ನಿಮ್ಮ ಮಗು ತುಂಬಾ ಹಠ ಮಾಡುತ್ತದೆಯೇ?.. ಬೇರೆಯವರಿಗೆ ಹೊಡೆಯುತ್ತದೆಯೇ?.. ಕೈಗೆ ಸಿಕ್ಕ ವಸ್ತುಗಳನ್ನು ಎಸೆಯುತ್ತದೆಯೇ?.. ವಿಪರೀತ ಸಿಡುಕು ಸ್ವಭಾವವೇ?… ಹಾಗಾದರೆ ಸಿಡಿಯುವ ಇಂತಹ ನಡವಳಿಕೆಯಿಂದ ಮಗುವನ್ನು ಪಾರು ಮಾಡಬೇಕಾದರೆ ನೀವು ಟೈಮ್‍ಔಟ್ ಬಿಹೇವಿಯೊರಾಲ್ ಇಂಟರ್‍ವೆನ್‍ಷನ್ ಅಪ್ರೋಚ್ ವಿಧಾನವನ್ನು ಅನುಸರಿಸಬೇಕಾಗುತ್ತದೆ.
ಮಕ್ಕಳಲ್ಲಿ ಕೆಲವೊಮ್ಮೆ ವಿಭಿನ್ನ ನಡವಳಿಕೆಗಳು ಸಹಜ.
- ವೈರತ್ವ, ಕಲಹ ಪ್ರಿಯತೆ, ಆಕ್ರಮಣಶೀಲತೆ, ಮೊಂಡುತನ. ಹಟಮಾರಿ ಧೋರಣೆ ಮತ್ತು ವಿನಾಶಕಾರಿ ನಡವಳಿಕೆಗಳು
- ವಿಪರೀತ ತುಂಟತನ, ತುಂಬಾ ಚೇಷ್ಟೆ ಸ್ವಭಾವ ಮತ್ತು ಬಂಡುತನದ ಪ್ರವೃತ್ತಿ.
- ಹೇಳಿದ ಮಾತು ಕೇಳವುದು ಕಷ್ಟ ಮತ್ತು ಸಾಮಾಜಿಕವಾಗಿ ಯಾರೂ ಒಪ್ಪಲು ಸಾಧ್ಯವಿಲ್ಲದ ವರ್ತನೆ.
- ‘ಕೆಟ್ಟ’ ಅಥವಾ ಆಕ್ರಮಣಕಾರಿ ಕೃತ್ಯಗಳು.
- ಸುಳ್ಳು ಹೇಳುವುದು ಅಥವಾ ವಸ್ತುಗಳ ಕಳ್ಳತನ
- ಅಗಾಗ ಕೋಪಗೊಳ್ಳುವುದು ಮತ್ತು ಆಕ್ರೋಶಗೊಳ್ಳುವುದು.
- ಅಗಾಗ ಮುಂಗೋಪ ಪ್ರದರ್ಶನ ಮತ್ತು ವಾದ-ವಾಗ್ವಾದ ಮಾಡುವುದು
- ಆಸ್ತಿ-ಪಾಸ್ತಿಯನ್ನು ಹಾನಿಗೊಳಿಸುವುದು ಅಥವಾ ನಾಶ ಮಾಡುವುದು
- ದೊಡ್ಡವರ ಮೇಲೆ ನಿರಂತರ ವೈರತ್ವ
- ತನಗೆ ತಾನೇ ಗಾಯ ಮಾಡಿಕೊಳ್ಳುವುದು.
- ಉದ್ದೇಶಪೂರ್ವಕವಾಗಿ ಇತರ ಜನರು ಮತ್ತು ಪ್ರಾಣಿಗಳನ್ನು ಪೀಡಿಸಿ ಕೆರಳಿಸುವುದು.
- ವಯಸ್ಸಿಗೆ ಮುನ್ನವೇ ಲೈಂಗಿಕ ಚಟುವಟಿಕೆ ಇತ್ಯಾದಿ….
ಕಾರಣಗಳು :
ಮಕ್ಕಳಲ್ಲಿ ನಡವಳಿಕೆ ದೋಷಗಳು ಕಾಣಿಸಿಕೊಳ್ಳಲು ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಅಂಶಗಳು ಕಾರಣವಾಗುತ್ತವೆ.
- ಅನುವಂಶೀಯ ಕಾರಣಗಳು
- ಮೆದುಳು ಹಾನಿ
- ಮಕ್ಕಳ ಶೋಷಣೆ/ದೌರ್ಜನ್ಯ
- ಶಾಲಾ ವಿಫಲತೆ
- ಆಘಾತಕಾರಿ ಜೀವನ ಅನುಭವಗಳು
- ತಾಯಿಯಿಂದ ಚಿಕ್ಕವಯಸ್ಸಿನಲ್ಲೇ ಪರಿತ್ಯಕ್ತವಾಗುವಿಕೆ
- ಪೋಷಕರಿಂದ ದೂರವಾಗುವಿಕೆ
- ಪೋಷಕರ ಮಾನಸಿಕ ಅನಾರೋಗ್ಯ
- ಗೃಹ ಬಂಧನ/ಮನೆಯಲ್ಲಿ ಶೋಚಣೆ
ನಡವಳಿಕೆ ದೋಷಗಳಿರುವ ಮಕ್ಕಳು ಸಾಮಾನ್ಯವಾಗಿ ಈ ಕೆಳಕಂಡ ಸಮಸ್ಯೆಗಳನ್ನು ಹೊಂದಿರುತ್ತಾರೆ :
- ಶೈಕ್ಷಣಿಕ ತೊಂದರೆಗಳು
- ಸಮಾನ ವಯಸ್ಕರು ಅಥವಾ ದೊಡ್ಡವರ ಜೊತೆ ದುರ್ಬಲ ಸಂಬಂಧ
- ದತ್ತು ಕೇಂದ್ರಗಳು, ಸಮೂಹ ನಿವಾಸಗಳು ಅಥವಾ ರಿಮ್ಯಾಂಡ್ ಹೋಮ್‍ಗಳಲ್ಲಿ ಇರುವುದು ಕಷ್ಟವಾಗುವಿಕೆ
- ಗಾಯಗಳು, ಶಾಲೆಯಿಂದ ಉಚ್ಚಾಟನೆಗಳು ಮತ್ತು ಕಾನೂನು ಸಮಸ್ಯೆಗಳು.
- ತುಂಬಾ ಚಿಕ್ಕ ವಯಸ್ಸಿನಲ್ಲೇ ನಡವಳಿಕೆ ದೋಷಗಳನ್ನು ಸರಿಪಡಿಸದಿದ್ದರೆ, ವರ್ತನೆಗಳ ವಿಧಾನ ಇನ್ನಷ್ಟು ಉಲ್ಬಣಗೊಳ್ಳುತ್ತದೆ.
- ಇಂಥ ಮಕ್ಕಳು ಬೆಳೆದಂತೆ ಪದೇ ಪದೇ ಕಾನೂನು ಉಲ್ಲಂಘನೆ ಅಥವಾ ಸಮಾಜಘಾತುಕ ರೀತಿಯಲ್ಲಿ ವರ್ತಿಸಬಹುದು.
ನಡವಳಿಕೆ ದೋಷಗಳಲ್ಲಿ ಮಾಡಬೇಕಾದುದು ಮತ್ತು ಮಾಡಬಾರದುದು :
- ಪೋಷಕರ ಕಡೆಯಿಂದ ಸಕ್ರಿಯ ಸಹಕಾರ ಅಗತ್ಯವಾಗಿ ಬೇಕಾಗುತ್ತದೆ.
- ಮಕ್ಕಳಿಗೆ ಅಗಾಗ ಮಾರ್ಗದರ್ಶನ ಮತ್ತು ಗಮನದ ಅಗತ್ಯವಿರುವುದರಿಂದ ಅವರೊಂದಿಗೆ ಅಪ್ತ ಮತ್ತು ಮುಕ್ತ ಸಂಬಂಧ ಹೊಂದಿರಬೇಕಾಗುತ್ತದೆ.
- ಉತ್ತಮ ಮತ್ತು ಪ್ರಾಮಾಣಿಕ ನಡವಳಿಕೆಯನ್ನು ಪ್ರಶಂಸಿಸಿ ಮತ್ತು ಮೆಚ್ಚುಗೆ ಸೂಚಿಸಿ ಉಡುಗೊರೆ ನೀಡಬೇಕು.
- ಮಕ್ಕಳಿಗೆ ಶಿಕ್ಷೆ ನೀಡುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಶಿಕ್ಷೆ ನೀಡಲೇಬೇಕಾದ ಅಗತ್ಯವಿದ್ದರೆ, ಸಣ್ಣ ಪುಟ್ಟ ಮನೆಗೆಲಸ ಮಾಡಿಸುವ ಮೂಲಕ, ಸಿಹಿತಿಂಡಿಗಳನ್ನು (ಆಹಾರವನ್ನಲ್ಲ) ನಿರಾಕರಿಸುವ ಮೂಲಕ ಅಥವಾ ಟಿವಿ ನೋಡುವುದನ್ನು ಬೇಡ ಎನ್ನುವ ಮೂಲಕ ಸಣ್ಣ ಪ್ರಮಾಣದ ಶಿಕ್ಷೆಯಾಗಿ ನೀಡಬಹುದು.
- ಇಂಥ ನಡವಳಿಕೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಶಾಲೆಯಲ್ಲಿನ ಮಾನಸಿಕ ಆಪ್ತಸಮಾಲೋಚಕರ ನೆರವನ್ನು ಪೋಷಕರು ಪಡೆಯಬಹುದು.
ನಡವಳಿಕೆ ದೋಷಗಳ ನಿರ್ವಹಣೆ :
- ವೈದ್ಯರು ಮತ್ತು ನಡವಳಿಕೆ ಮಾನಸಿಕ ತಜ್ಞರನ್ನು ಸಂಪರ್ಕಿಸಬೇಕು. ಹಿಂದಿನ ಕೆಟ್ಟ ವರ್ತನೆಗಳು, ಗಾಯ(ದೈಹಿಕ ಮತ್ತು ಮಾನಸಿಕ) ಮತ್ತು ಪರಿಸರ ಕಾರಣಗಳಿಂದ ಉಂಟಾದ ನಡವಳಿಕೆ ದೋಷಗಳ ನಿರ್ವಹಣೆಯಲ್ಲಿ ಔಷಧಿಗಳು ಪರಿಣಾಮಕಾರಿ ಪಾತ್ರ ವಹಿಸುತ್ತವೆ.
- ಚಿಕಿತ್ಸೆ ಆರಂಭಿಸುವುದಕ್ಕೂ ಮುನ್ನ ಮಗುವನ್ನು ಹೊಂದಾಣಿಕೆಯಾಗದ ಪರಿಸರದಿಂದ ದೂರ ಇರಿಸುವುದು ಮುಖ್ಯ.
- ಪೋಷಕರು, ವೈದ್ಯರು ಮತ್ತು ನಡವಳಿಕೆ ಮಾನಸಿಕ ತಜ್ಞರ ಸಂಯೋಜಿತ ಪ್ರಯತ್ನಗಳಿಂದ ಮಗುವಿನ ಅಸಾಧಾರಣ ನಡವಳಿಕೆಯಲ್ಲಿನ ಬದಲಾವಣೆ ತರಲು ಸಾಧ್ಯ.
- ನಡವಳಿಕೆ ಸರಿಪಡಿಸುವ ತಜ್ಞರು ಮಗುವಿಗೆ ವೈಯಕ್ತಿಕ ಸೈಕೋಥೆರಪಿ ಚಿಕಿತ್ಸೆಯನ್ನು ನಡೆಸಿ, ಮಗುವಿನ
- ನಿರ್ವಹಣಾ ಕೌಶಲ್ಯಗಳ ಬಗ್ಗೆ ಪೋಷಕರಿಗೆ ತರಬೇತಿ ಸಹ ನೀಡುತ್ತಾರೆ.
ಅಭ್ಯಾಸ ದೋಷಗಳಲ್ಲಿ ಮಾಡಬೇಕಾದುದು ಮತ್ತು ಮಾಡಬಾರದುದು:
- ಹೆಬ್ಬೆರಳು ಚೀಪುವಿಕೆ ಮತ್ತು ಉಗುರು ಕಡಿಯುವಿಕೆ ಬಹುತೇಕ ಮಕ್ಕಳಲ್ಲಿರುವ ಅಭ್ಯಾಸ, ಚಟ ಅಥವಾ ದೋಷ ಇದನ್ನು ತಾಳ್ಮೆಯಿಂದ ಸರಿಪಡಿಸಿಕೊಳ್ಳಬೇಕು.
- ನಿಮ್ಮ ಮಗು ಉಗುರನ್ನು ಕಚ್ಚುವಾಗ ಮಗುವಿನ ಕೈಗಳನ್ನು ಆ ಚಟದಿಂದ ದೂರವಿರಿಸಬೇಕು. ಮಗುವಿನ ಕೈಗಳು ಡ್ರಾಯಿಂಗ್, ರೈಟಿಂಗ್ ಅಥವಾ ಸ್ಟ್ರೆಸ್ ಬಾಲ್ ಅದುಮುವಿಕೆ ಇತರ ಚಟುವಟಿಕೆಗಳಲ್ಲಿ ತೊಡುಗುವಂತೆ ಮಾಡಬೇಕು.
- ಮಗು ಉಗುರು ಕಚ್ಚುವ ಅಥವಾ ಹೆಬ್ಬೆರಳು ಚೀಪುವ ಸಮಯ ಮತ್ತು ಸಂಖ್ಯೆಯನ್ನು ದಾಖಲು ಮಾಡಿ. ಇದರಿಂದ ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳಲು ಮಗುವಿಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡಿದಂತಾಗಿ, ಅಭ್ಯಾಸವನ್ನು ನಿಲ್ಲಿಸಲು ಸಹಾಯವಾಗುತ್ತದೆ.
- ಉಗುರು ಕಚ್ಚುವುದರಿಂದ ಅಥವಾ ಹೆಬ್ಬೆರೆಳು ಚೀಪುವುದರಿಂದ ಹಲ್ಲುಗಳ ಮೇಲೆ ಉಂಟಾಗುದ ಪರಿಣಾಮ, ಬೆರಳುಗಳಿಗೆ ಹಾನಿ, ಪದೇ ಪದೇ ಗಂಟಲು ಮತ್ತು ಬೆರಳು ಸೋಂಕು ಇತ್ಯಾದಿ ಸಮಸ್ಯೆಗಳು ಉಂಟಾಗುವ ಬಗ್ಗೆ ಮಗುವಿಗೆ ಮನವರಿಕೆ ಮಾಡಿಕೊಟ್ಟು ಕೆಟ್ಟ ಅಭ್ಯಾಸದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು.
- ಇಂಥ ಚಟವಿರುವ ಮಕ್ಕಳ ಕೈಗಳಿಗೆ ಗೌವ್ಸ್‍ಗಳು ಅಥವಾ ಅಡೆಸ್ಸಿವ್ ಬ್ಯಾಂಡೇಜ್‍ಗಳನ್ನು ಹಾಕಬಹುದು. ಅದರೆ, ಅಭ್ಯಾಸ ದೋಷಗಳ ಚಿಕಿತ್ಸೆಯಲ್ಲಿ ಇದು ತುಂಬಾ ಪರಿಣಾಮಕಾರಿಯಲ್ಲ.
ಮಕ್ಕಳ ಹಠಮಾರಿತನ ನಿವಾರಣೆ ?
- ನಿಮ್ಮ ಮಗು ತುಂಬಾ ಹಠ ಮಾಡುತ್ತದೆಯೇ?.. ಬೇರೆಯವರಿಗೆ ಹೊಡೆಯುತ್ತದೆಯೇ?.. ಕೈಗೆ ಸಿಕ್ಕ ವಸ್ತುಗಳನ್ನು ಎಸೆಯುತ್ತದೆಯೇ?.. ವಿಪರೀತ ಸಿಡುಕು ಸ್ವಭಾವವೇ?… ಹಾಗಾದರೆ ಸಿಡಿಯುವ ಇಂತಹ ನಡವಳಿಕೆಯಿಂದ ಮಗುವನ್ನು ಪಾರು ಮಾಡಬೇಕಾದರೆ ನೀವು ಟೈಮ್‍ಔಟ್ ಬಿಹೇವಿಯೊರಾಲ್ ಇಂಟರ್‍ವೆನ್‍ಷನ್ ಅಪ್ರೋಚ್ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಇದನ್ನು ಕನ್ನಡ ಭಾಷೆಗೆ ಅನುವಾದಿಸುವುದಾದರೆ ಸಮಯಪ್ರಜ್ಞೆಯ ನಡವಳಿಕೆ ಮಧ್ಯಸ್ಥಿಕೆ ವಿಧಾನ ಎನ್ನಬಹುದು.
- ಈ ವಿಧಾನದಲ್ಲಿ ಮಗು ತುಂಬಾ ಹಠ ಮಾಡುತ್ತಾ ಈ ಮೇಲಿನ ವರ್ತನೆಗಳನ್ನು ತೋರಿಸಿದಾಗ, ಆ ಪರಿಸರದಿಂದ ಸ್ವಲ್ಪ ಕಾಲ (2-4 ನಿಮಿಷಗಳು) ಮಗುವನ್ನು ಹೊರಕ್ಕೆ ತರಲಾಗುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಟೈಮ್‍ಔಟ್ (ಮಗುವನ್ನು ಆ ವಾತಾವರಣದಿಂದ ಹೊರತರುವಿಕೆ) ಎನ್ನುತ್ತಾರೆ. ಹಠ ಮಾಡುವ, ಚಂಡಿ ಹಿಡಿಯುವ, ಹೊಡೆಯುವ, ತನ್ನನ್ನೇ ಘಾಸಿಗೊಳಿಸುವ, ವಸ್ತುಗಳನ್ನು ಎಸೆಯುವ, ಜೋರಾಗಿ ಕಿರುಚುವ – ಇಂಥ ಸ್ವಭಾವದ ಮಕ್ಕಳ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಯಶಸ್ವಿ ಮಧ್ಯಪ್ರವೇಶದ ವಿಧಾನವಾಗಿದೆ. ಮಗು ಮೇಲಿನ ತೊಂದರೆಗಳಿಗೆ ಒಳಗಾದಾಗ ಸಕಾಲದಲ್ಲಿ ಆ ಬಗ್ಗೆ ಗಮನ ಹರಿಸುವುದು ಇದರ ಉದ್ದೇಶ.
- ಮಗು ಹಠ ಮಾಡಿದಾಗ ಹೊಡೆಯುವುದು ಮತ್ತು ಗದರಿ ಎಚ್ಚರಿಕೆ ನೀಡುವಂಥ ಶಿಕ್ಷೆಯ ಬದಲು ಇದು ತುಂಬಾ ಉತ್ತಮ ವಿಧಾನವಾಗಿದೆ.
- ಪೋಷಕರು ಮೊದಲ ಬಾರಿಗೆ ಟೈಮ್-ಔಟ್ ವಿಧಾನವನ್ನು ಅಳವಡಿಸುವಾಗ ಅನೇಕ ಮಕ್ಕಳು ಜೋರಾಗಿ ಕಿರುಚುತ್ತವೆ ಅಥವಾ ಅಳುತ್ತವೆ. ಇದು ಸಾಮ್ಯಾನ ಮತ್ತು ಇದನ್ನು ನಿರ್ಲಕ್ಷಿಸಬೇಕಾಗುತ್ತದೆ. ಹಲವಾರು ಬಾರಿ ಟೈಮ್-ಔಟ್ ವಿಧಾನಗಳ ನಂತರ ಮಗು ಕಿರುಚುವುದು ಅಥವಾ ಅಳುವುದನ್ನು ನಿಲ್ಲಿಸುತ್ತವೆ. ಆದರೆ, ಮಗು ತನಗೆ ತಾನೇ ಹಾನಿ ಮಾಡಿಕೊಳ್ಳುವ ಸಾಧ್ಯತೆ ಇರುವ ಸಂದರ್ಭದಲ್ಲಿ ಟೈಮ್-ಔಟ್ ವಿಧಾನವನ್ನು ಬಳಸಬಾರದು ಅಥವಾ ಮಗುವಿಗೆ ಉಪಚಾರ ಮಾಡದಿದ್ದರೆ ಮಗು ತೀವ್ರ ಉದ್ದೀಪನಕ್ಕೆ ಒಳಗಾಗುವ ಸಂಭವವಿರುತ್ತದೆ.
ಡಾ. ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4 ಮೊ.: 97422 74849