ಥೈರಾಯ್ಡ್ ಕ್ಯಾನ್ಸರ್ – ಬಹುತೇಕ ಮಹಿಳೆಯರನ್ನು ಬಾಧಿಸುವ ರೋಗ

ಥೈರಾಯ್ಡ್ ಕ್ಯಾನ್ಸರ್ ಬಹುತೇಕ ಮಹಿಳೆಯರನ್ನು ಬಾಧಿಸುವ ರೋಗ. ಇತ್ತೀಚಿನ ದಿನಗಳಲ್ಲಿ ಇದು ಪುರುಷರು ಮತ್ತು ಮಹಿಳೆಯರಲ್ಲಿ ವೇಗವಾಗಿ ಅಧಿಕವಾಗುತ್ತಿರುವುದು ಕಳವಳಕಾರಿ ವಿಷಯ. ತೀವ್ರ ಸ್ವರೂಪದ್ದಾಗಿದ್ದರೂ ರೋಗಿಗಳು ಬದುಕುಳಿಯುವ ಸಾಧ್ಯತೆ ಹೆಚ್ಚಾಗಿದೆ ಹಾಗೂ ಯುವ ಜನಾಂಗದಲ್ಲಿ ಇದು ಅಧಿಕ ಪ್ರಮಾಣದಲ್ಲಿರುತ್ತದೆ.

Thyroid-Awareness-ಥೈರಾಯ್ಡ್ ಗ್ರಂಥಿಯು ನಮ್ಮ ಕತ್ತಿನ ಮುಂಭಾಗ ಸ್ವಲ್ಪ ಕೆಳಗೆ ಇರುತ್ತದೆ. ಇದು ಕಂದುಮಿಶ್ರಿತ ಕೆಂಪು ಬಣ್ಣದಿಂದ ಕೂಡಿರುತ್ತದೆ. ಲೋಬ್ಸ್ (ಹಾಲೆಗಳು) ಎಂದು ಕರೆಯಲ್ಪಡುವ ಎರಡು ಅರ್ಧ ಭಾಗಗಳನ್ನು ಸಂಪರ್ಕಿಸುವ ಕಂಠದೊಂದಿಗೆ ರಚಿತವಾಗಿದ್ದು ಚಿಟ್ಟೆ ಆಕಾರದಲ್ಲಿ ಇರುತ್ತದೆ. ಈ ಪುಟ್ಟ ಗ್ರಂಥಿಯು ಒಂದು ಔನ್ಸ್‍ಗಿಂತ ಕಡಿಮೆ ತೂಕ ಹೊಂದಿದ್ದು ಮಾನವನ ಶರೀರದಲ್ಲಿ ಅಗಾಧ ಕಾರ್ಯಗಳನ್ನು ನಿರ್ವಹಿಸುತ್ತದೆ. ಇದು ಥೈರಾಯ್ಡ್ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಈ ರಸದೂತವು ಚಯಾಪಚಯ ಮತ್ತು ಬೆಳವಣಿಗೆ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಈ ಹಾರ್ಮೋನುಗಳು ಆಹಾರ ಮತ್ತು ನೀರಿನಿಂದ ದೇಹದ ಮೂಲಕ ಹೀರಿಕೊಳ್ಳುವ ಅಯೋಡಿನ್ ಅಂಶದ ಮೇಲೆ ಅವಲಂಬಿತವಾಗಿರುತ್ತದೆ.

ಥೈರಾಯ್ಡ್ ಕ್ಯಾನ್ಸರ್ ಥೈರಾಯ್ಡ್ ಕೋಶಗಳಿಂದ (ಫೋಲಿಕ್ಯೂಲರ್ ಮತ್ತು ಪ್ಯಾರಾಫೋಲಿಕ್ಯೂಲರ್ ಕೋಶಗಳು) ಉದ್ಭವಿಸುವ ಮಾರಕ ಗಡ್ಡೆಯಾಗಿರುತ್ತದೆ. ಇದು ಎಲ್ಲ ವಯೋಮಾನದವರಲ್ಲೂ ಕಂಡುಬರುತ್ತದೆ. ಇದು ಪುರುಷರು ಮತ್ತು ಮಹಿಳೆಯರಲ್ಲಿ ವೇಗವಾಗಿ ಹೆಚ್ಚಾಗುತ್ತಿರುವ ಕ್ಯಾನ್ಸರ್ ಆಗಿದೆ. ಥೈರಾಯ್ಡ್ ಕ್ಯಾನ್ಸರ್ ತೀವ್ರ ಸ್ವರೂಪದ್ದಾಗಿದ್ದರೂ ರೋಗಿಗಳು ಬದುಕುಳಿಯುವ ಸಾಧ್ಯತೆ ಹೆಚ್ಚಾಗಿದೆ ಹಾಗೂ ಯುವ ಜನಾಂಗದಲ್ಲಿ ಇದು ಅಧಿಕ ಪ್ರಮಾಣದಲ್ಲಿರುತ್ತದೆ.

ಸಂಭವಾಂಶಗಳು:

1. ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವಿಕೆ

2. ವಿಶೇಷವಾಗಿ ಬಾಲ್ಯದಲ್ಲಿ ವಿಕಿರಣಕ್ಕೆ ಒಳಪಟ್ಟಿರುವಿಕೆ

3. ಐಯೋಡಿನ್ ಕೊರತೆ

4. ಸ್ಥೂಲಕಾಯ

5. ಕೌಟುಂಬಿಕ ಹಿನ್ನೆಲೆ

ವಿಧಗಳು:

ಥೈರಾಯ್ಡ್ ಕ್ಯಾನ್ಸರ್ - ಬಹುತೇಕ ಮಹಿಳೆಯರನ್ನು ಬಾಧಿಸುವ ರೋಗ1.ಪ್ಯಾಪಿಲರಿ : ಇದು ತೀರಾ ಸಾಮಾನ್ಯ ವಿಧವಾಗಿದ್ದು (ಶೇಕಡ 80 ರಿಂದ 90ರಷ್ಟು) ಮಧ್ಯ ವಯಸ್ಸಿನಲ್ಲಿ ಕಂಡುಬರುತ್ತದೆ. ರೋಗದ ಮುನ್ಸೂಚನೆಯೊಂದಿಗೆ ನಿಧಾನವಾಗಿ ಬೆಳವಣಿಗೆಯಾಗುತ್ತದೆ.

2. ಫೋಲಿಕ್ಯೂಲರ್

3. ಮೆಡ್ಯುಲರಿ : ಇದು ಶೇಕಡ 5 ರಿಂದ 10ರಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಇದಕ್ಕೆ ಕೌಟುಂಬಿಕ ಹಿನ್ನೆಲೆಯು ಕಾರಣವಾಗುತ್ತದೆ. ಮೆಡ್ಯುಲರಿ ಥೈರಾಯ್ಡ್ ಕ್ಯಾನ್ಸರ್ ಇತರ ತೀವ್ರ ಸ್ವರೂಪದೊಂದಿಗೆ ಕಂಡುಬರುತ್ತದೆ, ಉದಾ: ಫಿಯೋಕ್ರೋಮೊಸೈಟೊಮಾ (ಅಡ್ರಿನಲ್ ಗ್ರಂಥಿ) ಮತ್ತು ಪ್ಯಾರಾಥೈರಾಯ್ಡ್ ಗಡ್ಡೆಗಳು.

4. ಅನಾಪ್ಲಾಟಿಕ್ : ಇದು ಅಪರೂಪದ ವಿಧವಾಗಿದ್ದು, ಶೇಕಡ 1 ರಿಂದ 2ರಷ್ಟು ಪ್ರಕರಣಗಳಲ್ಲಿ ಕಂಡುಬರುತ್ತದೆ. ತುಂಬಾ ತೀವ್ರ ಮತ್ತು ಆಕ್ರಮಣಕಾರಿಯಾದ ಈ ವಿಧದ ಥೈರಾಯ್ಡ್ ಕ್ಯಾನ್ಸರ್, ರೋಗದ ಮುನ್ಸೂಚನೆಯನ್ನು ನೀಡದೇ ಕ್ಷಿಪ್ರವಾಗಿ ಬೆಳೆಯುತ್ತದೆ.

ರೋಗ ಲಕ್ಷಣಗಳು:

ಇತರ ಸಾಮಾನ್ಯ ಥೈರಾಯ್ಡ್ ರೋಗಗಳೊಂದಿಗೆ ಥೈರಾಯ್ಡ್ ಕ್ಯಾನ್ಸರ್ ಅಪರೂಪಕ್ಕೆ ರೋಗ ಲಕ್ಷಣಗಳು ಮತ್ತು ಚಿಹ್ನೆಗಳನ್ನು ತೋರ್ಪಡಿಸುತ್ತದೆ.ಪ್ಯಾಪಿಲರಿ ಮತ್ತು ಫೋಲಿಕ್ಯೂಲರ್ ಥೈರಾಯ್ಡ್ ಕ್ಯಾನ್ಸರ್‍ಗಳಿಗೆ ರೋಗ ಮುನ್ಸೂಚನೆಯು ಉತ್ತಮವಾಗಿರುತ್ತದೆ. ಆದರೆ ಅನಾಪ್ಲಾಸ್ಟಿಕ್ ವಿಧದಲ್ಲಿ ಯಾವುದೇ ರೋಗದ ಮುನ್ಸೂಚನೆ ಇರುವುದಿಲ್ಲ. ಇದು ಈ ಕೆಳಕಂಡವುಗಳಿಗೆ ಕಾರಣವಾಗುತ್ತದೆ.

1. ಕತ್ತಿನ/ಕುತ್ತಿಗೆ ಊತ

2. ಧನ್ವಿಯಲ್ಲಿ ಕರ್ಕಶತೆ, ಕೀರಲು ಧ್ವನಿ. ಆಹಾರ ಅಥವಾ ದ್ರವ ನುಂಗಲು ಕಷ್ಟವಾಗುವಿಕೆ ಮತ್ತು ಉಸಿರಾಟದಲ್ಲಿ ತೊಂದರೆ

3. ಆಹಾರ ಅಥವಾ ದ್ರವ ನುಂಗುವಾಗ ಗಂಟಲಿನಲ್ಲಿ ಯಾವುದೋ ವಸ್ತು ಇರುವ ಅನುಭವ

4. ಅಪರೂಪಕ್ಕೆ ಕತ್ತು ನೋವು

ರೋಗ ನಿರ್ಧಾರ:

ಕುತ್ತಿಗೆ ಭಾಗಕ್ಕೆ ಆಲ್ಟ್ರಾಸೊನೊಗ್ರಫಿ ಮತ್ತು ಊತಕ್ಕೆ ಎಫ್‍ಎನ್‍ಎಸಿ ಮೂಲಕ ಸಾಮಾನ್ಯವಾಗಿ ರೋಗವನ್ನು ನಿರ್ಧರಿಸಲಾಗುತ್ತದೆ.

ಚಿಕಿತ್ಸೆ:

ಶಸ್ತ್ರಕ್ರಿಯೆ : ಚಿಕಿತ್ಸೆಗೆ ಶಸ್ತ್ರಕ್ರಿಯೆ ಸೂಕ್ತವಾಗಿರುತ್ತದೆ. ಶಸ್ತ್ರಚಿಕಿತ್ಸೆ ನಂತರ ಅಥವಾ ದೂರಕ್ಕೆ ಹಬ್ಬುವುದನ್ನು ತಡೆಗಟ್ಟಲು ಥೈರಾಯ್ಡ್ ಕೋಶಗಳ ಉಳಿಕೆಯನ್ನು ನಾಶಗೊಳಿಸಲು ರೇಡಿಯೋ ಆಕ್ಟಿವ್ ಅಯೋಡಿನ್‍ನನ್ನು ಬಳಸಲಾಗುತ್ತದೆ.

Dr-Chalapathi ಡಾ. ಚಲಪತಿ ಪ್ರೊಫೆಸರ್ ಅಫ್ ಜನರಲ್ ಸರ್ಜರಿ ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066 080-28413384/82/83.    www.vims.ac.in

ಡಾ. ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066
080-28413384/82/83.   
www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!