ಪಟಾಕಿ ಸಿಡಿಸುವಾಗ ಕಣ್ಣುಗಳಿಗೆ ಇರಲಿ ಸುರಕ್ಷತಾ ಕವಚ

ಪಟಾಕಿ ಸಿಡಿಸುವಾಗ ಕಣ್ಣುಗಳಿಗೆ ಸುರಕ್ಷತಾ ಕವಚ ಹಾಕಿಕೊಳ್ಳದೇ ಇರುವುದರಿಂದ ಗಾಯಗಳು ಅಧಿಕ. ಪಟಾಕಿ ಹಚ್ಚುವ ಕುರಿತು ಜಾಗೃತಿ ಮತ್ತು ಮುನ್ನೆಚ್ಚರಿಕೆ ಕೊರತೆ ಕಾರಣ. ಪೋಷಕರ ಮೇಲ್ವಿಚಾರಣೆಯಲ್ಲೇ ಮಕ್ಕಳು ಪಟಾಕಿ ಸಿಡಿಸಬೇಕು.

ಸಂಭ್ರಮಾಚರಣೆಗೆ ವಿಶ್ವದಾದ್ಯಂತ ಪಟಾಕಿಗಳನ್ನು ಬಳಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ. ಆದರೆ, ಪ್ರತಿವರ್ಷ ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳಿಂದ ಆಗುವ ಗಾಯಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪಟಾಕಿ ಸಿಡಿಸುವುದರಿಂದ ಅಥವಾ ಹಚ್ಚುವುದರಿಂದ ಕಣ್ಣುಗಳು ಮತ್ತು ಚರ್ಮಕ್ಕೆ ಗಾಯವನ್ನುಂಟು ಮಾಡುವ ಸಾಧ್ಯತೆ ಇದೆ. ಇದರ ಪರಿಣಾಮ ಗಂಭೀರವಾಗಿರುತ್ತದೆ ಮತ್ತು ದೃಷ್ಟಿಯನ್ನು ಮರುಪಡೆಯಲು ಸಾಧ್ಯವಾಗದಂತಹ ಸ್ಥಿತಿಗೆ ಕಾರಣವಾಗಬಲ್ಲದು. ಇದಕ್ಕೆ ಪ್ರಮುಖ ಕಾರಣ ಪಟಾಕಿಗಳನ್ನು ಹಚ್ಚುವಾಗ ಸುರಕ್ಷಿತ ಕ್ರಮಗಳ ಬಗ್ಗೆ ಹೆಚ್ಚು ಜಾಗೃತಿ ಇಲ್ಲದಿರುವುದು ಮತ್ತು ಕಣ್ಣುಗಳಿಗೆ ರಕ್ಷಣಾತ್ಮಕವಾದ ಕ್ರಮಗಳನ್ನು ಕೈಗೊಳ್ಳದಿರುವುದು. ದೀಪಾವಳಿ ಸಂದರ್ಭದಲ್ಲಿ ಆಗುವ ಅನಾಹುತಗಳಿಂದ ಗಾಯಗೊಳ್ಳುವವರಲ್ಲಿ ಮಕ್ಕಳೇ ಹೆಚ್ಚು. ಇವರಿಗೆ ಪೋಷಕರಿಂದ ಸೂಕ್ತವಾದ ಮೇಲ್ವಿಚಾರಣೆ ಇರುವುದಿಲ್ಲ.

deepavali

ಪೋಷಕರ ಮೇಲ್ವಿಚಾರಣೆಯಲ್ಲೇ ಮಕ್ಕಳು ಪಟಾಕಿ ಸಿಡಿಸಬೇಕು:

ಪಟಾಕಿ ಸಿಡಿತದಿಂದಾಗಿ ದೊಡ್ಡ ಮಟ್ಟದಲ್ಲಿ ಕಣ್ಣುಗಳಿಗೆ ಗಾಯಗಳಾಗುತ್ತವೆ. ಸಾಮಾನ್ಯವಾಗಿ, ಕಣ್ಣಿನಲ್ಲಿ ಫಾರಿನ್ ಬಾಡಿ ಸೆನ್ಸೇಷನ್, ಕಣ್ಣಿನ ನೋವು, ದೃಷ್ಟಿ ಮಂದವಾಗುವುದು, ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ನೀರು ಸೋರುವುದು ಮತ್ತು ಫೋಟೋಸೆನ್ಸಿಟಿವಿಟಿ ಅಥವಾ ಫೋಟೋಫೋಬಿಯಾದಂತಹ ಸಮಸ್ಯೆಗಳು ತಮ್ಮ ಮಕ್ಕಳಲ್ಲಿ ಕಂಡುಬರುತ್ತವೆ ಎಂದು ಪೋಷಕರು ವೈದ್ಯರ ಬಳಿ ಹೇಳಿಕೊಳ್ಳುತ್ತಾರೆ. ಹೈಫೆಮಾ, ಐಲಿಡ್‍ ಇಂಜುರಿಸ್, ಟ್ರಾಮ್ಯಾಟಿಕ್ ಇರಿಡೋಡಯಾಲಿಸಿಸ್, ರೇಟಿನಲ್‍ ಡಿಟ್ಯಾಚ್‍ಮೆಂಟ್ ಮತ್ತು ಕಾರ್ನಿಯಲ್ ಅಬ್ರಾಶನ್‍ಗಳು ಸಾಮಾನ್ಯ ಗಾಯಗಳಾಗಿವೆ.

ಪಟಾಕಿಗಳು ಲಿಡ್ ಮತ್ತು ಆಕ್ಯುಲರ್ ಸರ್ಫೇಸ್‍ ಕೆಮಿಕಲ್ ಮತ್ತು ಥರ್ಮಲ್ ಬರ್ನಿಂಗ್‍ಗೆ ಕಾರಣವಾಗುತ್ತವೆ. ಇದು ಕಾರ್ನಿಯಲ್‍ ಅಸ್ಪಷ್ಟತೆ ಮತ್ತು ಅಂಧತ್ವಕ್ಕೆ ಕಾರಣವಾಗಬಹುದು. ಇದು ಕಣ್ಣಿನಲ್ಲಿ ಕೆಲವೊಮ್ಮೆ ಗ್ಲೋಬ್ ಪರ್ಫೋರೇಷನ್ ಮತ್ತು ಇಂಟ್ರಾಆಕ್ಯುಲರ್ ಫಾರಿನ್ ಬಾಡಿಗಳನ್ನು ಉಂಟು ಮಾಡುತ್ತದೆ. ಇದರಿಂದ ದೃಷ್ಟಿ ನಷ್ಟ ಉಂಟಾಗಿ ಅದನ್ನು ಸರಿಪಡಿಸದಂತಹ ಪರಿಸ್ಥಿತಿಯನ್ನು ತಂದೊಡ್ಡುತ್ತದೆ. ಆದ್ದರಿಂದ, ಈ ದೀಪಾವಳಿಯಲ್ಲಿ ಪಟಾಕಿಗಳನ್ನು ಸಿಡಿಸುವ ಸಂದರ್ಭದಲ್ಲಿ ರಕ್ಷಣಾತ್ಮಕವಾದ ಕಣ್ಣಿನ ಸುರಕ್ಷತಾ ಕವಚ ಬಳಸುವುದನ್ನು ಕಡ್ಡಾಯಗೊಳಿಸಬೇಕು ಮತ್ತು ಮಕ್ಕಳು ತಮಗೆ ತಾವೇ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಬಾರದು. ಪೋಷಕರ ಮೇಲ್ವಿಚಾರಣೆಯಲ್ಲೇ ಮಕ್ಕಳು ಪಟಾಕಿ ಸಿಡಿಸಬೇಕು.

ಪಟಾಕಿಗಳನ್ನು ಮನೆಯಿಂದ ದೂರದ ಬಯಲು ಪ್ರದೇಶದಲ್ಲಿ ಸಿಡಿಸಬೇಕು. ಒಣಗಿದ ಎಲೆಗಳು ಅಥವಾ ಹುಲ್ಲು ಅಥವಾ ಸುಲಭವಾಗಿ ಬೆಂಕಿ ಹತ್ತಿಕೊಳ್ಳುವಂತಹ ಜಾಗದಿಂದ ದೂರದಲ್ಲಿ ಪಟಾಕಿಗಳನ್ನು ಸಿಡಿಸುವುದು ಉತ್ತಮ. ಪಟಾಕಿ ಸಿಡಿಸುವ ಸ್ಥಳದಲ್ಲಿ ತುರ್ತು ಸಂದರ್ಭಕ್ಕಾಗಿ ಒಂದು ಬಕೆಟ್‍ನಷ್ಟು ನೀರು ಇಟ್ಟುಕೊಂಡಿರಬೇಕು ಮತ್ತು ಪಟಾಕಿಯಿಂದ ಬೆಂಕಿ ಹರಡುವುದನ್ನು ತಪ್ಪಿಸಲು ಸುಲಭವಾಗಿ ಆ ನೀರನ್ನು ಹಾಕುವಂತಿರಬೇಕು. ಇದರಿಂದ ಅನಾಹುತವನ್ನು ತಪ್ಪಿಸಬಹುದಾಗಿದೆ. ಯಾವುದೇ ಕಾರಣಕ್ಕೂ ಕಂಟೇನರ್‍ಗಳಲ್ಲಿ ಅದರಲ್ಲೂ ಗಾಜು ಅಥವಾ ಲೋಹದ ಕಂಟೇನರ್‍ಗಳಲ್ಲಿ ಪಟಾಕಿ ಹಚ್ಚಬೇಡಿ. ಆರಿ ಹೋದ ಪಟಾಕಿಗಳನ್ನು ಅಥವಾ ಸರಿಯಾಗಿ ಹಚ್ಚಿಕೊಳ್ಳದ ಪಟಾಕಿಗಳನ್ನು ಮತ್ತೆ ಹಚ್ಚಲು ಪ್ರಯತ್ನಿಸಬೇಡಿ. ಅಂತಹ ಪಟಾಕಿಗಳನ್ನು ನೀರಿನಲ್ಲಿ ನೆನಸಿ ವಿಲೇವಾರಿ ಮಾಡಬೇಕು.

ಪಟಾಕಿ ಸಿಡಿಸುವುದನ್ನು ನೋಡುವವರಿಗೂ ಅಪಾಯ ಇರುತ್ತದೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ಸೂಚನೆಗಳನ್ನು ಪಾಲಿಸಬೇಕು ಮತ್ತು ಪಟಾಕಿ ಹಚ್ಚುವ ಸ್ಥಳದಿಂದ ಕನಿಷ್ಠ 500 ಅಡಿಗಳಷ್ಟು ದೂರದಲ್ಲಿ ನಿಂತು ವೀಕ್ಷಿಸಬೇಕು. ರಾಕೆಟ್‍ಗಳು ಮತ್ತು ಬಾಂಬ್‍ನಂತಹ ದೊಡ್ಡ ಮಟ್ಟದ ಸ್ಫೋಟಗೊಳ್ಳುವ ಪಟಾಕಿಗಳು ದೊಡ್ಡ ಮಟ್ಟದ ಗಾಯಗಳನ್ನು ಉಂಟು ಮಾಡುವ ಪಟಾಕಿಗಳಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಇಂತಹ ಪಟಾಕಿಗಳನ್ನು ಸಿಡಿಸುವುದನ್ನು ನಿಯಂತ್ರಿಸಬೇಕು. ಕೆಲವೊಮ್ಮೆ ನಿರುಪದ್ರವಿ ಪಟಾಕಿಗಳು ಎಂದೆನಿಸಿದರೂ ಅವುಗಳು ಸಹ ಅಪಾಯಕಾರಿಯಾಗಿರುತ್ತವೆ. ಅವುಗಳು 1093 ಡಿಗ್ರಿ ಸೆಲ್ಸಿಯಸ್‍ನಲ್ಲಿ ಸುಡುತ್ತವೆ. ಆದ್ದರಿಂದ ಕಿಡಿ ಹಾರಿ ಅನಾಹುತಗಳು ಸಂಭವಿಸುವ ಸಾಧ್ಯತೆಗಳಿದ್ದು, ಇವುಗಳು ಕಣ್ಣಿಗೆ ಗಾಯವನ್ನುಂಟು ಮಾಡುತ್ತವೆ ಮತ್ತು ಸಾವಿಗೂ ಕಾರಣವಾಗಬಲ್ಲವು.

ಪಟಾಕಿಗಳಿಂದ ಗಾಯಗಳಾದ ಸಂದರ್ಭದಲ್ಲಿ ಅನುಸರಿಸಬೇಕಾದ ಮತ್ತು ಅನುಸರಿಸದೇ ಇರುವ ಕ್ರಮಗಳು:

• ವೈದ್ಯರ ಸಲಹೆ ಇಲ್ಲದೇ ಕಣ್ಣಿನ ಡ್ರಾಪ್‍ಗಳನ್ನು ಬಳಸಬೇಡಿ.
• ಕಣ್ಣುಗಳನ್ನು ಉಜ್ಜಬೇಡಿ
• ಕಣ್ಣುಗಳನ್ನು ತೊಳೆಯಬೇಡಿ
• ಕಣ್ಣುಗಳ ಮೇಲೆ ಒತ್ತಡ ಹಾಕಬೇಡಿ
• ಕಣ್ಣಿನಲ್ಲಿ ಸಿಕ್ಕಿಕೊಂಡಿರುವ ಯಾವುದೇ ವಸ್ತುವನ್ನು ಬಲವಂತವಾಗಿ ಹೊರ ತೆಗೆಯಲು ಪ್ರಯತ್ನಿಸಬೇಡಿ.

 ಡಾ.ವೆಂಕಟೇಶ್ ಬಾಬು – ಆಫ್ತಲ್ಮೋಲಾಜಿಸ್ಟ್, ಕನ್ಸಲ್ಟೆಂಟ್‍

ಬೆಂಗಳೂರಿನ ಡಾ.ಅಗರ್‍ವಾಲ್ ಐ ಹಾಸ್ಪಿಟಲ್‍

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!