ಅಜೀರ್ಣ : ಜೀರ್ಣವಿಲ್ಲದ ಜೀವನ

ಅಜೀರ್ಣ ಪಚನಕ್ರಿಯೆಗೆ ಅಥವಾ ಹೊಟ್ಟೆಗೆ ಸಂಭಂದಿಸಿದ ಕಾಯಿಲೆ .ಅಜೀರ್ಣವು ಸರ್ವರೋಗಗಳ ಮೂಲ. ಪ್ರಸ್ತುತ ಒಂದು ಅಧ್ಯಯನದ ಪ್ರಕಾರ ಪ್ರತಿ ಹತ್ತು ಜನರಲ್ಲಿ ನಾಲ್ಕು ಜನರು ಹೊಟ್ಟೆಗೆ ಅಥವಾ ಪಚನಕ್ರಿಯೆಗೆ ಸಂಭಂದಿಸಿದ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ಅಜೀರ್ಣ : ಜೀರ್ಣವಿಲ್ಲದ ಜೀವನ

ಅಜೀರ್ಣ, ಇದು ಪಚನಕ್ರಿಯೆಗೆ ಅಥವಾ ಹೊಟ್ಟೆಗೆ ಸಂಭಂದಿಸಿದ ಕಾಯಿಲೆಯಾಗಿದೆ. ಆ ದೇವರು ಎಲ್ಲವನ್ನು ದಯಪಾಲಿಸಿದ್ದಾನೆ ಆದರೆ ಏನನ್ನು ತೃಪ್ತಿಪೂರ್ವಕವಾಗಿ ತಿನ್ನುವುದಕ್ಕೆ ಆಗ್ತಾಯಿಲ್ಲ ಅನ್ನೋದು ಅಜೀರ್ಣ ರೋಗಿಗಳ ಕೊರಗಾಗಿದೆ. ಯಾಕೆಂದರೆ ದಿನನಿತ್ಯ ನಾವು ಸೇವಿಸುವ ಆಹಾರವು ಸರಿಯಾಗಿ ಜೀರ್ಣವಾದರೆ (Digestion) ನಮ್ಮ ಜೀವನವು ಯಾವುದೇ ರೋಗವಿಲ್ಲದೆ ಸುಖಕರವಾಗಿರುತ್ತದೆ ಮತ್ತು ಸೇವಿಸಿದ ಆಹಾರವು ಅಜೀರ್ಣವಾದರೆ (Indigestion) ಹಲವಾರು ರೋಗಗಳಿಗೆ ಕಾರಣವಾಗಿ ಜೀವನವನ್ನು ದುಃಖಕರವಾಗಿಸುತ್ತದೆ. ಹಾಗಾಗಿ ಅಜೀರ್ಣವು ಜೀರ್ಣವಿಲ್ಲದ ಜೀವನವೇ ಹೌದು. ವಿದ್ಯಾವಂತರಾದ ನಾವೆಲ್ಲರೂ ಬದಲಾದ ಕಾಲಮಾನದಲ್ಲಿ ಬಿಡುವಿಲ್ಲದೆ ಹೊಟ್ಟೆಗಾಗಿ ದುಡಿಯುತ್ತಿದ್ದರು ಹೊಟ್ಟೆಯನ್ನೇ ಮರೆತ್ತಿರುವುದು ಒಂದು ವಿಪರ್ಯಾಸವೇ ಸರಿ.

ಪ್ರಸ್ತುತ ಒಂದು ಅಧ್ಯಯನದ ಪ್ರಕಾರ ಪ್ರತಿ ಹತ್ತು ಜನರಲ್ಲಿ ನಾಲ್ಕು ಜನರು ಹೊಟ್ಟೆಗೆ ಅಥವಾ ಪಚನಕ್ರಿಯೆಗೆ ಸಂಭಂದಿಸಿದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಪ್ರಸ್ತುತ ಸರಿಸುಮಾರು 25-30% ಜನರು ಕ್ರಿಯಾತ್ಮಕ ಅಜೀರ್ಣದಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ. ಅದರಲ್ಲಿ ಅಜೀರ್ಣವು ಬಹುಮುಖ್ಯ ಮತ್ತು ಸರ್ವೇಸಾಮನ್ಯ ಕಾಯಿಲೆಯಾಗಿದೆ. ಆಯುರ್ವೇದವು ಹೇಳಿರುವ ಹಾಗೆ ‘ಅಜೀರ್ಣವು ಸರ್ವರೋಗಗಳ ಮೂಲ‘ ಅದರಲ್ಲೂ ವಿಶೇಷವಾಗಿ ಪಚನಕ್ರಿಯೆಗೆ ಅಥವಾ ಹೊಟ್ಟೆಗೆ ಸಂಭಂದಿಸಿದ ರೋಗಗಳ ಮೂಲವಾಗಿದೆ. ಅಜೀರ್ಣವು ಕೆಲವಮ್ಮೆ ಇತರೆ ರೋಗಗಳ ಲಕ್ಷಣವಾಗಿ ಕಂಡುಬಂದರೆ ಹೆಚ್ಚಿನ ಸಂಧರ್ಭದಲ್ಲಿ ಅದು ಕ್ರಿಯಾತ್ಮಕ ಅಜೀರ್ಣ (Functional indigestion) ಆಗಿರುತ್ತದೆ ಮತ್ತು ಇದರ ನಿರ್ಲಕ್ಷ್ಯವು ಹಲವಾರು ರೋಗಗಳಿಗೆ ಕಾರಣವಾಗುತ್ತದೆ.

ಅಜೀರ್ಣದ ಕಾರಣಗಳು:
ಆಯುರ್ವೇದವು ‘ಅತಿಯಾಗಿ ತಿನ್ನುವುದೇ’ (ಪಶುವಿನ ಹಾಗೆಯೇ) ಕ್ರಿಯಾತ್ಮಕ ಅಜೀರ್ಣದ ಮುಖ್ಯ ಕಾರಣವೆಂದು ಹೇಳಿದೆ. ಅಜೀರ್ಣದ ಇತರೆ ಕಾರಣಗಳೆಂದರೆ

1. ಬೆಳಗ್ಗೆ ಮಲಮೂತ್ರ ವಿಸರ್ಜಿಸದೆ ತಿನ್ನುವುದು,

2. ಹಸಿವುಯಿಲ್ಲದೆ ತಿನ್ನುವುದು,

3. ಸರಿಯಾಗಿ ಅಗಿಯದೆ ಗಡಿಬಿಡಿಯಾಗಿ ತಿನ್ನುವುದು,

4. ಊಟವಾದ ತಕ್ಷಣ ಹೆಚ್ಚು ನೀರು ಕುಡಿಯುವುದು,

5. ಮನ್ನಸ್ಸಿನ ಏಕಾಗ್ರತೆ ಇಲ್ಲದೆ ಊಟ ಮಾಡೋದು (ಅಂದರೆ ಟಿವಿ ಅಥವಾ ಮೊಬೈಲ್ ನೋಡುತ್ತಾ),

6. ದೈಹಿಕ ಪರಿಶ್ರಮ ಇಲ್ಲದಿರುವುದು,

7. ರಾತ್ರಿ ಸರಿಯಾಗಿ ನಿದ್ದೆ ಮಾಡದಿರುವುದು,

8. ಮಾನಸಿಕ ಒತ್ತಡ, ಮತ್ತು ಅತಿಯಾದ ಚಿಂತೆ

9. ಆಧುನಿಕತೆಯ ಹೆಸರಿನಲ್ಲಿ ವಿಶೇಷವಾಗಿ ಯುವಕ ಯುವತಿಯರು ಮತ್ತು ವಿದ್ಯಾರ್ಥಿಗಳು ತಿನ್ನುತ್ತಿರುವ ತ್ವರಿತವಾಗಿ ತಯಾರಿಸಲ್ಪಡುವ ಆಹಾರ, ಸಿದ್ದಪಡಿಸಿದ ಆಹಾರ ಮತ್ತು ಹೆಪ್ಪುಗಟ್ಟಿದ ಆಹಾರ,

10. ಜಂಕ್ ಫುಡ್ ಸೇವನೆ ಮತ್ತು ಸಮಯವಲ್ಲದ ಸಮಯದಲ್ಲಿ ಆಹಾರ ಸೇವನೆ ಮಾಡುವುದು.

Also Read: ಜಂಕ್ ಫುಡ್ ಖಯಾಲಿ ಮಾಡಿಕೊಂಡಲ್ಲಿ ಆಪಾಯ ಕಟ್ಟಿಟ್ಟ ಬುತ್ತಿ. 

ಅಜೀರ್ಣ ಲಕ್ಷಣಗಳು:
ಕ್ರಿಯಾತ್ಮಕ ಅಜೀರ್ಣದಲ್ಲಿ ಸಾಮಾನ್ಯವಾಗಿ ವಾಕರಿಕೆ, ಹೊಟ್ಟೆಭಾರ, ಹೊಟ್ಟೆನೋವು, ಹೊಟ್ಟೆ ಉಬ್ಬುವಿಕೆ, ಹೊಟ್ಟೆ ಮತ್ತು ಎದೆಯುರಿ, ಹಸಿವು ಆಗದಿರುವಿಕೆ, ತಿನ್ನುವಾಗ ಬೇಗನೆ ಹೊಟ್ಟೆ ತುಂಬಿದಹಾಗೆ ಆಗುವುದು, ಬಾಯಿರಿಕೆ, ವಾಂತಿ, ಬಾಯಿಯ ದುರ್ವಾಸನೆ, ಆಯಾಸ, ಮಲಮೂತ್ರ ವಿಸರ್ಜನೆಯಲ್ಲಿ ವ್ಯತ್ಯಾಸವಾಗುವಂತ ಲಕ್ಷಣಗಳು ಕಂಡುಬಂದರೆ, ಧಿರ್ಘಕಾಲದಲ್ಲಿ ಮಲಬದ್ಧತೆ, ತಲೆತಿರುಗುವುದು, ಮೂರ್ಛೆ, ದೇಹದಲ್ಲಿ ವಿಪರೀತ ಆಯಾಸ, ಅನ್ನನಾಳದಲ್ಲಿ ಹುಣ್ಣುಗಳ (ulcer) ಉತ್ಪತ್ತಿ ಮತ್ತು ತೂಕ ಕಡಿಮೆಯಾಗುವಂತ ಲಕ್ಷಣಗಳು ಕಂಡುಬರುತ್ತವೆ.

ಅಜೀರ್ಣ ಚಿಕಿತ್ಸೆ:
ಆಯುರ್ವೇದವು ವಿಶೇಷವಾಗಿ ಕ್ರಿಯಾತ್ಮಕ ಅಜೀರ್ಣದ ಚಿಕಿತ್ಸೆಯನ್ನು ಆಧುನಿಕ ವೈದ್ಯಕೀಯ ಪದ್ಧತಿಯ ಹಾಗೆ ಸಾರ್ವತ್ರಿಕ ಚಿಕಿತ್ಸೆ (universal treatment) ಮಾಡದೆ ತನ್ನದೇಯಾದ ದೇಹಪ್ರಕೃತಿ, ಅಗ್ನಿ, ಆಮ, ಲಕ್ಷಣ ಮತ್ತು ದೋಷವೆಂಬ ಸಿದ್ದಂತಾಗಳಿಂದ ಪ್ರತಿಯೊಂದು ಅಜೀರ್ಣ ರೋಗಿಗಳನ್ನು ಪರೀಕ್ಷಿಸಿ, ರೋಗದ ಸ್ಥಿತಿಗೆ ಅನುಸರವಾಗಿ ವಿವಿಧ ಶಮನ ಮತ್ತು ಶೋಧನ ಚಿಕಿತ್ಸಾ ಪದ್ಧತಿಗಳಿಂದ ರೋಗಿಗಳನ್ನು ಉಪಚರಿಸುತ್ತದೆ ಮತ್ತು ರೋಗಿಯ ಜೀವನಶೈಲಿಯಲ್ಲಿ ಬದಲಾವಣೆಗೆ ಒತ್ತುಕೊಡುವುದರಿಂದ ಆಯುರ್ವೇದ ಚಿಕಿತ್ಸಾ ಪದ್ದತಿಯು ಅಜೀರ್ಣ ರೋಗವನ್ನು ಉಪಚರಿಸುವಲ್ಲಿ ಅತ್ಯಂತ ಪರಿಣಾಮಕಾರಿ ಮತ್ತು ಉನ್ನತವಾಗಿದೆ. ಅಜೀರ್ಣ ರೋಗಿಗಳು ತಾವು ತಗೆದುಕೊಳುತ್ತಿರುವ ಔಷದಗಳ ಜೊತೆಗೆ ಒಮ್ಮೆ ಆಯುರ್ವೇದ ವೈದ್ಯರ ಅಭಿಪ್ರಾಯದ ಮೇರೆಗೆ ಆಯುರ್ವೇದ ಚಿಕಿತ್ಸೆಯನ್ನು ತಗೆದುಕೊಳ್ಳುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

dr-mohammed-yunus

ಡಾ! ಮಹ್ಮದ ಯುನುಸ.ಶ.ನಬೂಜಿ
ಸಹ ಪ್ರಾಧ್ಯಪಕರು
ಶ್ರೀ.ಜೆ.ಜಿ.ಸಿ.ಹೆಚ್.ಎಸ್.ಆಯುರ್ವೇದಿಕ್ ಮೆಡಿಕಲ್ ಕಾಲೇಜು ಘಟಪ್ರಭಾ.
ಮೊಬೈಲ್: 9448456450
ಇಮೇಲ್: drmahamadyunus@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!