ಪಿರಮಿಡ್ ಯಂತ್ರ – ಸಕಲ ದೋಷಗಳ ಪರಿಹಾರಕ್ಕೆ ಹೋಲಿಸ್ಟಿಕ್ ಪರಿಕಲ್ಪನೆ

ಪಿರಮಿಡ್ ಯಂತ್ರ ಸಕಲ ದೋಷಗಳ ಪರಿಹಾರಕ್ಕೆ ಹೋಲಿಸ್ಟಿಕ್ ಪರಿಕಲ್ಪನೆಯ ಪ್ರಾಚೀನ ಪದ್ದತಿ. ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಸ್ವಾಸ್ಥ್ಯ ಇವುಗಳ ವೃದ್ದಿ ಮತ್ತು ಸುಧಾರಣೆಗಳು ಪಿರಮಿಡ್ ಯಂತ್ರದಿಂದ ಖಂಡಿತಾ ಸಾಧ್ಯ ಎಂಬುದು ಸಾಬೀತಾಗಿದೆ. ಬಹುತೇಕ ಸಮಸ್ಯೆಗಳ ನಿವಾರಣೆಗೆ ಇದು ಸಹಕಾರಿ. ಇದು ತುಂಬಾ ಪರಿವರ್ತನಶೀಲ ಮೈಂಡ್ ಪವರ್ ಟೂಲ್. 

pyramid

ಸಕಲ ದೋಷಗಳ ಪರಿಹಾರಕ್ಕೆ ಹೋಲಿಸ್ಟಿಕ್ ಪರಿಕಲ್ಪನೆಯ ಪ್ರಾಚೀನ ಪದ್ದತಿಯೇ ಪಿರಮಿಡ್ ಯಂತ್ರ. ಇದೊಂದು ರೆವೊಲ್ಯೂಷನರಿ ಪವರ್ ಟೂಲ್. ಪಿರಮಿಡ್ ಯಂತ್ರಗಳು ಬದುಕಿನ ಏಳಿಗೆಗೆ ಶೇಕಡ 100ರಷ್ಟು ಫಲಿತಾಂಶ ಸಾಧನೆಯನ್ನು ದೃಢಪಡಿಸಿದೆ. ಶಿಕ್ಷಣ, ಜ್ಞಾನ, ಆಧ್ಯಾತ್ಮ, ವ್ಯಾಪಾರ, ಕುಟುಂಬ, ಬಂಧು-ಮಿತ್ರರ ಸಂಬಂಧ, ಆರೋಗ್ಯ, ಯಶಸ್ಸು ಮತ್ತು ನೆಮ್ಮದಿ, ಹಣ ಲಾಭ, ಅನುಕೂಲ, ಉದ್ಯೋಗ, ಕೀರ್ತಿ, ವಿವಾಹ, ಪುತ್ರ ಸಂತಾನ, ವಾಸ್ತು ದೋಷಗಳ ನಿವಾರಣೆ, ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಸ್ವಾಸ್ಥ್ಯ ಇವುಗಳ ವೃದ್ದಿ ಮತ್ತು ಸುಧಾರಣೆಗಳು ಪಿರಮಿಡ್ ಯಂತ್ರದಿಂದ ಖಂಡಿತಾ ಸಾಧ್ಯ ಎಂಬುದು ಸಾಬೀತಾಗಿದೆ.

ಇದು ಜೆಟ್ ಯುಗ. ಎಲ್ಲವೂ ಜೆಟ್‍ನಂತೆ ಸೂಪರ್ ಫಾಸ್ಟ್. ಇಂದಿನ ಆಧುನಿಕ ಜೀವನದಲ್ಲಿ ಸೌಲಭ್ಯ, ಸೌಕರ್ಯ-ಸವಲತ್ತುಗಳು ಹೆಚ್ಚಾದಂತೆಲ್ಲಾ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗುತ್ತಾ ಹೋಗುತ್ತಿವೆ. ವಿದ್ಯಾಭ್ಯಾಸ, ಉದ್ಯೋಗ, ವ್ಯಾಪಾರ, ವಿವಾಹ, ಸಂತಾನ, ಆರೋಗ್ಯ ಇತ್ಯಾದಿಗೆ ಸಂಬಂಧಿಸಿದಂತೆ ತೊಡಕು-ತೊಂದರೆಗಳು ಉಲ್ಬಣಗೊಳ್ಳುತ್ತಿದೆ. ಈ ಸಕಲ ದೋಷ ಪರಿಹಾರಕ್ಕಾಗಿ ಮತ್ತು ಮನುಕುಲದ ಅಭಿವೃದ್ದಿಗಾಗಿ ಅನೇಕ ಸಂಶೋಧನೆಗೆಳು ಮತ್ತು ಪ್ರಯೋಗಗಳು ನಡೆಯುತ್ತಲೇ ಇವೆ.

ಪಿರಮಿಡ್ ಯಂತ್ರ ಸಕಲ ದೋಷಗಳ ಪರಿಹಾರಕ್ಕೆ

ಬದುಕುವ ಹೋಲಿಸ್ಟಿಕ್ ಪರಿಕಲ್ಪನೆಯ ಅರಿವಿನ ಕೊರತೆಯಿಂದಾಗಿ ರಾಸಾಯನಿಕಗಳು, ಮಾಲಿನ್ಯ ಮತ್ತು ಪರಮಾಣು ವಿಕಿರಣದೊಂದಿಗೆ ನಮ್ಮ ಅಮೂಲ್ಯ ದೇಹವನ್ನು ನಾವು ಹಾಳು ಮಾಡಿಕೊಳ್ಳುತ್ತಿದ್ದೇವೆ. ಇಂಥ ಭೌತಿಕ ಮತ್ತು ಮಾನಸಿಕ ದುಷ್ಟರಿಣಾಮಗಳನ್ನು ಸರಿಪಡಿಸಲು ಅಭಿವೃದ್ದಿಪಡಿಸಿರುವ ಪ್ರಾಚೀನ ಪದ್ದತಿಯೇ ಪಿರಮಡ್ ಯಂತ್ರ ವ್ಯವಸ್ಥೆ. ಪಿರಮಿಡ್ ಯಂತ್ರವು ಈಜಿಪ್ಟ್ ನ ಪ್ರಾಚೀನ ಪಿರಮಿಡ್‍ಗಳನ್ನೇ ಹೋಲುತ್ತಿದ್ದು, ಕ್ರಾಂತಿಕಾರಿ ಶಕ್ತಿ ಸಾಧನವಾಗಿದೆ. ದಿನ ನಿತ್ಯದ ಸಮಸ್ಯೆಗಳ ಉತ್ತಮ ನಿವಾರಣೆಗಾಗಿ ಯಾರು ಬೇಕಾದರೂ ತಮ್ಮ ಜೀವನದಲ್ಲಿ ಪ್ರಾಯೋಗಿಕವಾಗಿ ಈ ವಿಧಾನವನ್ನು ಅನುಷ್ಠಾನಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದರ ಫಲಿತಾಂಶ ತುಂಬಾ ವೇಗವಾದುದು. ಬಹುತೇಕ ಸಮಸ್ಯೆಗಳ ನಿವಾರಣೆಗೆ ಇದು ಸಹಕಾರಿ. ಇದು ತುಂಬಾ ಪರಿವರ್ತನಶೀಲ ಮೈಂಡ್ ಪವರ್ ಟೂಲ್. ಈ ಮನಸ್ಸಿನ ಶಕ್ತಿ ಸಾಧನವು ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕ ಸ್ವಾಸ್ಥ್ಯಕ್ಕೆ ಪೂರಕ. ಯೋಗ, ಧ್ಯಾನ, ಹೀಲಿಂಗ್, ಜೋತಿಷ್ಯ, ವಾಸ್ತು, ಫೆಂಗ್ ಶುಯಿ, ಸಂಖ್ಯಾಶಾಸ್ತ್ರ, ಕಲರ್ ಹೀಲಿಂಗ್, ಯಜ್ಞ, ಮನಸ್ಸಿನ ಉಪ ಪ್ರಜ್ಞೆ ಶುದ್ದತೆಯ ಪರಿಣಾಮಗಳನ್ನು ವೃದ್ದಿಸುತ್ತದೆ.

ಪಿರಮಿಡ್ ಯಂತ್ರ  ಧನಾತ್ಮಕ ಶಕ್ತಿಯ ವರ್ಧನೆ 

ಪಿರಮಿಡ್ ಯಂತ್ರವು ಪಿರಮಿಡ್‍ನ ಪುಟ್ಟ ರೂಪವಾಗಿದೆ. ಇದು ಪುರುಷ ಮತ್ತು ಪ್ರಕೃತಿ ಶಕ್ತಿಯ ಸಮತೋಲನ ಕಾಯ್ದುಕೊಳ್ಳುವಲ್ಲಿ ನೆರವಾಗಿತ್ತದೆ. ಪ್ರಾಚೀನ ದೇಗುಲಗಳು, ಚರ್ಚ್ ಮತ್ತು ಮಸೀದಿಗಳಲ್ಲಿ ಪಿರಮಿಡ್ ವಾಸ್ತುಶಿಲ್ಪವನ್ನು ಕಾಣಬಹುದು. ಇದರ ಮುಖ್ಯ ಉದ್ದೇಶ ಧನಾತ್ಮಕ ಶಕ್ತಿಯ ವರ್ಧನೆ ಮತ್ತು ಋಣಾತ್ಮಕ ಶ್ಕತಿಯ ಮೂಲೋತ್ಪಾಟನೆ. ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶ ಈ ಪಂಚಭೂತಗಳ ಸಂಯೋಜನೆಯನ್ನು ಪಿರಮಿಡ್ ಹೊಂದಿರುತ್ತದೆ. ಪಿರಮಿಡ್‍ನಲ್ಲಿರುವ ಕಾಸ್ಮಿಕ್ ಶಕ್ತಿಯು ಋಣಾತ್ಮಕ ಅಂಶಗಳನ್ನು ಧನಾತ್ಮಕ ಅಂಶಗಳಾಗಿ ಪರಿವರ್ತನೆ ಮಾಡುತ್ತದೆ. ಪಿರಮಿಡ್ ಯಂತ್ರದಿಂದ ಸರ್ವ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು. ಅನಾರೋಗ್ಯ, ವಾಹನ ಕಂಟಕ ದೋಷ, ಪುತ್ರಿಗೆ ವಿವಾಹ ಅಡ್ಡಿ, ಸತಿಪತಿ ಕಲಹ, ಕೋರ್ಟ್ ವ್ಯಾಜ್ಯಗಳ ಇತ್ಯರ್ಥ, ವಿದ್ಯಾ ಭಂಗ, ಗೃಹ ನಿರ್ಮಾಣಕ್ಕೆ ಅಡಚಣೆ, ವಾಸ್ತುದೋಷ, ಗೃಹದೋಷ, ಮಾಟ ಮಂತ್ರ, ಬಾನಮತಿ, ವಾಮಚಾರಗಳ ಉಪಟಳ, ಸಕಲ ಗ್ರಹದೋಷ ಈ ಎಲ್ಲ ಸಮಸ್ಯೆ-ತೊಂದರೆಗಳ ಉಪಶಮನಕ್ಕೆ ಪಿರಮಿಡ್ ಯಂತ್ರ ಸಹಕಾರಿ.

ಹಿಂದಿನ ಕಾಲದಲ್ಲಿ ಅನೇಕ ಋಷಿ ಮುನಿಗಳು ಮತ್ತು ಯತಿವರ್ಯರು ಕಾಡು ಮೇಡು ಅಲೆದು, ದಟ್ಟ ಅರಣ್ಯಗಳಲ್ಲಿ ಸಂಚರಿಸಿ ಅಲ್ಲಿನ ಆದಿವಾಸಿಗಳು ಮತ್ತು ಬುಡಕಟ್ಟು ಜನರನ್ನು ಸಂಪರ್ಕಿಸಿ ಸಹಸ್ರಾರು ಅಮ್ಯೂಲ ಗಿಡಮೂಲಿಕೆಗಳನ್ನು ಖುದ್ದಾಗಿ ಸಂಗ್ರಹಿಸುತ್ತಿದ್ದರು. ಹೀಗೆ ಸಂಗ್ರಹಿಸಿದ ಗಿಡಮೂಲಿಕೆಗಳನ್ನು ಸಕಲ ದೋಷ ಪರಿಹಾರಕ್ಕಾಗಿ ಮತ್ತು ಪ್ರಗತಿಯ ಮಾರ್ಗಕ್ಕಾಗಿ ಪಿರಮಿಡ್ ಯಂತ್ರವನ್ನು ವಿಶಿಷ್ಟವಾಗಿ ಸಿದ್ದಪಡಿಸುತ್ತಿದ್ದರು. ಈ ಗಿಡ ಮೂಲಿಕೆಗಳ ಹೋಮ ಹವನ, ಯಾಗಗಳ ಮೂಲಕ ಅವುಗಳ ಸಾರವನ್ನು ತೆಗೆದು ಪಿರಮಿಡ್ ಯಂತ್ರದಲ್ಲಿ ಶಕ್ತಿ ರೂಪದಲ್ಲಿ ಅಳವಡಿಸಿ ಲೋಕ ಕಲ್ಯಾಣಕ್ಕಾಗಿ ಸಿದ್ದ ಮಾಡಿ ಕೊಡುತ್ತಿದ್ದರು. ಇದನ್ನು ದೇವರ ಮನೆಯಲ್ಲಿ, ಪೂಜಾ ಕೊಠಡಿಯಲ್ಲಿ, ನೀವು ಕೆಲಸ ಮಾಡುವ ಸ್ಥಳಗಳಲ್ಲಿ ಅಥವಾ ನಿಮ್ಮ ವಾಣಿಜ್ಯ ವಹಿವಾಟು ಕೇಂದ್ರದಲ್ಲಿ ಇರಿಸಿದರೆ ಸರ್ವ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಅನಾದಿಕಾಲದಿಂದ ಹಿಡಿದು ಆಧುನಿಕ ಯುಗವರೆಗೂ ಇದ್ದೇ ಇದೆ.

Also read: ಜಿಯೋ ವೆಲ್‍ನೆಸ್ – ಒತ್ತಡ ರಹಿತ ಜೀವನ ಮತ್ತು ಬದುಕಿನ ಸಂತೃಪ್ತಿಗಾಗಿ 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!