ಸಾಧನೆ ಪ್ರಕ್ರಿಯೆಯಲ್ಲಿ ಪೂರಕವಾದ ವಾತಾವರಣ ಇರಬೇಕು

ಸಾಧನೆ ಪ್ರಕ್ರಿಯೆಯಲ್ಲಿ ಪೂರಕವಾದ ವಾತಾವರಣ ಇರಬೇಕಾಗುತ್ತದೆ. ತಂದೆ-ತಾಯಿ, ಪೋಷಕರು ಮತ್ತು ಕುಟುಂಬ ಸದಸ್ಯರು ವಿದ್ಯಾರ್ಥಿಯ ಓದುವ ನಮೂನೆ, ವಿಧಾನ ಮತ್ತು ಫಲಿತಾಂಶಗಳ ಮೇಲೆ ನಿಗಾ ವಹಿಸಿ ಸ್ನೇಹಿತನಾಗಿ ಮತ್ತು ಪೋಷಕರಾಗಿ ಕಾರ್ಯನಿರ್ವಹಿಸಬೇಕು.

ಸಾಧನೆ ಪ್ರಕ್ರಿಯೆಯಲ್ಲಿ ಪೂರಕವಾದ ವಾತಾವರಣ ಇರಬೇಕು

ಯಾವುದೇ ಸಾಧನೆ ಇರಲಿ ಅದು ಬೇರ್ಪಟ್ಟ ಅಥವಾ ಪ್ರತ್ಯೇಕತೆಯ ಸ್ಥಳದಲ್ಲಿ ನಡೆಯುವುದಿಲ್ಲ. ಜೀವನದಲ್ಲಿನ ಸವಾಲುಗಳನ್ನು ಎದುರಿಸಲು ನಿಮಗೆ ನೆರವಾಗುವ ನಿಮ್ಮಲ್ಲಿನ ಸದೃಢ ಧೋರಣೆಗಳು ಮತ್ತು ನಂಬಿಕೆಗಳನ್ನು ಪೋಷಿಸಲು ಅನುವು ಮಾಡಿಕೊಡುವ ಮತ್ತು ಪೂರಕವಾದ ವಾತಾವರಣ ಇರಬೇಕಾಗುತ್ತದೆ. ನಿಮ್ಮ ಯಶಸ್ಸಿನ ಮೇಲೆ ಪ್ರಭಾವ ಬೀರುವ ಮೂರು ಸಂಭವೀನಿಯ ಕ್ಷೇತ್ರಗಳು ಇವೆ. ಅವುಗಳೆಂದರೆ : ಪೋಷಕರು ಮತ್ತು ಕುಟುಂಬದ ಸದಸ್ಯರು,  ಸಂಸ್ಥೆ, ಸಮಾನ ಮನಸ್ಕ ಸಮೂಹ.

1. ಪೋಷಕರು ಮತ್ತು ಕುಟುಂಬ ಸದಸ್ಯರು : ಗುರಿ ನಿಗದಿ ಪ್ರಕ್ರಿಯೆ ಮತ್ತು ಸಾಧನೆಯಲ್ಲಿ ತಂದೆ-ತಾಯಿ, ಪೋಷಕರು ಮತ್ತು ಕುಟುಂಬ ಸದಸ್ಯರು ಒಂದು ಭಾಗವಾಗಿರಬೇಕು. ಮಗು ತನ್ನ ಆಲೋಚನೆಗಳು ಮತ್ತು ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ಸಾಧ್ಯವಾಗುವಂತೆ ಹಾಗೂ ಚಿಂತನೆ ಮತ್ತು ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುವಂತೆ ಪೋಷಕರು ಮತ್ತು ಕುಟುಂಬ ಸದಸ್ಯರುಗಳು ಒಂದು ಮುಕ್ತ ವಾತಾವರಣವನ್ನು ಒದಗಿಸಬೇಕು. ವಿದ್ಯಾರ್ಥಿಯ ಓದುವ ನಮೂನೆ, ವಿಧಾನ ಮತ್ತು ಫಲಿತಾಂಶಗಳ ಮೇಲೆ ನಿಗಾ ವಹಿಸಿ ಸ್ನೇಹಿತನಾಗಿ ಮತ್ತು ಪೋಷಕರಾಗಿ ಕಾರ್ಯನಿರ್ವಹಿಸಬೇಕು. ಇದರಿಂದ ತಮ್ಮ ಮಕ್ಕಳಿಗೆ ಸೂಕ್ತ ಮತ್ತು ಸರಿಯಾದ ಫೀಡ್‍ಬ್ಯಾಕ್‍ನನ್ನು ಅವರು ಒದಗಿಸಿದಂತಾಗುತ್ತದೆ ಹಾಗೂ ಸರಿಯಾದ ದಿಕ್ಕಿನಲ್ಲಿ ತಮ್ಮ ಶಕ್ತಿಗಳು ಮತ್ತು ಚಿಂತನೆಗಳನ್ನು ಕ್ರಮಬದ್ಧಗೊಳಿಸಲು ಸಾಧ್ಯವಾಗುತ್ತದೆ.

2. ಸಂಸ್ಥೆಗಳು : ಒಬ್ಬ ವಿದ್ಯಾರ್ಥಿಯು ತನ್ನ ವಿದ್ಯಾರ್ಥಿ ಜೀವನದ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಶಾಲಾ/ಕಾಲೇಜು/ಶಿಕ್ಷಣ ಸಂಸ್ಥೆಗಳಲ್ಲಿ ಕಳೆಯುತ್ತಾನೆ. ಸಾಧನೆ ಪ್ರಕ್ರಿಯೆಗೆ ಅನುವು ಮಾಡಿಕೊಡಲು ಇದು ನೆರವಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಪ್ರೇರಣೆ ನೀಡಲು ಹಾಗೂ ಒಂದು ಸಕರಾತ್ಮಕ, ಸ್ವಾಭಾವಿಕ ಮತ್ತು ಸವಾಲುಗಳನ್ನು ಎದುರಿಸುವ ವಾತಾವರಣವನ್ನು ಸೃಷ್ಟಿಸಲು ಶಿಕ್ಷಕರು/ಉಪನ್ಯಾಸಕರು ವಿಶಿಷ್ಟ ಪಾತ್ರ ವಹಿಸುತ್ತಾರೆ. ಶಿಕ್ಷಕರು/ಉಪನ್ಯಾಸಕರು ವಿದ್ಯಾರ್ಥಿಗಳಲ್ಲಿ ಮುಕ್ತ ಆಲೋಚನೆ, ಪ್ರಶ್ನಿಸುವ ಮನೋಭಾವ ಮತ್ತು ಮುಕ್ತ ಪ್ರಶ್ನಾವಳಿಗಳಿಗೆ ಪ್ರೋತ್ಸಾಹ ನೀಡಬೇಕು. ನಮಗೆಲ್ಲ ತಿಳಿದಿರುವಂತೆ ಓರ್ವ ಶಿಕ್ಷಕ ಒಬ್ಬ ತತ್ತ್ವಜ್ಞಾನಿ, ಗುರು ಮತ್ತು ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ. ಹೀಗಾಗಿ ಅವರು ವಾಸ್ತವ ಜೀವನದ ಮಾರ್ಗದರ್ಶನ ನೀಡಬೇಕು. ಶಿಕ್ಷಕರು/ಉಪನ್ಯಾಸಕರು ಉದಯೋನ್ಮುಖ ಯುವಕ/ಯುವತಿಯರಿಗೆ ಆದರ್ಶಪ್ರಾಯರಾಗಿರಬೇಕು.

3. ಸಮಾನ ಮನಸ್ಕ ಸಮೂಹ : ಸಮಾನ ಮನಸ್ಕ ಸಮೂಹವು ಸಾಧಕನ ಚಿಂತನೆಗಳು, ಭಾವನೆಗಳು ಹಾಗೂ ಕ್ರಿಯೆಗಳ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುತ್ತದೆ. ಹೀಗಾಗಿ ಸರಿಯಾದ ಸಮಾನ ಮನಸ್ಕರನ್ನು ಆಯ್ಕೆ ಮಾಡಿಕೊಳ್ಳುವುದು ತುಂಬಾ ಮಹತ್ವದ್ದು ಮತ್ತು ಮುಖ್ಯವಾದುದು ಆಗಿರುತ್ತದೆ. ಮಾನದಂಡವು ಗುರುತಿಸಲಾದ ಗುರಿ/ಕನಸನ್ನು ವ್ಯಾಪಿಸಬೇಕು; ಜ್ಞಾನದ ವಿನಿಮಯವು ಸಾಧನೆಯಲ್ಲಿ ಪರಸ್ಪರರಿಗೆ ಅನುಕೂಲವಾಗಬೇಕು. ಒಂದು ಸ್ಪಷ್ಟವಾದ ದೃಷ್ಟಿಕೋನದೊಂದಿಗೆ ಸಮಾನ ಮನಸ್ಕರ ಗುಂಪನ್ನು ರಚಿಸಬೇಕು. ಸಮಾನ ಮನಸ್ಕರ ಸಮೂಹದಲ್ಲಿ, ಭಾವನೆಗಳು ಆರೋಗ್ಯಕರ ಪೈಪೋಟಿ ಕಡೆಗೆ ಇರಬೇಕು ಹಾಗೂ ಬೆಸೆದುಕೊಂಡಿರುವಂತೆ ಪರಸ್ಪರ ಪೂರಕವಾಗುವಂತೆ ವಿನಿಮಯಕ್ಕೆ ಅನುವು ಮಾಡಿಕೊಡಬೇಕು.

ಈ ಪ್ರಕ್ರಿಯೆಲ್ಲಿ ಪಾಲಿಸಬೇಕಾದ ಕೆಲವು ವಿಷಯಗಳನ್ನು ಈ ಕೆಳಗೆ ತಿಳಿಸಲಾಗಿದೆ :

happy-life.j

1. ಟೆಲಿವಿಷನ್, ಮೊಬೈಲ್, ಮೇಲ್, ಗೇಮಿಂಗ್, ಕುಟುಂಬದ ವಿಹಾರ ಮುಂತಾದ ಅಡಚಣೆಗಳನ್ನು ತಪ್ಪಿಸಬೇಕು. ಇವುಗಳನ್ನು ಮುಂದಕ್ಕೆ ಹಾಕಬೇಕು.

2. ಜಂಕ್ ಫುಡ್‍ಗಳು ಅಥವಾ ದಿಢೀರ್ ಆಹಾರಗಳು ದೇಹದ ಪರಿವರ್ತನೆ ಮತ್ತು ಸಂಭವನೀಯ ಅನಾರೋಗ್ಯದಿಂದ ತೊಂದರೆ ಉಂಟು ಮಾಡಬಹುದು. ಆದ್ದರಿಂದ ಇಂಥ ಆಹಾರ ಪದಾರ್ಥಗಳ ಯನ್ನು ತಪ್ಪಿಸಬೇಕು ಅಥವಾ ಕಡಿಮೆ ಮಾಡಬೇಕು.

Also Read: ಜಂಕ್ ಫುಡ್ ಖಯಾಲಿ ಮಾಡಿಕೊಂಡಲ್ಲಿ ಆಪಾಯ ಕಟ್ಟಿಟ್ಟ ಬುತ್ತಿ. 

3. ಅಂತಿಮವಾಗಿ, ಒಂದು ಯೋಜಿತ ಕಾರ್ಯ ವೇಳಾಪಟ್ಟಿಗೆ ಪ್ರೋತ್ಸಾಹ ನೀಡಿ.

ಪ್ರೊ.ವಿ.ಬಿ. ನಂದಗೋಪಾಲ್
ಎ 103, ಓಕ್‍ಯಾರ್ಡ್ ಅಪಾರ್ಟ್‍ಮೆಂಟ್ಸ್, 38ನೇ ಅಡ್ಡರಸ್ತೆ 
9ನೇ ಬ್ಲಾಕ್, ಜಯನಗರ, ಬೆಂಗಳೂರು-560069  ಮೊಬೈಲ್ : 9845218844

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!