ಮೆಚ್ಯೂರ್ ಕೆಟರಾಕ್ಟ್ ಮತ್ತು ಡ್ರೈ ಐ : ಸಾಂಕ್ರಾಮಿಕದ ವೇಳೆಯಲ್ಲಿ ಪ್ರಕರಣಗಳ ಪ್ರಮಾಣ ಹೆಚ್ಚಳ

ಮೆಚ್ಯೂರ್ ಕೆಟರಾಕ್ಟ್ ಮತ್ತು ಡ್ರೈ ಐ ಪ್ರಕರಣಗಳು ಸಾಂಕ್ರಾಮಿಕದ ವೇಳೆಯಲ್ಲಿ ಹೆಚ್ಚಳವಾಗಿದೆ. ಡಾ.ಅಗರ್‍ವಾಲ್ಸ್ ಐ ಹಾಸ್ಪಿಟಲ್‍ನ ಕಣ್ಣಿನ ಸರ್ಜನ್‍ಗಳು ಈ ಆತಂಕಕಾರಿ ವಿಚಾರವನ್ನು ತಿಳಿಸಿದ್ದು, ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ತಡವಾಗುತ್ತಿರುವುದು ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಆಗಿರುವುದು ಪ್ರಮುಖ ಕಾರಣಗಳಾಗಿವೆ. ಸಾಂಕ್ರಾಮಿಕದ ವೇಳೆಯಲ್ಲಿ ಜನರು ತಮ್ಮ ಕಣ್ಣಿನ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬಾರದು. 

ಪ್ರಸ್ತುತ ಇರುವ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಬೆಂಗಳೂರಿನ ನಾಗರಿಕರಲ್ಲಿ ಕಣ್ಣಿನ ಪರಿಸ್ಥಿತಿಗಳು ಗಂಭೀರ  ಪರಿಣಾಮವನ್ನು ಎದುರಿಸುವಂತಾಗಿದೆ. ಏಕೆಂದರೆ, ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ತಡವಾಗುತ್ತಿರುವುದು ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಆಗಿರುವುದು ಪ್ರಮುಖ ಕಾರಣಗಳಾಗಿವೆ. ಈ ಸಾಂಕ್ರಾಮಿಕದಿಂದ ಪ್ರಮುಖವಾಗಿ ವಯಸ್ಸಾದವರು ಗಂಭೀರ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಇವರಲ್ಲಿ ಮೆಚ್ಯೂರ್ ಕೆಟರಾಕ್ಟ್ ಗಳ ಪ್ರಮಾಣ ಸಾಂಕ್ರಾಮಿಕಕ್ಕಿಂತ ಮುಂಚಿನದ್ದಕ್ಕಿಂತ ಐದು ಪಟ್ಟು ಹೆಚ್ಚಳವಾಗಿದೆ. ಇದರ ಜತೆಗೆ ಬೆಳಕಿನ ಕಿರಣಗಳು ಹೆಚ್ಚು ಇರುವ ಡಿಜಿಟಲ್ ಸ್ಕ್ರೀನ್‍ಗಳ ಮುಂದೆ ಹೆಚ್ಚು ಸಮಯವನ್ನು ಕಳೆಯುತ್ತಿರುವುದರಿಂದ ಜನರಲ್ಲಿ ಒಣ ಕಣ್ಣು ಅಥವಾ ಡ್ರೈ ಐ ಪ್ರಮಾಣ ಮೂರು ಪಟ್ಟು ಹೆಚ್ಚಳವಾಗಿದೆ.

ಮೆಚ್ಯೂರ್ ಕೆಟರಾಕ್ಟ್ ಮತ್ತು ಡ್ರೈ ಐ : ಸಾಂಕ್ರಾಮಿಕದ ವೇಳೆಯಲ್ಲಿ ಪ್ರಕರಣಗಳ ಪ್ರಮಾಣ ಹೆಚ್ಚಳ
ಡಾ.ಅಗರ್‍ವಾಲ್ಸ್ ಐ ಹಾಸ್ಪಿಟಲ್ ಪ್ರಾದೇಶಿಕ ಮುಖ್ಯಸ್ಥರಾದ ಡಾ.ರಾಮ್ ಮಿರ್ಲೆ ಮತ್ತು ಡಾ.ಅರ್ಚನಾ ಎಸ್

ಕಣ್ಣಿನ ತೊಂದರೆ – ಗಂಭೀರ ಪರಿಸ್ಥಿತಿಗಳನ್ನು ಎದುರಿಸುವಂತಾಗಿದೆ

ಈ ಬಗ್ಗೆ ಮಾತನಾಡಿದ ಬೆಂಗಳೂರಿನ ಡಾ.ಅಗರ್‍ವಾಲ್ಸ್ ಐ ಹಾಸ್ಪಿಟಲ್ ಕ್ಲಿನಿಕಲ್ ಸರ್ವೀಸಸ್‍ನ ಪ್ರಾದೇಶಿಕ ಮುಖ್ಯಸ್ಥರಾದ ಡಾ.ರಾಮ್ ಮಿರ್ಲೆ ಅವರು, “ಕಳೆದ ಒಂದು ವರ್ಷದ ಸಾಂಕ್ರಾಮಿಕದ ಅವಧಿಯಲ್ಲಿ ರೋಗಿಗಳು ಆಸ್ಪತ್ರೆಗೆ ಹೋದರೆ ಎಲ್ಲಿ ಕೊರೋನಾವೈರಸ್ ಸೋಂಕು ಹರಡುತ್ತದೆಯೋ ಎಂಬ ಆತಂಕದಲ್ಲಿದ್ದಾರೆ. ಕಣ್ಣಿನ ತೊಂದರೆ ಅನುಭವಿಸುತ್ತಿರುವ ಬಹುತೇಕ ರೋಗಿಗಳು ಲಾಕ್‍ಡೌನ್ ಅವಧಿಯಲ್ಲಿ ಮತ್ತು ನಂತರದ ಅವಧಿಯಲ್ಲಿಯೂ ನಿಯಮಿತವಾದ ತಪಾಸಣೆಗೆಂದು ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಇದರಿಂದ ಅವರ ಕಣ್ಣಿನ ಸಮಸ್ಯೆ ಗಂಭೀರ ಸ್ವರೂಪ ಪಡೆಯಲು ಕಾರಣವಾಗಿದೆ. ಇನ್ನು ಹೊಸದಾಗಿ ಕಣ್ಣಿನ ಸಮಸ್ಯೆಗೆ ತುತ್ತಾದವರು ವೈದ್ಯರನ್ನು ಭೇಟಿ ಮಾಡಲು ಸಾಕಷ್ಟು ಸಮಯದವರೆಗೆ ಕಾದಿದ್ದಾರೆ. ಇದರಿಂದಾಗಿ ತಪಾಸಣೆ ಮತ್ತು ಚಿಕಿತ್ಸೆ ತಡವಾಗಿ ದೃಷ್ಟಿಯನ್ನು ಕಳೆದುಕೊಳ್ಳುವುದು ಸೇರಿದಂತೆ ಇನ್ನಿತರೆ ಗಂಭೀರ ಪರಿಸ್ಥಿತಿಗಳನ್ನು ಎದುರಿಸುವಂತಾಗಿದೆ.”

2019 ರ ಕಡೆಯ ಮೂರು ತಿಂಗಳಲ್ಲಿ ಸಾಂಕ್ರಾಮಿಕವು ಪೂರ್ಣ ಪ್ರಮಾಣದಲ್ಲಿ ಪರಿಣಾಮ ಬೀರಿದ ವೇಳೆಯಲ್ಲಿ ಕೇವಲ ಶೇ.10 ರಷ್ಟು ರೋಗಿಗಳು ತಪಾಸಣೆಗೆಂದು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಮೆಚ್ಯೂರ್ ಕೆಟರಾಕ್ಟ್ ಸಮಸ್ಯೆಯಿಂದ ಬಳಲುತ್ತಿದ್ದವರಾಗಿದ್ದಾರೆ. 2020 ರ ಕೊನೆಯ ತ್ರೈಮಾಸಿಕದಲ್ಲಿ ಇದರ ಪ್ರಮಾಣ ಐದು ಪಟ್ಟು ಅಂದರೆ ಶೇ.50 ಕ್ಕಿಂತಲೂ ಅಧಿಕಗೊಂಡಿತು. ಸಾಂಕ್ರಾಮಿಕವಿದೆ ಎಂಬ ಕಾರಣಕ್ಕೆ ನಿಯಮಿತ ತಪಾಸಣೆಗೆ ಆಸ್ಪತ್ರೆಗೆ ಭೇಟಿ ನೀಡದ ಕಾರಣದಿಂದ ಅನೇಕ ರೋಗಿಗಳಲ್ಲಿ ಗ್ಲುಕೋಮಾ ಪ್ರಕರಣಗಳು ಹೆಚ್ಚಾಗಿರುವುದು ಮತ್ತು ಗಂಭೀರ ಸ್ವರೂಪ ಪಡೆದುಕೊಂಡಿರುವುದನ್ನು ನಾವು ಕಂಡಿದ್ದೇವೆ. ಡಯಾಬಿಟಿಸ್ ಇರುವ ರೋಗಿಗಳು ನಿಯಮಿತವಾಗಿ ಕಣ್ಣಿನ ತಪಾಸಣೆಯನ್ನು ನಿರ್ಲಕ್ಷ್ಯ ಮಾಡಿರುವುದರಿಂದ ಅವರ ರೆಟಿನಾದಲ್ಲಿ ಗಂಭೀರ ಸಮಸ್ಯೆಯನ್ನು ಎದುರಿಸುವಂತಾಗಿದೆ. ಇದರ ಜತೆಗೆ ಸಾಂಕ್ರಾಮಿಕವು ದೊಡ್ಡ ಮಟ್ಟದಲ್ಲಿ ಸಾಮಾಜಿಕ-ಆರ್ಥಿಕ ಪರಿಣಾಮವನ್ನೂ ಉಂಟು ಮಾಡಿದೆ. ಅನೇಕ ಕೆಟರಾಕ್ಟ್ ರೋಗಿಗಳು ಒಂದೇ ಒಂದು ಕಣ್ಣಿನ ಶಸ್ತ್ರಚಿಕಿತ್ಸೆಗೆಂದು ನಮ್ಮ ಬಳಿಗೆ ಬರುತ್ತಿದ್ದಾರೆ. ಸಾಂಕ್ರಾಮಿಕದಿಂದಾಗಿ ಆದಾಯ ಕಡಿಮೆಯಾಗಿರುವುದರಿಂದ ಹಣಕಾಸು ಮುಗ್ಗಟ್ಟಿನಿಂದಾಗಿ ಒಂದು ಕಣ್ಣಿನ ಶಸ್ತ್ರ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ’’ ಎಂದು ಡಾ.ರಾಮ್ ಮಿರ್ಲೆ ಅವರು ಹೇಳುತ್ತಾರೆ.

ಗಂಭೀರ ಸ್ವರೂಪದ ಡ್ರೈ ಐ ಪ್ರಮಾಣ

ಡಾ.ಅಗರ್‍ವಾಲ್ಸ್ ಐ ಹಾಸ್ಪಿಟಲ್ ಕ್ಲಿನಿಕಲ್ ಸರ್ವೀಸಸ್‍ನ ಪ್ರಾದೇಶಿಕ ಮುಖ್ಯಸ್ಥರಾದ ಡಾ.ಅರ್ಚನಾ ಎಸ್ ಅವರ ಪ್ರಕಾರ ಸಾಂಕ್ರಾಮಿಕಕ್ಕಿಂತ ಮುನ್ನ ಶೇ.10 ರಷ್ಟಿದ್ದ ಗಂಭೀರ ಸ್ವರೂಪದ ಡ್ರೈ ಐ ಪ್ರಮಾಣ ಈಗ ಶೇ.30 ಕ್ಕೆ ತಲುಪಿದೆ. ಇದಕ್ಕೆ ಪ್ರಮುಖ ಕಾರಣ ಮನೆಯಲ್ಲೇ ಕೆಲಸ ಮಾಡುತ್ತಿರುವ್ಯದರಿಂದ ಕರ್ತವ್ಯ ಜೀವನದ ಸಮತೋಲದಲ್ಲಿ ಏರುಪೇರಾಗಿರುವುದು ಮತ್ತು ಸುದೀರ್ಘ ಅವಧಿವರೆಗೆ ಜನರು ಡಿಜಿಟಲ್ ಸ್ಕ್ರೀನ್‍ಗಳನ್ನು ನೋಡುತ್ತಿರುವುದಾಗಿದೆ. ಡಿಜಿಟಲ್ ಸ್ಕ್ರೀನ್‍ಗಳನ್ನು ಹೆಚ್ಚು ನೋಡುವವರು ಸಾಮಾನ್ಯಕ್ಕಿಂತ ಅತ್ಯಂತ ಕಡಿಮೆ ಕಣ್ಣು ರೆಪ್ಪೆಗಳನ್ನು ಬಡಿಯುತ್ತಾರೆ ಮತ್ತು ಕೆಣ್ಣು ರೆಪ್ಪೆ ತೆರೆದು ಮುಚ್ಚಿದರೂ ಅದು ಪರಿಪೂರ್ಣವಾಗಿರುವುದಿಲ್ಲ. ಇದರ ಪರಿಣಾಮ ಸ್ಕ್ರೀನ್‍ಗಳ ಗ್ಲೇರ್ ಮತ್ತು ಪ್ರಖರತೆಯು ಕಣ್ಣುಗಳ ಮೇಲೆ ಒತ್ತಡವನ್ನು ಹೆಚ್ಚು ಮಾಡುತ್ತವೆ ಮತ್ತು ಡ್ರೈ ಐಗೆ ಕಾರಣವಾಗುತ್ತವೆ. ಇದನ್ನು ತಪ್ಪಿಸಬೇಕಾದರೆ ಕಂಪ್ಯೂಟರ್‍ನಲ್ಲಿ ಕೆಲಸ ಮಾಡುವ ವೇಳೆಯಲ್ಲಿ ಪ್ರತಿ 20 ನಿಮಿಷಗಳಿಗೆ ಒಮ್ಮೆಯಾದರೂ 20 ಸೆಕೆಂಡುಗಳ ಕಾಲ ಬೇರೆಡೆಗೆ ಅಥವಾ ಬೇರೆ ವಸ್ತುಗಳನ್ನು ನೋಡಬೇಕು. ಅದೂ ಸಹ 20 ಅಡಿಯಷ್ಟು ದೂರದಲ್ಲಿರುವ ವಸ್ತುವನ್ನು ನೋಡಬೇಕು ಅಥವಾ ತೆರೆದ ಕಿಟಕಿಯನ್ನು ನೋಡುವುದು ಇನ್ನೂ ಉತ್ತಮವಾಗಿರುತ್ತದೆ’’ .

ಕಣ್ಣಿನ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬಾರದು:

50 ವರ್ಷ ಮೇಲ್ಪಟ್ಟ ಡಯಾಬಿಟಿಕ್ ರೋಗಿಗಳು ಕನಿಷ್ಠ ಒಂದು ವರ್ಷಕ್ಕೆ ಒವ್ಮ್ಮೆಯಾದರೂ ಕಣ್ಣಿನ ವ್ಶೆದ್ಯರಿಂದ ತಮ್ಮ ಕಣ್ಣುಗಳನ್ನು ತಪಾಸಣೆ ಮಾಡಿಸಿಕೊಳ್ಳಬೇಕು. ದೃಷ್ಟಿಗೆ ಮಾರಕವಾಗುವಂತಹ ಡಯಾಬಿಟಿಕ್ ರೆಟಿನೋಪತಿಯಂತಹ ಡಯಾಬಿಟಿಕ್ ಕಣ್ಣಿನ ರೋಗವು ಶೇ.30 ಕ್ಕಿಂತಲೂ ಅಧಿಕವಾಗಿ ಬೆಳವಣಿಗೆಯಾಗಬಲ್ಲದು. ಸಾಂಕ್ರಾಮಿಕ ಅವಧಿಯಲ್ಲಿ ಇಂತಹ ರೋಗಿಗಳು ಹೆಚ್ಚು ಜಾಗರೂಕರಾಗಿರಬೇಕು ಮತ್ತು ನಿಯಮಿತ ತಪಾಸಣೆಗೆಂದು ಆಸ್ಪತ್ರೆಗೆ ಭೇಟಿ ನೀಡುವುದಕ್ಕೆ ಹಿಂದೇಟು ಹಾಕಬಾರದು. ಈ ವಿಚಾರದಲ್ಲಿ ಹಿಂದೇಟು ಹಾಕಿದರೆ ಅಥವಾ ವಿಳಂಬ ಮಾಡಿದರೆ ದೃಷ್ಟಿ ಕಳೆದುಕೊಳ್ಳುವುದು ಸೇರಿ ಇನ್ನಿತರೆ ಗಂಭೀರ ಸ್ವರೂಪದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಗ್ಲುಕೊಮಾ ರೋಗಿಗಳಿಗೂ ಅನ್ವಯವಾಗುತ್ತದೆ. ಒಂದು ವೇಳೆ ಅವರ ಪರಿಸ್ಥಿತಿ ಅಸ್ಥಿರವಾಗಿದ್ದರೆ ಅಥವಾ ಕಣ್ಣಿನ ನೋವು ಅಥವಾ ದೃಷ್ಟಿಯಲ್ಲಿ ಬದಲಾವಣೆಗಳಂತಹ ಅಸಮಾನ್ಯ ಲಕ್ಷಣಗಳು ಕಂಡು ಬಂದರೆ ಕೂಡಲೇ ಕಣ್ಣಿನ ತಜ್ಞರನ್ನು ಭೇಟಿಯಾಗಿ ಸೂಕ್ತ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ.

ಸಾಂಕ್ರಾಮಿಕದ ವೇಳೆಯಲ್ಲಿ ಜನರು ತಮ್ಮ ಕಣ್ಣಿನ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬಾರದು. ಒಂದು ವೇಳೆ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗದಿದ್ದರೆ ವೈದ್ಯರನ್ನು ಭೇಟಿ ಮಾಡಲು ಟೆಲಿ -ಕನ್ಸಲ್ಟ್ ಅತ್ಯುತ್ತಮ ಮಾರ್ಗವಾಗಿದೆ. ಬಹುತೇಕ ಪ್ರಕರಣಗಳಲ್ಲಿ ಈ ಟೆಲಿ ಕನ್ಸಲ್ಟ್ ಮೂಲಕ ಸಾಕಷ್ಟು ಸರಿಯಾದ ಸಲಹೆಗಳನ್ನು ಪಡೆಯಬಹುದಾಗಿದೆ. ಕೆಲವೊಮ್ಮೆ ವೈದ್ಯರು ಖುದ್ದಾಗಿ ಭೇಟಿಯಾಗುವಂತೆ ಸಲಹೆ ನೀಡಬಹುದು. ಇದು ಒಂದು ಸಣ್ಣ ಸಮಸ್ಯೆಯನ್ನು ಗಂಭೀರ ಸ್ವರೂಪಕ್ಕೆ ತಲುಪುವುದನ್ನು ತಪ್ಪಿಸುತ್ತದೆ. ಚಿಕಿತ್ಸೆ ಪಡೆಯಲು ವಿಳಂಬ ಮಾಡುವ ಬದಲು ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡುವುದನ್ನು ಆಯ್ಕೆ ಮಾಡಿಕೊಳ್ಳಿ. ಆಸ್ಪತ್ರೆಗಳಲ್ಲಿ ನಿಮಗೆ ಸುರಕ್ಷತೆ ಮತ್ತು ಇನ್ನಿತರೆ ವಿಧಾನಗಳನ್ನು ಅನುಷ್ಠಾನಗೊಳಿಸಲಾಗಿರುತ್ತದೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!