ಆಸ್ತಮಾವನ್ನು ನಿಲ್ಲಿಸಿ

ಆಸ್ತಮಾವನ್ನು ನಿಲ್ಲಿಸಿ – ಅನೇಕರು ಆಸ್ತಮಾದಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡಲು ಅಥವಾ ನಿಯಂತ್ರಿಸಲು ಕಷ್ಟ ಪಡುತ್ತಿದ್ದಾರೆ. ಅವರ ಅನೇಕ ಅನುಮಾನಗಳಿಗೆ ಪರಿಹಾರ ಸಿಗುತ್ತಿಲ್ಲ. ಅನೇಕ ಪೋಷಕರು ಪದೇ ಪದೇ ಕೇಳುವ ಪ್ರಶ್ನೆಗಳಿಗೆ ಹಾಗು ಸಮಸ್ಯೆಗಳಿಗೆ ಉತ್ತರ ಇಲ್ಲಿವೆ.

ಇದು ಅಸ್ತಮಾವೇ?
ಆಸ್ತಮಾವು ಶ್ವಾಸಕೋಶದಲ್ಲಿನ ಶ್ವಾಸನಾಳದ ಕಾಯಿಲೆಯಾಗಿದೆ, ಇದರಲ್ಲಿ ವಾಯುಮಾರ್ಗಗಳು ಊದಿಕೊಳ್ಳುತ್ತವೆ, ಕಿರಿದಾಗುತ್ತದೆ ಮತ್ತು ಉದ್ರೇಕಕಾರಿಗಳಿಗೆ ಪ್ರತಿಕ್ರಿಯಿಸುತ್ತದೆ. ಆದ್ದರಿಂದ ಕೆಮ್ಮು, ಉಸಿರಾಟದ ತೊಂದರೆ, ಉಸಿರಾಡುವಾಗ ಶಬ್ದ ಮತ್ತು ಎದೆಯ ಅಸ್ವಸ್ಥತೆಯ ಪುನರಾವರ್ತಿತ ದಾಳಿಗೆ ಕಾರಣವಾಗುತ್ತದೆ. ಜೀವನಶೈಲಿ ಮತ್ತು ಪರಿಸರ ಬದಲಾವಣೆಗಳಿಂದ ಕೆಲವು ಪ್ರಕರಣಗಳನ್ನು ಪರಿಹರಿಸಬಹುದು. ರೋಗಲಕ್ಷಣಗಳು ಇತರೆ ಪರಿಸ್ಥಿತಿಗಳನ್ನು ಸೂಚಿಸುವುದರಿಂದ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಆಸ್ತಮಾದ ರೋಗನಿರ್ಣಯವು ಒಂದು ದೊಡ್ಡ ಸವಾಲಾಗಿರುತ್ತದೆ. ಹಿರಿಯ ಮಕ್ಕಳಿಗೆ ಪಲ್ಮನರಿ ಫಂಕ್ಷನ್ ಪರೀಕ್ಷೆಯು ಶ್ವಾಸಕೋಶದ ಕೆಲಸವನ್ನು ಗಮನಿಸಲು ಸಹಾಯ ಮಾಡುತ್ತದೆ.

Stop asthma

ಮಕ್ಕಳು ಆಸ್ತಮಾದಿಂದ ಏಕೆ ಬಳಲುತ್ತಾರೆ?
ಆನುವಂಶಿಕ ಪ್ರವೃತ್ತಿಯನ್ನು ಪಡೆದ ಮತ್ತು ಪರಿಸರದಲ್ಲಿನ ಪ್ರಚೋದಕಗಳಿಗೆ ಒಳಗೊಂಡ ಮಕ್ಕಳು ಆಸ್ತಮಾಗೆ ಒಳಗಾಗುತ್ತಾರೆ. ಈ ಮಕ್ಕಳಿಗೆ ವಾಯುಮಾರ್ಗಗಳಲ್ಲಿ ಉರಿಯೂತ ಉಂಟಾಗುತ್ತದೆ. ಮಕ್ಕಳಲ್ಲಿ ಆಸ್ತಮಾದ ಸಾಮಾನ್ಯ ಪ್ರಚೋದಕಗಳು ಮುಖ್ಯವಾಗಿ ಶೀತವಾಗಿದೆ. ಇತರ ಉದ್ರೇಕಕಾರಿಗಳು ಎಂದರೆ – ಧೂಳು, ಪರಾಗ, ಹೊಗೆ ಮತ್ತು ವಾಯು ಮಾಲಿನ್ಯಕಾರಕಗಳು.

ಮಗುವಿಗೆ ಆಸ್ತಮಾ ಅಪಾಯವಿದೆಯೇ ಎಂದು ನಾವು ಗುರುತಿಸಬಹುದೇ?
ಆನುವಂಶಿಕತೆ ಅಲರ್ಜಿ ಆಸ್ತಮಾದ ಪ್ರಧಾನ ಅಪಾಯಕಾರಿ ಅಂಶವಾಗಿದೆ. ಇಬ್ಬರಲ್ಲಿ ಒಬ್ಬ ಪೋಷಕರಿಗೆ ಅಲರ್ಜಿ ಅಥವಾ ಆಸ್ತಮಾ ಇದ್ದರೆ, ಮಗುವಿಗೆ ಆಸ್ತಮಾ ಬರುವ ಅಪಾಯ ಸುಮಾರು 50%. ಇಬ್ಬರೂ ಪೋಷಕರಿಗೆ ಅಲರ್ಜಿ ಅಥವಾ ಆಸ್ತಮಾ ಇದ್ದರೆ ಮಗುವಿಗೆ ಆಸ್ತಮಾ ಬರುವ ಸಾಧ್ಯತೆ 75% ನಷ್ಟು.

ಯಾವ ಅಲರ್ಜಿನ್ ಗಳನ್ನು ತಪ್ಪಿಸಬೇಕು?
ಒಳಾಂಗಣ ಅಲರ್ಜಿನ್
ಬ್ಲಾಕ್ ಮೊಲ್ಡ್ ಫಂಗಸ್
ಧೂಳಿನ ಹುಳಗಳು
ಬೆಕ್ಕು ಮತ್ತು ನಾಯಿ ತಲೆಹೊಟ್ಟು
ಹೊಗೆ – ತಂಬಾಕು, ಅಡುಗೆ ಹೊರಾಂಗಣ ಅಲರ್ಜಿನ್
ಹೂವಿನ ಪರಾಗ
ಹೊಗೆ- ವಿವಿಧ ವಾಹನಗಳ

ಆಸ್ತಮಾ ಇರುವ ಮಗುವಿಗೆ ಯಾವ ಆಹಾರವನ್ನು ನೀಡಬಾರದು?
ಸಾಮಾನ್ಯವಾಗಿ ಶೀತವನ್ನು ಉಂಟುಮಾಡುವ ತಂಪು ಆಹಾರ ಪದಾರ್ಥಗಳು ಮತ್ತು ಕೆಲವು ಹಣ್ಣುಗಳನ್ನು ತಪ್ಪಿಸಿ. ಅಪರೂಪವಾಗಿ ಮಗುವಿಗೆ ಹಾಲು, ಮೊಟ್ಟೆ, ಕಡಲೆಕಾಯಿ, ಡ್ರೈಫ್ರೂಟ್ಸ್, ಸೋಯಾ, ಗೋಧಿ, ಮೀನು ಮತ್ತು ಚಿಪ್ಪುಮೀನುಗಳಂತಹ ಕೆಲವು ಆಹಾರಗಳಿಗೆ ಅಲರ್ಜಿಯಾಗಬಹುದು.

ಮಗುವಿಗೆ ಅಲರ್ಜಿ ಪರೀಕ್ಷೆ ಅಗತ್ಯವಿದೆಯೇ?
ಇಲ್ಲ, ಅನಗತ್ಯ ಪರೀಕ್ಷೆಯ ಅಗತ್ಯವಿಲ್ಲ

ಮಗುವಿನ ಆಸ್ತಮಾಕ್ಕೆ ಏರ್ ಕ್ಲೀನರ್ ಸಹಾಯ ಮಾಡುತ್ತದೆಯೇ?
ಧೂಳು ಮತ್ತು ಪರಾಗದಂತಹ ಸಣ್ಣ ಕಣಗಳಿಗೆ ಇದು ಪರಿಣಾಮಕಾರಿಯಲ್ಲ. ಊಇPಂ (ಹೈ ಎಫಿಶಿಯೆನ್ಸೀ ಪರ್ಟಿಕ್ಯುಲೇಟ್ ಏರ್), ಸಾಕುಪ್ರಾಣಿಗಳ ತಲೆಹೊಟ್ಟು ಫಿಲ್ಟರ್ ಮಾಡಲು ಪರಿಣಾಮಕಾರಿ ಎಂದು ಸಾಬೀತಾಗಿದೆ

ಮಗುವಿಗೆ ಓಡಿದ ನಂತರ ಉಸಿರುಗಟ್ಟುತ್ತದೆ. ಅವನು ಆಟಗಳನ್ನು ತಪ್ಪಿಸಬೇಕೇ?
ವ್ಯಾಯಾಮ-ಪ್ರೇರಿತ ಆಸ್ತಮಾ (ಇIಂ) ಹೊಂದಿರುವ ಮಕ್ಕಳಿಗೆ ಓಟ, ಈಜು ಅಥವಾ ಬೈಕಿಂಗ್ನಂತಹ ಚಟುವಟಿಕೆಯ ನಂತರ ಆಸ್ತಮಾ ರೋಗಲಕ್ಷಣಗಳು ಕಾಣಿಸಬಹುದು. ವ್ಯಾಯಾಮದ ನಂತರದ 5-20 ನಿಮಿಷಗಳ ಸಮಯದಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳ ಬಹುದು. ಸರಿಯಾದ ಔಷಧಿಗಳೊಂದಿಗೆ, ಇIಂ ಇರುವ ಮಕ್ಕಳು ಸಾಮಾನ್ಯವಾಗಿ ಯಾವುದೇ ಸಮಸ್ಯೆಯಿಲ್ಲದೆ ಕ್ರೀಡೆಗಳಲ್ಲಿ ಭಾಗವಹಿಸಬಹುದು. ನಿಮ್ಮ ಆಸ್ತಮಾವನ್ನು ನಿಯಂತ್ರಿಸಿ ವ್ಯಾಯಾಮವನ್ನು ಅಲ್ಲ.

ನಿವಾರಕ ಮತ್ತು ನಿಯಂತ್ರಕ ಔಷಧಿಗಳು ಯಾವುವು?
ನಿಯಂತ್ರಕಗಳು ಆಸ್ತಮಾದ ಉರಿಯೂತವನ್ನು ಕಡಿಮೆ ಮಾಡುವ ಔಷಧಿಗಳಾಗಿವೆ. ಇದು ಶ್ವಾಸನಾಳದಲ್ಲಿ ಊತವನ್ನು ಕಡಿಮೆ ಮಾಡುತ್ತದೆ. ಅವುಗಳಲ್ಲಿ ಅತ್ಯಂತ ಪರಿಣಾಮಕಾರಿ ಸ್ಟೆರಾಯ್ಡ್. ಸೂಚನೆಯಂತೆ ನಿಯಮಿತವಾಗಿ ತೆಗೆದುಕೊಂಡರೆ ಈ ಔಷಧಿಗಳು ಆಸ್ತಮಾದ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಮಗುವಿಗೆ ಉಬ್ಬಸ ವಿಲ್ಲದಿದ್ದರೂ ಸಹ ಅವುಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ನಿವಾರಕಗಳು ಕಿರಿದಾದ ವಾಯುಮಾರ್ಗ ತೆರೆಯಲು ಸಹಾಯಮಾಡುತ್ತದೆ. ಕಿರಿದಾದ ಶ್ವಾಸನಾಳವನ್ನು (ಬ್ರಾಂಕೋಡೈಲೇಟರ್ಗಳು) ಹಿಗ್ಗಿಸುವ ಮೂಲಕ ತ್ವರಿತ ಪರಿಹಾರವನ್ನು ನೀಡುತ್ತದೆ. ಇದು ರೋಗಲಕ್ಷಣಗಳನ್ನು ಮಾತ್ರ ನಿವಾರಿಸುತ್ತದೆ. ಆದರೆ ಶ್ವಾಸನಾಳದ ಉರಿಯೂತವನ್ನು ಅಲ್ಲ. ನಾವು ದೀರ್ಘಾವಧಿಯಲ್ಲಿ ನಿಯಂತ್ರಕ ಔಷಧಿ ಬಳಸಬೇಕು ಮತ್ತು ತ್ವರಿತ ಪರಿಹಾರಕ್ಕೆ ನಿವಾರಕಗಳನ್ನು ಬಳಸಬೇಕು.

ನೆಬ್ಯುಲೈಸರ್ ಅಥವಾ ಇನ್ಹೇಲರ್ ಗಳನ್ನು ಬಳಸಬೇಕೇ?
ಮೀಟರ್ ಡೋಸ್ ಇನ್ಹೇಲರ್ ಗಳು – ಒಆI (ಸ್ಪೇಸರ್ಗಳೊಂದಿಗೆ) ನೆಬ್ಯುಲೈಸರ್ ಗಳಿಗಿಂತ ಉತ್ತಮವಾಗಿವೆ. ರೋಗಲಕ್ಷಣಗಳ ಪರಿಹಾರಕ್ಕಾಗಿ ಪೋಷಕರು ನೆಬ್ಯುಲೈಸರ್ಗಳನ್ನು ಖರೀದಿಸುವುದು ಮತ್ತು ದೀರ್ಘಕಾಲೀನ ಔಷಧಿಗಳನ್ನು ತೆಗೆದುಕೊಳ್ಳದಿರುವುದು ಸೂಕ್ತವಲ್ಲ.

ಸ್ಪೇಸರ್ ಎಂದರೇನು ಮತ್ತು ಸ್ಪೇಸರ್ ಅನ್ನು ಬಳಸುವುದು ಅಗತ್ಯವೇ?
ಸ್ಪೇಸರ್ ಒಆI ಗೆ ಲಗತ್ತಿಸಲಾದ ಚೇಂಬರ್ ಆಗಿದೆ. ಇದು ಔಷಧಿಗಳು ವೇಗವಾಗಿ ಒಳಗೆ ಹೋಗುವುದನ್ನು ತಪ್ಪಿಸುತ್ತದೆ. ಇದು ಮಗುವಿಗೆ ತನ್ನದೇ ಆದ ವೇಗದಲ್ಲಿ ತನ್ನ ಶ್ವಾಸಕೋಶಕ್ಕೆ ಔಷಧಿಗಳನ್ನು ಉಸಿರಾಡಲು ಸಹಾಯ ಮಾಡಿಕೊಡುತ್ತದೆ. ಹೆಚ್ಚು ಔಷಧಿ ದೇಹದ ಒಳಗೆ ಹೋಗುವುದ್ದನ್ನು ತಪ್ಪಿಸಲು ಮಕ್ಕಳಿಗೆ ಸ್ಪೇಸರ್ಗಳನ್ನು ಶಿಫಾರಸು ಮಾಡಲಾಗುತ್ತದೆ.

ಸ್ಟೀರಾಯ್ಡ್ ಏಕೆ?
ಸ್ಟೀರಾಯ್ಡ್ ಗಳು ಉರಿಯೂತಕ್ಕೆ ಅತ್ಯಂತ ಪರಿಣಾಮಕಾರಿ ಔಷಧಗಳಾಗಿವೆ. ಕಡಿಮೆ ಪ್ರಮಾಣದಲ್ಲಿ ಬಳಸಿದರೆ ಇದು ಸುರಕ್ಷಿತ ಎಂದು ಹೇಳಬಹುದು. ವಾಸ್ತವವಾಗಿ ಇದನ್ನು ಹೆಚ್ಚಿನ ಆಸ್ತಮಾ ರೋಗಿಗಳು ಬಳಸುತ್ತಾರೆ. ಇನ್ಹೇಲ್ ಸ್ಟೀರಾಯ್ಡ್ ಶಿಶುಗಳಲ್ಲಿ ಅಸ್ತಮಾವನ್ನು ನಿರ್ವಹಿಸಲು ಉತ್ತಮವಾಗಿದೆ. ಮಗುವಿನ ವಯಸ್ಸನ್ನು ಅವಲಂಬಿಸಿ, ನೀವು ಒಆI ಮೂಲಕ (ಸ್ಪೇಸರ್ನೊಂದಿಗೆ) ಇನ್ಹೇಲ್ ಆಸ್ತಮಾ ಔಷಧಿಗಳನ್ನು ಬಳಸಬಹುದು. ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮಾಸ್ಕ್ ಅಗತ್ಯವಿದೆ.

ಮಗುವಿನ ಆಸ್ತಮಾ ನಿಯಂತ್ರಣದಲ್ಲಿದೆಯೇ ಎಂದು ಹೇಗೆ ತಿಳಿಯುವುದು? ಮಗು ಚೇತರಿಸಿಕೊಂಡರೂ ಆಸ್ತಮಾ ಔಷಧಿಗಳನ್ನು ತೆಗೆದುಕೊಳ್ಳಬೇಕೇ?
ಮಕ್ಕಳು ನಿವಾರಕ ಮತ್ತು ನಿಯಂತ್ರಕ ಔಷಧಿ ತೆಗೆದುಕೊಂಡಾಗ ರೋಗಲಕ್ಷಣಗಳು ಕಡಿಮೆಯಾದ್ದಂತೆ ಕಾಣಿಸಬಹುದು ಆದರೆ ಇನ್ನೂ ಶ್ವಾಸನಾಳದಲ್ಲಿ ಉರಿಯೂತ ಕಡಿಮೆಯಾಗಿರುವುದಿಲ್ಲ. ಪೋಷಕರು ಶಿಶುವೈದ್ಯರ ಸೂಚನೆಗಳನ್ನು ಅನುಸರಿಸಬೇಕು ಹಾಗು ನಿಯಂತ್ರಕಗಳನ್ನು ಮುಂದುವರಿಸಬೇಕು. ಅದು ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತದೆ ಮತ್ತು ಗುಣವಾಗುತ್ತದೆ. ಅವರು ಥಟ್ಟನೆ ಔಷಧಿಗಳನ್ನು ನಿಲ್ಲಿಸಬಾರದು. ಬೆಳೆದ ಮಕ್ಕಳಲ್ಲಿ ನಿಯಂತ್ರಕಗಳನ್ನು ನಿಲ್ಲಿಸುವ ಮೊದಲು ಪಲ್ಮನರಿ ಫಂಕ್ಷನ್ ಪರೀಕ್ಷೆಗಳನ್ನು ಮಾಡಲಾಗುತ್ತದೆ.

ಆಸ್ತಮಾದ ಬಗ್ಗೆ ಮಕ್ಕಳ ಶಾಲೆಯಲ್ಲಿ ಮಾತನಾಡಬೇಕೇ?
ಮಗುವಿನ ಶಿಕ್ಷಕರು, ತರಬೇತುದಾರರು ಮತ್ತು ಶಾಲಾ ದಾದಿಯರು ಮಕ್ಕಳ ಆಸ್ತಮಾದ ಬಗ್ಗೆ ತಿಳಿದಿರುವುದು ಮುಖ್ಯ. ಮಗುವಿಗೆ ಔಷಧಿಯನ್ನು ಶಾಲೆಗೆ ತೆಗೆದುಕೊಂಡು ಹೋಗುವುದಕ್ಕೆ ಅನುಮತಿ ಪಡೆಯಿರಿ. ಶಾಲೆಯಲ್ಲಿ ಸರಿಯಾದ ಔಷಧಿ ಇದೆಯೇ ಎಂದು ಖಚಿತಪಡಿಸಿಕೊಳ್ಳಿ.

Dr Subramanya

ಪ್ರೊ.ಡಾ ಸುಬ್ರಹ್ಮಣ್ಯ ಎನ್ ಕೆ

ವೈದೇಹಿ ಆಸ್ಪತ್ರೆ
ವೈಟ್‍ಫೀಲ್ಡ್, ಬೆಂಗಳೂರು-66
ದೂ.:  +91-80-49069000 Extn: 1147/1366
www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!