ಶುಂಠಿ ಚಹಾ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ?

ಶುಂಠಿ ಚಹಾ ಆರೋಗ್ಯಕ್ಕೆ  ಪ್ರಯೋಜನಕಾರಿ.ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಶುಂಠಿ ಚಹಾ ಸೇವನೆ ಸಹಕಾರಿ.

ಶುಂಠಿ ಚಹಾ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ?ಭಾರತೀಯ ವೈದ್ಯಕೀಯ ಪರಂಪರೆಯಲ್ಲಿ ಅತ್ಯಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುವಂತಹ ಪದಾರ್ಥ ಶುಂಠಿ ಎಂಬ ವಿಷಯ ನಮಗೆ ಹೊಸತೇನಲ್ಲ. ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಂಡು ಪರಿಣಾಮಕಾರಿಯಾದ ಫಲಿತಾಂಶವನ್ನು ನೀಡುವಂತಹ ಆರೋಗ್ಯದಾಯಿನಿ ಶುಂಠಿ ಚಹಾ. ಪ್ರಯಾಣ ಮಾಡುವಾಗ ತೊಂದರೆಯಾಗುವುದು, ವಾಂತಿ ಬಂದಂತಾಗುವುದು ಅಥವಾ ಬರುವುದನ್ನು ಕಡಿಮೆ ಮಾಡಲು ಶುಂಠಿ ಚಹಾ ಸಹಕಾರಿ. ಇದರಲ್ಲಿರುವ ಜಿಂಝರಾಲ್ ಎನ್ನುವ ಫಿನಾಲ್ ಸಂಯುಕ್ತವು ವಾಕರಿಕೆ ಬಂದಂತಾಗುವುದನ್ನು ಕಡಿಮೆ ಮಾಡುವ ಸಾಮಥ್ರ್ಯವನ್ನು ಹೊಂದಿರುತ್ತವೆ.

ಗರ್ಭಿಣಿಯರೂ ಸಹ ಶುಂಠಿಯ ಕಷಾಯ ಮಾಡಿ ಬಳಸಬಹುದಾಗಿದೆ. ಕಿಮೋಥೆರಪಿ ಹಾಗೂ ವಿವಿಧ ಸರ್ಜರಿಗೆ ಒಳಗಾದಂತವರೂ ಸಹ ಯಾವುದೇ ಆತಂಕ, ಭಯವಿಲ್ಲದೇ ಸೇವಿಸಬಹುದಾದಂತಹ ಪದಾರ್ಥ ಶುಂಠಿ ಎಂಬುದು ಸಾಕ್ಷೀಕರಿಸಲ್ಪಟ್ಟಿದೆ. ಅಧ್ಯಯನಗಳು ತಿಳಿಸುವಂತೆ ಶುಂಠಿಯು ಇತರ ಎಲ್ಲ ಸಾಂಪ್ರದಾಯಿಕ ಆ್ಯಂಟಿ-ನಾಸಿಯಾ ಗುಣಧರ್ಮ ಹೊಂದಿರುವ ಪದಾರ್ಥಗಳಿಗಿಂತ ಉತ್ತಮವಾದುದು.

ಶುಂಠಿಯ ಚಹಾ ಹೇಗೆ ಮಾಡುವುದು?

4 ರಿಂದ 6 ಶುಂಠಿಯ ಚೂರುಗಳನ್ನು ತೆಗೆದುಕೊಂಡು ಅದಕ್ಕೆ 2 ಲೋಟ ನೀರನ್ನು ಹಾಕಿ ಇದನ್ನು ಸುಮಾರು 10 ರಿಂದ 15 ನಿಮಿಷ ಮಧ್ಯಮ ಗಾತ್ರದ ಉರಿಯಲ್ಲಿ ಕುದಿಸಬೇಕು. ಒಲೆಯಿಂದ ಇಳಿಸಿದ ನಂತರದಲ್ಲಿ ಅದಕ್ಕೆ ಅರ್ಧ ನಿಂಬುವನ್ನು, ಬೇಕಾದಲ್ಲಿ ಜೇನುತುಪ್ಪವನ್ನು ಸೇರಿಸಿ ಕುಡಿಯುವುದು. ಕೆಲವರಲ್ಲಿ ಶುಂಠಿಯ ಚಹಾದ ಅತಿಯಾದ ಸೇವನೆಯಿಂದ ಎದೆ ಉರಿಯಾಗುವುದು, ದೇಹದ ಉಷ್ಣತೆ ಹೆಚ್ಚಾಗುವುದು ಕಂಡುಬರಬಹುದು. ಆದ್ದರಿಂದ ಅವರವರ ದೇಹ ಪ್ರಕೃತಿಯನ್ನು ಗಮನಿಸಿ ಬಳಸುವುದು ಒಳಿತು.

ಶುಂಠಿ ಚಹಾ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ?1.ಹೃದಯ ಸಂಬಂಧಿತ ಸಮಸ್ಯೆ: ಅನೇಕ ಹೃದಯ ಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಲು ಶುಂಠಿ ಟೀ ಸಹಕಾರಿ. ಮುಖ್ಯವಾಗಿ ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ, ಹೃದಯಾಘಾತದ ಸಂಭವತೆಯನ್ನು ಕಡಿಮೆ ಮಾಡುವಲ್ಲಿ, ರಕ್ತವು ಹೆಪ್ಪುಗಟ್ಟದಂತೆ ನೋಡಿಕೊಳ್ಳುವಲ್ಲಿ, ಎದೆ ಉರಿಯನ್ನು ಕಡಿಮೆ ಮಾಡುವಲ್ಲಿ, ರಕ್ತಸಂಚಾರವನ್ನು ಹೆಚ್ಚು ಮಾಡುವಲ್ಲಿ ಸಹಕಾರಿಯಾಗಬಲ್ಲದು.

2. ಹೈಪರ್ ಎಸಿಡಿಟಿ: ಶುಂಠಿಯಲ್ಲಿರುವ ಜಿಂಝರಾಲ್ ಸಂಯುಕ್ತವು ಹೈಪರ್ ಎಸಿಡಿಟಿಗೆ ಮುಖ್ಯ ಕಾರಣವಾದ ಹೊಟ್ಟೆಯಲ್ಲಿರುವ ಹೆಚ್.ಫೈಲೋರಿ ಎಂಬ ಸೂಕ್ಷ್ಮಾಣು ಜೀವಿಯನ್ನು ನಾಶಪಡಿಸುವ ಸಾಮಥ್ರ್ಯವನ್ನು ಹೊಂದಿದೆ.

3.ತೂಕ ಕಡಿಮೆಯಾಗಲು: ತೂಕವನ್ನು ಕಡಿಮೆ ಮಾಡುವಲ್ಲಿ ಪ್ರತಿನಿತ್ಯದ ಶುಂಠಿ ಟೀ ಸೇವನೆ ಸಹಕಾರಿ. 2012ರ ಕೋಲಂಬಿಯಾ ಯೂನಿವರ್ಸಿಟಿ ಸಂಶೋಧನೆಯ ವರದಿಯ ಪ್ರಕಾರ ಬೆಳಿಗ್ಗೆ ಎದ್ದ ಕೂಡಲೇ ಬಿಸಿ ಬಿಸಿಯಾದ ಶುಂಠಿ ಟೀಯನ್ನು ಕುಡಿಯುವುದರಿಂದ ತೂಕ ಕಡಿಮೆಯಾಗಲು ಸಹಾಯವಾಗುತ್ತದೆ.

4.ಮಧುಮೇಹ ಹತೋಟಿ:  ಮಧುಮೇಹವನ್ನು ಹೊಂದಿರುವಂತವರು ಶುಂಠಿ ಟೀಯನ್ನು ಕುಡಿಯುವ ಅಭ್ಯಾಸ ಮಾಡಿಕೊಂಡಲ್ಲಿ ಅವರ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಹಾಯವಾಗುತ್ತದೆ.

dr hegde add5.ನೋವು ನಿವಾರಣಾ ಗುಣ: ಶುಂಠಿಯು ನೋವು ನಿವಾರಣಾ ಗುಣವನ್ನು ಹೊಂದಿರುವಂತಹ ಪದಾರ್ಥ. ಉರಿಯೂತವನ್ನು ಕಡಿಮೆ ಮಾಡುವಲ್ಲಿ ಇದನ್ನು ಅನೇಕ ವರ್ಷಗಳಿಂದ ಉಪಯೋಗಿಸಲಾಗುತ್ತಿದ್ದು, ಇದಕ್ಕೆ ವೈಜ್ಞಾನಿಕ ಹಿನ್ನೆಲೆಯೂ ಇರುವುದು ಇದರ ವೈಶಿಷ್ಟ್ಯತೆಯನ್ನು ಹೆಚ್ಚಿಸುತ್ತದೆ. ಶುಂಠಿ ಚಹಾವನ್ನು ಕುಡಿಯುವುದರಿಂದ ತಲೆನೋವು, ಮುಟ್ಟಾದ ಸಂದರ್ಭದಲ್ಲಿ ಕಾಡುವ ಹೊಟ್ಟೆ ನೋವು, ಕಾಲುನೋವು, ಮಾಂಸಖಂಡಗಳು ಹಿಡಿದುಕೊಂಡಿರುವುದು ಮತ್ತು ಇನ್ನಿತರ ನೋವುಗಳು ಕಡಿಮೆಯಾಗಲು ಸಹಾಯವಾಗುತ್ತದೆ.

6. ಕ್ಯಾನ್ಸರ್: ಕ್ಯಾನ್ಸರ್ ನಿಂದ ರಕ್ಷಿಸಲು ಶುಂಠಿ ಚಹಾ ಸೇವನೆ ಸಹಕಾರಿ.

7. ರೋಗ ನಿರೋಧಕ ಶಕ್ತಿ: ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಶುಂಠಿ ಚಹಾ ಸೇವನೆ ಸಹಕಾರಿ. ಪ್ರಸ್ತುತ ಸಮಯದಲ್ಲಿ ಪ್ರತಿನಿತ್ಯ ಶುಂಠಿ, ಲವಂಗ, ತುಳಸಿ, ದಾಲ್ಚಿನ್ನಿ(ಚಕ್ಕೆ), ಕೊತ್ತೊಂಬರಿ ಹಾಗೂ ಜೀರಿಗೆ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಸಹಾಯವಾಗುತ್ತದೆ.

8. ವೈರಾಣು ಸೋಂಕು: ಸಾಮಾನ್ಯ ಶೀತ, ಬೇರೆ ಬೇರೆ ರೀತಿಯ ಅಲರ್ಜಿಗಳು ಹಾಗೂ ಬೇರೆ ಬೇರೆ ರೀತಿಯ ವೈರಾಣುಗಳ ಸೋಂಕನ್ನು ಕಡಿಮೆ ಮಾಡುವಲ್ಲಿ ಸಹ ಪರಿಣಾಮಕಾರಿ.

Dr-Venkatramana-Hegde-nisargamane ಡಾ||ವೆಂಕಟ್ರಮಣ ಹೆಗಡೆ ನಿಸರ್ಗಮನೆ,  ಶಿರಸಿ, ಉ.ಕ. ದೂ:9448729434/9731460353 Email: drvhegde@yahoo.com; nisargamane6@gmail.com
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!