ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್ ಕರ್ನಾಟಕದಲ್ಲಿ ಎರಡು ವರ್ಷಗಳಲ್ಲಿ 175 ಕೋಟಿ ಹೂಡಿಕೆ : ಬೆಂಗಳೂರಿನ ಇಂದಿರಾನಗರದಲ್ಲಿ ಹೊಸ ಹಾಸ್ಪಿಟಲ್ ಉದ್ಘಾಟನೆ.

ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್ ಕರ್ನಾಟಕದಲ್ಲಿ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಮುಂದಿನ ಎರಡು ವರ್ಷಗಳಲ್ಲಿ 175 ಕೋಟಿ ರೂಪಾಯಿಗೂ ಅಧಿಕ ಬಂಡವಾಳವನ್ನು ಹೂಡುವ ಯೋಜನೆಗಳನ್ನು ರೂಪಿಸಿದೆ. ಬೆಂಗಳೂರಿನ ಇಂದಿರಾನಗರದಲ್ಲಿ ತನ್ನ ಸೂಪರ್-ಸ್ಪೆಷಾಲಿಟಿ ಐ ಕೇರ್ ಸೆಂಟರ್ ಉದ್ಘಾಟನೆ ಸಮಾರಂಭದಲ್ಲಿ ಸಂಸ್ಥೆಯು ಈ ಬಂಡವಾಳ ಹೂಡಿಕೆಯ ವಿಚಾರವನ್ನು ಘೋಷಣೆ ಮಾಡಿದೆ.

ಬೆಂಗಳೂರು, ಡಿಸೆಂಬರ್ 11, 2021: ಭಾರತದಲ್ಲಿ ಮುಂಚೂಣಿಯಲ್ಲಿರುವ ಐ ಕೇರ್ ವಿಶೇಷ ತಜ್ಞ ಸಂಸ್ಥೆಯಾಗಿರುವ ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್ ಕರ್ನಾಟಕದಲ್ಲಿ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಮುಂದಿನ ಎರಡು ವರ್ಷಗಳಲ್ಲಿ 175 ಕೋಟಿ ರೂಪಾಯಿಗೂ ಅಧಿಕ ಬಂಡವಾಳವನ್ನು ಹೂಡುವ ಯೋಜನೆಗಳನ್ನು ರೂಪಿಸಿದೆ. ಬೆಂಗಳೂರಿನ ಇಂದಿರಾನಗರದಲ್ಲಿ ತನ್ನ ಸೂಪರ್-ಸ್ಪೆಷಾಲಿಟಿ ಐ ಕೇರ್ ಸೆಂಟರ್ ಉದ್ಘಾಟನೆ ಸಮಾರಂಭದಲ್ಲಿ ಸಂಸ್ಥೆಯು ಈ ಬಂಡವಾಳ ಹೂಡಿಕೆಯ ವಿಚಾರವನ್ನು ಘೋಷಣೆ ಮಾಡಿದೆ.

ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್ ಕರ್ನಾಟಕದಲ್ಲಿ ಎರಡು ವರ್ಷಗಳಲ್ಲಿ 175 ಕೋಟಿ ಹೂಡಿಕೆ : ಬೆಂಗಳೂರಿನ ಇಂದಿರಾನಗರದಲ್ಲಿ ಹೊಸ ಹಾಸ್ಪಿಟಲ್ ಉದ್ಘಾಟನೆ.

ಈ ಹೊಸ ಕೇಂದ್ರದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ರೋಗಿಗಳಿಗೆ ಉಚಿತ ಕನ್ಸಲ್ಟೇಶನ್ ಅನ್ನು ನೀಡಲಾಗುತ್ತದೆ. ಈ ಕೊಡುಗೆ ಈ ತಿಂಗಳಾ0ತ್ಯದವರೆಗೆ ಇರುತ್ತದೆ. ಕರ್ನಾಟಕದ ಆರೋಗ್ಯ & ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಇಂದಿರಾನಗರದಲ್ಲಿನ ಹೊಸ ಐ ಕೇರ್ ಸೆಂಟರ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್‌ನ ಸಿಇಒ ಡಾ.ಆದಿಲ್ ಅಗರ್‌ವಾಲ್, ಬೆಂಗಳೂರು ಕೇಂದ್ರದ ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್ ಮತ್ತು ಸಿವಿ ರಾಮನ್‌ನಗರ ಕ್ಷೇತ್ರದ ಶಾಸಕರಾದ ಎಸ್.ರಘು ಅವರಿದ್ದರು.

ಮುಂದಿನ ಎರಡು ವರ್ಷಗಳಲ್ಲಿ ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್ ಕರ್ನಾಟಕದಲ್ಲಿ 150 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 25 ಹಾಸ್ಪಿಟಲ್‌ಗಳನ್ನು ಆರಂಭಿಸುವ ಯೋಜನೆಯನ್ನು ಹೊಂದಿದೆ. ಇದಲ್ಲದೇ, 25 ಕೋಟಿ ರೂಪಾಯಿ ವೆಚ್ಚದಲ್ಲಿ 30 ಕ್ಕೂ ಹೆಚ್ಚು ವಿಷನ್ ಸೆಂಟರ್‌ಗಳನ್ನು ಆರಂಭಿಸಲಿದ್ದು, ಒಟ್ಟಾರೆ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 175 ಕೋಟಿ ರೂಪಾಯಿ ಹೂಡಿಕೆಯನ್ನು ಮಾಡಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್‌ನ ಸಿಇಒ ಡಾ.ಆದಿಲ್ ಅಗರ್‌ವಾಲ್ ಅವರು, “ನಮ್ಮ ಸಮೂಹಕ್ಕೆ ಕರ್ನಾಟಕ ಉತ್ತಮ ಆದಾಯ ತಂದುಕೊಡುವ ರಾಜ್ಯವಾಗಿದೆ. ನಮ್ಮ ಒಟ್ಟಾರೆ ವ್ಯವಹಾರದಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಆದಾಯ ರಾಜ್ಯದಿಂದ ಬರುತ್ತಿದೆ. ಪ್ರಸ್ತುತ, ರಾಜ್ಯದಲ್ಲಿ ಒಟ್ಟು 15 ಕೇಂದ್ರಗಳನ್ನು ಹೊಂದಿದ್ದೇವೆ (ಬೆಂಗಳೂರಿನಲ್ಲಿ 11 ಮತ್ತು  ಹೊರಗೆ 4 ಕೇಂದ್ರಗಳು). ಮುಂದಿನ 36 ತಿಂಗಳಲ್ಲಿ ನಮ್ಮ ವಿಸ್ತರಣೆ ಮತ್ತಷ್ಟು ಹೆಚ್ಚಾಗಲಿದೆ. ಇದರ ಮೂಲಕ ನಮ್ಮ ಸಮೂಹದ ವ್ಯವಹಾರಕ್ಕೆ ರಾಜ್ಯದಿಂದ 200 ಕೋಟಿ ರೂಪಾಯಿಗಳಷ್ಟು ಆದಾಯ ಬರಲಿದೆ. ನಮಗೆ ಕರ್ನಾಟಕ ಪ್ರಮುಖ ರಾಜ್ಯವಾಗಿದೆ ಮತ್ತು ಈ ಹಿನ್ನೆಲೆಯಲ್ಲಿ ನಾವು ಬೆಂಗಳೂರು ಮತ್ತು ಬೆಂಗಳೂರಿನ ಹೊರಗಿನ ಸ್ಥಳಗಳಲ್ಲಿ ನಮ್ಮ ವ್ಯವಹಾರವನ್ನು ವಿಸ್ತರಣೆ ಮಾಡಲು ಬದ್ಧರಾಗಿದ್ದೇವೆ’’ ಎಂದು ತಿಳಿಸಿದರು.

ಇಂದಿರಾನಗರದಲ್ಲಿ ಹೊಸ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಆರೋಗ್ಯ & ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, “ಈ ಹೊಸ ಕೇಂದ್ರವನ್ನು ಉದ್ಘಾಟನೆ ಮಾಡಲು ನನಗೆ ಸಂತಸವೆನಿಸುತ್ತಿದೆ. ಇಂದಿರಾನಗರದಲ್ಲಿರುವ ಈ ಕೇಂದ್ರವು ಬೆಂಗಳೂರು ಪಶ್ಚಿಮ ಭಾಗ ಮತ್ತು ಇನ್ನಿತರೆ ಪ್ರದೇಶಗಳ ಜನರಿಗೆ ಇದರಿಂದ ಅತ್ಯುತ್ತಮವಾದ ನೇತ್ರ ಚಿಕಿತ್ಸೆ ದೊರೆಯಲಿದೆ. ದೃಷ್ಟಿ ಆರೈಕೆಯು ಜೀವನವನ್ನು ಬದಲಾಯಿಸಬಹುದು ಮತ್ತು ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್ ರಾಜ್ಯಾದ್ಯಂತ ಜನರ ಜೀವನವನ್ನು ಒಂದೊ0ದಾಗಿ ಬದಲಾಯಿಸುತ್ತಿದೆ. ಡಾ.ಅಗರ್‌ವಾಲ್ಸ್ ರಾಜ್ಯದಲ್ಲಿ ಹೆಚ್ಚು ಕ್ಲಿನಿಕ್‌ಗಳನ್ನು ತೆರೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆಸ್ಪತ್ರೆಯ ಈ ಜಾಲವು ಕಣ್ಣಿನ ಆರೈಕೆ ಕ್ಷೇತ್ರದಲ್ಲಿ ಅನುಕರಣೀಯವಾದ ಕೆಲಸ ಮಾಡುತ್ತಿದೆ ಹಾಗೂ ರಾಜ್ಯದಲ್ಲಿ ಹೊಸ ಹೊಸ ಕೇಂದ್ರಗಳನ್ನು ಆರಂಭಿಸುವ ಮೂಲಕ ಹೆಚ್ಚಿನ ಜನರಿಗೆ ಉತ್ತಮವಾದ ಕಣ್ಣಿನ ಆರೈಕೆಯನ್ನು ಪಡೆಯಲು ಸಹಾಯ ಮಾಡುತ್ತಿದೆ’’ ಎಂದು ಶ್ಲಾಘಿಸಿದರು.

ಇಂದಿರಾನಗರದಲ್ಲಿರುವ ಡಾ.ಅಗರ್‌ವಾಲ್ ಸೆಂಟರ್ ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್ ಜಾಲದ ರೀಫ್ರಾಕ್ಟೀವ್ ಹಬ್ ಆಗಿದೆ. ಅಂದರೆ, ಕರ್ನಾಟಕದ ಎಲ್ಲಾ ಡಾ.ಅಗರ್‌ವಾಲ್ ಶಾಖೆಗಳ ರೀಫ್ರಾಕ್ಟೀವ್  ಚಿಕಿತ್ಸೆಗಳನ್ನು ಈ ಕೇಂದ್ರದಿ0ದ  ನಡೆಸಲಾಗುತ್ತಿದೆ. ಈ ಕೇಂದ್ರವು ಸುಧಾರಿತ ತಂತ್ರಜ್ಞಾನ ಮತ್ತು ಸಮಗ್ರ ಕಣ್ಣಿನ ಆರೈಕೆಗಳನ್ನು ಸಮಗ್ರ ರೀತಿಯಲ್ಲಿ ಒದಗಿಸುವ ನಿಟ್ಟಿನಲ್ಲಿ ಸಕಲ ರೀತಿಯ ಸಲಕರಣೆಗಳನ್ನು ಹೊಂದಿದೆ. ಈ ಹಾಸ್ಪಿಟಲ್ ಎರಡು ಮಹಡಿಗಳಲ್ಲಿ ಆರಂಭವಾಗಿದ್ದು, 5,000 ಚದರಡಿ ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿ ಒಂದೇ ಸೂರಿನಡಿ ರೋಗಿಗಳಿಗೆ 360 ಡಿಗ್ರಿ ಸಮಗ್ರ ಕಣ್ಣಿನ ಆರೈಕೆಯನ್ನು ಮಾಡಲಾಗುತ್ತದೆ. ಜನರಲ್ ಆಫ್ತಾಲ್ಮೋಲಾಜಿ. ಕೆರ‍್ಯಾಕ್ಟ್ ಸೇವೆಗಳು, ಲೇಸರ್ ಕೆರ‍್ಯಾಕ್ಟ್ ಸರ್ಜರಿ, ರೆಟಿನಾ & ಕಾರ್ನಿಯಾ ಸೇವೆಗಳು, ಗ್ಲುಕೊಮಾ & ಆರ್ಬಿಟ್, ರೀಫ್ರಾಕ್ಟೀವ್ ಸರ್ಜರಿ ಮತ್ತು ಪಿಡಿಯಾಟ್ರಿಕ್ ಆಫ್ತಲ್ಮೋಲಾಜಿ ಸೇರಿದಂತೆ ಇನ್ನಿತರೆ ಸೇವೆಗಳನ್ನು ಇಲ್ಲಿ ನೀಡಲಾಗುತ್ತದೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!