ಕ್ರ್ಯಾಬ್ ಕಾಂಪ್ಲೆಕ್ಸ್ – ನಮ್ಮ ನಿಮ್ಮ ನಡುವೆಯೇ ಇರುವ ರೋಗ

ಕ್ರ್ಯಾಬ್ ಕಾಂಪ್ಲೆಕ್ಸ್ – ಇದೇನಪ್ಪಾ ಇದು ಈ ತರ ಹೆಡ್ಡಿಂಗ್ ಇದೆ. ಏಡಿ ಮಾರಾಟ ಮಾಡೋ ಕಾಂಪ್ಲೆಕ್ಸ್ ಬಗ್ಗೆ ಏನಾರಾ ಬರ್ದಿದಾರಾ ಅಂತಾ ಯೋಚಿಸ್ತಿದೀರಾ? ದಿನ ಬೆಳಗಾದ್ರೆ ಕೊರೋನಾ, ಲಾಕ್ ಡೌನು, ಸೀಲ್ ಡೌನು ಅಂತಾ ಕೇಳಿ ಕೇಳಿ ಸಾಕಾಗಿರೋ ಮನಸ್ಸಿಗೆ ಕೊಂಚ ರಿಲಾಕ್ಸ್ ಆಗ್ಬಹುದೇನೋ ಅಂತ ಈ ಆರ್ಟಿಕಲ್‍ನ ಕೊಡ್ತಿದೀನಿ. ಜಾಸ್ತಿ ತಲೆ ಕೆಡಿಸ್ಕೊಳ್ದೆ ಹಾಗೇ ಸುಮ್ನೆ ಒಮ್ಮೆ ಓದಿ ಹಗುರಾಗಿ.

ಕ್ರ್ಯಾಬ್ ಕಾಂಪ್ಲೆಕ್ಸ್ - ನಮ್ಮ ನಿಮ್ಮ ನಡುವೆಯೇ ಇರುವ ರೋಗ

ನಿಮಗೊಂದು ಕಥೆ ಹೇಳ್ತೀನಿ. ಅಲ್ಲೆಲ್ಲೋ ಒಂದು ಕಡೆ ಅಂತಾರಾಷ್ಟ್ರೀಯ ಏಡಿಗಳ ಪ್ರದರ್ಶನ ಆಯೋಜಿಸಲಾಗಿತ್ತು. ಎಲ್ಲಾ ದೇಶಗಳ ತರಹೇವಾರಿ ಏಡಿಗಳನ್ನ ಹಿಡ್ಕೊಂಡ್ ಬಂದಿದ್ರು ಜನರು. ಬಣ್ಣಬಣ್ಣದ, ವಿವಿಧ ರೀತಿಯ ಏಡಿಗಳು ಆ ಪ್ರದರ್ಶನದಲ್ಲಿ ಇದ್ವು. ಒಂದೊಂದು ದೇಶದ್ದು ಒಂದೊಂದು ಕಡೆ ಗಾಜಿನ ಜಾಡಿಯ ಒಳಗೆ ಹಾಕಿ ಅದರ ಮೇಲ್ಗಡೆ ಮುಚ್ಚಳದಿಂದ ಮುಚ್ಚಲಾಗಿತ್ತು. ಆ ಪ್ರದರ್ಶನಕ್ಕೆ ಭಾರತದ ಏಡಿಯನ್ನೂ ಒಯ್ಯಲಾಗಿತ್ತು. ಆದ್ರೆ ಒಂದು ಅಚ್ಚರಿ ಏನಂದ್ರೆ ಭಾರತೀಯ ಏಡಿಗಳಿದ್ದ ಗಾಜಿನ ಜಾಡಿಗೆ ಮಾತ್ರ ಮೇಲ್ಗಡೆ ಮುಚ್ಚಳವೇ ಇರ್ಲಿಲ್ಲ. ಫುಲ್ ಓಪನ್ ಇತ್ತು!

ಅಲ್ಲಿ ಬಂದ ಸಂದರ್ಶಕರಿಗೆಲ್ಲಾ ಆಶ್ಚರ್ಯ. ‘ಎಲ್ಲಾ ದೇಶದ ಏಡಿಗಳಿಗೂ ಹೊರಬರದಂತೆ ಮುಚ್ಚಳ ಇದೆ, ಆದ್ರೆ ಈ ಇಂಡಿಯನ್ ಏಡಿಗಳಿಗೆ ಮಾತ್ರ ಯಾಕೆ ಏನು ಮುಚ್ಚಿಲ್ಲ? ಮೊದಲೇ ಭಾರತೀಯರು ಬುದ್ಧಿವಂತರು, ಇಲ್ಲಿ ಏನ್ ಟೆಕ್ನಿಕ್ ಮಾಡಿರಬಹುದು’ ಅಂತ ಫುಲ್ ಯೋಚನೆಗೆ ಬಿದ್ರು ಅದನ್ನು ನೋಡಿದಂತವರು! ಕೊನೆಗೆ ಅಲ್ಲಿನ ಆಯೋಜಕರಿಗೆ ಈ ಬಗ್ಗೆ ವಿಚಾರಿಸಿದ್ರೂ ಕೂಡಾ! ಅದಕ್ಕೆ ಆತ ನಗುತ್ತಾ ಹೇಳ್ತಾನೆ- ‘ಈ ಏಡಿಗಳಿಗೆ ಮುಚ್ಚಳದ ಅವಶ್ಯಕತೆಯೇ ಇಲ್ಲ. ಯಾಕಂದ್ರೆ ಅದರಲ್ಲಿಯ ಯಾವ ಏಡಿಯೂ ಹೊರಬರಲ್ಲ. ಯಾವುದಾದರೂ ಒಂದು ಏಡಿ ಮೇಲಕ್ಕೆ ಹತ್ತುತ್ತೆ ಅಂತ ಗೊತ್ತಾಗ್ತಾ ಇದ್ದಂಗೆ, ಇನ್ನೊಂದು ಏಡಿ ಮೇಲಕ್ಕೆ ಹತ್ತಿತ್ತಿರೋ ಏಡಿನಾ ಕೆಳಕ್ಕೆ ಎಳೆದುಬಿಡತ್ತೆ’ ಅಂತ ಅಂದ!

ನಮ್ಮ ನಿಮ್ಮ ನಡುವೆಯೇ ಇರುವುದು ಕ್ರ್ಯಾಬ್ ಕಾಂಪ್ಲೆಕ್ಸ್ :

ಈ ಕಥೆ ಎಷ್ಟು ನಿಜಾನೋ ಸುಳ್ಳೋ ಗೊತ್ತಿಲ್ಲ. ಆದ್ರೆ ಅಲ್ಲಿನ ಏಡಿಗಳಂತೆ ಕೆಳಕ್ಕೆ ಎಳೆಯುವವರು ನಮ್ಮ ನಿಮ್ಮ ನಡುವೆಯೇ ಇರುವುದು ಮಾತ್ರ ಖಂಡಿತಾ ಸುಳ್ಳಲ್ಲ. ಒಬ್ಬರು ಚೆನ್ನಾಗಿದ್ದಾಗ ಅದನ್ನ ನೋಡಿ ಸಹಿಸಲಾಗದೇ ಅವರನ್ನು ನಿರುತ್ಸಾಹಪಡಿಸುವ ಗುಣವನ್ನು ಕ್ರ್ಯಾಬ್ ಕಾಂಪ್ಲೆಕ್ಸ್ ಅಂತಾರೆ! ತಮಗೆ ಸಿಗದಿರೋದು ಬೇರೆಯವರಿಗೂ ಸಿಗಬಾರ್ದು ಅನ್ನೋ ತತ್ವ ಅವರದ್ದು..! ಅಸೂಯೆಯಿಂದ ಕುದಿತಾ ಇರೋದು ಅವರ ಗುಣ. ತಮ್ಮ ಜೊತೆಯಲ್ಲಿಯೇ ಇರುವವರು ಚೆನ್ನಾಗಿ ಬೆಳವಣಿಗೆ ಆಗುತ್ತಿದ್ದಾರೆ ಅಂದ್ರೆ ಅದನ್ನು ನೋಡಿ ಅವರು ಸಹಿಸಲಾರರು. ಏನಾದರೂ ಮಾಡಿ ತೊಂದರೆ ಕೊಡಲು ಕಾಯ್ತಾ ಇರ್ತಾರೆ,

Jealousy is the naked form of appreciation ಅನ್ನೋ ಮಾತಿದೆ ಇಂಗ್ಲೀಷಲ್ಲಿ. ಎದುರಿಗಿರುವವರ ಟೀಕಿಸಲು ಪ್ರತ್ಯೇಕ ಕಾರಣಗಳೇ ಬೇಕಂತಿರೊಲ್ಲ ಈ ಕ್ರಾಬ್ ಕಾಂಪ್ಲೆಕ್ಸ್ನವರಿಗೆ! ವೃತ್ತಿಯ ಅಸೂಯೆ ಕೂಡಾ ಇಂಥದ್ದೆ. ಕತ್ತಿ ಮಸೆಯುತ್ತಾರೆ, ತಂಡಗಳನ್ನು ಮಾಡಿಕೊಳ್ಳುತ್ತಾರೆ. ಈ ಸ್ಥಿತಿಯು ದೇಶದ, ವಿಶ್ವದ ಹಲವರಲ್ಲಿ ಇರಬಹುದು. ಆದ್ರೆ ನಾವು ನಮ್ಮಲ್ಲಿ ಮಾತ್ರ ಈ ತರದವರಿಲ್ಲ.. ‘ದೂರದ ಎಲ್ಲೋ ಇರುವ ಸೋಮಾಲಿಯಾದಲ್ಲಿಯೂ ಇದೇ ಪರಿಸ್ಥಿತಿ ಇದೆ.., ಅಂಟಾರ್ಟಿಕಾದಲ್ಲಿನ ಸಂಶೋಧನಾ ವಿಜ್ಞಾನಿಗಳಿಗೂ ಇದೇ ರೋಗ ಇದೆ..’ ಅಂತಾ ದೂಷಿಸುತ್ತಾ ಕುಂತ್ರೆ ಅರ್ಥವಿಲ್ಲ.

crab-complex. ಕ್ರ್ಯಾಬ್ ಕಾಂಪ್ಲೆಕ್ಸ್ - ನಮ್ಮ ನಿಮ್ಮ ನಡುವೆಯೇ ಇರುವ ರೋಗ

ಈ ಕ್ರ್ಯಾಬ್ ಕಾಂಪ್ಲೆಕ್ಸ್ ಬಗ್ಗೆ ಈಗ ಹೇಳ್ತಿರೋದಕ್ಕೆ ಒಂದು ಮುಖ್ಯ ಕಾರಣ ಏನಂದ್ರೆ ತ್ವರಿತವಾಗಿ ಹರಡ್ತಾ ಇರೋ ಕೋವಿಡ್-19 ಕೊರೋನಾ ರೋಗಾಣುವಿನ ದಾಳಿ ನಮ್ಮ ಮೇಲೆ ಆಗಿದೆ ಅಥವಾ ಆಗಿರಬಹುದು ಅಂತ ಗೊತ್ತಾಗ್ತಾ ಇದ್ದಂತೆ ಅದನ್ನು ನಮ್ಮಿಂದ ಬೇರೆಯವರಿಗೆ ಹರಡದಂತೆ ತಡಿಯುವ ಜವಾಬ್ದಾರಿಯನ್ನು ನಾವು ತೆಗೆದುಕೊಂಡರೆ ಮಾತ್ರ ಸಮುದಾಯದಿಂದ ಹರಡುವ ಸೋಂಕನ್ನು ತಡೆಗಟ್ಟಬಹುದು.

ಇನ್ನೊಂದು ಮುಖ್ಯ ವಿಷಯ ಏನಂದ್ರೆ ಕೊರೋನಾ ರೋಗಕ್ಕೆ ನಾವು ನಮ್ಮ ದೇಹದಲ್ಲಿಯೇ ಇರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಸುಲಭವಾಗಿ ಗುಣಮುಖರಾಗಬಹುದು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಉತ್ತಮ ಆಹಾರ ಸೇವನೆ, ಅತ್ಯುತ್ತಮ ಜೀವನ ಶೈಲಿ ಅನುಸರಿಸುವುದರ ಜೊತೆಗೇ ಒಳ್ಳೆಯ ಯೋಚನೆ, ಆಲೋಚನೆ ಹೊಂದುವುದೂ ಅಷ್ಟೇ ಮುಖ್ಯ ಎಂದು ಆಯುರ್ವೇದದಲ್ಲಿ ಉಲ್ಲೇಖವಿದೆ. ಹಾಗಾಗಿ ಒಳ್ಳೆಯ ಯೋಚನೆಗಳನ್ನು ಬೆಳೆಸಿಕೊಳ್ಳೋಣ, ಕಾಲೆಳೆಯುವ ಬುದ್ಧಿಯನ್ನು ಬಿಡೋಣ. ಕ್ರ್ಯಾಬ್ ಕಾಂಪ್ಲೆಕ್ಸ್ ಇದ್ರೆ ನಮಗೆ ನಾವೇ ಸರಿಪಡಿಸಿಕೊಳ್ಳೋಣ.

ಸಚಿನ್ ಶರ್ಮಾ ಬೆಂಗಳೂರು ಆರೋಗ್ಯ ಚಿಂತಕರು ಮೊ: 9036723369

ಸಚಿನ್ ಶರ್ಮಾ ಬೆಂಗಳೂರು
ಆರೋಗ್ಯ ಚಿಂತಕರು
ಮೊ: 9036723369

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!