ರಷ್ಯಾದ ಕೊರೋನಾ ಲಸಿಕೆ ಇನ್ನು ಭಾರತದಲ್ಲೂ ಲಭ್ಯ.!

ರಷ್ಯಾದ ಕೊರೋನಾ ಲಸಿಕೆ ಇನ್ನು ಭಾರತದಲ್ಲೂ ಲಭ್ಯ.! ಕೊರೋನಾಗೆ ಕಂಡು ಹಿಡಿದ ಪ್ರಥಮ ಲಸಿಕೆ ಎಂದೇ ಹೇಳಲ್ಪಡುತ್ತಿರುವ ರಷ್ಯಾದ ಸ್ಪುಟ್ನಿಕ್-ಲಸಿಕೆಯ ಡೋಸ್‍ಗಳನ್ನು ಕಳುಹಿಸಿಕೊಡಲು ಆ ದೇಶವು ಮುಂದಾಗಿದೆ.

Russia-covid-vaccineಸಧ್ಯಕ್ಕೆ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 50 ಲಕ್ಷದ ಗಡಿ ದಾಟಿ ವೇಗವಾಗಿ ಮುನ್ನುಗ್ಗುತ್ತಿದೆ. ಇದರ ಬೆನ್ನಲ್ಲೇ ಶುಭ ಸಮಾಚಾರವೊಂದು ರಷ್ಯಾ ಕಡೆಯಿಂದ ಭಾರತಕ್ಕೆ ಸಿಕ್ಕಿದೆ. ಕೊರೋನಾಗೆ ಕಂಡು ಹಿಡಿದ ಪ್ರಥಮ ಲಸಿಕೆ ಎಂದೇ ಹೇಳಲ್ಪಡುತ್ತಿರುವ ರಷ್ಯಾದ ಸ್ಪುಟ್ನಿಕ್-ಲಸಿಕೆಯ ಡೋಸ್‍ಗಳನ್ನು ಕಳುಹಿಸಿಕೊಡಲು ಆ ದೇಶವು ಮುಂದಾಗಿದೆ. ಈ ಸಂಬಂಧ Russian Direct Investment Fund (DIF) ಭಾರತದ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್‍ ಜೊತೆ ಒಪ್ಪಂದ ಮಾಡಿಕೊಂಡಿದೆ. ಆ ಪ್ರಕಾರವಾಗಿ ಸ್ಪುಟ್ನಿಕ್-5 ನ 10 ಕೋಟಿ ಡೋಸ್‍ಗಳು ಭಾರತಕ್ಕೆ ಸಿಗಲಿವೆ. ದೊಡ್ಡ ಪ್ರಮಾಣದಲ್ಲಿ ಮೂರನೇ ಹಂತದ ಮಾನವ ಪ್ರಯೋಗ ಮುಗಿಯುವ ಮೊದಲೇ ‘ಸ್ಪುಟ್ನಿಕ್-5’ ಲಸಿಕೆಗೆ ರಷ್ಯಾ ಸರ್ಕಾರ ಅನುಮೋದನೆ ನೀಡಿದೆ.

ಭಾರತದಲ್ಲಿ ಲಸಿಕೆಯ ಮೂರನೇ ಮತ್ತು ಕೊನೆಯ ಹಂತದ ಮಾನವ ಪ್ರಯೋಗವನ್ನು ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ನಡೆಸಲಿದೆ. ಆರ್.ಡಿ.ಐ.ಎಫ್ ಪ್ರಕಾರ 10 ಕೋಟಿ ಲಸಿಕೆಯ ಪೂರೈಕೆಯು ಈ ವರ್ಷದ ಕೊನೆಯಲ್ಲಿ ಆರಂಭವಾಗಬಹುದು. ಇದು ಮಾನವ ಪ್ರಯೋಗ ಮತ್ತು ನೋಂದಣಿ ಮೇಲೆ ಅವಲಂಬಿತವಾಗಿದ್ದು, ಎಷ್ಟುಬೇಗ ಮಾನವ ಪ್ರಯೋಗ ಮುಗಿದು ಭಾರತದ ಔಷಧ ನಿಯಂತ್ರಣ ಪ್ರಾಧಿಕಾರದಿಂದ ಅನುಮತಿ ಸಿಗುತ್ತೋ ಅಷ್ಟು ಬೇಗ ಲಸಿಕೆಯ ಪೂರೈಕೆ ಪ್ರಾರಂಭವಾಗಲಿದೆ. ಭಾರತಕ್ಕೆ 10 ಕೋಟಿ ಲಸಿಕೆ ಪೂರೈಕೆಯಾಗುವುದರ ಕುರಿತು ಮಾತನಾಡಿದ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್‍ನ ಸಹಾಧ್ಯಕ್ಷ ಜಿ.ವಿ. ಪ್ರಸಾದ್, ‘ಮೊದಲೆರಡು ಹಂತದ ಮಾನವ ಪ್ರಯೋಗದಲ್ಲಿ ರಷ್ಯಾ ಲಸಿಕೆ ಭರವಸೆ ಮೂಡಿಸಿದೆ. ಈ ಲಸಿಕೆಯು ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ  ಸಹಕಾರಿಯಾಗಲಿದೆ’ ಅಂತ ಹೇಳಿದ್ದಾರೆ.

ಇನ್ನೊಂದು ವಿಚಾರವೇನೆಂದರೆ ನಮ್ಮದೇಶದಲ್ಲಿ ರಷ್ಯಾ ಲಸಿಕೆಗೆ ಎಷ್ಟು ಬೆಲೆ ನಿಗದಿಪಡಿಸಲಾಗುತ್ತೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇದನ್ನು ಲಾಭದ ಉದ್ದೇಶಕ್ಕೆ ನೀಡುತ್ತಿಲ್ಲ, ಲಸಿಕೆ ತಯಾರಿಸಲು ಖರ್ಚಾಗಿರುವ ಹಣ ಸಿಕ್ಕರೆ ಸಾಕು ಎಂದು Russian Direct Investment Fund (DIF) ಹೇಳಿಕೊಂಡಿದೆ. ಬ್ರೆಜಿಲ್, ಮೆಕ್ಸಿಕೊ, ಖಜಕಿಸ್ತಾನ್ ಮತ್ತು ಸೌದಿ ಅರೇಬಿಯಾ ಮುಂತಾದ ದೇಶಗಳೊಂದಿಗೆ ಆರ್.ಡಿ.ಐ.ಎಫ್. ಈಗಾಗಲೇ ಲಸಿಕೆ ಪೂರೈಕೆಯ ಒಪ್ಪಂದ ಮಾಡಿಕೊಂಡಿದೆ. ಇದೀಗ ಭಾರತದ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್‍ ಜೊತೆಗೂ ಒಪ್ಪಂದ ಮಾಡಿಕೊಂಡಿದೆ.

ಆಕ್ಸ್‌ಫರ್ಡ್ ಲಸಿಕೆ ಮಾನವ ಪ್ರಯೋಗಕ್ಕೂ ಗ್ರೀನ್ ಸಿಗ್ನಲ್

ರಷ್ಯಾದ ಕೊರೋನಾ ಲಸಿಕೆ ಇನ್ನು ಭಾರತದಲ್ಲೂ ಲಭ್ಯ.!ಈ ಮೊದಲು ಸಾಕಷ್ಟು ಭರವಸೆ ಮೂಡಿಸಿದ್ದ ಆಕ್ಸ್‌ಫರ್ಡ್ ಲಸಿಕೆಯ ಕೊನೆಯ ಹಂತದ ಮಾನವ ಪ್ರಯೋಗವನ್ನು ಭಾರತದಲ್ಲಿ ಮುಂದುವರೆಸಲು ಸೀರಂ ಇನ್ಸ್ಟಿಟ್ಯೂಟ್‍ಆಫ್‍ ಇಂಡಿಯಾಗೆ ಭಾರತೀಯಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಹಸಿರು ನಿಶಾನೆ ತೋರಿಸಿದೆ. ಅಂದ್ಹಾಗೆ ಆಕ್ಸ್‌ಫರ್ಡ್ ಮತ್ತು ಆಸ್ಟ್ರಾ ಝನಕಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಲಸಿಕೆಯ ಮಾನವ ಪ್ರಯೋಗ ಮತ್ತು ಉತ್ಪಾದನೆಯನ್ನು ಭಾರತದಲ್ಲಿ ಸೀರಮ್ ಇನ್ಸ್ಟಿಟ್ಯೂಟ್‍ ಆಫ್‍ ಇಂಡಿಯಾ ನೋಡಿಕೊಳ್ಳುತ್ತದೆ. ಪೂನಾ ಮೂಲದ ಈ ಕಂಪನಿ ಜಗತ್ತಿನ ಅತಿದೊಡ್ಡ ಲಸಿಕೆ ಉತ್ಪಾದನಾ ಸಂಸ್ಥೆಯಾಗಿದೆ.

ಬ್ರಿಟನ್‍ನಲ್ಲಿ ಈ ಲಸಿಕೆ ಮಾನವ ಪ್ರಯೋಗದ ವೇಳೆ ಸ್ವಯಂ ಸೇವಕರಲ್ಲಿ ಗಂಭೀರ ಸ್ವರೂಪದ ಅಡ್ಡ ಪರಿಣಾಮ ಕಾಣಿಸಿಕೊಂಡಿತ್ತು. ಹಾಗಾಗಿ ಅದರ ಮಾನವ ಪ್ರಯೋಗವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಆದರೆ ಅಮೇರಿಕದಲ್ಲಿ ಸ್ಥಗಿತಗೊಂಡ ಮಾನವ ಪ್ರಯೋಗ ಇನ್ನೂ ಆರಂಭಗೊಂಡಿಲ್ಲ. ಬ್ರಿಟನ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸಹಾ ಇದೀಗ ಮಾನವ ಪ್ರಯೋಗಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!