ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸರಳ ಉಪಾಯಗಳು

ದೇಹದ ರೋಗ ನಿರೋಧಕ ಶಕ್ತಿಯನ್ನು ಸರಿಯಾದ ಆಹಾರ, ವ್ಯಾಯಾಮ, ನಿದ್ರೆ ಮತ್ತು ಆಹಾರ-ಔಷಧಿಗಳ ಮೂಲಕ ಹೆಚ್ಚಿಸಿಕೊಳ್ಳಬಹುದು. ಆದಷ್ಟು ಹೊರಗಡೆ ಆಹಾರ ಸೇವನೆಯನ್ನು ತ್ಯಜಿಸಿ ಮನೆಯಲ್ಲಿಯೇ, ಋತುಮಾನಕ್ಕೆ ಸರಿದೂಗುವಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಚೆನ್ನಾಗಿ ಕಾಯ್ದುಕೊಳ್ಳಬಹುದು.

Dr.-Venkatramana-Hegde

ಪಂಚ ಮಹಾಭೂತಗಳಾದ ಪೃಥ್ವಿ, ಆಪ್, ತೇಜು, ವಾಯು, ಆಕಾಶಗಳಿಂದ ನಿರ್ಮಾಣವಾದ ನಮ್ಮ ದೇಹಕ್ಕೆ ನಾವು ಸರಿಯಾದ ಆಹಾರ, ವ್ಯಾಯಾಮ, ನಿದ್ರೆ ಮತ್ತು ಆಹಾರ-ಔಷಧಿಗಳ ಮೂಲಕ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಸೂರ್ಯನ ಬೆಳಕು- ಪ್ರತಿನಿತ್ಯ ಎಳೆ ಬಿಸಿಲಿಗೆ ಮೈ ಒಡ್ಡುವುದರಿಂದ ದೇಹಕ್ಕೆ ಅಗತ್ಯವಾದಂತಹ ವಿಟಮಿನ್ ಡಿ ಲಭ್ಯವಾಗುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುತ್ತದೆ.

1. ಸುಖ ನಿದ್ರೆ : ಕನಿಷ್ಟ 6 ರಿಂದ 7 ಗಂಟೆಗಳ ಕಾಲ ಪ್ರತಿನಿತ್ಯ ಸುಖ ನಿದ್ರೆಯನ್ನು ಮಾಡುವುದು ಬಹಳ ಮುಖ್ಯ. ದೇಹದಲ್ಲಿ ಸುಮಾರು ಶೇ. 70 ರಷ್ಟು ನೀರು ತುಂಬಿರುವುದರಿಂದ ನಮ್ಮ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ನೀರನ್ನು ಒದಗಿಸುವುದು ಮುಖ್ಯ. ಇಲ್ಲದಿದ್ದಲ್ಲಿ ಮೂತ್ರ ಮಾಡುವಾಗ ಉರಿಯಾಗುವಂತದ್ದು, ಎಸಿಡಿಟಿ ಆಗುವುದು, ಮಲಬದ್ಧತೆ ಆಗುವುದು, ಮೂಲವ್ಯಾಧಿ ಕಾಡುವುದು, ತಲೆನೋವು ಬರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಆದ್ದರಿಂದ ಪ್ರತಿನಿತ್ಯ 3 ರಿಂದ 4 ಲೀಟರ್ ನೀರು ಕುಡಿಯುವುದು ಪ್ರಾಮುಖ್ಯತೆಯನ್ನು ಪಡೆಯುತ್ತದೆ.

2. ಅಭ್ಯಂಗ: ಶುದ್ಧವಾದ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಉಪಯೋಗಿಸಿಕೊಂಡು ಸ್ನಾನಕ್ಕೆ ಮೊದಲು ಇಡೀ ದೇಹಕ್ಕೆ ಹಚ್ಚಿ ಮಾಲಿಶ್ ಮಾಡಿಕೊಳ್ಳುವುದರಿಂದ ಭಾರತೀಯ ವೈದ್ಯಕೀಯ ಪದ್ಧತಿಯ ಪ್ರಕಾರ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನುಕೂಲವಾಗುತ್ತದೆ.

3. ಆಹಾರ: ಆಹಾರ ಕ್ರಮದಲ್ಲಿ ಜಂಕ್ ಫುಡ್, ಕರಿದ ಆಹಾರ, ಬೇಕರಿ ಆಹಾರ ಪದಾರ್ಥಗಳನ್ನು ಕಡಿಮೆ ಮಾಡಿ, ಹಣ್ಣು, ತರಕಾರಿ, ಗೋಡಂಬಿ, ಮೊಳಕೆ ಕಾಳುಗಳು, ಬಾದಾಮಿ, ಪಿಸ್ತಾ, ವಾಲ್‍ನಟ್(ಅಕ್ರೂಟ್), ತೆಂಗಿನಕಾಯಿ ತುರಿ, ತೆಂಗಿನಕಾಯಿ ಹಾಲು, ಎಳನೀರು, ಜ್ಯೂಸ್, ಸಲಾಡ್‍ಗಳು, ವರ್ಜಿನ್ ಕೊಕೊನಟ್ ಆಯಿಲ್‍ನಂತಹ ಪದಾರ್ಥಗಳನ್ನು ನಮ್ಮ ದೈನಂದಿನ ಆಹಾರದಲ್ಲಿ ಹೆಚ್ಚು ಮಾಡುವುದು ಬಹಳ ಸಹಕಾರಿ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಿಕೊಡುತ್ತದೆ.

ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸರಳ ಉಪಾಯಗಳು

4. ಯೋಗ ವ್ಯಾಯಾಮ: ಪ್ರತಿನಿತ್ಯ ಯೋಗ ವ್ಯಾಯಾಮ ಮಾಡುವುದು ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಬಹಳ ಸಹಕಾರಿಯಾಗಬಲ್ಲದು. ವೇಗವಾಗಿ ಸೂರ್ಯನಮಸ್ಕಾರ ಮಾಡುವುದು, ವೇಗ ನಡಿಗೆ, ಜಾಗಿಂಗ್, ವೇಗವಾಗಿ ಗುಡ್ಡ ಹತ್ತುವುದು, ನಿಧಾನವಾಗಿ ಇಳಿಯುವುದು; ಪುನಃ ವೇಗವಾಗಿ ಹತ್ತುವುದು, ನಿಧಾನವಾಗಿ ಇಳಿಯುವುದು(ಮೂರರಿಂದ ನಾಲ್ಕು ಬಾರಿ) ಈ ತರಹದ junk-foodಚಲನವಲನಗಳನ್ನು ಮಾಡುವುದರಿಂದ ರಕ್ತಸಂಚಾರ ಸುಗಮವಾಗುತ್ತದೆ. ಯೋಗಾಭ್ಯಾಸವು ಮನಸ್ಸನ್ನು ಶಾಂತಗೊಳಿಸಲು, ಇಡೀ ದಿನವೂ ದೇಹ ಹಾಗೂ ಮನಸ್ಸು ಎರಡೂ ಸಹ ವಿಶ್ರಾಂತಿದಾಯಕವಾಗಿರಲು ಸಹಾಯಮಾಡಬಲ್ಲದು.

5. ಮನೆಯಲ್ಲಿಯೇ ಆಹಾರ: ಅಡುಗೆ ಮನೆಯೇ ಆಸ್ಪತ್ರೆ, ಅಹಾರವೇ ಔಷಧ ಎಂಬುದು ಬಹಳ ಹಳೆಯ ಮಾತಾದರೂ ಸಹ ನಿತ್ಯ ನೂತನ. ಮಸಾಲೆ ಪದಾರ್ಥಗಳು ದೇಹದಲ್ಲಿ ಇಮ್ಯುನಿಟಿ ಪವರ್‍ನ್ನು ಹೆಚ್ಚು ಮಾಡಲು ಬಹಳ ಸಹಕಾರಿ. ಜೀರಿಗೆ, ಕೊತ್ತುಂಬರಿ, ಅರಿಶಿಣ, ಶುಂಠಿ, ಜಾಯಿಕಾಯಿ, ಚಕ್ರಮೊಗ್ಗು, ಲವಂಗ, ಓಂ(ಅಜ್ವಾಯನ) ಇತ್ಯಾದಿ. ಆದಷ್ಟು ಹೊರಗಡೆ ಆಹಾರ ಸೇವನೆಯನ್ನು ತ್ಯಜಿಸಿ ಮನೆಯಲ್ಲಿಯೇ, ಹಿತ ಮಿತವಾದ ಋತುಮಾನಕ್ಕೆ ಸರಿದೂಗುವಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಚೆನ್ನಾಗಿ ಕಾಯ್ದುಕೊಳ್ಳಬಹುದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

immune aid

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸರಳ ಉಪಾಯಗಳು:

• 10 ಕರಿಬೇವಿನ ಎಲೆಗಳು, 10 ಕಹಿಬೇವಿನ ಎಲೆಗಳು, ಅರ್ಧ ಚಮಚ ಅರಿಶಿಣ ಪುಡಿ, 4 ರಿಂದ 5 ಕಾಳುಮೆಣಸು, ಒಂದರಿಂದ ಎರಡು ಚಮಚ ವರ್ಜಿನ್ ಕೊಕೊನಟ್ ಆಯಿಲ್, ಒಂದು ಎಸಳು ಬೆಳ್ಳುಳ್ಳಿ ಹಾಗೂ 10 ತುಳಸಿ ಎಲೆಗಳನ್ನು ಸೇರಿಸಿ ಜಜ್ಜಿ ಉಂಡೆಯ ರೀತಿ ಮಾಡಿ ಸೇವಿಸುವುದರಿಂದ ನಮ್ಮ ದೇಹವು ವೈರಸ್‍ನ ವಿರುದ್ಧವಾಗಿ ರೋಗ ನಿರೋಧಕ ಶಕ್ತಿಯನ್ನು ಪಡೆಯುತ್ತದೆ. ಇದನ್ನು ಸತತ 15 ರಿಂದ 20 ದಿನಗಳ ಕಾಲ ಮಾಡುವುದು.

ಬಿಸಿನೀರಿಗೆ ಉಪ್ಪು ಹಾಕಿ ಗಂಟಲಲ್ಲಿ ಗಳ ಗಳ ಮಾಡುವುದರಿಂದ ಸೋಂಕುಗಳ ವಿರುದ್ಧ ದೇಹವನ್ನು ರಕ್ಷಿಸಿಕೊಳ್ಳಲು ಬಹಳ ಸಹಾಯವಾಗುತ್ತದೆ.

Dr-Venkatramana-Hegde-nisargamane
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!