ಮೂಲವ್ಯಾಧಿಯಲ್ಲಿ ಆಹಾರ ಪದ್ಧತಿ /ಪಾಲನೆ ಬಹಳ ಮುಖ್ಯ. ಪಾಲನೆ ಮಾಡಬಹುದಾದ ಆಹಾರ ವಿಹಾರಗಳು ಮತ್ತು ಪಾಲನೆ ಮಾಡಬಾರದಾದ ಆಹಾರ ವಿಹಾರ ಪದ್ದತಿಗಳ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
ಪಾಲನೆ ಮಾಡಬಹುದಾದ ಆಹಾರ ವಿಹಾರಗಳು
ಬೆಣ್ಣೆ ತೆಗೆದು ತಾಜಾ ಮಜ್ಜಿಗೆ ದಿನನಿತ್ಯ ಬಳಕೆ.
ದಿನನಿತ್ಯ ಬೆಳಿಗ್ಗೆ 1 ರಿಂದ 2 ಲೀಟರ್‍ನಷ್ಟು. ಸ್ವಲ್ಪ ಬಿಸಿ / ಅಲ್ಪ ಬಿಸಿ / ಉಗುರು ಬೆಚ್ಚಗಿರುವ ನೀರನ್ನು ಕುಡಿಯಬೇಕು.
ಅಜೀರ್ಣ, ಅಪಚನ, ಮಲಬದ್ಧತೆಯಾಗದಂತೆ ನೋಡಿಕೊಳ್ಳಬೇಕು.
ಹಳೆಯ ಅಕ್ಕಿ, ಗೋಧಿ, ಜೋಳ ಇತ್ಯಾದಿಗಳನ್ನು ಬಳಕೆ ಮಾಡಬೇಕು. ನೆಲ್ಲಿಕಾಯಿ, ಒಣ ದ್ರಾಕ್ಷಿ, ದಾಳಿಂಬೆ, ಮೊಸಂಬಿ, ಪಕ್ವವಾದ ಬಾಳೆಹಣ್ಣು ಇತ್ಯಾದಿಗಳ ಸೇವನೆ ಮಾಡಬೇಕು.
ಎಲ್ಲ ರೀತಿಯ ಸೊಪ್ಪು ತರಕಾರಿಗಳನ್ನು ಕುದಿಸಿ ತಿನ್ನಬೇಕು.
ನಾರಿನಾಂಸ ಇರುವ ಸೊಪ್ಪು ಪಲ್ಯಗಳನ್ನು ಸೇವಿಸಬೇಕು. ಮೂಲಂಗಿ, ಸೌತೆಕಾಯಿ, ಹಾಗಲಕಾಯಿ, ಗಜ್ಜರಿ, ಮೆಂತೆಪಲ್ಯ, ಸಬ್ಬಸಗಿಪಲ್ಯ, ಪುಂಡಿಪಲ್ಯ, ರಾಜಗೀರಿಪಲ್ಯ, ಬೆಂಡೆಕಾಯಿ, ಕಾರ್ಚಿಕಾಯಿ, ಪಡವಲಕಾಯಿ ಮುಂತಾದವುಗಳು ಸೇವಿಸಬೇಕು.
ಒಂದು ಅಗಲವಾದ ವೃತ್ತಾಕಾರವಾದ/ಚೌಕಾದ ಬುಟ್ಟಿಯನ್ನು ತೆಗೆದುಕೊಂಡು ಅದರಲ್ಲಿ ಬಿಸಿನೀರನ್ನು ಹಾಕಿ ದಿನಕ್ಕೆ 2 ಬಾರಿ ಅದರಲ್ಲಿ ಕುಳಿತುಕೊಳ್ಳಬೇಕು. ಇದಕ್ಕೆ ಕಟಿಮಜ್ಜನ ಎಂದು ಕರೆಯುತ್ತಾರೆ.
ಅವಶ್ಯಕತೆಗೆ ತಕ್ಕಂತೆ ಹಿತವಾದ ವ್ಯಾಯಾಮ, ಪವನ ಮುಕ್ತಾಸನ ಮತ್ತು ವಾಕಿಂಗಗಳ ಅಭ್ಯಾಸ ಉತ್ತಮವಾಗಿರುತ್ತದೆ ಮತ್ತು ಪ್ರಾಣಾಯಾಮ ಸಹ ಮಾಡಬಹುದು.
Also Read: ಮಲಬದ್ಧತೆ : ಆಹಾರ ಕ್ರಮದಲ್ಲಿನ ಅಬದ್ಧತೆ
ಪಾಲನೆ ಮಾಡಬಾರದಾದ ಆಹಾರ ವಿಹಾರ ಪದ್ದತಿಗಳು:
ಹೊಟ್ಟೆ ಹಸಿಯದೆ ಊಟ ಮಾಡುವುದು.
ಅತಿ ಹೆಚ್ಚು ಕಫಕರ ಮತ್ತು ಪಚನಕ್ಕೆ ಜಡವಾದ ಆಹಾರ ಸೇವನೆ ಮಾಡುವುದು.
ಆಹಾರದಲ್ಲಿ ಅಧಿಕ ಮಾಂಸ, ಮೀನು, ಮಸಾಲೆ ಪದಾರ್ಥ ಮತ್ತು ಮೊಸರು, ಎಳ್ಳು ಬೆಲ್ಲ, ಗೆಣಸು ಸೇವನೆ ಮಾಡಬಾರದು.
ಸರಿಯಾಗಿ ಬೆಯಿಸದ ತಿಂಡಿ ತಿನಿಸುಗಳ ಸೇವನೆ.
ದಿನವೆಲ್ಲ ಸದಾ ವಿಶ್ರಾಂತಿ ಮತ್ತು ಹಗಲು ನಿದ್ರಿಸುವುದು.
ಕೆಲವು ವ್ಯಾಯಾಮ ಮತ್ತು ಧೂಮಪಾನ.
ಮಲಬದ್ಧತೆ : ಪ್ರತಿದಿನ ಮಲವಿಸರ್ಜನೆ ಮಾಡದಿರುವುದು.
ಮಲ ವಿಸರ್ಜನೆ ಮಾಡದೆ ಆಹಾರ ಸೇವನೆ ಮಾಡುವುದು.
ಗುಧ ಪ್ರದೇಶವನ್ನು ಮೇಲಿಂದ ಮೇಲೆ ತುರಿಸುವುದು ಬಟ್ಟೆಯಿಂದ ತಿಕ್ಕುವುದು.
ಶಕ್ತಿಯನ್ನು ಮೀರಿ ಅಧಿಕವಾಗಿ ಭಾರ ಎತ್ತುವುದು.
ಕಚ್ಚಾ ರಸ್ತೆಯಲ್ಲಿ ದ್ವಿಚಕ್ರ ವಾಹನ, ಸೈಕಲ್, ಮೋಟರ ಸೈಕಲ್ ಬಳಕೆ
watch our video: ಮೂಲವ್ಯಾಧಿ /ಪೈಲ್ಸ್ ಎಂದರೇನು? ಮೂಲವ್ಯಾಧಿಗೆ ಪರಿಹಾರವೇನು?
ಡಾ. ಶ್ರೀಧರ ಬ. ವಡ್ಡರ
ಸಹಾಯಕ ಉಪನ್ಯಾಸಕರು
ಶಲ್ಯತಂತ್ರ ವಿಭಾಗ , ಎಸ್.ಡಿ.ಎಮ್. ಟ್ರಸ್ಟ್,
ಎ.ಎಮ್.ಸಿ. ತೇರದಾಳ, ಮೊ: 98453 54220