ಟಿವಿ ಮೊಬೈಲ್‍ ಮಕ್ಕಳ ಸ್ಮರಣಶಕ್ತಿಗೆ ಮಾರಕ

ಟಿವಿ ಮೊಬೈಲ್‍ ಮಕ್ಕಳ ಸ್ಮರಣಶಕ್ತಿಗೆ ಮಾರಕ. ಮಕ್ಕಳ ಏಕಾಗ್ರತೆ ಹಾಗೂ ಸ್ಮರಣಶಕ್ತಿ ಹೆಚ್ಚಳಕ್ಕೆ ಯೋಗ ಮತ್ತು ಧ್ಯಾನ ಬಹಳಮುಖ್ಯ. ಮಕ್ಕಳು ಪ್ರತಿನಿತ್ಯ ಆಡಬೇಕು. 

ದೇಹದ ಶಕ್ತಿಗೆ ಆರೋಗ್ಯ ಬೇಕು. ಆರೋಗ್ಯದ ಮೂಲ, ನಾವು ಸೇವಿಸುವ ಆಹಾರ, ಮುಖ್ಯವಾಗಿ ಹಾಲು, ಹಣ್ಣು, ಸೊಪ್ಪು. ಶಾರೀರಿಕ ವ್ಯಾಯಾಮ, ಓಟ ಇವುಗಳಿಂದ ಆರೋಗ್ಯ ಬರುತ್ತೆ. ಶಾರೀರಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಚೆನ್ನಾಗಿರುವುದೇ ಆರೋಗ್ಯ. ಉತ್ತಮ ಆಹಾರ, ಆರೋಗ್ಯಕರ ದೇಹ ಮತ್ತು ಒಳ್ಳೆಯ ಮನಸು ಮಕ್ಕಳ ಏಕಾಗ್ರತೆ ಹಾಗೂ ಸ್ಮರಣಶಕ್ತಿ ಹೆಚ್ಚಳ ಕ್ಕೆ ಬಹಳಮುಖ್ಯ. ಇದಕ್ಕಾಗಿ ಮಕ್ಕಳು ಪ್ರತಿನಿತ್ಯ ಆಡಬೇಕು. ನಂತರ ಹೋಂವರ್ಕ್ ಮಾಡಬೇಕು.

Ṭv mobile makkala smaranashaktige maarakaಯೋಗ ಮತ್ತು ಧ್ಯಾನ ಆರೋಗ್ಯದ ಸಮತೋಲನ ಮಾಡುತ್ತೆ. ತಂದೆ ತಾಯಂದಿರು  ಮಕ್ಕಳಿಗೆ ಮತ್ತೆ ಮತ್ತೆ ಓದಿ, ಓದಿ, ಎಂದು ಹೇಳಬೇಡಿ. ನೀವು ಟಿ.ವಿ ನೋಡುತ್ತ, ಬೇರೆ ಕೋಣೆಯಲ್ಲಿ ಕುಳಿತು, ಆತನಿಗೆ ಬೇರೆ ಕೋಣೆಯಲ್ಲಿ ಓದು ಎಂದು ಹೇಳಿದರೆ ಆತ ಹೇಗೆ ಓದುತ್ತಾನೆ? ನೀವು ತಂದೆ ತಾಯಂದಿರು ಮನೆಯಲ್ಲಿ ಓದುವ ವಾತಾವರಣ ಸೃಷ್ಟಿಸಬೇಕು. ಓದಿಗೆ ಅನುಕೂಲಕರ ವಾತಾವರಣ ಕಲ್ಪಿಸಬೇಕು. ನೀವು ಅಂದರೆ ಪಾಲಕರು, ಮನೆಯ ಹಿರಿಯರು, ಬೆಳಗಿನಿಂದ ರಾತ್ರಿವರೆಗೆ ಟಿ.ವಿ ನೋಡ್ತಾ ಇದ್ದು, ಅದೇ ಮನೇಲಿರೋ ಮಕ್ಕಳನ್ನು, ನೀವು ಮಾತ್ರ ಟಿ.ವಿ ನೋಡಬಾರದು ಅಂದ್ರೆ, ಆ ಮಕ್ಕಳಿಗೆ ಓದಲು ಹೇಗೆ ಪ್ರೇರೇಪಣೆ ಬರಬೇಕು?

ಓದೋದು ಹೊರೆ ಅಲ್ಲ. ದಿನಾ ಮಕ್ಕಳು ಊಟ – ನಿದ್ರೆ ಮಾಡುವಂತೆ ಅದಕ್ಕೊಂದು ದಿನಚರಿ ಇರಬೇಕು. ಮಕ್ಕಳು ಓದಲು ಪಾಲಕರ ಸಮರ್ಪಣೆ ಬೇಕು. ಮಕ್ಕಳಿಗೆ ಏಕಾಗ್ರತೆ ಬರಲು, ಅವರು ಓದಲು,  ಅವರನ್ನ ಮೊದಲು ಸ್ವಲ್ಪ ಫ್ರೀ ಬಿಡಿ. ಆಮೇಲೆ ಅವರೇನು ಮಾಡ್ತಿದಾರೆ ಎಂದು ಗಮನಿಸಿ. ಮಕ್ಕಳು ಓದಬೇಕೂಂತ ಬಯಸೋ ತಂದೆ-ತಾಯಿ, ಅವರ ಓದಿಗೇ ಮಹತ್ವ ಕೊಟ್ಟು, ನಿಮ್ಮ ಟಿ.ವಿ ನೋಡೋ ಆಸೆ ನಿಯಂತ್ರಿಸಬೇಕು.

ಆದಷ್ಟು ಮಕ್ಕಳನ್ನು  ಗದರಿಸಬೇಡಿ. ಹೊಡೆಯಬೇಡಿ . ಸ್ವಲ್ಪ ಫ್ರೀಡಂ ಕೊಡಿ, ಆದರೆ ಮಿತಿ ಇರ್ಲಿ. ಗೊತ್ತಿಲ್ಲದೇ ಮಾಡಿದ್ರೆ ಮೃದುವಾಗಿ ತಿದ್ದಿ ಹೇಳಿ. ಗೊತ್ತಿದ್ದೂ ಅದೇ ತಪ್ಪು ಮತ್ತೆ ಮಾಡಿದರೆ, ಬೈದು ಹೇಳಿ. ಶಾಲೆಯಿಂದ ಬಂದ ಕೂಡಲೇ ಟಿ.ವಿ. ಮುಂದೆ ಕೂರಲು ಬಿಡಬೇಡಿ. ಮೊಬೈಲ್ ಕೊಡಿಸಬೇಡಿ. ಅವರಿಗೆ ಶಾರೀರಿಕ ಚಟುವಟಿಕೆಗಳನ್ನೇ ಮಾಡಲು ಪ್ರೇರೇಪಿಸಿ. ಅವರು ಮನೆ ಹೊರಗೆ ಆಡಲಿ ಓಡಲಿ.

ದೇಹಕ್ಕೆ ಶಕ್ತಿ ಬರಲು ಸ್ವಲ್ಪ ವ್ಯಾಯಾಮ ಮಾಡುವುದು ಒಳ್ಳೆಯದು . ಎರಡೂ ಕೈ ಸೇರಿಸಿ ಜೋರಾಗಿ ಚಪ್ಪಾಳೆ ಹೊಡೆಯಿರಿ. ಇದರಿಂದ ದೇಹದಲ್ಲಿ ಶಕ್ತಿ ಬರುತ್ತೆ.  ಸಣ್ಣ ವಯಸ್ಸಿನಲ್ಲಿ ಕಲಿತಿದ್ದು ಕೊನೇತನಕ ಉಳಿಯುತ್ತೆ. ಊಟ, ನಿದ್ದೆ, ಓದಿಗೆ ಸರಿಯಾದ ಸಮಯ ನಿಗದಿಪಡಿಸಿ. ಆರೋಗ್ಯಕರ ಆಹಾರವೇ ಎಲ್ಲದಕ್ಕೂ ಮೂಲ. ಮಕ್ಕಳಿಗೆ ಹಾಲು, ತರಕಾರಿ ರಸ, ಗಜ್ಜರಿ ಕೊಡಿ. ಹಸಿ ತೆಂಗಿನಕಾಯಿ ಹಾಲು, ಗೋಡಂಬಿ, ದ್ರಾಕ್ಷಿ, ಏಲಕ್ಕಿ, ಖರ್ಜೂರ ಕೊಡಿ. ತೆಂಗು ಒಳ್ಳೆಯ ಕೊಬ್ಬು. ಬೇಕರಿ ಉತ್ಪಾದನೆಗಳು, ಜಂಕ್ ಫುಡ್ ಗಳು ಒಳ್ಳೆಯದಲ್ಲ.

ಆರೋಗ್ಯವನ್ನು ಎಲ್ಲರೂ ಕಾಪಾಡಿಕೊಳ್ಳಬೇಕು. ಬೆಳಗ್ಗೆ ಎದ್ದ ತಕ್ಷಣ 100 ಮಿ.ಲಿ. ಬಿಸಿ ನೀರು ಕುಡಿಯಿರಿ. ಹಸಿ ಮೊಳಕೆಕಾಳು ತಿನ್ನಿ. ಎಲ್ಲಾ ಪ್ರತಿದಿನ ಓಂ ಎಂದು ನಿಗದಿತ ರಾಗ, ಧ್ವನಿಯಲ್ಲಿ ಹೇಳಿ. ಆಗ ಪ್ರಾಣಾಯಾಮದಂತೆ ಆರೋಗ್ಯ ಚೆನ್ನಾಗಿ ಉಳಿಯುತ್ತದೆ. ಮನೆಯಲ್ಲಿ ಇರುವ ತಾಜಾ ತರಕಾರಿ, ಪದಾರ್ಥಗಳಿಂದಲೇ ಪೌಷ್ಠಿಕ ಆಹಾರ ತಯಾರಿಸಿ. ಪ್ರತಿ ದಿನ ವಿಭಿನ್ನ ರುಚಿ ಕೊಡಿ. ಅದೇ ತಿಂಡಿ, ಊಟ ತಯಾರಿಸಿ ಕೊಡಬೇಡಿ, ವಿಭಿನ್ನ ರುಚಿಗಳನ್ನು ಮಕ್ಕಳು ಮೆಚ್ಚುತ್ತಾರೆ.

ಅಡಿಗೆ ಮನೆಯೇ ಹಿಂದೆ ಒಂದು ಕುಟುಂಬದ, ಒಂದು ಮನೆಯ ಆರೋಗ್ಯ ಕೇಂದ್ರವಾಗಿತ್ತು. ಅದು ಸದಾ ಬಿಸಿಯಾಗಿ, ಬಿಝಿ ಆಗಿ ಇರ್ತಿತ್ತು. ಒಟ್ಟೂ ಕುಟುಂಬದಲ್ಲಿದ್ದ ಪತ್ನಿ, ಅಕ್ಕತಂಗಿಯರು ಎಲ್ಲರ ಬಯಕೆ, ಕುಟುಂಬದಲ್ಲಿರುವ ಎಲ್ಲರಿಗೂ ತಾಜಾ-ಸ್ವಚ್ಛ-ಆರೋಗ್ಯಕರ ಆಹಾರ ತಯಾರಿಸಿ, ಪ್ರತಿಯೊಬ್ಬರಿಗೂ ಸಂತಸ-ಸಮಾಧಾನ-ಖುಷಿ ನೀಡುವುದಾಗಿತ್ತು. ಬೆಳಗಿನ ಜಾವದಿಂದ ರಾತ್ರಿವರೆಗೆ, ಮನೆ ಮಹಿಳೆಯರಿಗೆ ಅದೇ ಧ್ಯಾನ, ಟಿ.ವಿ ಚಾನೆಲ್, ಅಂತರ್ಜಾಲ, ಮೊಬೈಲ್, ಫೇಸ್ ಬುಕ್ ಈ ತರಹ ಬೇರೆ ಆಕರ್ಷಣೆಗಳು ಇರಲಿಲ್ಲ. ಹೀಗಾಗಿ ಎಲ್ಲ ಮನೇಲೆ ಊಟ ಮಾಡ್ತಿದ್ರು ರುಚಿಕಟ್ಟಾದ ತಾಜಾ ಊಟ, ತಿಂಡಿ ಮಾಡಿ, ಮನೆಯವರೆಲ್ಲರ ಆರೋಗ್ಯ ಚೆನ್ನಾಗಿರ್ತಿತ್ತು.

ಮಕ್ಕಳೇ ದೇವರು ಅಂತ ಚೆನ್ನಾಗಿ ಲಾಲನೆ ಪಾಲನೆ ಮಾಡ್ತಿದ್ರು ಈಗ ಇವರೆಲ್ಲರಿಗೂ ಟಿ.ವಿ- ಮೊಬೈಲ್ ಹುಚ್ಚು. ಸೀರಿಯಲ್ ಸಮಯಕ್ಕೆ ತಮ್ಮ ದಿನಚರಿಯನ್ನು ಹೊಂದಿಸಿಕೊಂಡಿದ್ದಾರೆ. ಅವುಗಳ ಬ್ರೇಕ್‍ಲ್ಲಿ ಮಾತ್ರ ಅಡಿಗೆ ಮನೆಗೆ ವಿಸಿಟ್. ಫ್ರಿಜ್‍ನಲ್ಲಿ ತಂಗಳ ಆಹಾರ. ಇಲ್ಲದಿದ್ದರೆ ಬೇಕರಿ, ಫಾಸ್ಟ್ ಫುಡ್ ಆಹಾರ. ಅಲ್ಲಿ ಕಾಳಜಿಯೂ ಇಲ್ಲ ಆರೋಗ್ಯವೂ ಇಲ್ಲ. ಮಕ್ಕಳಿಗೆ ಅವೆಲ್ಲ ತಿನ್ನುವ ಚಟ. ಟಿ.ವಿ ನೋಡ್ತಾ ಮಕ್ಕಳಿದ್ದಾಗಲೇ ಬೊಜ್ಜು ಬರುತ್ತೆ. ಹೆಚ್ಚು ತಿಂತಿದ್ರೆ ಟಿ.ವಿ ನೋಡ್ತಾ ತಿಂದ್ರೆ, ಮೈಗೆ ಆರೋಗ್ಯ ಹತ್ತದೇ, ಅನಾರೋಗ್ಯ ಕಾಡುತ್ತೆ. ದೇಹ ಸಶಕ್ತ ಆಗದೇ, ಮನಸ್ಸು ದುರ್ಬಲ ಆದ್ರೆ, ಓದು ತಲೆಗೆ ಹತ್ತೊಲ್ಲ. ಇದ್ದ ಬುದ್ಧೀನೂ ಬಳಕೆ ಆಗೋಲ್ಲ. ಬೇಡದ್ದನ್ನೆಲ್ಲ ತಲೇಲಿ ತುಂಬಿಕೊಂಡ್ರೆ, ಬೇಕಾದ ಓದಿನ ಕಡೆ ಮನಸ್ಸಿನ ಗಮನ ಕೇಂದ್ರೀಕರಣವಾಗೋಲ್ಲ. ಸಮಯವನ್ನು ಸರಿಯಾಗಿ ಬಳಸದಿದ್ರೆ, ಮನಸ್ಸು ಚುರುಕಾಗದೇ ಮಂಕಾಗುತ್ತೆ.

ದೊಡ್ಡವರು ಒಳ್ಳೇ ಪದ್ಧತಿಯನ್ನು ಅಳವಡಿಸಿಕೊಂಡರೆ ಮಕ್ಕಳು ನಿಮ್ಮ ಪದ್ಧತಿ, ಜೀವನ ಶೈಲಿ ಅನುಕರಿಸ್ತವೆ. ಓದಲು, ಮನಸ್ಸು ಕೇಂದ್ರೀಕರಿಸಲು, ಮತ್ತೆ ಮತ್ತೆ ಮನನ ಮಾಡಲು, ಮನಸ್ಸು ಒಂದೆಡೆ ಗಟ್ಟಿಯಾಗಬೇಕು. ಅಲ್ಲಿ ಮನಸ್ಸು ಚಂಚಲತೆ ಮಾಡೋ, ಬೇರೆ ಆಕರ್ಷಣೆಗಳು ಇರಲೇಬಾರದು. ಪಾಲಕರು ಅವುಗಳನ್ನು ದೂರ ಓಡಿಸಬೇಕು.

Also watch :ಯೋಗವನ್ನು ವೃತ್ತಿಯನ್ನಾಗಿ ಮಾಡುವುದು ಹೇಗೆ ?/Yoga as a career Dr Yogi Devaraj

ಟಿವಿ ಮೊಬೈಲ್‍ ಮಕ್ಕಳ ಸ್ಮರಣಶಕ್ತಿಗೆ ಮಾರಕ

ಮಕ್ಕಳ ಏಕಾಗ್ರತೆ ಹಾಗೂ ಸ್ಮರಣ ಶಕ್ತಿ ಹೆಚ್ಚಳ ಕ್ಕೆ ಗೋಲ್ಡ್ ಫಾರ್ಮಾ ಹೋಮಿಯೋಪತಿ ಔಷಧಿಗಳು ಉಪಯುಕ್ತ. ಮೆಮರಿ ಪ್ಲಸ್ ಹಾಗೂ ಬ್ರೈನ್ ಟೋನ್ ಸಂಶೋಧನೆ ಮಾಡಿ ತಯಾರಿಸಿದ ಔಷಧಿಗಳಿವು. ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಹೆದರಿಕೆ, ಜ್ವರ ಬಂದು, ತಕ್ಷಣ ಓದಿದ್ದು ರೀಕಾಲ್ ಆಗೋಲ್ಲ. ಓದಿದ್ದು ಜ್ಞಾಪಕ ಬರೋಲ್ಲ. ಭಯ ಬಂದಿರುತ್ತೆ. ಇಂತಹ ವಿದ್ಯಾರ್ಥಿಗಳಿಗೆ ಇವು ಉಪಯುಕ್ತ.

Dr Pattar

ಡಾ. ಪಿ.ವಿ. ಪತ್ತಾರ್
ಕ್ಲಿನಿಕ್: ಮಲ್ಲಿಕಾರ್ಜುನ ದೇವಸ್ಥಾನ ರಸ್ತೆ,
ಮಂಗಳವಾರ ಪೇಟೆ, ರಬಕವಿ-ಬನಹಟ್ಟಿ ತಾಲ್ಲೂಕು,
ಬಾಗಲಕೋಟೆ ಜಿಲ್ಲೆ , ಬನಹಟ್ಟಿ-587311
ಮೊ.: 98456 50169

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!