ಆಧುನಿಕ ಯುಗದಲ್ಲಿ ಮಹಿಳಾ ಸ್ವಾಸ್ಥ್ಯ

ಆಧುನಿಕ ಯುಗದಲ್ಲಿ ಮಹಿಳಾ ಸ್ವಾಸ್ಥ್ಯ: ಕೆಲವು ಆರೋಗ್ಯದ ಸಮಸ್ಯೆಗೆ ತುತ್ತಾಗುತ್ತಾಳೆ. ಹಾಗಾಗಿ ಮಹಿಳೆಯರು ತಮ್ಮ ಆರೋಗ್ಯದ ಕುರಿತು ಗಮನ ಹರಿಸಬೇಕು. 

ಭಾರತದಲ್ಲಿ ಮಹಿಳೆಗೆ ಪುರಾತನ ಕಾಲದಿಂದಲೂ ವಿಶೇಷ ಸ್ಥಾನಮಾನವಿದೆ.ಮನೆಗೆಲಸಕ್ಕೆ ಮಾತ್ರ ಸೀಮಿತವಾಗಿದ್ದ ಮಹಿಳೆ ಇಂದಿನ ಆಧುನಿಕ ಸಮಾಜದಲ್ಲಿ ಪುರುಷ ಸಮಾನವಾಗಿ ದುಡಿಯುತ್ತಿದ್ದಾಳೆ, ಪ್ರತಿಯೊಂದು ಘಟ್ಟದಲ್ಲೂ ಮಹಿಳೆ ತಾನು ಅಬಲೆಯಲ್ಲ ಸಬಲೆ ಎಂದು ಸಾಧಿಸಿ ತೋರಿಸಿದ್ದಾಳೆ ಎಂತಹ ಕೆಲಸವೇ ಆಗಲಿ ಅದನ್ನು ಸಮರ್ಪಕವಾಗಿ ನಿಭಾಯಿಸುವ ಶಕ್ತಿಯನ್ನು ಹೊಂದಿದ್ದಾಳೆ ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಹಲವರಿಗೆ ಮಾದರಿ ಎನಿಸಿದ್ದಾಳೆ ಇವೆಲ್ಲದರ ಜೊತೆ ಕುಟುಂಬ, ಮಕ್ಕಳು , ಕೆಲಸ, ಸಮಾಜ ಎಲ್ಲವನ್ನು ಸರಿಸಮಾನವಾಗಿ ತೂಗಿಸಿಕೊಂಡು ಹೋಗುತ್ತಿದ್ದರು ಮಹಿಳೆ ಕೆಲವು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾಳೆ.

ಲಿಂಗತಾರತಮ್ಯ, ವರ್ಣಭೇದ, ವೇತನತಾರತಮ್ಯ, ಅನಗತ್ಯ ವಿಷಯಗಳು, ಒಂಟಿತನ, ಕೆಲಸದ ಒತ್ತಡ ಆಧುನಿಕ ಜೀವನ ಶೈಲಿ, ಆಹಾರ ಪದ್ಧತಿ,ಚಿಂತೆ ಇತ್ಯಾದಿ, ಇವೆಲ್ಲವೂ ಅವಳ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕೆಡಿಸುತ್ತಿವೆ ಹೀಗಿರುವಾಗ ಮಹಿಳೆಯರು ತಮ್ಮ ಆರೋಗ್ಯದ ಕುರಿತು ಗಮನ ಹರಿಸಬೇಕು.

ಕೆಲಸದ ಒತ್ತಡದ ಜೊತೆಗೆ ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳಿಂದ ಹೆಚ್ಚು ಚಿಂತೆ ಮಾಡುವುದು ಸಿಟ್ಟುಮಾಡಿಕೊಳ್ಳುವುದರಿಂದ ಮಾನಸಿಕವಾಗಿ ಹಾಗು ದೈಹಿಕವಾಗಿ ಪರಿಣಾಮ ಬೀರುತ್ತವೆ. ಇವೆಲ್ಲವುಗಳಿಂದ ಮಹಿಳೆ ಚಿಕ್ಕವಯಸ್ಸಿನಲ್ಲಿಯೇ ಕೆಲವು ಆರೋಗ್ಯದ ಸಮಸ್ಯೆಗೆ ತುತ್ತಾಗುತ್ತಾಳೆ.

ಸಾಮಾನ್ಯ ಸಮಸ್ಯೆಗಳು

ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ ಎಂದರೆ ಅದು ಋತುಚಕ್ರದ ಸಮಸ್ಯೆ, ಹೊಟ್ಟೆನೋವು ,ಅತಿಯಾದ ರಕ್ತಸ್ರಾವ, ಸೋಂಕು,ಬಿಳಿಮುಟ್ಟು, ಪಿಸಿಓಡಿ, ರಕ್ತದ ಒತ್ತಡ, ಮಧುಮೇಹ,ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್, ಗುದನಾಳದ ಕ್ಯಾನ್ಸರ್, ಮೂಳೆಸವೆತ, ಹೃದಯಾಘಾತ, ಖಿನ್ನತೆ ಇತ್ಯಾದಿ.

ಹಿಂದಿನ ಕಾಲದಲ್ಲಿ ಮಹಿಳೆ ಮನೆಗೆಲಸಕ್ಕಷ್ಟೇ ಸೀಮಿತವಾಗಿರುತ್ತಿದ್ದಳು ಮತ್ತು ಇಂದಿನಂತೆ ತಂತ್ರಜ್ಞಾನದ ಬಳಕೆ ಇರಲಿಲ್ಲ ಹೀಗಾಗಿ ಮನೆಕೆಲಸದಿಂದಲೇ ಅವಳಿಗೆ ಸಾಕಷ್ಟು ವ್ಯಾಯಾಮ ಸಿಗುತ್ತಿತ್ತು ಹಾಗೂ ಅಷ್ಟೊಂದು ಕೆಲಸದ ಒತ್ತಡವಿರುತ್ತಿರಲಿಲ್ಲ, ಕೋಪ, ಚಿಂತೆ , ಖಿನ್ನತೆ ಇರುತ್ತಿರಲಿಲ್ಲ ಒಂದುವೇಳೆ ಇದ್ದರೂ ಆಗಿನ ಕಾಲದಲ್ಲಿ ಹೆಚ್ಚಾಗಿ ಅವಿಭಕ್ತ ಕುಟುಂಬಗಳು ಇರುತ್ತಿದ್ದವು ಹಾಗಾಗಿ ಎಲ್ಲರು ಚರ್ಚಿಸಿ ತಿಳುವಳಿಕೆ ಹೇಳಿ ಸಮಾಧಾನ ಪಡಿಸುತ್ತಿದ್ದರು.

ಇಂದಿನ ಆಧುನಿಕ ಯುಗದಲ್ಲಿ ಅವಿಭಕ್ತ ಕುಟುಂಬಗಳೇ ಮಾಯವಾಗಿವೆ. ಸುಮಾರು ಮಹಿಳೆಯರು ಹೊರಗಡೆ ಕೆಲಸಕ್ಕೆ ಹೋಗುವುದರಿಂದ ಕೆಲಸದ ಒತ್ತಡದಿಂದ ಮತ್ತು ಸಮಯದ ಮಿತಿಯಿಂದ ವ್ಯಾಯಾಮ ಮತ್ತು ಇನ್ನಿತರ ಚಟುವಟಿಕೆಗಳಿಗೆ ಸಮಯ ಕೊಡಲು ಆಗುವುದಿಲ್ಲ ಹೀಗಾಗಿ ಹತ್ತಾರು ಮಾನಸಿಕ ಹಾಗೂ ದೈಹಿಕ ಸಮಸ್ಯೆಯಿಂದ ಅವಳಿಗೆ ಹೊರಗಡೆ ಬರಲಾಗುವುದಿಲ್ಲ. ಇವೆಲ್ಲ ಸಮಸ್ಯೆಗಳನ್ನು ಎದುರಿಸುವ ಜೊತೆಗೆ ತನ್ನ ಮಾನಸಿಕ ಮತ್ತು ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳುವುದರ ಜೊತೆಗೆ ತಾಳ್ಮೆ ಏಕಾಗ್ರತೆ ಕಾಯ್ದುಕೊಳ್ಳುವುದು ಕೂಡ ಅತಿ ಮುಖ್ಯವಾಗಿದೆ.

ಆಧುನಿಕ ಯುಗದಲ್ಲಿ ಮಹಿಳಾ ಸ್ವಾಸ್ಥ್ಯ- ಇವೆಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರೋಪಾಯ ಎಂದರೆ ಪ್ರಾಣಾಯಾಮ ಯೋಗ ಮತ್ತು ಮುದ್ರಾ.

ಇವು ಹೆಚ್ಚು ಉಪಯುಕ್ತವಾಗಿವೆ ಇದರಿಂದ ಮಾನಸಿಕ ಒತ್ತಡ ಮುಕ್ತ ಜೀವನ ನಡೆಸಬಹುದು .

Adhunika yugadalli mahila svasthya

ಭ್ರಮರಿ ಪ್ರಾಣಾಯಾಮ

ಭ್ರಮರಿ ಪ್ರಾಣಾಯಾಮದ ಸಮಯದಲ್ಲಿ ಆತ್ಮೀಯ ಶಬ್ದವನ್ನು ರಚಿಸಲಾಗುತ್ತದೆ ಈ ಶಬ್ದವು ನಮ್ಮ ದೇಹ ಮತ್ತು ಮನಸ್ಸಿನಲ್ಲಿ ಪರಿಚಲನೆಯಾಗುತ್ತದೆ.ಇದು ಸೇಲ್ಯೂಲಾರ ಮಟ್ಟಕ್ಕೆ ಹೋಗುವ ಮೂಲಕ ಈ ಪರಿಣಾಮವನ್ನು ತರುತ್ತದೆ ಹಾಗೂ ಇದು ದೇಹದೊಳಗೆ ಧನಾತ್ಮಕ ಬದಲಾವಣೆಗಳನ್ನು ತರುತ್ತದೆ ಮತ್ತು ಮನಸ್ಸನ್ನು ಸಂಪೂರ್ಣವಾಗಿ ಶಾಂತಗೊಳಿಸುತ್ತದೆ. ಆದ್ದರಿಂದ ಪದೇ ಪದೇ ಕೋಪ ಬರುತ್ತಿದ್ದರೆ ಅಥವಾ ಯಾವಾಗಲು ಒತ್ತಡದಲ್ಲಿರುತ್ತಿದ್ದರೆ ಭ್ರಮರಿ ಪ್ರಾಣಾಯಾಮ ಮಾಡುವುದರಿಂದ ಇವೆಲ್ಲವೂ ಕಡಿಮೆಯಾಗುತ್ತವೆ.

ಓಂಕಾರ ಪಠಣೆ
ಓಂಕಾರ ಪಠಣೆಯು ನಮ್ಮ ಮನಸ್ಸು ಮತ್ತು ಆತ್ಮವನ್ನು ಶಾಂತಗೊಳಿಸುತ್ತದೆ.

ನಾಡಿ ಶೋಧನ ಪ್ರಾಣಾಯಾಮ
ಈ ಪ್ರಾಣಾಯಾಮವು ಮೆದುಳಿನಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಮೆದುಳಿನ ಕೋಶವನ್ನು ಸಕ್ರಿಯಗೊಳಿಸುವುದರ ಜೊತೆಗೆ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಕಾರಾತ್ಮಕ ಆಲೋಚನೆಗಳನ್ನು ಸಹ ತೆಗೆದು ಹಾಕುತ್ತದೆ.

ಕಪಾಲಭಾತಿ
ಇದು ಋತುಚಕ್ರದ ಸಮಸ್ಯೆಯನ್ನು ದೂರಮಾಡುವ ಸೂಕ್ತ ಪ್ರಾಣಾಯಾಮವಾಗಿದೆ.

ಸೂರ್ಯನಮಸ್ಕಾರ
ಸೂರ್ಯನಮಸ್ಕಾರ ಮಾಡುವುದರಿಂದ ಫ್ಯೂಬಿಕ್ ಪ್ರದೇಶದ ಸ್ನಾಯುಗಳು ಮೂತ್ರದ ರಕ್ತನಾಳಗಳು ಮತ್ತು ಹೊಟ್ಟೆಯ ಕೆಳಭಾಗವನ್ನು ಮಸಾಜ್ ಮಾಡಿ ಬಲಪಡಿಸುತ್ತದೆ ಪಿಸಿಓಡಿ ಸಮಸ್ಯೆಯನ್ನು ನಿವಾರಿಸುವುದರ ಜೊತೆಗೆ ಋತುಚಕ್ರವನ್ನು ಕ್ರಮಬದ್ಧಗೊಳಿಸುವಲ್ಲಿಯೂ ಇದು ಪ್ರಯೋಜನಕಾರಿಯಾಗಿದೆ .

ಬದ್ಧಕೋನಾಸನ
– ಈ ಆಸನದಿಂದ ಮಾಡುವುದರಿಂದ ಸಹಜ ಹೆರಿಗೆಯಾಗುತ್ತದೆ ಮತ್ತು ಪ್ರಸವ ವೇದನೆ ಕಡಿಮೆಯಾಗುತ್ತದೆ.
– ಅಧಿಕ ರಕ್ತಸ್ರಾವ ಮುಕ್ತಿ , ಕಿಬ್ಬೊಟ್ಟೆ ಮತ್ತು ಕಟಿ ಭಾಗದಲ್ಲಿನ ಕೊಬ್ಬಿನಂಶ ಕಡಿಮೆ ಮಾಡುತ್ತದೆ.
– ಮೂತ್ರಪಿಂಡದ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.

ಗೋಮುಖಸನ
– ಒತ್ತಡ,ಭಯ, ಆತಂಕವನ್ನು ಕಡಿಮೆ ಮಾಡುತ್ತದೆ.
– ಮಧುಮೇಹದಿಂದ ಬಳಲುತ್ತಿರುವವರಿಗೆ ಈ ಆಸನ ಸಹಕಾರಿಯಾಗಿದೆ.
– ಗುನು ಬೆನ್ನು ನಿವಾರಣೆಯಾಗುತ್ತದೆ.
– ಎದೆ ಭಾಗ ಹಿಗ್ಗಲ್ಪಟ್ಟು ಉಸಿರಾಟಕ್ರಿಯೆ ಧೀರ್ಘವಾಗುತ್ತದೆ.
– ಸ್ತನ ಕ್ಯಾನ್ಸರ್ ತಡೆಗಟ್ಟುವುದಲ್ಲದೆ ಜ್ಞಾಪಕಶಕ್ತಿ ಬುದ್ಧಿಶಕ್ತಿ ಹೆಚ್ಚಿಸುತ್ತದೆ.

ಮತ್ಸ್ಯಾಸನ
– ಎದೆ ಮತ್ತು ಕುತ್ತಿಗೆಯನ್ನು ವಿಸ್ತರಿಸುತ್ತದೆ.
– ಕುತ್ತಿಗೆ ಮತ್ತು ಭುಜಗಳಲ್ಲಿನ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.
– ಆಳವಾದ ಉಸಿರಾಟವನ್ನು ಉತ್ತೇಜಿಸುವ ಮೂಲಕ ಉಸಿರಾಟದ ಅಸ್ವಸ್ಥೆತೆಗಳಿಂದ ಪರಿಹಾರವನ್ನು ಒದಗಿಸುತ್ತದೆ.
– ಪ್ಯಾರಾಥೈರಾಯ್ಡ್ ಪಿಟ್ಯುಟರಿ ಮತ್ತು ಪೀನಲ್ ಗ್ರಂಥಿಗಳನ್ನು ಟೋನ್ ಮಾಡುತ್ತದೆ.

ಪಶ್ಚಿಮೋತ್ತಾನಾಸನ
-ಇದು ಮೂತ್ರಪಿಂಡದ ಸಮಸ್ಯೆ ಮತ್ತು ಮೇದೋಜಿರಕ ಗ್ರಂಥಿಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ.
– ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
-ಮಾನಸಿಕ ಒತ್ತಡದಿಂದ ಹಾರ್ಮೋನ್ ಗಳ ಅಸಮತೋಲನವಾಗುತ್ತದೆ ಇದರಿಂದ ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯ ಕ್ಷೀಣಿಸುತ್ತದೆ.

ಭುಜಂಗಾಸನ
-ಬೆನ್ನು, ಎದೆ ಹೊಟ್ಟೆಯಭಾಗದ ನರಗಳನ್ನು ಬಲಪಡಿಸುತ್ತದೆ ಮುಟ್ಟಿನ ಸಮಸ್ಯೆಯನ್ನು ಕಡಿಮೆಮಾಡುತ್ತದೆ.
-ಉಸಿರಾಟದ ಕ್ರಿಯೆ ಸರಾಗವಾಗಲು ಸಹಾಯ ಮಾಡುತ್ತದೆ.

ಅಧೋಮುಖಸ್ವನಾಶನ
-ಆತಂಕ ತಗ್ಗಿಸುತ್ತದೆ.
-ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ.
-ರಕ್ತಸಂಚಾರ,ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಮಲಸಾನ
– ದೇಹದ ಸಮತೋಲನ,ಏಕಾಗ್ರತೆ ಮತ್ತು ಗಮನ ಹೆಚ್ಚಿಸುತ್ತದೆ.
– ಶ್ರೋಣಿಯ ಭಾಗದ ರಕ್ತ ಸಂಚಾರವನ್ನು ಉತ್ತಮಪಡಿಸುತ್ತದೆ.
– ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ ಇದು ಸಹಕಾರಿಯಾಗುತ್ತದೆ.
– ಇದು ಸಂತಾನೋತ್ಪತ್ತಿ ಅಂಗಗಳನ್ನು ಉತ್ತೇಜಿಸುತ್ತದೆ.
– ಬೆನ್ನು, ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ.
– ಒತ್ತಡ ಆಯಾಸವನ್ನು ನಿವಾರಿಸುತ್ತದೆ.
– ಮುಟ್ಟಿನ ಅಸ್ವಸ್ಥತೆ ಮತ್ತು ಮಲಬದ್ದತೆಯನ್ನು ನಿವಾರಿಸುತ್ತದೆ.

ಯೋನಿ ಮುದ್ರೆ
– ಯೋನಿ ಮುದ್ರೆ ಮಾಡುವುದರಿಂದ ಗರ್ಭಶಯ ಬಲವಾಗುತ್ತದೆ.
– ಇದು ಮಹಿಳೆಯರ ಆರೋಗ್ಯವನ್ನು ಕಾಪಾಡುವ ಉತ್ತಮ ಮುದ್ರೆಯಾಗಿದೆ.
– ಸಂತಾನೋತ್ಪತ್ತಿಯ ಸಮಸ್ಯೆ ನಿವಾರಣೆಯಾಗುತ್ತದೆ.
– ಹಾರ್ಮೋನ್ ವ್ಯತ್ಯಾಸವನ್ನು ಸಮತೋಲನಗೊಳಿಸುತ್ತದೆ.
-ಇದು ಋತುಚಕ್ರದ ಸಮಸ್ಯೆಯಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ, ಅಂದರೆ ಮುಟ್ಟಿನಲ್ಲಿ ಕಾಣಿಸಿಕೊಳ್ಳುವ ನೋವು ಹಿಂಸೆಯನ್ನು ಕಡಿಮೆ ಮಾಡುತ್ತದೆ ಮುಟ್ಟಿನ ದಿನಗಳಲ್ಲಿ ಯೋನಿ ಮುದ್ರೆ ಹೆಚ್ಚು ಸಹಕಾರಿಯಾಗಿದೆ.
– ದೇಹದ ನರಮಂಡಲವನ್ನು ಸಮತೋಲನದಲ್ಲಿಡುತ್ತದೆ.
– ಏಕಾಗ್ರತೆಯನ್ನು ಹೆಚ್ಚಿಸುವುದರ ಜೊತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಜ್ಞಾನ ಮುದ್ರಾ
– ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
– ನಿದ್ರಾಹೀನತೆಯನ್ನು ಪರಿಹರಿಸುತ್ತದೆ.
– ಕೋಪದ ಸಮಸ್ಯೆ ನಿಭಾಯಿಸಲು ನೆರವಾಗುತ್ತದೆ ಥೈರಾಯಿಡ್ ನಂತಹ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಗರುಡ ಮುದ್ರೆ
-ಈ ಮುದ್ರೆಯನ್ನು ಮಾಡುವುದರಿಂದ ಸ್ನಾಯು ಸೆಳೆತ, ಮುಟ್ಟಿನ ಸೆಳೆತ ಕಡಿಮೆಯಾಗುತ್ತದೆ.
-ಈ ಮುದ್ರೆಯು ಎಲ್ಲ ಅಂಶಗಳನ್ನು ಸಮತೋಲನಗೊಳಿಸುತ್ತದೆ ಮುಖ್ಯವಾಗಿ ವಾಯು ,ವಾಯು ದೋಷವನ್ನು ಗುಣಪಡಿಸುತ್ತದೆ.
-ಕ್ಯಾನ್ಸರ್ ರೋಗದಲ್ಲಿ ಈ ಮುದ್ರೆ ಹೆಚ್ಚು ಪ್ರಯೋಜನಕಾರಿಯಾಗಿದೆ.
-ಪ್ರೊಸ್ಟೇಟ್ ಗ್ರಂಥಿಗೆ ಸಂಬಂದಿಸಿದ ಸಮಸ್ಯೆ ನಿವಾರಿಸುತ್ತದೆ.

ಅಪಾನ ಮುದ್ರಾ
-ಈ ಮುದ್ರೆಯನ್ನು ಪ್ರತಿದಿನ ಮಾಡುವುದರಿಂದ ವಿಸರ್ಜನಾಂಗವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ.
– ಮಾಸಿಕ ಋತುಚಕ್ರ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.
– ಮಲಬದ್ಧತೆ, ಉರಿಮೂತ್ರ, ಕೈ ಕಾಲು ಉರಿಯುವ ಅನುಭವ ಎದೆ ಉರಿಯುವ ಸಮಸ್ಯೆಗಳನ್ನೂ ಕಡಿಮೆ ಮಾಡುತ್ತದೆ.

ಯೋಗವು ನಮ್ಮನ್ನು ದೈಹಿಕ ಮತ್ತು ಮಾನಸಿಕವಾಗಿ ಸಕ್ರಿಯಗೊಳಿಸುತ್ತದೆ ಅದಲ್ಲದೆ ಆತ್ಮ ಮತ್ತು ಮನಸ್ಸನ್ನು ಶಾಂತಗೊಳಿಸುವ ಕಲೆಯಾಗಿದೆ ಪ್ರಾಣಾಯಾಮ ಉಸಿರಾಡುವ ಕಲೆಯನ್ನು ಕಲಿಸುತ್ತದೆ.
ಧ್ಯಾನ ಮನಸ್ಸನ್ನು ತಳಮಳದಿಂದ್ ಮುಕ್ತಗೊಳಿನಿ ಪ್ರಶಾಂತತೆ ಮತ್ತು ಸಮಾಧಾನಗೊಳಿಸುತ್ತದೆ.

ಇವೆಲ್ಲ ಯೋಗಾಸನ ಪ್ರಾಣಾಯಾಮ ಮುದ್ರೆಗಳ ಜೊತೆ ಪ್ರತಿನಿತ್ಯ ಕನಿಷ್ಟ ಪಕ್ಷ ೧೦ ನಿಮಿಷಗಳ ಕಾಲ ಧ್ಯಾನ ಮಾಡುವುದು ಉತ್ತಮ.ಇವೆಲ್ಲ ಅಭ್ಯಾಸಗಳು ಮಹಿಳೆಯನ್ನು ಇನ್ನಷ್ಟು ಸದೃಢವಾಗಿ ತನ್ನ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲು ಸಹಕಾರಿಯಾಗಿವೆ.

Dr Daneeshvari

Dr Daneeshvari address

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!