ಮೊಬೈಲ್ ಅತಿಹೆಚ್ಚು ಬಳಕೆ – ಮೆದಳು ಮಂಕಾಗಿಸುವ ಮಂತ್ರ

ಮೊಬೈಲ್ ಅತಿಹೆಚ್ಚು ಬಳಕೆ ಕ್ಯಾನ್ಸರ್ ಕಾರಕವೆಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಒಂದು ಅಭಿಪ್ರಾಯವುವಾಗಿದೆ. ಆಯುರ್ವೇದವು ಹೇಳಿರುವ ಮನಸ್ಸಿನ ಮತ್ತು ದೇಹದ ಹಲವಾರು ಅಭಿಷಂಗಜ/ಮೊಬೈಲ್ ಭಾದೆಯ ರೋಗಗಳಿಗೆ ಕಾರಣವಾಗುತ್ತವೆ.

Health-problems-from-Mobile./ ಮೊಬೈಲ್ ಅತಿಹೆಚ್ಚು ಬಳಕೆ - ಮೆದಳು ಮಂಕಾಗಿಸುವ ಮಂತ್ರ

“ಅತಿಯಾದರೆ ಅಮೃತವೂ ವಿಷ” ಎಂಬ ಗಾದೆಮಾತು ನಾವೆಲ್ಲರೂ ಈ ಬದಲಾದ ಕಾಲಮಾನದಲ್ಲಿ ಮೊಬೈಲ್ನನ ಅತಿಯಾದ ಮೋಹದಲ್ಲಿ ಮರೆತಿರುವ ಹಾಗಿದೆ. ನಿಜಾರ್ಥದಲ್ಲಿ ಮೊಬೈಲ್ ಅನ್ನೋದು ಒಂದು ಸಾಧನವಾದರೂ ಇದನ್ನು ವಿಶೇಷವಾಗಿ ಇಂದಿನ ಯುವಕ ಯುವತಿಯರು ತಮ್ಮ ದೇಹದ ಅರೋಗ್ಯ ಮತ್ತು ಮನಸ್ಸಿನ ನೆಮ್ಮದಿಯ ಸೂತ್ರಗಳಾದ ಧಾರ್ಮಿಕ ಮಂತ್ರಗಳಿಗಿಂತ ಹೆಚ್ಚು ವಾಟ್ಸಪ್ಪ್ ಫೇಸ್ಬುಕ್ನಂತ ಸಾಮಾಜಿಕ ಜಾಲತಾಣಗಳು, ಪಬ್ಜಿನಂತ ಆಟಗಳು ಮತ್ತು ಯೂಟ್ಯೂಬ್ನಂತ ಚಿತ್ರತಾಣಗಳಿಂದ ಜಪಿಸುತ್ತಿದ್ದಾರೆ (ಉಪಯೋಗಿಸುತ್ತಿದ್ದಾರೆ). ಹಾಗಾಗಿ ಯುವಕ ಯುವತಿಯರಿಗೆ ಮೊಬೈಲ್ ಅನ್ನೋದು ಒಂದು ಮಂತ್ರವೇ ಸರಿ.

2021ರಲ್ಲಿ ಅಪ್ಲಿಕೇಶನ್ ಅನಾಲಿಟಿಕ್ಸ್ ಸಂಸ್ಥೆ ಅಪ್ಲಿಕೇಶನ್ ಅನ್ನಿ (App Annie) ಪ್ರಕಟಿಸಿರುವ ಒಂದು ವರದಿಯ ಪ್ರಕಾರ ಭಾರತಿಯರು ಕಡಿಮೇಯೆಂದರು ದಿನಕ್ಕೆ 4-5 ತಾಸು ಮೊಬೈಲ್ನಲ್ಲಿ ಕಾಲ ಕಳಿಯುತ್ತಿದ್ದಾರೆ. ಇದೊಂದು ತುಂಬಾ ಅಘಾತಕಾರಿ ವಿಷಯ ಯಾಕೆಂದರೆ ವಿಶ್ವ ಅರೋಗ್ಯ ಸಂಸ್ಥೆ (WHO) ನಿಗದಿ ಪಡಿಸಿದ ಆರೋಗ್ಯಕರ ಮೊಬೈಲ್ ಬಳಕೆಯ ಅವಧಿಕ್ಕಿಂತ ತುಂಬಾ ಹೆಚ್ಚು. ಆಯುರ್ವೇದವು ಹೇಳಿರುವ ಹಾಗೆ ಈ ಹವ್ಯಾಸಗಳು ಮನಸ್ಸಿನ ಮತ್ತು ದೇಹದ ಹಲವಾರು ಅಭಿಷಂಗಜ/ಮೊಬೈಲ್ ಭಾದೆಯ ರೋಗಗಳಿಗೆ ಕಾರಣವಾಗುತ್ತವೆ. ಅತಿಹೆಚ್ಚು ಮೊಬೈಲ್ ಬಳಕೆಯು ಕ್ಯಾನ್ಸರ್ ಕಾರಕವೆಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಒಂದು ಅಭಿಪ್ರಾಯವುವಾಗಿದೆ.

ಮೊಬೈಲ್  ದುಷ್ಪರಿಣಾಮಗಳು:

ಮೊಬೈಲ್ ಅನ್ನು ಅತಿಯಾಗಿ ಜಪಿಸುವದರಿಂದ (ಉಪಯೋಗಿಸುವುದರಿಂದ) ಹಲವಾರು ದುಷ್ಪರಿಣಾಮಗಳು(ಲಕ್ಷಣಗಳು) ಕಂಡುಬರುತ್ತವೆ. ತಲೆಯಲ್ಲಿ ಕೆಟ್ಟ ಕೆಟ್ಟ ಆಲೋಚನೆಗಳು ಬರುವುದು, ಯಾವುದೇ ಮಹತ್ತರ ಕಾರಣವಿಲ್ಲದೆ ಅಳುವುದು, ನಗುವುದು, ಕೋಪಮಾಡಿಕೊಳ್ಳುವುದು. ಮೇಲಿಂದಮೇಲೆ ತಲೆನೋವು, ತಲೆ ಸುತ್ತುವಿಕೆ, ಹಸಿವಿನಲ್ಲಿ ಏರುಪೇರು, ನಿದ್ದೆ ಬಾರದಿರುವಿಕೆ, ನಿದ್ದೆ ಬಂದರು ಪದೇ ಪದೇ ಎಚ್ಚರಿಕೆ ಆಗುವುದು, ಕೆಲಸದಲ್ಲಿ ನಿರಾಸಕ್ತಿ, ಸುಸ್ತಾಗುವಿಕೆ, ಮನಸ್ಸಿನಲ್ಲಿ ಚಡಪಡಿಕೆ, ಮನಸ್ಸಿನ ಏಕಗಾಗ್ರತೆಯಲ್ಲಿ ಏರುಪೇರು.ಇದಲ್ಲದೆ ದೀರ್ಘಕಾಲದಲ್ಲಿ ಮೊಬೈಲ್ ಕೈಯಲ್ಲಿ ಇಲ್ಲದಿದ್ದರೂ ಇದೆ ಎಂಬ ಭಾವನೆ, ಮೊಬೈಲ್ ರಿಂಗ್ಟೋನ್ ಇಲ್ಲದಿದ್ದರೂ ಕೇಳಿಸಿದಹಾಗೆ ಅನಿಸುವುದು, ದೃಷ್ಟಿಮೇಲೆ ಪರಿಣಾಮ ಬಿರುವುದು, ಜ್ಞಾಪಕ ಶಕ್ತಿ ನಷ್ಟವಾಗುವುದು, ಕುತ್ತಿಗೆ ನೋವು, ಸಂತಾನಹೀನತೆ ಮತ್ತು ದೇಹದಲ್ಲಿ ಬೊಜ್ಜು ಶೇಖರಣೆಯಿಂದಾಗಿ ಹಲವಾರು ರೋಗಗಳಿಗೆ ಕಾರಣವಾಗುತ್ತದೆ.

ಆಯುರ್ವೇದವು ಕೇವಲ ಒಂದು ವೈದಿಕೀಯ ವಿಜ್ಞಾನವಲ್ಲದೆ ಇದೊಂದು ಜೀವನದ ವಿಜ್ಞಾನ ಯಾಕೆಂದರೆ ಅರೋಗ್ಯಕರವಾದ ಜೀವನಕ್ಕೆ ಯಾವುದೆಯಾಗಲಿ (ಆಹಾರ/ವಸ್ತು/ಆಸೆ/ಕೆಲಸ/ಔಷದ) ಅವಶ್ಯಕತೆಗಿಂತ ಹೆಚ್ಚಾದರೆ ಮಾರಕವೆಂಬ ಸಿದ್ಧಾಂತವನ್ನು ವಿಶಿಷ್ಟವಾಗಿ ಪ್ರತಿಪಾದಿಸಿದೆ ಮತ್ತು ಅದರಿಂದ ಆರೋಗ್ಯದಮೇಲೆ ಆಗುವ ಪರಿಣಾಮಗಳನ್ನು ಅಭಿಷಂಗಜವೆಂಬ ರೋಗಸಿದ್ಧಾಂತದಿಂದ ವಿಸ್ತ್ರುತವಾಗಿ ಹೇಳಿದೆ. ಈ ಅಭಿಷಂಗಜ ರೋಗಗಳು ದೇಹದ ಜೊತೆಗೆ ಮನಸ್ಸಿನಮೇಲೆ ತುಂಬಾ ವ್ಯತಿರಿಕ್ತ ಪರಿಣಾಮಗಳನ್ನು ಬಿರುತ್ತವೆ ಮತ್ತು ಧೀರ್ಘಕಾಲದವರೆಗೆ ಕಾಡುವುದರ ಜೊತೆಗೆ ವಿಶೇಷವಾಗಿ ಬೆಳೆಯುವ ಮಕ್ಕಳ ಜೀವನವನ್ನು ಮಂಕಾಗಿಸುತ್ತವೆ. ಹಾಗಾಗಿ ಯುವಕ ಯುವತಿಯರು ಮೊಬೈಲ್ ನ್ನು  ಅವಶ್ಯಕತೆಗೆ ಅನುಸರವಾಗಿ ಓದಿಗಾಗಿ ಉಪಯೋಗಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಮಕ್ಕಳು  ಮೊಬೈಲ್ ನ್ನು ಅತಿಯಾಗಿ ಜಪಿಸುವದರಿಂದ ಹೊರಬರುವಂತೆ ಪೋಷಕರು ನೋಡಿಕೊಳ್ಳುವುದು ಅಗತ್ಯವಾಗಿದೆ.

Also Read: ಸಾಮಾಜಿಕ ಜಾಲತಾಣಗಳ ಮೋಹಕ ಜಾಲದ ಸುಳಿಯಲ್ಲಿ

dr-mohammed-yunus

ಡಾ! ಮಹ್ಮದ ಯುನುಸ.ಶ.ನಬೂಜಿ
ಸಹ ಪ್ರಾಧ್ಯಪಕರು
ಶ್ರೀ.ಜೆ.ಜಿ.ಸಿ.ಹೆಚ್.ಎಸ್.ಆಯುರ್ವೇದಿಕ್ ಮೆಡಿಕಲ್ ಕಾಲೇಜು ಘಟಪ್ರಭಾ.
ಮೊಬೈಲ್: 94484 56450
ಇಮೇಲ್: drmahamadyunus@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!