ಪಿಂಪಲ್ಸ್ ಹಾಗೂ ಅದರ ನಿವಾರೋಣೋಪಾಯಗಳು

ಪಿಂಪಲ್ಸ್ ಚರ್ಮದ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಮೊಡವೆಯ ಚಿಕಿತ್ಸೆಗೆ ಅಯುರ್ವೇದದಲ್ಲಿ ಹಲವಾರು ನಿವಾರಣೋಪಾಯಗಳನ್ನು ತಿಳಿಸಿದ್ದಾರೆ.

pimples ಪಿಂಪಲ್ಸ್ ಹಾಗೂ ಅದರ ನಿವಾರೋಣೋಪಾಯಗಳುಮುಖದೂಷಿಕ; ಪಿಂಪಲ್ಸ್ ನ ಸಂಸ್ಕೃತದ ಹೆಸರು. ಮುಖದ ಸೌಂದರ್ಯವನ್ನು ಹಾಳು ಮಾಡುವ ಒಂದು ಶತ್ರುವಿನ ಹೆಸರೆ ಮುಖದೂಷಿಕ . ಇವು ಯೌವನಾವಸ್ಥೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ಇದನ್ನು ಯೌವನ ಪಿಡಕವೆಂದು ಕರೆಯುತ್ತಾರೆ.

ಕಾರಣಗಳು
ಕಾರಣಗಳನ್ನು ಕಾಲ ಸಂಬಂಧಿ, ಆಹಾರ ಸಂಬಂಧಿ, ವಿಹಾರ ಸಂಬಂಧಿ ಹಾಗೂ ಮನ ಸಂಬಂಧಿ ಕಾರಣಗಳಾಗಿ ವಿಂಗಡಿಸಿಕೊಳ್ಳಬಹುದಾಗಿದೆ.

ಕಾಲ ಸಂಬಂಧಿ- ಅಂದರೆಕಾಲಕ್ಕೆ ಅನುಗುಣವಾಗಿ ಕಾಣಿಸಿಕೊಳ್ಳುವ ಶತ್ರು ಎಂದರ್ಥ; ನೆನಪಿರಲಿ ಇಲ್ಲಿ ಕಾಲ ಎಂಬುದು ವಯಸ್ಸಿಗೆ ಸಂಬಂಧಿಸಿದ್ದಾಗಿರಬಹುದು ಇಲ್ಲವೆ ಖುತುವಿಗೆ ಸಂಬಂಧಿಸಿದ್ದಾಗಿರಬಹುದು. ಮೊದಲೆ ಹೇಳಿದ ಹಾಗೆ ಯೌವನದಲ್ಲಿ ; ವಸಂತ (March- April)-ಶರದ್ (September-October)-ಗ್ರಿಷ್ಮ (May-June)  ಋತುವಿನಲ್ಲಿ ಈ ಶತ್ರುವಿನ ಬಾಧೆ ಹೆಚ್ಚಳವಾಗುತ್ತದೆ.

• ಆಹಾರ ಸಂಬಂಧಿ -ಅತಿಯಾದ ಕಟು (Pungent),  ತಿಕ್ತ (Bitter), ಅಮ್ಲ (Sour), ಲವಣ (Salty)  ರಸ ಬಳಕೆ ಮಾಡುವುದು ಹಾಗೂ ಜಿಡ್ಡಿನ ಪಾದಾರ್ಥ ಸೇವನೆ ಪಿಂಪಲ್ಸ್ ಗೆ ಕಾರಣವಾಗಬಹುದು.

ವಿಹಾರ ಸಂಬಂಧಿ- ದಿನದಲ್ಲಿ ನಿದ್ರಿಸುವುದು, ಅತಿಯಾಗಿ ಬಿಸಿಲಿಗೆ ಹೋಗುವುದು, ರಾತ್ರಿ ಜಾಗರಣೆಯು ಈ ಮುಖ ದೂಷಿಕನ ಮಿತ್ರರಾಗಬಲ್ಲರು.

• ಮನ ಸಂಬಂಧಿ – ಅತಿಯಾದ ಚಿಂತೆ, ಕೋಪ-ತಾಪ, ಭಯ, ಉದ್ವೇಗಗಳು ಪಿಂಪಲ್ಸ್ ನ  ಸಮಸ್ಯೆಯನ್ನು ಹೆಚ್ಚಿಸುತ್ತದೆ.

ಹೇಗೆ ಹಾಗು ಲಕ್ಷಣಗಳು 

pimples-face ಪಿಂಪಲ್ಸ್ ಹಾಗೂ ಅದರ ನಿವಾರೋಣೋಪಾಯಗಳುಮೇಲೆ ತಿಳಿಸಿರುವ ಕಾರಣಗಳಿಂದ ನಮ್ಮ ದೇಹದಲ್ಲಿ ವಾತಾದಿ ದೋಷಗಳು ರಕ್ತದ ಜೊತೆ ಸೇರಿ ಸ್ವಲ್ಪಮಟ್ಟಿನ ನೋವು, ಕೆಲವೊಂದು ಸಲ ಕೀವು( Pus ) /  ಬಿಳಿ ದ್ರವ ( White heads ) ತುಂಬಿರುವ, ಚಿಕ್ಕ ಅಥವ ದೊಡ್ದ ಪಿಡಕ (ಗುಳ್ಳೆ) ಗಳನ್ನು ಉತ್ಪತ್ತಿ ಮಾಡುತ್ತವೆ. ಹೆಚ್ಚಾಗಿ ಕೆನ್ನೆ, ಗಲ್ಲ, ಮೂಗು, ಹಣೆಯ ಮೇಲೆ ಈ ಪಿಡಕಗಳನ್ನು ಕಾಣಬಹುದಾಗಿದೆ.

ನಿವಾರಣೋಪಾಯಗಳು-

ಮೊಡವೆಯ ಚಿಕಿತ್ಸೆಗೆ ಅಯುರ್ವೇದದಲ್ಲಿ ಹಲವಾರು ನಿವಾರಣೋಪಾಯಗಳನ್ನು ತಿಳಿಸಿದ್ದಾರೆ.
ಶೋಧನ – ದೋಷ-ಕಾಲ-ವ್ಯಕ್ತಿ-ಋತುವಿನ ಅನುಸಾರವಾಗಿ; ವಮನ, ವಿರೇಚನ, ನಸ್ಯ ಅಥವ ರಕ್ತ ಮೋಕ್ಷಣ ಶೋಧನ ಚಿಕಿತ್ಸೆಯನ್ನು ಪಡೆಯಬಹುದು.

• ಶಮನ ಚಿಕಿತ್ಸೆ – ರಕ್ತ ಶೋದಕವಾದ, ತಿಕ್ತ(Bitter)ರಸವುಳ್ಳ ಔಷದ ಸೇವನೆ ಲಾಭದಾಯಕ. ಹಲವು ಮುಖ ಲೇಪಕಗಳು ಮೋಡವೆ ನಿವಾರಿಸುವಲ್ಲಿ ಉತ್ತಮ .

ಮನೆಮದ್ದು-
1.ಮೊಡವೆ ಹಾಗೂ ಮುಖದ ಕಲೆ ನಿವಾರಣೆಗೆ – ಆಮಲಕ್ಕಿ(Emblicaofficinalis) ಕಷಾಯದಿಂದ ಮುಖ ತೊಳೆಯುವುದು.

2. ರಾತ್ರಿ ಕೊತ್ತಂಬರಿ ಕಾಳನ್ನು ನೆನೆಸಿರುವ ನೀರಿನಿಂದ, ಆಗಾಗ (ದಿನಕ್ಕೆ ೨-೩ ಬಾರಿ) ಮುಖ ತೊಳೆಯುವುದು.

3. ಅರಿಷಿಣ-ಚಂದನ ಮಿಶ್ರಿತ ಲೇಪ ಬಳಕೆ

4. ನಿಯಮಿತವಾಗಿ ಲೋದ್ರ (Symplocosracemosa) ಚೂರ್ಣದ ಲೇಪ ಬಳಕೆ

pimples-yastimadhu ಪಿಂಪಲ್ಸ್ ಹಾಗೂ ಅದರ ನಿವಾರೋಣೋಪಾಯಗಳು 5. ಯಷ್ಟಿಮಧು ( Glycyrrhizaglabra) ಚೂರ್ಣದ ಲೇಪ ಪಿಂಪಲ್ಸ್ ನಿವಾರಣಿಗೆ ಲಾಭದಾಯಕ

ಅನಿವಾರ್ಯ ಎಂಬಲ್ಲಿ ವೈದ್ಯರ ಭೇಟಿ ಸೂಕ್ತ. ಕೊನೆಯದಾಗಿ ; “ನಿಮ್ಮ ಸಮ್ಮತಿ ಇಲ್ಲದೆ ಯಾರು ನಿಮ್ಮನು ಹೀನರಾಗಿ ಕಾಣಲಾಗದು”; ಆ ಚಂದ್ರನಲ್ಲೂ  ತಗ್ಗುಗಳುಂಟು. ಆದರು ಆತನನ್ನು ಸೌಂದರ್ಯಾದ ಉಪಮವಾಗಿ ಕಾಣುವಾಗ, ಮೊಡವೆಯನ್ನು ಡವೆಯಾಗಿಸಿಕೊಂಡು ಆಂತರಿಕ ಸೌಂದರ್ಯವನ್ನೆಕೆ ಹೆಚ್ಚಿಸಿಕೊಳ್ಳಬಾರದು???????

pimples-dr-ashwini

ಡಾ || ಅಶ್ವಿನಿ . ಎನ್
ಆದಿಚುಂಚನಗಿರಿ ಆಯುರ್ವೇದ ವೈದ್ಯಕೀಯ ಕಾಲೇಜು
ನಾಗರೂರು, ನೆಲಮಂಗಲ,, ಬೆಂಗಳೂರು ಉತ್ತರ- 562123
Ph: 7026362663

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!