ವೃದ್ಧಾಪ್ಯ ಶಾಪವಲ್ಲ – ಕಾಯಿಲೆಗೆ ಕಾಯಬೇಡಿ…..

ವೃದ್ಧಾಪ್ಯ `ಶಾಪ’ವಲ್ಲ. ದೀರ್ಘಾಯುಷಿಗಳಾಗಬೇಕೆಂದು ಬಯಸುವವರೆಲ್ಲ ವೃದ್ಯಾಪ್ಯವನ್ನು ಸಂತೋಷದಾಯಕವನ್ನಾಗಿ ಮಾಡಿಕೊಂಡು ಆರೋಗ್ಯಕರವಾದ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕು.

ವೃದ್ಧಾಪ್ಯ `ಶಾಪ’ವಲ್ಲ! - ಕಾಯಿಲೆಗೆ ಕಾಯಬೇಡಿ.....

ಎಂದಿಗೂ ವೃದ್ಧಾಪ್ಯವನ್ನು `ಶಾಪ’ ವೆಂದು ಭಾವಿಸದೆ `ವರ’ ಎಂದುಕೊಂಡಲ್ಲಿ ನಿಭಾಯಿಸುವುದು ಖಂಡಿತ ಕಷ್ಟವಾಗಲಾರದು. ಮಧ್ಯ ವಯಸ್ಸಿನಲ್ಲೇ ಪೀಠಿಕೆ ಹಾಕಿ ಆರೋಗ್ಯಕರ ಸೂತ್ರಗಳನ್ನು ಪಾಲಿಸಿದಲ್ಲಿ ವೃದ್ಧಾಪ್ಯ ಸುಖಕರವಾಗಿರುತ್ತದೆ. ಯಾವುದೇ ದುಶ್ಚಟಗಳಿಗೆ ದಾಸರಾಗದಂತೆ ಜೀವನ ನಡೆಸಿದಲ್ಲಿ ಅನಾರೋಗ್ಯ ಹತ್ತಿರ ಸುಳಿಯಲಾರದು. ಮಕ್ಕಳು, ಮೊಮ್ಮಕ್ಕಳೊಂದಿಗೆ ಸಂತೋಷದಿಂದ ಸಮಯ ಕಳೆದರೆ ನೆಮ್ಮದಿಯ ಬದುಕು ಸಾಧ್ಯವಿದೆ. ಅದಕ್ಕೆ ಆತ್ಮವಿಶ್ವಾಸವೇ ದಿವ್ಯ ಔಷಧಿ.

ಹೊರೆ ಎನ್ನುವುದು ಬೇಡ

ಒತ್ತಡದ ನಡುವೆ ಬದುಕುತ್ತಿರುವ ಮಕ್ಕಳು ತಮ್ಮ ಅಪ್ಪ, ಅಮ್ಮನನ್ನು ಹೊರೆಯೆಂದು ಭಾವಿಸದೆ ಪ್ರೀತಿಯಿಂದ ನೋಡಿಕೊಂಡಲ್ಲಿ, ಉತ್ತಮ ಕೌಟುಂಬಿಕ ಪರಿಸರ ಇದ್ದಲ್ಲಿ ಹಿರಿಯರ ಆರೋಗ್ಯ ಸದಾ ನಳನಳಿಸುತ್ತಿರುತ್ತದೆ. ಇಲ್ಲದಿದ್ದಲ್ಲಿ ಅನೇಕ ಕಾಯಿಲೆಗಳು ನರಳಿಸುತ್ತವೆ. ವೃದ್ಧಾಪ್ಯದಲ್ಲಿ ಕಾಡುವ ಸಮಸ್ಯೆಗಳು ಹತ್ತು ಹಲವು. ಮಧುಮೇಹ, ಮಂಡಿನೋವು, ರಕ್ತದೊತ್ತಡ, ಉಬ್ಬಸ, ಅಸಿಡಿಟಿ, ಅಲರ್ಜಿ, ಕೆಮ್ಮು-ಹೀಗೆ ನೂರೆಂಟು ಸಮಸ್ಯೆಗಳು ಹಿರಿಯರನ್ನು ಮಾನಸಿಕ ಹಾಗೂ ದೈಹಿಕವಾಗಿ ಭಾದೆಪಡಿಸುತ್ತವೆ. ಹೀಗಾಗಿ ಅವರಿಗೆ ವೃದ್ಧಾಪ್ಯ ಅತ್ಯಂತ ಕ್ಲಿಷ್ಟಕರ ಎನಿಸುತ್ತದೆ.

ಮಧುಮೇಹ

ಇತ್ತೀಚೆಗೆ ಹಿರಿಯ ನಾಗರಿಕರಲ್ಲಿ ಮಧುಮೇಹದಿಂದ ನರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. 65 ಇಲ್ಲವೇ 70 ವರ್ಷ ತುಂಬಿದ ನಂತರ ಮಧುಮೇಹ ಸ್ವಲ್ಪಮಟ್ಟಿಗೆ ಕಾಣಿಸಿಕೊಂಡಲ್ಲಿ ಆಹಾರದಲ್ಲಿ ಪಥ್ಯ, ನಡಿಗೆ ಮತ್ತು ಕೆಲವು ಮನೆ ಔಷಧಿಗಳಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣಕ್ಕೆ ತರಬಹುದು.

ಮಂಡಿನೋವು

ಬಹುಸಂಖ್ಯಾ ಹಿರಿಯ ನಾಗರೀಕರಲ್ಲಿ ಮಂಡಿನೋವು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಇದು ಪುರುಷ ಮತ್ತು ಮಹಿಳೆಯರೆಂಬ ಭೇದವಿಲ್ಲದೇ ಇಬ್ಬರಲ್ಲೂ ಕಾಣಿಸಿಕೊಳ್ಳುವಂತಹುದು. ಇದು ಮೂಳೆಗಳು ಟೊಳ್ಳಾಗುವಿಕೆಯಿಂದ ದೇಹದ ತೂಕ ಹೆಚ್ಚಾಗಿದ್ದಲ್ಲಿ ಕಾಣಿಸಿಕೊಳ್ಳುತ್ತದೆ. ಮಂಡಿಗಳಲ್ಲಿ ನೋವು, ಊತ, ಬಿಗಿತ ಹೆಚ್ಚಾಗಿರುತ್ತದೆ.

ಆಮಶಂಕೆ

ಜೀರ್ಣ ಶಕ್ತಿ ಕಡಿಮೆಯಾದಂತೆ ವೃದ್ಧರಲ್ಲಿ ಆಮಶಂಕೆ ಹೆಚ್ಚು ಬಾಧೆಪಡುವಂತಹದ್ದು. ಹೊಟ್ಟೆ ಹಿಂಡಿದಂತಾಗಿ ನೋವು ಬಂದು ಮಲವಿಸರ್ಜನೆ ಆಗುತ್ತಿದ್ದಲ್ಲಿ ಮತ್ತು ಮಲದೊಂದಿಗೆ ಗೊಣ್ಣೆಯಂತಹ ಪದಾರ್ಥ ಹೋಗುತ್ತಿದ್ದಲ್ಲಿ ಆಮಶಂಕೆಯಿಂದಾಗಿ ಹಾಗಾಗುತ್ತಿರುತ್ತದೆ. ಊಟವಾದೊಡನೆ ಮಲವಿಸರ್ಜನೆಗೆ ಹೋಗಬೇಕೆನಿಸುತ್ತದೆ. ಬಾಯಿಯಲ್ಲಿ ನೀರು ಬರುವುದು, ಹೊಟ್ಟೆಯುಬ್ಬರ ಕೂಡ ಇರುವುದು.

ಅಧಿಕ ರಕ್ತದೊತ್ತಡ

ಮಾನಸಿಕ ಯಾತನೆಗಳು ಒಮ್ಮೆಮ್ಮೆ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿ ಬಿಡುತ್ತವೆ. ವೃದ್ಧರು ಆಗಾಗ ವೈದ್ಯರನ್ನು ಭೇಟಿಯಾಗಿ ರಕ್ತದೊತ್ತಡ ಪರೀಕ್ಷಿಸಿಕೊಳ್ಳಬೇಕು. ಹೆಚ್ಚಾಗಿದ್ದಲ್ಲಿ ನಿಯಂತ್ರಿಸಲು ಔಷಧಿ ಸೇವನೆ, ಪಥ್ಯ, ವ್ಯಾಯಾಮ ಪಾಲಿಸಬೇಕು. ಉಪ್ಪಿನ ಸೇವನೆ ಮಿತಿಗೊಳಿಸಬೇಕು. ಸದಾ ಸಂತೋಷದಿಂದ ಇರಲು ಪ್ರಯತ್ನಿಸಬೇಕು.

ನಿದ್ರಾಹೀನತೆ

ವೃದ್ಧಾಪ್ಯದಲ್ಲಿ ಅನೇಕರಿಗೆ ನಿದ್ರಾಹೀನತೆ ತೊಂದರೆ ಕಾಡುತ್ತಿರುವುದು ಸಾಮಾನ್ಯ. ಸರಿಯಾಗಿ ನಿದ್ರೆ ಬರುವುದಿಲ್ಲ. ಒಮ್ಮೆ ಮಲಗಿದರೂ ಎರಡ್ಮೂರು ಗಂಟೆಗೆಲ್ಲ ಎಚ್ಚರವಾಗಿ ಬಿಡುತ್ತದೆ. ಮಾನಸಿಕ ನೆಮ್ಮದಿಯಿಲ್ಲದೆ ಖಿನ್ನತೆ, ಆತಂಕಗಳು ಇದ್ದಲ್ಲಿಯೂ ನಿದ್ರೆ ಬರುವುದಿಲ್ಲ.

ಉಬ್ಬಸ

ಉಸಿರು ತೆಗೆದುಕೊಳ್ಳಲು ಉಬ್ಬಸ ರೋಗಿಗಳಿಗೆ ಕಷ್ಟವಾಗುತ್ತಿರುತ್ತದೆ. ಸುಂಯ್, ಸುಂಯ್ ಶಬ್ಧ ಬರುತ್ತಿರುತ್ತದೆ. ಮಳೆಗಾಲ, ಚಳಿಗಾಲದಲ್ಲಿ ಉಬ್ಬಸದ ತೊಂದರೆ ಇನ್ನು ಹೆಚ್ಚು. ಉಬ್ಬಸದಿಂದ ಬಳಲುವ ಅನೇಕರು ರಾತ್ರಿ ಮಲಗುವುದೇ ಇಲ್ಲ. ಕುಳಿತುಕೊಂಡೇ ಉಸಿರಿಗಾಗಿ ತಹತಹಿಸುತ್ತಿರುತ್ತಾರೆ.

ಕೆಮ್ಮು

ವಯಸ್ಕರಲ್ಲಿ ಕೆಮ್ಮು ಬಹಳಷ್ಟು ಕಾಡುತ್ತಿರುತ್ತದೆ. ಮಳೆಗಾಲದಲ್ಲಿ ಕೆಮ್ಮು ಹೆಚ್ಚು ಬಾಧಿಸುತ್ತದೆ. ಇವುಗಳಲ್ಲದೆ ತಲೆನೋವು, ಗುಳ್ಳೆಗಳು, ನೆಗಡಿ, ವಾಯುಬಾಧೆ, ಉರಿಮೂತ್ರ, ಹೃದ್ರೋಗ, ಮಲಬದ್ಧತೆ, ಮರೆವು, ಕಣ್ಣಿನಪೊರೆ- ಹೀಗೆ ಅನೇಕ ಸಮಸ್ಯೆಗಳು ಹಿರಿಯರನ್ನು ತೊಂದರೆಗೀಡು ಮಾಡುತ್ತವೆ. ಆದರೆ ಈ ಬಗ್ಗೆ ಹೆಚ್ಚು ಆತಂಕಪಡಬೇಕಾದ ಅಗತ್ಯವಿಲ್ಲ.

ಟೆನ್‍ಷನ್ ಬೇಡವೃದ್ಧಾಪ್ಯ `ಶಾಪ’ವಲ್ಲ! - ಕಾಯಿಲೆಗೆ ಕಾಯಬೇಡಿ.....

1. ಜೀವನ ಶೈಲಿ ಬದಲಿಸಿಕೊಳ್ಳಬೇಕು.

2. ಒಳ್ಳೆಯ ವಾತಾವರಣ ಕಲ್ಪಿಸಿಕೊಳ್ಳಬೇಕು.

3. ಸರಿಯಾದ ವ್ಯಾಯಾಮ, ನಡಿಗೆ, ಧ್ಯಾನ, ಹಿತಮಿತವಾದ ಆಹಾರ, ಹೆಚ್ಚು ನೀರು ಕುಡಿಯುವುದು, ನಿರಾತಂಕವಾದ ನಿದ್ರೆ ಹೀಗೆ ದೈಹಿಕ ಆರೋಗ್ಯ ಕಾಪಾಡಿಕೊಂಡರೆ ರೋಗ ಮುಕ್ತರಾಗಬಹುದು.

4. ಸಾಹಿತ್ಯ, ಸಂಗೀತದಂತಹ ಉತ್ತಮ ಹವ್ಯಾಸ, ಜನರೊಂದಿಗೆ ಬೆರೆಯುವುದು, ದೇವಸ್ಥಾನಗಳಿಗೆ ಭೇಟಿ ಕೊಡುವುದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು, ನಿಯಮಿತವಾಗಿ ಕುಟುಂಬ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುವುದು.

5. ಕುಟುಂಬ ಸಮೇತ ಇಲ್ಲವೇ ಮಿತ್ರರ ಜೊತೆಗೂಡಿ ಪ್ರವಾಸ ಹೋಗುವುದು ಇವೆಲ್ಲವೂ ಮಾನಸಿಕ ಆರೋಗ್ಯ ವೃದ್ಧಿಗೆ ಸಹಾಯವಾಗುತ್ತವೆ.

ಡಾ.ಚಲಪತಿ

ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್
#82, ಇಪಿಐಪಿ ವೈಟ್‍ಫೀಲ್ಡ್, ಬೆಂಗಳೂರು -560066
ಫೋನ್: 080- 49069000 Extn: 1147/1366  

http://www.vims.ac.in/

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!