ಉತ್ತಮ ಆರೋಗ್ಯಕ್ಕಾಗಿ ಆರೋಗ್ಯ ಸೂತ್ರಗಳು

ಆರೋಗ್ಯವಂತ ವ್ಯಕ್ತಿ ದೇಶದ ಆಸ್ತಿ
ಆರೋಗ್ಯವೇ ಭಾಗ್ಯ
ಆರೋಗ್ಯವೇ ಜಯ – ಅನಾರೋಗ್ಯವೇ ಸೋಲು
ಆರೋಗ್ಯವಿಲ್ಲದವನ ಬಾಳು ಸದಾ ಗೋಳು
ಮುಂತಾದ ಗಾದೆಗಳನ್ನು ನಾವೆಲ್ಲರೂ ಕೇಳಿದ್ದೇವೆ.
ಈ ವಾಕ್ಯಗಳು ನಮಗೆ ಆರೋಗ್ಯದ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಸಾರಿ ಸಾರಿ ಹೇಳುತ್ತೇವೆ.

ವಿಶ್ವ ಆರೋಗ್ಯ ಸಂಸ್ಧೆ ಅಂದರೆ WHO ಆರೋಗ್ಯ ಎಂಬುದರ ಅರ್ಥವನ್ನು ರೋಗವಿಲ್ಲದಿರುವುದು ಜೊತೆಗೆ ದೈಹಿಕ,ಮಾನಸಿಕ, ಭೌದ್ಧಿಕ ಸ್ಥಿತಿ ಕ್ಷೇಮವಾಗಿರುವುದು ಎಂದು ಹೇಳಿದೆ. ಯಾಕೆಂದರೆ ನಮ್ಮ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ನಮ್ಮ ದೇಹ, ಮನಸ್ಸು ಎರಡೂ ಲವಲವಿಕೆಯಿಂದ, ಹುಮ್ಮಸ್ಸಿನಿಂದ ಚೈತನ್ಯ ಪೂರ್ಣವಾಗಿರಲು ಸಾಧ್ಯ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯ ಮಾತಿನಂತೆ ಹಿತಮಿತವಾಗಿ ಆಹಾರ ಸೇವನೆ, ಶಿಸ್ತು ಬದ್ಧ ಜೀವನ, ಸರಳ ವ್ಯಾಯಾಮ ಹಾಗೂ ಬ್ರಹ್ಮಚರ್ಯ ಪಾಲನೆ, ದುಶ್ಚಟಗಳಿಂದ ದೂರವಿರುವವರು ಸಹಜವಾಗಿ ಆರೋಗ್ಯವಾಗಿರುತ್ತಾರೆ.

ಆದರೆ ವಾತಾವರಣದಲ್ಲಾಗುವ ಬದಲಾವಣಿ ಮತ್ತು ಹವಾಮಾನಕ್ಕೆ ಅನುಗುಣವಾಗಿ ಮಾನವನಿಗೆ ನೆಗಡಿ, ಶೀತ, ಜ್ವರ, ತಲೆನೋವು ವಾಂತಿ, ಭೇಧಿ ಇಂತಹ ಸಣ್ಣ ಪುಟ್ಟ ಶಾರೀರಿಕ ಅಸ್ವಸ್ಥತೆ ಬಂದೇ ಬರುತ್ತದೆ. ಇಂತಹ ಅನಾರೋಗ್ಯ ಸಮಸೈಗಳಿಗೆ ದೊಡ್ಡ ದೊಡ್ಡ ಪ್ರತಿಷ್ಠಿತ ಆಸ್ವತ್ರೆಗಳು, ವೈದ್ಯರು, ಜೌಷಧಿ ಎಂದು, ಕಷ್ಟಪಟ್ಟು ದುಡಿದು ಸಂಪಾದಿಸಿದ ದುಡ್ಡನ್ನು ಸುರಿದು ಹಾಳು ಮಾಡುವುದು ವ್ಯರ್ಥ. ಬದಲಾಗಿ ಔಷದದ ಭಂಡಾರವೆಂದೇ ಕರೆಯಲ್ಪಡುವ ಅಡುಗೆ ಮನೆಯಲ್ಲಿ ಇರುವ ಪದಾರ್ಥಗಳಾದ ಸಕ್ಕರೆ, ಉಪ್ಪು, ನೀರು, ಅರಸಿನ, ಜೀರಿಗೆ, ಧನಿಯ, ಮೆಂತ್ಯ, ಶುಂಠಿ, ಏಲಕ್ಕಿ, ಲವಂಗ, ಕಾಳು ಮೆಣಸು, ಅಕ್ಕಿ, ಹಾಲು, ಈರುಳ್ಳಿ, ಬೆಳ್ಳುಳ್ಳಿ, ನಿಂಬೆಹಣ್ಣು ಇವುಗಳ ಔಷಧೀಯ ಗುಣವನ್ನು ತಿಳಿದು ರೋಗಕ್ಕೆ ತಕ್ಕಂತೆ ಬಳಸಿದರೆ ನಮ್ಮ ಬದುಕು ಬಂಗಾರವಾಗುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ.

1. ನಿಶ್ಯಕ್ತಿ ಅಥವಾ ನಿತ್ರಾಣದಿಂದ ಬಳಲುವ ವ್ಯಕ್ತಿಗೆ ಆಗಾಗ ಶುದ್ಧನೀರಿಗೆ ಸ್ವಲ್ಪ ಉಪ್ಪು ಸ್ವಲ್ಪ ಸಕ್ಕರೆ ಹಾಕಿ ಮಿಶ್ರಮಾಡಿದ ದ್ರವಾಹಾರವನ್ನು ಆಗಾಗ ಕೊಡುತ್ತಿದ್ದರೆ ನಿತ್ರಾಣ ಕಮ್ಮಿಯಾಗುತ್ತದೆ. ಶರೀರದಲ್ಲಿ ನೀರಿನ ಅಂಶ ಕಡಿಮೆಯಾಗುವುದಿಲ್ಲ.

2. ಮನೆಯಲ್ಲೇ ಮಾಡಿದ ಆಹಾರ ಸೇವನೆಗೆ ಆದ್ಯತೆ. ಮನೆಯಲ್ಲಿ ಶುಚಿಗೆ ರುಚಿಗೆ ಪ್ರಾಮುಖ್ಯತೆ ನೀಡುವುದರಿಂದ ಉತ್ತಮ ಆರೋಗ್ಯಕ್ಕೆ ಇದು ಸಹಕಾರಿ,

3. ಬೊಜ್ಜು ನಿವಾರಣೆಗಾಗಿ ಕುಸುಬುಲಕ್ಕಿ ಅಥವಾ ಕುಚ್ಚಿಲಕ್ಕಿ ಗಂಜಿ ವಾರಕ್ಕೆ ಎರಡು ಬಾರಿ ಸೇವಿಸುವುದು.

4.ವಾರಕ್ಕೊಮ್ಮೆ ಎಣ್ಣೆ ಸ್ನಾನ, ಕೊಬ್ಬರಿ ಎಣ್ಣೆ ಅಥವಾ ಸಾಸಿವೆ ಎಣ್ಣೆಯಿಂದ ಲಘವಾಗಿ ಮಸಾಜ್ ಮಾಡಿ ಹಿತವಾದ ಬಿಸಿನೀರಿನ ಸ್ನಾನ ಚರ್ಮ ಕಾಂತಿಯುತವಾಗಿ, ಮೃದುತ್ವವನ್ನು ಕಾಪಾಡಿಕೊಂಡು ಬರಲು ಸಹಕಾರಿ. ಚರ್ಮ ಬಿರುಸಾಗುವಿಕೆಯನ್ನು ತಡೆಯುತ್ತದೆ.

5. ಅತ್ಯಂತ ಹೆಚ್ಚು ನೀರು ಸೇವಿಸುವುದು. ದಿನಕ್ಕೆ 7 ರಿಂದ 10 ಲೋಟದಷ್ಟು ನೀರು ಕುಡಿಯಬೇಕು. ಶರೀರದಲ್ಲಿ ನಡೆಯುವ ಎಲ್ಲಾ ಕ್ರಿಯೆಗಳಿಗೂ ನೀರು ಬೇಕು. ಇದರಿಂದ ಜೀರ್ಣಕ್ರಿಯೆ, ಕಲ್ಮಶ ವಿಸರ್ಜನೆಗೆ ಸಹಾಯವಾಗುತ್ತದೆ.

6. ಅತಿಯಾಗಿ ಮೂಗಲ್ಲಿ ಸಿಂಬಳ/ ನೆಗಡಿ ಸೋರುತ್ತಿದ್ದರೆ ಒಂದು ಬಟ್ಟಲು ಸಿಹಿ ಮೊಸರಿಗೆ ಬೆಲ್ಲ ಸೇರಿಸಿ 4 ರಿಂದ 5 ದಿವಸಗಳ ಕಾಲ ತಿಂದರೆ ಸಾಕು. ನೆಗಡಿ ಕಮ್ಮಿ ಆಗುತ್ತದೆ.

7. ತಲೆ ಸುತ್ತು, ವಾಕರಿಗೆ, ಪ್ರಯಾಣದ ಆಯಾಸ ಇದ್ದಾಗ ಒಂದು ಲೋಟ ನೀರಿಗೆ ನಿಂಬೆಹಣ್ಣಿನ ರಸ ಮತ್ತು ಉಪ್ಪು ಹಾಕಿದ (ನಿಂಬೆ ಪಾನಕ) ಕುಡಿಯಿರಿ.

8. ಗಂಟಲು ಕೆರೆತ, ಕೆಮ್ಮು, ಧ್ವನಿ ಬಾರದೆ ಇದ್ದಾಗ ಒಂದೆರಡು ಲವಂಗ, ಶುಂಠಿ ಚೂರು, 2 ಕಾಳು ಮೆಣಸು, 2 ಕಲ್ಲು ಉಪ್ಪು ಬಾಯಿಗೆ ಹಾಕಿ ನಿಧಾನವಾಗಿ ಜಗಿದು ಚಪ್ಪರಿಸುತ್ತ ಇದ್ದರೆ ಗಂಟಲು ಕಿರಿಕಿರಿ ಶಮನವಾಗುತ್ತದೆ.

9. ಹೊಟ್ಟೆ ಉಬ್ಬರ, ತಲೆ ಸುತ್ತುವಿಕೆಗೆ:- ಒಣದ್ರಾಕ್ಷಿಯನ್ನು ರಾತ್ರಿ ನೀರಲ್ಲಿ ನೆನೆಸಿಟ್ಟು ಬೆಳಿಗ್ಗೆ ಸ್ವಲ್ಪ ಕಲ್ಲು ಸಕ್ಕರೆ ಹಾಕಿ ಕಿವುಟಿ ಕುಡಿಯ ಬೇಕು ಇದರಿಂದ ರಕ್ತವೂ ಶುದ್ಧಿಯಾಗುತ್ತದೆ. ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ. ಮಲ ವಿಸರ್ಜನೆಗೂ ಸಹಾಯಕಾರಿ.

10.ಉಬ್ಬಸ/ಅಸ್ತಮದಿಂದ ಬಳಲುವವರು ದಿನಾ ಹಾಲಿನ್ಲಿ 5 ರಿಂದ 6 ಬೆಳ್ಳುಳ್ಳಿ ತೊಳೆ ಬೇಯಿಸಿ ಊಟದ ನಂತರ ತಿನ್ನಬೇಕು. ಇದರಿಂದ ಉಬ್ಬಸ ನಿಧಾನವಾಗಿ ಕಡಿಮೆಯಾಗುವುದು.

Also Read: ವಿಶ್ವ ಅಸ್ತಮಾ ದಿನ – ಮೇ 3 : ಅಸ್ತಮಾ ತಡೆಗಟ್ಟುವುದು ಹೇಗೆ? 

11. ಊಟದ ನಂತರ ಒಂದು ಕಾಳು ಏಲಕ್ಕಿ ಬಾಯಿಗೆ ಹಾಕುವುದರಿಂದ ಬಾಯಿ ಸುವಾಸನೆಯಿಂದ ಕೂಡಿದ್ದು ತಿಂದ ಆಹಾರ ಬೇಗನೆ ಜೀರ್ಣವಾಗುವುದು.

12. ಡಯಾಬಿಟೀಸ್‍ಗಾಗಿ: ಮೆಂತ್ಯ ಪುಡಿಯನ್ನು ಮುದ್ದೆ ಮಾಡಿ ತಿನ್ನುವುದು. ಮೆಂತ್ಯ ಕಷಾಯ ಕುಡಿಯುವುದು. ಜೊತೆಗೆ ಹಾಗಲಕಾಯಿ ಊಟದಲ್ಲಿ ಬಳಸುವುದು. ಜೊತೆಗೆ 3 ತಿಂಗಳ ಕಾಲ ಕರಿಬೇವಿನ ಎಲೆ ಅಥವಾ ಬಿಲ್ವ ಪತ್ರೆ ಎಲೆ ಅಥವಾ ಬಿಳಿ ನಿತ್ಯ ಪುಷ್ಪದ ಎಲೆಗಳನ್ನು (8 ರಿಂದ 10 ಎಲೆ) ತಿನ್ನುತ್ತ ಬಂದರೆ ಸಕ್ಕರೆ ಖಾಯಿಲೆ ಸಹಜ ಸಿತ್ಥಿಗೆ ಬರುತ್ತದೆ.

13. ಪ್ರತಿದಿನ ಅಡುಗೆಯಲ್ಲಿ ಇಂಗು ಬಳಸಿ. ಜೊತೆಗೆ ನೀರು ಬೆರೆಸಿದ ತೆಳು ಹಾಲು: ಅಂದರೆ 1 ಲೋಟ ಬಿಸಿನೀರಿಗೆ 1\4 ಲೋಟ ಹಾಲು ಸೇರಿಸಿ ಮಾಡುವ ಹಾಲನೀರು ಬೆಳಿಗ್ಗೆ ಸಾಯಂಕಾಲ ಕುಡಿಯುವುದು. ಇದರಿಂದ ಗ್ಯಾಸ್ ಟ್ರಬಲ್, ಅಸಿಡಿಟಿ ಸಮಸ್ಯೆ ಬರುವುದಿಲ್ಲ.

14. ಆರೋಗ್ಯಕ್ಕೆ ಸುಖ ನಿದ್ರೆ ಬಹು ಮುಖ್ಯ. ಇದಕ್ಕಾಗಿ ಒಳ್ಳೆಯ ಪುಸ್ತಕ ಓದುವುದು, ಒಳ್ಳೆಯ ಸಂಗೀತ, ಕೇಳುವುದರಿಂದ ಅಥವಾ ಗಸಗಸೆ ಪಾಯಸ ಕುಡಿಯುವುದರಿಂದ, ಮಲಗುವ ಮುನ್ನ ಕಣ್ಣರೆಪ್ಪೆ ಮೇಲೆ ಕೊಬ್ಬರಿ ಎಣ್ಣಿ ಸವರುವುದರಿಂದ ಸುಖನಿದ್ರೆ ಬರುತ್ತದೆ. ಹೊಸ ಚೈತನ್ಯ ಬರಲು ಸಹಕಾರಿ.

15. ಸಸ್ಯಾಹಾರದ ಕಡೆಗೆ ಒಲವು ತೋರಿಸುವುದು. ಯಾಕೆಂದರೆ ಸರಳ ಜೀವನ ಸುಖದ ಸೋಪಾನ.

Also Read: Plant based diet and lifestyle : Why it is best for you?

16. ಆಯಿಲ್ ಪುಲ್ಲಿಂಗ್: ಬೆಳಗ್ಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಬಾಯಿಗೆ ಜೇನುತುಪ್ಪ ಅಥವಾ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣಿ ಯಾವುದಾದರೂ ಒಂದನ್ನು ಒಂದು ಚಮಚದಷ್ಟು ಹಾಕಿ 4 ರಿಂದ 5 ನಿಮಿಷಗಳ ವರೆಗೆ ಬಾಯಿಯಲ್ಲಿಟ್ಟು ಮುಕ್ಕಳಿಸುತ್ತಾ ಇರುವುದು. ಜೊಲ್ಲು ಜಾಸ್ತಿಯಾಗಿ ಬಾಯಿಯಲ್ಲಿ ಹಿಡಿಸುತಿಲ್ಲವೆಂದಾಗ ಉಗಿದು ಬೆಚ್ಚಗಿನ ನೀರಿನಲ್ಲಿ ಬಾಯಿತೊಳೆದು ಹಲ್ಲು ಉಜ್ಜಿರಿ. ಇದರಿಂದ ಬಾಯಿಯಿಂದ ಬರುವ ಧುರ್ಗಂಧ, ಅಲರ್ಜಿ ಸಮಸ್ಯೆ ದೂರವಾಗುವುದು. ಒಸಡು ಹಾಗೂ ಹಲ್ಲುಗಳು ಗಟ್ಟಿಯಾಗುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬೆಳಿಗ್ಗೆ ಆಯಿಲ್ ಪುಲ್ಲಿಂಗ ಮಾಡುತ್ತ ನಿಮ್ಮ ದೈನಂದಿನ ಮನೆ ಕೆಲಸ ಮಾಡಿಕೊಳ್ಳುತ್ತಿರಬಹುದು. ಇದಾದ ನಂತರ ಹೊಟ್ಟೆ ತುಂಬಾ ಬಿಸಿನೀರು ಕುಡಿಯಿರಿ.

ನಾರಾಯಣಿ ಭಟ್

ನಾರಾಯಣಿ ಭಟ್

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!