ವಿಶ್ವಾಸಾರ್ಹ ಲಸಿಕೆಯೇ ಈಗ ಪಲ್ಟಿ ಹೊಡೆದಿದೆ.. ಮುಂದೇನು?

ವಿಶ್ವಾಸಾರ್ಹ ಲಸಿಕೆಯೇ ಈಗ ಪಲ್ಟಿ ಹೊಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಆಕ್ಸ್ ಫರ್ಡ್ ಯೂನಿವರ್ಸಿಟಿ ಮತ್ತು ಆಸ್ಟ್ರಾ ಜೆನೆಕಾ ಕಂಪನಿಯ ಲಸಿಕೆಯ ಕೊನೆಯ ಹಂತಹ ಮಾನವ ಪ್ರಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ .

Vaccine-Newsಇಡೀ ವಿಶ್ವದಲ್ಲಿ ಎಲ್ಲಾ ಲಸಿಕೆಗಳಿಗಿಂತ ಹೆಚ್ಚಾಗಿ ಭರವಸೆ ಮೂಡಿಸಿದ್ದ, ವಿಶ್ವ ಆರೋಗ್ಯ ಸಂಸ್ಥೆ ಕೂಡ, ‘ಹೌದು ಈ ಲಸಿಕೆಯನ್ನು ನಂಬಬಹುದು’ ಅಂತ ಹೇಳಿದ್ದ ಆಕ್ಸ್ ಫರ್ಡ್ ಯೂನಿವರ್ಸಿಟಿ ಮತ್ತು ಆಸ್ಟ್ರಾ ಜೆನೆಕಾ ಕಂಪನಿಯ ಲಸಿಕೆ ಕಥೆಯೇ ಈಗ ಚಿಂತಾಜನಕವಾಗಿಬಿಟ್ಟಿದೆ. ಆಕ್ಸ್‌ಫರ್ಡ್ ಲಸಿಕೆ ಪಡೆದ ಸ್ವಯಂಸೇವಕರಲ್ಲಿ ಸಾಕಷ್ಟು ಜನರಿಗೆ ಸೈಡ್ ಎಫೆಕ್ಟ್ ಕಾಣಿಸಿಕೊಂಡಿದೆ. ಈ ಸೈಡ್ ಎಫೆಕ್ಟ್ ಗಳನ್ನು  ಆಕ್ಸ್‌ಫರ್ಡ್ ಯೂನಿವರ್ಸಿಟಿ ಹಾಗೂ ಆಸ್ಟ್ರಾ ಜೆನೆಕಾ ಕಂಪನಿಯು ಇದೊಂದು ವಿವರಿಸಲಾಗದ ಅನಾರೋಗ್ಯ ಎಂದು ಕರೆದಿವೆ.

ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಲಸಿಕೆಯ ಕೊನೆಯ ಹಂತಹ ಮಾನವ ಪ್ರಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಅಂತ ಆಸ್ಟ್ರಾಜನಕ ಕಂಪನಿಯು ಘೋಷಿಸಿಬಿಟ್ಟಿದೆ. ಈ ಮೂಲಕ ಭಾರೀ ಕುತೂಹಲ ಮೂಡಿಸಿದ್ದ ಆಕ್ಸ್‌ಫರ್ಡ್ ಲಸಿಕೆ ಬಗ್ಗೆ ಸಾಕಷ್ಟು ಅನುಮಾನ ಮೂಡೋಕೆ ಕಾರಣವಾಗಿದೆ. ಸಾಮಾನ್ಯವಾಗಿ ಲಸಿಕೆ ಪಡೆದ ಸ್ವಯಂಸೇವಕರಲ್ಲಿ ಈ ರೀತಿಯ ವಿವರಿಸಲಾಗದ ಅನಾರೋಗ್ಯ ಕಾಣಿಸಿಕೊಂಡಾಗ ಪ್ರಯೋಗದ ಅಂಕಿ ಅಂಶಗಳನ್ನ ಸ್ವತಂತ್ರ ಸಮಿತಿಯ ಮೂಲಕ ಪರಿಶೀಲನೆ ಮಾಡಿಸಲಾಗುತ್ತದೆ.

ಲಸಿಕೆ ಪ್ರಯೋಗ ವ್ಯಕ್ತಿಗೆ ಟ್ರಾನ್ಸ್‍ಫರ್ಸ್ ಮೈನಾರ್ಟಿ :

ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ ಬ್ರಿಟನ್‍ನಲ್ಲಿ ಲಸಿಕೆ ಪ್ರಯೋಗಕ್ಕೆ ಒಳಗಾದ ವ್ಯಕ್ತಿಗೆ ಟ್ರಾನ್ಸ್‍ಫರ್ಸ್ ಮೈನಾರ್ಟಿ (Transfers Minarti)ಕಂಡುಬಂದಿದೆ. ಇದು ಉರಿಯೂತಕ್ಕೆ ಸಂಬಂಧಪಟ್ಟಂತ ಸಮಸ್ಯೆಯಾಗಿದ್ದು ಇದು ಬೆನ್ನು ಹುರಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಗಮನಿಸಬೇಕಾದ ಸಂಗತಿ ಅಂದರೆ ಭಾರತದಲ್ಲಿಯೂ ಕೂಡಾ ಈ ಲಸಿಕೆಯ ಮೂರನೇ ಮತ್ತು ಕೊನೆಯ ಹಂತಹ ಮಾನವ ಪ್ರಯೋಗ ನಡೆಯುತ್ತಾ ಇರುವುದು. ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಲಿಮಿಟೆಡ್ ಕಂಪನಿಯು ಇದರ ಪ್ರಯೋಗವನ್ನು ನಡೆಸುತ್ತಿದೆ. ಇದರ ಕಥೆ ಏನಾಗುತ್ತದೆ ಹಾಗಾದ್ರೆ?

ಈ ಬಗ್ಗೆ ತಜ್ಷರು ಹೇಳೋದೇನಂದ್ರೆ ‘ಒಂದು ದೊಡ್ಡ ಕಾಯಿಲೆಗೆ ಲಸಿಕೆ ಕಂಡು ಹಿಡಿಯಬೇಕಾದರೆ ಈ ರೀತಿ ಆಗಾಗ ನಿಲ್ಲಿಸಿ ಮುಂದುವರೆಯ ಬೇಕಾಗುತ್ತದೆ, ಮತ್ತೊಮ್ಮೆ ಅನಾಲೈಸ್ ಮಾಡಬೇಕಾಗುತ್ತದೆ. ಇದೊಂದು ಸಹಜ ಪ್ರಕ್ರಿಯೆ’ ಅಂತ. ಆದರೆ ಅಷ್ಟೂ ಲಸಿಕೆಗಳಲ್ಲಿ ಬಹಳಷ್ಟು ವಿಶ್ವಾಸ ಇರಿಸಿಕೊಳ್ಳಲು ಕಾರಣವಾಗಿದ್ದ ಆಕ್ಸ್ ಫರ್ಡ್ ಯೂನಿವರ್ಸಿಟಿ ಮತ್ತು ಆಸ್ಟ್ರಾ ಜೆನೆಕಾ ಲಸಿಕೆಯೇ ಈಗ ಅಸಮರ್ಪಕ ಎನಿಸಿಕೊಂಡು ತನ್ನ ಪ್ರಯೋಗ ನಿಲ್ಲಿಸಿರುವ ವಿದ್ಯಮಾನವು ಒಂದಷ್ಟು ಜನರನ್ನು ನಿರಾಶೆಗೆ ದೂಡಿದೆ.

ಲಸಿಕೆ ಕಂಡು ಹಿಡಿಯಲೇಬೇಕಾದ ಒತ್ತಡದಲ್ಲಿದೆ ವಿಶ್ವ  ಸಮುದಾಯ:

Challenge-of-developing-a-safe-and-effective-covid-19-vaccineಆದರೆ ಕೊರೋನಾ ರೋಗದ ಕುರಿತಂತೆ ನಮ್ಮ ಜನರಲ್ಲಿ ಮೊದಲು ಕಂಡಷ್ಟು ಭಯ ಈಗ ಇಲ್ಲ. ತುಂಬಾ ಜನರಿಗೆ ಕಾಯಿಲೆಯ ಲಕ್ಷಣವೇ ಕಂಡು ಬರದಿರಬಹುದು. ಅವರು ಕಾಯಿಲೆಯಿದ್ದೂ ಆರಾಮವಾಗಿರಬಹುದು. ಆದರೆ ಕೆಲವು ಜನರಿಗೆ ದೀರ್ಘಕಾಲದವರೆಗೆ ಈ ಕಾಯಿಲೆಯು ಪ್ರಾಣ ಹಿಂಡಬಹುದು. ಅದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ಇಂಗ್ಲೆಂಡಿನಿಂದ ವರದಿಯಾಗಿದೆ. ಅಲ್ಲಿಯ ಜೆಸ್ ಮಾರ್ಚ್‍ಬಿಕ್ ಹೆಸರಿನ ನರ್ಸ್ ಒಬ್ಬರಿಗೆ ಮಾರ್ಚ್ ತಿಂಗಳಲ್ಲಿಯೇ ಕೊರೋನಾ ಕಾಯಿಲೆ ಬಂದಿತ್ತು.

ಮೂರುದಿನ ಚಿಕಿತ್ಸೆ ಕೊಟ್ಟು ನಂತರ ಮತ್ತೆ ತಪಾಸಣೆ ಮಾಡಿದಾಗ ಕಾಯಿಲೆ ಇಲ್ಲ ಎಂದು ನೆಗೆಟಿವ್ ರಿಪೋರ್ಟ್ ಬಂದಿತ್ತು. ನಂತರ ಅವರನ್ನು ಮನೆಗೆ ಕಳುಹಿಸಿಕೊಡಲಾಗಿತ್ತು. ಆದರೆ ಇದಾದ ಆರು ತಿಂಗಳ ನಂತರವೂ ಸಹಾ ಕೆಲವು ಅಡ್ಡ ಪರಿಣಾಮಗಳಿಂದ ಅವರು ಒದ್ದಾಡುತ್ತಾ ಇದ್ದಾರೆ. ಅವರಿಗೆ ಸರಿಯಾಗಿ ನಡೆಯೋಕೆ ಆಗ್ತಾ ಇಲ್ಲ. ಕೆಲಸ ಮಾಡಲು ಸಹಾ ಸಾಧ್ಯವಾಗುತ್ತಿಲ್ಲ. ಒಮ್ಮೊಮ್ಮೆ ಉಸಿರಾಡಲೂ ಸಹಾ ಕಷ್ಟವಾಗುತ್ತಿದೆ. ಅಂದರೆ ಈ ಕಾಯಿಲೆ ಎಲ್ಲರಿಗೂ ಒಂದೇ ತರ ಇರೋದಿಲ್ಲ ಎನ್ನೋಕೆ ಇದೊಂದು ಪುರಾವೆ. ಹಾಗಾಗಿ ಲಸಿಕೆ ಕಂಡು ಹಿಡಿಯಲೇಬೇಕಾದ ಒತ್ತಡದಲ್ಲಿದೆ ವಿಶ್ವ ಆರೋಗ್ಯ ಸಮುದಾಯ.

ಭಾರತದಲ್ಲಿಯೂ ಲಸಿಕೆ ಪ್ರಯೋಗ ಸ್ಥಗಿತ:

ಭಾರತದಲ್ಲಿಯೂ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ 17 ವಿವಿಧ ತಾಣಗಳಲ್ಲಿ ನಡೆಸುತ್ತಿರುವ COVID-19 ಲಸಿಕೆ ಪ್ರಯೋಗಗಳನ್ನು ವಿರಾಮಗೊಳಿಸಿದೆ. ಅಸ್ಟ್ರಾಜೆನೆಕಾ ಲಸಿಕೆ ಪ್ರಯೋಗ ಪುನರಾರಂಭಿಸಲು ನಿರ್ಧರಿಸಿದ ನಂತರ,  ಪ್ರಯೋಗಗಳನ್ನು ಮರುಪ್ರಾರಂಭಿಸುವುದಾಗಿ ಕಂಪನಿ ತಿಳಿಸಿದೆ. ಈ ಬಗ್ಗೆ ಸೀರಮ್ ಇಂಡಿಯಾದ ಸಿಇಓ ಅಡರ್ ಪೂನಾವಾಲಾ ಮಾತನಾಡಿದ್ದಾರೆ. ಅದರು ಹೇಳೋದೇನಂದ್ರೆ ಬ್ರಿಟನ್‍ ಅಲ್ಲಿ ನಡೆದ ಮಾನವ ಪ್ರಯೋಗದ ಬಗ್ಗೆ ನಾವು ಕಮೆಂಟ್ ಮಾಡೋಕೆ ಹೋಗಲ್ಲ. ಭಾರತದಲ್ಲಿ ಪ್ರಯೋಗಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲ, ಆದರೆ ಇದು ಮುನ್ನೆಚ್ಚರಿಕೆ ಕ್ರಮವಾಗಿದೆ. 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!