ಅಲರ್ಜಿ ತಡೆಗಟ್ಟುವುದು ಹೇಗೆ

ಅಲರ್ಜಿ ತಡೆಗಟ್ಟುವುದು ಹೇಗೆ ? ಸಾಮಾನ್ಯವಾಗಿ ಅಲರ್ಜಿ ಯನ್ನು ಹೋಮಿಯೋಪತಿ ಔಷದಿಗಳು ಯಾವುದೇ ಅಡ್ಡ ಪರಿಣಾಮಗಳಿಲ್ಲದೆಯೇ ಕಾಯಿಲೆಯನ್ನು   ಗುಣಪಡಿಸುತ್ತದೆ.

Allergie tadegattuvudu hegeಸ್ವಲ್ಪ ಚಳಿ ಗಾಳಿ ಬೀಸಿದರೆ ತಕ್ಷಣ, ಸೀನು, ಮೂಗು ಕಟ್ಟಿಕೊಂಡು ಉಸಿರಾಡಲು ಕಷ್ಟ, ಆನಂತರ ಕೆಮ್ಮು, ಉಬ್ಬಸ ಶುರುಅಗುತ್ತೆ, ದಿನವೂ ಇನ್ಹೇಲರ್ ಬಳಸುವಂತಾಗುವುದು. ಕಿಂಚಿತ್ತು ಧೂಳು, ಹೊಗೆ ತಾಕಿದರೂ ಸೀನು, ಬಳ ಬಳನೆ ಮೂಗಿನಿಂದ ಸುರಿವ ನೀರು, ಆಗಾಗ ಮೈ ಮೇಲೆ ಗಂಧೆ, ಸಿಕ್ಕಾಪಟ್ಟೆ ತುರಿಕೆ, ಇವು ನಾನಾತರಹ ನಮ್ಮನ್ನು ಕಾಡುವ ‘ಅಲರ್ಜಿ’.

ಅಲರ್ಜಿಯನ್ನು ದೇಹದ ರೋಗನಿರೋಧಕ ವ್ಯವಸ್ಥೆಯ (Immune system) ಅನಿಯಂತ್ರಿತ ಪ್ರಚೋದನಕಾರಿ ಪ್ರಕ್ರಿಯೆ ಎಂದು ವ್ಯಾಖ್ಯಾನಿಸಬಹುದು. ಅಲರ್ಜಿಯಿಂದ ಬಳಲುವವರು ಸಾಮಾನ್ಯ ಪರಿಸ್ಥಿತಿಗಳಲ್ಲಿ ಇತರರಿಗಿಂತ ಹೆಚ್ಚು ತೊಂದರೆಗಳಿಗೀಡಾಗುತ್ತಾರೆ. ಚಳಿ, ಧೂಳು ಮಳೆ ಗಾಳಿಗಳು ಆರೋಗ್ಯವಂತರಲ್ಲಿ ಒಂದೆರಡು ಸೀನು, ಕೆಮ್ಮು ಅಥವಾ 2-3 ದಿನ ಶೀತದಿಂದ ಬಳಲುವಂತೆ ಮಾಡಿದರೆ, ಅಲರ್ಜಿಯುಳ್ಳವರು ಸೀನು, ಶೀತ ಅಥವಾ ಉಬ್ಬಸಗಳಂಥ ತೊಂದರೆಗಳಿಂದ ನಿರಂತರವಾಗಿ ಬಳಲುತ್ತಲೇ ಇರುತ್ತಾರೆ.

ಇತ್ತೀಚೆಗೆ ಮಕ್ಕಳಲ್ಲಿ ಮೂಗಿನ ಅಲರ್ಜಿ, ಉಬ್ಬಸ, ಫುಡ್ ಅಲರ್ಜಿಗಳು ಹೆಚ್ಚಾಗಿವೆ. ಅನೇಕ ಮಕ್ಕಳು ಈ ಅಲರ್ಜಿಯ ಕಾರಣದಿಂದ, ಕಹೀ ಗುಳಿಗೆ, ಸಿರಪ್ಪುಗಳನ್ನು ಸೇವಿಸುತ್ತಾ, ಕ್ಲಿನಿಕ್ಕು, ಆಸ್ಪತ್ರೆಗಳ ಸಹವಾಸದಲ್ಲಿಯೇ ಕಳೆದುಕೊಳ್ಳುವಂತಾಗಿದೆ.

ಅಲರ್ಜಿಯನ್ನು ಪ್ರಚೋದಿಸುವ ವಸ್ತುಗಳು

ಗಾಳಿಯಲಿರುವ ಅಲರ್ಜಿನ್ ಗಳು: ಪರಾಗ, ಪ್ರಾಣಿಗಳ ತಲೆಹೊಟ್ಟು, ಧೂಳಿನಲ್ಲಿರುವ ಹುಳಗಳು.
ಹಾನಿಕಾರಕ ರಾಸಾಯನಿಕಗಳು.
ಕೆಲವು ಆಹಾರಗಳು: ಕಡಲೆಕಾಯಿ, ಬೀಜಗಳು, ಸೋಯಾ, ಮೀನು, ಚಿಪ್ಪುಮೀನು, ಮೊಟ್ಟೆ ಮತ್ತು ಹಾಲು.
ಕೀಟಗಳ ಕುಟುಕು: ಜೇನುನೊಣ ಅಥವಾ ಕಣಜ.
ಔಷಧಿಗಳು: ಪೆನ್ಸಿಲಿನ್ ಅಥವಾ ಪೆನ್ಸಿಲಿನ್ ಆಧಾರಿತ ಔಷಧಗಳು.
ಲ್ಯಾಟೆಕ್ಸ್(Latex) ಅಥವಾ ಇತರ ಅಲ್ಲರ್ಜಿಕ್ ವಸ್ತುಗಳು ನೀವು ಸ್ಪರ್ಶಿಸಿದಾಗ ಅಲರ್ಜಿ ಉಂಟಾಗಬಹುದು.

ಅಲರ್ಜಿಗೆ ಕಾರಣಗಳು

ಆನುವಂಶೀಯತೆ: ತಂದೆ ತಾಯಿ ಇಬ್ಬರೂ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದರೆ ಶೇಕಡಾ ಅರವತ್ತರಷ್ಟು ಸಂದರ್ಭಗಳಲ್ಲಿ ಮಗು ಅಲರ್ಜಿಯನ್ನು ಎದುರಿಸಬೇಕಾಗುತ್ತದೆ.
• ಪರಿಸರ ಮಾಲಿನ್ಯ: ವೈದ್ಯಕೀಯ ಸಮೀಕ್ಷೆಗಳ ಪ್ರಕಾರ, ಭಾರತದ 20-30% ಜನರು ಒಂದಿಲ್ಲೊಂದು ಅಲರ್ಜಿಯಿಂದ ಬಳಲುತ್ತಿದ್ದಾರೆ.

 ಅಲರ್ಜಿಯಿಂದ ಆಗುವ ತೊಂದರೆಗಳು: 

ಕಣ್ಣುಗಳ ತುರಿಕೆ, ಕೆಂಪಾಗುವುದು, ಉರಿಯೂತ
ಅಲರ್ಜಿಕ್ ರೈನಿಟಿಸ್ – ಮೂಗಿನ ಉರಿಯೂತ
ಚರ್ಮ: ತುರಿಕೆ, ಗಂಧೆಗಳು, ಇಸುಬು ಇತ್ಯಾದಿ
ಅಲರ್ಜಿಕ್ ಸೈನಸೈಟಿಸ್ – ಸೈನಸ್ ಗಳ ಉರಿಯೂತ
ಶ್ವಾಸನಾಳ ಮತ್ತು ಶ್ವಾಸ ಕೋಶ: ಸೀನು, ಕೆಮ್ಮು, ದಮ್ಮು, ಉಬ್ಬಸ
ಜೀರ್ಣಾಂಗ: ಹೊಟ್ಟೆ ನೋವು, ಹೂಟ್ಟೆಯ ಉಬ್ಬರ, ವಾಂತಿ, ವಾಕರಿಸುವಿಕೆ ಇತ್ಯಾದಿ.
• ಕೆಲವೊಮ್ಮೆ ಅಲರ್ಜಿಯು ಅನಫಿಲಾಕ್ಸಿಸ್ ನಂತಹ ಗಂಭೀರ ಪರಿಸ್ಥಿತಿಗೆ ಕಾರಣವಾಗಬಹುದು, ಆಗ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ.

 ಅಲರ್ಜಿ ತಡೆಗಟ್ಟುವಿಕೆ ಸಲಹೆಗಳು

• ಅಲರ್ಜಿಯನ್ನು ಉಂಟುಮಾಡುವ ಆಹಾರವನ್ನು ಸೇವಿಸಬೇಡಿ.
• ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸಿ/ಕುಡಿಯಿರಿ.
• ಮೂಗಿನ ಹೊಳ್ಳೆಗಳನ್ನು ತೊಳೆಯುವುದು ಅಲರ್ಜಿಯನ್ನು ತಡೆಯಲು ಸಹಾಯ ಮಾಡುತ್ತದೆ.
• ಸಾರಭೂತ ತೈಲಗಳು (essential oil) ಮತ್ತು ಅರೋಮಾಥೆರಪಿ ಮತ್ತೊಂದು ಉತ್ತಮ ಪರಿಹಾರವಾಗಿದೆ.
• ಸಾಕಷ್ಟು ವಿಟಮಿನ್ ಸಿ ಇರುವ ಆಹಾರವನ್ನು ಸೇವಿಸಿ.
• ಪುದೀನಾವನ್ನು ವಿಶೇಷವಾಗಿ ಚಹಾ ರೂಪದಲ್ಲಿ ಸೇವಿಸಿ.
• ಸಾರಭೂತ (essential oil) ತೈಲಗಳಿಂದ ತುಂಬಿದ ಉತ್ತಮ, ಬಿಸಿ ಸ್ನಾನ ಮಾಡಿ.

ಸಾಮಾನ್ಯವಾಗಿ ಅಲರ್ಜಿ ಯನ್ನು ಹೋಮಿಯೋಪತಿ ಔಷದಿಗಳು ಯಾವುದೇ ಅಡ್ಡ ಪರಿಣಾಮಗಳಿಲ್ಲದೆಯೇ ಕಾಯಿಲೆಯನ್ನು   ಗುಣಪಡಿಸುತ್ತದೆ.  ಹೋಮಿಯೋಪತಿ ವೈದ್ಯಕೀಯ ಪದ್ದತಿಯಲ್ಲಿ ವಿವಿಧ ತರಹದ ಅಲರ್ಜಿಗಳ ಪರಿಹಾರಕ್ಕೆ ಸುಮಾರು 70 ಕ್ಕೂ ಹೆಚ್ಚು ಔಷಧಿಗಳಿವೆ.  ಈ ಔಷಧಿಗಳನ್ನು ಅಲರ್ಜಿ ಪೀಡಿತರ ವ್ಯಕ್ತಿತ್ವ, ದೈಹಿಕ ಲಕ್ಷಣಗಳು ಮತ್ತು ರೋಗಲಕ್ಷಣಗಳ ಆಧಾರದ ಮೇಲೆ ನೀಡಿದರೆ, ವರ್ಷಾನುಗಟ್ಟಲೆ ಸೀನು, ತುರಿಕೆ, ಉಬ್ಬಸ ಇನ್ನಿತರೇ ಅಲರ್ಜಿಗೆ ಸಂಭಂದಿಸಿದ ತೊಂದರೆಗಳು ಹತೋಟಿಗೆ ಬರುತ್ತವಲ್ಲದೇ ತದನಂತರ ಸಂಪೂರ್ಣವಾಗಿ ನಿವಾರಣೆಯಾಗುತ್ತವೆ.

Dr Pattar

ಡಾ. ಪಿ.ವಿ. ಪತ್ತಾರ್
ಕ್ಲಿನಿಕ್: ಮಲ್ಲಿಕಾರ್ಜುನ ದೇವಸ್ಥಾನ ರಸ್ತೆ,
ಮಂಗಳವಾರ ಪೇಟೆ, ರಬಕವಿ-ಬನಹಟ್ಟಿ ತಾಲ್ಲೂಕು,
ಬಾಗಲಕೋಟೆ ಜಿಲ್ಲೆ , ಬನಹಟ್ಟಿ-587311
ಮೊ.: 98456 50169

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!