ಅಪಸ್ಮಾರ ಅಪಾಯಕಾರಿಯಲ್ಲ ಮುನ್ನೆಚ್ಚರಿಕೆ ಇರಲಿ.

ಅಪಸ್ಮಾರ ನರವ್ಯೂಹದ  ಕಾಯಿಲೆಯಾಗಿದ್ದುಅಪಾಯಕಾರಿಯಲ್ಲ. ಸೂಕ್ತ ಚಿಕಿತ್ಸೆ ಹಾಗೂ ವೈದ್ಯಕೀಯ ನೆರವಿನಿಂದ ಸಂಪೂರ್ಣವಾಗಿ ಗುಣಪಡಿಸಬಹುದು. ಆಡುಭಾಷೆಯಲ್ಲಿ ಮೂರ್ಛೆ ರೋಗ, ಮಲರೋಗ ಅಥವಾ ಫಿಟ್ಸ್ ಎಂದು ಕರೆಯುವರು. ಆದ್ರೆ ಆತ್ಮವಿಶ್ವಾಸ ಹಾಗೂ ಮನೋಬಲ ನಿಮ್ಮಲ್ಲಿ ಇರಬೇಕು. ಸೂಕ್ತ ಚಿಕಿತ್ಸೆ , ಔಷಧ ಮೂಲಕ ಇದನ್ನು ನಿವಾರಿಸಬಹುದು.

apasmara

ಸಹಸ್ರಾರು ವರ್ಷಗಳ ಹಿಂದೆ ಆಯುರ್ವೇದ ವೈದ್ಯ  ಶಾಸ್ತ್ರದಲ್ಲಿ ವಿಸ್ತ್ರತವಾಗಿ ಉಲ್ಲೇಖಿಸಲ್ಪಟ್ಟಿರುವ “ಅಪಸ್ಮಾರ” ಎನ್ನುವ ಕಾಯಿಲೆಯನ್ನು ಆಡುಭಾಷೆಯಲ್ಲಿ ಮೂರ್ಛೆ ರೋಗ, ಮಲರೋಗ ಅಥವಾ ಫಿಟ್ಸ್ ಎಂದು ಕರೆಯುವರು. ಇಂಗ್ಲೀಷನಲ್ಲಿ ಎಪಿಲೆಪ್ಸಿ ( Epilepsy), ಸೀಜರ್ (Siezure) ಎನ್ನುವರು.

ಅಪಸ್ಮಾರ ನರವ್ಯೂಹದ 4 ನೆ ಮುಖ್ಯವಾದ ಕಾಯಿಲೆಯಾಗಿದ್ದು, ಯಾವ ವಯಸ್ಸಿನಲ್ಲಾದರೂ ಭಾದಿಸಬಹುದು. ಸಮಾಜದಲ್ಲಿ ಅಪಸ್ಮಾರದ ಬಗೆಗಿನ ತಪ್ಪು ತಿಳುವಳಿಕೆಗಳಿಂದ, ಜನರು ಈ ಸಮಸ್ಯೆ ಬಗ್ಗೆ ಮಾತನಾಡಲು ಹಿಂದಡಿಯಿಡುತ್ತಾರೆ. ಅಪಸ್ಮಾರ ಹೊಂದಿದವರು ಮಾನಸಿಕವಾಗಿ ಕುಗ್ಗಿ, ಖಿನ್ನತೆಗೆ ಒಳಗಾಗುತ್ತಾರೆ.

ಅಪಸ್ಮಾರ ಎಂಬುದು ಸಾಮಾನ್ಯ ಕಾಯಿಲೆ. ಇದು ಶಾಪವಲ್ಲ. ಸೂಕ್ತ ಚಿಕಿತ್ಸೆ ಹಾಗೂ ವೈದ್ಯಕೀಯ ನೆರವಿನಿಂದ ಸಂಪೂರ್ಣವಾಗಿ ಗುಣಪಡಿಸಬಹುದು. ಆದ್ರೆ ಆತ್ಮವಿಶ್ವಾಸ ಹಾಗೂ ಮನೋಬಲ ನಿಮ್ಮಲ್ಲಿ ಇರಬೇಕು. ಸೂಕ್ತ ಚಿಕಿತ್ಸೆ , ಔಷಧ ಮೂಲಕ ಇದನ್ನು ನಿವಾರಿಸಬಹುದು.

1. ವಾಸ್ತವದಲ್ಲಿ ಅಪಸ್ಮಾರ ಒಂದು ಪ್ರತ್ಯೇಕ ರೋಗವೆ ಅಲ್ಲ. ಅದು ಮೆದುಳಿನ ರೋಗ ಲಕ್ಷಣ. ಮೆದುಳಿನ ನರಗಳ ಚಟುವಟಿಕೆಗಳಲ್ಲಿ ಉಂಟಾಗುವ ಏರುಪೇರು ಅಥವಾ ಅವ್ಯವಸ್ಥೆಯಿಂದ ಆಗುವ ತೊಂದರೆ.

2. ವಿಶ್ವದಾದ್ಯಂತ 65 ಮಿಲಿಯನ್ ಜನರು ಅಪಸ್ಮಾರದಿಂದ ಬಳಲುತ್ತಿದ್ದಾರೆ.

3. ಪ್ರತಿವರ್ಷ ನವೆಂಬರ್ 17 ರಂದು ಭಾರತ‌ ದೇಶದಲ್ಲಿ ಅಪಸ್ಮಾರ ಖಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಅಪಸ್ಮಾರ ದಿನವೆಂದು ಆಚರಿಸುವರು.

4. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರ್ಚ್ 26 ರಂದು  ಪರ್ಪಲ್ ದಿನ(Purple Day) ಎಂದು ಆಚರಿಸಿ “ಅಪಸ್ಮಾರ”ದ ಬಗ್ಗೆ ಜಾಗೃತಿಯನ್ನ ವಿಶ್ವದಾದ್ಯಂತ ಮಾಡಲಾಗುತ್ತಿದೆ.

ಅಪಸ್ಮಾರ ಎಂದರೇನು?

ಆರೋಗ್ಯವಂತ ವ್ಯಕ್ತಿಗಳ  ಮೆದುಳಿನಲ್ಲಿ ಸಾಮಾನ್ಯವಾಗಿ ಸೂಕ್ಷ್ಮ ಪ್ರಮಾಣದ ವಿದ್ಯುತ್ ತರಂಗಗಳು ಉತ್ಪಾದನೆಯಾಗುತ್ತವೆ. ನಿಯಮಿತ ಪ್ರಮಾಣದಲ್ಲಿ ಉತ್ಪನ್ನವಾಗುವ ಈ ವಿದ್ಯುತ್ ಪ್ರವಾಹದ ನೆರವಿನಿಂದ ಮೆದುಳಿನ ಕಣಗಳು ನಮ್ಮ ದೇಹದ ವಿವಿಧ ರೀತಿಯ ನಿಯಂತ್ರಣ ಕ್ರಿಯೆಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತವೆ.

ಮೆದುಳಿನಲ್ಲಿ ಉಂಟಾಗುವ ವಿದ್ಯುತ್ ತರಂಗಗಳ ಪ್ರವಾಹದಲ್ಲಿ ಒಮ್ಮೇಲೆ ಏರುಪೇರಾಗಿ, ಕ್ಷಿಪ್ರಗತಿಯಿಂದ ಬಿಡುಗಡೆಯಾಗುವ ತೀವ್ರಗತಿಯ ವಿದ್ಯುತ್ ತರಂಗಗಳಿಂದಾಗಿ ದೇಹದಲ್ಲಿ ಉಂಟಾಗುವ “ಸೆಳೆತ”(Seizure)ವನ್ನ “ಅಪಸ್ಮಾರ”(Epilepsy) ಎನ್ನುವರು.

1. *ಅಪಸ್ಮಾರ(Epilepsy) ಅಂದರೆ ಸೆಳೆವು(Siezure) ಬರುವ ಮೆದುಳಿನ ರೋಗಗ್ರಸ್ತ ಸ್ಥಿತಿ.

2. * ಮೆದುಳಿನ ನರವ್ಯೂಹಗಳ (Neuron) ಮಧ್ಯೆ  ಉಂಟಾಗುವ ವಿದ್ಯುತ್ ತರಂಗಗಳ ಅಡಚಣೆಯೇ  ಸೆಳವು(Siezure).

3. ಅಪಸ್ಮಾರ ರೋಗಗಕ್ಕಿಂತ ಅದರ ಬಗೆಗೆ ಜನಸಾಮಾನ್ಯರಲ್ಲಿರುವ  ತಪ್ಪು ತಿಳಕವಳಿಕೆಗಳು ಅಪಾಯಕಾರಿಯಾಗಿವೆ.

4. ಅಪಸ್ಮಾರ ಹೊಂದಿದ ವ್ಯಕ್ತಿಗಳಲ್ಲಿ  ಪ್ರಜ್ಞೆ ಸಂಪೂರ್ಣ ಅಥವಾ ಅರ್ಧ ಕಳೆದುಕೊಂಡಿರುತ್ತಾರೆ. ಸೆಳವು 30 ಸೆಕೆಂಡುಗಳಿಂದ 1 ನಿಮಿಷದವರೆ ಮಾತ್ರ ಇದ್ದರೂ ತೀವ್ರವಾಗಿರತ್ತೆ.

#ಅಪಸ್ಮಾರದ_ಲಕ್ಷಣಗಳು.

ಅಪಸ್ಮಾರದ ವಿವಿಧ ಪ್ರಭೇದಗಳಿಗೆ ಅನುಗುಣವಾಗಿ ವಿಭಿನ್ನ ಲಕ್ಷಣಗಳು ಕಂಡುಬರುತ್ತವೆ. ಆದರೆ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು ಇಂತಿವೆ.

1. ಸಾಮಾನ್ಯ ಅಪಸ್ಮಾರದ ರೋಗಿಗಳಲ್ಲಿ ಕೈಕಾಲುಗಳು ನಡುಗುವುದು ಅಥವಾ ಮೈ ಝುಮ್ ಎನಿಸುವುದು. ಶರೀರದಲ್ಲಿ ವಿದ್ಯುತ್ ಪ್ರವಹಿಸಿದಂತಹ ಸಂವೇದನೆ ಉಂಟಾಗಿ, ಏನೆನ್ನೋ ಕಂಡಂತೆ- ಪ್ರಖರವಾದ ಬೆಳಕು ಝಗಝಗಿಸಿದಂತೆ , ಶಬ್ಧ ಕೇಳಿಸಿದಂತೆ ಹಾಗೂ ಕಾರಣವಿಲ್ಲದೆ ತೀವ್ರ ಭಯಪೀಡಿತರಾದಂತೆ ಮತ್ತು ಕೆಲವರಿಗೆ ಹೊಟ್ಟೆಯಲ್ಲಿ ಚಿಟ್ಟೆಗಳು ಹಾರಾಡಿದಂತೆ ಅನಿಸುವುದು, ಕೆಲವರಿಗೆ ಮೂಗಿನಲ್ಲಿ ಘಾಟು ವಾಸನೆ ಬಂದಂತಾಗುವುದು. ತಲೆನೋವು, ಕಣ್ಣುಗಳು ಮಂಜಾಗುವುದು, ಸಂವೇದನೆಗಳಲ್ಲಿ ಬದಲಾವಣೆ,ತಲೆ ತಿರುಗುವಿಕೆ,  ವಾಕರಿಕೆ, ಜಾಗೃತಿ ಅಥವಾ ಅರಿವಿಲ್ಲದಂತಾಗುವುದು, ಅತಿಯಾಗಿ ಬೆವರುವಿಕೆ, ಉಸಿರಾಟದ ತೊಂದರೆ ಇತ್ಯಾದಿ ಲಕ್ಷಣಗಳು ಕಂಡುಬರುವುದುಂಟು.

2. ಸಂಕೀರ್ಣ ಅಪಸ್ಮಾರದಲ್ಲಿ( Complex Seizures) ರೋಗಿಯು ಗೊಂದಲಕ್ಕೆ ಒಳಗಾದಂತೆ ವರ್ತಿಸುವುದು, ತನ್ನಷ್ಟಕ್ಕೆ ತಾನೇ ಗೊಣಗುವುದು, ಮೈಮೇಲಿನ ಬಟ್ಟೆಗಳನ್ನು ಎಳೆದಾಡುವುದು- ಹರಿಯುವುದು ಹಾಗೂ ಬಾಯಿ ಚಪ್ಪರಿಸುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲರೋಗಿಗಳಂತೂ ಕ್ಷಣಮಾತ್ರದಲ್ಲಿ ನೆಲಕ್ಕುರುಳಿ, ಕೈಕಾಲುಗಳನ್ನು ಸೆಟೆದುಕೊಳ್ಳುತ್ತಾ, ಹಲ್ಲುಗಳನ್ನು ಕಡಿಯುತ್ತಾ , ಬಾಯಿಯಿಂದ ಜೊಲ್ಲು- ನೊರೆಯನ್ನು ಸುರಿಸಿ ಒಂದೆರಡು ಕ್ಷಣಗಳಲ್ಲೇ ಪ್ರಜ್ಞಾಹೀನರಾಗುತ್ತಾರೆ. ಈ ಸಂದರ್ಭದಲ್ಲಿ ರೋಗಿ ತನ್ನ ನಾಲಗೆಯನ್ನು ಕಚ್ಚಿದಲ್ಲಿ ತೀವ್ರ ರಕ್ತಸ್ರಾವ ಸಂಭವಿಸುವ ಸಾಧ್ಯತೆಗಳಿವೆ. ಇಂತಹ ಲಕ್ಷಣಗಳೊಂದಿಗೆ ಕೆಲರೋಗಿಗಳು ತಮಗರಿವಿಲ್ಲದೇ ಮಲಮೂತ್ರಗಳನ್ನು ವಿಸರ್ಜಿಸುವುದು ಅಪರೂಪವೇನಲ್ಲ.

2. “ಸ್ಟೇಟಸ್ ಎಪಿಲೆಪ್ಟಿಕಸ್” (Status Epileptic) ಎನ್ನುವ ಗಂಭೀರ ಸ್ಥಿತಿಯಲ್ಲಿ, ಅಪಸ್ಮಾರದ ಸೆಳೆತಗಳು ತಾವಾಗಿ ಶಮನಗೊಳ್ಳದೇ ತುಸು ದೀರ್ಘಕಾಲ ಬಾಧಿಸುವುದರಿಂದ, ರೋಗಿಯ ಪ್ರಾಣಕ್ಕೆ ಸಂಚಕಾರ ಬರುವುದುಂಟು. ಇಂತಹ ರೋಗಿಗಳಲ್ಲಿ ತಡ ಮಾಡದೆ, ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡುವುದು ಪ್ರಾಣಾಪಾಯದಂತೆ ಪಾರುಮಾಡಿದಂತೆ.

ಕೆಲವು ಮಕ್ಕಳಲ್ಲಿ ಜ್ವರದ ತಾಪಮಾನ ಹೆಚ್ಚಾದಾಗ ಕಣ್ಣುಗಡ್ಡೆ ಮೆಲ್ಗಡೆ ತಿರುಗಿಸಿ,  ಕೈ- ಕಾಲು ಅದರುವುದರ ಜೊತೆ ಅಪಸ್ಮಾರದ ಲಕ್ಷಣಗಳು ಕಂಡುಬರುತ್ತವೆ, ಇದನನ್ನ “ಫೆಬ್ರೈಲ್ ಕನ್ವಲ್ಶನ್” (Febrile convulsion) ಎನ್ನುವರು. ಇದು ನಿಜವಾದ ಮೂರ್ಛೆ ರೋಗವಲ್ಲ.

#ಪ್ರಥಮ_ಚಿಕಿತ್ಸೆ.

ಯಾವುದಾದರು ವ್ಯಕ್ತಿ ನಿಮ್ಮ ಕಣ್ಣೇದುರಿಗೆ ಒಮ್ಮೇಲೆ ಪ್ರಜ್ಞೆ ತಪ್ಪಿ ಬಿದ್ದು, ಈ ಮೇಲಿನ ಲಕ್ಷಣಗಳು ಕಂಡುಬಂದರೆ. ಪ್ರಾಥಮಿಕ ಚಿಕಿತ್ಸೆ ನೀಡುವುದು ಅವಶ್ಯಕ.

1. ರೋಗಿಯ ದೇಹದ ಭಾಗಕ್ಕೆ, ಯಾವುದೇ ರೀತಿಯ ಅಪಾಯವಾಗದಂತೆ ಆತನಿಗೆ ಕಾಳಜಿವಹಿಸಬೇಕಾಗುತ್ತದೆ. ಚೂಪಾದ ವಸ್ತುಗಳು, ಕಲ್ಲು, ನೀರು, ಬೆಂಕಿ ಇಂತಹ ವಸ್ತುಗಳಿಂದ ದೂರವಿರಿಸಬೇಕು. ಉಸಿರಾಟ ಕ್ರಿಯೆ ಸರಳವಾಗಿ ನಡೆಯುವಂತೆ ನೋಡಿಕೊಳ್ಳುವುದು ತುಂಬಾ ಅಗತ್ಯ. ನಾಲಿಗೆ ಕಚ್ಚಿಕೊಳ್ಳುವ ಸಂಭವ ಹೆಚ್ಚಿರುವುದರಿಂದ  ರಕ್ಷಣೆಗಾಗಿ ಹಲ್ಲುಗಳು ನಡುವೆ ಬಟ್ಟೆಯನ್ನು ಇಡುವುದು ತುಂಬಾ ಮಹತ್ವದ್ದು.

2. ಅಪಸ್ಮಾರದಿಂದ ಕಂಪಿಸುತ್ತಿರುವಾಗ ಆ ವ್ಯಕ್ತಿಯನ್ನು ಕುಳಿತುಕೊಳ್ಳಿಸುವುದಕ್ಕೆ ಹೋಗಲೆಬಾರದು. ಅದರ ಬದಲು ಸಮತಟ್ಟಾದ ನೆಲದ ಮೇಲೆ ಮಲಗಿಸಿ ದೇಹದ ಸೆಳೆತ ನಿಲ್ಲುವವರೆಗೂ ಆ ವ್ಯಕ್ತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ತದನಂತರ ವೈದ್ಯರನ್ನು ಸಂಪರ್ಕಿಸುವುದು ತುರ್ತು ಅಗತ್ಯವೆಂದು ಭಾವಿಸಬೇಕು.

3. ಈ ರೋಗದಿಂದ ಬಳಲುವವರು ನಿರಂತರವಾಗಿ ವೈದ್ಯರು ನೀಡುವ ಮಾರ್ಗದರ್ಶನವನ್ನು ಚಾಚು ತಪ್ಪದೇ ಪಾಲಿಸುವುದು ಅತೀ ಅಗತ್ಯವಾಗಿರುತ್ತದೆ. ಎಂದಿಗೂ ನಿರ್ಲಕ್ಷ್ಯ ಸಲ್ಲದು. ಏಕೆಂದರೆ ರೋಗಿ ಮಾಡುವ ಸಣ್ಣ ಪ್ರಮಾಣದ ನಿರ್ಲಕ್ಷ್ಯವು ದೊಡ್ಡ ಪ್ರಮಾಣದಲ್ಲಿ ಅಪಾಯವನ್ನು ತಂದೊಡ್ಡಬಹುದಾಗಿರುತ್ತದೆ.

dr-prakash-barki

ಡಾ. ಪ್ರಕಾಶ ಬಾರ್ಕಿ

ಕಾಗಿನೆಲೆ

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!