“ಮಾಧ್ಯಮಗಳು ಪರಿಸ್ಥಿತಿಯನ್ನು ವೈಭವೀಕರಿಸಿ ಜನರಲ್ಲಿ ಭಯ ಬಿತ್ತಿ ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳುತ್ತಿವೆ”! ” ಸರಕಾರವು ಎರಡರಿಂದ ಮೂರು ಶೇಕಡಾ ಮರಣ ಪ್ರಮಾಣ ಇರುವಂತಹ ಕೊರೋನ ಕಾಯಿಲೆಯಲ್ಲಿ ಅನಗತ್ಯವಾದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಜನರ ವ್ಯವಹಾರಕ್ಕೆ ತೊಂದರೆ ಕೊಡುತ್ತಿದೆ”! ಇದು ನಾನು ಮಾಡುತ್ತಿರುವ
ಏ ಥೂ….. ಉಗಿಬೇಡ್ರಪ್ಪಾ ….! ಕೋರೋನಾ ಸೋಂಕಿಗೆ ಚಿಕಿತ್ಸೆ ಇಲ್ಲ, ಪ್ರಸರಣ ತಡೆಯುವಿಕೆಯೊಂದೇ ಚಿಕಿತ್ಸೆ.ಉಗುಳುವದ ಬಿಟ್ಟರೆ ನಮ್ಮ ದೇಶದ ಮೇಲೆ ಕೋರೋನಾದ ಕರಿಛಾಯೆ ದೂರವಾಗಬಹುದು. ಥೂ ಏನ್ ಜನಾನಪ್ಪಾ ಎಲ್ಲಕಂಡ್ರೂ ಉಗ್ದೆ ಉಗಿತಾರೆ “ಯಾಕ್ಥೂ …ಖ್ಯಾಕ್ ಥೂ …ವ್ಯಾಕ್ಥೂ…..ಗುರ್ರರ್ರ …ದನ ಹೂಂಕರಿಸಿದಂತೆ
ಮಾರ್ಚ್11-ಧೂಮಪಾನ ರಹಿತ ದಿನ ಆರೋಗ್ಯಂ ಪರಮಂ ಭಾಗ್ಯಂ ಸ್ವಾಸ್ಥ್ಯಂ ಸರ್ವಾರ್ಥಸಾಧನಮ್ || ಮನುಷ್ಯನಿಗೆ ಆರೋಗ್ಯವೇ ಅತ್ಯಂತ ದೊಡ್ಡ ಭಾಗ್ಯ. ಅರೋಗ್ಯವು ಎಲ್ಲ ಸಾಧನೆಗಳಿಗೂ ಮೂಲ. ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬನೂ ಶಾಂತಿ ನೆಮ್ಮದಿ ಆರೋಗ್ಯ ಮತ್ತು ಆನಂದದಿಂದ ಜೀವಿಸಬೇಕೆನ್ನುವುದೇ ಸೃಷ್ಟಿಯ
ಬದುಕಿದೆಯಾ ಬಡಜೀವವೇ….? ಆತ ಬಲಶಾಲಿ ಮುದುಕ, ಕಲ್ಲಿನಲ್ಲಿ ಕಡೆದಂತಹ ಕಟ್ಟುಮಸ್ತಾದ ದೇಹ ಸುಮಾರು ಅರವತ್ತು ದಾಟಿರಬಹುದು. ಅತನಿಗೆ ಬುಧ್ದಿ ಬಂದಾಗಿಂದ ಬಹುಶಃ ಯಾವತ್ತು ಕೆಲಸವಿಲ್ಲದೆ ಮನೆಯಲ್ಲಿ ಕೂತಿರಲಿಕ್ಕಿಲ್ಲ. ಹರೆಯದ ಹುಡುಗರನ್ನು ನಾಚಿಸುವಂತಹ ಅಂಗಸೌಷ್ಠವ. ತರಾತುರಿಯಲ್ಲಿ ಬಂದಂತೆ ಕಾಣಿಸಿತು. ಕೇವಲ ಬನಿಯನ್ ಚಡ್ಡಿ
ಹೆಚ್ಚುತ್ತಿದೆ ಇ-ಸಿಗರೇಟಿನ ಹುಚ್ಚು. ಇತ್ತೀಚಿನ ದಿನಗಳಲ್ಲಿ, ತಂಬಾಕುವಿನ ಸಿಗರೇಟು ಸೇವನೆಯ ಚಟದಿಂದ ಮುಕ್ತರಾಗಲು ಇ-ಸಿಗರೇಟಿನ ಮೊರೆ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.ಇ-ಸಿಗರೇಟ್‍ನಿಂದಾಗಿ ಉಂಟಾಗುವ ಹಾನಿಗಳ ಬಗ್ಗೆ ಯಾವುದೇ ದೀರ್ಘಕಾಲಿಕ ಸಂಶೋಧನೆಗಳ ಫಲಿತಾಂಶ ಲಭ್ಯವಿಲ್ಲ. ಆದರೆ ತುಂಬಾ ಬಳಸುವುದು ಒಳ್ಳೆಯದಲ್ಲ. ಧೂಮಪಾನ
ಬೇಸಿಗೆಯ ಸುಡುಬಿಸಿಲು : ಕೆಲವು ಆರೋಗ್ಯ ಸಲಹೆಗಳು. ಬೇಸಿಗೆಯಲ್ಲಿ ಬಿಸಿ, ಗಾಳಿಯಲ್ಲಿ ತೇವ ಹೆಚ್ಚಾಗಿರುತ್ತದೆ. ಇದರಿಂದಾಗಿ ದೇಹವು ಶೀಘ್ರವಾಗಿ ಕಾವೇರುತ್ತದೆ. ಕೂಡಲೇ ದೇಹವನ್ನು ತಂಪು ಮಾಡಲು ಗ್ರಂಥಿಗಳು ಬೆವರನ್ನು ಹೆಚ್ಚಿಗೆ ಉತ್ಪತ್ತಿ ಮಾಡುತ್ತವೆ. ಹೀಗೆ ಬೆವರಿದಾಗ ನಮ್ಮ ಚರ್ಮದ ಮೇಲ್ಪದರದಲ್ಲಿದ್ದರೆ, ‘ಸ್ಟ್ರೇಟಮ್
ಸುಖನಿದ್ರೆ ಮಾಡುವುದರಿಂದ ಏಕಾಗ್ರತೆ, ಮೆದುಳು ಆಯಸ್ಸು ಹೆಚ್ಚುತ್ತದೆಯೇ? ಹೌದು. ಇದು ನಿಜ ಎನ್ನುತ್ತದೆ ಒಂದು ಸಂಶೋಧನೆ. ರಾತ್ರಿ ವೇಳೆ ನಿಗದಿತವಾಗಿ ಏಳು ಗಂಟೆಗಳ ಕಾಲ ಸುಖ ನಿದ್ರೆ ಮಾಡುವುದರಿಂದ ಮೆದುಳಿನ ಅಯಸ್ಸು ಎರಡು ವರ್ಷ ಹೆಚ್ಚಾಗುತ್ತದೆ. ಅಮೆರಿಕದ ಸಂಶೋಧಕರ ತಂಡವೊಂದು ಇತ್ತೀಚೆಗೆ
ದಿನನಿತ್ಯದ ಜೀವನದಲ್ಲಿ ನಮ್ಮ ಆರೋಗ್ಯ ಅತೀ ಮುಖ್ಯ. ಆರೋಗ್ಯಕ್ಕಿಂತ ಬೇರೊಂದು ಭಾಗ್ಯವಿಲ್ಲ. ಆರೋಗ್ಯವೇ ಇಲ್ಲದ ಮೇಲೆ ಲೌಕಿಕ ಸುಖಗಳು ಸುಖ, ನೆಮ್ಮದಿಯನ್ನು ಕೊಡುವುದಿಲ್ಲ. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತವಾದ ದಿನಚರಿ ವ್ಯಾಯಾಮ, ಶಾರೀರಿಕ ಚಟುವಟಿಕೆ, ನಿಗದಿತ ಪ್ರಮಾಣದ ಆಹಾರ, ಇವುಗಳ ಕಡೆಗೆ
ಜೀವನಶೈಲಿಯು ಆರೋಗ್ಯದ ಪ್ರಮುಖ ಅಂಶವೆಂಬುದು ವೈದ್ಯಲೋಕದ ಮಾತು. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವೈಯಕ್ತಿಕ ಆರೋಗ್ಯ ಮತ್ತು ಜೀವನದ ಗುಣಮಟ್ಟಕ್ಕೆ ಸಂಬಂಧಿಸಿದ 60% ದಷ್ಟು ಅಂಶಗಳು ಜೀವನಶೈಲಿಗೆ ಸಂಬಂಧಿದವುಗಳಾಗಿವೆ ಎನ್ನಲಾಗಿದೆ. ಸಾಕಷ್ಟು ಜನರು ಅನಾರೋಗ್ಯಕರ ಜೀವನಶೈಲಿಯನ್ನು ಅನುಸರಿಸುತ್ತಿದ್ದಾರೆ. ಆದ್ದರಿಂದ, ಚಯಾಪಚಯ ರೋಗಗಳು,