ತಂಭಾಕು ಒಂದು ಮಾದಕ ಆಗದಿರಲಿ ನಿಮಗಿದು ಮಾರಕ – ಮೇ 31 ವಿಶ್ವ ತಂಭಾಕು ನಿಷೇಧ ದಿನ

ತಂಭಾಕು ಒಂದು ಮಾದಕ. ಮೇ 31 ವಿಶ್ವ ತಂಭಾಕು ನಿಷೇಧ ದಿನ. ತಂಭಾಕು ಮತ್ತು ಅದರ ಉತ್ಪನ್ನಗಳು, ಬಳಕೆಯಿಂದಾಗಿ ಉಂಟಾಗುವ ರೋಗಗಳು,  “ನಿಕೋಟಿನ್” ಬಳಕೆಯ ಅಡ್ಡ ಪರಿಣಾಮಗಳು, ತಂಭಾಕು ಉಪಯೋಗದ ತಪ್ಪು ಕಲ್ಪನೆ, ತಂಭಾಕು ಉಪಯೋಗ ತಡೆಯುವದು ಹೇಗೆ, ತಂಭಾಕು ಮುಕ್ತಿಗಾಗಿ ಯಾವ ಜವಾಬ್ದಾರಿಗಳು,  ಸಾಮಾನ್ಯ ಜನತೆಯಲ್ಲಿ ಹೊಗೆಸೊಪ್ಪು/ ತಂಭಾಕುವಿನ ದುಷ್ಪರಿಣಾಮಗಳು ಮತ್ತು ಇದರಿಂದ ಉದ್ಭವಿಸಬಹುದಾದ ರೋಗಗಳ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವದಕ್ಕಾಗಿ ಈ ಲೇಖನ ಬರೆಯಲಾಗಿದೆ.

ತಂಭಾಕು ಒಂದು ಮಾದಕ ಆಗದಿರಲಿ ನಿಮಗಿದು ಮಾರಕ - ಮೇ 31 ವಿಶ್ವ ತಂಭಾಕು ನಿಷೇಧ ದಿನ

ದಿನಾಚರಣೆ ಎಕೆ ಇದರ ಅವಶ್ಯಕತೆ ಎನು..?

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಅನೇಕ ರೋಗಗಳ ಮತ್ತು ಕೆಲವುದಿನಗಳ ಆಚರಣೆಗಳನ್ನು ಮಾಡಲಾಗುವದು. ಇದರ ಉದ್ದೇಶ ಇಷ್ಟೆ ಸಾಮಾನ್ಯ ಜನತೆಯಲ್ಲಿ ಆ ರೋಗದ ತಿವೃತೆಯ ಬಗ್ಗೆ ಮಾರಕ ಮಾದಕವಾಗುವ ಕುರಿತು ಅರಿವು ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಅಭಿಯಾನ ಕಾರ್ಯಕ್ರಮ, ಮುಕ್ತ ದಿನವನ್ನಾಚರಿಸಿವದರಿಂದ ರೋಗಗಳನ್ನು ತಡೆಯುವದು ಮತ್ತು ಅನೇಕ ಮಾದಕ ವಸ್ತುಗಳಿಂದ ಮುಕ್ತಿ ಹೊಂದುವದು ಮತ್ತು ಎಲ್ಲರು ರೋಗಮುಕ್ತಿ ಮತ್ತು ಆರೋಗ್ಯದಿಂದ ಇರಲು. ಉದಾ: ಡೈಯಾಬಿಟಿಸ್ ಡೇ, ಎಡ್ಸ್ ಡೇ, ಲೆಪ್ರಸಿ ಡೇ, ನೊ ಟೊಬ್ಯಾಕೊ ಡೇ, ಆಂಟಿ ನಾರ್ಕೋಟಿಕ್ ಡೇ ಇತ್ಯಾದಿ. ಶೋಕಿಗಾಗಿ, ಸ್ಟೈಲ್‍ಗಾಗಿ ಮತ್ತು ತೋರಿಕೆಗಾಗಿ ಕಿರಿಯ ವಯಸ್ಸಿನ ಯುವಕರು ಧೂಮಪಾನ ಮಾಡಲಾರಂಭಿಸಿರುವದು.

ದ್ಯೇಯೊದ್ದೇಶ:

ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ತಂಭಾಕು ಮುಕ್ತ ದಿನವನಾಗಿ ಆಚರಿಸಬೇಕೆಂದು 1987 ರಲ್ಲಿ ನಿರ್ಣಯಿಸಿತು. ತನ್ನಿಮಿತ್ಯ ಪ್ರತಿವರ್ಷ ಮೇ 31 ವಿಶ್ವ ತಂಭಾಕು ಮುಕ್ತ ದಿನಾಚರಣೆಯನ್ನು ಆಚರಿಸಲಾಗುವದು. ಈ ದಿನಚರಣೆಯ ಮುಖ್ಯ ಉದ್ದೇಶ ತಂಭಾಕು ಮತ್ತು ಅದರ ಉತ್ಪನ್ನಗಳ ಬಳಕೆಯಿಂದಾಗಿ ಶರೀರದ ಮೇಲೆ ಉಂಟಾಗುವ ದುಷ್ಪರಿಣಾಮಗಳು, ಅನೇಕ ಭಯಾನಕ ರೋಗಗಳ ಮತ್ತು ಅನೇಕ ಹಾನಿಕಾರಕ ಪರಿಣಾಮಗಳ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವದು.

ದ್ಯೇಯ ವಾಖ್ಯೆ:

ಮೇ 31, 2022ರ ವಿಶ್ವ ತಂಭಾಕು ಮುಕ್ತ ದಿನಾಚರಣೆ ದ್ಯೇಯ ವಾಖ್ಯೆ “ತಂಭಾಕು ಪರಿಸರಕ್ಕೆ ಆಘಾತಕಾರಿ” ಅಥವಾ “ತಂಭಾಕು ಭೂಮಿಗೆ ವಿಷಕಾರಿ”. ಆದ್ದರಿಂದ ಪರಿಸರ ಮತ್ತು ಭೂಮಿಯ ರಕ್ಷಣೆ ನಮ್ಮೇಲರ ಕರ್ತವ್ಯ. ಆದ್ದರಿಂದ ತಂಭಾಕು ಬಳಕೆಯಿಂದ ಪರಿಸರಕ್ಕೆ ಉಂಟಾಗುವ ಹಾನಿಯ ಬಗ್ಗೆ, ವಾಯು ಮಾಲಿನ್ಯ, ತಂಭಾಕು ಬೆಳೆಯುವದು, ಸರಬರಾಜು ಮಾಡುವದು ಮತ್ತು ಅದರಿಂದ ಉತ್ಪನ್ನ ತ್ಯಾಜ್ಯದ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಅಭಿಯಾನದಂತಹ ಕಾರ್ಯಕ್ರಮಗಳು. ಪ್ರತಿವರ್ಷ ಸುಮಾರು 6 ಮಿಲಿಯನ್ ಜನರು ತಂಭಾಕು ಸೇವನೆಯಿಂದಾಗಿ ಮರಣ ಹೊಂದುತ್ತಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗುವದು.

ಗುರಿ:
• ತಂಭಾಕು ಮತ್ತು ಅದರ ಉತ್ಪನ್ನಗಳ ಬಳಕೆಯಿಂದಾಗಿ ಶರೀರದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಯವದು.

• ತಂಭಾಕು ಮತ್ತು ಅದರ ಉತ್ಪನ್ನಗಳ ಬಳಕೆಯಿಂದಾಗಿ ಉಂಟಾಗುವ ರೋಗಗಳನ್ನು ತಡೆಯವದು.

• ತಂಭಾಕು ಮತ್ತು ಅದರ ಉತ್ಪನ್ನಗಳ ಬಳಕೆಯಿಂದಾಗಿ ಉಂಟಾಗುವ ಮರಣ ಸಂಖ್ಯೆಯನ್ನು ಕಡಿಮೆ ಮಾಡುವದು.

• ತಂಭಾಕು ವ್ಯಸನಮುಕ್ತರನ್ನಾಗಿ ಮಾಡುವದು

ತಂಭಾಕು ಮತ್ತು ಅದರ ಉತ್ಪನ್ನಗಳು:

ಸಿಗಾರ್, ಬಿಡಿ, ಸಿಗರೇಟ್, ಗುಟಕಾ, ಜರ್ದಾ, ತಂಭಾಕು ಪಾನ್ ಪಟ್ಟಿ, ತಂಭಾಕುಯುಕ್ತ ಪಾನಪರಾಗ, ಹುಕ್ಕಾ ತಂಭಾಕು ನಶ್ಯ.

ತಂಭಾಕು ಮತ್ತು ಅದರ ಉತ್ಪನ್ನಗಳ ಬಳಕೆಯಿಂದಾಗಿ ಉಂಟಾಗುವ ರೋಗಗಳು:

• ಮುಖ್ಯವಾಗಿ ಶ್ವಸನವಹ ಸಂಸ್ಥಾನ ಸಂಬಂಧಿ ರೋಗಗಳು

• ಧೀರ್ಘಕಾಲಿನ ಉಸಿರಾಟದ ತೊಂದರೆ

• ಕ್ಷಯರೋಗ

• ಪುಪ್ಪುಸ/ ಶ್ವಾಸಕೋಶ ಅವಯವಕ್ಕೆ ಆಗುವ ಹಾನಿ ಮತ್ತು ಸಂಬಂಧಿ ರೋಗಗಳು.

• ಹೃದಯಾಘಾತ ಮತ್ತು ಇತರೆ ಹೃದಯ ಸಂಬಂಧಿ ರೋಗಗಳು.

• ಪಾರ್ಶ್ವವಾಯು, ರಕ್ತನಾಳಗಳ ಸಂಬಂಧಿ ಖಾಯಿಲೆಗಳು.

• ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್ ಮತ್ತು ಅನೇಕ ಧೀರ್ಘಕಾಲಿನ ರೋಗಗಳು.

• ತಂಭಾಕು ಸೇವನೆ ಅನೇಕ ರೋಗಗಳಿಗೆ ಅಪಾಯಕಾರಿ ಕಾರಣವಾಗುವದು.

• ಅತಿಯಾದ ಧೂಮಪಾನ ಕೋವಿಡ್-19 ಗೆ ಅಪಾಯಕಾರಿ ಕಾರಣವಾಗುವದು. ರಕ್ತದ ಒತ್ತಡ, ಹೃದಯದ ಗತಿ, ರಕ್ತಸಂಚಾರ ಮತ್ತು ಶ್ವಾಸಕ್ರಿಯೆ ಸಹಜ ಸ್ಥಿತಿಗೆ ಬರುವದು.

• ಗರ್ಭೀಣಿ ಸ್ತ್ರೀ ಸಿಗರೇಟ್, ತಂಭಾಕು ಮತ್ತು ಅದರ ಉತ್ಪನ್ನಗಳ ಬಳಕೆಯಿಂದ ಗರ್ಭಪಾತ ಮತ್ತು ಗರ್ಭ/ ಮಗುವಿನ ಮೇಲೆ ಅಡ್ಡಪರಿಣಾಮಗಳು.

ಪಂಚಜ್ಞಾನೇಂದ್ರಿಯಗಳಲ್ಲಿ ತೊಂದರೆ

• ತಲೆ, ಮೆದುಳು: ಸ್ಟ್ರೊಕ್ ಅಗುವುದು, ರಕ್ತನಾಳಗಲ್ಲಿ ರಕ್ತ ಹೆಪ್ಪುಗಟ್ಟುವುದು, ನೆನಪಿನ ಸಮಸ್ಯೆಗಳು.

• ಕಣ್ಣು: ದೃಷ್ಟಿಯ ವಿವಿಧ ಸಮಸ್ಯೆಗಳು, ಕಣ್ಣಿನಪೆÇರೆ.

• ಮೂಗು: ವಾಸನೆ ಗುರುತಿಸುವ ಶಕ್ತಿ ಕಡಿಮೆಯಾಗುವುದು, ಪದೆ ಪದೆ ನೆಗಡಿ, ಸೀನು ಮತ್ತು ಸೈನುಸೈಟೀಸ್.

• ಕಿವಿಗಳು: ಕಿವಿಕೆಳುವ ಸಾಮರ್ಥ್ಯ ಕಡಿಮೆಯಾಗುವುದು, ಮದ್ಯಕಿವಿಯ ಸೋಂಕು.

• ಬಾಯಿ: ಬಾಯಿಯಲ್ಲಿ ಕೆಟ್ಟವಾಸನೆ, ಹಲ್ಲು, ವಸಡು, ನಾಲಿಗೆ, ತುಟಿ, ಅಂಕುಳ ಸಂಭದಿಸಿದ ರೊಗಗಳು, ಆಹಾರದಲ್ಲಿ ರುಚಿಗೊತ್ತಾಗದಿರುವದು, ಬಾಯಿನೊವು, ಹುಣ್ಣು, ರಕ್ತಸ್ರಾವ, ಬಾಯಿ ತೆರೆಯಲು ಸಾದ್ಯವಾಗದೆ ಇರುವುದು.

ಹಲ್ಲಿನ ಕಲೆಗಳು, ವಿವಿಧ ರೀತಿಯ ಕ್ಯಾನ್ಸರ್‍ಗಳು, ಧ್ವನಿಯ ಸಮಸ್ಯೆ.

• ಆಹಾರ ನುಂಗಲು ತೊಂದರೆ.

• ವಸಡು: ವಸಡುಗಳ ಸೋಂಕು, ನೊವು, ರಕ್ತಸ್ರಾವ.

• ನಾಲಿಗೆ: ರುಚಿ ಗೊತ್ತಾಗದಿರುವುದು, ನಾಲಿಗೆ ಹುಣ್ಣು ಮತ್ತು ಸೋಂಕು.

• ಆಮ್ಲಜನಕದ ಕೊರತೆಯುಂಟಾಗಿ ಮೆದುಳಿಗೆ ಹಾನಿ, ಹಸಿವು ಕಡಿಮೆ, ನಿದ್ರಾನಾಶವಾಗುವುದು.

• ಘ್ರಾಣೇಂದ್ರಿಯದ ಸಂವೇದನೆಶಕ್ತಿ ಕಡಿಮೆಯಾಗುವುದು.

• ನಿಕೊಟೀನ್ ಅಂಶದಿಂದ ಹೊಟ್ಟೆಯಲ್ಲಿ ಆಮ್ಲದ ಅಂಶ ಜಾಸ್ತಿ ಆಗಿ ಹೊಟ್ಟೆಯಲ್ಲಿ ಹುಣ್ಣಾಗುವುದು.

• ರಕ್ತನಾಳಗಳ ಗಾತ್ರ ಕುಗ್ಗುವುದರಿಂದ ಅಧಿಕ ರಕ್ತದೊತ್ತಡದಿಂದ ಬಳಲುತ್ತಾರೆ.

• ಹೃದಯದ ಕಾರ್ಯ ಕಠಿಣವಾಗಿ ಮರಣ ಸಂಭವಿಸುವ ಸಾಧ್ಯತೆ.

• ಧೂಮಪಾನದಿಂದ ಮೆದುಳಿನ ಕ್ರೀಯಾಶಕ್ತಿ ಹೆಚ್ಚಿ ನರದೌರ್ಬಲ್ಯ ಉಂಟಾಗುವುದು.

ತಂಭಾಕು ಮತ್ತು ಅದರ ಉತ್ಪನ್ನಗಳ ವ್ಯಸನವನ್ನು ಬಿಡುವದರಿಂದ ಆರೋಗ್ಯವನ್ನು ಸುಧಾರಿಸುವಲ್ಲಿ ಮತ್ತು ಧೀರ್ಘಕಾಲಿನ ರೋಗಗಳನ್ನು ತಡೆಯಬಹುದು. ಧೂಮಪಾನ ಬಿಡುವದರಿಂದ ಶ್ವಾಸಕೋಶ ಮತ್ತು ಹೃದಯದ ಆರೋಗ್ಯವು ಹೆಚ್ಚುವದು.

ಪ್ಯಾಸಿವ್ ಸ್ಮೋಕರ (ಬೇರೆಯವರು):

ಬೇರೆ ವ್ಯಕ್ತಿ ಸೇವಿಸಿದ ಧೂಮಪಾನದ ಹೊಗೆಯು ಧೂಮಪಾನ ಮಾಡದಿದ್ದರು ಅದು ಸಾಮಾನ್ಯ ವ್ಯಕ್ತಿಯ ಶ್ವಾಸಕೋಶದ ತೊಂದರೆಯನ್ನುಂಟು ಮಾಡುವದು. ತಂಭಾಕುವಿನಲ್ಲಿ “ನಿಕೋಟಿನ್” ಎಂಬ ಅನೇಕ ವಿಷಕಾರಿ, ಅಪಾಯಕಾರಿ ರಸಾಯನಿಕ ವಸ್ತು ಶರೀರಕ್ಕೆ ಹಾನಿಯನ್ನುಂಟು ಮಾಡುವದು. ಈ ವಿಷಕಾರಿ ಅಂಶವು ಸಿಗರೇಟಿನ ಹೊಗೆಯು ಶ್ವಾಸನಾಳದಲ್ಲಿ ಹೋದಾಗ ಕ್ಯಾನ್ಸರ್ ರೋಗವನ್ನುಂಟು ಮಾಡುವದು.

“ನಿಕೋಟಿನ್” ಬಳಕೆಯ ಅಡ್ಡ ಪರಿಣಾಮಗಳು:

• ರಕ್ತದ ಒತ್ತಡವನ್ನು ಹೆಚ್ಚಿಸುವದು.

• ಹೃದಯಕ್ಕೆ ಅತಿಯಾದ ರಕ್ತಸಂಚಾರವನ್ನು ಒದಗಿಸುವದು.

• ರಕ್ತನಾಳಗಳ ಕುಗ್ಗುವಿಕೆ.

• ವಾಂತಿ ಬಂದಂತಾಗುವದು.

• ಆಹಾರ ಪಚನವಾಗದಿರುವದು.

• ಎದೆಯಲ್ಲಿ ಉರಿಯುವದು.

• ಬೇಧಿಯಾಗುವದು.

• ಭಾಯಿ ಒಣಗುವದು ಮತ್ತು ಕರುಳಿನಲ್ಲಿ ಹುಣ್ಣಾಗುವದು.

ತಂಭಾಕು ಉಪಯೋಗ ತಪ್ಪು ಕಲ್ಪನೆ:

ಒತ್ತಡದ ಶಮನಕ್ಕಾಗಿ, ಸಂತೋಷಕ್ಕಾಗಿ, ಉದ್ದೀಪನಕ್ಕಾಗಿ, ಚಟ, ತಲಬು, ಹವ್ಯಾಸ ಸ್ಟೈಲ್ ಗಾಗಿ, ಸ್ನೇಹಿತನಿಗಾಗಿ, ಕಂಪನಿ ಕೊಡುವದಕ್ಕಾಗಿ, ಮಲಬದ್ದತೆ ನಿವಾರಣೆಗಾಗಿ, ನಿದ್ರೆ ಬರುವದಕ್ಕಾಗಿ, ಒಳ್ಳೇಯ ವಿಚಾರ ಬರುವದಕ್ಕಾಗಿ, ರಾತ್ರಿಯಲ್ಲಾ ಅಧ್ಯಯನಕ್ಕಾಗಿ, ಸಮಯ ಕಳಿಯುವದಕ್ಕಾಗಿ, ಮಾನಸಿಕ ಖಿನ್ನತೆ ಕಡಿಮೆಗೊಳಿಸುವದಕ್ಕಾಗಿ, ರಿಲ್ಯಾಕ್ಸಗೋಸ್ಕರ, ಚಳಿಗಾಲ ಮತ್ತು ಮಳೆಗಾಲದಲ್ಲಿ ಶರಿರವನ್ನು ಬಿಸಿಯಾಗಿಡಿಸಲು, ರೀಪ್ರೆಶಗೋಸ್ಕರ ಇತ್ಯಾದಿ. ಇವೆಲ್ಲವುಗಳು ಅಸಮರ್ಪಕ ಕಾರಣಗಳು ಹವ್ಯಾಸ ಅಥವಾ ವ್ಯಸನ ಬಿಡದೆ ಇರುವದಕ್ಕಾಗಿ ಇವೆಲ್ಲವು ಕ್ಷುಲಕ ಕಾರಣಗಳು.

ತಂಭಾಕು ಉಪಯೋಗ ತಡೆಯುವದು ಹೇಗೆ:

1. ಮನಸ್ಸನ್ನು ಹತೋಟಿಯಲ್ಲಿಟ್ಟು ಕೊಳ್ಳುವದು.

2. ಧೂಮಪಾನ ಬಿಡಬೇಕೆಂಭ ದೃಡ ನಿರ್ಧಾರ.

3. ವಿವಿಧ ಕೆಲಸಗಳಲ್ಲಿ ತಮನ್ನ ತೊಡಗಿಸಿಕೊಳ್ಳುವದು.

4. ಸ್ಥಳವನ್ನು ಬದಲಾಯಿಸುವದು.

5. ಧ್ಯಾನ ಮತ್ತು ಪ್ರಾಣಾಯಾಮ.

ತಂಭಾಕು ಮುಕ್ತಿಗಾಗಿ ಜವಾಬ್ದಾರಿಗಳು –

• ತಂಭಾಕು ನಿಷೇಧ ಜಾಹಿರಾತು ಮತ್ತು ಅಭಿಯಾನ ಕಾರ್ಯಕ್ರಮಗಳ, ಕಾನುನಾತ್ಮಕ ಕಾಯ್ದೆ ಮೂಲಕ ತಂಭಾಕು ನಿಷೇಧ ಜನ ಜಾಗೃತಿ.

• ತಂಭಾಕು ಮತ್ತು ಅದರ ಉತ್ಪನ್ನಗಳ ಬಳಕೆಯಿಂದಾಗಿ ಶರೀರದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಮತ್ತು ಅನೇಕ ಭಯಾನಕ ರೋಗಗಳ ಮತ್ತು ಅನೇಕ ಹಾನಿಕಾರಕ ಪರಿಣಾಮಗಳ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವದು.

ತಂಬಾಕು ಹಿಂತೆಗೆಯುವಿಕೆಯಿಂದಾಗುವ ಉಪಯೋಗಗಳು:

ಗಂಟೆಗಳ ನಂತರ ಈ ಕೆಳಗೆ ತಿಳಿಸಿದ ಲಕ್ಷಣಗಳು ಕಾಣುವವು ರಕ್ತದೊತ್ತಡ ಸಹಜ ಸ್ಥಿತಿಗೆ ಬರುವದು, ನಾಡಿಮಿಡಿತ ಸಹಜ ಸ್ಥಿತಿಗೆ ಬರುವದು, ಕೈಕಾಲುಗಳ ಉಷ್ಣಾಂಶ ಸಹಜ ಸ್ಥಿತಿಗೆ ಬರುತ್ತದೆ, ಮನಸ್ಸು ಸಮಸ್ಥಿತಿಗೆ ಬರುತ್ತದೆ, ರಕ್ತದಲ್ಲಿ ಇರುವ ಕಾರ್ಬನ್ ಮೊನೊಕ್ಸೈಡ ಪ್ರಮಾಣ ಕಡಿಮೆ ಅಗಿ ಆಮ್ಲಜನಕದ ಪ್ರಮಾಣ ಹೆಚ್ಚುತ್ತದೆ ಮತ್ತು ಹೃದಯ ಕ್ರಿಯಾಶೀಲಗೊಳ್ಳುತ್ತದೆ.

ಒಂದು ವಾರದ ಬಳಿಕ: ನಿಷ್ಕ್ರೀಯಗೊಂಡ ನರನಾಡಿಗಳು ಚೇತರಿಸಿಕೊಳ್ಳುತ್ತವೆ, ಪಂಚೇಂದ್ರಿಯಗಳು ಸಕ್ರೀಯವಾಗಿ ಕೆಲಸಮಾಡುವವು, ನಾಲಿಗೆ ಸಹಜ ಸ್ಥಿತಿಗೆ ಬರುತ್ತದೆ, ದೇಹದಲ್ಲಿ ಚೈತನ್ಯ ಹೆಚ್ಚುವದು ಮತ್ತು ಆಯಾಸ, ಉಬ್ಬಸ ಕಡಿಮೆ ಯಾಗುವದು ಮತ್ತು ದೇಹದ ಇತರ ಅಂಗಾಂಗಗಳ ಕ್ರೀಯಾಶೀಲತೆ ಉತ್ತಮಗೊಳ್ಳುತ್ತದೆ.

Also Read: Curbing use of tobacco will reduce new cancer cases : World no tobacco day- May 31 

ತಾಮ್ರಪರ್ಣಿ (ಹೊಗೆಸೊಪ್ಪು):

ಆಯುರ್ವೇದ ಶಾಸ್ತ್ರದಲ್ಲಿ ಔಷಧಿಯ ಗುಣವನ್ನು ತಾಮ್ರಪರ್ಣಿ (ಹೊಗೆಸೊಪ್ಪು) ಬಗ್ಗೆ ಆಚಾರ್ಯರು ವಿವರಿಸಿದ್ದಾರೆ. ಬೆರೇ ಬೆರೇ ಔಷಧಿಗಳೊಂದಿಗೆ ಸಂಸ್ಕಾರ ಮಾಡಿ ಸರಿಯಾದ ಪ್ರಾಮಾಣದಲ್ಲಿ ವೈದ್ಯರ ಸಲಹೆ ಮತ್ತು ಮಾರ್ಗದರ್ಶನದಂತೆ ತೆಗೆದುಕೊಂಡಾಗ ಅನೇಕ ರೋಗಗಳಲ್ಲಿ ಉಪಯೋಗವಾಗುವದು.   ತಮಾಕು, ತಂಭಾಕು, ಹೊಗೆಸೊಪ್ಪು ಇತ್ಯಾದಿ ಹೆಸರುಗಳಿಂದ ಕರೆಯಲಾಗುವದು.ಸಂಸ್ಕೃತ ದಲ್ಲಿ ಇದನ್ನು ತಾಮ್ರಪರ್ಣಿ ಎಂದು ಕರೆಯಲಾಗುವದು.

ಕುಲ: ಸೋಲನೆಸಿಯೆ ಮತ್ತು ವೈಜ್ಞಾನಿಕ ಹೆಸರು: ನಿಕೋಟಿನಾ ಟೊಬ್ಯಾಕೊ

ರಸಾಯನಿಕ ಘಟಕಗಳು: ನಾರ್ನಿಕೋಟಿನ್, ಸೊಲೆನೊಪೂರಾನ್ ಮತ್ತು ಬೊಂಬಿಪ್ರೆನಾನ್

ಕರ್ಮ: ಕಟು, ತಿಕ್ತ ಕಷಾಯರಸ, ಲಘರೂಕ್ಷಗುಣ, ಉಷ್ಣವೀರ್ಯ, ಕಟುವಿಪಾಕ, ದೋಷಘ್ನತಾ ಕಫವಾತಶಾಮಕ ಮತ್ತು ಪಿತ್ತವರ್ಧಕ. ವಾತಾನುಲೋಮಕ, ಬಸ್ತಿ ಶೋಧಕ, ಕ್ರೀಮಿಘ್ನ, ಶೂಲಹರ, ಶೊಥಹರ, ಕಂಡುಘ್ನ ಮತ್ತು ಶುಕ್ರನಾಶಕ. ಮಾಂಸಪೇಶಿ ಉತ್ತೇಜಕ, ಅತಿಯಾದ ಬಳಕೆ ಧಾತುಕ್ಷಯ, ಒಜೋಕ್ಷಯಕಾರಕ, ದೌರ್ಬಲ್ಯ ಮತ್ತು ದೃಷ್ಟಿಕ್ಷಯಕಾರಕ

ರೋಗ: ಶ್ವಾಸರೋಗ, ಕಾಸ ಮತ್ತು ಹಲ್ಲಿನರೋಗ

ಉಪಯುಕ್ತ ಅಂಗ: ಪತ್ರ,

ಮಾತ್ರ: ಚೂರ್ಣ- 1/2 ದಿಂದ 1 ಗ್ರಾಂ

ಔಷಧಿಯೋಗ: ಶ್ವಾಸಗಜಾಂಕುಶರಸ ಮತ್ತು ಶ್ವಾಸಾನಂತಕ ಅವಲೇಹ.

ಹೃದಯ ಸಂಬಂಧಿರೋಗ, ಶ್ವಾಸಕೋಶಸಂಬಂಧಿ, ಅಸಿಡಿಟಿ, ಅಧಿಕರಕ್ತದ ಒತ್ತಡ ಇಲ್ಲಿ ತಂಭಾಕು ಉಪಯೋಗ ನಿಷಿದ್ದ. ಅತಿಯಾದ ಬಳಕೆಯಿಂದ ಮುಖ, ಗಂಟಲು, ಆಮಾಶಯದಲ್ಲಿ ಉರಿಯುವದು, ಬಾಯೊಯಲ್ಲಿ ನೀರುರುವದು, ವಾಂತಿ, ಬೇಧಿಯಾಗುವದು. ಶ್ವಾಸಾವರೋಧ ಮೃಥ್ಯುಸಾಧ್ಯತೆ. ಇದರ ಅತಿಯಾದ ಬಳಕೆಯಿಂದ ಉತ್ಪನ್ನ ತೊಂದರೆ ನಿವಾರಣೆಗಾಗಿ ನಿಂಬೆಹಣ್ಣಿನರಸ ಮತ್ತು ಹಾಲು ಕುಡಿಯಬೇಕು. ಸರ್ಪವಿಷ ಮತ್ತು ಕುಪೀಲುವಿಷಕ್ಕೆ ತಾಮ್ರಪರ್ಣಿ ಪ್ರತಿವಿಷವಾಗಿದೆ (ಆಂಟಿಡ್ಯೋಟ್).

ತಂಭಾಕು ಸೇವನೆ ಆರೋಗ್ಯ, ಹಣ ಶಾಂತಿ ನೆಮ್ಮದಿ ಹಾಳುಮಾಡಿ ಪ್ರಾಣ ತೆಗದುಕೊಳ್ಳುವ ವಸ್ತು.

“ತಂಭಾಕು ಬಿಡುವ ದೃಡ ನಿರ್ಧಾರ ಆರೋಗ್ಯ ಜೀವನಕ್ಕೆ ಆಧಾರ”.

ತಿಳಿಯೋಣ ತಂಭಾಕು ಪರಿಸರಕ್ಕೆ ಆಘಾತಕಾರಿ ವಿಷಯವನ್ನ.

ಪಾಲಿಸೋಣ ಪರಿಸರ ಸಂರಕ್ಷಣೆಯ ದ್ಯೇಯ ವ್ಯಾಕೆಯನ್ನ.

Also Read: ತಂಬಾಕು ಮುಕ್ತ ಭಾರತ ಜನುಮಿಸಲಿ – ವಿಶ್ವ ತಂಬಾಕು ರಹಿತ ದಿನ ಮೇ 31

dr-santosh-ayurveda-day

ಡಾ:ಸ0ತೋಷ ನೀಲಪ್ಪ. ಬೆಳವಡಿ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗ
ಡಾ: ಮಮತಾ ಯ. ಖಟಾವಕರ್
ಸಹ ಪ್ರಾಧ್ಯಾಪಕರು, ಶಾಲಾಕ್ಯತಂತ್ರ ವಿಭಾಗ
ಡಿ.ಜಿ.ಎ0.ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಗದಗ.
Email: ayursnb@yahoo.co.in, Phone 98869 16367

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!