2 DG ಔಷಧಿ : ಕೋವಿಡ್ 19 ರೋಗಕ್ಕೆ ಸಂಜೀವಿನಿ

2-DG ಔಷಧಿ ಕೋವಿಡ್-19 ರೋಗಕ್ಕೆ ಸಂಜೀವಿನಿಯಾಗಿ ಬರಲಿದೆ. ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾದ ಕೋವಿಡ್ ರೋಗಿಗಳಿಗೆ ಈ 2-DG ಔಷಧಿ ಬೇಗನೆ ಗುಣಮುಖವಾಗುವಂತೆ ಮಾಡಿ, ಆಕ್ಸಿಜನ್‍ನ ಅವಶ್ಯಕತೆ ಇಲ್ಲದಂತೆ ಮಾಡುವ ಸಾಮಥ್ರ್ಯ ಹೊಂದಿದೆ ಎಂದು ತಿಳಿದುಬಂದಿದೆ. ದೇಹದಲ್ಲಿ ವೈರಾಣುಗಳ…ಬಲ ಕುಂದಿ ಇತರ ಭಾಗಗಳಿಗೆ ಹರಡದಂತೆ ರಕ್ಷಾ ಕವಚ ನಿರ್ಮಿಸಿ ಈ ಔಷಧಿ, ಕೋವಿಡ್ ನಿಯಂತ್ರಣ ಮಾಡುತ್ತದೆ ಎಂದು ಆಶಿಸಲಾಗಿದೆ.

ಕೋವಿಡ್-19 ಸೋಕಿನ ಪ್ರಮಾನ ದಿನೇ ದಿನೇ ಹೆಚ್ಚುತ್ತಲೇ ಇದೆ. ಎರಡನೇ ಅಲೆ ಭಾರತದಾದ್ಯಂತ ತನ್ನ ಆರ್ಭಟವನ್ನು ಮುಂದುವರೆಸಿದೆ. ವಿಜ್ಞಾನಿಗಳು, ವೈದ್ಯರು ಈ ರೋಗದ ವಿರುದ್ಧ ಸಮರವನ್ನು ಸಾರಿದ್ದಾರೆ ಮತ್ತು ಹೊಸ ಹೊಸ ಔಷಧಿಗಳನ್ನು ಕಂಡುಹಿಡಿಯಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಡಾ|| ರೆಡ್ಡೀಸ್ ಲ್ಯಾಬ್ ನವರು ಜಂಟಿಯಾಗಿ ಹೈದರಾಬಾದ್‍ನಲ್ಲಿ ಹೊಸದೊಂದು 2-ಡಿ ಆಕ್ಸಿ ಡಿ-ಗ್ಲುಕೋಸ್ (2-DG) ಎಂಬ ಔಷಧಿಯನ್ನು ಕಂಡುಹಿಡಿದು ರೋಗಿಗಳ ಮೇಲೆ ಪ್ರಯೋಗಿಸಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಈಗಾಗಲೇ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‍ಗೆ…ರಾಷ್ರೀಯ ಔಷಧಿಗಳ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ ಅನುಮೋದತೆ ನೀಡಿದ್ದು ರಾಷ್ರೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ ಈ ಸಂಶೋಧನೆಗೆ ಗ್ರೀನ್ ಸಿಗ್ನಲ್ ನೀಡಿರುತ್ತಾರೆ. ದೇಹದಲ್ಲಿ ವೈರಾಣುಗಳ…ಬಲ ಕುಂದಿ ಇತರ ಭಾಗಗಳಿಗೆ ಹರಡದಂತೆ ರಕ್ಷಾ ಕವಚ ನಿರ್ಮಿಸಿ ಈ ಔಷಧಿ, ಕೋವಿಡ್ ನಿಯಂತ್ರಣ ಮಾಡುತ್ತದೆ ಎಂದು ಆಶಿಸಲಾಗಿದೆ. ಈ ಔಷಧಿ ಬಳಸಿದ ಮೂರು ದಿನಗಳಲ್ಲಿ ರೋಗಿಗಳು ಚೇತರಿಸಿಕೊಳ್ಳುತ್ತಾರೆ ಮತ್ತು ಧನಾತ್ಮಕ ಫಲಿತಾಂಶ ಬಂದಿರುವುದು ವೈದ್ಯರಿಗೆ ಹೊಸ ಆಶಾವಾದವೊಂದನ್ನು ಮೂಡಿಸಿದೆ.

ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾದ ಕೋವಿಡ್ ರೋಗಿಗಳಿಗೆ ಈ 2-DG ಔಷಧಿ ಬೇಗನೆ ಗುಣಮುಖವಾಗುವಂತೆ ಮಾಡಿ, ಆಕ್ಸಿಜನ್‍ನ ಅವಶ್ಯಕತೆ ಇಲ್ಲದಂತೆ ಮಾಡುವ ಸಾಮಥ್ರ್ಯ ಹೊಂದಿದೆ ಎಂದು ತಿಳಿದುಬಂದಿದೆ. ಎರಡನೇ ಹಂತದ ಟ್ರಯಲ್‍ಗಳನ್ನು ಮೊದಲಿಗೆ 6 ಆಸ್ಪತ್ರೆಗಳು ಮತ್ತು ಆ ಬಳಿಕ 11 ಆಸ್ಪತ್ರೆಗಳಲ್ಲಿ 110 ರೋಗಿಗಳ ಮೇಲೆ ಪ್ರಯೋಗಿಸಲಾಯಿತು. ಏಪ್ರಿಲ್ 2020 ಮತ್ತು ಮೇ 2020 ಮತ್ತು ಅಕ್ಟೋಬರ್ 2020 ರಲ್ಲಿ ಈ ಪ್ರಾಯೋಗಿಕ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಗೆ ಉತ್ತಮ ಫಲಿತಾಂಶ ಪಡೆದ ಬಳಿಕೆ ನವೆಂಬರ್ 2020 ರಲ್ಲಿ ಮೂರನೇ ಹಂತದ ಟ್ರಯಲ್‍ನಲ್ಲಿ ಅನುಮತಿ ನೀಡಲಾಗಿತ್ತು. 220 ರೋಗಿಗಳ ಮೇಲೆ ಮೂರನೇ ಹಂತದ ಟ್ರಯಲ್ ಡಿಸೆಂಬರ್ 2020 ರಿಂದ ಮಾರ್ಚ್ 2021 ರ ಒಳಗೆ ಮಾಡಲಾಗಿತ್ತು. ಇದರ ವರದಿ ಪ್ರಕಾರ ಸುಮಾರು ಬಹಳ ಧನಾತ್ಮಕ ವರದಿ ಬಂದ ಕಾರಣ ಮೇ 1 2021 ರಿಂದ ಈ 2-DG ಔಷಧಿ ಬಳಸಲು ರಾಷ್ಟ್ರೀಯ ಔಷದಿ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿದೆ.

2DG

ಹೇಗೆ ದೊರಕುತ್ತದೆ?

ಬಹಳ ಸುಲಭವಾಗಿ ತಯಾರು ಮಾಡಲಾಗುವ ಈ ಔಷಧಿ ಪೌಡರ್ ರೂಪದಲ್ಲಿ ಸ್ಯಾಚೆಟ್‍ಗಳಲ್ಲಿ ದೊರಕುತ್ತದೆ. ಇದನ್ನು ನೀರಿನಲ್ಲಿ ಬೆರೆಸಿ ಕುಡಿಸಲಾಗುತ್ತದೆ. ಕೋವಿಡ್ ಸೋಂಕು ರೋಗಿಗಳು ಬಹಳ ಬೇಗನೆ ಗುಣಮುಖರಾಗಿ ಶೀಘ್ರವಾಗಿ ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆಗಲು ನೆರವಾಗುತ್ತದೆ. ಇದನ್ನು ಬಳಸುವುದರಿಂದ ರೋಗಿಗಳಿಗೆ ಆಮ್ಲಜನಕದ ಅವಶ್ಯಕತೆ ಬಹಳ ಕಡಿಮೆಯಾಗುತ್ತದೆ.

ಹೇಗೆ ಕಾರ್ಯ ನಿರ್ವಹಿಸುತ್ತದೆ?

ವೈರಾಣು ಸೋಂಕಿತ ಜೀವಕೋಶಗಳಿಗೆ ಈ 2-DG  ಔಷಧಿ ನೇರವಾಗಿ ಸೇರಿಕೊಳ್ಳುತ್ತದೆ ಮತ್ತು ಅದರೊಳಗೆ ವೈರಾಣುವಿಗೆ ಸಂತಾನೋತ್ಪತ್ತಿ ಮಾಡಲು ತಡೆ ಒಡ್ಡುತ್ತದೆ ಮತ್ತು ಶಕ್ತಿ ಉತ್ಪಾದನೆಗೆ ಅಡ್ಡಿ ಪಡಿಸುತ್ತದೆ. ಆ ಮೂಲಕ ವೈರಾಣುಗಳ ಸಂಖ್ಯೆ ವೃದ್ದಿಸದಂತೆ ತಡೆ ಒಡ್ಡುತ್ತದೆ.

ಲಾಭಗಳೇನು?

1) ಈ ಔಷಧಿ ಬಳಕೆಯಿಂದ ಕೋವಿಡ್-19 ಸೋಂಕಿತರ ಜೀವ ಹಾನಿಯಾಗುವುದು ಕುಗ್ಗಲಿದೆ.
2) ಈ 2-ಆಉ ಔಷಧಿ ಬಳಕೆಯಿಂದ ಆಮ್ಲಜನಕದ ಅವಶ್ಯಕತೆ ಕುಂಠಿತವಾಗಲಿದೆ ಮತ್ತು ಎಲ್ಲಾ ರೋಗಿಗಳಿಗೆ ಬೆಡ್ ಸುಲಭ ದೊರಕುವ ಸಾಧ್ಯತೆ ಮುಕ್ತವಾಗಿರುತ್ತದೆ.
3) ಈ 2-ಆಉ ಔಷಧಿ ನೀಡಿದ ಮೂರೇ ದಿನಗಳಲ್ಲಿ ರೋಗಿಗಳು ಚೇತರಿಸಿಕೊಳ್ಳುತ್ತಾರೆ ಮತ್ತು ಬೆಡ್‍ನ ಅವಶ್ಯಕತೆ ಇರುವ ಇತರೇ ರೋಗಿಗಳಿಗೆ ಇದರಿಂದ ಹೆಚ್ಚಿನ ಅನುಕೂಲ ಆಗಲಿದೆ.
4) ಆಮ್ಲಜನಕದ ಅವಶ್ಯಕತೆ ಕಡಿಮೆಯಾಗಿ, ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ದೊರಕುವ ಸಾಧ್ಯತೆ ಮುಕ್ತವಾಗಲಿದೆ.
5) ರೋಗಿಗಳು ಹೆಚ್ಚು ದಿನ ಆಸ್ಪತ್ರೆಯಲ್ಲಿ ಇರಬೇಕಾದ ಅವಶ್ಯಕತೆ ಇಲ್ಲ.
6) ಬಹಳ ಸುಲಭವಾಗಿ ಲಭ್ಯವಾಗುವ ಅತೀ ಕಡಿಮೆ ಖರ್ಚಿನ ಔಷಧಿ ಇದಾಗಿದ್ದು, ಎಲ್ಲರಿಗೂ ಲಭ್ಯವಾಗುವ ಸಾಧ್ಯತೆ ಇರುತ್ತದೆ.
7) ಇದನ್ನು ತಯಾರಿಸುವುದು ಅತೀ ಸುಲಭ ಮತ್ತು ಎಲ್ಲಾ ಕಡೆ ದೊರಕುವಂತೆ ಮಾಡುವುದು ಕಷ್ಟವಲ್ಲ

ಕೊನೆ ಮಾತು:

ಎರಡನೇ ಅಲೆ ದೇಶದೆಲ್ಲೆಡೆ ಹಬ್ಬಿ ಲಕ್ಷಾಂತರ ಮಂದಿ ಕೋವಿಡ್-29 ರೋಗದಿಂದ ಬಳಲಿ, ದೇಶದೆಲ್ಲೆಡೆ ಆಸ್ಪತ್ರೆ ಸೌಲಭ್ಯ, ಬೆಡ್ ಸೌಲಭ್ಯ ಮತ್ತು ಆಕ್ಸಿಜನ್ ಕೊರತೆ ಉಂಟಾಗಿದೆ. ಇಂತಹ ಕಠಿಣ ಪರಿಸ್ಥಿತಿಯನ್ನು ಈ 2-DG ಎಂಬ ಬ್ರಹ್ಮಾಸ್ರ್ರ ವೈದ್ಯರ ಬತ್ತಳಿಕೆಗೆ ಸೇರಿರುವುದು ಹೊಸ ಆಶಾವಾದವೊಂದನ್ನು ಮೂಡಿಸಿದೆ. ದೆಹಲಿ, ಉತ್ತರ ಪ್ರದೇಶ, ವೆಸ್ಟ್ ಬೆಂಗಾಲ್, ಗುಜರಾತ್, ರಾಜಸ್ಥಾನ್, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡಿನ 19 ಆಸ್ಪತ್ರೆಗಳಲ್ಲಿ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆದಿದ್ದು, 220 ರೋಗಿಗಳಲ್ಲಿ ಒಳ್ಳೆಯ ಫಲಿತಾಂಶ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಶೋಧನೆ ನಡೆದು 2-DG  ಔಷಧಿ ಕೋವಿಡ್-19 ರೋಗಾಣುವನ್ನು ಸದೆಬಡೆಯಲಿ ಮತ್ತು ಮನುಕುಲಕ್ಕೆ ಎಸಗಿದ ಮಹಾಮಾರಿ ತೊಲಗಲಿ ಎಂದು ಹಾರೈಸೋಣ.

ಡಾ|| ಮುರಲೀ ಮೋಹನ್ ಚೂಂತಾರು
9845135787
ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!