ಕಣ್ಣುಸುತ್ತಲಿನ ಕಪ್ಪು ಅಥವಾ ಡಾರ್ಕ್ ಸರ್ಕಲ್

ಕಣ್ಣುಸುತ್ತಲಿನ ಕಪ್ಪು ಅಥವಾ ಡಾರ್ಕ್ ಸರ್ಕಲ್ ಈ ದಿನಗಳಲ್ಲಿ ತುಂಬಾ ಜನರಿಗೆ ಕಾಡುತ್ತಿರುವ ವ್ಯಾಧಿಯಾಗಿದೆ. ಬದಲಾದ ಜೀವನ ಪದ್ದತಿ, ಅಪೌಷ್ಠಿಕತೆ, ಅಸಮರ್ಪಕ ನಿದ್ರೆ, ದಣಿವು, ಇಂತ ಸಮಸ್ಯೆಯನ್ನು ಉದ್ಬವಿಸುತ್ತಿದೆ. ರಕ್ತಸಂಚಾರ ಕಣ್ಣಿನ ಸುತ್ತಲಿನ ಭಾಗಕ್ಕೆ ಕಡಿಮಾಗುವುದರಿಂದ ಕಣ್ಣು ಸುತ್ತಲಿನ ಚರ್ಮವು ತೆಳುವಾಗುತ್ತದೆ, ಸುಕ್ಕುಗಟ್ಟುತ್ತದೆ ಮತ್ತು ಕಪ್ಪು ಬಣ್ಣಹೊಂದುತ್ತದೆ.

dark-circles eye problem ಕಣ್ಣುಸುತ್ತಲಿನ ಕಪ್ಪು ಅಥವಾ ಡಾರ್ಕ್ ಸರ್ಕಲ್

ಕಾರಣಗಳು :

• ಸಾಮಾನ್ಯ ಕಾರಣ ದೇಹ ಮನಸ್ಸಿಗೆ ಆಗುವ ದಣಿವು, ಅಸಮರ್ಪಕ ನಿದ್ರೆ , ಕಣ್ಣಿಗೆ ಆಗುವ ಒತ್ತಡ.
• ದೇಹದಲ್ಲಿ ಪಿತ್ತದ ಅಂಶ ಅಥವಾ ಮೆಲನಿನ್ ಅಂಶದ ಪ್ರಮಾಣ ಹೆಚ್ಚಾದಾಗ ಕಪ್ಪು ಕಲೆ ಮೂಡುತ್ತದೆ.
• ರಕ್ತಹೀನತೆ ಮತ್ತು ಪೋಷಕಾಂಶಗಳ ಕೊರತೆ
• ಅತೀ ಹೆಚ್ಚು ಬಿಸಿಲಿಗೆ ಒಡ್ಡಿದಾಗ
• ಧೂಮಪಾನ ಮತ್ತು ತೈರಾಯಿಡ್ ರೋಗಿಗಳಿಗೆ ಕಾಣಬಹುದು.
• ನಿರಂತವಾಗಿ ಕಣ್ಣಿಗೆ ಒತ್ತಡ ಬೀಳುವ ಹಾಗೆ ಕಂಪ್ಯೂಟರ್, ಮೊಬೈಲ್ ಮತ್ತು ಟಿವಿ ನೋಡುವುದು.
• ಡರ್ಮಟೈಟಿಸ್ ನಂತಹ ಚರ್ಮರೋಗಗಳು
• ಪ್ರಾಕೃತವಾಗಿ ಮುಪ್ಪಾದಾಗ ಕಪ್ಪಾಗಬಹುದು.
• ಅತೀ ಹೆಚ್ಚು ಸೌಂದರ್ಯವರ್ಧಕವನ್ನು ಉಪಯೋಗಿಸುವುದು

ಚಿಕಿತ್ಸೆ:

• ಜೀವನಪದ್ದತಿ ಬದಲಾಯಿಸಿಕೊಳ್ಳಬೇಕು, ಅತಿಯಾದ ಆಯಾಸ, ಒತ್ತಡವನ್ನು ಕಡಿಮೆ ಮಾಡಿ, ದೇಹಕ್ಕೆ ಮನಸ್ಸಿಗೆ ವಿಶ್ರಾಂತಿ ನೀಡಬೇಕು
• ರಾತ್ರಿಯಲ್ಲಿ 8 ಗಂಟೆಗಳ ಕಾಲ ನಿದ್ರಿಸಬೇಕು
• ವಿಟಮಿನ್ ಸಿ, ಈ ಹೆಚ್ಚಾಗಿರುವ ಪೌಷ್ಠಿಕ ಆಹಾರ, ಹಣ್ಣು, ತರಕಾರಿಯನ್ನು ಸೇವಿಸಬೇಕು
• ಪಿತ್ತವನ್ನು ಶಮನ ಮಾಡುವ ಕಲ್ಲಂಗಡಿ, ಸೌತೇಕಾಯಿ, ಎಳನೀರು, ಮಜ್ಜಿಗೆ, ಟೊಮೆಟೋ, ನೆಲ್ಲಿಕಾಯಿ ಸೇವಿಸುವುದು ಉತ್ತಮ
• ಮಾನಸಿಕ ಒತ್ತಡವನ್ನು ಕಡಿಮೆಮಾಡಿಕೊಳ್ಳಬೇಕು
• ಧೂಮಪಾನ, ಮಧ್ಯಪಾನ, ಅತಿಯಾದ ಬಿಸಿಲನ್ನು ನಿಶೇಧಿಸಬೇಕು
• ಕಂಪ್ಯುಟರ ನಲ್ಲಿ ಕೆಲಸ ಮಾಡುವಾಗ ಪ್ರತಿ 20 ನಿಮಿಷದ ನಂತರ 20 ಅಡಿ ದೂರವಿರುವ ವಸ್ತುವನ್ನು 20 ಸೆಕೆಂಡುಗಳ ಕಾಲ ನೋಡಿ ಮತ್ತೆ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಇದು ಕಣ್ಣಿಗಾಗುವ ಒತ್ತಡವನ್ನು ತಡೆಗಟ್ಟುತ್ತದೆ.

ಮನೆಮದ್ದು:

• ನೆಲ್ಲಿಕಾಯಿ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ ಹಚ್ಚಿಕೊಳ್ಳುವುದು
ಚರ್ಮಕ್ಕೆ ಕಾಂತಿಯನ್ನು ನೀಡುವ ಅರಿಶಿಣ ಹಾಗೂ ಕಡಲೆಹಿಟ್ಟನ್ನು ನೀರಿನಲ್ಲಿ ಬೆರೆಸಿ ಹಚ್ಚಿಕೊಳ್ಳುವುದು
• ಪ್ರಾಕೃತವಾದ ಬ್ಲೀಚ್ ಹಾಗೂ ತೇವಾಂಶವನ್ನು ನೀಡುವ ಜೇನುತುಪ್ಪವನ್ನು ಹಚ್ಚಿಕೊಳ್ಳಬಹುದು
• ಕೊಬ್ಬರಿ ಎಣ್ಣೆ ಅಥ್ವಾ ಬಾದಾಮಿ ಎಣ್ಣೆಯನ್ನು ಕಣ್ಣಿನ ಸುತ್ತಲಿನ ಚರ್ಮಕ್ಕೆ ಹಚ್ಚಿ 2-3 ನಿಮಿಶಗಳ ಕಾಲ ಮೃದುವಾದ ಮಸಾಜ್ ಮಾಡಿದರೆ ರಕ್ತ ಸಂಚಲನೆ ಹೆಚ್ಚಾಗಿ ಚರ್ಮದ ಕಪ್ಪು ನಿವಾರಣೆಯಾಗಿ ಚರ್ಮಕ್ಕೆ ಪೋಷಕಾಂಶ ಲಭ್ಯವಾಗುತ್ತದೆ.
• ಕಲ್ಲಂಗಡಿ, ಸೌತೇಕಾಯಿ ಮತ್ತು ಪಪ್ಪಾಯದಲ್ಲಿ ಹೇರಳವಾಗಿ ವಿಟಮಿನ್ ಹಾಗೂ ನೀರಿನಾಂಶ ಇರುವುದರಿಂದ ಹೊರಗಿನಿಂದ ಇದರ ತಿರುಳನ್ನು ರುಬ್ಬಿ ಹಚ್ಚುವುದರಿಂದ ಕಫ್ಫು ನಿವಾರಣೆಯಾಗುತ್ತದೆ.
• ಸೌತೇಕಾಯಿಯ ತುಂಡನ್ನು, ಹತ್ತಿಯನ್ನು ರೋಸ್ ವಾಟರ್ ನಲ್ಲಿ ಹದ್ದಿಕೊಂಡು ಕಣ್ಣಿನ ಮೇಲೆ ಇಡುವುದರಿಂದ ಕಣ್ಣಿನ ಒತ್ತಡ ನಿವಾರಣೆಯಾಗುತ್ತದೆ ಈ ಮೂಲಕ ಕಣ್ಣುಸುತ್ತಲಿನ ಕಪ್ಪು ಶಮನವಾಗುತ್ತದೆ.

ಡಾ. ಮಹೇಶ್ ಶರ್ಮಾ ಎಂ
ಆಯುರ್ವೇದ ತಜ್ನರು
ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
Mob: 9964022654

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!