ಸಿಡಿಲು ಬಡಿದು ಸತ್ತೀರಿ!! ಎಚ್ಚರ!

ಸಿಡಿಲು ಬಡಿದು ಸತ್ತವರ ಸಂಖ್ಯೆ ಅಪಾರ. ಸಿಡಿಲು ಬಡಿದ ಸುದ್ದಿ ಇತ್ತೀಚಿಗೆ ದೃಶ್ಯಮಾದ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಸಾಮಾನ್ಯವಾಗಿ ಸಿಡಿಲು ಬಡಿದಾಗ ವ್ಯಕ್ತಿ ಗಾಬರಿಯಾಗಿ, ಹೌಹಾರಿ ಆಘಾತಕ್ಕೆ ಒಳಗಾಗಿರುತ್ತಾನೆ. ಸತ್ತ ದನಕರುಗಳು, ಕುರಿಗಳು, ಮೇಕೆಗಳು ಲೆಕ್ಕಕ್ಕಿಲ್ಲದಷ್ಟು.

ಸಿಡಿಲು ಬಡಿದು ಸತ್ತೀರಿ!! ಎಚ್ಚರ! ಮುಂಗಾರಿನ ಮಳೆಯ ವೈಭವವನ್ನು ನೋಡಿ ಸಂತಸಪಡವರು ಯಾರು? ಮುಂಗಾರಿನ ಅಬ್ಬರ, ಆರ್ಭಟ ಹೆಚ್ಚು. ಮೋಡಗಳ ಮರೆಯಿಂದ ಮತ್ತೆ ಮತ್ತೆ ಇಣುಕಿ ಅಂತರಿಕ್ಷದಲ್ಲಿ ವೈಭವದಿಂದ ವಿದ್ಯುಲ್ಲತೆಯಂತೆ ಲಾಸ್ಯ ಮಾಡುವ ದೃಶ್ಯ ಆಗಸದ ವಿಸ್ಮಯದಲ್ಲೊಂದು. ಮೋಡ ಮೋಡಗಳ ನಡುವೆ, ಮೋಡ-ಗಾಳಿಯ ನಡುವೆ ಅಥವಾ ಭೂಮಿ ವಿದ್ಯುದಂಶಗಳ ವಿಭಜನೆಯೇ ಕಾರಣ ಎಂಬುದನ್ನು ಹೇಳಿದವನು ಅಮೇರಿಕೆಯ ವಿಜ್ಞಾನಿ ಬೆಂಜಮಿನ್ ಫ್ರಾಂಕಲಿನ್. ಎಲ್ಲ ವಸ್ತುಗಳಲ್ಲಿ ವಿದ್ಯುತ್ ಇರುವುದು. ಯಾವ ವಸ್ತುವಿನಲ್ಲಿ ಹೆಚ್ಚಿದೆಯೋ (ಧನ ವಿದ್ಯುತ್ ಪೂರಿತ) ಆದರಿಂದ ಕಡಿಮೆ ವಿದ್ಯುತ್ ಇರುವ(ಋಣ ವಿದ್ಯುತ್) ವಸ್ತುವಿನೆಡೆಗೆ ಹರಿಯುತ್ತದೆ ಎಂಬುದನ್ನು ಪ್ರಾಂಕಲಿನ್ ತಿಳಿಸಿದ.

ಮೂಢನಂಬಿಕೆಗಳು:

1. ಫ್ರಾಂಕಲಿನ್ ವೈಜ್ಞಾನಿಕ ವಿಶ್ಲೇಷಣೆ ನೀಡುವ ಮೊದಲು ಜನರು ಹಲವಾರು ಕಟ್ಟು ಕಥೆಗಳನ್ನು ನಂಬಿದ್ದರು. ಕೆಲವರು ಮಿಂಚು ಒಬ್ಬ ಮಹಾಶಕ್ತಿಯುತ ದೇವರ ವಿಶೇಷ ಆಯುಧವೆಂದು ನಂಬಿದ್ದರು. ಹಲವರು ಮಿಂಚನ್ನು, ರಾಕ್ಷಸರಿಂದ ಮಾನವನನ್ನು ಕಾಪಾಡುವ ಆತಿಶಕ್ತಿ ದೇವರಾದ ಥಾರನ್ ಆಯುಧವಾದ ಸುತ್ತಿಗೆಯಿಂದ ಬಂದದ್ದು ಎಂದು ನಂಬಿದ್ದರು. ಆಫ್ರಿಕಾದಲ್ಲಿ ಮಿಂಚು ಹೊಡೆದ ಜಾಗ ಅಥವಾ ಜನರಿಗೆ ಶಾಪವಿದೆ ಎನ್ನುತ್ತಿದ್ದರು. ಅಮೇರಿಕಾ ಹಾಗೂ ಯುರೋಪಗಳಲ್ಲಿ ಮಿಂಚನ್ನು ತಡೆಯಲು ಚರ್ಚಿನಲ್ಲಿ ಘಂಟೆಗಳನ್ನು ಹೊಡೆಯುತ್ತಿದ್ದರು. ಗ್ರೀಕರು ಹಾಗೂ ರೋಮನ್ರು ಮಿಂಚು ಝಾಯಿಸ್ ಅಥವಾ ಬುಧ ದೇವರ ಅಸಮಾನ್ಯ ಆಯುಧ ಎಂದು ಭಾವಿಸಿದ್ದರು

2. ಮಿಂಚು, ಗುಡಗು, ಸಿಡಿಲು ಒಟ್ಟಿಗೆ ಸಂಭವಿಸುತ್ತವೆ. ಆದರೆ ನಮಗೆ ಮಿಂಚು ಮೊದಲು ಕಾಣಿಸಿ ಸ್ವಲ್ಪ ಸಮಯದ ನಂತರ ಗುಡುಗು ಸಿಡಿಲು ಕೇಳಿಸುತ್ತವೆ. ಇದಕ್ಕೆ ಕಾರಣ ಬೆಳಕಿನ ವೇಗ ಶಬ್ದದ ವೇಗಕ್ಕಿಂತ ಹೆಚ್ಚು ಇರುವುದು. ಬೆಳಕಿನ ವೇಗ ಸೆಕೆಂಡಿಗೆ 3 ಲಕ್ಷ ಕಿ.ಮೀ ಆದರೆ, ಶಬ್ದದ ವೇಗ ಸೆಕೆಂಡಿಗೆ 330 ಮೀ. ಇರುತ್ತದೆ. ಆದ್ದರಿಂದ ಮಿಂಚು ಕಂಡ ನಂತರ ಗುಡುಗು, ಸಿಡಿಲು ಕೇಳಿಸುತ್ತವೆ. ಮಿಂಚಿನಿಂದ 30000 ಆ್ಯಂಪೀಯರಗಳಷ್ಟು ವಿದ್ಯುತ್ ವಿಸರ್ಜನೆಯಾದರೆ ಮಾತ್ರ ಗುಡುಗು ಕೇಳಿಸುತ್ತದ!

3. ಸಿಡಿಲು ಬಡಿಯುವುದು ಹೊಲ, ಗದ್ದೆಗಳಂತಹ ಬಯಲು ಪ್ರದೇಶಗಳಲ್ಲಿ ಕೆಲಸ ಮಾಡುವ ರೈತರು, ಕುರಿಕಾಯುವವರು, ದನಕಾರುವವರನ್ನು, ಮನೆಯಲ್ಲಿದ್ದಾಗ ತೆರೆದ ಬಾಗಿಲು ಕಿಟಕಿಗಳ ಮೂಲಕ ಪ್ರವೇಶಿಸುವುದು. ಅಲ್ಲಿ ಯಾರಾದರೂ ಇದ್ದರೆ ಅದರ ಮೇಲೆ ದಾಳಿ ಮಾಡುವುದು. ಎತ್ತರ ವಿದ್ಯುತನ್ನು ಸರಾಗವಾಗಿ ಸಾಗಿಸಬಲ್ಲ ವಸ್ತುಗಳು ಮೈ ಮೇಲಿರುವುದು ಅಪಾಯಕ್ಕೆ ಆಹ್ವಾನ ನೀಡುವುದು.

ಸಿಡಿಲು ಬಡಿತದ ಲಕ್ಷಣಗಳು:

1. ಸಿಡಿಲು ಬಡಿದಾಗ ವ್ಯಕ್ತಿ ಒಮ್ಮಿಂದೊಮ್ಮೆಲೆ ಬದಳಿ ಬಂದಂತಾಗಿ ಪ್ರಜ್ಞಾಹೀನವಾಗುವನು. ಹೃದಯ ಚಟುವಟಿಕೆ ಕೇಂದ್ರ, ಉಸಿರಾಟ ಕೇಂದ್ರಗಳು ಪಾಶ್ರ್ವ ಪೀಡಿತವಾಗುವುದರ ಪ್ರಯುಕ್ತ ವ್ಯಕ್ತಿ ತಕ್ಷಣ ಸಾವನ್ನಪ್ಪಬಹುದು. ಇಲ್ಲವೆ ಸಿಡಿಲು ಬಡಿದಾಗ ಉಂಟಾಗುವ ಸುಟ್ಟಗಾಯಗಳಿಂದಾಗಿ, ಅವುಗಳ ನಂತರದ ಪರಿಣಾಮಗಳಿಂದಾಗಿ ಸಿಡಿಲು ಬಡಿದ ಕೆಲವು ದಿನಗಳು ಅಥವಾ ವಾರಗಳಲ್ಲಿ ಅಸು ನಿಗಬಹುದು. ಅಪಾಯಕಾರಿ ಅಲ್ಲದ ಸಂದರ್ಭಗಳಲ್ಲಿ ಹಿಸ್ಟಿರಿಯಾ, ತಲೆನೋವು, ತಲೆಸುತ್ತು ಕಿವಿಯಲ್ಲಿ ಜಾಗಟೆ ಬಡೆದಂತಹ ಸದ್ದುಗಳ ಸುಳಿಯಲ್ಲಿ ಗಿರಕಿ ಹೊಡೆಯಬಹುದು ದಿನಗಳೆದಂತೆ ಈ ಲಕ್ಷಣಗಳು ಮಾಯವಾಗಿ ಅಶಕ್ತತೆ ಅಪ್ಪಿಕೊಳ್ಳಬಹುದು. ತೀವ್ರ ಸ್ವರೂಪದ ಸಿಡಿಲು ಬಡಿತದಲ್ಲಿ ಕೆಂಗಣ್ಣು, ಕಾರ್ನಿಯಾ ಹೊಳಪು ಕಳೆದುಕೊಂಡು ಮಸಕು ಮಸಕಾಗಬಹುದು. ಕ್ಯಾಟರ್ಯಾಕ್ಟ, ಕಾಣಿಸಬಹುದು. ದೃಷ್ಟಿಪಟಲದಲ್ಲಿ ರಕ್ತಸ್ರಾವವಾಗಬಹುದು ಅಥವಾ ದೃಷ್ಟಿಪಟಲ ಬೇರ್ಪಟ್ಟು ದೃಷ್ಟಿಮಾಂದ್ಯ ತಲೇದೋರಬಹುದು. ಕಿವುಡು ಕಂಗೆಡಿಸಬಹುದು. ಪಾಶ್ರ್ವವಾಯು ಪೀಡಿಸಬಹುದು. ನೆನಪುಗಳೆಲ್ಲ ಮಂಗಮಾಯವಾಗಬಹುದು!

ಸಿಡಿಲು ಬಡಿದು ಸತ್ತೀರಿ!! ಎಚ್ಚರ! 2. ಸಿಡಿಲು ಬಡಿದಾಗ ವೈವಿದ್ಯಮಯಗಳು ಕಾಣಿಸಿಕೊಳ್ಳುವವು. ಚರ್ಮದಡಿಯಲ್ಲಿ ರಕ್ತ ಸ್ರಾವ, ರಕ್ತ ಮಜ್ಜುಗಟ್ಟುವಿಕೆ, ತೆರೆಚಿದ ಗಾಯದಂತಹ, ಮೈಮೆಲಿನ ಕುದಲುಗಳು ಸುಡುವುದು ಸಾಮಾನ್ಯ. ಬೊಬ್ಬೆಗಾಯವಾಗುವುದರ ಜೊತೆಗೆ ಎಲಬುಗಳ ಮುರಿತ, ಆಳವಾದ ಸುಟ್ಟಗಾಯಗಳಂತಹ ತೀವ್ರ ಸ್ವರೂಪದ ಗಾಯಗಳಾಗುವುದು ಅಪರೂಪವೇನಲ್ಲ. ಸಿಡಿಲು ಬಡಿದ ಜಾಗೆಯಲ್ಲಿ ಸುಟ್ಟಗಾಯ ಇಲ್ಲವೇ ಛಿದ್ರಗೊಂಡ ಚರ್ಮ ಕಾಣುವುದು. ಈ ಗಾಯದ ಮೂಲಕವೇ ಅದು ದೇಹವನ್ನು ಪ್ರವೇಶಿಸುವುದು. ಇಂಥದೆ ಗಾಯವು ದೇಹದಿಂದ ಹೊರಗೆ ಹೋಗುವ ಭಾಗದಲ್ಲೂ ಕಾಣುವುದು. ಕಾಲಿಗೆ ಹಾಕಿದ ಬೂಟು ಅಥವಾ ಚಪ್ಪಲಿ ಸುಟ್ಟರುವುದು ಇಲ್ಲವೆ ಚಿಂದಿ ಚಿಂದಿಯಾಗುವುದು.

3. ಕೆಲವೊಂದು ಸಂಧರ್ಭಗಳಲ್ಲಿ ಸಿಡಿಲು ಬಡಿದ ವ್ಯಕ್ತಿ ಸಾವನ್ನಪ್ಪಿದರೂ ಧರಿಸಿದ ಬಟ್ಟೆಬರೆಗಳಿಗೆ ಎಳ್ಳಷ್ಟೂ ಹಾನಿಯಾಗದಿರಬಹುದು. ವ್ಯತಿರಿಕ್ತವಾಗಿ ಮೈಮೇಲಿನ ಬಟ್ಟೆಬರೆಗಳು ಸುಟ್ಟಕರಕಲಾದರೂ ವ್ಯಕ್ತಿಗೆ ಯಾವುದೇ ಗಾಯ ಆಗದಿರಬಹುದು!

4. ಧರಿಸಿದ ಕನ್ನಡಕದ ಗ್ಲಾಸುಗಳು, ಮೈಮೇಲೆ ಒಡವೆ ವಸ್ತ್ರಗಳೂ ಕರಗಿ ಬಿಡುವವು. ಕೀಲಿಕೈಯಂತಹ ಸ್ಟೀಲಿನ ವಸ್ತುಗಳು ಮೆಗ್ನೇಟುಗಳಾಗಿ ಮಾರ್ಪಾಡಾಗುವವು. ಚರ್ಮದ ಮೇಲೆ ಅವುಗಳ ಗುರುತುಗಳು ಗೋಚರಿಸುವವು.

ಸಿಡಿಲು ಬಡಿತ ಚಿಕಿತ್ಸೆ:

1. ತಕ್ಷಣ ಕೃತ್ರಿಮ ಉಸಿರಾಟ ಪ್ರಾರಂಭಿಸಬೇಕು ಮತ್ತು ಅದನ್ನು ನಾಲ್ಕೈದು ತಾಸುಗಳವರಗೆ ಮುಂದುವರೆಸಬೇಕು. ವ್ಹೆಂಟಿಲೇಟರ್ ಸೌಲಭ್ಯಗಳು ಸಿಗುವಲ್ಲಿಗೆ ಸ್ಥಳಾಂತರಿಸುವುದು ಸೂಕ್ತ. ಹೆಚ್ಚು ಒತ್ತಡದಲ್ಲಿರುವ ಆಮ್ಲಜನಕವನ್ನು ವ್ಯಕ್ತಿಗೆ ನೀಡಬೇಕು. ಉಸಿರಾಟ ಕ್ರಿಯೆ ಸಾಮಾನ್ಯ ಸ್ಥಿತಿಗೆ ತಲುಪಿದ ಮೇಲೆ ಹೃದಯದ ಚಟುವಟಿಕೆ ಪ್ರಚೋದಿಸುವುವಂತಹ ಔಷಧಿಗಳನ್ನು ನೀಡಬೇಕು.

2. ಸಾಮಾನ್ಯವಾಗಿ ಸಿಡಿಲು ಬಡಿದಾಗ ವ್ಯಕ್ತಿ ಗಾಬರಿಯಾಗಿ, ಹೌಹಾರಿ ಆಘಾತಕ್ಕೆ ಒಳಗಾಗಿರುತ್ತಾನೆ. ತುರ್ತು ಚಿಕಿತ್ಸೆ ನೀಡುವುದರ ಜೊತೆಗೆ ಸಲಾಯಿನ್‍ಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಿ, ನಾಡಿಬಡಿತ, ಉಸಿರಾಟ, ಬಿ.ಪಿ ಸಾಮಾನ್ಯ ಸ್ಥಿತಿಯಲ್ಲಿರುವ ಕ್ರಮ ತೆಗೆದುಕೊಳ್ಳಬೇಕು. ಎಲ್ಲಾ ವೈದ್ಯಕೀಯ ಸೌಲಭ್ಯಗಳು ಸಿಗುವ ಸ್ಥಳದಲ್ಲಿ ಸಿಡಿಲು ಬಡೆದರೆ, ವ್ಯಕ್ತಿಯ ಸುದೈವಿ ಎಂದೇ ಹೇಳಬೇಕು. ಏಕೆಂದರೆ ತುರ್ತು ಚಿಕಿತ್ಸೆಯಿಂದ ಬದುಕಿಸಬಹುದು, ಆದರೆ, ಸಾಮಾನ್ಯವಾಗಿ ಇಂಥ ಅವಘಡಗಳು ವೈದ್ಯಕೀಯ ಸೌಲಭ್ಯಗಳು ಸಿಗದ ಸ್ಥಳದಲ್ಲೇ ಆಗುವುದು ಹೆಚ್ಚು. ಆಗ ಅಪಘಾತದಿಂದ ಹೊರಬರದ ವ್ಯಕ್ತಿ ಹೌಹಾರಿ ಪ್ರಾಣಪಕ್ಷಿ ಹಾರಿಹೋಗಬಹುದು! ಈ ನಾಡಿನಲ್ಲಿ ಹಾವು ತುಳಿದು ಸತ್ತವರಿಗಿಂತ ಹಗ್ಗ ತುಳಿದು ಸತ್ತವರ ಸಂಖ್ಯೆಯೇ ಹೆಚ್ಚು!! ಇದು ಸತ್ಯ.

Also Read: ಸಿಡಿಲಾಘಾತದಿಂದತಪ್ಪಿಸಿಕೊಳ್ಳುವುದುಹೇಗೆ…?

dr Karaveeraprabhu-Kyalakonda. ಡಾ.ಕರವೀರಪ್ರಭು ಕ್ಯಾಲಕೊಂಡ ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು ಕ್ಯಾಲಕೊಂಡ ಆಸ್ಪತ್ರೆ , ಬಾದಾಮಿ. 587201 ಜಿಲ್ಲಾ: ಬಾಗಲಕೋಟೆ  Mob:9448036207

ಡಾ.ಕರವೀರಪ್ರಭು ಕ್ಯಾಲಕೊಂಡ
ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು

ಕ್ಯಾಲಕೊಂಡ ಆಸ್ಪತ್ರೆ , ಬಾದಾಮಿ. 587201
ಜಿಲ್ಲಾ: ಬಾಗಲಕೋಟೆ  Mob:9448036207

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!