ಬೆನ್ನುನೋವು-ತಲೆನೋವು; ಯಾರನ್ನೂ ಬಿಡದು!

ಬೆನ್ನುನೋವು-ತಲೆನೋವು; ಯಾರನ್ನೂ ಬಿಡದು.ಇಂದಿನ ಜೀವನಶೈಲಿ, ಕೆಟ್ಟ ರಸ್ತೆಗಳಲ್ಲಿ ವಾಹನ ಓಡಿಸುವುದು, ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದು, ಮಾನಸಿಕ ಒತ್ತಡ ಮುಂತಾದ ಕಾರಣಗಳಿಂದ ಬೆನ್ನುನೋವು ಹಾಗೂ ಸ್ನಾಯು ಸೆಳೆತ ಸಾಮಾನ್ಯ ಎನ್ನುವ ಮಟ್ಟಿಗೆ ಬಂದುಬಿಟ್ಟಿದೆ.

ಇಂದಿನ ಜೀವನಶೈಲಿ, ಕೆಟ್ಟ ರಸ್ತೆಗಳಲ್ಲಿ ವಾಹನ ಓಡಿಸುವುದು, ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದು, ಮಾನಸಿಕ ಒತ್ತಡ ಮುಂತಾದ ಕಾರಣಗಳಿಂದ ಬೆನ್ನುನೋವು ಹಾಗೂ ಸ್ನಾಯು ಸೆಳೆತ ಸಾಮಾನ್ಯ ಎನ್ನುವ ಮಟ್ಟಿಗೆ ಬಂದುಬಿಟ್ಟಿದೆ. ಕಂಪ್ಯೂಟರ್ ಎದುರು ಕುಳಿತು ಕೆಲಸ ಮಾಡುವವರು ಹಾಗೂ ಗೃಹಿಣಿಯರಲ್ಲಿ ಬೆನ್ನುನೋವು ಮತ್ತು ಸ್ನಾಯುಗಳ ಸೆಳೆತ ಹೆಚ್ಚು. ಸುಮಾರು 30ರಿಂದ 45 ವರ್ಷ ವಯೋಮಾನದವರಿಗೆ ಬೆನ್ನುನೋವು ಮತ್ತು ಕತ್ತುನೋವು ಕಾಣಿಸುವುದು ಸರ್ವೇಸಾಮಾನ್ಯ.

ಕಾರಣಗಳೇನು?

bennu-novu-tale-novu ಬೆನ್ನುನೋವು-ತಲೆನೋವು; ಯಾರನ್ನೂ ಬಿಡದು!1. ಬೆನ್ನುನೋವು ಅಥವಾ ಕತ್ತುನೋವು ಕಾಣಿಸಿಕೊಳ್ಳಲು ಹಲವಾರು ಕಾರಣಗಳಿವೆ.

2. ಕುರ್ಚಿ ಬೆನ್ನಿಗೆ ಸರಿ ಹೊಂದದಿರುವುದು

3. ಮಾನಸಿಕ ಒತ್ತಡ

4. ಅಪಘಾತ

5. ಅಸ್ತವ್ಯಸ್ತವಾಗಿ ಕುಳಿತು ಕೆಲಸ ಮಾಡುವುದು

6. ಹೆಚ್ಚು ಹೊತ್ತು ನಿಲ್ಲುವುದು

7. ಒಂದೇ ಕಾಲಿನ ಮೇಲೆ ಹೆಚ್ಚು ಭಾರ ಬಿಡುವುದು.

8. ಹಾಸಿಗೆ ಸರಿ ಇಲ್ಲದಿರುವುದು.

9. ಹೆಚ್ಚು ವ್ಯಾಯಾಮ ಮಾಡಿ ಇದ್ದಕ್ಕಿದ್ದ ಹಾಗೆ ಕುಳಿತುಕೊಳ್ಳುವುದು.

10. ದೇಹದಲ್ಲಿ ಹೆಚ್ಚು ಬೊಜ್ಜು ತುಂಬಿರುವುದು.

ಬರದಂತೆ ತಡೆಯಲು:

ವಿಶ್ರಾಂತಿ ಮತ್ತು ವ್ಯಾಯಾಮ ಇಲ್ಲದಿದ್ದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಈಗ ಶೇ. 70ರಷ್ಟು ಮಂದಿ ಕತ್ತು ನೋವು ಮತ್ತು ಶೇ. 40ರಷ್ಟು ಮಂದಿ ಬೆನ್ನುನೋವಿನಿಂದ ಬಳಲುವಂತಾಗಿದೆ. ಬೇಗ ಮಲಗಿ ಬೇಗ ಏಳುವುದನ್ನು ರೂಢಿಸಿಕೊಂಡರೆ ಈ ನೋವು ಕಾಣಿಸದು. ಮಧ್ಯಾಹ್ನದ ವೇಳೆಯಲ್ಲಿ ಕೇವಲ ಹತ್ತು ನಿಮಿಷಗಳನ್ನಾದರೂ ನಿದ್ರೆ ಮಾಡುವುದು ಒಳ್ಳೆಯದು.

1. ಕುಳಿತು ಟಿವಿ ಅಥವಾ ಇನ್ನೇನಾದರೂ ದೀರ್ಘಕಾಲ ನೋಡುತ್ತಿದ್ದಾಗ ತಕ್ಷಣ ಬಾಗಬಾರದು.

2. ಒತ್ತಡದ ನಡುವೆ ಕೆಲಸ ಮಾಡುವವರು ಚೆನ್ನಾಗಿ ನಿದ್ರೆ ಮಾಡಬೇಕು.

3. ಹೈ ಹೀಲ್ಡ್ ಚಪ್ಪಲಿ ಅಥವಾ ಶೂ ಧರಿಸಬಾರದು.

4. ಭಾರವಾದ ವಸ್ತುಗಳನ್ನು ಎತ್ತುವಾಗ ಒಂದೇ ಕಡೆ ಹೆಚ್ಚು ಭಾರ ಇರದಂತೆ ನೋಡಿ ಕೊಳ್ಳಬೇಕು.

5. ನಿರಂತರವಾಗಿ ವಾಹನ ಚಾಲನೆ ಅಥವಾ ಕೆಲಸ ಮಾಡುವಾಗ ಬೆನ್ನಿಗೆ ಆಧಾರ ಇಟ್ಟುಕೊಂಡು, ನೇರವಾಗಿ ಕುಳಿತುಕೊಳ್ಳುವುದು.

6. ಬೆನ್ನಿಗೆ ಆರಾಮ ನೀಡುವಂತೆ ಹಿಂಬದಿಯ ದಿಂಬು ನುಣುಪಾಗಿ ಇರಲಿ.

7. ಮದ್ಯಪಾನ, ಧೂಮಪಾನ ಬೇಡ.

8. ಫೋನ್‍ಗಳನ್ನು ಭುಜದ ಮೇಲಿಟ್ಟು ಕೊಂಡು ಹೆಚ್ಚು ಹೊತ್ತು ಮಾತನಾಡುವುದು ತರವಲ್ಲ.

9. ಕಣ್ಣಿನ ಅಳತೆಗಿಂತ ಮೇಲೆ ಕಂಪ್ಯೂಟರ್ ಪರದೆ ಹಾಗೂ ಅದರ ಕೀಬೋರ್ಡ್ ಇರಬಾರದು.

10. ಇಂಥ ಕೆಲವು ಸಣ್ಣಪುಟ್ಟ ತಪ್ಪುಗಳನ್ನು ಮಾಡದೆ ಹೋದರೆ ಉತ್ತಮ ಆರೋಗ್ಯದ ಜೊತೆಗೆ ಬೆನ್ನುನೋವು ಅಥವಾ ಸ್ನಾಯು ಸೆಳೆತದಿಂದ ತಪ್ಪಿಸಿಕೊಳ್ಳಬಹುದು.

ಮಾಡಬಾರದು:

1. ಅತಿಯಾದ ಮಾಂಸಾಹಾರ ಸೇವನೆ, ಧೂಮಪಾನ, ಮದ್ಯಪಾನ ಮತ್ತು ಮಾದಕ ವಸ್ತು ಸೇವನೆ, ಅಸಮರ್ಪಕ ಆಹಾರ ಸೇವನೆ, ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸಿ.

2. ಕಂಪ್ಯೂಟರ್‍ನಲ್ಲಿ ಕೆಲಸ ಮಾಡುವವರು ಕಣ್ಣಿನ ಅಳತೆಗಿಂತ ಕೆಳಗೆ ಕಂಪ್ಯೂಟರ್ ಹಾಗೂ ಕೀಬೋರ್ಡ್ ಇಟ್ಟುಕೊಂಡು ಕೆಲಸ ಮಾಡಬೇಕು.

3. ಆಲೂಗಡ್ಡೆ ಮತ್ತು ಬೇಳೆಗಳನ್ನು ಹೆಚ್ಚಾಗಿ ಸೇವಿಸಬಾರದು. ಬೆನ್ನು ನೋವು ಕಾಣಿಸಿಕೊಂಡಾಗ ಸಿಹಿ ಪದಾರ್ಥ ಅಥವಾ ಐಸ್‍ಕ್ರೀಮ್‍ಗಳನ್ನು ಸೇವಿಸಬಾರದು.

4. ಗಟ್ಟಿಯಾದ ಅಥವಾ ಮೃದುವಾದ ತಲೆದಿಂಬು ಬಳಸಬೇಡಿ. ತುಂಬಾ ಸಮಯ ಮೇಜಿನ ಮೇಲೆ ಕೆಲಸ ಮಾಡುವುದನ್ನು ಮತ್ತು ಅಸಮರ್ಪಕ ನಿದ್ರೆ ನಿಯಂತ್ರಿಸಿ.

ಮಾಡಿದರೆ ಒಳ್ಳೆಯದು:

ಬೆನ್ನುನೋವು-ತಲೆನೋವು; ಯಾರನ್ನೂ ಬಿಡದು!1. ದಿನನಿತ್ಯ ವ್ಯಾಯಾಮ ಮತ್ತು ಯೋಗ, ದೇಹಕ್ಕೆ ಹೊಂದುವಂತಹ ಕುರ್ಚಿ ಬಳಸಿ (ಸೂಕ್ತ ಆಸನ, ಹಿಂಬದಿ, ತೊಡೆ ಕಾಲು ಮತ್ತು ಕೈಗಳಿಗೆ ಕುರ್ಚಿಯಲ್ಲಿ ಸರಿಯಾದ ಆಸರೆ ಇರಬೇಕು.

2. ಅಧಿಕ ರಕ್ತದೊತ್ತಡ ಇರುವವರು ಆಗಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು.

3. ಸಮೃದ್ಧ ನಿದ್ರೆ, ಧ್ಯಾನ ಅಗತ್ಯ.

4. ನಿದ್ರಿಸುವ ಸಮಯದಲ್ಲೂ ಸರಿಯಾದ ಭಂಗಿಯಲ್ಲಿ ಕಾಯ್ದುಕೊಳ್ಳಬೇಕು.

5. ನಿತ್ಯವೂ ನಿಯಮಿತವಾಗಿ ವ್ಯಾಯಾಮ ಮಾಡಿ.

6. ಪ್ರತಿದಿನ ಸಂಜೆ ಹಾಗೂ ಬೆಳಗ್ಗೆ ವಾಕ್ ಮಾಡುವುದು ಉತ್ತಮ.

7. ಯೋಗದಂಥ ಚಟುವಟಿಕೆ ರೂಢಿಸಿಕೊಳ್ಳುವುದು ಒಳ್ಳೆಯದು.

ಚಿಕಿತ್ಸೆಯೂ ಉಂಟು:

1. ಪರಿಹಾರಕ್ಕೆ ಕೆಲವರಿಗೆ ಮಾತ್ರೆ ಸಾಕು. ಆದರೆ ಇನ್ನೂ ಕೆಲವರಿಗೆ ವೈದ್ಯರ ಪ್ರಕಾರ ಶಸ್ತ್ರಚಿಕಿತ್ಸೆಯೇ ಬೇಕಾಗಬಹುದು.ಬೆನ್ನುಮೂಳೆ ಹಾಗೂ ಕೈಕಾಲುಗಳ ಮೂಳೆಗಳನ್ನು ಕುಶಲತೆಯಿಂದ ಒತ್ತುವ ಮೂಲಕ ಬೆನ್ನುನೋವು ನಿವಾರಣೆ ಮಾಡುವ ಪದ್ಧತಿ ಈಗಲೂ ಹಳ್ಳಿಗಳಲ್ಲಿ ನೋಡಬಹುದು. ಸೂಕ್ತ ಸಮಯದಲ್ಲೇ ವೈದ್ಯರ ಸಲಹೆ ಅತ್ಯಗತ್ಯ.

2. ಬೆನ್ನಿಗೆ ಆರಾಮ ನೀಡುವಂತೆ ಹಿಂಬದಿಯ ದಿಂಬು ನುಣುಪಾಗಿ ಇರಲಿ. ಮದ್ಯಪಾನ, ಧೂಮಪಾನ ಬೇಡ.

3. ಫೋನ್‍ಗಳನ್ನು ಭುಜದ ಮೇಲಿಟ್ಟು ಕೊಂಡು ಹೆಚ್ಚು ಹೊತ್ತು ಮಾತನಾಡುವುದು ತರವಲ್ಲ.

4. ಕಣ್ಣಿನ ಅಳತೆಗಿಂತ ಮೇಲೆ ಕಂಪ್ಯೂಟರ್ ಪರದೆ ಹಾಗೂ ಅದರ ಕೀಬೋರ್ಡ್ ಇರಬಾರದು.

5. ಅತಿಯಾದ ಮಾಂಸಾಹಾರ ಸೇವನೆ ಮತ್ತು ಮಾದಕ ವಸ್ತು ಸೇವನೆ, ಅಸಮರ್ಪಕ ಆಹಾರ ಸೇವನೆ, ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸಿ.

6. ಗಟ್ಟಿಯಾದ ಅಥವಾ ಮೃದುವಾದ ತಲೆದಿಂಬು ಬಳಸಬೇಡಿ.

7. ತುಂಬಾ ಸಮಯ ಮೇಜಿನ ಮೇಲೆ ಕೆಲಸ ಮಾಡುವುದನ್ನು ನಿಯಂತ್ರಿಸಿ.

Also Read: ಮೂಳೆ ಸಮಸ್ಯೆ ಬಗ್ಗೆ ಎಚ್ಚರವಹಿಸಿ

Dr-ಡಾ. ಚಲಪತಿ ಪ್ರೊಫೆಸರ್ ಅಫ್ ಜನರಲ್ ಸರ್ಜರಿ ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು - 560066 Ph: +91-80-49069000 Extn:1147/1366 www.vims.ac.in

ಡಾ. ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066
Ph: +91-80-49069000 Extn:1147/1366

www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!