ವಿಟಮಿನ್-ಸಿ ಮಾತ್ರೆ ಕೆಲವರ ವಾಣಿಜ್ಯ ಲಾಭಗಳು ಅನೇಕರ ಅಗತ್ಯಗಳನ್ನು ಬಾಧಿಸುತ್ತಿವೆಯೆ? ಭಾರತದಲ್ಲಿ ತಯಾರಿಸಿ ಪರಿಕಲ್ಪನೆಯು, ಕೈಗೆಟುಕುವ ದರಗಳಲ್ಲಿ ಔಷಧಗಳು ಲಭ್ಯವಾಗುವಂತೆ ಮಾಡಬೇಕೇ ಹೊರತು ರೋಗಿಗಳಿಗೆ ಅವುಗಳ ಪ್ರವೇಶಾವಕಾಶವನ್ನು ನಿರ್ಬಂಧಿಸಬಾರದು.
ಔಷಧ ತಯಾರಿಕೆ ಕ್ಷೇತ್ರದಲ್ಲಿ, 2015 ಅನ್ನು “ಎಪಿಐಗಳ(ಆ್ಯಕ್ಟಿವ್ ಫಾರ್ಮಾಸ್ಯೂಟಿಕಲ್ ಇಂಗ್ರೀಡಿಯೆಂಟ್ಸ್)ವರ್ಷ” ಎಂದು ಘೋಷಿಸುವ ಮೂಲಕ ಭಾರತವು ಸ್ವಾವಲಂಬನೆಯ ಯೋಜನೆ ಹಾಕಿತು. ಆಗಿನಿಂದಲೂ ದೇಶವು ತನ್ನ ಸಕ್ರಿಯ ಔಷಧ ತಯಾರಿಕಾ ಸಾಮಗ್ರಿಗಳಿಗಾಗಿ(ಎಪಿಐ) ಬಾಹ್ಯ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ 2019ರಲ್ಲಿ ಕೂಡ ಭಾರತ ತನ್ನ ಎಪಿಐನ 68% ಅನ್ನು ದೇಶದ ಹೊರಗಿನಿಂದ ಬಹುತೇಕವಾಗಿ ಚೀನಾದಿಂದ ಆಮದು ಮಾಡಿಕೊಳ್ಳುತ್ತಿತ್ತು. ಇದು ಏನು ಹೇಳುತ್ತದೆ?
ಭಾರತದ ಸ್ವಾವಲಂಬನೆಯ ಯೋಜನೆ ಅನಾವರಣಗೊಳಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ ಮತ್ತು ‘ದೊಡ್ಡ ವಾಗ್ದಾನ”ಗಳನ್ನು ನೀಡುವ ಮುನ್ನ ನಾವು ದೇಶೀಯ ಉತ್ಪಾದನೆಯನ್ನು ಬಲಪಡಿಸುವ ಅಗತ್ಯವಿದೆ. ಇಂದು, ಭಾರತವು ವಿಶ್ವದ ಔಷಧ ತಯಾರಿಕೆಯ ಮುಖ್ಯ ಉತ್ಪಾದನಾ ಕೇಂದ್ರ. ಉದಾಹರಣೆಗೆ ವಿಟಮಿನ್ ಸಿ ಅನ್ನೇ ತೆಗೆದುಕೊಳ್ಳಿ. ರೋಗನಿರೋಧಕವನ್ನು ಹೆಚ್ಚಿಸುವ ಈ ಔಷಧವನ್ನು ಉತ್ಪಾದಿಸಲು ಬಳಸುವ ಕಚ್ಚಾ ವಸ್ತುವಿನ ಬೆಲೆ ಗಗನಕ್ಕೇರಿದೆ.
ಭಾರತದ ವಿಟಮಿನ್-ಸಿ ಮಾತ್ರೆಗಳ ಕಥೆಯನ್ನು ಆಳವಾಗಿ ಅಗೆದು ನೋಡಬೇಕು
ವಿಟಮಿನ್-ಸಿ ಪೂರಕ ಎರಡು ವರ್ಗಗಳಲ್ಲಿ ಲಭ್ಯವಿದೆ- ಒಂದು ಅತ್ಯಗತ್ಯ ಔಷಧವಾಗಿ ಮತ್ತೊಂದು ಪೂರಕ ಆಹಾರವಾಗಿ. ಆದ್ದರಿಂದಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ರ್ಯಾಂಡ್‍ಗಳ ಬೆಲೆಗಳಲ್ಲಿ ವ್ಯತ್ಯಾಸ ಕಾಣಿಸುತ್ತಿದೆ. ಇದನ್ನು ಒಂದು ಉದಾಹರಣೆಯೊಂದಿಗೆ ಗಮನಿಸೋಣ. ಉದಾಹರಣೆಗೆ, ಅತ್ಯಂತ ಬೇಡಿಕೆಯಲ್ಲಿರುವ ಲಿಮ್ಸೀ(Limcee) ಮತ್ತು ಸೆಲಿನ್(Celin) ತೆಗೆದುಕೊಳ್ಳಿ; ಇವು ಅತ್ಯಗತ್ಯ ಔಷಧಗಳೆಂದು ಗುರುತಿಸಲ್ಪಟ್ಟ ಔಷಧಗಳಾಗಿವೆ. ಆದ್ದರಿಂದ, ಇವುಗಳನ್ನು ದರ ನಿಯಂತ್ರಣದಡಿ, ಅತ್ಯಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿ (ಎನ್‍ಎಲ್‍ಇಎಮ್) ಅಡಿ ವರ್ಗೀಕರಿಸಲಾಗಿದೆ. ಇವು ಭಾರತದ ಔಷಧಗಳ ಮಹಾಪ್ರಬಂಧಕರ(ಡಿಜಿಸಿಐ) ಮತ್ತು ರಾಷ್ಟ್ರೀಯ ಔಷಧ ತಯಾರಿಕಾ ದರ ನಿಗದಿ ಪ್ರಾಧಿಕಾರದ ವ್ಯಾಪ್ತಿಯಡಿ ಬರುತ್ತವೆ. ಪ್ರಸ್ತುತ, ಲಿಮ್ಸೀದ ಬೆಲೆ ಪ್ರತಿ ಮಾತ್ರೆಗೆ ರೂ. 1.67 ಆಗಿದೆ.
ನಾಣ್ಯದ ಮತ್ತೊಂದು ಬದಿಯಲ್ಲಿ, ಭಾರತದ ಆಹಾರ ಸುರಕ್ಷತೆ ಹಾಗು ಮಾನದಂಡಗಳ ಪ್ರಾಧಿಕಾರ(FSSAI)ದ ವ್ಯಾಪ್ತಿಯಡಿ ಬರುವ ವಿಟಮಿನ್ ಸಿ ಪೂರಕಾಹಾರಗಳಿದ್ದು, ಔಷಧವನ್ನು ಪೂರಕಾಹಾರವೆಂದು ಪರಿಗಣಿಸಲಾಗುತ್ತದೆ ಮತ್ತು ಉತ್ಪಾದಕರು ನಿಯಂತ್ರಿತ ದರದ ಸ್ವಾತಂತ್ರ್ಯವನ್ನು ಹೊಂದಿ ಮುಕ್ತವಾಗಿ ಅವುಗಳ ದರವನ್ನು ಏರಿಸಬಹುದಾಗಿದೆ. ಅನೇಕ ಹೊಸ ಸಂಸ್ಥೆಗಳು ಕೂಡ, ಕಳೆದ ಕೆಲವು ವರ್ಷಗಳಲ್ಲಿ ತಮ್ಮ ಬ್ರ್ಯಾಂಡ್‍ಗಳನ್ನು ಪೂರಕಾಹಾರಗಳೆಂದು ಪರಿಚಯಿಸಿವೆ. ಪ್ರಸ್ತುತ ಏರ್ಪಡುತ್ತಿರುವ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿನ ಹೆಚ್ಚಿದ ಬೇಡಿಕೆಯ ಪ್ರಯೋಜನ ಪಡೆದುಕೊಂಡು, ಇವು ಎನ್‍ಎಲ್‍ಇಎಮ್ ಬ್ರ್ಯಾಂಡುಗಳಿಗೆ ವಿಧಿಸಿರುವುದಕ್ಕಿಂತ ಅನೇಕ ಪಟ್ಟು ಬೆಲೆ ನಿಗದಿ ಪಡಿಸಿವೆ.(ಕೆಲವೊಂದು ಸಂದರ್ಭಗಳಲ್ಲಿ ಒಂದು ಮಾತ್ರೆಯ ಬೆಲೆ ರೂ. 12.25 ಆಗಿರುವುದೂ ಇದೆ).
ನಾವು ವಿಟಮಿನ್ ಸಿ ಗಾಗಿ ಎಪಿಐ ಸರಬರಾಜುಗಳ ಬಗ್ಗೆ ಮಾತನಾಡುವಾಗ, “ಭಾರತದಲ್ಲಿ ತಯಾರಾದ” ಬ್ಯಾನರ್ ಅಡಿ ಕೆಲಸ ಮಾಡುತ್ತಿರುವ ಕೆಲವೇ ಕೆಲವು ಸಂಸ್ಥೆಗಳು ಮಾತ್ರ ಕಚ್ಚಾ ಸಾಮಗ್ರಿಗಳನ್ನು ಸರಬರಾಜು ಮಾಡಬಲ್ಲವುಗಳಾಗಿವೆ. ಮಂಡಳಿಯು, ಎಪಿಐಗಳ ಅಥವಾ ಕಚ್ಚಾ ಸಾಮಗ್ರಿಗಳ ದರಗಳನ್ನು ನಿಯಂತ್ರಿಸುವುದಿಲ್ಲವಾದ್ದರಿಂದ ಇವುಗಳು ಎನ್‍ಪಿಪಿಎ ಮಾರ್ಗಸೂಚಿಗಳಡಿ ನಿಯಂತ್ರಣದಡಿ ಬರುವುದಿಲ್ಲ. ಭಾರತದಲ್ಲಿ ತಯಾರಿಸಲಾದ ಈ ಕಚ್ಚಾ ವಸ್ತುಗಳ ಬೆಲೆಯಲ್ಲಿ ಹೆಚ್ಚಳಿಕೆ ಕಂಡುಬಂದಿದೆ. ಆದರೂ ಈ ಸಂಸ್ಥೆಗಳು ಹೊರಗಿನ ಸಂಸ್ಥೆಗಳಿಗೆ ಹೋಲಿಸಿದರೆ, ದರದ ವಿಷಯದಲ್ಲಿ ತಾವು ಸ್ಪರ್ಧಾತ್ಮಕವಾಗಿದ್ದೇವೆ ಎಂದು ಘೋಷಿಸಿ ಕಳೆದ ತಿಂಗಳು ಅವಧಿ ತೀರಿದ ಆ್ಯಂಟಿ ಡಂಪಿಂಗ್ ತೆರಿಗೆಯನ್ನು ಮರು ಅನುಷ್ಠಾನಗೊಳಿಸುವಂತೆ ಸರ್ಕಾರವನ್ನು ಕೇಳಿಕೊಳ್ಳುತ್ತಿವೆ. ವರದಿಗಳ ಪ್ರಕಾರ, ಚೀನಾ, ಭಾರತೀಯ ಮಾರುಕಟ್ಟೆಯಲ್ಲಿ ವಿಟಮಿನ್ ಸಿ ಮಾತ್ರೆಗಳನ್ನು ತಂದು ಹೇರುತ್ತಿದೆ ಎಂದು ಹೇಳಲಾಗುತ್ತಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿ ಭಾರತದಲ್ಲಿನ ಔಷಧ ತಯಾರಿಕಾ ಸಂಸ್ಥೆಗಳ ಅಗತ್ಯವನ್ನು ತಾವೇ ಪೂರೈಸಲು ಸಾಧ್ಯವಾಗಿರುವುದರಿಂದ, ಚೀನಾದಿಂದ ಕಚ್ಚಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಅವು ವಾದಿಸುತ್ತಿವೆ.
ಆದರೆ ಈ ಬೆಲೆಗಳು ನಿಜವಾಗಿಯೂ ಸ್ಪರ್ಧಾತ್ಮಕವಾಗಿವೆಯೆ? ಮತ್ತು ಈ ಉತ್ಪಾದಕರು ನಿಜವಾಗಿಯೂ ಸ್ಥಳೀಯ ಬೇಡಿಕೆಯನ್ನು ಪೂರೈಸಲು ಸಾಧ್ಯವೆ? ವಿಟಮಿನ್ ಸಿ ಎಪಿಐ ಮತ್ತು ಅದರ ಸಹ ಉತ್ಪನ್ನಗಳ ಬೆಲೆ ದೇಶದೊಳಗೆ ದ್ವಿಗುಣಕ್ಕಿಂತ ಹೆಚ್ಚಾಗಿದೆ. ಉದಾಹರಣೆಗೆ, ಫೆಬ್ರವರಿ-ಮಾರ್ಚ್ 2020ದಲ್ಲಿ ಸೋಡಿಯಮ್ ಆಸ್ಕೋರ್ಬೇಟ್‍ನ ಬೆಲೆ ಪ್ರತಿ ಕಿಲೋಕ್ಕೆ ರೂ. 500-600ರಲ್ಲಿತ್ತು. ಮಾರ್ಚ್ ನಂತರ, ದೇಶವು ಸಾಂಕ್ರಾಮಿಕದ ಬಾಧೆಗೆ ಸಿಲುಕಿದಾಗ, ಭಾರತೀಯ ಉತ್ಪಾದಕರು ಅದರ ಬೆಲೆಯನ್ನು ರೂ. 1400ಕ್ಕೆ, ಅಂದರೆ ದುಪ್ಪಟ್ಟಿಗಿಂತ ಹೆಚ್ಚಿನ ಬೆಲೆಗೆ ಏರಿಸಿದ್ದರು. ಚೀನಾದಿಂದ ಆಮದು ಮಾಡಿಕೊಳ್ಳಲಾಗುವ ಮಧ್ಯಂತರ ಸಾಮಗ್ರಿಯ ಬೆಲೆ ಅಷ್ಟೊಂದು ಹೆಚ್ಚಾಗಿಲ್ಲ. ಮಧ್ಯಂತರದ ಪ್ರಸ್ತುತದ ಬೆಲೆಯು ಚೀನಾದಿಂದ ಆಮದಾಗುವ ಸೋಡಿಯಮ್ ಆಸ್ಕೋರ್ಬೇಟ್‍ನ ಬೆಲೆ ಪ್ರತಿ ಕಿಲೋಕ್ಕೆ ರೂ. 750-800 ಇದೆ. ಮೇಲಾಗಿ, ಭಾರತೀಯ ಸಂಸ್ಥೆಗಳು ಬೇಡಿಕೆಯನ್ನು ಪೂರೈಸುವಷ್ಟು ಸಾಮಗ್ರಿ ಹೊಂದಿದ್ದರೆ, ಬೆಲೆಯನ್ನು ದ್ವಿಗುಣಗೊಳಿಸುವ ಅಗತ್ಯವೇನು? ಇದು ಪ್ರಸ್ತುತದ ಸಾಂಕ್ರಾಮಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ವಿಟಮಿನ್ ಸಿ ಗೆ ಏರಿರುವ ಬೇಡಿಕೆಯ ಲಾಭ ಪಡೆದುಕೊಂಡಂತಾಗಲಿಲ್ಲವೆ?
ಈ ನಡೆಯು, ಭಾರತದ ಔಷಧ ತಯಾರಿಕಾ ಸಂಸ್ಥೆಗಳು ಉತ್ಪಾದಿಸುವ ವಿಟಮಿನ್ ಸಿ ದ ಉತ್ಪಾದನಾ ವೆಚ್ಚದ ಮೇಲೆ ಪ್ರಭಾವ ಬೀರಿದೆ. ತತ್ಪರಿಣಾಮವಾಗಿ, ಈ FSSAI ವ್ಯಾಪ್ತಿಯಡಿ ಬರುವ ಸಂಸ್ಥೆಗಳು ಮಾತ್ರ ಈ ಕಚ್ಚಾ ವಸ್ತುಗಳನ್ನು ಹೊಂದು ಸಾಮರ್ಥ್ಯ ಹೊಂದಿದ್ದು, ಈ ಕಾರಣಕ್ಕಾಗಿ ಅವರು ಗ್ರಾಹಕರಿಂದ ಎಷ್ಟೇ ಮೊತ್ತದ ಹಣವನ್ನು ಬೇಕಾದರೂ ವಸೂಲಿ ಮಾಡಬಹುದು, ಏಕೆಂದರೆ ಅವರು ದರ ನಿಯಂತ್ರಣಕ್ಕೊಳಪಟ್ಟಿಲ್ಲ. ಮತ್ತೊಂದೆಡೆ, ದೇಶೀಯ ಸರಬರಾಜುದಾರರು ಕಚ್ಚಾ ಸಾಮಗ್ರಿಗಳ ಬೆಲೆಗಳನ್ನು ಹೆಚ್ಚಿಸಿರುವುದರಿಂದ, ದರ ನಿಯಂತ್ರಣದಡಿ ಇರುವ ವಿಟಮಿನ್ ಸಿ ತಯಾರಿಕಾ ಸಂಸ್ಥೆಗಳು ಗ್ರಾಹಕರಿಗಾಗಿ ಹೇರಳವಾದ ಕೈಗೆಟುಕುವ ದರದ ಔಷಧಗಳನ್ನು ಉತ್ಪಾದಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ಸಾಲದೆಂಬಂತೆ, ಬೇಡಿಕೆ ಹೆಚ್ಚಾಗುತ್ತಿರುವಂತಹ ಸಂದರ್ಭದಲ್ಲಿ, ದೇಶೀಯ ಸಂಸ್ಥೆಗಳು ಹೇಗೂ ಸಾಕಷ್ಟು ಪ್ರಮಾಣದ ಕಚ್ಚಾ ಸಾಮಗ್ರಿಗಳನ್ನು ಸರಬರಾಜು ಮಾಡುವುದು ಸಾಧ್ಯವಾಗುತ್ತಿಲ್ಲ. ಪೂರಕಾಹಾರಗಳ ಉತ್ಪಾದಕರಂತಲ್ಲದೆ, ಗ್ರಾಹಕರಿಗೆ ಔಷಧಗಳನ್ನು ಲಭ್ಯವಾಗುವಂತೆ ಮಾಡಲು, ಕಡಿಮೆ ಬೆಲೆಯ ಎನ್‍ಎಲ್‍ಇಎಮ್ ಔಷಧಗಳ ತಯಾರಕರಿಗೆ ಕಾನೂನು ಪರಿಮಿತಿಗಳಿವೆ ಎಂಬುದನ್ನು ಇಲ್ಲಿ ಗಮನಿಸಬೇಕಾಗುತ್ತದೆ.
ರೋಗಿಗಳಿಗೆ ಕೈಗೆಟುಕುವ ದರದ ಔಷಧಗಳು ಹೆಚ್ಚು ಲಭ್ಯವಾಗುತ್ತಿಲ್ಲ.
ದರ ರಚನೆ ಮತ್ತು ದೇಶೀಯ ಕಚ್ಚಾ ಸಾಮಗ್ರಿ ಸರಬರಾಜುದಾರರಿಂದ ಅಸಮರ್ಪಕವಾದ ಸರಬರಾಜು, ಕೈಗೆಟುಕುವ ದರಗಳ ಆವೃತ್ತಿಗಳನ್ನು ತಯಾರಿಸುತ್ತಿರುವ ಸಂಸ್ಥೆಗಳ ಉತ್ಪಾದನಾ ಸಾಮರ್ಥ್ಯವನ್ನು ಬಾಧಿಸಿದೆ. ತತ್ಪರಿಣಾಮವಾಗಿ, ಅಸಮರ್ಪಕ ಸರಬರಾಜಿನಿಂದಾಗಿ ಬೇಡಿಕೆಯನ್ನು ಪೂರೈಸುವುದಕ್ಕೆ ಸಂಸ್ಥೆಗಳು ಅಸಮರ್ಥವಾಗಿರುವುದರಿಂದ ರೋಗಿಗಳಿಗೆ ಕೈಗೆಟುಕುವ ದರದ ಔಷಧಗಳು ಹೆಚ್ಚು ಲಭ್ಯವಾಗುತ್ತಿಲ್ಲ. ಇದರಿಂದಾಗಿ, ರೋಗಿಗಳು ಈ FSSAI ವ್ಯಾಪ್ತಿಯಡಿ ಬರುವ ದುಬಾರಿ ವರ್ಗಕ್ಕೆ ಸೇರಿದ ವಿಟಮಿನ್ ಸಿ ಮಾತ್ರೆಗಳನ್ನು ಖರೀದಿಸುವುದು ಅನಿವಾರ್ಯವಾಗಿದೆ. ಮುಂದಿನ ಪ್ರಶ್ನೆ ಎಂದರೆ- ಭಾರತದಲ್ಲಿ ತಯಾರಿಸಿ’ ಘೋಷಣೆಯ ಉದ್ದೇಶವು ಕೈಗೆಟುಕುವ ಪರಿಹಾರಗಳನ್ನು ನೀಡುವುದ್ದಾಗಿದ್ದರೆ, ಈ ದರ ಹೆಚ್ಚುತ್ತಿರುವ ಎಪಿಐಗಳ ಈ ದರಗಳನ್ನು ಏಕೆ ನಿಯಂತ್ರಿಸಲಾಗುತ್ತಿಲ್ಲ?
ಕಚ್ಚಾಸಾಮಗ್ರಿಗಳ ದರ ಹೆಚ್ಚಳಿಕೆಯು ಸರಬರಾಜುದಾರರ ಅಧಿಕಾರದಲ್ಲಿರುವಾಗ, ಅಂತಿಮ ಉತ್ಪನ್ನದ ಬೆಲೆಯನ್ನು ನಿಯಂತ್ರಿಸುವುದು ಎಷ್ಟು ಸರಿ? ಸ್ವಾವಲಂಬಿ ಭಾರತದ ಪರಿಕಲ್ಪನೆಯು ಕೈಗೆಟುಕುವಿಕೆ ಮತ್ತು ಪ್ರವೇಶಾವಕಾಶ ಪಡೆದುಕೊಳ್ಳುವಿಕೆಯ ಮೇಲೆ ಆಧಾರಪಟ್ಟಿರುವಾಗ, ವಿಟಮಿನ್ ಸಿ ಮಾತ್ರೆಯಂತಹ ಮೂಲ ವಸ್ತುವಿಗೆ ರೋಗಿಗಳು ಏಕೆ ಪ್ರವೇಶಾವಕಾಶ ವಂಚಿತರಾಗುತ್ತಿದ್ದಾರೆ? ಮುಖ್ಯವಾಗಿ, ದೇಶೀಯ ಉದ್ದಿಮೆಯು ತನ್ನ ಕಾರ್ಯವನ್ನು ಒಗ್ಗೂಡಿಸಿಕೊಳ್ಳಲು 22 ವರ್ಷಗಳ ಕಾಲಾವಕಾಶ ಇದ್ದು, ಇನ್ನೇನು ಮಾಡುತ್ತದೆ ಎಂದಾಗ ಈ ಆ್ಯಂಟಿ ಡಂಪಿಂಗ್ ಕಾನೂನು ಜಾರಿಗೆ ಬಂದಿತು. ಜಾಗತೀಕರಣದ ಇಂದಿನ ಯುಗದಲ್ಲಿ ಇಂತಹ ರಾಕ್ಷಸೀ ಕಾನೂನು ದೇಶಕ್ಕೆ ಒಳಿತನ್ನು ಮಾಡುವುದಿಲ್ಲ. ಇದು ಎಲ್ಲರೂ ಪರಿಗಣಿಸಬೇಕಾದ ವಿಷಯವೇ ಆಗಿದೆ.
ಪ್ರವೇಶಾವಕಾಶವಿಲ್ಲದೆ ರೋಗಿ ಹಿತಾಸಕ್ತಿಯನ್ನು ಸಾಧಿಸಲಾಗದು
ಭಾರತವು ತನ್ನ ಜನರನ್ನು ಸುರಕ್ಷಿತವಾದ ಆರೋಗ್ಯ ಶುಶ್ರೂಷಾ ಮಾದರಿಯೆಡೆಗೆ ಮುನ್ನಡೆಸಬೇಕಿದ್ದಲ್ಲಿ, ನಾವು ಪ್ರವೇಶಾವಕಾಶ ಹಾಗು ಕೈಗೆಟುಕುವಿಕೆಯನ್ನು ಬೆಂಬಲಿಸುವಂತಹ ನೀತಿಗಳನ್ನು ರಚಿಸಬೇಕಾಗುತ್ತದೆ. ಭಾರತದಲ್ಲಿ ತಯಾರಿಸಿ ಪರಿಕಲ್ಪನೆಯು, ಕೈಗೆಟುಕುವ ದರಗಳಲ್ಲಿ ಔಷಧಗಳು ಲಭ್ಯವಾಗುವಂತೆ ಮಾಡಬೇಕೇ ಹೊರತು ರೋಗಿಗಳಿಗೆ ಅವುಗಳ ಪ್ರವೇಶಾವಕಾಶವನ್ನು ನಿರ್ಬಂಧಿಸಬಾರದು.
ನಿರ್ಬಂಧಾತ್ಮಕ ನೀತಿಗಳನ್ನು ಹೇರುವ ಬದಲು, ನಮ್ಮ ಬಳಿ ಈಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ನಾವು ಗಮನ ಕೇಂದ್ರೀಕರಿಸಬೇಕು. ಆರೋಗ್ಯ ಶುಶ್ರೂಷಾ ಮೂಲಸೌಕರ್ಯದ ಸುಧಾರಣೆ, ಬಲಿಷ್ಟವಾದ ಪ್ರಾಥಮಿಕ ಆರೋಗ್ಯ ಶುಶ್ರೂಷಾ ವ್ಯವಸ್ಥೆ, ವ್ಯವಸ್ಥೆಯೊಳಗೆ ಹೆಚ್ಚು ಹೆಚ್ಚು ವೈದ್ಯರುಗಳು ಹಾಗು ಆರೋಗ್ಯ ಶುಶ್ರೂಷಾ ಕಾರ್ಯಕರ್ತರುಗಳನ್ನು ತರಲು ಸೌಲಭ್ಯಗಳನ್ನು ಕಲ್ಪಿಸುವುದು, ಸಂಶೋಧನೆ ಹಾಗು ಅಭಿವೃದ್ಧಿಯಲ್ಲಿ ಮತ್ತು ಡಿಜಿಟಲ್ ಆರೋಗ್ಯದಲ್ಲಿ ಹೂಡಿಕೆ– ಇಂತಹ ನಿಜವಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು.
ಸಾಂಕ್ರಾಮಿಕವು ಭಾರತದ ಔಷಧ ತಯಾರಿಕಾ ಉದ್ದಿಮೆಯ ಅನೇಕ ವಾಸ್ತವತೆಗಳನ್ನು ತೆರೆದಿಟ್ಟಿದೆ. ಜಾಗತಿಕ ಔಷಧ ಸರಬರಾಜು ಸರಪಳಿಯಲ್ಲಿ ಗಂಭೀರವಾದ ದೋಷದಿಂದ ಹಿಡಿದು, ಎಪಿಐಗಳ ನಮ್ಮ ಹೆಚ್ಚಿಸಿದ ದರಗಳನ್ನು ಮತ್ತು ರೋಗಿಗಳಿಗೆ ಅಗ್ಗಬೆಲೆಯ ಔಷಧಗಳ ಅಸಮರ್ಪಕ ಸರಬರಾಜನ್ನು ಬಹಿರಂಗಪಡಿಸುವವರೆಗೆ. ಭಾರತದ ಜನತೆಗೆ ಕೈಗೆಟುಕುವ ದರದ ಆರೋಗ್ಯಶುಶ್ರೂಷೆಯನ್ನು ಒದಗಿಸುವ ಇಡೀ ಉದ್ದೇಶಕ್ಕೆ ಇದು ಮಾರಕವಾಗಿಲ್ಲವೆ? ಆದ್ದರಿಂದ, ಆ್ಯಂಟಿ ಡಂಪಿಂಗ್ ತೆರಿಗೆಯ ಹೇರಿಕೆಯು ಪರಿಹಾರವಾಗಿರದಂತಹ ನೀತಿ ಪರಿಹಾರಗಳು ಇಂದು ಅತ್ಯಗತ್ಯವಾಗಿವೆ. ಆಂತರಿಕವಾಗಿ ಮೊದಲು ಸಂಗತಿಗಳನ್ನು ಸರಿಪಡಿಸುವುದು ಯಾವಾಗಲೂ ಮುಖ್ಯವಾಗುತ್ತದೆ.
