ಅಡುಗೆ ಮನೆಯಲ್ಲಿ ಪೋಷಕಾಂಶಯುಕ್ತ ಆಹಾರದಿಂದ ಆರೋಗ್ಯ

ಅಡುಗೆ ಮನೆಯಲ್ಲಿ ಪೋಷಕಾಂಶಯುಕ್ತ ಆಹಾರದಿಂದ ಆರೋಗ್ಯ

ಆಯುರ್ವೇದ ಶಾಸ್ತ್ರವು ಪುರಾತನ ವೈದ್ಯಕೀಯ ಶಾಸ್ತ್ರವಾಗಿದ್ದು, ಇಲ್ಲಿ ದೀರ್ಘಕಾಲ ವ್ಯಾಧಿಮುಕ್ತರಾಗಿ ಆರೋಗ್ಯದಿಂದ ಜೀವನ ಸಾಗಿಸಬೇಕಾದರೆ, ಯಾವ ರೀತಿಯಾದ ನಮ್ಮ ಆಹಾರ ಕ್ರಮಗಳು, ಯಾವ ವಿಧವಾದ ವಿಹಾರ ಮತ್ತು ಆಚಾರಗಳನ್ನು ಪಾಲಿಸಬೇಕೆಂದು ಜೊತೆಗೆ ಇವುಗಳನ್ನು ಋತುಗಳಿಗನುಗುಣವಾಗಿ ಯಾವ ರೀತಿಯಾಗಿ ಪಾಲಿಸಬೇಕೆಂದು ಋಷಿಮುನಿಗಳು ಕೂಲಕುಂಶವಾಗಿ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಹೇಳಿದ್ದಾರೆ.

ಇತ್ತಿಚೀನ ದಿನಮಾನಗಳಲ್ಲಿ ಆಧುನಿಕ ಜಗತ್ತಿನಲ್ಲಿ ಅಭಿವೃದ್ದಿ ಹೊಂದಿದ ತಂತ್ರಜ್ಞಾನಗಳ ಬಳಕೆ, ಒಂದೇ ವಿಧಾನವಾದ ಜೀವನ ಶೈಲಿಯಿಂದಾಗಿ, ವ್ಯಾಯಾಮದ ಕೊರತೆಯಿಂದಾಗಿ, ಅತಿಯಾದ ಚಿಂತೆ, ಭಯ, ಮನೋ ಆವಸಾದ, ಮಾನಸಿಕ ಉದ್ವೇಗ ಮತ್ತು ಖಿನ್ನತೆ ಈ ಎಲ್ಲ ಕಾರಣಗಳಿಂದ ಶರೀರದಲ್ಲಿ ವಾತಾದಿ ತ್ರಿದೋಷಗಳು, ರಸರಕ್ತಾದಿ ಸಪ್ತಧಾತುಗಳು ಮತ್ತು ಮನಸ್ಸಿನ ಗುಣಗಳಾದ ಸತ್ವ, ರಜ ಮತ್ತು ತಮೋ ಗುಣಗಳು ಏರು ಪೇರಾಗಿ ವಿವಿಧ ಬಗೆಯ ರೋಗಗಳನ್ನು ಶರೀರದಲ್ಲಿ ಉತ್ಪನ್ನ ಮಾಡುವವು.

aduge-maneyalli-posakansayukta-aharadinda-arogya

ಯಾವುದು ಶರೀರಕ್ಕೆ ಹಿತವಾಗಿರುವುದು ಯಾವುದು ಶರೀರಕ್ಕೆ ಅಹಿತವಾಗಿರುವದು ಯಾವುದು ಸುಖವನ್ನು ಕೊಡುವದು, ಯಾವುದು ದು:ಖವನ್ನುಂಟು ಮಾಡುವದು ಎಂದು ಹೇಳುವ ಶಾಸ್ತ್ರವು ಆಯುರ್ವೇದ ಶಾಸ್ತ್ರವಾಗಿದೆ. ಯಾವ ಶಾಸ್ತ್ರದಲ್ಲಿ ದೀರ್ಘಕಾಲದ ವರೆಗೆ ವ್ಯಾಧಿರಹಿತನಾಗಿ ಯಾವ ವಿಧವಾದ ಆಹಾರ, ವಿಹಾರ ಮತ್ತು ಆಚಾರಗಳನ್ನು ಪಾಲನೆ ಮಾಡಬೇಕೆ0ದು ಹೇಳುವ ಶಾಸ್ತ್ರವೇ ಆಯುರ್ವೇದ.

• ಆರೋಗ್ಯವಂತರ ಆರೋಗ್ಯವನ್ನು/ ಸ್ವಾಸ್ಥ್ಯವನ್ನು ರಕ್ಷಿಸುವದು.
• ಯಾರು ರೋಗಗಳಿಂದ ಬಳಲುತ್ತಿರುವರು ಅಂತಹ ರೋಗಗಳಿಗೆ ಚಿಕಿತ್ಸೆ ನೀಡುವದು ಆಯುರ್ವೇದದ ಉದ್ದೇಶ.

ದೇಹ ಪ್ರಕೃತಿ:

ವಾತ ಪ್ರಕೃತಿ, ಪಿತ್ತ ಮತ್ತು ಕಫ ಪ್ರಕೃತಿ, ದ್ವಂದ್ವ ಪ್ರಕೃತಿ ಮತ್ತು ತ್ರಿದೋಷಜ ಪ್ರಕೃತಿ ಎಂದು ಆಯುರ್ವೇದ ಆಚಾರ್ಯರು ಪ್ರಕೃತಿಗಳ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ. ಪ್ರತಿಯೊಬ್ಬರ ಪ್ರಕೃತಿಯಿಂದ ಅವರ ಸ್ವಭಾವ, ಲಕ್ಷಣಗಳು, ಗುಣಗಳು /ನಡುವಳಿಕೆ ಇತ್ಯಾದಿಗಳ ಪರಿಚಯ ಮತ್ತು ಇವರ ಆಹಾರ, ವಿಹಾರ, ಆಚಾರ ಇವರಿಗೆ ಸಂಭವಿಸುವ ರೋಗಗಳು ಅಥವಾ ತೊಂದರೆಗಳು ಮತ್ತು ಯಾವ ವಿಧವಾದ ಚಿಕಿತ್ಸೆಯನ್ನು ಮಾಡಬಹುದೆಂದು ಪ್ರತಿಯೊಬ್ಬರ ಪ್ರಕೃತಿಯನ್ನು ಅಧ್ಯಯನ ಮಾಡುವದರಿಂದ ನಿರ್ಧರಿಸಲಾಗುವದು.

ದೈನಂದಿನ ಕ್ರಮಗಳು:

• ಪ್ರತಿದಿನ ಬ್ರಾಹ್ಮೀಮೂಹೂರ್ತದಲ್ಲಿ ಎಳುವದು.
• ಸರಿಯಾದ ಸಮಯಾನುಸಾರ ನಿದ್ರೆ, ವ್ಯಾಯಾಮ, ಪ್ರತಿದಿನ ಶರೀರಕ್ಕೆ ಮತ್ತು ತಲೆಗೆ ತೈಲ ಅಭ್ಯಂಜನ.
• ಮಾನಸಿಕ ಸಧೃಡತೆಗಾಗಿ ಯೋಗಾಸನ, ಸೂರ್ಯನಮಸ್ಕಾರ ಪ್ರಾಣಾಯಾಮ ಮತ್ತು ಧ್ಯಾನ.
• ನಿಸರ್ಗದತ್ತವಾದ ಆಹಾರಧಾನ್ಯ, ಪೂಷಕಾಂಶಯುಕ್ತ ಆಹಾರಗಳ ಬಳಕೆ.

1. ನಿದ್ರೆ: ಪ್ರತಿಯೊಬ್ಬರು ಸರಿಯಾಗಿ 6-7 ಘಂ ನಿದ್ರಿಸಬೇಕು. ಸರಿಯಾಗಿ ನಿದ್ರಿಸುವದರಿಂದ ಆರ್ಧ ರೋಗಗಳನ್ನು ತಡೆಯಬಹುದು ಮತ್ತು ಗುಣಪಡಿಸುವದು. ಸ್ವಾಭಾವಿಕ ಮತ್ತು ವೈಕಾರಿಕ ನಿದ್ರಾ ಎಂದು ವಿಭಜಿಸಿ ದೋಷಗಳ ವ್ಯತ್ಯಾಸ ಮತ್ತು ರೋಗಗಳಿಂದ ಉಂಟಾದ ನಿದ್ರೆಯನ್ನು ಅಸ್ವಾಭಾವಿಕ ನಿದ್ರೆ ಹೇಳಲಾಗುವದು.
2. ದಿನಚರ್ಯ: ಬ್ರಾಹ್ಮೀ ಮುಹೋರ್ತದಲ್ಲಿಎಳುವದು, ಶೌಚಕರ್ಮಗಳನ್ನು ಮಾಡುವದು.
3. ಆಭ್ಯಂಗ: ಪ್ರತಿದಿನ ನಿತ್ಯ ಶರೀರದ ತೈಲ ಅಭ್ಯಂಜನದಿಂದ ಶರೀರಪುಷ್ಠಿ, ಧಾತುವರ್ಧಕ, ತ್ವಚೆಯಕಾಂತಿ ಹೆಚ್ಚಿಸುವದು, ಚರ್ಮರೋಗನಾಶ ಮತ್ತು ಆಯುಸ್ಸುವರ್ಧಕ.
4. ವ್ಯಾಯಾಮ: ವಯಸ್ಸಿಗನುಸಾರ ಮತ್ತು ಶಕ್ತಿಗೆ ಅನುಸಾರ ಪ್ರತಿದಿನ ವ್ಯಾಯಾಮ ಮಾಡುವದರಿಂದ ಶರೀರವು ಪುಷ್ಠಿಹೊಂದುವದು ಮತ್ತು ಸದೃಡವಾಗುವದು.
5. ಸ್ನಾನ: ಪ್ರತಿದಿನ ಸ್ನಾನ ಮಾಡುವದರಿಂದ, ಶುಭ್ರವಸ್ತ್ರ ಧಾರಣ ಮತ್ತು ದೇವರ ಪೂಜೆ ಮಾಡುವದರಿಂದ ವ್ಯಯಕ್ತಿಕ ಶುಚಿತ್ವವನ್ನು ಮತ್ತು ಆರೋಗ್ಯವನ್ನು ಹೆಚ್ಚಿಸುವದು, ಶುಭದಾಯಕ ಮತ್ತು ಅಂದಿನ ದಿನ ಉತ್ತಮವಾಗಿ ಯಶಶ್ವಿಯಾಗಿ ಕಳೆಯವದು.
6.ಸಾತ್ವಿಕ ಆಹಾರ: ಹಿತವಾದ, ಮಿತವಾದ ಪೋಷಕಾಂಶಯುಕ್ತ ಶಾಖಾ ಅಹಾರ ಸೇವನೆಯಿಂದ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸುವದು.

ಪೋಷಕಾಂಶಯುಕ್ತ ಆಹಾರ ಸೇವನೆ:
ಮಧುರಾಮ್ಲ ಆದಿ ಷಡ್ಡರಸಯುಕ್ತ ಆಹಾರ, ಅಷ್ಟವಿಧ ಆಹಾರ ವಿಧಾನಗಳಿಗನುಸಾರಾವಾಗಿ ಹಿತವಾದ, ಮಿತವಾದ ಶಾಖಾ ಆಹಾರವನ್ನು ಸೇವಿಸುವದರಿಂದ ಸ್ವಾಸ್ಥ್ಯ ರಕ್ಷಣೆಯಾಗುವದು.
ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವ ಸಂಪೂರ್ಣ ಪೋಷಕಾಂಶ ಒದಗಿಸುವ ಆಹಾರ ವರ್ಗಗಳಾದ ಎಕದಳಧಾನ್ಯ, ದ್ವಿದಳಧಾನ್ಯ, ಕ್ಷೀರವರ್ಗ, ತೈಲವರ್ಗ, ಮಾಂಸವರ್ಗ, ಅನ್ನವರ್ಗ, ಶಾಕವರ್ಗ, ಫಲವರ್ಗ ಘೃತವರ್ಗ ಹೇಳಿದ್ದು ಇವುಗಳ ಸರಿಯಾದ ಸೇವನೆಯಿಂದ ಶರೀರಕ್ಕೆ ಸಂಪೂರ್ಣ ಪೋಷಕಾಂಶ ದೊರಕುವದು ಇದರಿಂದ ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುವದು ಜೊತೆಗೆ ಪೋಷಕಾಂಶ ಕೊರತೆಯಿಂದಾಗುವ ರೋಗಗಳನ್ನು ತಡೆಗಟ್ಟುಬಹುದು.

ಸೂರ್ಯ ನಮಸ್ಕಾರ, ಯೋಗ ಮತ್ತು ಪ್ರಾಣಾಯಾಮ: ಪ್ರತಿದಿನ ಯೋಗ, ಪ್ರಾಣಾಯಾಮ, ಸೂರ್ಯ ನಮಸ್ಕಾರ, ಮತ್ತು ಧ್ಯಾನದಿಂದ ಶಾರೀರಿಕ ಮತ್ತು ಮಾನಸಿಕ ಆರೋಗ್ಯವೃದ್ಧಿ ಹೊಂದುವದು.

ಆಚಾರ ರಸಾಯನ/ ನಿತ್ಯರಸಾಯನ: ಸತ್ಯಭಾಷಣ, ಕ್ರೋಧರಹಿತ, ಆಧ್ಯಾತ್ಮ ಪ್ರವೃತ್ತಿ, ಶಾಂತಚಿತ್ತ ಪ್ರಿಯ, ಮದ್ಯ ಮತ್ತು ಮೈಥುನ ನಿವೃತ್ತ, ಅಹಿಂಸಕ, ಜಪ, ಶೌಚ. ದಾನಿ, ನಿತ್ಯ ತಪಸ್ವಿ, ದೇವರ ಪೂಜೆ, ಗುರು, ಬ್ರಾಹ್ಮಣ ಪೂಜಾ, ಕ್ರೂರರಹಿತ, ದಯಾಮಯಿ, ಅಹಂಕಾರ ರಹಿತ, ಉತ್ತಮ ಆಚಾರ ವಿಚಾರ, ಆಧ್ಯಾತ್ಮಜ್ಞಾನ ಪ್ರವೀಣ, ಪ್ರಾಣಿದಯಾ, ಧರ್ಮಶಾಸ್ತ್ರ ಪಠಣ, ಗುರುಹಿರಿಯರ ಸೇವೆ ಮಾಡುವದು ಮತ್ತು ಕಾಳಜೀ, ಬ್ರಹ್ಮಚರ್ಯ ಪಾಲನೆ, ಉತ್ತಮ ಮಿತ್ರತಾ, ಸೌಮ್ಯ ಶೀಲ ಸ್ವಭಾವ, ಪ್ರತಿದಿನ ಹಾಲು ಮತ್ತು ತುಪ್ಪ ಸೇವಿಸುವದು, ಸ್ವಸ್ಥಕರ, ರಸಾಯನ ಮತ್ತು ಆಯುವರ್ಧಕ.

ಸೇವಿಸಬೇಕಾದಂತಹ ಆಹಾರ ಪಧಾರ್ಥಗಳು: ಷಷ್ಠಿಕಶಾಲಿ, ಸೈಂದವ ಉಪ್ಪು, ಹಳೆ ಅಕ್ಕಿಯ ಅನ್ನ, ಗೋಧಿ, ಜವೆಗೋಧಿ, ಇವುಗಳಿಂದ ತಯಾರಿಸಿದಂತಹ ಆಹಾರಗಳು, ಅಳಲೆಕಾಯಿ, ಬೆಟ್ಟದ ನೇಲ್ಲಿಕಾಯಿ, ದ್ರಾಕ್ಷೀ, ಹೆಸರು, ತುಪ್ಪ, ಹಾಲು, ಜೇನುತುಪ್ಪ, ದಾಳಿಂಬೆ ಇವುಗಳನ್ನು ಯಾವಾಗಲು ಸೇವಿಸಬೇಕು. ಯಾರು ಈ ಆಹಾರ ದ್ರವ್ಯಗಳನ್ನು ಪ್ರತಿದಿನ ಸೇವಿಸುವರು ಅವರು ತಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳುವರು ಮತ್ತು ರೋಗಗಳನ್ನು ತಡೆಯುವವು.

ಇವುಗಳನ್ನು ಬಿಡಬೇಕು: ಅತಿವ್ಯಾಯಾಮ ಅಥವಾ ಅವ್ಯಾಯಮ, ರಾತ್ರಿಜಾಗರಣ, ಹಗಲುನಿದ್ರೆ, ಊಟಾದಮೇಲೆ ಕೂಡಲೆ ನಿದ್ರೆಮಾಡುವದು, ಅತಿಸ್ತ್ರೀಸಂಗ, ಪಾಪಕರ್ಮ, ಅತಿಚಂಕ್ರಮಣ, ಮಧ್ಯಪಾನ, ಧೂಮಪಾನ, ಅತಿಯಾದ ಚಿಂತೆ, ಭಯಪಡುವದು ಮತ್ತು ಸಿಟ್ಟುಮಾಡಿಕೊಳ್ಳುವದು.
ಶರೀರ ರಕ್ಷಣ ಉಪಾಯ:
ಯಾರು ನಿತ್ಯ ಹಿತಕರವಾದ ಆಹಾರ, ವಿಹಾರ ಮತ್ತು ಆಚಾರಗಳನ್ನು ಪಾಲಿಸುವರು ಮತ್ತು ಆಯುರ್ವೇದ ಶಾಸ್ತ್ರದಲ್ಲಿ ಹೇಳಿದಂತಹ ದಿನಚರ್ಯ ಮತ್ತು ಋತುಚರ್ಯದಲ್ಲಿ ತಿಳಿಸಿದ ಸ್ವಸ್ಥ ಸಂರಕ್ಷಣೆ ಸೂತ್ರಗಳನ್ನು ಪಾಲಿಸುವರು.
ಆಯುರ್ವೇದ ಶಾಸ್ತ್ರದಲ್ಲಿ ಅನೇಕ ವಿಧವಾದ ಆಹಾರ ಕಲ್ಪಗಳನ್ನು ಹೇಳಿದ್ದಾರೆ, ಅಶಿತ, ಪೀತ, ಲಿಡ್ ಮತ್ತು ಖಾದಿತಂ ಎಂದು ಮತ್ತು ಶಾಖಾವರ್ಗ, ಫಲವರ್ಗ, ಎಕದಳಧಾನ್ಯ, ದ್ವಿದಳಧಾನ್ಯ, ಕ್ಷೀರವರ್ಗ, ಮಾಂಸವರ್ಗ ಇತ್ಯಾದಿ ವರ್ಗಗಳನ್ನು ಆಯುರ್ವೇದ ಶಾಸ್ತ್ರಕಾರರು ವಿವರವಾಗಿ ತಿಳಿಸಿದ್ದಾರೆ.

ಉತ್ತಮ ಆರೋಗ್ಯಕ್ಕಾಗಿ ಹಣ್ಣು, ತಾರಕಾರಿ ಮತ್ತು ಹಸಿರು ಸೊಪ್ಪು ದೇಹದ ಆರೋಗ್ಯವನ್ನು ಹೆಚ್ಚಿಸುವದು ಋತುಗಳಿಗೆ ಅನುಸಾರ ಮತ್ತು ಕಾಲಾನುಸಾರ ಯಾವ ವಿಧವಾದ ಆಹಾರಗಳನ್ನು ಉಪಯೋಗಿಸಬೇಕು ಎಂದು ತಿಳಿಸಿದ್ದಾರೆ. ಆಹಾರ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು, ಯಾವ ವಿಧಾವಾಗಿ ಆಹಾರವನ್ನು ಸೇವಿಸಬೇಕು ಮತ್ತು ಅದರ ಲಾಭಗಳನ್ನು, ಮಾತ್ರಾಪೂರ್ವಕ, ಕಾಲಕ್ಕೆ ತಕ್ಕಂತೆ, ಇಷ್ಟವಾದಂತಹ, ಗಡಿಬಿಡಿಯಿಂz ಅಲ್ಲದೆ, ನಿಧಾನವಾಗಿ ಆಹಾರವನ್ನು ಸೇವಿಸದೆ ಮನಪೂರ್ವಕವಾಗಿ ಆಹಾರವನ್ನು ಸೇವಿಸಬೇಕು.

ನಾವು ಸೇವಿಸುವ ಅಹಾರ 6 ರಸಗಳನ್ನು ಹೊಂದಿರಬೇಕು ಹಿತ, ಮಿತ ಮತ್ತು ತರಕಾರಿ ಸಹಿತ ಪೂಷಕಾಂಶಯುಕ್ತ ಆಹಾರವನ್ನು ದಿನನಿತ್ಯ ಬಳಸುವದರಿಂದ ಆರೋಗ್ಯವನ್ನು ಹೆಚ್ಚಿಸುವದು.
ಮಳೆಗಾಲದಲ್ಲಿ ಜೋಳ, ಗೋಧಿ, ಹುರಳಿಗಳಿಂದ ತಯಾರಿಸಿದ ಆಹಾರಗಳನ್ನು ಸೇವಿಸಬೇಕು. ಬೇಸಿಗೆಕಾಲದಲ್ಲಿ ಶರೀರಕ್ಕೆ ತಂಪನ್ನು ನೀಡುವಂತಹ ಅಧಿಕ ನೀರಿನಾಂಶ ಹೊಂದಿರುವಂತಹ ಆಹಾರಗಳನ್ನು ಸೇವಿಸಬೇಕು ಜೊತೆಗೆ ಎಳನೀರು, ಮಜ್ಜಿಗೆ, ನಿಂಬೆರಸದ ಜ್ಯುಸ್, ಸವತೆಕಾಯಿ, ಗಜ್ಜರಿಯ ಸಲಾಡ್, ಹಾಲು ಮತ್ತು ತುಪ್ಪಗಳನ್ನು ಅಧಿಕವಾಗಿ ಬಳಸಬೇಕು.

ಆಯುರ್ವೇದದಲ್ಲಿ ಹೇಳಿರುವ ಆಹಾರಗಳು ಔಷಧಿ ಸತ್ವವನ್ನು ಹೊಂದಿರುವದರ ಜೊತಗೆ ಬಿಟ್‍ರೂಟ್, ನುಗ್ಗೆಕಾಯಿ, ಮೂಲಂಗಿ, ಕ್ಯಾರಟ್, ಸೌತೆಕಾಯಿ, ಆಲೂಗಡ್ಡೆ, ಬದನೆಕಾಯಿ, ಪಾಲಕಪಲ್ಲೆ, ಮೆಂತೆಪಲ್ಲೆ ಮತ್ತು ಸಲಾಡ್. ಇವುಗಳನ್ನು ನಿತ್ಯ ಬಳಸುವದರಿಂದ ಎಲ್ಲರ ಆರೋಗ್ಯವನ್ನು ಹೆಚ್ಚಿಸುವದಕ್ಕಾಗಿ 7ನೇ ರಾಷ್ಟ್ರೀಯ ಆಯುರ್ವೇದ ಘೋಷ್ಯ ವಾಕ್ಯ-ಪ್ರತಿದಿನ ಪ್ರತಿ ಮನೆ ಮನೆಯಲ್ಲೂ ಆಯುರ್ವೇದ ಮಾತಿನಂತೆ ಈ ಕೆಳಗೆ ತಿಳಿಸಿರುವ ಪ್ರತಿಯೊಬ್ಬರ ಆಡುಗೆ ಮನೆಯಲ್ಲಿರುವಂತಹ ಔಷಧಿರೂಪಿ ಆಹಾರಗಳನ್ನು ಬಳಸಿ ಎಲ್ಲರೂ ಆರೊಗ್ಯವನ್ನು ಹೆಚ್ಚಿಸಿಕೊಳ್ಳಬೇಕು.

ಸಾಮಾನ್ಯವಾಗಿ ಬಳಸುವ ತರಕಾರಿಗಳು: ಬಿಟ್‍ರೂಟ್, ನುಗ್ಗೆಕಾಯಿ, ಮೂಲಂಗಿ, ಕ್ಯಾರಟ್, ಸೌತೆಕಾಯಿ, ಆಲೂಗಡ್ಡೆ, ಬದನೆಕಾಯಿ, ಪಾಲಕಪಲ್ಲೆ, ಮೆಂತೆಪಲ್ಲೆ ಮತ್ತು ಸಲಾಡ್. ಇದನ್ನು ಆಯುರ್ವೇದದಲ್ಲಿ ಪಲಂಕ ಎಂದು ಕರೆಯಲಾಗುವದು.

1. ಬಿಟ್‍ರೂಟ್: ಬಿಟ್‍ರೂಟ್ ಜ್ಯುಸ್, ಬಿಟ್‍ರೂಟ್ ಸಾಲಡ್, ಬಿಟ್‍ರೂಟ್ ಹಲ್ವಾ ಮತ್ತು ಬಿಟ್‍ರೂಟ್ ಪಲ್ಯೆ
ಬಿಟ್‍ರೂಟ್ ಆಹಾರ ಖಾದ್ಯಗಳು:
ಬಿಟ್‍ರೂಟ್ ನಮ್ಮ ದಿನನಿತ್ಯದ ಅಡುಗೆಮನೆಯ ಒಂದು ಆಹಾರ ದ್ರವ್ಯಾವಾಗಿದ್ದು ಇದರಿಂದ ತಯಾರಿಸುವ ಅನೇಕ ಆಹಾರ ಖಾದ್ಯಗಳು ಶರೀರಕ್ಕೆ ಅನೇಕ ಪೋಷಕಾಂಶಗಳನ್ನು ಒದಗಿಸುವದರ ಜೊತೆಗೆ ಆರೋಗ್ಯ ನಿಡುವಂತಹ ತರಕಾರಿ ರೂಪದಲ್ಲಿ ಬಳಸುವ ಆಹಾರವಾಗಿದೆ.
ಇದರಲ್ಲಿರುವ ಪ್ರಮುಖ ಪೋಷಕಾಂಶಗಳು: ಅನೇಕ ವಿಟಾಮಿನ್‍ಗಳು, ಕ್ಯಾಲ್ಸಿಯಂ, ಕಬ್ಬಿಣಾಂಶ, ಪೈಬರ ಮತ್ತು ಬೆಟಾನಿನ್ ಗಳಂತಹ ಅನೆಕ ಸತ್ವಗಳನ್ನು, ಮ್ಯಾಗ್ನಿಸಿಯಂ ಮತ್ತು ಪೆಟ್ಯಾಸಿಯಂ ಇತ್ಯಾದಿ ಪೋಷಕಾಂಶಗಳನ್ನು ಹೊಂದಿದೆ.
ಶರೀರಕ್ಕಾಗುವ ಪ್ರಯೋಜನಗಳು: ಬಿಟ್‍ರೂಟ್‍ನ್ನು ನಮ್ಮ ನಿತ್ಯ ಅಹಾರದಲ್ಲಿ ಬಳಸುವದರಿಂದ ಅಧಿಕರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡುವದು. ಇದು ಅನೇಕ ಆ್ಯಂಟಿ ಆಕ್ಸಿಡೆಂಟನ್ನು ಹೊದಿರುವದರಿಂದ ಶರೀರದ ಸರ್ವಭಾಗಕ್ಕು ರಕ್ತಸಂಚಾರವನ್ನು ಒದಗಿಸುವದು. ರಕ್ತವನ್ನು ಹೆಚ್ಚಿವದರಜೊತೆಗೆ ರಕ್ತಹೀನತೆ ನಿವಾರಿಸುವದು, ಹೃದಯಕ್ಕೆ ಹಿತವಾದದ್ದು ಮತ್ತು ಪಾರ್ಶ್ವ ವಾಯುವನ್ನು ಶಮನಗೊಳಿಸುವದು.

2. ನುಗ್ಗೆ: ಇದನ್ನು ಆಯುರ್ವೇದದಲ್ಲಿ ಶಿಗ್ರು ಎಂದು ಕರೆಯಲಾಗುವದು.
ನುಗ್ಗೆಯಿಂದ ತಯಾರಿಸುವ ಆಹಾರ ಖಾದ್ಯಗಳು: ನುಗ್ಗೆಕಾಯಿ ನುಗ್ಗೆ ಚಿಗರು, ನುಗ್ಗೆ ಎಲೆ, ಮತ್ತು ತೊಗಟೆ ಇವು ಔಷಧಿ ಗುಣವನ್ನು ಹೊಂದಿರುವದರಿಂದ ಬೆರೆ ಬೆರೆ ಆಹಾರ ಪದಾರ್ಥಗಳನ್ನು ತಯಾರಿಸಿ ಉಪಯೋಗಿಸಬಹುದು. ನುಗ್ಗೆಕಾಯಿ ಎಣ್ಣೆಗಾಯಿ, ನುಗ್ಗೆಕಾಯಿ ಸಾರು/ ರಸಂ ಮತ್ತು ನುಗ್ಗೆಕಾಯಿ ಪಲ್ಲೆ.
ಇದರಲ್ಲಿರುವ ಪ್ರಮುಖ ಪೋಷಕಾಂಶಗಳು: ನುಗ್ಗೆ ಅನೇಕ ವಿಟಾಮಿನ್‍ಗಳು, ಕ್ಯಾಲ್ಸಿಯಂ, ಪೆÇಟ್ಯಾಸಿಯಂ ಇತ್ಯಾದಿ ಪೆÇಷಕಾಂಶಗಳನ್ನು ಹೊಂದಿದೆ.
ಶರೀರಕ್ಕಾಗುವ ಪ್ರಯೋಜನಗಳು: ನುಗ್ಗೆಯ ವಿವಿಧ ಖಾದ್ಯಗಳನ್ನು ತಯಾರಿಸಿ ನಮ್ಮ ನಿತ್ಯ ಅಹಾರದಲ್ಲಿ ಬಳಸುವದರಿಂದ ಮೊದಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವದು, ಸಕ್ಕರೆ ಖಾಯಿಲೆಯನ್ನು ನಿಯಂತ್ರಣದಲಿಡುವದು, ಸ್ಥೂಲಕಾಯದವರಲ್ಲಿ ಶರೀರದ ತೂಕವನ್ನು ಕಡಿಮೆಗೊಳಿಸುವದು. ರಕ್ತವನ್ನು ಶುದ್ಧಿಗೊಳಿಸುವದರ ಜೊತೆಗೆ ರಕ್ತಹೀನತೆ ನಿವಾರಿಸುವದು.
ಮೂಲಂಗಿ : ಇದನ್ನು ಆಯುರ್ವೇದದಲ್ಲಿ ಮೂಲಕ ಎಂದು ಕರೆಯಲಾಗುವದು.
ತಯಾರಿಸುವ ಆಹಾರ ಖಾದ್ಯಗಳು: ಮೂಲಂಗಿ: ಮೂಲಂಗಿ ಸಲಾಡ್, ಮೂಲಂಗಿ ಎಲೆಯ ಜ್ಯುಸ್, ಮೂಲಂಗಿ ಸೋಪ್ಪಿನ ಪಲ್ಲೆ ಮತ್ತು ಮೂಲಂಗಿ ಸಾಂಬಾರ್/ ರಸಂ.
ಇದರಲ್ಲಿರುವ ಪ್ರಮುಖ ಪೋಷಕಾಂಶಗಳು: ಅನೇಕ ವಿಟಾಮಿನ್‍ಗಳು, ಕಬ್ಬಿಣಾಂಶ, ಪೆÇಟ್ಯಾಸಿಯಂ, ಸೋಡಿಯಂ ಇತ್ಯಾದಿ ಖನಿಜಗಳು ಮತ್ತು ನಾರಿನಾಂಶವನ್ನು ಹೊಂದಿದೆ.
ಶರೀರಕ್ಕಾಗುವ ಪ್ರಯೋಜನಗಳು: ದಿನನಿತ್ಯ ಮೂಲಂಗಿಯನ್ನು ಬಳಸಿ ವಿವಿಧ ಬಗೆಯ ಆಹಾರಗಳನ್ನು ತಯಾರಿಸಿ ಉಪಯೋಗಿಸುವದರಿಂದ ರಕ್ತದಲ್ಲಿನ ಕಣಗಳು ಹೆಚ್ಚಾಗುವವು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವದು, ಅಧಿಕ ರಕ್ತದ ಒತ್ತಡವನ್ನು ನಿಯಂತ್ರಣದಲಿಡುವದು.

3. ಗಜ್ಜರಿ: ಇದನ್ನು ಆಯುರ್ವೇದದಲ್ಲಿ ಗಾರ್ಜರ/ ಗಾಜರ ಎಂದು ಕರೆಯಲಾಗುವದು.
ತಯಾರಿಸುವ ಆಹಾರ ಖಾದ್ಯಗಳು: ಗಜ್ಜರಿ (ಕ್ಯಾರಟ್) ಕ್ಯಾರಟ್ ಸಲಾಡ್, ಕ್ಯಾರಟ್ ಹಲ್ವಾ, ಕ್ಯಾರಟ್ ಜ್ಯುಸ್, ಕ್ಯಾರಟ್‍ಪಲ್ಲೆ, ಕ್ಯಾರಟ್ ಪಲಾವ್ ಮತ್ತು ಕ್ಯಾರಟ್ ಬರ್ಪಿ.
ಇದರಲ್ಲಿರುವ ಪ್ರಮುಖ ಪೋಷಕಾಂಶಗಳು: ಕ್ಯಾರಟ್ ಅನೇಕ ವಿಟಾಮಿನ್‍ಗಳು, ಕ್ಯಾಲ್ಸಿಯಂ, ಕಬ್ಬಿಣಾಂಶ, ಪೆÇ್ರೀಟಿನ್ ಕ್ಯಾಲ್ಸಿಯಂ, ಪೆÇಟ್ಯಾಸಿಯಂ, ಮ್ಯಾಗ್ನಿಸಿಯಂ, ಸೋಡಿಯಂ ಮತ್ತು ಕ್ಯಾರೋಟಿನ್‍ಗಳಂತಹ ಪೆÇೀಷಕಾಂಶಗಳನ್ನು ಹೊಂದಿದೆ.
ಶರೀರಕ್ಕಾಗುವ ಪ್ರಯೋಜನಗಳು: ದಿನನಿತ್ಯ ಗಜ್ಜರಿಯನ್ನು ಬಳಸಿ ವಿವಿಧ ಬಗೆಯ ಆಹಾರಗಳನ್ನು ತಯಾರಿಸಿ ಉಪಯೋಗಿಸುವದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವದು, ಶರೀರದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸುವದು, ಕಣ್ಣಿನ ನೇತ್ರ ಶಕ್ತಿಯನ್ನು ಹೆಚ್ಚಿಸುವದು, ಚರ್ಮದ ಅರೋಗ್ಯವನ್ನು ಹೆಚ್ಚಿಸುವದು, ಅಧಿಕ ರಕ್ತದ ಒತ್ತಡವನ್ನು ನಿಯಂತ್ರಣದಲಿಡುವದು ಮತ್ತು ಮಧುಮೇಹ ರೋಗವನ್ನು ಹತೋಟಿಯಲ್ಲಿಡುವದು.

4.ಸೌತೆಕಾಯಿ: ಇದನ್ನು ಆಯುರ್ವೇದದಲ್ಲಿ ತ್ರಪುಷ ಎಂದು ಕರೆಯಲಾಗುವದು.
ತಯಾರಿಸುವ ಆಹಾರ ಖಾದ್ಯಗಳು: ಸೌತೆಕಾಯಿ ಸೌತೆಕಾಯಿ ಸಲಾಡ್, ಸೌತೆಕಾಯಿ ಪಲ್ಯೆ, ಸೌತೆಕಾಯಿ ಸಾಂಬಾರ/ ರಸ್‍ಂ ಮತ್ತು ಸೌತೆಕಾಯಿ ರೊಟ್ಟಿ.
ಇದರಲ್ಲಿರುವ ಪ್ರಮುಖ ಪೆÇಷಕಾಂಶಗಳು: ಪೈಬರ್, ವಿಟಾಮಿನ್ ಮತ್ತು ಪೆÇಟ್ಯಾಸಿಯಂ, ಮ್ಯಾಗ್ನಿಸಿಯಂಗಳಂತಹ ಅನೇಕ ಜೀವಸತ್ವಗಳನ್ನು ಹೊಂದಿದೆ.
ಶರೀರಕ್ಕಾಗುವ ಪ್ರಯೋಜನಗಳು: ಪ್ರತಿದಿನ ಸೌತೆಕಾಯಿಯನ್ನು ಬಳಸಿ ವಿವಿಧ ಬಗೆಯ ಆಹಾರಗಳನ್ನು ತಯಾರಿಸಿ ಉಪಯೋಗಿಸುವದರಿಂದ ಶರೀರದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸುವದು, ಸೌಂಧರ್ಯವರ್ಧಕ, ಮೂತ್ರವರ್ಧಕ, ಚರ್ಮದ ಆರೋಗ್ಯವನ್ನು ಹೆಚ್ಚಿಸುವದು ಮತ್ತು ಹೃದಯಕ್ಕೆ ಹಿತವಾಗಿರುವದು.

5. ಆಲೂಗಡ್ಡೆ: ಇದನ್ನು ಆಯುರ್ವೇದದಲ್ಲಿ ಆಲೂಕಂ ಎಂದು ಕರೆಯಲಾಗುವದು.
ತಯಾರಿಸುವ ಆಹಾರ ಖಾದ್ಯಗಳು: ಆಲೂಗಡ್ಡೆ: ಆಲೂಗಡ್ಡೆ ಪಲ್ಯೆ, ಆಲೂಗಡ್ಡೆ ಸಾಂಬಾರ್, ಆಲೂಪರೋಟ, ಆಲೂ ಚಿಪ್ಸ್.
ಇದರಲ್ಲಿರುವ ಪ್ರಮುಖ ಪೋಷಕಾಂಶಗಳು: ಪೈಬರ್, ಪೆÇಟ್ಯಾಸಿಯಂ, ವಿಟಾಮಿನ್, ಕ್ಯಾಲ್ಸಿಯಂ ಮತ್ತು ಮ್ಯಾಗ್ನಿಸಿಯಂ ಹೀಗೆ ಅನೇಕ ಜೀವಸತ್ವಗಳನ್ನು ಹೊಂದಿದೆ.
ಶರೀರಕ್ಕಾಗುವ ಪ್ರಯೋಜನಗಳು: ಪ್ರತಿದಿನ ಆಲೂಗಡ್ಡೆ ಬಳಸಿ ವಿವಿಧ ಬಗೆಯ ಆಹಾರಗಳನ್ನು ತಯಾರಿಸಿ ಉಪಯೋಗಿಸುವದರಿಂದ ಕೂದಲು ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸುವದು, ಮೂಳೆಗಳಿಗೆ ಬಲವನ್ನು ಕೊಡುವದು, ಉತ್ತಮ ಜೀರ್ಣಕ್ರಿಯೆ, ಅಧಿಕ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡುವದು ಆತಿಸಾರದಲ್ಲಿ ಇದು ಉಪಯುಕ್ತ.

6. ಬದನೆಕಾಯಿ:
ತಯಾರಿಸುವ ಆಹಾರ ಖಾದ್ಯಗಳು: ಬದನೆಕಾಯಿ: ಬದನೆಕಾಯಿಸಾರು/ ರಸ್‍ಂ, ಬದನೆಕಾಯಿ ಪಲ್ಯೆ, ಬದನೆಕಾಯಿ ಎಣ್ಣೆಗಾಯಿ ಮತ್ತು ಬದನೆಕಾಯಿ ಗೊಜ್ಜು.
ಇದರಲ್ಲಿರುವ ಪ್ರಮುಖ ಪೋಷಕಾಂಶಗಳು: ಪೆÇಟ್ಯಾಸಿಯಂ, ವಿಟಾಮಿನ್, ಅನೇಕ ಖನಿಜಗಳು ಮತ್ತು ಪ್ಲೆವನಾಡ್ಸ್ ಹೊಂದಿದ್ದು ನರಗಳ ಆರೋಗ್ಯವನ್ನು ಹೆಚ್ಚಿಸುವಂತಹವು.
ಶರೀರಕ್ಕಾಗುವ ಪ್ರಯೋಜನಗಳು: ಇದರಲ್ಲಿ ಆಕ್ಸಿಡೆಂಟ್, ಪ್ಲೆವನಾಡ್ಸ್ ಇರುವದರಿಂದ ಪ್ರತಿದಿನ ಬದನೆಕಾಯಿ ಬಳಸಿ ವಿವಿಧ ಬಗೆಯ ಆಹಾರಗಳನ್ನು ತಯಾರಿಸಿ ಉಪಯೋಗಿಸುವದರಿಂದ ತ್ವಚೆಯ ಆರೋಗ್ಯವನ್ನು ಹೆಚ್ಚಿಸುವದು, ಅಧಿಕ ರಕ್ತದ ಒತ್ತಡವನ್ನು ಮತ್ತು ಮಧುಮೇಹವನ್ನು ಹತೋಟಿಯಲ್ಲಿಡುವದು, ಶರೀರದಲ್ಲಿನ ಅಧಿಕ ಕೊಬ್ಬು ಕಡಿಮೆಮಾಡುವದು, ನೆನೆಪಿನ ಶಕ್ತಿಯನ್ನು ಹೆಚ್ಚಿಸುವದು ಮತ್ತು ಸರ್ವ ಶರೀರಕ್ಕೆ ಸರಿಯಾಗಿ ರಕ್ತಸಂಚಾರವನ್ನು ಒದಗಿಸುವದು.

7. ಪಾಲಕಪಲ್ಲೆ: ಇದನ್ನು ಆಯುರ್ವೇದದಲ್ಲಿ ಪಲಕ್ಯ ಎಂದು ಕರೆಯಲಾಗುವದು.
ತಯಾರಿಸುವ ಆಹಾರ ಖಾದ್ಯಗಳು: ಪಾಲಕ್ ಸೂಪ್ಪು
ಪಾಲಕ್‍ಪಲ್ಯ, ಪಾಲಕ್ ರಸಂ, ಪಾಲಕ್ ಚಪಾತಿ ಮತ್ತು ಪಾಲಕ್ ರೋಟ್ಟಿ, ಪಾಲಕ್ ಪನ್ನೀರ್, ಪಾಲಕ್ ಕರಿ, ಪಾಲಕ್ ಸೂಪ್ಪಿನಗೊಜ್ಜು, ಪಾಲಕ್ ಚಟ್ನಿ, ಪಾಲಕ್ ಬಜಿ, ಪಾಲಕ್ ಪೂರಿ ಇತ್ಯಾದಿ ಆಹಾರಗಳನ್ನು ನಮ್ಮ ನಿತ್ಯ ಜೀವನದಲ್ಲಿ ನಮ್ಮ ಅಡುಗೆ ಮನೆಯಲ್ಲಿ ತಯಾರಿಸಿ ಬಳಸಬಹುದು.
ಇದರಲ್ಲಿರುವ ಪ್ರಮುಖ ಪೆÇಷಕಾಂಶಗಳು: ಕ್ಯಾರೊಟಿನೈಡ್, ಪೈಬರ್, ಪೆÇಟ್ಯಾಸಿಯಂ, ವಿಟಾಮಿನ್, ಕಬ್ಬಿಣಾಂಶ ಮತ್ತು ಪೆÇ್ರೀಟಿನ್ ಇತ್ಯಾದಿ ಪೆÇಷಕಾಂಶಗಳನ್ನು ಒಳಗೊಂಡಿರುವದು.
ಶರೀರಕ್ಕಾಗುವ ಪ್ರಯೋಜನಗಳು: ಇದರಲ್ಲಿ ಕ್ಯಾರೊಟಿನೈಡ್ ಇರುವದರಿಂದ ಅಧಿಕ ಕೊಬ್ಬನ್ನು ಕರಗಿಸುವದು ಪ್ರತಿದಿನ ಪಾಲಕ್ ಪಲ್ಲೆಬಳಸಿ ವಿವಿಧ ಬಗೆಯ ಆಹಾರಗಳನ್ನು ತಯಾರಿಸಿ ಉಪಯೋಗಿಸುವದರಿಂದ ಕೂದಲು ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸುವದು, ಮೂಳೆಗಳಿಗೆ ಮತ್ತು ನರಗಳಿಗೆ ಶಕ್ತಿಯನ್ನು ಹೆಚ್ಚಿಸುವದು, ಅಧಿಕ ರಕ್ತದ ಒತ್ತಡವನ್ನು ನಿಯಂತ್ರಣದಲಿಡುವದು, ಕೆಂಪು ರಕ್ತದ ಕಣಗಳನ್ನು ಬಲಪಡಿಸುವದು, ಶರೀರದ ತೂಕವನ್ನು ನಿಯಂತ್ರಣದಲಿಡುವದು, ಪಚನಶಕ್ತಿ, ನೆನಪಿನ ಶಕ್ತಿಯನ್ನು ಹೆಚ್ಚಿಸುವದು ಮತ್ತು ಮುಪ್ಪನ್ನು ತಡೆಯವದು.

8. ಮೆಂಥ್ಯ ಪಲ್ಲೆ: ಇದನ್ನು ಆಯುರ್ವೇದದಲ್ಲಿ ಮೆಥಿಕಾ ಎಂದು ಕರೆಯಲಾಗುವದು.
ತಯಾರಿಸುವ ಆಹಾರ ಖಾದ್ಯಗಳು: ಮೆಂಥ್ಯೆಸೂಪ್ಪು
ಮೆಂಥ್ಯ ಸೂಪ್ಪಿನಪಲ್ಯ, ಮೆಂಥ್ಯ ಸೂಪ್ಪಿನ ಸಾರು/ರಸಂ, ಮೆಂಥ್ಯ ಸಾಲಡ್, ಮೆಂಥ್ಯ ಸೊಪ್ಪಿನ ದೋಸೆ, ಮೆಂಥ್ಯ ಪರೋಟ, ಮೆಂಥ್ಯ ಉಪ್ಪಿಟ್ಟು.
ಇದರಲ್ಲಿರುವ ಪ್ರಮುಖ ಪೋಷಕಾಂಶಗಳು: ಪೈಬರ್, ವಿಟಾಮಿನ್, ಕಬ್ಬಿಣಾಂಶ ಮತ್ತು ಪೆÇ್ರೀಟಿನ್‍ಗಳಂತಹ ಇತ್ಯಾದಿ ಪೆÇಷಕಾಂಶಗಳನ್ನು ಒಳಗೊಂಡಿರುವದು.
ಶರೀರಕ್ಕಾಗುವ ಪ್ರಯೋಜನಗಳು: ಅಜೀರ್ಣ, ಅಸಿಡಿಟಿ, ಗ್ಯಾಸಟ್ರಬಲ್‍ನಂತಹ ಸಮಸ್ಯಗಳನ್ನು ದೂರಗೊಳಿಸುವದು, ಕೂದಲು ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸುವದು, ತಾಯಿಯ ಎದೆಯ ಹಾಲನ್ನು ಹೆಚ್ಚಿಸುವದು, ದೇಹಕ್ಕೆ ತಂಪು ಮತ್ತು ಶರೀರಕ್ಕೆ ಸರಿಯಾದ ರಕ್ತಸಂಚಾರವನ್ನು ಮಾಡುವದು, ರಕ್ತಹೀನತೆ ಮತ್ತು ಮಧುಮೇಹಕ್ಕೆ ಬಹು ಪರಿಣಾಮಕಾರಿ.

ಸಲಾಡ್: ಸೌತೆಕಾಯಿ, ಗಜ್ಜರಿ, ಮೂಲಂಗಿ, ಟೋಮೆಟೊ, ಈರುಳ್ಳಿ, ಕೊತಂಬರಿ ಮತ್ತು ಕರಿಮೆಣಸಿನಪುಡಿ ಸೇರಿಸಿ ತಯಾರಿಸಿಕೊಂಡು ಉಪಯೋಗಿಸಬೇಕು.
ಪಾನೀಯಗಳು:

• ಲಿಂಬು ಶರಬತ್: ನೀರಿಗೆ ಲಿಂಬೆಹಣ್ಣಿನರಸ, ಮತ್ತು ಎಲಕ್ಕಿಯನ್ನು ಹಾಕಿ ಶರಬತ್ ಅಥವಾ ಪಾನಕ ತಯಾರಿಸಿ ಕುಡಿಯುವದರಿಂದ ಶರೀರದ ಆಯಾಸವನ್ನು ಕಡಿಮೆಮಾಡುವದು, ಮೂತ್ರಕೋಶದ ಹರಳು, ಅಧಿಕ ಬೊಜ್ಜುನ್ನು ಕಡಿಮೆಮಾಡುವದು, ದೇಹಕ್ಕೆ ಶಕ್ತಿನೀಡಿ ಜೀರ್ಣಕ್ರಿಯೆಯನ್ನು ಹೆಚ್ಚಿಸುವದು ಇದು ಬೇಸಿಗೆಕಾಲದ ಶ್ರೇಷ್ಠ ಪಾನೀಯವಾಗಿದೆ.

• ಮಜ್ಜಿಗೆ: ಮಜ್ಜಿಗೆಯು ಬೇಸಿಗೆಕಾಲದ ಶ್ರೇಷ್ಠ ಪಾನೀಯವಾಗಿದ್ದು ದಾಹವನ್ನು ತಣಿಸುತ್ತದೆ, ಇದರಲ್ಲಿ ಅತ್ಯಧಿಕ ಔಷಧಿ ಗುಣಗಳನ್ನು ಹೊಂದಿದ್ದು ಅರುಚಿ, ಅಜೀರ್ಣ, ಧೀರ್ಘಕಾಲೀನ ಆಮಶಂಕೆ, ಉದರರೋಗ, ಕ್ರಿಮಿರೋಗ, ಕಾಮಲೆ, ಮಧುಮೇಹ ಮತ್ತು ಮೂಲವ್ಯಾದಿಗೆ ಅಮೃತವಾಗಿದೆ.

• ಎಳನೀರು: ತಂಪು ಪಾನೀಯ, ದಾಹ, ಆಯಾಸದೂರಗೊಳಿಸುವದು, ಕರಳಿನ ದೋಷವನ್ನು ನಿವಾರಿಸುತ್ತದೆ, ತತ್‍ಕ್ಷಣ ಶಕ್ತಿದಾಯಕ, ಮೂತ್ರವನ್ನು ಹೆಚ್ಚಿಸುವದು, ಕ್ರಿಮಿಹರ, ಮೂತ್ರದ ಹರಳನ್ನು ಹೊರಹಾಕುವದು ಮತ್ತು ಮಲಬದ್ದತೆಯನ್ನು ನಿವಾರಿಸುವದು,

• ಹಾಲು: ಧಾತುವರ್ಧಕ, ಒಜೋವರ್ಧಕ, ರಸಾಯನ, ಬಲಕರ, ಶ್ರಮಹರ, ದಾಹ ಮತ್ತು ತೃಷ್ಣಾಶಾಮಕ

• ತುಪ್ಪ: ಧಾತುವರ್ಧಕ, ನೇತ್ರಗಳಿಗೆ ಹಿತ, ಒಜೋವರ್ಧಕ, ಸ್ಮರಣಶಕ್ತಿ ಹೆಚ್ಚಿಸುವದು, ರಸಾಯನ, ವೃಷ್ಯ, ಆಯಸ್ಸುವರ್ಧಕ, ಅನೇಕ ರೋಗಗಳನ್ನು ನಾಶಗೊಳಿಸುವದು.

• ಬೆಣ್ಣೆ: ಅಗ್ನಿದೀಪಕ, ನೆನಪಿನಶಕ್ತಿವರ್ಧಕ, ರುಚಿಕರ, ನೇತ್ರಗಳಿಗೆ ಹಿತ, ಬಲಕರ, ಧಾತುವರ್ಧಕ, ಮಕ್ಕಳಿಗೆ ಮತ್ತು ವೃದ್ದರಿಗೂ ಉತ್ತಮ.

• ಜೇನುತುಪ್ಪ: ಅಗ್ನಿದೀಪಕ, ಸ್ವರಕರ, ನೇತ್ರಗಳಿಗೆ ಹಿತ, ರಸಾಯನ, ವೃಷ್ಯ, ಬಲಕರ, ಚರ್ಮಕ್ಕೆ ಹಿತ, ಕ್ರಿಮಿಹರ ಮತ್ತು ತೃಷ್ಣಾಶಾಮಕ.

ಹಣ್ಣುಗಳು:

1. ಒಣಾದ್ರಾಕ್ಷೀ: ಮಧುರರಸ, ಸ್ನಿಗ್ಧಗುಣ ದೀಪನ, ಪಾಚನ, ಸ್ತಂಭನ, ದಾಹನಾಶಕ, ಚರ್ದಿನಿಗ್ರಹ, ಇದರಲ್ಲಿ ಪೆÇ್ರೀಟಿನ್, ಕಾರ್ಬೋಹೈಡ್ರೆಟ್ಸ, ಮಿನರಲ್ಸ್ ಮತ್ತು ವಿಟಾಮಿನ್ಸ್‍ಗಳಂತಹ ಪೆÇೀಷಕಾಂಶವನ್ನು ಹೊಂದಿರುವದು. ಅರುಚಿ, ಅಜೀರ್ಣ, ಅಗ್ನಿಮಾಂದ್ಯ, ಚರ್ಮರೋಗ, ಅತಿಸಾರ, ಆಮಶಂಕೆ ರಕ್ತಪ್ರದರ, ರಕ್ತಜೀನತೆ ಮತ್ತು ಅನೇಕ ರಕ್ತ ಸಂಬಂಧಿ ತೊಂದರೆಗಳಿಗೆ ಉಪಯುಕ್ತ.
2. ದಾಳಿಂಬೆ: ಮಧುರ ಆಮ್ಲ ರಸ, ಕಟುವಿಪಾಕ, ವಾತಪಿತ್ತ ಶಾಮಕ ಹೃದಯಕ್ಕೆ ಹಿತ, ಅನುಲೋಮನ, ನೆನಪಿನ ಶಕ್ತಿ ವರ್ಧಕ, ಕಂಠಕ್ಕೆ ಹಿತ, ಬಲಕರ, ಮೂತ್ರಕಾರಕ, ಕಣ್ಣುಗಳಿಗೆ ಹಿತ. ಇದರಲ್ಲಿ ಕ್ಯಾಲ್ಸಿಯಂ, ಪಾಸ್ಪರಸ್ ಇತ್ಯಾದಿ ಪೆÇೀಷಕಾಂಶವನ್ನು ಹೊಂದಿರುವದು. ಮದಾತ್ಯಯ, ಮಲಬದ್ದತೆ, ಕಾಮಣಿ, ರಕ್ತಹೀನತೆ, ಕ್ಷಯ, ಕೆಮ್ಮು, ದಮ್ಮು, ಜ್ವರ ಮತ್ತು ಚರ್ಮರೋಗಗಳಲ್ಲಿ ಉಪಯುಕ್ತಕಾರಿ.
3. ಖರ್ಜುರ: ಮಧುರ ಸ್ನಿಗ್ಧಗುಣ, ಶೀತವೀರ್ಯ, ಮಧುರವಿಪಾಕ, ವಾತಪಿತ್ತ ಶಾಮಕ ದೀಪನ, ಪಾಚನ, ಅನುಲೋಮನ, ಮೂತ್ರಲ, ವೃಷ್ಯ ಬಲವರ್ಧಕ. ಪೆÇ್ರೀಟೀನ್, ಕಾರ್ಬೋಹೈಡ್ರೆಟ್ಸ್ ಮತ್ತು ಮಿನರಲ್ಸ್‍ಗಳಂತಹ ಪೋಷಕಾಂಶವನ್ನು ಹೊಂದಿರುವದು. ಅತಿಸಾರ, ಆಮಶಂಕೆ, ಮಧುಮೇಹ ಮತ್ತು ಹೃದಯ ಸಂಬಂದಿ ಖಾಯಿಲೆಗಳಿಗೆ ಉಪಯುಕ್ತ.
ಮನೆಯ ಉದ್ಯಾನವನ ಔಷಧಿ ಸಸ್ಯ: ಸಾಮಾನ್ಯವಾಗಿ ನಮ್ಮ ಮನೆಯ ಉದ್ಯಾನಗಳಲ್ಲಿ ಈ ಕೆಳಗೆ ತಿಳಿಸಿರುವ ಔಷಧಿಗುಣ ಹೊಂದಿರುವ ಔಷಧಿ ಸಸ್ಯಗಳನ್ನು ಬೆಳೆದಿರುವದು ಸರ್ವೆ ಸಾಮಾನ್ಯ ಇವುಗಳನ್ನು ಅವಶ್ಯಕತೆ ಅನುಸಾರ ನಿತ್ಯ ಬಳಸುವದರಿಂದ ಆರೋಗ್ಯ ಹೆಚ್ಚಿಸುವದು. ತುಳಸಿ, ಲೋಳೆಸರ, ಅಮೃತಬಳ್ಳಿ, ದಾಸವಾಳ ಮತ್ತು ದರ್ಭ ಇತ್ಯಾದಿ.

ಅಡುಗೆ ಮನೆಯಲ್ಲಿನ ಸಾಂಬಾರ ಪಧಾರ್ಥಗಳು

1. ಅರಿಷಣ: ಹರಿದ್ರಾ- ತಿಕ್ತ, ಕಟುರಸ, ಉಷ್ಣ ವೀರ್ಯ, ಲಘು-ರೂಕ್ಷ ಗುಣ, ವಿಪಾಕ- ಕಟು, ಕಫವಾತಶಮಕ ಮತ್ತು ಪಿತ್ತರೇಚಕ.
ಅರುಚಿ, ಮಲಬದ್ದತೆ ನಿವಾರಕ, ಶರೀರಕ್ಕೆ ಕಾಂತಿ ಹೆಚ್ಚಿಸುವಂತಹದ್ದು ಮತ್ತು ಕ್ರೀಮಿಹರ.
ರಕ್ತವಿಕಾರ, ರಕ್ತಹೀನತೆ, ರಕ್ತಸ್ರಾವದಲ್ಲಿ ಉಪಯೋಗಕಾರಿ, ಗಾಯಗಳನ್ನ ಶಮನಗೊಳಿಸುವದು, ನೋವು ನಿವಾರಕ ಮತ್ತು ವಿಷಘ್ನ್. ಸ್ತನ್ಯಶೋಧಕ, ಗರ್ಭಾಶಯ ಶೋಧಕ ಮತ್ತು ಶುಕ್ರ ಶೋಧಕ.
ಮಧುಮೇಹ, ಕುಷ್ಠ, ರಕ್ತಹೀನತೆ, ಉದರರೋಗ, ಅಲರ್ಜಿ ಮತ್ತು ಪಿತ್ತಗಾದರಿ ರೋಗಗಳಲ್ಲಿ ಫಲಕಾರಿಯಾಗಿದೆ.
ಇದರಿಂದ ಹರಿದ್ರಾಖಂಡ ಎಂಬ ಔಷಧಿಯನ್ನು ತಯಾರಿಸಲಾಗುವದು.
2. ಬೆಳ್ಳೋಳ್ಳಿ: ಲಶುಣ ಆಮ್ಲ ವರ್ಜೀತ ಪಂಚರಸ, ಸ್ನಿಗ್ಧ, ತೀಕ್ಷ್ಣ, ಪಿಚ್ಚಿಲ, ಗುರು, ಸರಗುಣ, ವೀರ್ಯ ಉಷ್ಣ, ವಿಪಾಕ- ಕಟು, ಕಫವಾತಶಾಮಕ.
ದೀಪಕ, ಪಾಚಕ, ವಾತಾನುಲೋಮಕ, ಅರುಚಿ, ಅಜೀರ್ಣ, ಅಗ್ನಿಮಾಂದ್ಯ, ದೃಷ್ಠಿಶಕ್ತಿವರ್ಧಕ, ಸ್ಮರಣಶಕ್ತಿ ಹೆಚ್ಚಿಸುವದು, ಶೂಲಹರ, ಕ್ರಿಮಿಘ್ನ, ಮೂತ್ರಜನನ, ಶುಕ್ರಜನನ, ಆರ್ತವಜನನ, ಮಲಬದ್ದತೆ ನಿವಾರಕ, ರಸಾಯನ, ಸಂಧಾನೀಯ, ಕರ್ಣಶೂಲಹರ, ಲೇಪನದಿಂದ ವಿಷದಂಶನಾಶಕ ಮತ್ತು ವಿಷಹರ, ಚರ್ಮಕ್ಕೆ, ಪುಪ್ಪುಸಕ್ಕೆ ಮತ್ತು ವೃಕ್ಕ ಇವುಗಳಿಗೆ ಉತ್ತಮ. ಕುಷ್ಠ, ಜ್ವರ, ಮುಖದ ಪಾರ್ಶ್ವವಾಯು, ಪಾರ್ಶ್ವವಾಯು ಮತ್ತು ಅಧಿಕ ಬೊಜ್ಜು ರೋಗಗಳನ್ನು ಶಮನಗೊಳಿಸುವದು.
ಇದರಿಂದ ರಸೋನ ವಠಿ, ರಸೋನಪಿಂಡಿ, ಲಶುಣಾದ್ಯ ಘೃತ ಎಂಬ ಔಷಧಿಯನ್ನು ತಯಾರಿಸಲಾಗುವದು.
3. ಲವಂಗ: ತಿಕ್ತ, ಕಟುರಸ, ಲಘು-ಸ್ನಿಗ್ಧ ಗುಣ, ಶೀತವೀರ್ಯ, ವಿಪಾಕ- ಕಟು, ಕಫಪಿತ್ತ ಶಾಮಕ.
ಅರುಚಿ, ಅಜೀರ್ಣ, ಅಗ್ನಿಮಾಂದ್ಯ, ಪಾಚಕ, ರುಚಿಕರ, ವಾತಾನುಲೋಮಕ, ಕ್ರಿಮಿಘ್ನ, ನೋವುನಿವಾರಕ, ಮುಖದ ದುರ್ವಾಸನೆಯನ್ನು ದೂರಗೊಳಿಸುವದು, ಸ್ತನ್ಯಜನನ, ಸ್ತನ್ಯಶೋಧಕ, ಮೂತ್ರಜನನ, ವೃಷ್ಯ.
ಉದರರೋಗ, ಪಿತ್ತರೋಗ, ಯಕೃತ್ ವಿಕಾರ, ಚರ್ಮರೋಗ, ಮುಖರೋಗ, ಕಂಠರೋಗ, ಸಂಧುಗಳರೋಗ, ವಾತರೋಗ.
ಇದರಿಂದ ಲವಂಗಾದಿವಠಿ, ಅವಿಪತ್ತಿಕರಚೂರ್ಣ ಮತ್ತು ಲವಂಗಾದಿ ಚೂರ್ಣ ಎಂಬ ಔಷಧಿಯನ್ನು ತಯಾರಿಸಲಾಗುವದು.
4. ಚೆಕ್ಕೆ: ತ್ವಕ- ತಿಕ್ತ, ಕಟು ಮಧುರರಸ, ಲಘು-ರೂಕ್ಷ ತೀಕ್ಷ್ಣ ಗುಣ, ವೀರ್ಯ-ಉಷ್ಣ, ವಿಪಾಕ- ಕಟು, ಕಫವಾತಶಾಮಕ ದೀಪಕ, ಪಾಚಕ, ಅರುಚಿ, ಅಗ್ನಿಮಾಂದ್ಯ, ವಾತಾನುಲೋಮಕ, ನೋವುನಿವಾರಕ, ಯಕೃತ್ತಿಗೆ ಹಿತಕರ, ಕ್ರೀಮಿಹರ, ಒಜೋವರ್ಧಕ, ವಿಷಘ್ನ, ರಕ್ತ ಶೋಧಕ, ಮೂತ್ರಕರ, ಗರ್ಭಾಶಯ ಸಂಕೋಚಕ, ವೃಷ್ಯ, ಮುಖದ ದುರ್ವಾಸನೆಯನ್ನು ದೂರಗೊಳಿಸುವದು.
ದಮ್ಮು, ಕೆಮ್ಮು, ಜ್ವರ, ಮೂಲವ್ಯಾಧಿ, ಯಕ್ಷ್ಮರೋಗ ಮತ್ತು ಮೂತ್ರದ ರೋಗಗಳನ್ನು ಶಮನಗೊಳಿಸುವದು.
ಇದರಿಂದ ಸಿತೋಪಲಾದಿ ಚೂರ್ಣ, ಎಂಬ ಔಷಧಿಯನ್ನು ತಯಾರಿಸಲಾಗುವದು.
5. ಹವೀಜ: ಧಾನ್ಯಕ-ಕಷಾಯ ತಿಕ್ತ, ಮಧುರ ಕಟುರಸ, ಲಘು-ಸ್ನಿಗ್ಧ ಗುಣ, ವೀರ್ಯ-ಉಷ್ಣ, ವಿಪಾಕ- ಮಧುರ, ತ್ರಿದೋಷ ಶಾಮಕ. ದೀಪಕ, ಪಾಚಕ, ಕ್ರೀಮಿಹರ, ಮೂತ್ರಕರ, ಶುಕ್ರಕ್ಷಯಕಾರಕ, ಮುಖರೋಗಗಳಲ್ಲಿ ಇದರ ಗಂಡೂಷ.
ಜ್ವರ, ದಮ್ಮು, ಕೆಮ್ಮು, ಅರುಚಿ, ಅಜೀರ್ಣ, ಅಗ್ನಿಮಾಂದ್ಯ, ಅತಿಸಾರ, ಆಮಶೆಂಕೆ, ದಾಹ, ತೃಷ್ಣಾ ಮತ್ತು ಮೂತ್ರದ ರೊಗಗಳನ್ನು ಶಮನಗೊಳಿಸುವದು.
ಇದರಿಂದ ದಾನ್ಯಕಾದಿಹಿಮ, ದಾನ್ಯಪಂಚಕ ಕ್ವಾಥ ಎಂಬ ಔಷಧಿಯನ್ನು ತಯಾರಿಸಲಾಗುವದು.
6. ಶುಂಠಿ: ಕಟುರಸ, ಲಘು-ಸ್ನಿಗ್ಧ ಗುಣ, ವೀರ್ಯ-ಉಷ್ಣ, ವಿಪಾಕ- ಮಧುರ, ಕಫವಾತಶಾಮಕ.
ದೀಪಕ, ಪಾಚಕ, ವಾತಾನುಲೋಮಕ, ನೋವುನಿವಾರಕ, ಶೋಥಹರ, ತೃಪ್ತಿಕರ ಮತ್ತು ಆಮಪಾಚಕ
ಮೂಲವ್ಯಾಧಿ, ಸಂಧುಗಳರೋಗ, ವಾತವ್ಯಾಧಿ, ಕುಷ್ಠ, ರಕ್ತಹೀನತೆ, ಮೂತ್ರದ ರೋಗಗಳು, ಜ್ವರ, ದಮ್ಮು, ಕೆಮ್ಮು, ಬಿಕ್ಕಳಿಕೆ, ಅಜೀರ್ಣ, ಅಗ್ನಿಮಾಂದ್ಯ ಮತ್ತು ಉದರರೋಗ.
ಇದರಿಂದ ಆರ್ದಕಕಂಡ, ಪಂಚಸಮಚೂರ್ಣ, ಸಮಶರ್ಕರ ಚೂರ್ಣ, ಸೌಭಾಗ್ಯಶುಂಠಿ ಎಂಬ ಔಷಧಿಯನ್ನು ತಯಾರಿಸಲಾಗುವದು.
7. ಇಂಗು: ಹಿಂಗು-ಕಟುರಸ, ಲಘು-ಸ್ನಿಗ್ಧ ತೀಕ್ಷ್ಣಗುಣ, ಉಷ್ಣವೀರ್ಯ, ವಿಪಾಕ- ಕಟು, ಕಫವಾತಶಾಮಕ ಪಿತ್ತವರ್ಧಕ.
ದೀಪಕ, ಪಾಚಕ, ರೋಚನ, ವಾತಾನುಲೋಮಕ, ನೋವು ನಿವಾರಕ, ಕ್ರಿಮಿಘ್ನ, ಮಲಬದ್ದತೆ ನಿವಾರಕ, ಮೂತ್ರಜನನ, ಆರ್ತವಜನನ, ವೃಷ್ಯ ಮತ್ತು ಹೃದಯಕ್ಕೆ ಹಿತ.
ಮೂತ್ರದ ರೋಗಗಳು, ದಮ್ಮು, ಕೆಮ್ಮು, ಜ್ವರ, ಪಾರ್ಶ್ವವಾಯು, ಕತ್ತುನೋವು, ಸೊಂಟನೋವು, ವಾತರೋಗಗಳನ್ನು ಶಮನಗೊಳಿಸುವದು.
ಇದರಿಂದ ಹಿಂಗ್ವಾದಿವಠಿ, ಹಿಂಗ್ವಾಷ್ಟಕಚೂರ್ಣ, ರಜಪ್ರವರ್ತಿನಿವಠಿ, ಹಿಂಗು ಕಷಾಯ ಎಂಬ ಔಷಧಿಯನ್ನು ತಯಾರಿಸಲಾಗುವದು.
8. ಕರಿಮೆಣಸು: ಮರೀಚ- ಕಟುರಸ, ಲಘು- ತೀಕ್ಷ್ಣಗುಣ, ವೀರ್ಯ-ಉಷ್ಣ, ವಿಪಾಕ- ಕಟು, ವಾತಕಫಶಾಮಕ.
ದೀಪಕ, ಪಾಚಕ, ವಾತಾನುಲೋಮಕ, ಸ್ರೋತೊಶೋಧಕ, ಕ್ರಿಮಿಘ್ನ, ಆರ್ತವಜನನ ಮತ್ತು ರಜೋರೊಧ.
ಅಜೀರ್ಣ, ಅಗ್ನಿಮಾಂದ್ಯ, ವಿಷಮಜ್ವರ, ಕುಷ್ಠ, ದಂತರೋಗ, ಮುಖರೋಗ, ಬಿಳಪು, ದಮ್ಮು, ಕೆಮ್ಮು, ಮೂತ್ರದ ರೋಗಗಳನ್ನು ಶಮನಗೊಳಿಸುವದು.
ಇದರಿಂದ ಮರೀಚಾದಿಗುಟಿಕಾ, ಮರೀಚಾದಿತೈಲ, ಮರೀಚಾದಿಘೃತ ಎಂಬ ಔಷಧಿಯನ್ನು ತಯಾರಿಸಲಾಗುವದು.
9. ಜೀರಿಗೆ: ಜೀರಕ-ಕಟುರಸ, ಲಘು- ರೂಕ್ಷ ಗುಣ, ವೀರ್ಯ-ಉಷ್ಣ, ವಿಪಾಕ- ಕಟು, ಕಫವಾತಶಾಮಕ, ಪಿತ್ತವರ್ಧಕ
ದೀಪಕ, ಪಾಚಕ, ರೋಚನ, ವಾತಾನುಲೋಮಕ, ನೋವುನಿವಾರಕ, ಕ್ರಿಮಿಘ್ನ, ಮೂತ್ರಕರ, ವೃಷ್ಯ, ಗರ್ಭಾಶಯ ಶೊಥಹರ, ಸ್ತನ್ಯಜನನ ಇವುಗಳಿಗೆ ಉಪಯೋಗಕಾರಿ.
ಅಜೀರ್ಣ, ಅಗ್ನಿಮಾಂದ್ಯ, ಕ್ರೀಮಿ, ಉದರರೋಗ, ದಮ್ಮು, ಕೆಮ್ಮು, ಬಿಕ್ಕಳಿಕೆ ಮತ್ತು ರಕ್ತವಿಕಾರದಂತಹ ರೋಗಗಳನ್ನು ಶಮನಗೊಳಿಸುವದು.
ಇದರಿಂದ ಜೀರಕಾದಿಮೋದಕ, ಜೀರಕಾದ್ಯತೈಲ, ಜೀರಕಾದ್ಯರಿಷ್ಠ ಎಂಬ ಔಷಧಿಯನ್ನು ತಯಾರಿಸಲಾಗುವದು.
10. ಅಜವಾಯಿನ್: ಅಜಮೋದ ಕಟು ತಿಕ್ತರಸ, ಲಘು ರೂಕ್ಷ- ತೀಕ್ಷ್ಣಗುಣ, ವೀರ್ಯ-ಉಷ್ಣ, ವಿಪಾಕ- ಕಟು, ಕಫವಾತಶಾಮಕ,
ದೀಪಕ, ವಾತಾನುಲೋಮಕ, ಕ್ರಿಮಿಘ್ನ, ನೋವುನಿವಾರಕ, ಮೂತ್ರಕರ, ಗರ್ಭಾಶಯ ಉತ್ತೇಜಕ, ವೃಷ್ಯ.
ಅಗ್ನಿಮಾಂದ್ಯ, ಉದರರೋಗ, ದಮ್ಮು, ಕೆಮ್ಮು, ಬಿಕ್ಕಳಿಕೆ, ಕ್ರೀಮಿ ಮತ್ತು ಕಷ್ಟಾರ್ತವ.
ಇದರಿಂದ ಅಜಮೋದದಿವಠಿ, ಅಜಮೋದಾದಿಚೂರ್ಣ ಎಂಬ ಔಷಧಿಯನ್ನು ತಯಾರಿಸಲಾಗುವದು.
11. ಯಾಲಕ್ಕಿ: ಎಲ-ಕಟು ಮಧುರ ರಸ, ಲಘು ರೂಕ್ಷ- ಗುಣ, ವೀರ್ಯ-ಶೀತ, ವಿಪಾಕ-ಮಧುರ, ತ್ರಿದೋಷ ಶಾಮಕ,
ಮುಖಶೋಧಕ, ಮುಖ ದುರ್ಗಂಧನಾಶಕ, ದೀಪಕ, ಪಾಚಕ, ರೋಚನ, ವಾತಾನುಲೋಮಕ, ಹೃದಯಕ್ಕೆ ಹಿತಕರ, ದಾಹಶಾಮಕ, ಬಲಕರ.
ದಮ್ಮು, ಕೆಮ್ಮು, ದಾಹ, ಅಜೀರ್ಣ, ಅಗ್ನಿಮಾಂದ್ಯ, ತೃಷ್ಣಾ, ಉದರಶೂಲ, ಮೂತ್ರರೋಗ, ಮುಖರೋಗದಂತಹ ರೋಗಗಳನ್ನು ಶಮನಗೊಳಿಸುವದು.
ಇದರಿಂದ ಎಲಾದ್ಯರಿಷ್ಠ, ಎಲಾದಿಚೂರ್ಣ, ಎಲಾದಿಗುಟಿಕಾ ಎಂಬ ಔಷಧಿಯನ್ನು ತಯಾರಿಸಲಾಗುವದು.

ಮುಂಜಾಗ್ರತೆಯ ಕ್ರಮಗಳು:

• ಶರೀರಕ್ಕೆ ಸೂಕ್ತವಾದ ಸಮಯಕ್ಕೆ ಅನುಗುಣವಾಗಿ ಹಿತವಾದ ಮಿತ ಪ್ರಮಾಣದಲ್ಲಿ ಅಹಾರ ಸೇವನೆ ಮಾಡಬೇಕು ಮತ್ತು ಪೂರ್ವದಲ್ಲಿ ಸೇವಿಸಿದ ಆಹಾರ ಸರಿಯಾಗಿ ಪಚನವಾದನಂತರ ಆಹಾರ ಸೇವಿಸಬೇಕು.
• ಪ್ರತಿದಿನ ಹಾಲು ಮತ್ತು ತುಪ್ಪವನ್ನು ಬಳಸಬೇಕು ಇದು ರಸಾಯನವಗಿ ಕೆಲಸ ಮಾಡುವದು.
• ವಯಸ್ಸಿಗಣುಗುಣವಾಗಿ, ಶಕ್ತಿಗಣುಸಾರವಾಗಿ ಸೂಕ್ತ ವ್ಯಾಯಾಮ ಪಾಲನೆ.
• ಹಗಲು ನಿದ್ರೆ, ರಾತ್ರಿ ಜಾಗರಣೆ ಬಿಡಬೇಕು
• ಅಧಿಕವಾದ ಚಹಾ, ಕಾಫಿ, ಬೇಕರಿ ಪದಾರ್ಥ, ಪಾಸ್ಟ್‍ಪುಡ್, ಮಾಂಸಾಹಾರ, ಮಧ್ಯಪಾನ, ಧೂಮ್ರಪಾನ, ತಂಪುಪಾನೀಯಗಳು ಇತ್ಯಾದಿಗಳು ಶರೀರಕ್ಕೆ ಹಾನಿಕಾರಕಗಳು ಇವುಗಳನ್ನು ತ್ಯೆಜಿಸಬೇಕು.
• ಜೀವನ ಶೈಲಿಯಲ್ಲಿ ಬದಲಾವಣೆ, ತಿಳಿದು ತಪ್ಪುಮಾಡುವದ ಬಿಡಬೇಕು.
• ಸ್ವಯಂ ಚಿಕಿತ್ಸೆ ಹಾನಿಕಾರಕ ವೈದ್ಯರ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಅತಿಅವಶ್ಯಕ.

dr-santosh-gadag.

ಡಾ: ಸ0ತೋಷ ನೀ. ಬೆಳವಡಿ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಸ್ನಾತಕೋತ್ತರ ಕಾಯಚಿಕಿತ್ಸಾ ವಿಭಾಗ,
ಡಿ.ಜಿ.ಎ0.ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಗದಗ.
Ph:9886916367

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!