ಕರಿ ಮೆಣಸು-ವೈದ್ಯ ಜಗತ್ತಿನ ದಿವ್ಯೌಷಧ. ಸಂಬಾರ ಪದಾರ್ಥಗಳ ರಾಜ ಎಂದು ಕರೆಯಲ್ಪಡುವ ಕಾಳು ಮೆಣಸನ್ನು ವಿವಿಧ ಅಡುಗೆ ಪದಾರ್ಥಗಳಲ್ಲಿ ರುಚಿ ಮತ್ತು ವಾಸನೆಗಾಗಿ ಬಳಸುತ್ತಾರೆ.
ಆಹಾರ ಪದಾರ್ಥಗಳ ರುಚಿ ಮತ್ತು ವಾಸನೆಗಳಿಗಾಗಿ ಉಪಯೋಗಿಸುವ ಮೆಣಸು ನಮ್ಮ ದೇಹದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದೇ ಅಲ್ಲದೆ ಹಲವಾರು, ರೋಗಗಳಿಗೆ ಉತ್ತಮ ಔಷಧಿಯೂ ಹೌದು. ಸಂಬಾರ ಪದಾರ್ಥಗಳ ರಾಜ ಎಂದು ಕರೆಯಲ್ಪಡುವ ಕಾಳು ಮೆಣಸು, ವಾಣಿಜ್ಯ ಪ್ರಪಂಚದಲ್ಲಿ ಕಪ್ಪು ಬಂಗಾರ; ವೈದ್ಯ ಜಗತ್ತಿನಲ್ಲಿ ದಿವ್ಯೌಷಧವೆಂದೂ, ಕಾಳು ಮೆಣಸು, ಕರಿ ಮೆಣಸು ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಇದರ ತವರು ಭಾರತ. ಇಂಡೋನೇಷ್ಯಾ, ಶ್ರೀಲಂಕಾ, ಬ್ರೆಜಿಲ್ ದೇಶಗಳಲ್ಲಿಯೂ ಇದರ ಉತ್ಪನ್ನ ಸಾಕಷ್ಟಿದೆ.
1. ದಕ್ಷಿಣ ರಾಜ್ಯಗಳಲ್ಲಿ, ಅದರಲ್ಲೂ ಕೇರಳದಲ್ಲಿ ವಿಶೇಷವಾಗಿ ಬೆಳೆಯುವ ಇದು ನಮ್ಮ ಭಾರತದ ಒಂದು ಮುಖ್ಯ ವಾಣಿಜ್ಯ ಬೆಳೆ. ಮೆಣಸನ್ನು ವಿವಿಧ ಅಡುಗೆ ಪದಾರ್ಥಗಳಲ್ಲಿ ರುಚಿ ಮತ್ತು ವಾಸನೆಗಾಗಿ ಬಳಸುತ್ತಾರೆ. ಸಾರು, ಸಾಂಬಾರುಗಳ ತಯಾರಿಕೆಯಲ್ಲಿ ಅದರಲ್ಲೂ ಮಾಂಸಹಾರಗಳ ತಯಾರಿಕೆಯಲ್ಲಿ, ಬೇಕರಿ ಪದಾರ್ಥಗಳು ಮತ್ತು ಅನೇಕ ತಂಪು ಪಾನೀಯಗಳ ತಯಾರಿಕೆಯಲ್ಲಿ ಇದನ್ನು ಉಪಯೋಗಿಸುತ್ತಾರೆ.
2. ಆಹಾರ ಪದಾರ್ಥಗಳ ರುಚಿ ಮತ್ತು ವಾಸನೆಗಳಿಗಾಗಿ ಉಪಯೋಗಿಸುವ ಮೆಣಸು ನಮ್ಮ ದೇಹದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದೇ ಅಲ್ಲದೆ ಹಲವಾರು, ರೋಗಗಳಿಗೆ ಉತ್ತಮ ಔಷಧಿಯೂ ಹೌದು.
3. ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಮೆಣಸನ್ನು ಮರಿಚ, ಶ್ಯಾಮ, ವಲ್ಲಿಜ, ಕೋಲ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಕಟು (ಖಾರ) ತಿಕ್ತ (ಕಹಿ) ರಸಗಳುಳ್ಳ ಇದು ಉಷ್ಣ ವೀರ್ಯವುಳ್ಳದ್ದಾಗಿದ್ದು ಕಫ ಮತ್ತು ವಾತ ದೋಷಗಳನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ತೀಕ್ಷ್ಣ ಮತ್ತು ರೂಕ್ಷ ಗುಣಗಳುಳ್ಳ ಇದು, ಸ್ವಲ್ಪ ಪ್ರಮಾಣದಲ್ಲಿ ಪಿತ್ತವನ್ನು ಹೆಚ್ಚು ಮಾಡುತ್ತದೆ.
4. ಅಗ್ನಿ ಮಾಂದ್ಯ, ಅಜೀರ್ಣ, ಶ್ವಾಸಕಾಸ ಮುಂತಾದ ಅನೇಕ ರೋಗಗಳಲ್ಲಿ ಉಪಯೋಗಕ್ಕೆ ಬರುವ ಮೆಣಸು ಒಂದು ಉತ್ತಮ ಶೂಲ (ನೋವು) ನಿವಾರಕ ಹಾಗೂ ಜಂತು ನಾಶಕವಾಗಿದೆ.
5. ಮೆಣಸು, ಶುಂಠಿ, ಹಿಪ್ಪಲಿ ಇವು ಮೂರನ್ನು ಒಟ್ಟಿಗೆ ಕೂಡಿಸಿ, ತ್ರಿಕಟು ಎಂದು ಕರೆಯುತ್ತಾರೆ. ಒಳ್ಳೆಯ ದೀಪನ, ಪಾಚನ ಹಾಗೂ ಜೀರ್ಣಕಾರಕವಾಗಿರುವ ತ್ರಿಕಟು ಚೂರ್ಣವನ್ನು ಅನೇಕ ಔಷಧಿಗಳ ತಯಾರಿಕೆಯಲಿ ಬಳಸುತ್ತಾರೆ.
1. ಕೆಮ್ಮು ಮತ್ತು ಕಫ: ರೋಗಗಳಲ್ಲಿ 100ರಿಂದ 250 ಮಿಗ್ರಾಂ. ಕಾಳು ಮೆಣಸಿನ ಚೂರ್ಣವನ್ನು ಅರ್ಧ ಚಮಚ ತುಪ್ಪ ಒಂದು ಚಮಚ ಜೇನುತುಪ್ಪ ಸೇರಿಸಿ ತಿಂದ ಮೇಲೆ, ಒಂದು ಲೋಟ ಬಿಸಿಯಾದ ಹಾಲಿಗೆ ಸ್ವಲ್ಪ ಅರಿಶಿನದ ಪುಡಿ ಮತ್ತು ಬೆಲ್ಲವನ್ನು ಸೇರಿಸಿ ತೆಗೆದುಕೊಂಡರೆ ಕಟ್ಟಿರುವ ಕಫವು ಕರಗಿ, ಕೆಮ್ಮು ಕಡಿಮೆಯಾಗುತ್ತದೆ. ಶೀತ ನೆಗಡಿಗಳು ದೂರವಾಗುತ್ತವೆ.
ಶಾನ್ಬಾನ್ ಟ್ರೇಡರ್ಸ ಎದುರು, ತಡಂಬೈಲು







