ಸೂಕ್ಷ್ಮ ನಿರ್ವಹಣೆ -MICROMANAGEMENT ಎಂಬ ಮಾನಸಿಕ ರೋಗದ ಬುಟ್ಟಿ

ಸೂಕ್ಷ್ಮ ನಿರ್ವಹಣೆ (MICROMANAGEMENT)ಎಂಬ ಮಾನಸಿಕ ರೋಗದ ಬುಟ್ಟಿ ವ್ಯಕ್ತಿ ಮತ್ತು ವ್ಯಕ್ತಿಗಳ ನಡು ಕೆಡುಕು ಬಡಿಸಿ ತನ್ನ ಅನಾವಶ್ಯಕತೆಯನ್ನು ಅವಶ್ಯವೆಂದು ತೋರಿಸಿ ಅವಲಂಬನೆಗೆ ಅವಕಾಶ ಕೊಡುತ್ತಿದೆ. ಉದ್ಯೋಗಿಯ ಕನಸು ಪುಡಿ ಮಾಡುವುದಲ್ಲದೆ, ಆತಂಕ, ಅಭದ್ರತೆ, ಖಿನ್ನತೆಯಂತ ರೋಗಗಳಿಗೆ ಒಗ್ಗುತ್ತದೆ ಮತ್ತು ಕುಟುಂಬ ನೆಮ್ಮದಿಗೂ ಭಂಗ ತರಬಹುದು.

ಸೂಕ್ಷ್ಮ ನಿರ್ವಹಣೆ -MICROMANAGEMENT ಎಂಬ ಮಾನಸಿಕ ರೋಗದ ಬುಟ್ಟಿ

ಕೆಲಸಗಾರರ/ಉದ್ಯೋಗಿಗಳ ವ್ಯಕ್ತಿತ್ವ, ಸ್ವಂತಿಕೆ, ಸೃಜನಶೀಲತೆಗೆ ಬಿಗ ಜಡಿದು, ಅವಿಶ್ವಾಸಕ್ಕೆ, ಕೀಳಿರಿಮೆಗೆ, ಕೈ ಹಿಡಿದು, ವ್ಯಕ್ತಿಯ ವರ್ಣರಂಜಿತ ಅನುಭವಕ್ಕೆ ಕೊಳ್ಳಿ ಹಿಡಿದು ಮತ್ತು ಅರೋಗ್ಯಕರ ಬೆಳವಣಿಗೆಯನ್ನು ಕುಂಠಿತಗೊಳಿಸುವ ಅಪಾಯಕಾರಿ ಪ್ರಕ್ರಿಯೆ ಒಂದಿದ್ದರೆ ಅದು “ಸೂಕ್ಷ್ಮ ನಿರ್ವಹಣೆ” ಅಂದರೆ ಇಂಗ್ಲಿಷಿನ “MICROMANAGEMENT”.

ಕೆಲವೇ ದಿನಗಳ ಹಿಂದೆ ನಮ್ಮೊಂದಿಗೆ ಉತ್ಸಾಹದಿಂದ ಮಾತನಾಡಿದ್ದ ವ್ಯಕ್ತಿಯು ಮುಂದಿನ ಇನ್ನೂ ಕೆಲವು ದಿನಗಳ ನಂತರ ಮಂಕಾಗಿದ್ದರೆ, ಬಹುತೇಕವಾಗಿ ನಾವು ಕೆಲಸದ ಒತ್ತಡ, ಕುಟುಂಬ ಸಮಸ್ಯೆ, ಆತನ ಪ್ರೀತಿಯ ಚಟುವಟಿಕೆಗಳಿಗೆ ಸಮಯ ಅಭಾವ ಎಂದೆಲ್ಲಾ ಸಬೂಬುಗಳನ್ನು ಆತನ ಸ್ನೇಹಿತರ ವಲಯದಿಂದ ಕೇಳಿಸಿಕೊಳ್ಳುತ್ತೇವೆ. ಕೆಲಸದ ಒತ್ತಡ ಇಂದಿನ ದಿನಗಳಲ್ಲಿಅನಿವಾರ್ಯವಾಗಿದ್ದರಿಂದ ವಿಶೇಷತೆಯ ಸ್ಥಾನದಿಂದ ಕೆಳಗಿಳಿದಿದೆ. ಈ ನಡುವೆ “ಸೂಕ್ಷ್ಮ ನಿರ್ವಹಣೆ” (MICROMANAGEMENT) ಎಂಬ ಮಾನಸಿಕ ರೋಗದ ಬುಟ್ಟಿಯೊಂದು ನಿಶ್ಯಬ್ದವಾಗಿ ವ್ಯಕ್ತಿ ಮತ್ತು ವ್ಯಕ್ತಿಗಳ ನಡು ಕೆಡುಕು ಬಡಿಸಿ ತನ್ನ ಅನಾವಶ್ಯಕತೆಯನ್ನು ಅವಶ್ಯವೆಂದು ತೋರಿಸಿ ಅವಲಂಬನೆಗೆ ಅವಕಾಶ ಕೊಡುತ್ತಿದೆ.

ಸರ್ವೋತ್ತಮನ ಕನ್ನಡಿ

ಅನೇಕ ಕಡೆಗಳಲ್ಲಿ ತಾನೊಬ್ಬನೇ ಉತ್ತಮ ಎಂದು ತೋರಿಸುವ ಜಾಯಮಾನದವರು ಕಾಣಸಿಗುತ್ತಾರೆ. ಉದ್ಯೋಗದ ಕ್ಷೇತ್ರದಲ್ಲಿ ಇಂಥ ತೋರಿಕೆಯ ಕೆಲಸಗಾರರು ಇತ್ತೀಚೆಗೆ ಮೇಲಾಧಿಕಾರಿಗಳ ರೂಪದಲ್ಲಿ ನಕಾರಾತ್ಮದ ಬಾಗಿಲನ್ನು ತೆರೆದು ಸ್ವಾಗತಕ್ಕೆ ತಯಾರಾಗಿದ್ದಾರೆ. ಉತ್ತಮ ಉದ್ಯೋಗಿಗಳ ವಿಭಿನ್ನಶೈಲಿಯ ಸಾಧನೆಗೆ ಸಂಕಟ ತಂದೊಡ್ಡುವ ಈ ದರಿದ್ರ ಮನಸ್ಥಿತಿಯನ್ನು ಮಹಾ ಮಾರಿ ಕೊರೋನಾ ಗಟ್ಟಿಗೊಳಿಸಿದೆ. ನಂಬಿಕೆಯ ಗೋಡೆಯನ್ನು ನಂಬದ “ಸೂಕ್ಷ್ಮ ನಿರ್ವಹಣೆ” ಉದ್ಯೋಗಿಯ ಕನಸು ಪುಡಿ ಮಾಡುವುದಲ್ಲದೆ, ಉದ್ಯೋಗಿಗಳ, ವ್ಯವಸ್ಥಾಪಕರ ಮತ್ತು ನಿರ್ವಾಹಕರ ಮಧ್ಯ ದೊಡ್ಡ ಕೊಳಚೆ ಚರಂಡಿ ನಿರ್ಮಿಸಿದೆ.

ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತದೆ ಎಂಬ ಗಾದೆ ಮಾತು ಈ ವ್ಯವಸ್ಥೆ ಅರ್ಥಮಾಡುವ ವೇಳೆ ಅನೇಕ ಕಡೆ ಕಾಲ ಮಿಂಚಿ ಹೋಗಿರುತ್ತದೆ. ನಂಬಿಕೆ, ಪ್ರೀತಿ ವಿಶ್ವಾಸಗಳು ಒನ್ ವೇ ಯಾಗಿರದೆ ದ್ವಿಮುಖ ರಸ್ತೆಯಾದರೆ ಉಪಯೋಗ ಜಾಸ್ತಿ. ಆದರೆ ಈ “ಸೂಕ್ಷ್ಮ ನಿರ್ವಹಣೆ” ಅಪನಂಬಿಕೆಯ ಆಹ್ವಾನವನ್ನು ಹಂಚುತ್ತಿದೆ. ಉತ್ತಮ ಆಲೋಚನೆಗಳು ಹೊರಬರುವ ಮತ್ತು ಉತ್ತಮ ವಾಯು ರೀತಿಯಲ್ಲಿ ಹಂಚಿಕೆಯಾಗುವ ಎಲ್ಲಾ ಸಾಧ್ಯತೆಗಳನ್ನು ಬೇರು ಸಹಿತ ನಾಶಪಡಿಸು ತ್ತಿದೆ.

ದೇಹದಲ್ಲಿನ ಸಂವಹನ

ನಮ್ಮ ಸುಖ, ದುಃಖ ಸೇರಿದಂತೆ ದೇಹದೊಳಗಿನಿಂದ ಸಂವಹನ ಮಾಡುವ ಅನೇಕ ವಿಭಾಗಗಳಲ್ಲಿ ನಮ್ಮ ಸ್ವಂತ ಶೈಲಿಯು ಒಂದು ಈ ಶೈಲಿಯನ್ನು ಒತ್ತಡದಿಂದ ಮಿತಿಗೊಳಿಸಿದಾಗ ಒಟ್ಟು ಮನುಷ್ಯನ ಸಾಮರ್ಥ್ಯವು ಕುಗ್ಗುತ್ತದೆ. ಆತಂಕ, ಅಭದ್ರತೆ, ಖಿನ್ನತೆಯಂತ ರೋಗಗಳಿಗೆ ಒಗ್ಗುತ್ತದೆ ಮತ್ತು ಕುಟುಂಬ ನೆಮ್ಮದಿಗೂ ಭಂಗ ತರಬಹುದು.ಅಂತಿಮವಾಗಿ ಇದಕ್ಕೆಲ್ಲ ಮೂಲ ಮೈಕ್ರೋಮ್ಯಾನೇಜ್ಮೆಂಟ್ ನಂತ ಕೆಟ್ಟ ಕಾರ್ಯ ವಿಧಾನ. ಮತ್ತು ಅನುಷ್ಠಾನಕ್ಕೆ ಹಾತೊರೆಯುತ್ತಿರುವ ಅನಾರೋಗ್ಯದ ಮನಸ್ಸುಗಳು. “ಸೂಕ್ಷ್ಮ ನಿರ್ವಹಣೆ” ಹೆಸರಿನಲ್ಲಿ ನಿರಂತರವಾಗಿ ತಿದ್ದುವ ಕೆಲಸ ತಿದ್ದಿಸಿಕೊಳ್ಳುವವರಿಗಿಂತ ತಿದ್ದಿಸುವಾತನ ಸಾಮರ್ಥ್ಯದ ಮೇಲೆ ಸಂಶಯ ಹುಟ್ಟಿಸುತ್ತದೆ.

ಯಾವುದೇ ಉದ್ಯೋಗಿಗಾದರೂ ಅಥವಾ ಯಾವುದೇ ವೃತಿಯವರಿಗಾದರೂ ಕೆಲಸದೊಂದಿಗೆ ಪ್ರೀತಿ ಹುಟ್ಟಿಸುವ ಕೆಲಸಗಳು ನಡೆಯಬೇಕು. ದೀರ್ಘಕಾಲಕ್ಕೆ ನಮ್ಮನ್ನು ಯಶಸ್ವಿಯಾಗಿ ಮುನ್ನಡೆಸುವುದು ಮೆಚ್ಚಿನ ವೃತ್ತಿಪರತೆ. ವಿರೋಧ ಪದಗಳಿಂದ ಜಿಗುಪ್ಸೆ ಹುಟ್ಟಿಸುವ, ಸ್ವಂತಶಕ್ತಿ, ಸಾಮರ್ಥ್ಯ,ವಿಶ್ವಾಸವನ್ನೇ ಅನುಮಾನಕ್ಕೆ ದೂಡಿ ಮರು ಪ್ರಶ್ನೆ ಹಾಕಿಸುವ ಈ ಅವಿಶ್ವಾಸದ ಬಂಟ ಸ್ವಂತ ಶಕ್ತಿಯಿಂದ ಮುಂದೆ ಬರುವ ಪ್ರತಿಭೆಗಳಿಗೆ ಮೈಕ್ರೊಮ್ಯಾನೇಜ್ಮೆಂಟ್ ಮಾಡುತ್ತಿರುವ ವ್ಯಕ್ತಿಯ ಮೇಲೆ ಹೆಚ್ಚು ಅವಲಂಬಿತವಾಗಿಸುತ್ತದೆ. ಪರಿಣಾಮ ಸುಧಾರಣೆಗಳಿಗಿಂತ ಗುಲಾಮಗಿರಿ ಪ್ರವೃತಿಗೆ ದೂಡುವ ಆತಂಕಕಾರಿ ಪರಿಪಾಠ ಬೆಳೆಯುತ್ತಿದೆ.

Also Watch: ಮಕ್ಕಳ ಭವಿಷ್ಯ ಉತ್ತಮವಾಗಿರಲು ಪಾಲಕರಿಗೆ ಸಲಹೆಗಳು

ಕೌಶಲ್ಯದ ಕೈಗಳಿಗೆ ಕೋಳ

ಉದ್ಯೋಗಿಗಳ ಕೌಶಲ್ಯದ ಕೈಗಳನ್ನು ಕಟ್ಟಿ ಹಾಕುತ್ತ ಅವರ ಸ್ವಾವಲಂಬನೆಯನ್ನು ಕಸಿದುಕೊಳ್ಳುತ್ತಿರುವ ಮತ್ತು ಕೆಲವೇ ಮಂದಿ ಬೆಳೆಯಲು ಅವಕಾಶ ಕೊಡುವ ವಿಕಾರ ಮನಸ್ಸಿನ ರೂಪ ದರ್ಶನ ಕೊಡುವ ಮೈಕ್ರೋಮ್ಯಾನೇಜ್ಮೆಂಟ್ ದಿನನಿತ್ಯ ಬೆಳಗುವ ಸೂರ್ಯ ಚಂದ್ರನಂತಿರಬೇಕಾದ ಪ್ರತಿಭೆಗಳನ್ನು ಗ್ರಹಣ ಬಡಿದಂತೆ ಮಾಡುವ ತಪ್ಪು ದಾರಿಯ ದಿಕ್ಸೂಚಿ ಮತ್ತು ಉದ್ಯೋಗಿಗಳ ಸ್ವಾತಂತ್ರ್ಯವನ್ನು ಕಬಳಿಸುವ ಒಂದು ಅನಿಷ್ಟ ವ್ಯವಸ್ಥೆ. ಹೊಸತನವು ಪ್ರಗತಿಗೆ ಪ್ರಮುಖವಾದ ರಹದಾರಿ. ಮೈಕ್ರೊಮ್ಯಾನೇಜ್ಮೆಂಟ್ ವ್ಯವಸ್ಥೆ ಸಮೃದ್ಧಿಯ ಬೆಳವಣಿಗೆ ಮತ್ತು ಪ್ರಗತಿಯ ರಹದಾರಿಯನ್ನು ಹಾಳುಮಾಡುತ್ತದೆ.

Also Read: ಲೈಫ್‍ನ ಫಾರ್ಮುಲಾ – ಗುರಿ ಇಲ್ಲದೇ ಸಾಧನೆ ಅಸಾಧ್ಯ.

ನಂಬಿಕೆ ಮತ್ತು ನಿರಂತರ ಮೇಲ್ವಿಚಾರಣೆಯಿಲ್ಲದೆ ಸುಗಮವಾಗಿ ಕೆಲಸವನ್ನು ಕೊಂಡೊಯ್ಯುವ ಕೌಶಲ್ಯಗಳು ನಮ್ಮಲ್ಲಿ ಬೆಳೆಯಬೇಕೆ ಹೊರತು ಸುಲಭ ಕೆಲಸಗಳನ್ನು ಕೊಳ್ಳಿ ಇಡುವ ಕೌಶಲ್ಯಗಳಲ್ಲ. ಅದಾದರೆ, ಹೆಚ್ಚಿನ ಉಲ್ಲಾಸ, ಸ್ವಾತಂತ್ರ್ಯದೊಂದಿಗೆ, ಸೃಜನಶೀಲತೆ, ನಾವೀನ್ಯತೆ ಮತ್ತು ಉತ್ಪಾದಕತೆಯು ವರ್ಣರಂಜಿತವಾಗಿ ಆಶ್ಚರ್ಯಗೊಳಿಸುತ್ತದೆ. ನಿರ್ಮಲ ಮಾನಸಿಕ ವ್ಯವಸ್ಥೆ ಬಿಳಿ ಹಾಳೆಯಂತೆ ಅದರಲ್ಲಿ ಒಳ್ಳೆಯ ವಿಚಾರಗಳನ್ನು ಬರೆದಿಡಲು ಅವಕಾಶ ಇದ್ದೆ ಇದೆ.

Devaraya-prabhu

 ಉ. ದೇವರಾಯ ಪ್ರಭು

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!