ತೂಕ ಕಡಿಮೆ ಮಾಡಿಕೊಳ್ಳುವುದು ಲೈಂಗಿಕ ಜೀವನಕ್ಕೆ ಒಳ್ಳೆಯದೆ ?

ತೂಕ ಕಡಿಮೆ ಮಾಡಿಕೊಳ್ಳುವುದು ಲೈಂಗಿಕ ಜೀವನಕ್ಕೆ ಒಳ್ಳೆಯದೆ ? ಸ್ಥೂಲಕಾಯ ಅಥವಾ ಬೊಜ್ಜಿನ ಫಲಿತಾಂಶವಾಗಿ ಲೈಂಗಿಕ ಜೀವನದಲ್ಲಿ ಉದ್ಭವಿಸುವ ಬಹುತೇಕ ಸಮಸ್ಯೆಯಗಳನ್ನು ಸ್ವಲ್ಪ ಶ್ರಮದಿಂದ ನಿವಾರಿಸಿಕೊಳ್ಳಬಹುದು.

ತೂಕ ಕಡಿಮೆ ಮಾಡಿಕೊಳ್ಳುವುದು ಲೈಂಗಿಕ ಜೀವನಕ್ಕೆ ಒಳ್ಳೆಯದೆ ?ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಅನೇಕ ಉತ್ತಮ ಕಾರಣಗಳಿವೆ. ನಿಮ್ಮ ಸೆಕ್ಸ್ ಲೈಫ್ ಸುಧಾರಣೆ ಮಾಡಿಕೊಳ್ಳುವುದು ಸಹ ಇವುಗಳಲ್ಲಿ ಒಂದು.ಸೆಕ್ಸ್ ಪ್ರಯೋಜನಗಳು ಶಕ್ತಿ ವರ್ಧನೆ, ಸುಧಾರಿತ ಚಲನೆ ಮತ್ತು ಆತ್ಮ ಗೌರವ ಹೆಚ್ಚಳ ಇವುಗಳನ್ನು ಒಳಗೊಂಡಿರುತ್ತದೆ. ಈ ಅಂಶಗಳು ನಿಮ್ಮ ಪ್ರೀತಿ ಪ್ರಣಯ ಬದುಕಿನ ಮೇಲೆ ಪೂರಕ ಪರಿಣಾಮ ಉಂಟು ಮಾಡುತ್ತದೆ. ಇದರೊಂದಿಗೆ ತೂಕ ಹೆಚ್ಚಳವು ಹತಾಶೆಗೆ ಕಾರಣವಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳುವುದರಿಂದ ಹೆಚ್ಚಾಗುವ ವಿಶ್ವಾಸವು ನಿಮ್ಮ ಸ್ಥಿತಿಯನ್ನು ಸುಧಾರಿಸಲು ನೆರವಾಗುತ್ತದೆ. ಆದರೆ ಲೈಂಗಿಕತೆ ಮತ್ತು ಬೊಜ್ಜು ಸಮಸ್ಯೆಗೆ ಸಂಬಂಧಪಟ್ಟ ಸಾಕ್ಷ್ಯಾಧಾರಗಳು ಮಿಶ್ರವಾಗಿರುವುದರಿಂದ ತೂಕ ಕಳೆದುಕೊಳ್ಳುವ ಪ್ರಕ್ರಿಯೆ ವೇಲೆ ತೃಪ್ತಿಕರ ಲೈಂಗಿಕ ಜೀವನವನ್ನು ಹೊಂದಲು ಸಾಧ್ಯವಿಲ್ಲ ಎಂಬ ನಂಬಿಕೆಗೆ ಕಾರಣವಿಲ್ಲ. ನಿಮ್ಮ ಸಂಗಾತಿಯೊಂದಿಗೆ ಸುಧಾರಿತ ಪ್ರಣಯವು  ತೂಕ ಕಡಿಮೆ ಮಾಡಿಕೊಳ್ಳಲು ಅಗತ್ಯವಿರುವಷ್ಟೇ ಭಾವನಾತ್ಮಕ ಬೆಂಬಲ ನೀಡಲು ನಿಮಗೆ ಸಹಾಯ ಮಾಡಬಹುದು.

ಲೈಂಗಿಕ ಜೀವನದ ಮೇಲೆ ಬೊಜ್ಜು ಬೀರುವ ದೈಹಿಕ ಪರಿಣಾಮಗಳು:

ಯಾವುದಕ್ಕೂ ಮುನ್ನ ಲೈಂಗಿಕತೆ ಮತ್ತು ಬೊಜ್ಜು ಇವನ್ನು ದೂರವಿಡುವ ಅಗತ್ಯವಿದೆ ಎಂಬ ತಪ್ಪು ಕಲ್ಪನೆ ಇತ್ತು. ಹೊಸ ಸಂಶೋಧನೆಯು  ಈ ಹಿಂದೆ ಅಂಗೀಕರಿಸಲಾದ ಬೊಜ್ಜಿಗೆ ಸಂಬಂಧಪಟ್ಟಂತೆ ಹಲವಾರು ಹೇಳಿಕೆಗಳನ್ನು ಪ್ರಶ್ನಿಸುವಂತೆ ಮಾಡಿದೆ. ಇವುಗಳಲ್ಲಿ ಒಂದು ಅಂಶವೆಂದರೆ ಅಲ್ಪಾವಧಿಯಲ್ಲಿ 100 ರಿಂದ 300 ಕ್ಯಾಲೋರಿಗಳ ತನಕ ಕರಗಿಸಲು ಲೈಂಗಿಕ ಕ್ರಿಯೆ ಒಂದು ಉತ್ತಮ ವ್ಯಾಯಾಮ ಎಂಬುದು. ಆದರೆ ಇತ್ತೀಚಿನ ಅಧ್ಯಯನಗಳು ಇದು ಸುಳ್ಳು ಎಂಬುದನ್ನು ತೋರಿಸಿವೆ. ಸ್ಥೂಲಕಾಯ ವ್ಯಕ್ತಿಗಳಲ್ಲಿರುವ ಒಂದು ಸಮಸ್ಯೆ ಎಂದರೆ ಅವರಲ್ಲಿನ ಸ್ಟಾಮಿನಾ ಕೊರತೆ. ಹೀಗಾಗಿ ದೀರ್ಘಾವಧಿಗಳ ಕಾಲ ಅಧಿಕ ಶಕ್ತಿಯುತ ಚಟುವಟಿಕೆಗಳನ್ನು ಮುಂದುವರೆಸಲು ಅವರಿಗೆ ಸಾಧ್ಯವಾಗುವುದಿಲ್ಲ. ರತಿ ಕ್ರೀಡೆ ವೇಳೆ ದಹನವಾಗುವ ಸರಾಸರಿ ಕ್ಯಾಲೋರಿಗಳ ಮೊತ್ತವೆಂದರೆ 50ಕ್ಕಿಂತ ಕಡಿಮೆ. ಇದರರ್ಥ ಏನೆಂದರೆ ಲೈಂಗಿಕ ಕ್ರಿಯೆಯನ್ನು ಪರಿಣಾಮಕಾರಿ ತೂಕ ಇಳಿಸುವ ಸಾಧನವಾಗಿ ಪರಿಗಣಿಸಲಾಗದು. ಆದಾಗ್ಯೂ, ಇದು ಆರೋಗ್ಯಕರ ಆಹಾರ ಕ್ರಮ ಮತ್ತು ವ್ಯಾಯಾಮದೊಂದಿಗೆ ಮಿಳಿತಗೊಂಡಾಗ ಇದು ಉತ್ತೇಜಕವಾಗಬಲ್ಲದು.

1.ಬೊಜ್ಜು ರೋಗ ಒಂದೇ ದುರ್ಬಲ ಲೈಂಗಿಕ ಜೀವನಕ್ಕೆ ಕಾರಣವಾಗುವುದಿಲ್ಲ. ಆದರೆ, ಬೊಜ್ಜಿನೊಂದಿಗೆ ಜೊತೆ ಜೊತೆಯಾಗಿ ಬರುವ ದೈಹಿಕ ಸ್ಥಿತಿಗಳು ಕೂಡ ಇಂಥ ಸಮಸ್ಯೆಗಳಿಗೆ ಕಾರಣವಾಗಬಹುದು. ಎಲ್ಲ ಸ್ಥೂಲ ಕಾಯ ವ್ಯಕ್ತಿಗಳಲ್ಲಿ ಮೂರನೇ ಒಂದು ಭಾಗದಷ್ಟು ಇಂಥ ಸಮಸ್ಯೆ ಹೊಂದಿರುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಅಧಿಕ ತೂಕ ಹೊಂದಿರುವ ಬಹುತೇಕ ಮಂದಿ ಅಧಿಕ ಪ್ರಮಾಣದ ಮಾರಕ ಕೊಲೆಸ್ಟರಾಲ್‍ನನ್ನು ಹೊಂದಿರುತ್ತದೆ. ಇದು ಅನೇಕ ಬಾರಿ ಸ್ಥೂಲಕಾಯ ಅಥವಾ ಬೊಜ್ಜಿಗೆ ಮುಖ್ಯ ಕಾರಣವಾಗುತ್ತದೆ. ಇಂಥ ಒಂದು ಸಮಸ್ಯೆಯು ಲೈಂಗಿಕ ಸಾಮಥ್ರ್ಯಗಳು ಮತ್ತು ಬಯಕೆ ಮೇಲೆ ಸಹ ತನ್ನ ಪರಿಣಾಮಗಳನ್ನು ಬೀರುತ್ತದೆ. ಈ ವಿಚಾರವು ಮಹಿಳೆಯರಿಗಿಂತ ಪುರುಷರಲ್ಲಿ ತೀರಾ ಹೆಚ್ಚು ಸಾಧಾರಣವಾಗಿರುತ್ತದೆ. ಇನ್ನು ಇದೇ ಲಕ್ಷಣಗಳು ಇನ್ಸುಲಿನ್ ಪ್ರತಿರೋಧದಿಂದಲೂ ಕಾರಣವಾಗಬಹುದು. ಇದು ಮತ್ತೆ ದುರ್ಬಲ ಆಹಾರ ಕ್ರಮಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಇದು ಟೈಪ್ 2 ಡಯಾಬಿಟಿಸ್‍ನ ಆರಂಭಿಕ ಸೂಚಕವಾಗಿರುತ್ತದೆ. ಈ ಎರಡೂ ವೈದ್ಯಕೀಯ ವಿಷಯಗಳು ಪುರುಷರ ಲೈಂಗಿಕ ಸಮಸ್ಯೆಗಳ ಅನುಭವಕ್ಕೆ ಕಾರಣವಾಗುತ್ತದೆ. ಏಕೆಂದರೆ ಕೊಬ್ಬು ಶೇಖರಣೆಯೊಂದಿಗೆ ಶಿಶ್ನದಲ್ಲಿನ ಪುಟ್ಟ ರಕ್ತನಾಳಗಳು ಕಿರಿದಾಗಿ ನಿಮಿರು ದೌರ್ಬಲ್ಯ ಉಂಟಾಗುತ್ತದೆ. ಇದು ನೀವು ನಿರೀಕ್ಷಿಸಿದಂತೆ ನಿಮಿರುವಿಕೆ ವೈಫಲ್ಯ ಅಥವಾ ನಪುಂಸಕತ್ವಕ್ಕೂ ಎಡೆ ಮಾಡಿಕೊಡುತ್ತದೆ.

2. ಅಸಮರ್ಪಕ ರಕ್ತ ಹರಿಯುವಿಕೆಗೆ ಸಂಬಂಧಿಸಿದ ಲೈಂಗಿಕ ಸಮಸ್ಯೆಗಳು ಕೇವಲ ಪುರುಷರನ್ನು ಮಾತ್ರ ಕಾಡುವುದಿಲ್ಲ. ಇದು ಮಹಿಳೆಯರಲ್ಲೂ ಕಂಡುಬರುತ್ತದೆ. ಯೋನಿಗೆ ಸಂಪರ್ಕ ಹೊಂದಿರುವ ಸೂಕ್ಷ್ಮ ರಕ್ತನಾಳಗಳು ಬಂದ್ ಆಗಿರುವುದರಿಂದ ವನಿತೆಯರಲ್ಲಿ ಲೈಂಗಿಕ ಆಸಕ್ತಿ ಕುಂಠಿತವಾಗುತ್ತದೆ. ಇದು ಅವರ ದೇಹವು ಲೈಂಗಿಕ ಉದ್ರೇಕಕ್ಕೆ ಕಡಿಮೆ ಸ್ಪಂದಿಸುತ್ತದೆ.

3. ಕೆಲವು ಸ್ಥೂಲಕಾಯ ಅಥವಾ ಬೊಜ್ಜು ಪ್ರಕರಣಗಳಲ್ಲಿ ಬರೀಡ್ ಪೆನ್ನಿಸ್ ಸಿಂಡ್ರೋಮ್ (ಶಿಶ್ನ ಹೂತು ಹೋಗುವ ಲಕ್ಷಣ) ಎಂದು ಕರೆಯಲ್ಪಡುವ ವೈದ್ಯಕೀಯ ಸಮಸ್ಯೆಯಿಂದ ಪುರುಷರು ಬಳಲುತ್ತಾರೆ. ಹೆಸರೇ ಹೇಳುವಂತೆ ಇದು ಶಿಶ್ನವು ಒಳಗೆ ಹೂತು ಹೋಗುವಂತೆ ಮಾಡುತ್ತದೆ. ಅಂದರೆ, ಶಿಶ್ನ ಮೇಲಿನ ಕೊಬ್ಬು ಜೀವಕೋಶದ ಹೆಚ್ಚುವರಿ ಪದರಗಳು ಶಿಶ್ನವನ್ನು ಮುಚ್ಚುವಂತೆ ಮಾಡಿ ಅದನ್ನು ಬಚ್ಚಿಡುತ್ತದೆ. ಈ ಸ್ಥಿತಿ ಹೊಂದಿರುವ ಪುರುಷರು ದೈಹಿಕ ತೊಂದರೆಗಳನ್ನು ಅನುಭವಿಸುತ್ತಾರೆ. ಯೋನಿಯೊಳಗೆ ಶಿಶ್ನವನ್ನು ತೂರಿಸಲು ಪುರುಷರಿಗೆ ಇದರಿಂದ ತುಂಬಾ ಕಷ್ಟವಾಗುತ್ತದೆ. ಆದಾಗ್ಯೂ, ವೈದ್ಯಕೀಯ ಅಂಶವನ್ನು ಪರಿಗಣಿಸಿ ಹೇಳುವುದಾದರೆ, ಶಿಶ್ನದ ನಿಮಿರು ದೌರ್ಬಲ್ಯ ಅಥವಾ ನಿಮಿರು ವೈಫಲ್ಯಕ್ಕೆ ಇದು ನೇರ ಕಾರಣವಾಗುತ್ತದೆ. ಚಿಕಿತ್ಸೆಯಾಗಿ ಶಸ್ತ್ರಕ್ರಿಯೆ ಲಭಿಸುತ್ತದೆಯಾದರೂ, ಇದು ಶಿಫಾರಸ್ಸಿಗೆ ಸೂಕ್ತವಲ್ಲ. ಕೆಲವು ಪ್ರಕರಣಗಳಲ್ಲಿ ಇದು ಸಾಧ್ಯವೂ ಆಗುವುದಿಲ್ಲ. ಪಥ್ಯಾಹಾರ ಮತ್ತು ವ್ಯಾಯಾಮದ ಮೂಲಕ ತೂಕ ಇಳಿಸಿಕೊಳ್ಳುವುದು ಈ ಸಮಸ್ಯೆಯ ಚಿಕಿತ್ಸೆಗೆ ಯಾವಾಗಲೂ ಉತ್ತಮ ಮಾರ್ಗೋಪಾಯವಾಗಿದೆ.

4. ಅಧಿಕ ಪ್ರಮಾಣದ ದೇಹ ಕೊಬ್ಬು ಶರೀರದ ವ್ಯವಸ್ಥೆಯಲ್ಲಿ ಎಸ್‍ಎಚ್‍ಬಿಜಿ (ಸೆಕ್ಸ್ ಹಾರ್ಮೋನ್ ಬೈಂಡಿಂಗ್ ಗ್ಲೋಬುಲಿನ್) ಮಟ್ಟವನ್ನು ಹೆಚ್ಚಿಸುತ್ತದೆ. ಇದು ಒಂದು ನೈಸರ್ಗಿಕ ರಾಸಾಯನಿಕವಾಗಿದ್ದು, ಇದು ಸೆಕ್ಸ್ ಹಾರ್ಮೊನ್ ಆದ ಟೆಸ್ಟೊಸ್ಟೆರೊನ್‍ಗೆ ಬೈಂಡ್ ಮಾಡುತ್ತದೆ. ಇದು ಆರೋಗ್ಯಕರ ಲೈಂಗಿಕ ಕಾಮನೆಗಳು ಮತ್ತು ಲೈಂಗಿಕ ಆಸಕ್ತಿ-ಕ್ರಿಯೆಯನ್ನು ಒದಗಿಸಲು ಸಹ ನೆರವಾಗುತ್ತದೆ. ಆದರೆ ಎಸ್‍ಎಚ್‍ಜಿಬಿ ಅಧಿಕ ಪ್ರಮಾಣದಲ್ಲಿದ್ದರೆ, ಅದು ಸಾಮಾನ್ಯ ಲೈಂಗಿಕ ಜೀವನದೊಂದಿಗಿನ ಕರ್ತವ್ಯಗಳನ್ನು ನಿಭಾಯಿಸಲು ಕಡಿಮೆ ಟೆಸ್ಟೊಸ್ಟೆರೊನ್‍ನನ್ನು ಮಾತ್ರ ಉಳಿಸಿರುತ್ತದೆ. ಆದ್ದರಿಂದ ಲೈಂಗಿಕ ಬಯಕೆಗಳು ಮತ್ತು ಕಾಮೋತ್ತೇಜನ ಕುಂಠಿತಗೊಳ್ಳುತ್ತದೆ.

5. ಸ್ಥೂಲಕಾಯ ಅಥವಾ ಬೊಜ್ಜು ವ್ಯಕ್ತಿಯ ಲೈಂಗಿಕ ಜೀವನದಲ್ಲಿ ಇತರ ಮಾರ್ಗಗಳಲ್ಲಿ ಮಧ್ಯಪ್ರವೇಶಿಸುತ್ತದೆ. ಸ್ಥೂಲಕಾಯ ಮಹಿಳೆಯರು, ಸಾಮಾನ್ಯ ತೂಕ ಹೊಂದಿರುವ ವನಿತೆಯರಿಗಿಂತ ತಮ್ಮ ಲೈಂಗಿಕ ಸಂಗಾತಿಯನ್ನು ಹುಡುಕುವುದು ತುಂಬಾ ಕಷ್ಟ ಎಂದು ಒಂದು ಅಧ್ಯಯನದಿಂದ ತಿಳಿದುಬಂದಿದೆ. ಸ್ಥೂಲಕಾಯ ಪುರುಷರು ಮತ್ತು ಸಾಮಾನ್ಯ ಪುರುಷರ ನಡುವೆ ವ್ಯತ್ಯಾಸದಲ್ಲಿ ಯಾವುದೇ ಮಹತ್ವವಿಲ್ಲ.  ಇದೇ ಅಧ್ಯಯನವು, ಸ್ಥೂಲಕಾಯದ ಮಹಿಳೆಯರು ಗಂಡಾಂತರದ ಲೈಂಗಿಕ ನಡವಳಿಕೆಯಲ್ಲಿ ತೊಡಗುವ ಸಾಧ್ಯತೆ ಅಧಿಕವಾಗಿದೆ ಎಂಬುದನ್ನು ಬಹಿರಂಗಗೊಳಿಸಿದೆ. ಬೊಜ್ಜು ದೇಹದ ಮಹಿಳೆಯರು ಲೈಂಗಿಕ ಸಂಧಿಸುವಿಕೆಯ ನಿರೀಕ್ಷೆ ಮತ್ತು ಪೂರ್ವ ಯೋಜನೆಯನ್ನು ಹೊಂದಿರುವ ಸಾಧ್ಯತೆ ಕಡಿಮೆ ಇರುವುದರಿಂದ ಅವರು ಗರ್ಭನಿರೋಧಕ ಕ್ರಮಗಳನ ಕೊರತೆ ಉಳ್ಳವರಾಗಿರುತ್ತಾರೆ. ಅದ್ದರಿಂದ ಯೋಜನೆ ಇಲ್ಲದ ಗರ್ಭಧಾರಣೆಗಳು ಸ್ಥೂಲಕಾಯದ ಮಹಿಳೆಯರಲ್ಲಿ ಕಂಡು ಬರುವ ಒಂದು ಸಾಧಾರಣ ಸಂಗತಿಯಾಗಿದೆ.

ಉತ್ತಮ ಲೈಂಗಿಕ ಜೀವನಕ್ಕಾಗಿ ಸ್ಥೂಲಕಾಯ ನಿಭಾಯಿಸುವಿಕೆ:

Obesity1. ಸ್ಥೂಲಕಾಯ ಅಥವಾ ಬೊಜ್ಜಿನ ಫಲಿತಾಂಶವಾಗಿ ಲೈಂಗಿಕ ಜೀವನದಲ್ಲಿ ಉದ್ಭವಿಸುವ ಬಹುತೇಕ ಸಮಸ್ಯೆಯಗಳನ್ನು ಸ್ವಲ್ಪ ಶ್ರಮದಿಂದ ನಿವಾರಿಸಿಕೊಳ್ಳಬಹುದು. ಈ ಸಮಸ್ಯೆ ವಿರುದ್ದ ಹೋರಾಡುವ ಉತ್ತಮ ಮಾರ್ಗವೆಂದರೆ ಪಥ್ಯಾಹಾರ ಮತ್ತು ವ್ಯಾಯಾಮದ ಮೂಲಕ ತೂಕ ಕಡಿಮೆ ಮಾಡಿಕೊಳ್ಳುವುದು.ಸೆಕ್ಸ್ ಹಾರ್ಮೊನ್ ಉತ್ಪಾದನೆಯನ್ನು ಉದ್ದೀಪನಗೊಳಿಸಲು ಕಡಿಮೆ ಪ್ರಮಾಣದಲ್ಲಿ ತೂಕವನ್ನು ಕಡಿಮೆ ಮಾಡಿಕೊಳ್ಳುವುದನ್ನು ಆರಂಭಿಸುವುದರಿಂದ ಪರಿಣಾಮಕಾರಿ ಫಲಿತಾಂಶ ಲಭಿಸುತ್ತದೆ. ಹೀಗಾಗಿ ಆರೋಗ್ಯಕರ ಲೈಂಗಿಕ ಸುಖ ಪಡೆಯಲು ಸಾಧ್ಯವಾಗುತ್ತದೆ. ತೂಕ ಇಳಿಕೆ ಪ್ರಕ್ರಿಯೆ ಮೂಲಕ ಲೈಂಗಿಕ ಆಸಕ್ತಿ ಮತ್ತು ಕ್ರಿಯೆಯನ್ನು ಕ್ರಮೇಣ ಸುಧಾರಣೆ ಮಾಡಿಕೊಳ್ಳಬಹುದು ಹಾಗೂ ಆರಂಭದಿಂದಲೇ ನೀವು ಸ್ಪಷ್ಟವಾದ ಫಲಿಶಾಂಶವನ್ನು ನೋಡಬಹುದು.

2. ಸಮಸ್ಯೆಗಳು ದೈಹಿಕ ಅಥವಾ ಮಾನಸಿಕ ಸ್ವರೂಪದ್ದಾಗಿರಲಿ ಅವುಗಳ ಪರಿಗಣನೆ ಇಲ್ಲದೇ ಇದರಿಂದ ನಿಮ್ಮ ಪ್ರೀತಿ-ಪ್ರೇಮ-ಪ್ರಣಯದ ಜೀವನ ಸುಧಾರಿಸುತ್ತದೆ. ಈ ಸನ್ನಿವೇಶಕ್ಕೆ ಸಂಬಂಧಿಸಿದಂತೆ ತೂಕವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಕೆಲವು ಪ್ರಯೋಜನ ಮತ್ತು ಅನುಕೂಲಗಳು ಆಗುತ್ತವೆ. ಅವುಗಳೆಂದರೆ ಶಕ್ತಿ ವರ್ಧನೆ, ಶಕ್ತಿಯ ಬೃಹತ್ ಪೂರೈಕೆ, ಉತ್ತಮ ಚಲನೆ, ಆತ್ಮ ಗೌರವ ವೃದ್ದಿ ಮತ್ತು ಹತಾಶೆ, ಖಿನ್ನತೆಯನ್ನು ನಿವಾರಿಸಲು ಸಹ ಇದು ಸಹಕಾರಿ.

3. ತೂಕ ಇಳಿಕೆಯಲ್ಲಿ  ಆಹಾರ ಕ್ರಮಗಳ ಬದಲಾವಣೆ ಮತ್ತು ಪಥ್ಯಾಹಾರಗಳು ಪ್ರಮುಖ ಭಾಗವಾಗಿರುವುದರಿಂದ ಲೈಂಗಿಕ ಸಮಸ್ಯೆಗಳನ್ನು ನಿವಾರಿಸಲು ಇದು ನೆರವಾಗುತ್ತದೆ. ನೀವು ಕಡಿಮೆ ಕೊಬ್ಬಿನಂಶ ಇರುವ ಆಹಾರಗಳು ಅಂದರೆ ಹಣ್ಣು ಮತ್ತು ತರಕಾರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಬೇಕು. ಇದರಿಂದ ನಿಮ್ಮ ಕೊಲೆಸ್ಟರಾಲ್ ಮತ್ತು ಬ್ಲಡ್ ಶುಗರ್ ಮಟ್ಟಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.  ಅಧಿಕ ಕೊಲೆಸ್ಟರಾಲ್ ಮತ್ತು ಇನ್ಸುಲಿನ್ ಪ್ರತಿರೋಧತೆಯು ಸ್ಥೂಲಕಾಯದೊಂದಿಗೆ ಸಂಬಂಧ ಹೊಂದಿರುವ ಲೈಂಗಿಕ ಸಮಸ್ಯೆಗಳಿಗೆ ಎರಡು ಮುಖ್ಯ ಕಾರಣಗಳಾಗಿವೆ.

4. ದಿನ ನಿತ್ಯದ ಜೀವನದಲ್ಲಿ ವ್ಯಾಯಾಮ ಒಂದು ದೊಡ್ಡ ಭಾಗವಾಗಬೇಕು. ಆದಾಗ್ಯೂ,  ವ್ಯಾಯಾಮ ಕ್ರಮವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು. ಅಂದರೆ ಇದು ಬಹುತೇಕ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಅರ್ಥವಲ್ಲ. ನೀವು ಮಾಡುವ ವ್ಯಾಯಾಮವು ದೇಹಕ್ಕೆ ಪೂರಕವಾಗುವ ಜೊತೆಗೆ ಶಿಶ್ನಕ್ಕೆ ರಕ್ತ ಪೂರೈಕೆಯನ್ನು ಸುಧಾರಿಸಬೇಕು. ಇದು ಸ್ಥೂಲಕಾಯರು ಮತ್ತು ಬೊಜ್ಜು ಇರುವ ಮಂದಿಯಲ್ಲಿ ಸಾಮಾನ್ಯ ಸಮಸ್ಯೆಯಾಗಿದ್ದು ಇದು ಮಹಿಳೆಯರಲ್ಲಿ ಲೈಂಗಿಕ ಆಸಕ್ತಿಯನ್ನು ಕುಂಠಿತಗೊಳಿಸುತ್ತದೆ ಮತ್ತು ಪುರುಷರಲ್ಲಿ ನಿಮಿರು ದೌರ್ಬಲ್ಯ ಉಂಟು ಮಾಡುತ್ತದೆ. ಇದಕ್ಕೆ ಸೂಕ್ತ ಶಿಫಾರಸ್ಸು ಎಂದರೆ ವಾಕಿಂಗ್, ಸೈಕ್ಲಿಂಗ್ ಮತ್ತು ಯೋಗ. ಪೆಲ್ವಿಕ್ ಪ್ರದೇಶದಲ್ಲಿ ಬೃಹತ್ ಮಾಂಸಖಂಡ ಸಮೂಹಗಳಲ್ಲಿ ಅವು ರಕ್ತ ಪೂರೈಕೆಯನ್ನು ಹೆಚ್ಚಿಸುತ್ತದೆ.

5. ನೀವು ತೂಕ ಸಮಸ್ಯೆಗಳೊಂದಿಗೆ ಸೆಣಸಾಡುತ್ತಿದ್ದರೆ,  ನಿಮ್ಮದೇ ಆದ ಸಮಸೆಗಳ ಬಗ್ಗೆ ಈಗಾಗಲೇ ಅರಿವಿಗೆ ಬಂದಿರುತ್ತದೆ.  ಇದು ನಿಮ್ಮ ಲೈಂಗಿಕ ಸಾಮಥ್ರ್ಯ ಅಥವಾ ನಿಮ್ಮ ದೈಹಿಕ ಸಾಮಥ್ರ್ಯ ಇರುವಿಕೆಯನ್ನು ತೋರಿಸುತ್ತದೆ. ಸ್ಥೂಲಕಾಯ ಮತ್ತು ಲೈಂಗಿಕತೆ ನಡುವೆ ನಿಖರವಾದ ಸಂಪರ್ಕ ಇರುವುದನ್ನು ತೋರಿಸು ಸಾಕಷ್ಟು ಸಾಕ್ಷ್ಯಾಧಾರಗಳು ಮತ್ತು ಸಂಶೋಧನಾ ವರದಿಗಳೂ ಇವೆ. ಆದರೆ ಇವೆಲ್ಲವೂ ಅಂಗೀಕಾರವಾಗಿಲ್ಲ. ನಿಜವಾಗಿಯೂ ಶ್ರಮ ವಹಿಸಿದರೆ ಇಂಥ ಸಮಸ್ಯೆಗಳನ್ನು ಖಂಡಿತಾ ಬಗೆಹರಿಸಬಹುದು. ಕಡಿಮೆ ಕೊಬ್ಬಿನ ಪಧಾರ್ಥವಿರುವ ಆರೋಗ್ಯಕರ ಆಹಾರಗಳನ್ನು ಆರಿಸಬೇಕಾಗುತ್ತದೆ. ಆದಾಗ್ಯೂ, ಕಡಿಮೆ ಕೊಬ್ಬಿನಾಂಶವಿರುವ ಆರೋಗ್ಯಕರ ಆಹಾರ ಮತ್ತು ಖನಿಜಗಳು ಮತ್ತು ಪೋಷಕಾಂಶಗಳು ಸಂಯೋಜನೆಗೊಂಡಿರುವ ಆರೋಗ್ಯಕರ ಆಹಾರವು ಹೆಚ್ಚು ಸೂಕ್ತ.

ಡಾ.ವಸುಂಧರಾ ಭೂಪತಿ ಸಿದ್ಧಾರ್ಥ ಆಯುರ್ವೇದ ಕ್ಲಿನಿಕ್

ಡಾ.ವಸುಂಧರಾ ಭೂಪತಿ
ಸಿದ್ಧಾರ್ಥ ಆಯುರ್ವೇದ ಕ್ಲಿನಿಕ್
ನಂ.222, 2ನ `ಇ’ ಕ್ರಾಸ್, 3ನೇ ಬ್ಲಾಕ್, 3ನೇ ಸ್ಟೇಜ್, ಬಸವೇಶ್ವರನಗರ,
ಬೆಂಗಳೂರು – 560 079, ಮೊ: 9480334750

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!