ಕರ್ನಾಟಕದ ಹೆಮ್ಮೆಯ ಬ್ರಾಂಡ್‌ ಅಮೃತ್‌ ನೋನಿಗೆ ಭಾರೀ ಮೆಚ್ಚುಗೆ

ಕರ್ನಾಟಕದ ಹೆಮ್ಮೆಯ ಬ್ರಾಂಡ್‌ ಅಮೃತ್‌ ನೋನಿಗೆ ಭಾರೀ ಮೆಚ್ಚುಗೆ – ಕ್ರಿಕೆಟಿಗ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಸೂರ್ಯಕುಮಾರ್‌ ಯಾದವ್‌ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ “ಅಮೃತ್‌ ನೋನಿ” ಪೋಸ್ಟರ್ ವೈರಲ್‌

Amrith-Noni-Pain-Spray kannada

ಕರ್ನಾಟಕದ ಹೆಮ್ಮೆಯ ಬ್ರಾಂಡ್‌ಗೆ ಭಾರೀ ಮೆಚ್ಚುಗೆ
ಕರ್ನಾಟಕದ ಹೆಮ್ಮೆಯ ಆಯುರ್ವೇದಿಕ್‌ ಬ್ರಾಂಡ್‌ ಆಗಿರುವ ಅಮೃತ್‌ ನೋನಿ ಕುರಿತು ಭಾರತ ತಂಡದ ಖ್ಯಾತ ಕ್ರಿಕೆಟಿಗ ಸೂರ್ಯಕುಮಾರ್‌ ಯಾದವ್‌ ಅವರು ಮಾಡಿರುವ ಪೋಸ್ಟ್ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಗುಣಮಟ್ಟದ ಆಯುರ್ವೇದದ ಉತ್ಪನ್ನಗಳ ಬ್ರಾಂಡ್ ಆಗಿರುವ ಅಮೃತ್‌ ನೋನಿಯೊಂದಿಗೆ ಕೈಜೋಡಿಸಿರುವ ಕ್ರಿಕೆಟಿಗ ಸೂರ್ಯಕುಮಾರ್‌ ಯಾದವ್‌ ಅವರು ಅಮೃತ್‌ ನೋನಿಯ ಪ್ರಮುಖ ಆಯುರ್ವೇದಿಕ್ ಉತ್ಪನ್ನವಾಗಿರುವ “ಅಮೃತ್‌ ನೋನಿ ಪೈನ್‌ ರಿಲೀಫ್‌ ಸ್ಪ್ರೇ”ಯ ರಾಯಭಾರಿಯಾಗಿ, ಅದರ ಜಾಹೀರಾತಿನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

“ಅಮೃತ್‌ ನೋನಿ ಪೈನ್‌ ರಿಲೀಫ್‌ ಸ್ಪ್ರೇ” ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಸೂರ್ಯಕುಮಾರ್‌ ಯಾದವ್‌ ಅವರು, ಅಮೃತ್‌ ನೋನಿ ಕುಟುಂಬದ ಭಾಗವಾಗಲು ನನಗೆ ಸಂತೋಷವಾಗುತ್ತಿದೆ. ತ್ವರಿತ ನೋವು ನಿವಾರಣೆಗೆ ಅಂತಾ ಬಂದಾಗ, ನಾನು “ಅಮೃತ್‌ ನೋನಿ ಪೈನ್‌ ರಿಲೀಫ್‌ ಸ್ಪ್ರೇ” ಅನ್ನು ಹೆಚ್ಚು ನಂಬುತ್ತೇನೆ. ಅಮೃತ್‌ ನೋನಿಯ ಪುರಾತನ ಆಯುರ್ವೇದ ಸೂತ್ರ ಮತ್ತು ಸಮೃದ್ಧ ಗಿಡಮೂಲಿಕೆಗಳ ಸಾರಗಳು ನಮಗೆ ಎಲ್ಲ ರೀತಿಯ ನೋವಿನಿಂದ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪರಿಹಾರವನ್ನು ನೀಡುತ್ತವೆ ಎಂದು ಹೇಳಿದ್ದಾರೆ.

ಕ್ರಿಕೆಟಿಗ ಸೂರ್ಯಕುಮಾರ್‌ ಯಾದವ್‌ ಅವರ ಈ ಪೋಸ್ಟ್ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಲಕ್ಷಾಂತರ ಜನರು ಸೂರ್ಯಕುಮಾರ್‌ ಯಾದವ್‌ ಅವರ ಈ ಪೋಸ್ಟ್ ಅನ್ನು ಶೇರ್‌ ಕೂಡ ಮಾಡುತ್ತಿದ್ದಾರೆ. ಇದರಿಂದಾಗಿ ವಿಶ್ವಾಸಾರ್ಹ ಆಯುರ್ವೇದಿಕ್‌ ಬ್ರಾಂಡ್ ಆಗಿರುವ ಅಮೃತ್‌ನೋನಿಯ ವಿಶ್ವಾಸಾರ್ಹತೆಗೆ ಮತ್ತಷ್ಟು ಬಲ ಬಂದಿದೆ. ಕಳೆದ ಅನೇಕ ದಶಕಗಳಿಂದ ಆಯುರ್ವೇದದ ಉತ್ಪನ್ನಗಳನ್ನ ತಯಾರಿಸುತ್ತಿರುವ ಅಮೃತ್‌ ನೋನಿ ಅಂತರಾಷ್ಟ್ರೀಯ ಮಟ್ಟದಲ್ಲೂ ವಿಶ್ವಾಸಾರ್ಹತೆ ಹೊಂದಿರುವ ಭಾರತದ ಪ್ರಮುಖ ಆಯುರ್ವೇದಿಕ್‌ ಕಂಪನಿಯಾಗಿದೆ.

ಈಗಾಗಲೇ ಅಮೃತ್‌ ನೋನಿ ಪವರ್‌ ಪ್ಲಸ್‌, ಅಮೃತ್‌ ನೋನಿ ಡಿ-ಪ್ಲಸ್‌, ಅಮೃತ್‌ ನೋನಿ ಆರ್ಥೋ ಪ್ಲಸ್‌, ಅಮೃತ್‌ ನೋನಿ ಗ್ಯಾಸ್ಟ್ರಿನ್‌, ಅಮೃತ್‌ ನೋನಿ ಪೇನ್‌ ಆಯಿಲ್‌, ಅಮೃತ್‌ ನೋನಿ ಕ್ಯಾನ್ಸಿಕೇರ್‌, ಅಮೃತ್‌ ನೋನಿ ಕಾಫ್‌ ಕ್ಲಿಯರ್‌ ಸೇರಿದಂತೆ ಅನೇಕ ಆಯುರ್ವೇದಿಕ್ ಉತ್ಪನ್ನಗಳನ್ನು ಬಿಡುಗಡೆಮಾಡಿದ್ದು, ಗ್ರಾಹಕರ ನಂಬಿಕೆಯ ಆಯುರ್ವೇದಿಕ್‌ ಬ್ರಾಂಡ್‌ ಆಗಿ ಅಮೃತ್‌ ನೋನಿ ಬೆಳೆಯುತ್ತಿದೆ.

ಇನ್ನು ಅಮೃತ್‌ ನೋನಿ ಪೇನ್‌ ರಿಲೀಫ್‌ ತ್ವರಿತವಾಗಿ ನೋವು ಶಮನ ಮಾಡುವ ಆಯುರ್ವೇದಿಕ್ ಉತ್ಪನ್ನವಾಗಿದ್ದು, ಗಂಧಾಪುರ ಪತ್ರತೈಲ, ಲಿನ್ಸೆಡ್‌ ತೈಲ ಮತ್ತು ಪುದೀನಾ ಸತ್ವವುಳ್ಳ ಈ ಪೇನ್‌ ರಿಲೀಫ್‌ ಕುತ್ತಿಗೆ, ಬೆನ್ನು, ಸೊಂಟ, ಕೀಲುನೋವು, ಮಂಡಿನೋವು, ಸ್ನಾಯುಸೆಳೆತ ಸೇರಿದಂತೆ ಎಲ್ಲ ರೀತಿಯ ನೋವುಗಳನ್ನು ಯಾವುದೇ ಅಡ್ಡಪರಿಣಾಮಗಳಿಲ್ಲದೇ, ತ್ವರಿತವಾಗಿ ಶಮನಗೊಳಿಸಲು ಸಹಕಾರಿಯಾಗಿದೆ.

ಇನ್ನುಅತ್ಯಂತ ವಿಶ್ವಾಸಾರ್ಹ ಆಯುರ್ವೇದಿಕ್‌ ಬ್ರಾಂಡ್ ಆಗಿರುವ ಅಮೃತ್‌ ನೋನಿಯ ಈ ಜನಸ್ನೇಹಿ ಉತ್ಪನ್ನವಾಗಿರುವ “ಅಮೃತ್‌ ನೋನಿ ಪೈನ್‌ ರಿಲೀಫ್‌ ಸ್ಪ್ರೇ”ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಎಲ್ಲಾ ಆರ್ಯುವೇದಿಕ್‌ ಮತ್ತು ಮೆಡಿಕಲ್‌ಗಳಲ್ಲಿ ದೊರೆಯುತ್ತದೆ.

ಕರ್ನಾಟಕದ ಹೆಮ್ಮೆಯ ಬ್ರಾಂಡ್‌ ಅಮೃತ್‌ ನೋನಿಗೆ ಭಾರೀ ಮೆಚ್ಚುಗೆ – Link to See the Reel : https://www.instagram.com/reel/CxagN4Avw3I/?utm_source=ig_web_copy_link&igshid=MzRlODBiNWFlZA==

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!