ಮಕ್ಕಳಲ್ಲಿ ಕೋವಿಡ್19 ರೋಗದ ಲಕ್ಷಣಗಳು ಹೇಗಿರುತ್ತದೆ?

ಮಕ್ಕಳಲ್ಲಿ ಕೋವಿಡ್19 ರೋಗದ ಲಕ್ಷಣಗಳು ಇತರ ವಯಸ್ಕ ವ್ಯಕ್ತಿಗಳಂತೆ ಕೋವಿಡ್ ರೋಗದ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ.ಮಕ್ಕಳಲ್ಲಿ ಆಗ ತಾನೇ ಬೆಳವಣಿಗೆ ಹೊಂದುತ್ತಿರುವ ಹೆಚ್ಚು ಶಕ್ತಿಶಾಲಿಯಾದ ರಕ್ಷಣಾ ವ್ಯವಸ್ಥೆ ಇರುವ ಕಾರಣ ರೋಗದ ಲಕ್ಷಣಗಳು ಬಹಳ ಕನಿಷ್ಟ ಪ್ರಮಾಣದಲ್ಲಿ ಇರುತ್ತದೆ ಎಂದು ಅಂದಾಜಿಸಲಾಗಿದೆ.

ಮಕ್ಕಳಲ್ಲಿ ಕೋವಿಡ್19 ರೋಗದ ಲಕ್ಷಣಗಳು ಹೇಗಿರುತ್ತದೆ?ಎಲ್ಲಾ ವಯಸ್ಸಿನ ಮಕ್ಕಳು ಕೋವಿಡ್-19 ರೋಗದಿಂದ ಬಳಲುವ ಸಾಧ್ಯತೆ ಇರುತ್ತದೆ. ಆದರೆ ಮಕ್ಕಳು ಇತರ ವಯಸ್ಕ ವ್ಯಕ್ತಿಗಳಂತೆ ಕೋವಿಡ್ ರೋಗದ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ. ಮಕ್ಕಳಲ್ಲಿ ತೀವ್ರತರವಾದ ಕೋವಿಡ್-19 ರೋಗ ವಯಸ್ಕರಂತೆ ಕಂಡು ಬರುವುದಿಲ್ಲ. ಅಮೇರಿಕಾ ದೇಶವೊಂದರಲ್ಲಿಯೆ ಮೊದಲು ಕಾಣಿಸಿಕೊಂಡ 1,50,000 ಕೋವಿಡ್ ರೋಗಿಗಳಲ್ಲಿ ಮಕ್ಕಳ ಪ್ರಮಾಣ 1.7 ಶೇಕಡಾ ಅಂದರೆ ಸುಮಾರು 2500 ಮಕ್ಕಳು ಮಾತ್ರ. ಚೈನಾ, ಸ್ಪೇನ್, ಇಟೆಲಿ ದೇಶಗಳಲ್ಲಿಯೂ ಮಕ್ಕಳಲ್ಲಿ ಸೋಂಕಿತರ ಮತ್ತು ಮರಣ ಹೊಂದಿದವರ ಪ್ರಮಾಣ ಬಹಳ ಕಡಿಮೆ ಇರುತ್ತದೆ. ಮಕ್ಕಳಲ್ಲಿ ಆಸ್ಪತ್ರೆಗೆ ಒಳರೋಗಿಯಾಗಿ ಚಿಕಿತ್ಸೆ ನೀಡುವಷ್ಟು ತೀವ್ರ ತರವಾಗಿ ಕಾಡುವುದಿಲ್ಲ ಎಂದೂ ತಿಳಿದು ಬಂದಿದೆ.

ಕಾರಣ ಏನು?

ಮಕ್ಕಳಲ್ಲಿ ಪದೇ ಪದೇ ಶೀತ, ನೆಗಡಿ ಆಗುತ್ತಿರುತ್ತದೆ ಮತ್ತು ಅಂತಹಾ ವೈರಾಣುಗಳ ವಿರುದ್ಧ ಆಂಟಿಬಾಡಿಗಳು ಉತ್ಪತ್ತಿಯಾಗಿರುತ್ತದೆ. ಈ ಆಂಟಿಬಾಡಿಗಳು ಕೋವಿಡ್-19 ವಿರುದ್ಧ ರಕ್ಷಣೆ ನೀಡುವ ಸಾಧ್ಯತೆ ಇರುತ್ತದೆ. ಮಕ್ಕಳ ರಕ್ಷಣಾ ವ್ಯವಸ್ಥೆ ವಯಸ್ಕರಿಗಿಂತ ವಿಭಿನ್ನವಾಗಿದ್ದು, ಬೇರೆಯೇ ರೀತಿ ವರ್ತಿಸುತ್ತದೆ ಎಂದು ವೈದ್ಯರು ಅಂದಾಜಿಸಿದ್ದಾರೆ. ಅಲ್ಲದೆ, ವಯಸ್ಕರಲ್ಲಿ ರಕ್ಷಣಾ ವ್ಯವಸ್ಥೆ ಬಹಳ ಉಗ್ರವಾಗಿ ಪ್ರತಿರೋಧ ಒಡ್ಡುವ ಕಾರಣದಿಂದಾಗಿ, ರೋಗದ ಲಕ್ಷಣಗಳು ಹೆಚ್ಚು ಕಂಡು ಬರುತ್ತದೆ ಎನ್ನಲಾಗಿದೆ. ಇದಲ್ಲದೆ, ಮಕ್ಕಳಲ್ಲಿ ದೀರ್ಘಕಾಲಿಕ ಕಾಯಿಲೆಗಳಾದ ಹೃದಯದ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡ ಮುಂತಾದ ಕಾಯಿಲೆ ಇರುವುದಿಲ್ಲ. ಮಕ್ಕಳಲ್ಲಿ ಆಗ ತಾನೇ ಬೆಳವಣಿಗೆ ಹೊಂದುತ್ತಿರುವ ಹೆಚ್ಚು ಶಕ್ತಿಶಾಲಿಯಾದ ರಕ್ಷಣಾ ವ್ಯವಸ್ಥೆ ಇರುವ ಕಾರಣ ರೋಗದ ಲಕ್ಷಣಗಳು ಬಹಳ ಕನಿಷ್ಟ ಪ್ರಮಾಣದಲ್ಲಿ ಇರುತ್ತದೆ ಎಂದು ಅಂದಾಜಿಸಲಾಗಿದೆ.

ಇನ್ನು 12 ತಿಂಗಳ ಒಳಗಿನ ಮಕ್ಕಳನ್ನು ಶಿಶುಗಳು ಎಂದು ಪರಿಗಣಿಸಲಾಗುತ್ತದೆ. ಇಂತಹ ಶಿಶುಗಳಲ್ಲಿ ರಕ್ಷಣಾ ವ್ಯವಸ್ಥೆ ಪೂರ್ತಿಯಾಗಿ ಬೆಳವಣಿಗೆಯಾಗಿರುವುದಿಲ್ಲ. ಅಂತಹ ಶಿಶುಗಳಿಗೆ ತಾಯಿಯಿಂದ ಬಳುವಳಿಯಾಗಿ ಬಂದ ಆಂಟಿಬಾಡಿಗಳು ರಕ್ಷಣೆ ನೀಡುತ್ತದೆ. ಶಿಶುಗಳಲ್ಲಿ ಕೋವಿಡ್-19 ರೋಗ ಸ್ವಲ್ಪ ಭಿನ್ನವಾಗಿರುತ್ತದೆ. ಮಕ್ಕಳಿಗಿಂತ ಜಾಸ್ತಿ ಉಗ್ರವಾಗಿ ಕಂಡು ಬರಬಹುದು. ಮಕ್ಕಳಲ್ಲಿ ಗಾಳಿ ನಳಿಕೆ ಮತ್ತು ಉಸಿರಾಟದ ವ್ಯವಸ್ಥೆ ಪೂರ್ತಿಯಾಗಿ ಬೆಳವಣಿಗೆ ಹೊಂದಿರದ ಕಾರಣ ಬಹಳ ಬೇಗ ಉಸಿರಾಟದ ತೊಂದರೆ ಕಂಡು ಬರುವ ಸಾಧ್ಯತೆ ಇರುತ್ತದೆ. ಶಿಶುಗಳಿಗೆ ಸಾಮಾನ್ಯವಾಗಿ ಹೆರಿಗೆ ಸಂದರ್ಭದಲ್ಲಿ ತಾಯಿಯಿಂದ ಅಥವಾ ಸೋಂಕಿತ ದಾದಿ, ಶುಶ್ರೂಷಕಿಯರು ಅಥವಾ ವೈದ್ಯರಿಂದ ಸೋಂಕು ಬರುವ ಸಾಧ್ಯತೆ ಇರುತ್ತದೆ. ಒಟ್ಟಿನಲ್ಲಿ 1 ವರ್ಷದ ಒಳಗಿನ ಮಕ್ಕಳು ಅಂದರೆ ಶಿಶುಗಳಲ್ಲಿ ಕೋವಿಡ್-19 ರೋಗ ಇತರ ಮಕ್ಕಳಿಗಿಂತ ಹೆಚ್ಚು ಉಗ್ರವಾಗಿ ಕಾಣಿಸುವುದರಿಂದ ಹೆಚ್ಚಾಗಿ ಅವರಿಗೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾತಿ ಮಾಡಿ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇರುತ್ತದೆ.

ಮಕ್ಕಳಲ್ಲಿ ಕೋವಿಡ್-19 ರೋಗದ ಲಕ್ಷಣಗಳು ಹೇಗಿರುತ್ತದೆ?

ಮಕ್ಕಳಲ್ಲಿ ಕೋವಿಡ್19 ರೋಗದ ಲಕ್ಷಣಗಳು ಹೇಗಿರುತ್ತದೆ?ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಕೋವಿಡ್-19 ರೋಗದ ಲಕ್ಷಣಗಳು ಹೆಚ್ಚು ಕಡಿಮೆ ಒಂದೇ ರೀತಿಯಾಗಿದ್ದರೂ ರೋಗದ ಲಕ್ಷಣಗಳ ತೀವ್ರತೆ ಕಡಿಮೆ ಇರುತ್ತದೆ. ಸಾಮಾನ್ಯವಾಗಿ ಕಾಮನ್ ಕೋಲ್ಡ್ ಅಥವಾ ನೆಗಡಿ, ಶೀತ ಉಂಟಾದಾಗ ಇರುವ ಲಕ್ಷಣಗಳು ಕಂಡುಬರುತ್ತದೆ. ಜ್ವರ, ಶೀತ, ಕೆಮ್ಮು, ಸುಸ್ತು, ಸ್ನಾಯುಸೆಳೆತ, ವಾಂತಿ, ಬೇಧಿ ಮುಂತಾದ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿ ಕಂಡು ಬರುತ್ತದೆ. ಇನ್ನು ಕೆಲವೊಂದು ಮಕ್ಕಳಲ್ಲಿ ಯಾವುದೇ ರೀತಿಯ ಲಕ್ಷಣಗಳು ಗೋಚರಿಸದೇ ಇರುವ ಸಾಧ್ಯತೆಯೂ ಇರುತ್ತದೆ. ಇಂತಹಾ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಸಲಹೆ ಸೂಚನೆ ಪಡೆಯತಕ್ಕದ್ದು. ತಂದೆ-ತಾಯಂದಿರು ಕೋವಿಡ್-19 ಸೋಂಕಿತರಾಗಿದ್ದಲ್ಲಿ ಎಲ್ಲ ರೀತಿಯ ರೋಗ ಹರಡದಂತೆ ತಡೆಗಟ್ಟುವ ಮುಖಕವಚ, ಕೈಸ್ವಚ್ಛತೆ, ಸಾಮಾಜಿಕ ಅಂತರ, ಮನೆಯಲ್ಲಿನ ಸ್ವಚ್ಛತೆ ಮುಂತಾದ ಎಲ್ಲಾ ವಿಚಾರಗಳನ್ನು ಕೂಲಂಕುಶವಾಗಿ ಅನುಸರಿಸಬೇಕಾಗುತ್ತದೆ. ವೈದ್ಯರ ಸಲಹೆಯಂತೆ ಬೇಕಾದ ಎಲ್ಲಾ ಔಷಧೋಪಚಾರಗಳನ್ನು ನೀಡಿದಲ್ಲಿ ಮಕ್ಕಳು ಬೇಗನೆ ಚೇತರಿಸಿಕೊಳ್ಳುವ ಎಲ್ಲ ಸಾಧ್ಯತೆ ಇರುತ್ತದೆ.

ಕೊನೆ ಮಾತು

ಕೋವಿಡ್-19 ಸೋಂಕು ಶಿಶುಗಳು, ಮಕ್ಕಳು, ವಯಸ್ಕರು, ಯುವಕರು ಹೀಗೆ ಎಲ್ಲಾ ವಯಸ್ಸಿನ ಜನರನ್ನು ಸಮಾನವಾಗಿ ಕಾಡುತ್ತದೆ. ವಯಸ್ಕರಲ್ಲಿ ಮತ್ತು ದೇಹದ ರಕ್ಷಣಾ ವ್ಯವಸ್ಥೆ ಕುಂದಿದ ವ್ಯಕ್ತಿಗಳಲ್ಲಿ ಕೋವಿಡ್-19 ಸೋಂಕು ಹೆಚ್ಚು ವ್ಯಗ್ರವಾಗಿ ಪ್ರಕಟಗೊಳ್ಳುತ್ತದೆ. 1 ರಿಂದ 5 ವರ್ಷದ ಮಕ್ಕಳಲ್ಲಿ ಜಾಸ್ತಿ ಉಗ್ರವಾಗಿ ಪ್ರಕಟಗೊಳ್ಳುವುದಿಲ್ಲ. ಆದರೆ ಶಿಶುಗಳಲ್ಲಿ ಅಂದರೆ 1 ವರ್ಷದ ಕೆಳಗಿನ ವಯಸ್ಸಿನ ಮಕ್ಕಳಲ್ಲಿ ಹೆಚ್ಚು ಉಗ್ರವಾಗಿ ಕಂಡು ಬರುತ್ತದೆ ಎಂದೂ ತಿಳಿದುಬಂದಿದೆ. ಅದೇನೇ ಇರಲಿ, ಈ ಹೊಸದಾಗಿ ಹುಟ್ಟಿಕೊಂಡಿರುವ ಕೋವಿಡ್-19 ರೋಗವನ್ನು ಬರದಂತೆ ತಡೆಗಟ್ಟುವುದರಲ್ಲಿಯೇ ಹೆಚ್ಚು ಜಾಣತನ ಅಡಗಿದೆ ಎಂದು ವೈದ್ಯರುಗಳು ಅಭಿಪ್ರಾಯಪಟ್ಟಿದ್ದಾರೆ ,

ಡಾ| ಮುರಲೀ ಮೋಹನ್ ಚೂಂತಾರು ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ, ಮಂಜೇಶ್ವರ- 671 323 ದೂ.: 04998-273544, 235111  ಮೊ.: 9845135787

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
Email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!