅಪರಿಚಿತರನ್ನು ಸಂಪರ್ಕಿಸಲು ಅನುಕೂಲ. ಆದರೆ ಇದು ಅನೇಕ ಜನರ ಜೀವ ತೆಗೆದಿದೆ ನೆನೆಪಿಡಿ. ಬಹಳ ಸಮಯ ಇದನ್ನೇ ನೋಡ್ತಿದ್ದರೆ, ನಿಜವಾದ ವಾಸ್ತವಿಕತೆ ಮರೆಯಲಾರಂಬಿಸ್ತೀರಿ. ಇಡೀ ದಿನ ಮಾಡಲು, ಕಲಿಯಲು, ಓದಲು, ಬೇಕಾದಷ್ಟು ಕೆಲಸಗಳಿವೆ. ಮುಖ ನೋಡಿ ನೇರ ಮಾತಾಡುವ ಭಾವನೆ, ಇದರಿಂದ ಬರೋಲ್ಲ. ನಿಮ್ಮ ಹತ್ತಿರದವರೊಂದಿಗೆ ಆಪ್ತತೆಯಿಂದ ಮಾತಾಡಿ. ಫೋಟೋ ನೋಡಿ ಇಷ್ಟಪಡೋದು, ಸ್ಥಾನಕ್ಕಾಗಿ ಹಂಬಲಿಸಿ, ಹಾತೊರೆದು, ಬೆನ್ನುಹತ್ತಿ, ಎಣಿಸುವುದು ಬೇಡ. ಸಾಕು. ಸ್ನೇಹಿತರನ್ನು ಮನೆಗೆ ಕರೆದು ಒಟ್ಟಾಗಿ ತಿಂಡಿ ತಿನ್ನಿ.

ಸ್ನೇಹ, ಸಾಮಾಜಿಕ ತಾಣಕ್ಕಿಂತ ದೊಡ್ಡದು:

ಸ್ನೇಹ, ಸಾಮಾಜಿಕ ತಾಣಕ್ಕಿಂತ ದೊಡ್ಡದು. ಸಂಖ್ಯೆ ಮುಖ್ಯ ಅಲ್ಲ. ಗುಣಮಟ್ಟ ಮುಖ್ಯ. ಜನರನ್ನು ಜೀವಂತ ಜನರು ಎಂದು ಅರಿತು ನೋಡಿ. ಇತರರು ಏನು ಮಾಡ್ತಿದಾರೆ ನೇರವಾಗಿ ಗಮನಿಸಿ. ವ್ಯಕ್ತಿತ್ವ ವಿಕಸನದ ಮೇಲೆ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣದ ಪ್ರಭಾವ ಒಳ್ಳೆಯದೇ-ಕೆಟ್ಟದ್ದೇ? ಪರವಾಗಿ, ಗಮನಿಸಿದರೆ ನಮಗೆ ನೂರಾರು ಸ್ನೇಹಿತರು. ನೂತನ ಪರಿಚಯ. ಕುಳಿತಲ್ಲೇ ಆಗುತ್ತೆ ಇದರಿಂದ. ನಮ್ಮ ಊರಿನ, ರಾಜ್ಯದ, ದೇಶದ, ಹೊರದೇಶಗಳ ಅಪರಿಚಿತ ವ್ಯಕ್ತಿಗಳು ತಕ್ಷಣ ಮಿತ್ರರಾಗ್ತಾರೆ. ನಮ್ಮ ಅವರ ಅನಿಸಿಕೆ, ಅಂತರ್ಜಾಲದ ಮೂಲಕ Face Book, Twitter, Message ಮೂಲಕ ಕ್ಷಣಾರ್ಧದಲ್ಲಿ ಹರಡಬಹುದು.

ನಮ್ಮ ಆಸೆ-ಆಕಾಂಕ್ಷೆಗಳು ಹವ್ಯಾಸಗಳನ್ನು, ಪರಸ್ಪರ ಹಂಚಿಕೊಳ್ಳಬಹುದು. ನಮ್ಮ ಸಾಧನೆ ಬೇರೆಯವರಿಗೆ ತಿಳಿಸಿ, ಅವರ ಸಾಧನೆ ಬಗ್ಗೆ ನಾವು ಅರಿಯಬಹುದು.
ನಮ್ಮಂಥ ಮಕ್ಕಳು-ಹದಿಹರೆಯದವರ ಜೊತೆ ಮಾತಾಡೋಕೆ, ನಮ್ಮ ಅಪ್ಪಾ-ಅಮ್ಮ, ಅಜ್ಜಾ-ಅಜ್ಜಿಗೆ ಸಮಯ-ಆಸಕ್ತಿ ಇರೋಲ್ಲ. ಅಪ್ಪನಿಗೆ ಕೆಲಸ-ಪೇಪರ್ ಓದು, ಸ್ನೆಹಿತರ ಜೊತೆ ಚರ್ಚೆ. ಅಮ್ಮನಿಗೆ ಇಡೀದಿನ ಸೀರಿಯಲ್ ನೋಡೋಕೇ ಸಮಯ ಸಾಲದು!. ಅಜ್ಜಿಗೆ ಎಲೆ-ಅಡಿಕೆ, ನಿದ್ರೆ-ಹರಟೆ. ಅಜ್ಜನಿಗೆ ರಾಜಕೀಯ, ಕಾಹಿಲೆ, ಹಳೆ ನೆನಪುಗಳ ಮೆಲುಕು!.

ನಮ್ಮ ಜೊತೆ ಮಾತಾಡೋಕೆ ಯಾರಿದಾರೆ? ನಮ್ಮ ಅಭಿಪ್ರಾಯ ಹಂಚಿಕೊಳ್ಳೋಕೆ ಮನೇಲಿ ಯಾರೂ ಸಿಗೋಲ್ಲ. ಬಿಡುವಿದ್ದಾಗ ಸ್ನೇಹಿತರನ್ನು ನೋಡೋಕೆ, ಹೊರಗೆ ಹೋಗೋಕೆ, ನಮ್ಮನೇಲಿ Free ಆಗಿ ಬಿಡೋಲ್ಲ. ಸಿನಿಮಾಗೆ ಹೋದ್ರೆ ದುಡ್ಡು ಬೇಕು. ಹೋಟೆಲ್ ತಿರುಗಾಡೋಕೆ ದುಡ್ಡು ಬೇಕು. ಆದರೆ ಒಮ್ಮೆ ಹಠ ಹಿಡಿದು ಮೊಬೈಲ್ ಕೊಂಡರೆ, ಮನೇಲೇ ಇರೋ ಕಂಪ್ಯೂಟರ್-ಇಂಟರ್‍ನೆಟ್ ನಮಗೆ Free. ರೂಂ ಸೇರಿಕೊಂಡರೆ ನಮಗೆ ಬೇಕಾದ ವೆಬ್‍ಸೈಟ್ ತಗೀಬಹುದು. ನಮ್ಮ ದೇಶದ, ಪ್ರಪಂಚದ ಎಲ್ಲ ವಿಷಯಗಳ ಬಗ್ಗೆ ಕ್ಷಣಾರ್ಧದಲ್ಲೇ ಮಾಹಿತಿ ಸಿಗುತ್ತೆ. ನಮ್ಮ ಸಾಮಾನ್ಯ ಜ್ಞಾನ ಹೆಚ್ಚುತ್ತೆ. ಮಾತಿನಲ್ಲಿ ನಮ್ಮ ಸಮಯ ಹಾಳಾಗೋಲ್ಲ. ಮನೆ ಹೊರಗೆ ತಿರುಗಾಡೋಕೆ, ಬೇಕಾದಂತೆ ಸುತ್ತೋಕೆ, ನಮಗೆ ನಮ್ಮನೇವ್ರು ಅನುಮತಿ ಕೊಡೋಲ್ಲ. ಮನೇಲೇ ರೂಮ್ನಲ್ಲೇ ಇದ್ದು ಏನಾದ್ರೂ ಮಾಡ್ಕೊಳ್ಳಿ ಅಂತಾರೆ. ಅದಕ್ಕೇ ನಾವು You Tubeನಲ್ಲಿ ಹಾಡು ಕೇಳ್ತೀವಿ, ಚಿತ್ರ ನೋಡ್ತೀವಿ. Face Book, Twitterಗಳಲ್ಲಿ ನಮ್ ಮಾಹಿತಿ ಹಾಕಿ Likes, Following ಪಡೀತೀವಿ. ಖುಷಿ ಪಡೀತೀವಿ. ವಿಜ್ಞಾನ-ತಂತ್ರಜ್ಞಾನಗಳ ಆಭಿವೃದ್ಧಿಯಿಂದ Smart Phone ಸಿಕ್ಕಿದೆ. ಇದರಿಂದ ದೂರದೂರದ Friends ನಮಗೆ ಕೂತಲ್ಲೇ ಸಿಕ್ತಾರೆ.

ಸಾಮಾಜಿಕ ಜಾಲತಾಣಗಳ ಮೋಹಕ ಜಾಲದ ಸುಳಿಯಲ್ಲಿಅಜ್ಜನ ಪೂಜೆ, ಅಜ್ಜಿಯ ಮಂತ್ರ ನಮಗೆ ಬೇಕಿಲ್ಲ. ಅಮ್ಮನ Serial, ಅಪ್ಪನ ಪೇಪರ್ ಓದು, ರಾಜಕೀಯ ಚರ್ಚೆ, ಶೇರ್-ಆಸ್ತಿ ಮಾತುಗಳಲ್ಲಿ ನಮಗೆ ಆಸಕ್ತಿಯಿಲ್ಲ. ಅವೆಲ್ಲ ಮಹಾ ಬೋರಿಂಗ್. ಅವರೆಲ್ಲ ಹಳೇ ಕಾಲದವರು. ನಾವು 21ನೇ ಶತಮಾನದವ್ರು ಗೊತ್ತಾ!? ಕೆಲಸ ಮಾಡುವ ವೃತ್ತಿಪರರಿಗೆ ಸ್ಮಾರ್ಟ್‍ಫೋನ್, ಲ್ಯಾಪ್‍ಟಾಪ್ ಬೇಕು. ಸಂಶೋಧನಾ ಕೆಲಸಕ್ಕೆ, ಸಾಮಾಜಿಕ ಮಾಧ್ಯಮಗಳು ಬೇಕು. ದಾಖಲೆಗಳನ್ನು ಬರೆಯಲು, ಮಿಂಚಂಚೆ ಮೂಲಕ ಸಂವಾದಕ್ಕೆ, ಬ್ಯಾಂಕಿನ ಕೆಲಸಕ್ಕೆ ಇವು ಬೇಕು. ಶಾಲಾ ಮಕ್ಕಳಿಗೆ, ಅವರ ಶಾಲಾ ಯೋಜನೆಯ ಬಗ್ಗೆ ಸಂಶೋಧನೆಗೆ, ಮಾಹಿತಿಗಾಗಿ, ಹಿರಿಯ ಪ್ರಭಾವಿಗಳ ಜೊತೆ ಚರ್ಚೆಗೆ ಇವು ಬೇಕು. ಮಿಂಚಂಚೆ ಶಾಲಾ ಯೋಜನೆಗಳ, ಕಂಪ್ಯೂಟರ್ ಪ್ರತಿ ತೆಗೆಯಲು, ಶಿಕ್ಷಣದ ಅರ್ಜಿಗಳನ್ನು ತೆಗೆಯಲು, ಆಟಗಳ ಮಾಹಿತಿಗೆ ಇವು ಬೇಕು. ವೃತ್ತಿಪರತೆ ಹಾಗೂ ಶೈಕ್ಷಣಿಕ ವಾತಾವರಣಕ್ಕೆ ಇವು ಬೇಕು.

ಜೀವನ ಹಾಗೂ ಸಾಮಾಜಿಕ ಜಾಲತಾಣಗಳ ಮಧ್ಯೆ ಸಮತೋಲನ ಬೇಕಾಗಿದೆ:

ಜೀವನ, ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣಗಳ ಮಧ್ಯೆ ಸರಿಯಾದ ಸಮತೋಲನ ಬೇಕಾಗಿದೆ. ಇವತ್ತು 12 ವರ್ಷದವರೂ ಸ್ಮಾರ್ಟ್‍ಫೋನ್ ಬಳಸುತ್ತಾರೆ. ಇವತ್ತು 14 ವರ್ಷಗಳ ಕೆಳಗಿನ ಮಕ್ಕಳ ಹೆಸರಲ್ಲೂ, ಸಾಮಾಜಿಕ ಜಾಲತಾಣಗಳಾದ Face Book, Investigator, ಅಪ್ಪನ Twitter ಖಾತೆಗಳಿವೆ. ಶೇಕಡಾ 50ರಷ್ಟು ಮಕ್ಕಳು ಈ ಜಾಲದ ಹಿಡಿತದಲ್ಲಿದ್ದಾರೆ. ಹಿರಿಯರ ಮೇಲ್ವಿಚಾರಣೆಯಿಲ್ಲದೇ, ಈ ಮಕ್ಕಳು ಹುಡುಕುವ ವೆಬ್‍ಗಳಲ್ಲಿ ಯಾವ ರೀತಿ ಮಾಹಿತಿ ಸಿಗುತ್ತೆ? ಅದನ್ನು ವೀಕ್ಷಿಸಿ ಪರಸ್ಪರ ಹಂಚಿಕೊಂಡು ಯಾವ ರೀತಿ ಚರ್ಚಿಸುತ್ತಾರೋ, ಅ ದೇವರೇ ಬಲ್ಲ!. ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮಗಳ ಅಪಾರ ಪ್ರಭಾವ ಶಕ್ತಿಯುತವಾಗಿ ಬೆಳೆದಿದೆ.

ಹದಿಹರೆಯದವರು ಸ್ಮಾರ್ಟ್‍ಫೋನ್‍ಗಳು ಹಾಗೂ ಸಾಮಾಜಿಕ ಮಾಧ್ಯಮ ಪುಟಗಳಿಂದ, ತಮ್ಮದೇ ಆದ ಪ್ರತ್ಯೇಕ ಸಮಾನಾಂತರ ಜೀವನ, ನಡೆಸೋ ಹಾಗಾಗಿದೆ. ಇದು ಮಾನಸಿಕ ಆರೋಗ್ಯದ ಮೇಲೆ ಅಪಾರವಾಗಿ ಕೆಟ್ಟ ಪರಿಣಾಮ ಬೀರ್ತಿದೆ ಅಂತ ಮಾನಸಿಕ ತಜ್ಞರು ಕೂಗಿ ಹೇಳ್ತಿದಾರೆ. ಮೊಬೈಲ್ ಕೊಡಿಸಲಿಲ್ಲ, ಇಂಟರ್‍ನೆಟ್ ಹಾಕಿಸಲಿಲ್ಲ ಅಂತ, ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ. ಅಪ್ರಾಪ್ತ ವಯಸ್ಸಿನವರು ಓದ್ಲಿಲ್ಲ, ಬರೀ Mobile ಹಾಗೂ T.V., ವೀಕ್ಷಣೆ, Video Games ಆಟ ಆಡ್ತಾ, ಓದ್ಲಿಲ್ಲ. ಪಾಸಾಗಲಿಲ್ಲ, ದಡ್ಡರಾಗಿದ್ದಾರೆ ಅಂತ, ಅಪ್ಪಾ-ಅಮ್ಮ ಬೈದರೆ, ನೇಣು ಹಾಕಿಕೊಂಡವರು, ಬೆಂಕಿ ಹಚ್ಚಕೊಂಡವ್ರು, ರೈಲಿಗೆ ತಲೆ ಕೊಟ್ಟವರು ಎಷ್ಟೋ ಜನ. ತಂತ್ರಜ್ಞಾನವನ್ನು ನಮ್ಮ ಒಳತಿಗೆ, ಲಾಭಕ್ಕೆ ಬಳಸಬೇಕು. ಹಾಳಾಗಲು ಇದು ಬೇಕೇ?!.

ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮದ ಮಧ್ಯೆ, ಸರಿಯಾದ ಸಮತೋಲನ ಮಾಡುವುದು ಬಹಳ ಕಷ್ಟ. ಊಟದ ಮೇಜಿನ ಮೇಲೂ, ಶೌಚಗ್ರಹ-ಸ್ನಾನದ ಕೋಣೆಯಲ್ಲೂ ಫೋನ್ ಬಳಸುತ್ತೇವೆ. ಕೆಲಸದ ಸಂದರ್ಭದಲ್ಲಿ, ವೈಯಕ್ತಿಕ ಸಂದೇಶ ಕಳಿಸ್ತೀವಿ. ಕ್ಲಾಸ್‍ನಲ್ಲಿ ಪಾಠ ನಡೆದಾಗ, ವೀಡಿಯೋ ಗೇಮ್ ಆಡ್ತೀವಿ. ಮುಖಕ್ಕೆ ಮುಖ ಕೊಟ್ಟು ನಮ್ಮೊಂದಿಗೆ ಯಾರಾದರೂ ಮಾತಾಡುವಾಗಲೂ ನಾವು ಫೋನ್‍ನಲ್ಲಿ ಮಾತಾಡ್ತಿರ್ತೀವಿ. ಸಾರ್ವಜನಿಕ ಸ್ಥಳದಲ್ಲಿ, ಜೋರಾಗಿ ಫೋನ್‍ನಲ್ಲಿ ಮಾತಾಡ್ತೀವಿ. ವಾಹನ ನಡೆಸುವಾಗ, ಮೊಬೈಲ್ ಮಾತಾಡಿದರೆ ಶಿಕ್ಷೆ ಎಂದರೂ ಮಾತಾಡ್ತಾರೆ. ಇನ್ನೊಬ್ಬರ ಮಿಂಚಂಚೆ, ಬ್ಯಾಂಕ್ ಲಕ್ಕ, ಕ್ರೆಡಿಟ್-ಡೆಬಿಟ್ ಕಾಡ್‍ಗಳನ್ನು, ಹಣವನ್ನು, ಅಪಹರಿಸಲು ಸಾಮಾಜಿಕ ತಾಣಗಳ ಖಾತೆಗಳನ್ನು, ಕದಿಯಲು ತಂತ್ರಜ್ಞಾನ ಬಳಸ್ತಾರೆ.

ಸಾಮಾಜಿಕ ಮಾಧ್ಯಮವನ್ನು, ನಮ್ಮ ಒಳಿತಿಗೆ ಬಳಸಬೇಕು:

Mobile-in-darknessನಮ್ಮನ್ನ ನಾವು ನಿಯಂತ್ರಿಸಲು, ವಿದ್ಯಾರ್ಥಿಗಳು ಹಾಗೂ ಮಕ್ಕಳನ್ನು ನಿಯಂತ್ರಿಸಲು, ನಾವು ಸೋತಿದ್ದೇವೆ. ನಮ್ಮ ಸುತ್ತ ಅಪಾರ ತಂತ್ರಜ್ಞಾನ ಹರಡಿದೆ. ನಾವೆಲ್ಲ ಪ್ರಜ್ಞಾಪೂರ್ವಕ, ಪ್ರಯತ್ನ ಮಾಡಿ, ಸ್ವಯಂ ನಿಯಂತ್ರಣ ಹಾಕಿಕೊಂಡು, ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮವನ್ನು, ನಮ್ಮ ಒಳಿತಿಗೆ ಬಳಸಬೇಕು. ನಮ್ಮನ್ನು ಜ್ಞಾನ ಹಾಗೂ ಇತ್ಯಾತ್ಮಕ ಮಾಹಿತಿಗಳಿಂದ, ಸಂಪನ್ನ ಮಾಡಿಕೊಳ್ಳಲು, ತಂತ್ರಜ್ಞಾನದ ಪರಿಪೂರ್ಣ ಸಮತೋಲನ ಮಾಡಬೇಕು. ಈಗ ಸಂದರ್ಭದ ಬಗ್ಗೆ ಮಕ್ಕಳು ಪ್ರಜ್ಞೆ ಬೆಳೆಸಿಕೊಳ್ಳುವ ಸಮಯ. ಈ ಸಮತೋಲನದ ಬಗ್ಗೆ, ನಾವು ಅರಿವು-ಜಾಗ್ರತಿ ಮೂಡಿಸಬೇಕು. ಮಕ್ಕಳು ಚೆನ್ನಾಗಿ ಓದಬೇಕು, ಬರೀಬೇಕು. ಸ್ಮರಣೆ-ಏಕಾಗ್ರತೆ ಹೆಚ್ಚಿಸಿಕೊಳ್ಳಲು, ಅವರ ಗುರಿ ಸಾಧಿಸಲು, ಅವರ ಮನಸ್ಸು ಅತ್ತಿತ್ತ ಬೇಡದ ಕಡೆ ಚಲಿಸದಂತೆ, ನಿಯಂತ್ರಣ ಹಾಕಿ.

ಸಮಯ ಪೋಲಾಗುವುದನ್ನು, ಮಕ್ಕಳು ನಿದ್ರಾಹೀನತೆ ಹಾಗೂ ನಿದ್ರಾ ಭಂಗಗಳಿಂದ ಬಳಲದಂತೆ, ಮಾನಸಿಕವಾಗಿ ಖಿನ್ನತೆ, ಅತಂಕ, ಹೆದರಿಕೆ, ಮಾನ-ಜೀವ-ಹರಣದಿಂದ ಪಾರಾಗಲು ನಾವು ನೀವು ಎಲ್ಲರೂ ಎಚ್ಚರವಹಿಸಬೇಕು. ಅವರಂತೆ ನಾನಿಲ್ಲ ಅಂದು ಹೋಲಿಸಿಕೊಳ್ಳಬೇಡಿ. ನೀವು ನೋಡಿದ ಆ ಛಾಯಾಚಿತ್ರಗಳು ಅವರ ಜೀವನದ ಅತ್ಯುತ್ತಮ ಕ್ಷಣಗಳ ಕ್ಲಿಪ್ಸ್ ಇರಬಹುದು. ಅದು ಅವರ ಅಪಾರ ಪ್ರಯತ್ನ-ಸಾಧನೆಗಳ Highlight reel ಇರಬಹುದು. ನೀವು ನೋಡಿದ ತಕ್ಷಣ, ಹಪಹಪಿಸಿ, ತಕ್ಷಣ ಅವರಂತೆ ಆಗಲು ಸಾಧ್ಯವಿಲ್ಲ ಎಂಬ ವಾಸ್ತವತೆ, ಅರಿತುಕೊಳ್ಳಿ. ಸತ್ಯ ಅರಿಯಿರಿ.  ನೋಡೋ ಪ್ರತೀ ವ್ಯಕ್ತಿ, ಅವರ ಜೀವನದಲ್ಲಿ, ಅನೇಕ ಪರೀಕ್ಷೆ-ಗೊಂದಲ-ಏರಿಳಿತ ಕಂಡಿರ್ತಾರೆ. ಅವರ ಜೀವನ ಕಾಲದ, ಉತ್ತಮ ಘಳಿಗೆಯನ್ನು, ನಿಮ್ಮ ಇದುವರೆಗಿನ ಇಡೀ ಜೀವನಕ್ಕೆ ಹೋಲಿಸಿಕೊಂಡು ಮರುಗಬೇಡಿ-ಕರುಗಬೇಡಿ.

ಅವರಂತೆ ನೀವಾಗಲು, ಮೊದಲು ಚೆನ್ನಾಗಿ ಓದಿ. ಒಳ್ಳೆಯ ಕೆಲಸ ಸಂಪಾದಿಸಿ. ಮುಂದಿನ ನಿಮ್ಮ ಇಡೀ ಜೀವನದಲ್ಲಿ, ಸಾಮಾಜಿಕ ಜಾಲತಾಣ ನೋಡಲು, ನಿಮಗೆ ಬೇಕಾದಷ್ಟು ಸಮಯವಿದೆ. ಬೇರೆಯವರನ್ನು ಮಾಡಲ್ ಆಗಿ ನೋಡುವುದಕ್ಕಿಂತ ನೀವೇ ಮುಂದೆ ಆ ತರಹ ಮಾಡಲ್ ಆಗಲು ಪ್ರಯತ್ನಿಸಿ. ಬೆಳಗಿನ 5 ನಿಮಿಷ, ಊಟದ ಸಮಯದ 15 ನಿಮಿಷ, ರಾತ್ರಿ ಮಲಗುವ ಮೊದಲು 20 ನಿಮಿಷ, ಹೀಗೆ ನಿಮ್ಮ ಒಟ್ಟೂ ವೀಕ್ಷಣಾ ಸಮಯ 1 ದಿನಕ್ಕೆ 40 ನಿಮಿಷ. ಈ ಸಮಯದಲ್ಲಿ ನಿಮ್ಮ ಪುಸ್ತಕದ ಒಂದು ಅಧ್ಯಾಯ ಓದಿ ಬರೆದು ಬಾಯಿಪಾಠ ಮಾಡಬಹುದು. ನಿಮ್ಮ ಜೀವನದ ದೊಡ್ಡ ಹಾಗೂ ಮುಖ್ಯ ಗುರಿ ಸಾಧಿಸಲು, ದಿನಾ ಹೆಚ್ಚು ಸಮಯ ವಿನಿಯೋಗಿಸಿ.

ಮನಸ್ಸು ಕೇಂದ್ರೀಕರಣವಾಗುವುದು ಕಷ್ಟ. ಸದಾ ಅತ್ತಿತ್ತ ಹೊಯ್ದಾಡುವ ಚಿತ್ತಚಾಂಚಲ್ಯತೆ ಸಾಕು ಮಾಡಿ. Project ಮಾಡುವಾಗ, 2 ಸೆಕೆಂಡು ಬರುವ ಮೊಬೈಲ್‍ನ ಸಂದೇಶ ಗಮನಿಸಲು, 20 ಸೆಕೆಂಡು ಹಾಗೂ ವಾಪಸ್ ಬರಲು 20 ಸೆಕೆಂಡು, ಹೀಗೆ ಒಟ್ಟೂ 40 ಸೆಕೆಂಡು ಹಾಳಾಗುತ್ತೆ. Project ಮಾಡುವಾಗ, ಅಂತರ್ಜಾಲದ, ಬೇಡದ ಎಲ್ಲ ಸಾಮಾಜಿಕ ತಾಣಗಳು ಹಾಗೂ ವೆಬ್‍ಗಳನ್ನು ಮುಚ್ಚಿಬಿಡಿ. ಹೋಗಿ ನೋಡಿ ಬರಲು 15 + 15 ನಿಮಿಷ ಹಾಳಾಗುತ್ತೆ.ನೀವು ಎಷ್ಟು likes ಪಡೆದಿದೀರಿ ಅನ್ನೋ ಬಗ್ಗೆ ಚಿಂತಿಸಬೇಡಿ. ನಿಮ್ಮ ಆತ್ಮನಂಬಿಕೆ ಮುಖ್ಯ. ಬೇರೆಯವರ ಒಪ್ಪಿಗೆ ನಂತರ. ನಿಮ್ಮ ಪ್ರಯತ್ನ ನೀವೇ ಮಾಡಿ. ಮೊದಲು ನಿಮ್ಮನ್ನ ನೀವು ಮೆಚ್ಚಿಕೊಳ್ಳಿ. ಪ್ರತಿಯೊಬ್ಬರ like ಗಮನಿಸುತ್ತಾ ಹೋದರೆ ಸಮಯ ಹಾಳು. ನಿಮ್ಮ ಚಿತ್ರ-ವಿಷಯದ ಬಗ್ಗೆ ನೀವೇ ಮೆಚ್ಚಿದಲ್ಲಿ ಸಂತಸಪಡಿ.

Also watch our video: ಹವ್ಯಾಸಗಳು ಎಂದರೇನು? ಹವ್ಯಾಸಗಳ ವಿಧಗಳು ಯಾವುವು? ಹವ್ಯಾಸಗಳು ನಮ್ಮ ಜೀವನಕ್ಕೆ ಎಷ್ಟು ಮುಖ್ಯ?

ಊಟದ ಮೇಜಿನ ಮೇಲೆ, ಮಲಗುವ ಕೋಣೆಯಿಂದ ಮೊಬೈಲ್ ಅಂತರ್ಜಾಲ ಎಲ್ಲ ದೂರವಿಡಿ:

mobile-talkನಿಮಗಿರುವ ಜೀವನದ ಎಲ್ಲ ವಿಭಾಗಗಳನ್ನೂ, ಗಮನಿಸಿ-ಸುಧಾರಿಸಿ-ಸಂತಸಪಡಿ-ತೃಪ್ತಿ ಹೊಂದಿ. ನಿಮ್ಮ ಜೀವನದಲ್ಲಿ ನಿಮ್ಮ ನಿಜವಾದ ಪಾತ್ರ ಅರಿತು, ಜವಾಬ್ದಾರಿಯಿಂದ ನಿರ್ವಹಿಸಿ. ಗುರಿ ಇಟ್ಟುಕೊಂಡು ಕೆಲಸ ಮಾಡಿ. ನಂತರ ಬಿಡುವಿನ ಸಮಯದಲ್ಲಿ 1 ನಿಮಿಷ ನಿಮ್ಮ ಸ್ಥಾನ ಗಮನಿಸಿ. ನಿಮ್ಮನ್ನು ಪ್ರೀತಿಸುವವರಿಗೆ, ಕಾಳಜಿ ಕೊಡುವವರಿಗೆ, ಸಮಯ ಕೊಡಿ. ಹಿರಿಯರೂ ಊಟದ ಮೇಜಿನ ಮೇಲೆ ಸಂದೇಶ, ವಾಟ್ಸ್‍ಆಪ್ ಗಮನಿಸುವುದನ್ನು ನಿಲ್ಲಿಸಿ. ತಂದೆ-ತಾಯಿ-ಮಕ್ಕಳು ಊಟದ ಮಧ್ಯೆ ಊಟ ಅನುಭವಿಸಿ, ಖುಷಿಯಾಗಿ ನಿಮ್ಮ ವಿಚಾರ ಅನುಭವಗಳನ್ನು ಆತ್ಮೀಯತೆಯಿಂದ ಹಂಚಿಕೊಂಡು ಆ ಮಜಾ-ಆನಂದ ಆಮೇಲೆ ವಿಶ್ಲೇಷಿಸಿ.

ಮಲಗುವ ಕೋಣೆಯಿಂದ ಮೊಬೈಲ್ ಅಂತರ್ಜಾಲ ಎಲ್ಲ ದೂರವಿಡಿ. ಕಂಪ್ಯೂಟರ್, ಅಂತರ್ಜಾಲ ಕುಟುಂಬ ಕೋಣೆ ಅಥವಾ ಅಡಿಗೆ ಮನೇಲಿ ಇಡಿ. ಇದರಿಂದ ಮಕ್ಕಳ ಚಟುವಟಿಕೆಗಳ ಬಗ್ಗೆ ನಿಮಗೆ ತಿಳಿಯುತ್ತದೆ.ಆಗಾಗ ಪಾಲಕರ ಮೇಲ್ವಿಚಾರಣೆ ಇದ್ದರೆ, ಮಕ್ಕಳು ಅವರ ವಯಸ್ಸಿಗೆ ಬೇಡದ, ಲೈಂಗಿಕ ಚಿತ್ರಗಳು, ನಗ್ನ ಚಿತ್ರಗಳು ಇವುಗಳನ್ನು ನೋಡುವುದಿಲ್ಲ. ಹದಿಹರೆಯ ಕುತೂಹಲ, ಅಪರಿಚಿತರೊಂದಿಗೆ ಸ್ನೇಹ-ಪ್ರೇಮ-ಅಪಾಯಗಳತ್ತ ಬಾಲಕಿ-ಬಸುರಿಯರನ್ನು ಸೃಷ್ಟಿಸುವತ್ತ, ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕುಟುಂಬದ್ದು.

Also Read: ನೋಮೋಪೋಬಿಯಾ – 21ನೆಯ ಶತಮಾನದ ಹೊಸ ರೋಗವೇ?

ಎನ್.ವ್ಹಿ ರಮೇಶ್,ಮೈಸೂರು
ಮೊ:98455-65238

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!